Tag: ಚಂದ್ರಯಾನ

  • ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಭಾರತ (India) ಚಂದ್ರಯಾನ ಯಶಸ್ವಿಯಾದ ಮೇಲೆ ವಿಶ್ವದ ಅನೇಕ ದೇಶಗಳು ಚಂದ್ರನ (Moon) ಬಗ್ಗೆ ಸಂಶೋಧನೆಗೆ ಭಾರೀ ಆಸಕ್ತಿ ತೋರಿಸುತ್ತಿವೆ. ಅದರಂತೆ ಅಮೆರಿಕ (America) ಕೂಡ ಈ ಬಗ್ಗೆ ತೀವ್ರ ಕುತೂಹಲಕಾರಿ ವಿಚಾರ ಬಹಿರಂಗಪಡಿಸಿದ್ದು, ವಿಶ್ವದ ಉಳಿದೆಲ್ಲ ದೇಶಗಳಿಗಿಂತ ವಿಭಿನ್ನವಾದ ಹೆಜ್ಜೆ ಇಡಲು ಮುಂದಾಗಿದೆ. ಭೂಮಿಯ ಮೇಲೆ ನಿರ್ಮಾಣ ಮಾಡುವ ರೈಲ್ವೇ ಹಳಿಗಳ ರೀತಿ ಚಂದ್ರನ ಮೇಲೂ ರೈಲ್ವೇ ಹಳಿ ಮಾದರಿಯ ಹಳಿಗಳನ್ನು ನಿರ್ಮಿಸಿ ನಾಸಾ ಅಧ್ಯಯನ ನಡೆಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಚಂದ್ರನ ಮೇಲಿನ ಈ ಅಧ್ಯಯನದ ವಿಚಾರ ವಿಜ್ಞಾನ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಶೋಧನೆಯ ಬಗ್ಗೆ ನಾಸಾ  (NASA) ಪ್ರಕಟಿಸಿದೆ ಎನ್ನಲಾದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

    2030ರ ವೇಳೆಗೆ ಚಂದ್ರನ ಮೇಲೆ ಮೊದಲ ರೈಲು ನಿಲ್ದಾಣವನ್ನು ನಿರ್ಮಿಸಲು ನಾಸಾ ಯೋಚಿಸಿದೆ. ಚಂದ್ರನ ಮೇಲ್ಮೈಯ ಸುತ್ತ ಪೆಲೋಡ್ ಸಾರಿಗೆಗಾಗಿ ರೈಲು ಹಳಿಗಳ ನಿಮಾಣಕ್ಕೆ ನಾಸಾ ಮುಂದಾಗಿದೆ. ಈ ರೈಲು ಹಾಗೂ ಹಳಿಗಳು ಭೂಮಿಯ ಮೇಲಿರುವುದಕ್ಕಿಂತ ಸ್ವಲ್ಪ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಇರಲಿವೆ. ಅಂದರೆ ಈ ಹಳಿಗಳ ಮೇಲೆ ನೇರವಾಗಿ ರೈಲು ಸಂಚರಿಸದೆ ರೈಲ್ವೇ ಹಳಿಗಳ ಮೇಲೆ ತೇಲುವ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಳ್ಳಲು ನಾಸಾ ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹಕ್ಕೆ ತನ್ನ ಗಗನಯಾತ್ರಿಗಳನ್ನು ನಾಸಾ ಕಳುಹಿಸಲಿದೆ.

    ಇದು ನೇರವಾಗಿ ರೈಲ್ವೇ ಹಳಿಗಳ ರೀತಿ ಇದ್ದರೂ, ಇದು ಕಾರ್ಯನಿರ್ವಹಿಸುವುದು ಮ್ಯಾಗ್ನೆಟಿಕ್ ಶಕ್ತಿಯಿಂದ. ಇದರಿಂದ ನಾಸಾ ರೈಲು ನೇರವಾಗಿ ಹಳಿಗಳ ಮೇಲೆ ಸಂಚರಿಸದೆ, ಹಳಿಗಳ ಮೇಲೆ ತೇಲಲಿದೆ! ಗ್ರ್ಯಾಫೈಟ್, ಫಿಲ್ಮ್ ಟ್ರ್ಯಾಕ್ ಹಾಗೂ ಮ್ಯಾಗ್ನೆಟಿಕ್ ಲೆವಿಟೇಶನ್‌ (Flexible Levitation on a Track) ಎಂದು ಕರೆಯಲ್ಪಡುವ 3 ಪದರಗಳ ತಂತ್ರಜ್ಞಾನದ ಆಧಾರದ ಮೇಲೆ ಈ ರೈಲು ಸಂಚರಿಸಲಿದೆ. ಈ ಹಳಿಯನ್ನು ‘ಫ್ಲೆಕ್ಸಿಬಲ್ ಲೆವಿಟೇಶನ್ ಆನ್ ಎ ಟ್ರ್ಯಾಕ್’ (FLOAT) ಎಂದು ಕರೆಯಲಾಗಿದೆ. 

    FLOATನ ಪ್ರಮುಖ ಲಕ್ಷಣಗಳು

    ಮ್ಯಾಗ್ನೆಟಿಕ್ ಲೆವಿಟೇಶನ್ ಟೆಕ್ನಾಲಜಿ : FLOAT ವಿಶೇಷವಾಗಿ ವಿನ್ಯಾಸಗೊಳಿಸಿದ ಮೂರು-ಪದರದ ಟ್ರ್ಯಾಕ್ ಆಗಿದೆ. ಈ ಟ್ರ್ಯಾಕ್ ಮೇಲೆ ಮ್ಯಾಗ್ನೆಟಿಕ್ ರೋಬೋಟ್‌ಗಳು ಸಂಚರಿಸಲಿದೆ. ಈ ಟ್ರ್ಯಾಕ್‌ನಿಂದ ಚಂದ್ರನ ಮೇಲೆ ಧೂಳಿನ ಸಮಸ್ಯೆಯನ್ನು ರೋಬೋಟ್ ರೈಲು ಎದುರಿಸಿವುದಿಲ್ಲ. ರೋಬೋಟ್‌ಗಳನ್ನು ಟ್ರ್ಯಾಕ್‌ಗಳ ಉದ್ದಕ್ಕೂ ನಿಯಂತ್ರಿಸಲು ಈ ಟ್ರ್ಯಾಕ್‌ನಲ್ಲಿರುವ ಸೌರಫಲಕಗಳು ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುತ್ತದೆ. 

