Tag: ಚಂದ್ರಜಿತ್ ಬೆಳ್ಳಿಯಪ್ಪ

  • ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಗಿರಿಜಾ ಶೆಟ್ಟರ್ ಫಸ್ಟ್ ಲುಕ್ ರಿಲೀಸ್

    ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಗಿರಿಜಾ ಶೆಟ್ಟರ್ ಫಸ್ಟ್ ಲುಕ್ ರಿಲೀಸ್

    ರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿರುವ, ಚಂದ್ರಜಿತ್ ಬೆಳ್ಳಿಯಪ್ಪ ( Chandrajit Belliyappa) ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ (Ibbani Thabbida Ileyali) ಸುಮಧುರ ಪ್ರೇಮಕಾವ್ಯದಲ್ಲಿ ಖ್ಯಾತ ನಟಿ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ. ತೆಲುಗಿನ ಗೀತಾಂಜಲಿ ಚಿತ್ರ ಸೇರಿದಂತೆ ಅನೇಕ ಸುಪ್ರಸಿದ್ದ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್, ಈ ಚಿತ್ರದಲ್ಲೂ ನಟಿಸಿದ್ದಾರೆ.

    ಗಿರಿಜಾ ಶೆಟ್ಟರ್ (Girija Shettar) ಅವರ ಫಸ್ಟ್ ಲುಕ್ (First Look) ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ. ವಿಭಿನ್ನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರದ ನಾಯಕ – ನಾಯಕಿಯಾಗಿ ವಿಹಾನ್ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ.

    ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ರಕ್ಷಿತ್ ಕಾಪ್ ಅವರ ಸಂಕಲನ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಮಯೂರಿ ನಟರಾಜ್

    ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಮಯೂರಿ ನಟರಾಜ್

    ನಂಜಯ್ ಅಭಿನಯದ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಗಮನಸೆಳೆದಿದ್ದ ಮಯೂರಿ ನಟರಾಜ್ (Mayuri Nataraj), ಇದೀಗ ‘ಇಬ್ಬನಿ ತಬ್ಬಿದ ಇಳೆಯಲಿ’ (Ibbani Dabbida Ilayali) ಚಿತ್ರಕ್ಕೆ ಎರಡನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಪರಂವಾ ಸ್ಟುಡಿಯೋಸ್ನಡಿ ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿ, ಚಂದ್ರಜಿತ್ ಬೆಳ್ಳಿಯಪ್ಪ (Chandrajit Belliyappa) ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರವು ಇದೀಗ ಮುಕ್ತಾಯ ಹಂತ ತಲುಪಿದ್ದು, ಚಿತ್ರತಂಡಕ್ಕೆ ಮಯೂರಿ ನಟರಾಜ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಇದೊಂದು ಪ್ರಮುಖ ಪಾತ್ರವಾಗಿದ್ದು, ಈಗಾಗಲೇ ಮಯೂರಿ ನಟರಾಜ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಮಯೂರಿ ನಟರಾಜ್ ನಟನೆಯ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ.

    ಇದಕ್ಕೂ ಮುನ್ನ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಮತ್ತು ‘ಗುರುದೇವ್ ಹೊಯ್ಸಳ’ ಚಿತ್ರಗಳಲ್ಲಿ ಅಭಿನಯಿಸಿದ್ದ ಮಯೂರಿ ನಟರಾಜ್, ಸಿಟಿಆರ್ ಹೋಟೆಲ್‌ ನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಈಗ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

    ‘ಇಬ್ಬನಿ ತಬ್ಬಿದ ಇಳೆಯಲಿ’ ಒಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ.