Tag: ಚಂದ್ರಲೇಔಟ್

  • ತ್ರಿವಳಿ ತಲಾಖ್ ನಿಷೇಧದ ಬಳಿಕವೂ ಹೆಂಡತಿಗೆ ತಲಾಖ್ ನೀಡಿದ ಗಂಡ

    ತ್ರಿವಳಿ ತಲಾಖ್ ನಿಷೇಧದ ಬಳಿಕವೂ ಹೆಂಡತಿಗೆ ತಲಾಖ್ ನೀಡಿದ ಗಂಡ

    – ಕಾನೂನು, ಖಾಕಿ ನನ್ನನ್ನು ಏನು ಮಾಡಲಾಗುವುದಿಲ್ಲ ಅಂತ ದರ್ಪ ಮೆರೆದ ಗಂಡ

    ಬೆಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ (Triple Talaq) ನಿಷೇಧವಿದ್ದರೂ ಚಂದ್ರಲೇಔಟ್‌ನ ಗಂಗೊಂಡನಹಳ್ಳಿಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.

    ತ್ರಿವಳಿ ತಲಾಖ್ ನಿಷೇಧ ಬಳಿಕವೂ ವ್ಯಕ್ತಿ ತನ್ನ ಹೆಂಡತಿಗೆ ಫೋನ್ ಮಾಡಿ ಮೂರು ಬಾರಿ ತಲಾಖ್ ಎಂದು ಉಚ್ಛರಿಸಿ ಕರೆ ಕಟ್ ಮಾಡಿದ್ದಾನೆ. ಇಲ್ಲಿಗೆ ಎಂಟು ವರ್ಷದ ದಾಂಪತ್ಯ ಜೀವನ ಕೇವಲ 10 ಸೆಕೆಂಡ್‌ನಲ್ಲಿ ಮುರಿದು ಬಿದ್ದಿದೆ. ಹೊಸ ಕಾನೂನಿನ ಬಳಿಕವೂ ಬದುಕು ಅಂತ್ಯದ ಬಗ್ಗೆ ಆತಂಕದಿಂದ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ವಿಚ್ಛೇದನ ನೀಡಿದ ಪತಿ ಕಾನೂನು, ಖಾಕಿ ಏನು ಮಾಡಲ್ಲವೆಂದು ಹೆಂಡತಿಗೆ ಅವಾಜ್ ಹಾಕಿದ್ದಾನೆ. ಇದನ್ನೂ ಓದಿ: ತ್ರಿವಳಿ ತಲಾಖ್‌ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ

    ಶಾಬಜ್ ಅಲಿ ಎಂಟು ವರ್ಷದ ಹಿಂದೆ ಯುವತಿಯೊಬ್ಬಳ್ಳನ್ನು ಮದುವೆಯಾಗಿದ್ದ. ಹೆಂಡತಿ ಜೊತೆ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದ. ಮಕ್ಕಳಾಗಿಲ್ಲ ಅಂತ ಆಗಾಗ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಐದು ಮಾಂಸದ ಅಂಗಡಿಗಳನ್ನು ಇಟ್ಟುಕೊಂಡು ಶಾಬಜ್ ವ್ಯಾಪಾರ ಮಾಡುತ್ತಿದ್ದ. ‘ಅಂಗಡಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಿ ಅಂತ ಹೇಳಿದ್ದಕ್ಕೆ ಕೋಪಗೊಂಡು ದ್ವೇಷ ಬೆಳೆಸಿದ್ದಾನೆ’ ಅಂತ ಮಾವ ಆರೋಪಿಸಿದ್ದಾರೆ. ತ್ರಿವಳಿ ತಲಾಖ್ ನಿಷೇಧ ಬಳಿಕವೂ ನನ್ನ ಮಗಳ ಜೀವನ ಹಾಳಾಯ್ತು. ಕಾನೂನು ಹೋರಾಟ ಮುಂದುವರಿಸ್ತೀವಿ ಅಂತ ಸಂತ್ರಸ್ತೆ ತಂದೆ ತಿಳಿಸಿದ್ದಾರೆ.