    ಪೇಲೋಡ್ ಸಾಮರ್ಥ್ಯ: ರೋಬೋಟ್ ರೈಲು ಚಂದ್ರನ ಮೇಲೆ ಪ್ರತಿ ಗಂಟೆಗೆ ಸರಿಸುಮಾರು 1.61 ಕಿಲೋಮೀಟರ್‌ಗಳಷ್ಟು ಸಂಚರಿಸಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿದಿನ 100 ಟನ್‌ಗಳಷ್ಟು ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. 

    ಉದ್ದೇಶಿತ ಕಾರ್ಯಗಳು: FLOAT ಚಂದ್ರನ ಮಣ್ಣು ಮತ್ತು ಇತರ ವಸ್ತುಗಳನ್ನು ಚಂದ್ರನ ಮೇಲ್ಮೈಯಲ್ಲಿ ಸಂಗ್ರಹಿಸುತ್ತದೆ. ಇಷ್ಟೇ ಅಲ್ಲದೇ ಭವಿಷ್ಯದ ಉಪಗ್ರಹಗಳ ಲ್ಯಾಂಡಿಂಗ್ ಸೈಟ್‌ಗಳು ಮತ್ತು ಬೇಸ್ ಸ್ಥಳಗಳ ನಡುವೆ ದೊಡ್ಡ ಪ್ರಮಾಣದ ವಸ್ತುಗಳು ಮತ್ತು ಉಪಕರಣಗಳ ಸಾಗಣೆಯನ್ನು ಇದು ಸುಗಮಗೊಳಿಸುತ್ತದೆ.

    ಈ ಸಂಶೋಧನೆಗಾಗಿ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನ ಇಂಜಿನಿಯರ್‌ಗಳು FLOAT ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ನಂತರ ಅದರ ವಿವಿಧ ಭಾಗಗಳನ್ನು ಪರೀಕ್ಷಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೋಬೋಟಿಕ್ ತಜ್ಞರಾದ ಎಥಾನ್ ಸ್ಕೇಲರ್ ಅವರು ಚಂದ್ರನ ಮೇಲೆ ದೀರ್ಘಾವಧಿಯ ರೋಬೋಟಿಕ್ ಸಾರಿಗೆ ವ್ಯವಸ್ಥೆ ಮಾಡುವುದು ನಿರ್ಣಾಯಕವಾಗಿರುತ್ತದೆ. ಇದು ಕಾರ್ಯರೂಪಕ್ಕೆ ಬರುವುದಕ್ಕೆ ಹಲವು ಸವಾಲುಗಳಿವೆ. 2030ರ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. 

    ಚಂದ್ರನ ಮೇಲೆ ಅಮೆರಿಕಕ್ಕೆ ಯಾಕಿಷ್ಟು ಆಸಕ್ತಿ?

    ಬಾಹ್ಯಾಕಾಶ ಸಂಶೋಧನೆಯಲ್ಲಿ ಯಾವಾಗಲೂ ಮುಂದಿರುವ ಅಮೆರಿಕ, ಈ ಹಿಂದೆ ಚಂದ್ರನಲ್ಲಿಗೆ ಮನುಷ್ಯನನ್ನು ಕಳುಹಿಸಿ ಸೈ ಎನಿಸಿಕೊಂಡಿತ್ತು. ಇತ್ತೀಚೆಗೆ ಚೀನಾ ಚಂದ್ರನ ಮೇಲೆ ಚಾಂಗ್’ಇ 6 (Chang’e 6) ಎಂಬ ಉಪಗ್ರಹವನ್ನು ಕಳಿಸಿ ಚಂದ್ರನ ಭಾಗಗಳಿಂದ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಬಾಹ್ಯಾಕಾಶ ನೌಕೆಯು ಚಂದ್ರನನಿಂದ ಎರಡು ಕಿಲೋಗ್ರಾಂಗಳಷ್ಟು ಮಣ್ಣು, ಕಲ್ಲಿನ ಮಾದರಿಗಳನ್ನು ಮರಳಿ ತರುವ ನಿರೀಕ್ಷೆಯಿದೆ. ಇದು ಮನುಷ್ಯನ ಇತಿಹಾಸದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ. 2020 ರಲ್ಲಿ, ಚೀನಾ ತನ್ನ ಚಾಂಗ್’ಇ -5 ಮಿಷನ್ ಸಮಯದಲ್ಲಿ ಚಂದ್ರನ ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತಂದಿತ್ತು. ಚಾಂಗ್’ಇ 6 ಬಗ್ಗೆ ಯಾವುದೇ ಮಾಹಿತಿಯನ್ನು ಚೀನಾ ಬಿಡುಗಡೆ ಮಾಡಿಲ್ಲ. ಆದರೆ ಚೀನಾ ಬಗ್ಗೆ ಅಮೆರಿಕ, ಚಂದ್ರನ ಮೇಲೆ ಸೇನಾ ನೆಲೆ ಸ್ಥಾಪಿಸಲು ಮುಂದಾಗಿದೆ ಎಂದು ಹೇಳಿದೆ. ಅಲ್ಲದೇ ಇದೊಂದು ಬೇಹುಗಾರಿಕೆ ಉಪಗ್ರಹ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಇದೇ ಕಾರಣಕ್ಕೆ ಅಮೆರಿಕ ಸಹ ತನ್ನ ಸಂಶೋಧನೆಯನ್ನು ಮುಂದುವರಿಸಿ ಚೀನಾದ ಮುಂದೆ ತನ್ನ ಸಾಮರ್ಥ್ಯ ಏನು ಕಮ್ಮಿ ಇಲ್ಲ ಎಂದು ತೋರಿಸಲು ಮಂದಾಗಿದೆ. 

