Tag: `ಚಂದ್ರಲೇಖ’

  • ಥೈಲ್ಯಾಂಡ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮಾಸ್ಟರ್ ಪೀಸ್ ಬೆಡಗಿ

    ಥೈಲ್ಯಾಂಡ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮಾಸ್ಟರ್ ಪೀಸ್ ಬೆಡಗಿ

    ಶಾನ್ವಿ ಶ್ರೀವಾಸ್ತವ್ ಮಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂನ ಮೊದಲ ಸಿನಿಮಾ ವಿಚಾರವಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಶಾನ್ವಿ ಥೈಲ್ಯಾಂಡ್‌ಗೆ ಹಾರಿದ್ದಾರೆ. ಥೈಲ್ಯಾಂಡ್‌ನ ಬೋಲ್ಡ್‌ ಫೋಟೋಸ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Mithu Siva (@mithu_siva_)

    `ಚಂದ್ರಲೇಖ’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಿತರಾದ ನಟಿ ಶಾನ್ವಿ ಈಗ ಬಹುಭಾಷಾ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ ಈಗ ಮಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಸಾಲು ಸಾಲು  ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದ ನಟಿ ಈಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಆಲಿಯಾ ಭಟ್

     

    View this post on Instagram

     

    A post shared by Shanvi sri (@shanvisri)

    ಥೈಲ್ಯಾಂಡ್‌ನ ಸುಂದರ ದ್ವೀಪದ ಮಧ್ಯೆ ಶಾನ್ವಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಾಸ್ಟರ್‌ಪೀಸ್ ಬೆಡಗಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ನಟಿ ಶಾನ್ವಿ `ಮಹಾವೀರ್ಯಾರ್’ ಚಿತ್ರದ ಮೂಲಕ ಮಾಲಿವುಡ್‌ಗೆ ಪರಿಚಿತರಾಗುತ್ತಿದ್ದಾರೆ. ಇದೇ ಜುಲೈ 21ಕ್ಕೆ ಸಿನಿಮಾ ತೆರೆಯ ಮೇಲೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಯಶಸ್ವಿ ಚಿತ್ರಗಳನ್ನ ನಿರ್ದೇಶನ ಮಾಡಿರೋ ಓಂಪ್ರಕಾಶ್ ರಾವ್  `ಚಂದ್ರಲೇಖ ರಿಟರ್ನ್ಸ್’ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಈ ಹಿಂದೆ ಚಿರಂಜೀವಿ ಸರ್ಜಾ ಮತ್ತು ಶಾನ್ವಿ ನಟನೆಯ `ಚಂದ್ರಲೇಖ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಸೌಂಡ್ ಮಾಡಿದ್ದರು. ಈಗ `ಚಂದ್ರಲೇಖ ರಿಟರ್ನ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ `ಚಂದ್ರಲೇಖ ರಿಟರ್ನ್ಸ್’ ಇದೇ ಮೇ 25 ರಂದು ಸೆಟ್ಟೇರಲಿದೆ. `ಲವ್ ಮಾಕ್ಟೇಲ್’ ಚಿತ್ರದ ಮೂಲಕ ಮನೆಮಾತಾಗಿರೋ ನಟ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಹೊಸ ಪ್ರತಿಭೆ ಭೂಮಿಕಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಅನನ್ಯ ಪಂಡಿತ್, ರಂಗಾಯಣ ರಘು, ಅಚ್ಯುತಕುಮಾರ್, ಸುಧಾ ಬೆಳವಾಡಿ, ಅವಿನಾಶ್, ಚಿತ್ರಾ ಶೆಣೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಪ್ರಣೀತಾ ಸುಭಾಷ್ ಹೊಸ ಬೇಬಿ ಬಂಪ್ ಫೋಟೋಶೂಟ್ ವೈರಲ್

    ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಭಿನ್ನ ಹಾರಾರ್ ಕಥೆಗೆ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶವಿರಲಿದ್ದು, ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಓಂಪ್ರೊಡಕ್ಷನ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಅವರೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ `ಚಂದ್ರಲೇಖ’ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಿರ್ದೇಶಕ ಮತ್ತೆ `ಚಂದ್ರಲೇಖ ರಿಟರ್ನ್ಸ್’ ಸಿನಿಮಾದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.