Tag: ಚಂದ್ರಕಾಂತಾ ಗೋಯಲ್

  • ಪಿಯೂಷ್ ಗೋಯಲ್‍ಗೆ ಮಾತೃ ವಿಯೋಗ

    ಪಿಯೂಷ್ ಗೋಯಲ್‍ಗೆ ಮಾತೃ ವಿಯೋಗ

    ಮುಂಬೈ: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ, ಬಿಜೆಪಿ ಹಿರಿಯ ಮುಖಂಡೆ ಚಂದ್ರಕಾಂತಾ ಗೋಯಲ್ ಅವರು ಮುಂಬೈನಲ್ಲಿ ಇಂದು ಬೆಳಗ್ಗೆ  ನಿಧನರಾಗಿದ್ದಾರೆ.

    ತಮ್ಮ ತಾಯಿಯ ಫೋಟೋವನ್ನು ಟ್ವಿಟ್ ಮಾಡಿರುವ ಕೇಂದ್ರ ಸಚಿವರು, “ನನ್ನ ಪೂಜ್ಯ ತಾಯಿ, ಯಾವಾಗಲೂ ತನ್ನ ಪ್ರೀತಿಯಿಂದ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ತಮ್ಮ ಇಡೀ ಜೀವನವನ್ನು ಸೇವೆಯಲ್ಲಿ ಕಳೆದರು. ಸೇವೆ ಮಾಡುತ್ತಾ ಬದುಕಲು ನಮಗೆ ಪ್ರೇರಣೆ ನೀಡಿದರು. ದೇವರು ಅವರನ್ನು ಆಶೀರ್ವದಿಸುತ್ತಾನೆ. ಓಂ ಶಾಂತಿ” ಎಂದು ಶೋಕ ವ್ಯಕ್ತಪಡಿಸಿದ್ದಾರೆ.

    ಚಂದ್ರಕಾಂತಾ ಗೋಯಲ್ ಅವರ ನಿಧನಕ್ಕೆ ಅನೇಕ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಚಂದ್ರಕಾಂತಾ ಗೋಯಲ್ ಜಿ ಅವರ ನಿಧನವು ದುಃಖ ತಂದಿದೆ. ಅವರು ಮೂರು ಬಾರಿ ಶಾಸಕರಾಗಿದ್ದರು. ಅವರ ಜೀವನದುದ್ದಕ್ಕೂ ಸಂತೋಷದಿಂದ ಮತ್ತು ಯಾವಾಗಲೂ ಜನರಿಗೆ ಪ್ರೀತಿಯನ್ನು ನೀಡುತ್ತಿದ್ದರು. ಶಾಂತಿ ಎಂದು ನೆನೆಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, ‘ಆತ್ಮೀಯ ಪಿಯೂಷ್ ಗೋಯಲ್, ತಾಯಿ-ಮಗನ ಸಂಬಂಧ ಈ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾದ ಸಂಬಂಧವಾಗಿದೆ. ತಾಯಿಯನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡ ದುಃಖ ಇನ್ನೊಂದಿಲ್ಲ. ಪೂಜ್ಯ ತಾಯಿಯ ಆತ್ಮಕ್ಕೆ ಶಾಂತಿ ನೀಡುವಾಗ, ಅವರಿಗೆ ಸರ್ವೋಚ್ಚ ವಾಸಸ್ಥಾನದಲ್ಲಿ ಸ್ಥಾನ ಕಲ್ಪಿಸಬೇಕೆಂದು ಭಗವಾನ್ ಶ್ರೀ ರಾಮನಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. ದುಃಖದ ಈ ಗಳಿಗೆಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ” ಎಂದು ಸಂತಾಪ ಸೂಚಿಸಿದ್ದಾರೆ.