    ಚಂದ್ರನ ಮೇಲಿನ ಅಧ್ಯನದಲ್ಲಿ ಚೀನಾ ಈಗ ಮೊದಲನೇ ಸ್ಥಾನದಲ್ಲಿದ್ದರೆ, ಅಮೆರಿಕ 2 ನೇ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಭಾರತ ಹೊಂದಿದೆ. ಈ ಮೂಲಕ ಚೀನಾ, ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಚಂದ್ರನಲ್ಲಿ ಸಿಗಬಹುದಾದ ಖನಿಜಗಳ ಮೇಲೆ ಕಣ್ಣಿಟ್ಟಿವೆ. ಇದೇ ಕಾರಣಕ್ಕೆ ಚಂದ್ರನ ಮೇಲಿನ ಅಧ್ಯಯನ ಮಹತ್ವ ಪಡೆದುಕೊಂಡಿದೆ. 

    ಭಾರತ ಸಹ ಚಂದ್ರನ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ: ಕಳೆದ ವರ್ಷ ಭಾರತ ಚಂದ್ರನಲ್ಲಿಗೆ ಚಂದ್ರಯಾನ -3 ಉಪಗ್ರಹವನ್ನು ಯಶಸ್ವಿಯಾಗಿ ಕಳಿಸಿ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಈ ಉಪಗ್ರಹ ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿತ್ತು. ಇದಕ್ಕೂ ಮುನ್ನ ಮಾಡಿದ್ದ ಚಂದ್ರಯಾನ -2 ಕೊನೆಯ ಘಳಿಗೆಯಲ್ಲಿ ವಿಫಲವಾಗಿತ್ತು. 

  • ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ತಿರುವನಂತಪುರಂ: ವಿಕ್ರಂ ಲ್ಯಾಂಡರ್‌ (Vikram Lander) ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ (Shivashakti Point) ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೋ (ISRO) ಅಧ್ಯಕ್ಷ ಸೋಮನಾಥ್‌ (Somanath) ಹೇಳಿದ್ದಾರೆ.

    ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬಳಿಕ ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು-ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಸೋಮನಾಥ್‌ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಕ್ರಂ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಿದ ಜಾಗಕ್ಕೆ ‘ಶಿವಶಕ್ತಿ’ ಎಂದು ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳಕ್ಕೆ ಹೆಸರಿಡುವ ಹಕ್ಕು ರಾಷ್ಟ್ರಕ್ಕೆ ಇದೆ ಎಂದರು. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಶಿವಶಕ್ತಿ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಚಂದ್ರಯಾನ–2 ಪತನವಾಗಿದ್ದ ಸ್ಥಳವನ್ನು ‘ತಿರಂಗಾ ಪಾಯಿಂಟ್‌ʼ ಎಂದು ಹೆಸರನ್ನು ಇರಿಸಿದ್ದಾರೆ. ಎರಡೂ ಭಾರತೀಯ ಧ್ವನಿಯ ಹೆಸರುಗಳಾಗಿವೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ತಿಳಿದಿರಬೇಕು  ಎಂದು ಹೇಳಿದರು.

    ನಾನೊಬ್ಬ ಅನ್ವೇಷಕ. ನಾನು ಚಂದ್ರನನ್ನು ಅನ್ವೇಷಿಸುತ್ತೇನೆ. ಆಂತರಂಗದ ಜಾಗವನ್ನು ಅನ್ವೇಷಿಸುತ್ತೇನೆ. ಹೊರಗಿನ ಹುಡುಕಾಟಕ್ಕೆ ವಿಜ್ಞಾನ. ಅಂತರಂಗದ ಹುಡುಕಾಟಕ್ಕೆ ಆಧ್ಯಾತ್ಮ. ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಮತ್ತು ಅನೇಕ ಗ್ರಂಥಗಳನ್ನು ಓದುತ್ತೇನೆ. ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣದ ಅರ್ಥವನ್ನು ಕಂಡುಹಿಡಿಯಲು ನಾನು ಪ್ರಯತ್ನಿಸುತ್ತೇನೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೊರಗಡೆ ವಿಜ್ಞಾನ ಮಾಡಿದರೆ ಅಂತರಂಗಕ್ಕೆ ದೇವಸ್ಥಾನಗಳಿಗೆ ಬರುತ್ತೇನೆ ಎಂದು ಹೇಳಿದರು.

    ಮಿಷನ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರಯಾನ 3, ಲ್ಯಾಂಡರ್, ರೋವರ್ ತುಂಬಾ ಆರೋಗ್ಯಕರವಾಗಿದ್ದು, ಬೋರ್ಡ್‌ನಲ್ಲಿರುವ ಎಲ್ಲಾ ಐದು ಉಪಕರಣಗಳನ್ನು ಸ್ವಿಚ್ ಆನ್ ಮಾಡಲಾಗಿದೆ. ಇವುಗಳು ಸುಂದರವಾದ ಡೇಟಾವನ್ನು ನೀಡುತ್ತಿದೆ. ಇನ್ನೂ ಹತ್ತು ದಿನಗಳು ಉಳಿದಿವೆ. ವಿವಿಧ ವಿಧಾನಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ನಾವು ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಕಥೆ ಏನು?

    ಬೆಂಗಳೂರು: ಚಂದ್ರಯಾನ- 3 (Chandrayaan-3) ಮಿಷನ್‌ ಸಕ್ಸಸ್‌ ಆಗಿದ್ದು ವಿಕ್ರಮ್‌ ಲ್ಯಾಂಡರ್‌ (Vikram Lander) ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಯಶಸ್ವಿಯಾಗಿ ಕಾಲಿಟ್ಟಿದೆ. 6 ವೈಜ್ಞಾನಿಕ ಪೇಲೋಡ್‌ಗಳನ್ನು (Scientific Payloads) ಹೊತ್ತು ತಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ನಡೆದಾಡಲು ಶುರು ಮಾಡಿದೆ.

    ಲ್ಯಾಂಡರ್‌ ಹಾಗೂ ರೋವರ್‌ ಜೀವಿತಾವಧಿ ಕೇವಲ 1 ಚಂದ್ರನ ದಿನ (ಭೂಮಿಯ 14 ದಿನಗಳು) ಮಾತ್ರ. ವಿಕ್ರಮ್ ಮತ್ತು ಪ್ರಗ್ಯಾನ್‌ಗೆ (Pragyan Rover) ಅಲ್ಲಿ ಅಧ್ಯಯನ ನಡೆಸಲು ಇರುವ ಸಮಯವಿದು. ಅಷ್ಟರ ಒಳಗೆ ಈ ಎರಡೂ ತಂತ್ರಜ್ಞಾನಗಳು ವಿಜ್ಞಾನಿಗಳ ಕುತೂಹಲ ತಣಿಸುವ ಮಹತ್ವದ ಅಂಶಗಳನ್ನ ಭೂಮಿಗೆ ರವಾನಿಸಬೇಕಿದೆ. ಏಕೆಂದರೆ 14 ದಿನಗಳು ಕಳೆದ ಬಳಿಕ ಕಾರ್ಯಾಚರಣೆ ನಡೆಸಲು ಅಲ್ಲಿ ಬೇಕಾದ ಸೌರಶಕ್ತಿ ಸಿಗುವುದಿಲ್ಲ. ಹಾಗಾದರೆ 14 ದಿನಗಳ ನಂತರ ಇವೆರಡ ಕಥೆ ಏನು ಎಂಬುದೇ ಪ್ರಶ್ನೆ.

    ಚಂದ್ರನಲ್ಲಿ 14 ದಿನಗಳು ಹಗಲು, 14 ದಿನಗಳು ಇರುಳು ಕವಿದಿರುತ್ತದೆ. ಇರುಳಿನ ಸಂದರ್ಭದಲ್ಲಿ ಸೌರ ಶಕ್ತಿ ಇಲ್ಲದ ಕಾರಣ ಅವು (ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ರೋವರ್‌) ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಮುಖ್ಯವಾಗಿ ಕತ್ತಲಿನಲ್ಲಿ ಚಂದ್ರನ ಮೇಲ್ಮೈ ತಾಪಮಾನ -208 ಡಿಗ್ರಿ ಫ್ಯಾರನ್‌ ಹೀಟ್ ಅಥವಾ -133 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಇಷ್ಟು ಚಳಿಯ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಾಮರ್ಥ್ಯ ಲ್ಯಾಂಡರ್, ರೋವರ್ ಹಾಗೂ ಅವುಗಳಲ್ಲಿನ ಪೇಲೋಡ್‌ಗಳಲ್ಲಿ ಇರುವುದಿಲ್ಲ. ಹೀಗಾಗಿ ಕಾರ್ಯಾಚರಣೆ ವೇಳೆ ಅವು ಸಾಕಷ್ಟು ಸಮಸ್ಯೆ ಎದುರಿಸಬಹುದು. ಈ ಅವಧಿಯಲ್ಲಿ ಕೂಡ ಚಂದ್ರನ ಮೇಲಿನ ಲ್ಯಾಂಡರ್ ಜೊತೆ ರೋವರ್ ಸಂಪರ್ಕದಲ್ಲಿ ಇರುತ್ತದೆ. ಅದರ ಮೂಲಕ ಬೆಂಗಳೂರಿನಲ್ಲಿರುವ ಇಸ್ರೋದ ಮಿಷನ್ ಕಮಾಂಡ್ ಕೇಂದ್ರಕ್ಕೆ ಮಾಹಿತಿಗಳು ರವಾನೆಯಾಗುತ್ತದೆ. ಈ ವೇಳೆಯಲ್ಲಿ ರೋವರ್ ಜೊತೆಗೆ ಇಸ್ರೋ ನೇರ ಸಂಪರ್ಕ ಹೊಂದಿರುವುದಿಲ್ಲ.

    14 ದಿನಗಳ ನಂತರ ಮುಂದೇನು?
    ಚಂದ್ರನ ಕತ್ತಲೆಯ ಅವಧಿ ಮುಗಿದ ಬಳಿಕ ಅಥವಾ ಅಮಾವಾಸ್ಯೆ ಅವಧಿ ಕಳೆದ ಮೇಲೆ ಮತ್ತೆ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ. ಆಗ ರೋವರ್ ಹಾಗೂ ಲ್ಯಾಂಡರ್ ಪುನಃ ಸಕ್ರಿಯವಾಗುತ್ತವೆಯೇ? ಅದರ ಸಾಧ್ಯತೆ ತೀರಾ ಕಡಿಮೆಯಾದರೂ ಅಲ್ಲಗಳೆಯಲಾಗದು. ಹಾಗೊಮ್ಮೆ ರೋವರ್ ಮತ್ತು ಲ್ಯಾಂಡರ್ ಸಕ್ರಿಯವಾಗಿದ್ದರೆ ಅದು ವಿಜ್ಞಾನದ ಅದೃಷ್ಟವಾಗಿರಲಿದೆ. ಅದರ ಯಂತ್ರಗಳು 14 ದಿನಗಳ ವಿಪರೀತ ಚಳಿ ಸಹಿಸಿಕೊಂಡು, ಬಿಸಿಲು ಬಿದ್ದಾಗ ಕಾರ್ಯಾಚರಣೆ ನಡೆಸಿದರೆ, ಮತ್ತೆ 14 ದಿನಗಳ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಇದನ್ನೂ ಓದಿ: ನಮ್ಗೆ ಚಂದ್ರನ ಬಳಿಗೆ ಹೋಗುವ ಅಗತ್ಯವಿಲ್ಲ, ಚಂದ್ರನ ಮೇಲೆಯೇ ಬದುಕುತ್ತಿದ್ದೇವೆ: ಪಾಕ್‌ ಪ್ರಜೆ ವ್ಯಂಗ್ಯ