    ಒಂದು ವರ್ಷದ ಹಿಂದೆ ಇನ್ನೊಂದು ಮದುವೆಯಾಗಿದ್ದನಂತೆ. ಆ ಮಹಿಳೆಗೂ ತಲಾಖ್ ನೀಡಿ, ಇದೀಗಾ ಪತ್ನಿಗೂ ತಲಾಖ್ ನೀಡಿದ್ದಾನೆ. ಇಸ್ಲಾಂ ಧರ್ಮದ ಮಸೀದಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಯ್ತು. ಈ ಸಭೆಯಲ್ಲೂ ತಲಾಖ್ ಸ್ವೀಕಾರ ಆಗಿದೆ ಎಂದಿದ್ದಾರೆ. ಸಂತ್ರಸ್ತೆ ಸಂಬಂಧಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಶಾಬಜ್ ಅಲಿ ಕಡೆಯವ್ರು ಮಹಿಳೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.

    ಮುಸ್ಲಿಂ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಿಂದ ಮುಕ್ತಿ ಕಲ್ಪಿಸಲು ತ್ರಿವಳಿ ತಲಾಖ್ ನಿಷೇಧ ಕಾಯಿದೆ ನೆರವಾಗಿದೆ. ಭಾರತದಲ್ಲಿ ತ್ರಿವಳಿ ತಲಾಖ್ (ತ್ವರಿತ ತಲಾಖ್) ನಿಷೇಧವು 2019 ರ ಕಾಯ್ದೆಯಿಂದ ಕಾನೂನುಬದ್ಧವಾಗಿದ್ದು, ತ್ವರಿತ ವಿಚ್ಛೇದನವನ್ನು ಅಪರಾಧ ಎಂದು ಘೋಷಿಸಲಾಗಿದೆ. 2017 ರಲ್ಲಿ ಸುಪ್ರೀಂ ಕೋರ್ಟ್ ತಲಾಖ್‌ನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ತ್ವರಿತ ವಿಚ್ಛೇದನದ ಪದ್ಧತಿಯನ್ನು ಕೊನೆಗೊಳಿಸಲು ಕೈಗೊಂಡ ಒಂದು ಕ್ರಮವಾಗಿದೆ. ಇದನ್ನೂ ಓದಿ: ತ್ರಿವಳಿ ತಲಾಖ್‌ ನಿಷೇಧ, ವಿಚ್ಛೇದನಕ್ಕೆ ಏಕರೂಪದ ಕಾನೂನಿಗಾಗಿ ಸುಪ್ರೀಂಗೆ ಮುಸ್ಲಿಂ ಮಹಿಳೆ ಮನವಿ

    ಅಪರಾಧ ಏನು? ಶಿಕ್ಷೆ ಪ್ರಮಾಣ ಎಷ್ಟು?
    ಈ ಕಾಯ್ದೆಯಡಿ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಾತಿನ ಮೂಲಕ, ಬರಹದ ಮೂಲಕ, ಮೆಸೇಜ್, ಇ-ಸಂದೇಶಗಳ ಮೂಲಕ ತಲಾಖ್ ನೀಡಲಾಗ್ತಿತ್ತು. ಇನ್ನು ಈ ನಿಯಮ ಉಲ್ಲಂಘಿಸಿದರೆ, ಗರಿಷ್ಟ ಮೂರು ವರ್ಷದವರೆಗೆ ಜೈಲು ಹಾಗೂ ದಂಡವಿದೆ. ಅಲ್ಲದೇ, ತ್ರಿವಳಿ ತಲಾಖ್ ಸಂತ್ರಸ್ಥೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿತ್ತಾಳೆ. ಸಂತ್ರಸ್ತೆಯು ಮಕ್ಕಳನ್ನ ವಶಕ್ಕೆ ಪಡೆಯುವ ಹಕ್ಕು ಹೊಂದಿರುತ್ತಾಳೆ.

    ತ್ರಿವಳಿ ತಲಾಖ್ ನಿಷೇಧ ಕಾಯಿದೆಯ ಬಳಿಕವೂ ಈ ವ್ಯಕ್ತಿ ಹೆಂಡತಿಗೆ ತಲಾಖ್ ನೀಡಿದ್ದಾನೆ. ಸದ್ಯ ಮಹಿಳೆ ಹಾಗೂ ಕುಟುಂಬ ಚಂದ್ರಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • ಬೆಂಗಳೂರು| ಬ್ಯಾಂಕ್ ಸಾಲ ಇದ್ದ ಕಟ್ಟಡವನ್ನ ಲೀಸ್‌ಗೆ ಪಡೆದು ಸಂಕಷ್ಟಕ್ಕೆ ಸಿಲುಕಿದ 17 ಕುಟುಂಬಗಳು

    ಬೆಂಗಳೂರು| ಬ್ಯಾಂಕ್ ಸಾಲ ಇದ್ದ ಕಟ್ಟಡವನ್ನ ಲೀಸ್‌ಗೆ ಪಡೆದು ಸಂಕಷ್ಟಕ್ಕೆ ಸಿಲುಕಿದ 17 ಕುಟುಂಬಗಳು

    – ಲಕ್ಷ ಲಕ್ಷ ಕೊಟ್ರೂ ಮನೆ ಕಳೆದುಕೊಳ್ಳಬೇಕಾದ ಆತಂಕ

    ಬೆಂಗಳೂರು: ಬ್ಯಾಂಕ್‌ ಸಾಲ ಇದ್ದ ಕಟ್ಟವನ್ನು ಲೀಸ್‌ಗೆ ಪಡೆದು 17 ಕುಟುಂಬಗಳು ಬೀದಿಗೆ ಬಂದಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ನಡೆದಿದೆ.

    ಚಂದ್ರಲೇಔಟ್‌ನ ಗಂಗೊಂಡನಹಳ್ಳಿಯಲ್ಲಿ ಕಳೆದ ಆರೇಳು ವರ್ಷದ ಹಿಂದೆ ಸುಧಾ ಎಂಬಾಕೆ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಎರಡೂ ಕೋಟಿ ರೂ.ವರೆಗೆ ಸಾಲ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದರು. ಕಟ್ಟಡದಲ್ಲಿ ಒಟ್ಟು 17 ಮನೆಗಳಿದ್ದು, ಎಲ್ಲಾವನ್ನು ಲೀಸ್‌ಗೆ ನೀಡಿದ್ದರು. ಕಟ್ಟಡದ ಮೇಲೆ ಸಾಲ ಇರುವ ವಿಚಾರ ಗೊತ್ತಿಲ್ಲದೇ 17 ಕುಟಂಬಗಳು, ಲಕ್ಷ ಲಕ್ಷ ಹಣ ನೀಡಿ ಮನೆಗಳನ್ನ ಲೀಸ್‌ಗೆ ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿವೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡುವ ಅವಕಾಶ ಇಲ್ಲ: ಮಧು ಬಂಗಾರಪ್ಪ

    ಮಾಲಕಿ ಕಳೆದ ಹಲವು ತಿಂಗಳಿನಿಂದ ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್‌ನವರು ಕಟ್ಟಡ ಸೀಸ್‌ಗೆ ಮುಂದಾಗಿದ್ದಾರೆ. ಮೂರು ಬಾರಿ ಮಾಲಕಿಗೆ ‌ನೋಟಿಸ್‌ ಕೊಟ್ಟರು. ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್ ಸಿಬ್ಬಂದಿ ಸೀಜ್‌ಗೆ ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ವಿರೋಧ ವ್ಯಕ್ತಪಡಿಸಿದರು. ಒಪ್ಪದ ಸಿಬ್ಬಂದಿ ಮನೆಗಳಿಗೆ ಬೀಗ ಹಾಕಲು ಮುಂದಾಗಿದ್ದಾರೆ.

    ಬ್ಯಾಂಕ್ ಸಿಬ್ಬಂದಿಗೆ ಹೆದರಿ ಹಲವರು ಮನೆಗಳ ಒಳಗಿಂದ ಲಾಕ್ ಮಾಡಿಕೊಂಡು ಮನೆಯಿಂದ ಆಚೆ ಬಾರದೇ ಹೆದರಿದ್ದರು. ಈ ಬಗ್ಗೆ ಕಟ್ಟಡದ ಮಾಲೀಕರಿಗೆ ಮಾಹಿತಿ ನೀಡಿದರು. ಮಾಲಕಿ ಮಾತ್ರ ಸಬೂಬು ನೀಡಿ ಜಾರಿಕೊಳ್ಳುತ್ತಿದ್ದಾರಂತೆ.‌ ಇದನ್ನೂ ಓದಿ: ಭುಗಿಲೆದ್ದ ರೈತರ ಆಕ್ರೋಶ – ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತ

    ಇಡೀ ಕಟ್ಟಡದ ಪ್ರತಿ ಮನೆಯೂ 10 ರಿಂದ 30 ಲಕ್ಷಗಳ ವರೆಗೆ ಹಣ ನೀಡಿದ್ದಾರೆ. ಅತ್ತ ಬ್ಯಾಂಕ್‌ನವರು ನಿವಾಸಿಗಳಿಗೆ ಎರಡು ದಿನ ಸಮಯಾವಕಾಶ ನೀಡಿ ಹೋಗಿದ್ದು, ಎರಡು ದಿನದಲ್ಲಿ ಮನೆ ಖಾಲಿ ಮಾಡುವಂತೆ ಗಡುವು ನೀಡಿದ್ದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಗಡುವಿನಿಂದ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು, ವಾಪಸ್ ಹಣವು ಸಿಗದೇ, ಮನೆಯೂ ಇಲ್ಲದಂತಾದರೆ ಏನು ಮಾಡುವುದು ಎಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.

  • ಹತ್ತೇ ಸೆಕೆಂಡ್‌ನಲ್ಲಿ ಲಕ್ಷಾಧಿಪತಿಯಾದ ಯುವಕ – ಬರಿಗೈಲಿ ಬಂದವನಿಗೆ ಸಿಕ್ಕಿದ್ದು ಬರೋಬ್ಬರಿ 94 ಲಕ್ಷ ಹಣ

    ಹತ್ತೇ ಸೆಕೆಂಡ್‌ನಲ್ಲಿ ಲಕ್ಷಾಧಿಪತಿಯಾದ ಯುವಕ – ಬರಿಗೈಲಿ ಬಂದವನಿಗೆ ಸಿಕ್ಕಿದ್ದು ಬರೋಬ್ಬರಿ 94 ಲಕ್ಷ ಹಣ

    – 300ಕ್ಕೂ ಹೆಚ್ಚು ಕ್ಯಾಮೆರಾ ಪರಿಶೀಲಿಸಿ ಪ್ರಕರಣ ಬೇಧಿಸಿದ ಪೊಲೀಸರು

    ಬೆಂಗಳೂರು: ಬರಿಗೈಯಲ್ಲಿ ಅಂಗಡಿಯೊಂದಕ್ಕೆ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ರೂ. ಇದ್ದ ಹಣದ ಬ್ಯಾಗ್ ಸಿಕ್ಕಿದ್ದು, ಹತ್ತೇ ಸೆಕೆಂಡ್‌ನಲ್ಲಿ ಲಕ್ಷಾಧಿಪತಿಯಾದ ಘಟನೆ ಬೆಂಗಳೂರಿನ (Bengaluru) ಚಂದ್ರಲೇಔಟ್‌ನಲ್ಲಿ (Chandra Layout) ನಡೆದಿದೆ.

    ಪ್ರಮೋದ್ ಎಂಬಾತ ಸೈಟ್ ಖರೀದಿಸುವ ಸಲುವಾಗಿ 94 ಲಕ್ಷ ರೂ. ಕೂಡಿಸಿಟ್ಟಿದ್ದ. ಈತ ಚಂದ್ರಲೇಔಟ್ ನಿವಾಸಿಯಾಗಿದ್ದು, ಹಣವನ್ನು ಎಣಿಸಲು ಸ್ನೇಹಿತನ ಅಂಗಡಿಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದ. ಅಲ್ಲದೇ ವಕೀಲರ ಕಚೇರಿಗೆ ತೆರಳಲು ರೆಡಿಯಾಗಿದ್ದ. ಬಾಕ್ಸ್‌ನಲ್ಲಿ ಹಣವನ್ನು ಹಾಕಿಕೊಂಡು ಮನೆಯಿಂದ ಹೊರಟ ಪ್ರಮೋದ್ ಮನೆ ಕೆಳಗೆ ಬಂದು ಕಾರಿನ ಡೋರ್ ತೆಗೆಯಲೆಂದು ಕೈಯಲ್ಲಿದ್ದ ಹಣದ (Money) ಬ್ಯಾಗ್ (Bag) ಅನ್ನು ಪಕ್ಕದಲ್ಲೇ ಇದ್ದ ಅಪರಿಚಿತ ಆ್ಯಕ್ಟಿವಾ ಸ್ಕೂಟಿ ಮೇಲೆ ಇರಿಸಿದ್ದಾನೆ. ಬಳಿಕ ದಾಖಲೆಗಳಿದ್ದ ಬ್ಯಾಗ್ ಅನ್ನು ಮಾತ್ರ ಕಾರಿನಲ್ಲಿ ಹಾಕಿಕೊಂಡು ಹಣದ ಬ್ಯಾಗ್ ಅನ್ನು ಮರೆತು ಹೋಗಿದ್ದಾನೆ. ಇದನ್ನೂ ಓದಿ: ಡೀಲ್‍ನಲ್ಲಿ ‘ವಿಶ್ವನಾಥ್‌ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..

    ಬೈಕ್ ಮಾಲೀಕ ವರುಣ್ ಗೌಡ ಬೈಕ್ ಬಳಿ ಬಂದು ನೋಡಿದಾಗ ಬ್ಯಾಗ್ ಕಾಣಿಸಿದ್ದು, ಓಪನ್ ಮಾಡಿ ನೋಡಿದಾಗ ಹಣದ ಕಂತೆ ಕಂಡಿದೆ. ವರುಣ್ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಣದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಶ್ರೀನಗರದಲ್ಲಿರುವ ಮನೆಯಲ್ಲಿ ಹಣವನ್ನು ಹಾಗೆ ಇಟ್ಟುಕೊಂಡಿದ್ದ ವರುಣ್ 94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದ. ಇದನ್ನೂ ಓದಿ: ಐಸಿಸ್ ಉಗ್ರನೊಂದಿಗೆ ನಿರಂತರ ಸಂಪರ್ಕ – ಎನ್‍ಐಎಯಿಂದ ಯಾದಗಿರಿ ವ್ಯಕ್ತಿ ವಿಚಾರಣೆ

    ವರುಣ್ ಈ ಹಣದಿಂದ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗೂ ಪ್ಲಾನ್ ಮಾಡಿಕೊಂಡಿದ್ದ. ಆದರೆ ಎಲ್ಲಿಯೂ ಹಣ ಕೊಡದೇ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ಇತ್ತ ಸ್ನೇಹಿತನ ಅಂಗಡಿ ಬಳಿ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್‌ಗೆ ಹಣ ಇಲ್ಲದೇ ಇರುವುದನ್ನು ಕಂಡು ಶಾಕ್ ಆಗಿದೆ. ಬಳಿಕ ಪ್ರಮೋದ್ ಮನೆಯ ಬಳಿ ವಾಪಸ್ ಬಂದು ನೋಡಿದಾಗ ಬೈಕ್, ಹಣ ಎರಡೂ ಇರಲಿಲ್ಲ. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ

    ಹಣ ಕಳೆದುಕೊಂಡ ಪ್ರಮೋದ್ ಚಂದ್ರಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಹೊರಟ ಮಾರ್ಗದಲ್ಲಿರುವ 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಕೊನೆಗೂ ಆರೋಪಿಯನ್ನು ಸೆರೆ ಹಿಡಿದು 94 ಲಕ್ಷ ರೂ. ಹಣವನ್ನು ರಿಕವರಿ ಮಾಡಿದ್ದಾರೆ. ವರುಣ್ ತಾನಾಗಿಯೇ ಆ ಹಣ ತಂದು ಪೊಲೀಸರಿಗೆ ಕೊಟ್ಟಿದ್ದರೆ ಹೀರೋ ಆಗುತ್ತಿದ್ದ. ಆದರೆ ಮನೆಯಲ್ಲಿ ಹಣ ಇಟ್ಟುಕೊಂಡು ಈಗ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಅಪಘಾತಕ್ಕೀಡಾಗಿ ಮೃತಪಟ್ಟ ಅಜ್ಜಿ ಪ್ರಕರಣಕ್ಕೆ ಟ್ವಿಸ್ಟ್- ಮೊಮ್ಮಗನಿಂದಲೇ ಕೊಲೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣಮ್ಮ ದೇವಿ ಮೆರವಣಿಗೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರ ಭರ್ಜರಿ ಡಾನ್ಸ್

    ಅಣ್ಣಮ್ಮ ದೇವಿ ಮೆರವಣಿಗೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರ ಭರ್ಜರಿ ಡಾನ್ಸ್

    ಬೆಂಗಳೂರು: ರಾಜ್ಯದಲ್ಲಿ ಆಜಾನ್ ಮತ್ತು ಸುಪ್ರಭಾತ ನಡುವಿನ ಧರ್ಮ ದಂಗಲ್ ನಡುವೆ ಭಾವೈಕ್ಯತೆ ಸಾರುವ ದೃಶ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿದೆ.

    ಬೆಂಗಳೂರಿನ ಚಂದ್ರಾಲೇಔಟ್‍ನ ಗಂಗೋಂಡನಹಳ್ಳಿ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಪರಿಣಾಮ ಯಾವುದೇ ಜಾತ್ರೆ ಮಹೋತ್ಸವಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಅಣ್ಣಮ್ಮದೇವಿ ಜಾತ್ರೆ ಮಹೋತ್ಸವ ನಡೆಯಿತು. ವಿಶೇಷ ಅಂದರೆ ಗಂಗೊಂಡನಹಳ್ಳಿ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ವಾಸವಾಗಿದ್ದಾರೆ. ಅಣ್ಣಮ್ಮ ಜಾತ್ರೆ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಮರು ಎನ್ನುವ ಯಾವುದೇ ಭೇದ, ಭಾವ ಇಲ್ಲದೇ ಪರಸ್ಪರ ಕೈ, ಕೈ ಹಿಡಿದುಕೊಂಡು ದೇವಿ ಮುಂದೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ಆಪ್ತರ ಮೇಲೆ ಅನುಮಾನ ಪಟ್ಟಿದ್ದಾರಾ ಡಿಕೆಶಿ?

    ಮೆರವಣಿಗೆ ಪ್ರಾರಂಭದಿಂದ ಕೊನೆಯವರೆಗೂ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗಿಯಾಗಿ ಹಿಂದೂಗಳಿಗೆ ಸಾಥ್ ನೀಡಿ ಭಕ್ತಿ ಭಾವದಿಂದ ಅಣ್ಣಮ್ಮ ತಾಯಿ ಕೃಪೆಗೆ ಪಾತ್ರರಾಗಿದ್ದಾರೆ. ದಿನ ಬೆಳಗಾದರೆ, ಧರ್ಮ-ಧರ್ಮಗಳ ನಡುವಿನ ಕಿತ್ತಾಟದ ನಡುವೆ ಈ ರೀತಿ ಭಾವೈಕ್ಯತೆ ಸಾರುವ ಅಪರೂಪದ ಘಟನೆಯಿಂದ ಎರಡು ಧರ್ಮದ ಜನರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?