Tag: ಚಂದ್ರಕಲಾ

  • ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

    ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

    ಬೆಂಗಳೂರು: ವಿದ್ಯಾಸಾಗರ ಶಾಲೆಯ ಶಿಕ್ಷಕಿ ಅನಾರೋಗ್ಯದ ನೆಪವೊಡ್ಡಿ ರಾಜೀನಾಮೆ ನೀಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

    ವಿವಾದ ಬೆನ್ನಲ್ಲೇ ಶಶಿಕಲಾ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ಚಂದ್ರಾ ಲೇಔಟ್‍ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದ್ದಕ್ಕೆ ಪೋಷಕರು ಶಿಕ್ಷಕರ ನಡುವೆ ವಾಗ್ವಾದ ನಡೆದಿತ್ತು.

    ಈ ಹಿನ್ನೆಲೆ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಈ ಸಂಬಂಧ ಕೆಲವು ಸಂಘಟನೆಗಳು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

    ಸದ್ಯ ಅನಾರೋಗ್ಯ ಕಾರಣ ನೀಡಿ ಶಿಕ್ಷಕಿ ಶಶಿಕಲಾ ರಾಜೀನಾಮೆ ನೀಡಿದ್ದಾರೆ ಎಂದು ಶಶಿಕಲಾ ರಾಜೀನಾಮೆ ಬಗ್ಗೆ ವಿದ್ಯಾಸಾಗರ್ ಶಾಲೆ ಕಾರ್ಯದರ್ಶಿ ಡಾ.ರಾಜು ಸ್ಪಷ್ಟನೆ ನೀಡಿದ್ದಾರೆ. ನನಗೆ ಆರೋಗ್ಯ ಸರಿ ಇಲ್ಲ. ಕೆಲಸ ಮಾಡಲು ಆಗುವುದಿಲ್ಲ ಎಂದು ಶಿಕ್ಷಕಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆಯೇನು?: ಹಿಜಬ್ ಬಗ್ಗೆ ಅವಹೇಳನಕಾರಿಯಾಗಿ 7ನೇ ತರಗತಿಯ ಬೋರ್ಡ್‍ನಲ್ಲಿ ಶಿಕ್ಷಕಿ ಶಶಿಕಲಾ ಬರೆದಿದ್ದಾರೆ ಎಂದು ಆರೋಪಿಸಿ ಪೋಷಕರು ಶನಿವಾರ ಶಾಲೆ ಮುಂಭಾಗದಲ್ಲಿ ಜಮಾಯಿಸಿ ಶಿಕ್ಷಕಿಯನ್ನು ವಜಾಗೊಳಿಸಲು ಒತ್ತಾಯಿಸಿದ್ದರು.

    ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮತ್ತು ಡಿಡಿಪಿಐ ಉಪ ನಿರ್ದೇಶಕರು ಸ್ಥಳಕ್ಕೆ ಬಂದು ಪೋಷಕರ ಒತ್ತಾಯದ ಮೇರೆಗೆ ಶಿಕ್ಷಕಿ ಶಶಿಕಲಾರನ್ನು ವಜಾಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನೀವು ಗಣಿತ ಶಿಕ್ಷಕಿಯಾಗಿ ನಿಮ್ಮ ಕಲಿಕೆಯ ವಿಷಯದ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಸೂಕ್ಷ್ಮ ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆ ಮಾತನಾಡಬಾರದು ಎಂದು ಹೇಳಿದ್ದರು. ಇದನ್ನೂ ಓದಿ: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿಕೆಶಿ

    POLICE JEEP

    ತರಗತಿಯ ಮೂರು ಮಕ್ಕಳ ಹೆಸರನ್ನು ಬೋರ್ಡ್‍ನಲ್ಲಿ ಕೆಎಲ್‍ಎಸ್ ಎಂದು ಇನ್ಶಿಯಲ್ ಮೂಲಕ ಬರೆದಿದ್ದರು. ತರಗತಿಯಲ್ಲಿ ಅತಿ ಹೆಚ್ಚು ಗಲಾಟೆ ಮಾಡುವ ವಿದ್ಯಾರ್ಥಿಗಳ ಹೆಸರನ್ನು ಬೋರ್ಡ್‍ನಲ್ಲಿ ಬರೆಯಲಾಗಿತ್ತು ಎಂಬ ವಿಚಾರ ನಂತರ ತಿಳಿದು ಬಂದಿತ್ತು. ಇದನ್ನೂ ಓದಿ: ಇವರ ಒತ್ತಡಕ್ಕೆ ಮಣಿಯುತ್ತಾ ಹೋದ್ರೆ ದೇಶವನ್ನೇ ತುಂಡರಿಸುತ್ತಾರೆ – ಖಾದರ್ ವಿರುದ್ಧ ಸಿಂಹ ಕಿಡಿ

  • ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತಿದ್ದ ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್ ಗುರುವಾರ ಪಾತ್ರೆ ತೊಳೆಯುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

    ಇದರಿಂದ ದಿವ್ಯಾ ಮೇಲೆ ಮುನಿಸಿಕೊಂಡಿದ್ದ ಮಂಜುನನ್ನು ಒಲೈಸಿಕೊಳ್ಳಲು ದಿವ್ಯಾ ಸುರೇಶ್ ಹಾಡುಗಳ ಮೂಲಕ ಭಾವನೆಗಳನ್ನು ಹೊರಹಾಕಿದ್ದಾರೆ. ಹೌದು, ಮೊದಲಿಗೆ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ’ ಎಂದು ದಿವ್ಯಾ ಹಾಡು ಶುರು ಮಾಡುತ್ತಾರೆ. ಇದಕ್ಕೆ ಮಂಜು ‘ಪ್ರೇಮಮಂ ಶರಣಂ ಗಚ್ಛಾಮೀ ಅಲ್ಲಿ ಮೋಸವೋ’ ಎಂದು ಹಾಡುತ್ತಾರೆ. ಬಳಿಕ ದಿವ್ಯಾ ಸುರೇಶ್ ನೀನೆಂದರೆ ನನಗೆ ಇಷ್ಟ ಕಣೋ.. ಎಂದಾಗ ಮಂಜು ಮೆಟ್ಟಲಿ ಹೊಡಿತೀನಿ ಸಮ್ನೆ ಇರು ಎಂದು ಹಾಡುತ್ತಾರೆ. ಇದಕ್ಕೆ ದಿವ್ಯಾ ‘ಏಕೆ ಹೀಗಾಯ್ತೋ ನಾನು ಕಾಣೇನೋ’ ಎಂದು ಹಾಡು ಹೇಳುತ್ತಾರೆ ಈ ವೇಳೆ ರಾಜೀವ್ ಹಾಗೂ ಚಂದ್ರಕಲಾ ಕೂಡ ದಿವ್ಯಾಗೆ ಸಾಥ್ ನೀಡುತ್ತಾರೆ. ನಂತರ ಮಂಜು ‘ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ’ ಎಂದು ಕಿಚ್ಚ ಸುದೀಪ್ ಸಿನಿಮಾದ ಹಾಡೊಂದನ್ನು ಹಾಡುತ್ತಾರೆ.

    ಮತ್ತೆ ಮಂಜು ‘ಯಾರೇ ಕೂಗಡಾಲಿ ಊರೇ ಹೋರಾಡಲಿ’ ಮಂಜ ನಿನಗೆ ಸಾಟಿ ಇಲ್ಲ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡು ಹಾಡು ಹಾಡುತ್ತಾರೆ. ಇದಕ್ಕೆ ದಿವ್ಯಾ ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಹೋಗುವೆ ಎಂದು ಹೇಳುತ್ತಾರೆ. ಇದಕ್ಕೆ ಮಂಜು ಓ ಭ್ರಮೆ.. ಎಂಬ ಡೈಲಾಗ್‍ನನ್ನು ಹೇಳುತ್ತಾ.. ಕಣ್ಣೀರಿದು ರಕ್ತ ಕಣ್ಣೀರಿದು ಪರರ ಕಣ್ಣಿರಿನ ಪ್ರತಿಬಿಂಬ ಇದು ಎಂದು ಹಾಡುತ್ತಾರೆ. ಆಗ ದಿವ್ಯಾ ಅಳಬ್ಯಾಡ ಕಣೋ ಸಮ್ಮಕ್ಕಿರು ನನ್ನ ಮುದ್ದಿನ ರಾಜ ಅಂದಾಗ ಮಂಜು ಹಾವಾದ್ರೂ ಕಚ್ಚಾಬಾರ್ದ ಚೇಳಾದ್ರೂ ಕುಕ್ಕಾಬಾರ್ದ ಎಂದು ಬೈಯ್ಯುವಂತೆ ಹಾಡುತ್ತಾರೆ. ಅದಕ್ಕೆ ದಿವ್ಯಾ ಸುರೇಶ್ ಮಂಜುರನ್ನು ಸಮಾಧಾನಗೊಳಿಸಲು ಸಿಟ್ಯಾಕೋ ಸಿಡುಕು ಯಾಕೋ ನನ್ನ ಜಾಣ ಎಂದು ಹಾಡುತ್ತಾರೆ.

    ಹೀಗೆ ಮಂಜುರ ಕೋಪವನ್ನು ತಣ್ಣಗೆ ಮಾಡಲು ದಿವ್ಯಾ ಸುರೇಶ್ ಪದಗಳ ಬದಲಾಗಿ ಹಾಡುಗಳ ಜೋಡಣೆ ಮಾಡಿ ಹಾಡುಗಳನ್ನು ಹಾಡುತ್ತಾರೆ. ಇದಕ್ಕೆ ಪ್ರತಿ ಉತ್ತರವಾಗಿ ಕೂಡ ಕೆಲವೊಂದು ಗೀತೆಗಳನ್ನು ಹೇಳುತ್ತಾರೆ. ಒಟ್ಟಾರೆ ಇವರಿಬ್ಬರ ನಡುವಿನ ನೀನಾ ನಾನಾ ಹಾಡಿನ ಜಟಾಪಟಿ ನೋಡಿ ಮನೆಮಂದಿಯೆಲ್ಲ ಫುಲ್ ಎಂಜಾಯ್ ಮಾಡುತ್ತಾರೆ.

  • ಮರು ಸೃಷ್ಟಿಯಾಯ್ತು ದಿವ್ಯಾ ಅರವಿಂದ್ ಲವ್ ಸ್ಟೋರಿ

    ಮರು ಸೃಷ್ಟಿಯಾಯ್ತು ದಿವ್ಯಾ ಅರವಿಂದ್ ಲವ್ ಸ್ಟೋರಿ

    ಬಿಗ್‍ಬಾಸ್ ಮನೆಯಲ್ಲಿ ಇದೀಗ ಹೊಸ ಲವ್ ಸ್ಟೋರಿಯೊಂದು ಭಾರೀ ಸದ್ದು ಮಾಡುತ್ತಿದೆ. ಇಷ್ಟು ದಿನ ಮಂಜು ಹಾಗೂ ದಿವ್ಯಾ ಸುರೇಶ್ ನಡುವಿನ ಪ್ರೇಮ್‍ಕಹಾನಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎಂದು ಮನೆ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

    ಈ ಮಧ್ಯೆ ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ದಿವ್ಯಾ ಉರುಡುಗ ಹಾಗೂ ಅರವಿಂದ್ ಕಾಲೆಳೆದಿದ್ದಾರೆ. ಕಳೆದ ವಾರ ಬಿಗ್‍ಬಾಸ್, ಜೋಡಿ ಟಾಸ್ಕ್ ವೊಂದನ್ನು ನೀಡಿ ತಮ್ಮ ಜೋಡಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತೆ ಮನೆಯ ಸದಸ್ಯರಿಗೆ ಸೂಚಿಸಿದ್ದರು. ಅದು ಒಂದು ರೀತಿ ಹೆಣ್ಣು ಮಕ್ಕಳಿಗೆ ಸ್ವಯಂವರದಂತೆಯೇ ಇತ್ತು. ಅಂದು ಯಾವೆಲ್ಲಾ ಸದಸ್ಯರು ಯಾವ ರೀತಿಯಲ್ಲಿ ತಮ್ಮ ಜೋಡಿಗಳನ್ನು ಆಯ್ಕೆ ಮಾಡಿಕೊಂಡರು ಹಾಗೂ ರಿಜೆಕ್ಟ್ ಮಾಡಿದರು ಎಂಬುದನ್ನು ಚಂದ್ರಕಲಾ ಹಾಗೂ ದಿವ್ಯಾ ಸುರೇಶ್ ಮರುಸೃಷ್ಟಿಸುವಂತೆ ಕಿಚ್ಚ ತಿಳಿಸುತ್ತಾರೆ.

    ನಂತರ ದಿವ್ಯಾ ಸುರೇಶ್ ಕುಳಿತುಕೊಂಡು ದಿವ್ಯಾ ಉರುಡುಗರಂತೆ ನಟಿಸಿದರೆ, ಚಂದ್ರಕಲಾ ಮನೆಯ ಪುರುಷ ಸದಸ್ಯರ ಮಿಮಿಕ್ರಿ ಮಾಡುತ್ತಾರೆ. ರಾಜೀವ್ ನಿಮ್ಮ ಆಯ್ಕೆ ಯಾರು ಎಂದು ಕೇಳಿದಾಗ ಚಂದ್ರಕಲಾ ಶಮಂತ್, ಪ್ರಶಾಂತ್, ಮಂಜು ಮಿಮಿಕ್ರಿ ಮಾಡುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ಕುಳಿತುಕೊಂಡು, ದಿವ್ಯಾ ಉರುಡುಗ ಹೇಗೆ ನೋ, ಸಾರಿ ಎಂದು ಹೇಳುವ ಮೂಲಕ ತಲೆ ಬಗ್ಗಿಸಿಕೊಂಡು ಒಬ್ಬೊಬ್ಬರಿಗೂ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂದು ತೋರಿಸುತ್ತಾರೆ. ಬಳಿಕ ಅರವಿಂದ್ ಬರುವುದಕ್ಕೂ ಮುನ್ನವೇ ಜೋಡಿಯಾಗಬೇಕಿದ್ದು ತಲೆಯಲ್ಲಿಟ್ಟುಕೊಂಡಿದ್ದ ದಿವ್ಯಾ ಉರುಡುಗ, ಅರವಿಂದ್ ಬಂದ ತಕ್ಷಣ ಯೆಸ್ ಎಂದು ಹೇಗೆ ಓಡಿ ಹೋಗುತ್ತಾರೆ ಎಂದು ದಿವ್ಯಾ ಸುರೇಶ್ ಮಿಮಿಕ್ರಿ ಮಾಡುತ್ತಾರೆ. ಇದನ್ನು ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಸಿಕ್ಕಾಪಟ್ಟೆ ನಗುತ್ತಾರೆ.

    ಈ ಬಗ್ಗೆ ಕಿಚ್ಚ ನೋ ಎಂದಿದ್ದಕ್ಕೆ ಕಾರಣವೇನು ಎಂದು ದಿವ್ಯಾ ಉರುಡುಗಗೆ ಪ್ರಶ್ನಿಸುತ್ತಾರೆ. ಆಗ ದಿವ್ಯಾ, ಬಿಗ್‍ಬಾಸ್ ಟಾಸ್ಕ್ ನೀಡಿದಾಗ ರಘು ಹೊರತು ಪಡಿಸಿ ಎಲ್ಲರು ನನ್ನ ಬಳಿ ಬಂದು ಜೋಡಿಯಾಗುವಂತೆ ಕೇಳಿಕೊಂಡರು. ನಾನು ಮಂಜು ಹಾಗೂ ಅರವಿಂದ್ ಇಬ್ಬರನ್ನು ನೀವು ಯಾರಿಗೆ ಆದ್ಯತೆ ನೀಡುತ್ತೀರಾ ಎಂದು ಕೇಳಿದ್ದೆ. ಈ ವೇಳೆ ಮಂಜು ನನಗೆ ಇಬ್ಬರು ದಿವ್ಯಾರಲ್ಲಿ ಯಾರಾದರೂ ಓಕೆ ಎಂದಿದ್ದರು. ಆದರೆ ಅರವಿಂದ್ ಮಾತ್ರ ನೀನೇ ಎಂದು ಹೇಳುವ ಮೂಲಕ ನನಗೆ ಆದ್ಯತೆ ನೀಡಿದರು. ಹಾಗಾಗಿ ಅರವಿಂದ್‍ಗೆ ಜೋಡಿಯಾಗಿ ಹೋಗಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು.

  • ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಬೆಂಗಳೂರು: ಬಿಗ್‌ಬಾಸ್‌ ವಾರದ ಕಥೆಯಲ್ಲಿ ಸುದೀಪ್‌ ನಾಯಕ ಶಮಂತ್‌ ಗೌಡ(ಬ್ರೋ ಗೌಡ) ಅವರಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದಾರೆ.

    ಮೊದಲ ವಾರದಲ್ಲೇ ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡಿದ್ದರು. ಚಂದ್ರಕಲಾ ಮೋಹನ್‌, ನಿರ್ಮಲ ಮತ್ತು ನಿಧಿ ಸುಬ್ಬಯ್ಯ ಅವರಿಗೆ ಅಡುಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ನಿರ್ಮಲ ಅಡುಗೆ ಮನೆ ಕೆಲಸದಲ್ಲಿ ತೊಡಗಿಕೊಳ್ಳದ ಕಾರಣ ಚಂದ್ರಕಲಾ ಅವರಿಗೆ ಸಿಟ್ಟು ಬಂದಿತ್ತು. ಈ ಕಾರಣಕ್ಕೆ ಇಬ್ಬರೂ ಎಲ್ಲರ ಮುಂದೆಯೇ ಜಗಳವಾಡಿದ್ದರು.

    ವಾರದ ಕಥೆಯಲ್ಲಿ ಸುದೀಪ್ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ನಾಯಕ ಶಮಂತ್ ಗೌಡರನ್ನು ಈ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಅಡುಗೆ ಮನೆಯಲ್ಲಿ ಕೆಲಸ ಇಲ್ಲ. ಚಂದ್ರಕಲಾ ಅವರೇ ಮಾಡುತ್ತಿದ್ದಾರೆ ನಾನು ಶೌಚಾಲಯ ಕ್ಲೀನ್ ಮಾಡುತ್ತೇನೆ ಎಂದು ನಿರ್ಮಲ ಹೇಳಿದ್ದರು. ಅದಕ್ಕೆ ನಾನು ಮೊದಲು ಅಡುಗೆ ಜವಾಬ್ದಾರಿಯನ್ನು ನೋಡಿಕೊಳ್ಳಿ. ನಂತರ ಫ್ರೀ ಆದರೆ ಶೌಚಾಲಯ ಇತ್ಯಾದಿ ಕೆಲಸ ಮಾಡಿ” ಎಂದು ಹೇಳಿದ್ದೆ ಎಂದರು.

    ಇದಕ್ಕೆ ಸುದೀಪ್‌ ಯಾರಿಗೆ ಯಾವ ಟಾಸ್ಕ್‌ ಕೊಡಲಾಗಿದೆಯೋ ಅವರು ಅದನ್ನೇ ಮಾಡಬೇಕು. ಬೇರೆಯವರು ಬೇರೆ ಕೆಲಸ ಮಾಡುತ್ತಾರೆ.  ನಾಯಕನಾದವರು ಈ ವಿಚಾರದಲ್ಲಿ ಸ್ಪಷ್ಟತೆಯನ್ನು ಹೊಂದಿರಬೇಕು. ಇನ್ನು ಮುಂದೆ ಈ ರೀತಿ ತಪ್ಪುಗಳು ಮನೆಯಲ್ಲಿ  ನಡೆಯಬಾರದು ಎಂದು  ನಾಯಕತ್ವದ ಪಾಠವನ್ನು ಹೇಳಿಕೊಟ್ಟರು.

    ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್ ಎರಡನೇ ವಾರವೂ ನಾಯಕನಾಗಿ ಮುಂದುವರಿದಿದ್ದಾರೆ. ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನ ತೆಗೆದುಕೊಂಡಿದ್ದಾರೆ.