Tag: ಚಂದ್ರಮೌಳೇಶ್ವರ ದೇವಸ್ಥಾನ

  • ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು

    ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು

    ರಾಯಚೂರು: ಮಹಾ ಶಿವರಾತ್ರಿ ಪ್ರಯುಕ್ತ ರಾಯಚೂರಿನಲ್ಲಿ (Raichur) ಮಧ್ಯರಾತ್ರಿಯಿಂದಲೇ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

    ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ (ChandraMouleshwara Temple) ಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ

    ಶಿವ ಮಾಲಾಧಾರಿಗಳು ನಿರಂತರ ಶಿವನಾಮಸ್ಮರಣೆ, ಶಿವನ ಭಜನೆ ಮಾಡುತ್ತಿದ್ದಾರೆ. ನಿರಂತರ ಮಹಾರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಗವಂತನ ದರ್ಶನಕ್ಕಾಗಿ ಪರದಾಟ ನಡೆಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಭಕ್ತರು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ.

    ನಗರದ ನಂದೀಶ್ವರ, ರಾಮಲಿಂಗೇಶ್ವರ, ಕೊದಂಡರಾಮ ದೇವಾಲಯದಲ್ಲೂ ವಿಶೇಷಗಳನ್ನ ನೆರವೇರಿಸಲಾಗುತ್ತಿದೆ. ಮಹಾಮಂಗಳಾರತಿ, ಸಂಜೆ ಭಜನೆ, ರಾತ್ರಿ ಪೂರಾ ಜಾಗರಣೆ ಕಾರ್ಯಕ್ರಮಗಳನ್ನ ಎಲ್ಲಾ ಶಿವ ದೇವಾಲಯಗಳಲ್ಲಿ ಆಯೋಜಿಸಲಾಗಿದೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ! 

  • ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ

    ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ

    ಮಂಡ್ಯ: ಇಂದು ಉತ್ತರಾಯನಕ್ಕೆ ಸೂರ್ಯ ಪಥ ಬದಲಿಸಿದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದಕ್ಷಿಣ ಕಾವೇರಿ ತೀರದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಿತು.

    ಬೆಳಗ್ಗೆ 7.10ರ ವೇಳೆಗೆ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶಿಸಿದ್ದು, ಈ ದೃಶ್ಯವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು. ಇಂದು ಸೂರ್ಯ ರಶ್ಮಿ ಸ್ಪರ್ಶ ಹಿನ್ನೆಲೆ ಮುಂಜಾನ ಮೂರು ಗಂಟೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

    ನಂತರ ಬೆಳಗ್ಗೆ 7.10ಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಿದ್ದು, ಸುಮಾರು ಎರಡು ನಿಮಿಷಗಳ ಕಾಲ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಇತ್ತು. ನಂತರ ಚಂದ್ರವನ ಆಶ್ರಮ ಪೀಠಾಧ್ಯಕ್ಷ ತ್ರೀನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಎಳ್ಳು ಬೆಲ್ಲ ನೀಡಿ ಶುಭವಾಗಲೆಂದು ಸ್ವಾಮೀಜಿಗಳು ಆಶೀರ್ವಾದ ಮಾಡಿದರು. ಬಳಿಕ ಗೋ ಪೂಜೆ ಮಾಡುವ ಮೂಲಕ ರಾಸುಗಳ ಏಳಿಗೆಗಾಗಿ ಬಸವಣ್ಣನಲ್ಲಿ ಪ್ರಾರ್ಥನೆ ಮಾಡಿದರು.