    ಯೋಜನೆ ಮುಗಿದ ಬಳಿಕ ಏನು?
    ಚಂದ್ರನಲ್ಲಿನ ತಮ್ಮ ಹೊಣೆಗಾರಿಕೆ ಪೂರ್ಣಗೊಳಿಸಿದ ನಂತರ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ವಾಪಸ್ ಭೂಮಿಗೆ ಬರುವುದಿಲ್ಲ. ಚಂದ್ರಲೋಕಕ್ಕೆ ತೆರಳಿದ ಅವುಗಳ ಜೀವನ ಅಲ್ಲಿಯೇ ಅಂತ್ಯಗೊಳ್ಳಲಿವೆ. ತಮ್ಮ ಪ್ರಯೋಗಗಳನ್ನು ಮುಗಿಸಿದ ರೋವರ್ ಹಾಗೂ ಲ್ಯಾಂಡರ್ ಚಂದಮಾಮನಲ್ಲಿ ಪಳೆಯುಳಿಕೆಗಳಾಗಿ ಉಳಿಯಲಿವೆ. ಮುಂದೊಂದು ದಿನ ಚಂದ್ರನ ಅಂಗಳಕ್ಕೆ ಮಾನವ ಕಾಲಿಟ್ಟಾಗ ಚಂದ್ರನ ಮೇಲೆ ಆಟಿಕೆಗಳಂತೆ ಕಾಣುವ ಈ ಲ್ಯಾಂಡರ್ ಮತ್ತು ರೋವರ್ ಸಿಗಬಹುದು. ಚಂದ್ರಯಾನ-2ರ ಪುಡಿಯಾದ ಲ್ಯಾಂಡರ್‌ನ ಅವಶೇಷಗಳೂ ಕಾಣಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

    ದಕ್ಷಿಣ ಧ್ರುವ ಆಯ್ಕೆ ಮಾಡಿಕೊಂಡಿದ್ದೇಕೆ?
    ಭಾರತ ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್‌ ಲ್ಯಾಂಡಿಗ್‌ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಗೆ ಸಾಧಿಸಿದೆ. ದಕ್ಷಿಣ ಧ್ರುವ ಪ್ರದೇಶವು ನಾಸಾದ ಸಿಬ್ಬಂದಿ ಅಪೊಲೊ ಲ್ಯಾಂಡಿಂಗ್‌ಗಳು ಸೇರಿದಂತೆ ಇತರ ಕಾರ್ಯಾಚರಣೆಗಳಿಂದ ಗುರಿಯಾಗಿರುವ ಸಮಭಾಜಕ ಪ್ರದೇಶದಿಂದ ದೂರವಿದೆ. ಇಲ್ಲಿನ ಪ್ರದೇಶ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ಕೂಡಿರುತ್ತದೆ. ಚಂದ್ರಯಾನ-3 ಮಿಷನ್‌ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಅಧ್ಯಯನವನ್ನ ಮುಂದುವರಿಸಬಹುದು. ಜೊತೆಗೆ ಚಂದ್ರನ ಮೇಲ್ಮೈನಲ್ಲಿರುವ ಇತರೇ ಅತ್ಯಮೂಲ್ಯ ಸಂಪನ್ಮೂಲಗಳ ಅಧ್ಯಯನ ಗುರಿ ಹೊಂದಿದೆ. ಅದಕ್ಕಾಗಿ ಭಾರತ ದಕ್ಷಿಣ ಧ್ರುವವನ್ನ ಆಯ್ಕೆ ಮಾಡಿಕೊಂಡಿದೆ.

    ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 41 ದಿನಗಳ ಸುದೀರ್ಘ ಪ್ರಯಾಣದ ನಂತರ ವಿಕ್ರಮ್‌ ಲ್ಯಾಂಡರ್‌ ಚಂದ್ರಯನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ ಯಶಸ್ಸಿಗಾಗಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ – ಶ್ರೀಶೈಲ ಜಗದ್ಗುರುಗಳಿಂದಲೂ ಶುಭಹಾರೈಕೆ

    ಚಂದ್ರಯಾನ ಯಶಸ್ಸಿಗಾಗಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ – ಶ್ರೀಶೈಲ ಜಗದ್ಗುರುಗಳಿಂದಲೂ ಶುಭಹಾರೈಕೆ

    ಚಿಕ್ಕೋಡಿ: ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ‌ ಚಿಕ್ಕೋಡಿ (Chikkodi) ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಮಹಾಮೃತ್ಯುಂಜಯ ಹೋಮ, ಜಯಾದಿ ಹೋಮ ನೇರವರಿಸಲಾಯಿತು. ಮತ್ತೊಂದೆಡೆ ಶ್ರೀಶೈಲ ಜಗದ್ಗುರು 1008 ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳೂ ಶುಭಕೋರಿದರು.

    ಶ್ರೀಶೈಲ್ ಜಗದ್ಗುರು 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ‌ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಸಿದ್ದಲಿಂಗೇಶ್ವರ ವೈದಿಕ ಪಾಠ ಶಾಲೆಯ ಪ್ರಾಚಾರ್ಯರಾದ ಶ್ರೀಶೈಲ್ ‌ಹಿರೇಮಠ ಹಾಗೂ ವೇದಮೂರ್ತಿ ಮಲ್ಲಯ್ಯ ಜಡೆ ನೇತೃತ್ವದಲ್ಲಿ ಹಾಗೂ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದೇವಸ್ಥಾನದ ಸನ್ನಿದಾನದಲ್ಲಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ,ಜಯಾದಿ ಹೋಮವು ಅತ್ಯಂತ ಭಕ್ತಿಭಾವದಿಂದ ಜರುಗಿತು.

    ಈ ಕುರಿತು ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಾತನಾಡಿದ ಶ್ರೀಗಳು, ಇಂದು ಶ್ರೀಶೈಲ್ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ವಿಶೇಷಪೂಜೆ,ವಿಶೇಷ ಮಂಗಳಾರತಿ‌ ನೇರವರಿಸಲಾಗುವುದು. ಭವ್ಯಭಾರತ ಆಶಾಕಿರಣವಾದ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲಿದೆ. ಚಂದ್ರಯಾನ-2ರಂತೆ ಕೊನೇ ಘಳಿಗೆಯಂತೆ ವಿಫಲವಾಗದೇ ಚಂದ್ರಯಾನ-3 ಯಶಸ್ವಿಯಾಗಲಿ. ಚಂದ್ರಯಾನ-3 ಚಂದ್ರನನ್ನ ತಲುಪಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

    ಮತ್ತೊಂದೆಡೆ 108 ವೇದ ವಟುಗಳು ರುದ್ರ ಹಾಗೂ ಗಣ ಹೋಮ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಿರೇಮಠದ ಯಾಗ ಶಾಲೆಯಲ್ಲಿ ಹೋಮ ಆಯೋಜನೆ ಮಾಡಲಾಗಿದ್ದು ಹುಕ್ಕೇರಿ ಹಿರೇಮಠದ 108 ವೇದ ವಟುಗಳಿಂದ ಚಂದ್ರಯಾನ ಯಶಸ್ವಿಗಾಗಿ ಹೋಮ ಹವನ ಮಾಡಲಾಯಿತು‌. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಹೋಮವನ್ನ ವೇದ ಗುರುವಾದ ಉದಯ ಶಾಸ್ತ್ರೀಗಳ ನೇತೃತ್ವದಲ್ಲಿ ನಡೆಸಲಾಯಿತು. ನಮ್ಮ ದೇಶದ ಧ್ವಜ ಹಿಡಿದು ಮಂತ್ರ ಪಠಣ ಹಾಗೂ ಹೋಮ ನೆರವೇರಿಸಿದ ವಟುಗಳು, ಗೋಮಾತೆಗೂ ಪೂಜೆ ಸಲ್ಲಿಸಿ ಚಂದ್ರಯಾನ ಯಶಸ್ವಿಗೆ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ನೋಡಲು ಕಾಯುತ್ತಿದ್ದೇನೆ- ಕರೀನಾ ಕಪೂರ್

    ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ನೋಡಲು ಕಾಯುತ್ತಿದ್ದೇನೆ- ಕರೀನಾ ಕಪೂರ್

    ಚಂದ್ರಯಾನ- 3 (Chandrayaan-3)  ಆಗಸ್ಟ್ 23ರಂದು ಲ್ಯಾಂಡ್ ಆಗುತ್ತಿದೆ. ಇಡೀ ದೇಶವೇ ಈ ಕ್ಷಣಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ. ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ ಎಂದು ಚಂದ್ರಯಾನ ಬಗ್ಗೆ ನಟಿ ಕರೀನಾ ಕಪೂರ್ (Kareena Kapoor)  ಮಾತನಾಡಿದ್ದಾರೆ. ಇದನ್ನೂ ಓದಿ:ಮೀನು ತಿನ್ನಿ, ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಕಾಣುತ್ತದೆ- ಸಚಿವ ವಿಜಯ್ ಕುಮಾರ್ ಗವಿತ್

    ಇಸ್ರೋ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯರಿಂದ ಹಿಡಿದು ಅನೇಕ ಸಿನಿ ತಾರೆಯರು ಕೂಡ ಇಸ್ರೋ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಕರೀನಾ ಕಪೂರ್ ಕೂಡ ರಿಯಾಕ್ಟ್ ಮಾಡಿ, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವುದನ್ನು ನೋಡಲು ಕಾಯುತ್ತಿದ್ದೇನೆ. ಎಲ್ಲಾ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ನಾನು ಮಕ್ಕಳ ಜೊತೆ ಕುಳಿತು ನೋಡುವೆ ಎಂದು ಮಾತನಾಡಿದ್ದಾರೆ.

    ನಟಿ ಕರೀನಾ ಕಪೂರ್ ಹಾಡಿ ಹೊಗಳಿದ್ರೆ, ಪ್ರಕಾಶ್ ರಾಜ್ (Prakash Raj) ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅವರ ಪೋಸ್ಟ್ ಕೂಡ ಸಂಚಲನ ಸೃಷ್ಟಿಸಿದೆ. ಚಂದ್ರಯಾನ ಕುರಿತಂತೆ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಚಂದ್ರಯಾನ ಇದೀಗ ಕಳುಹಿಸಿರುವ ಫೋಟೋ ಎಂದು ಕ್ಯಾಪ್ಷನ್ ನೀಡಿ ಚಾಯ್ ವಾಲಾ ಫೋಟೋ ಹಾಕಿದ್ದಾರೆ. ಅವರ ಈ ವರ್ತನೆಗೆ ಅನೇಕರು ಕಿಡಿಕಾರಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!

    ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!

    ಮಾಸ್ಕೋ: ಭಾರತದ ಚಂದ್ರಯಾನ-3 ಗಿಂತ (Chandrayaan-3) ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಇಳಿಯುವ ರಷ್ಯಾದ ಕನಸು ಭಗ್ನಗೊಂಡಿದೆ. ಚಂದ್ರನ ಮೇಲ್ಮೆನಲ್ಲಿ ಲ್ಯಾಂಡ್‌ ಆಗಬೇಕಿದ್ದ ಲೂನಾ-25 (Luna-25 Lander) ಚಂದ್ರನ ಮೇಲೆ ಪೂರ್ವ ಲ್ಯಾಂಡಿಂಗ್ ಕಕ್ಷೆ (Pre Moon Orbit) ಪ್ರವೇಶಿಸಲು ವಿಫಲವಾಗಿ ಪತನಗೊಂಡಿದೆ.

    ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದೆ. ರೋಬೋಟಿಕ್ ಬಾಹ್ಯಾಕಾಶ ನೌಕೆಯು ಶನಿವಾರ ಚಂದ್ರನ ಅಂಗಳಕ್ಕೆ ಇಳಿಯಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗಬೇಕಿದ್ದ ನೌಕೆ ಚಂದ್ರನ ಅಂಗಳಕ್ಕೆ ಅಪ್ಪಳಿಸಿ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ರೋಸ್ಕೋಸ್ಮೊಸ್  ಹೇಳಿದೆ  ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್‌ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ

    ಆಗಸ್ಟ್ 10 ರಂದು ರಷ್ಯಾ ಲೂನಾ-25 ಗಗನ ನೌಕೆಯನ್ನು ಉಡಾವಣೆ ಮಾಡುವ ಮೂಲಕ ನಾಸಾ ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಿತ್ತು. ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ನಿರ್ಧರಿಸಲಾಗಿತ್ತು. ಸುಮಾರು 50 ವರ್ಷಗಳ ಬಳಿಕ ಉಡಾವಣೆ ಮಾಡಿದ ಮೊದಲ ಚಂದ್ರಯಾನ ನೌಕೆ ಲೂನಾ- 25,ಚಂದ್ರನಲ್ಲಿ ನಿಗದಿಯಲ್ಲಿ ಇಳಿಯುವ ಮುನ್ನ ಸೇರಬೇಕಾದ ಕಕ್ಷೆಯನ್ನು ಪ್ರವೇಶಿಸುವಲ್ಲಿ ವಿಫಲವಾಗಿದೆ.

    ಭಾರತ ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರಯಾನ ನೌಕೆ  ಚಂದ್ರನ ಮೇಲೆ ಇಳಿಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    ನವದೆಹಲಿ: ಚಂದ್ರನ (Moon) ಅಂಗಳಕ್ಕೆ ಕಳುಹಿಸಿರುವ ಚಂದ್ರಯಾನ-3 (Chandrayaan-3) ಲ್ಯಾಂಡರ್ ಸೆರೆಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

    ಚಿತ್ರಗಳಲ್ಲಿ ಚಂದ್ರನ ಮೇಲ್ಮೈನ ಕುಳಿಗಳಾದ ಅರಿಸ್ಟಾರ್ಕಸ್, ಎಡಿಂಗ್ಟನ್ ಮತ್ತು ಪೈಥಾಗರಸ್ ಸೆರೆಯಾಗಿದೆ. ಅಲ್ಲದೇ ಚಂದ್ರನ ಮೇಲಿರುವ ಕಪ್ಪು ಬಯಲು ಪ್ರದೇಶ ಓಷಿಯನಸ್ ಪ್ರೋಸೆಲ್ಲಾರಮ್ ಪ್ರದೇಶ ಕೂಡ ಸ್ಪಷ್ಟವಾಗಿ ಕಾಣಿಸುತ್ತದೆ. ಹಂಚಿಕೊಳ್ಳಲಾದ ಫೋಟೋಗಳಲ್ಲಿ ಜುಲೈ 14ರಂದು ತೆಗೆಯಲಾದ ಭೂಮಿಯ ಚಿತ್ರವೂ ಸೇರಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್‌ ಪಕ್ಕಾ!

    ಆಗಸ್ಟ್ 5 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಈಗ ನೌಕೆಯು ಚಂದ್ರನ ಮೇಲೆ ಇಳಿಯಲು ಕೇವಲ ಹದಿನೈದು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಚಂದ್ರನ ಹತ್ತಿರಕ್ಕೆ ತೆಗೆದುಕೊಂಡು ಹೋಗಲು ಮತ್ತು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಲ್ಯಾಂಡರ್ (ವಿಕ್ರಮ್) ಅನೇಕ ತಂತ್ರಗಳನ್ನು ನಿರ್ವಹಿಸಲಿದೆ.

    ಬುಧವಾರ ಚಂದ್ರನ ಮೇಲ್ಮೈನ 1437 ಕಿಮೀ ವೃತ್ತದ ಕಕ್ಷೆಯಿಂದ 174 ಕಿಮೀಗೆ ಇಳಿಸಲಾಗಿದೆ. ಚಂದ್ರನ ಮೇಲೆ ಲ್ಯಾಂಡ್‌ ಆಗುವುದಕ್ಕೆ ಇನ್ನು 1437 ಕಿ.ಮೀ. ಅಷ್ಟೇ ಕ್ರಮಿಸಬೇಕಿದೆ. ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 14 ರಂದು 11:30 ಮತ್ತು 12:30 ಗಂಟೆಗಳ ನಡುವೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ನವದೆಹಲಿ: ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರಯಾನಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.

    ISRO ROCKET
    ಸಾಂದರ್ಭಿಕ ಚಿತ್ರ

    ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ. ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ? ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಅಲ್ಲೂ ಮನುಷ್ಯರು ವಾಸಿಸಲು ಯೋಗ್ಯವೇ ಇಲ್ಲವೇ ಎಂಬ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು? 

    Chandrayana 02
    ಸಾಂದರ್ಭಿಕ ಚಿತ್ರ

    ಹೇಗಿದೆ ಶುಕ್ರಗ್ರಹದ ವಾತಾವರಣ?: ಈಗ ಶುಕ್ರಗ್ರಹಕ್ಕೆ ತನ್ನ ನೌಕೆ ಕಳುಹಿಸಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ಮುಂದಾಗಿದೆ. ಶುಕ್ರಗ್ರಹದಲ್ಲಿ ಸಲ್ಫರಿಕ್ ಆ್ಯಸಿಡ್‌ನ ಮೋಡಗಳು ಕವಿದಿರುತ್ತವೆ. ಅಲ್ಲಿನ ವಾತಾವರಣ ವಿಷಯುಕ್ತವಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ವಾತಾವರಣವನ್ನು ಇನ್ನಷ್ಟು ನಿಖರವಾಗಿ ತಿಳಿಯಲು ಹಾಗೂ ಇಲ್ಲಿ ಜ್ವಾಲಾಮುಖಿಗಳು, ಲಾವಾರಸ, ಮಣ್ಣು ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಸ್ರೋ ಶುಕ್ರಯಾನ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    PSLV ISRO
    ಸಾಂದರ್ಭಿಕ ಚಿತ್ರ

    ಹಲವು ವರ್ಷಗಳ ಸಿದ್ಧತೆ: ಹಲವು ವರ್ಷಗಳಿಂದ ಸಿದ್ಧತೆ ಪ್ರಾರಂಭಿಸಿದ್ದ ಇಸ್ರೋ ಶುಕ್ರಯಾನದ ಮಹತ್ವದ ಯೋಜನೆ ಈಗ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ನಂತರ ಸೋಮನಾಥ್, ಈ ನಿರ್ಧಾರ ಪ್ರಕಟಿಸಿದ್ದರು. ಶುಕ್ರಯಾನಕ್ಕೆ ಹಣ ನಿಗದಿಪಡಿಸಿದ್ದು, ಸಾಕಷ್ಟು ಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ನೌಕೆ ಉಡಾವಣೆ ಯಾವಾಗ? 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೆ? ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು. 2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ ಎಂದು ಹೇಳಿರುವ ಇಸ್ರೋ 2024ರಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

    isro center main
    ಸಾಂದರ್ಭಿಕ ಚಿತ್ರ

    ಅಮೆರಿಕ, ಯುರೋಪ್‌ನಿಂದ ಯೋಜನೆ: ಅಮೆರಿಕದ ನಾಸಾ ಮತ್ತು ಯುರೋಪಿಯನ್ ಯೂನಿಯನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿವೆ. ಅವುಗಳ ಬೆನ್ನಲ್ಲೇ ಶುಕ್ರನ ಸುತ್ತ ಸುತ್ತುವ 3ನೇ ನೌಕೆ ಭಾರತದ್ದಾಗಿರಲಿದೆ. ಅಮೆರಿಕವು ಶುಕ್ರಯಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು 7500 ಕೋಟಿ ರೂ.) ಹಣ ಮೀಸಲಿಟ್ಟಿದೆ.

  • 12 ದಿನಗಳ ಬಾಹ್ಯಾಕಾಶ ಪ್ರಯಾಣದಿಂದ ಮರಳಿದ ಜಪಾನ್ ವ್ಯಕ್ತಿ!

    ಟೋಕಿಯೋ: ಸ್ಪೇಸ್ ಎಕ್ಸ್‌ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕನಾಗಿ ಜಪಾನ್ ಮೂಲದ ಯುಸಾಕು ಮೇಜಾವಾ 12 ದಿನಗಳ ಬಾಹ್ಯಾಕಾಶ ಪ್ರವಾಸದಿಂದ ಮರಳಿದ್ದಾರೆ.

    ಜಪಾನಿನ ಕೋಟ್ಯಧೀಶ್ವರ ಮೇಜಾವಾ ಸೋಮವಾರ ಭೂಮಿಗೆ ಮರಳಿದ್ದು, ಕಝಾಕಿಸ್ತಾನ್‌ನಲ್ಲಿ ಬಂದಿಳಿದಿದ್ದಾರೆ. ಪ್ರಪಂಚದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ಚಂದ್ರಯಾನದ ಪರೀಕ್ಷೆಯನ್ನು ಕೈಗೊಂಡಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದನ್ನೂ ಓದಿ: ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್

    ಡಿಸೆಂಬರ್ 8ರಂದು ಮೇಜಾವಾ ಹಾಗೂ ಅವರ ಸಹಾಯಕ ಈ ಕೋಟ್ಯಂತರ ಮೌಲ್ಯದ ಪ್ರಯಾಣವನ್ನು ಕೈಗೊಂಡಿದ್ದರು. ಒಂದು ದಶಕದಲ್ಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್‌ಎಸ್) ಪ್ರಯಾಣಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆ, ಕಾಶಿ ನಂತ್ರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಾಣ: ಹೇಮಾ ಮಾಲಿನಿ

    ಶ್ರೀಮಂತ ವ್ಯಕ್ತಿಗಳಿಗೆ ಬಾಹ್ಯಾಕಾಶ ಪ್ರಯಾಣ ಒಂದು ಹೊಸ ಯುಗವಾಗಿ ಮಾರ್ಪಡಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಐಎಸ್‌ಎಸ್‌ಗೆ ಭೇಟಿ ನೀಡಿದ ಜಪಾನೀ ಪ್ರವಾಸಿ ಮೇಜಾವಾ ಸ್ಪೇಸ್ ಎಕ್ಸ್‌ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕರಾಗಲು ಸಿದ್ಧರಾದರು.

  • ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿ

    ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿ

    ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚೀನಾ ದೇಶ ತಮ್ಮ ಕೆಂಪು ಬಾವುಟವನ್ನು ಚಂದ್ರನ ಮೇಲೆ ಹಾರಿಸಿದೆ.

    50 ವರ್ಷದ ಹಿಂದೆ ಅಮೆರಿಕಾ ಯಶಸ್ವಿಯಾಗಿ ಚಂದ್ರನ ಮೇಲೆ ತನ್ನ ದೇಶದ ಬಾವುಟವನ್ನು ಹಾರಿಸಿತ್ತು. ಅಮೆರಿಕಾ ಬಳಿಕ ಚಂದ್ರನ ಮೇಲೆ ಬಾವುಟ ನೆಟ್ಟ 2ನೇ ರಾಷ್ಟ್ರ ಎಂಬ ಇತಿಹಾಸವನ್ನು ಚೀನಾ ದೇಶ ಸೃಷ್ಟಿ ಮಾಡಿದೆ. ಡ್ರಾಗನ್ ದೇಶ ನವೆಂಬರ್ 23ಕ್ಕೆ ಚಾಂಗ್ ಇ-5 ನೌಕೆ ಚಂದ್ರನಲ್ಲಿಗೆ ಕಳಿಸಿತ್ತು. ಅದು ಇಂದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ.

    ತಮ್ಮ ನೌಕೆ ಚಂದ್ರನಲ್ಲಿಗೆ ಹೋಗಿ ಬಾವುಟ ಹಾರಿಸಿರುವ ಫೋಟೋವನ್ನು ಚೀನಾ ದೇಶ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಚಂದ್ರನ ಬಳಿ ಪ್ರಯಾಣ ಬೆಳಸಿದ್ದ ಚಾಂಗ್ ಇ-5 ನೌಕೆಯ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದೆ. ಇದರ ಜೊತೆಗೆ ಚಂದ್ರನಲ್ಲಿರುವ ಬಂಡೆಯ ಒಂದು ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ. ಈ ಚಂದ್ರಯಾನದ ಯಶಸ್ಸಿನೊಂದಿದೆ ಚೀನಾ 2022ಕ್ಕೆ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದೆ.