Tag: ಚಂದಾಪುರ

  • Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

    Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

    ಆನೇಕಲ್: ಸೂಟ್‌ಕೇಸ್‌ನಲ್ಲಿ (Suitcase) ಅಪರಿಚಿತ ಬಾಲಕಿ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಚಂದಾಪುರ (Chandapura) ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.

    ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು ಹತ್ತು ವರ್ಷದ ಬಾಲಕಿಯ ಮೃತದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರ ಆಗಮನದ ಬಳಿಕ ಸೂಟ್‌ಕೇಸ್ ಪರಿಶೀಲನೆ ನಡೆಯಲಿದೆ. ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು

  • ಚಡ್ಡಿಯಲ್ಲಿ ನಿಲ್ಲಿಸಿ ಫೋಟೋ ನೋಡಿ ರೋಗ ಹೇಳ್ತಾನೆ – ಸುತ್ತಿಗೆಯಲ್ಲೇ ಬಡಿದು ಟ್ರೀಟ್‍ಮೆಂಟ್ ಕೊಡ್ತಾನೆ

    ಚಡ್ಡಿಯಲ್ಲಿ ನಿಲ್ಲಿಸಿ ಫೋಟೋ ನೋಡಿ ರೋಗ ಹೇಳ್ತಾನೆ – ಸುತ್ತಿಗೆಯಲ್ಲೇ ಬಡಿದು ಟ್ರೀಟ್‍ಮೆಂಟ್ ಕೊಡ್ತಾನೆ

    -ಪವಿತ್ರ ಕಡ್ತಲ

    ಬೆಂಗಳೂರು: ಪಿಸಿಷಿಯನ್, ಸರ್ಜನ್, ಡೆಂಟಲ್ ಡಾಕ್ಟರ್ ಅಂತೆಲ್ಲ ಕೇಳಿರುತ್ತೇವೆ. ಆದರೆ ಸುತ್ತಿಗೆ ಡಾಕ್ಟ್ರು ಗೊತ್ತಾ? ಐಟಿ ಬಿಟಿ ಸಿಟಿನಲ್ಲಿ ಸುತ್ತಿಗೆ ಹಿಡ್ಕೊಂಡು ಬೆನ್ನು ನೋವು ವಾಸಿ ಮಾಡ್ತೀನಿ ಅಂತಾ ಯಾಮರಿಸುತ್ತಿದ್ದ ನಕಲಿ ಡಾಕ್ಟರ್ ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿದ್ದಾನೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುತ್ತಿಗೆ ಡಾಕ್ಟರ್ ಒಬ್ಬನಿದ್ದಾನೆ. ತಲೆಯಿಂದ ಬೆನ್ನು, ಭುಜ, ಕಾಲಿಗೆ ಪಟಾ ಪಟಾ ಅಂತಾ ಸುತ್ತಿಗೆಯಲ್ಲಿ ಹೊಡೆಯುತ್ತಾನೆ. ಒಂದು ಸಲ ನನ್ನ ಕೈ ಸುತ್ತಿಗೆ ಏಟು ತಿನ್ನಿ ನಿಮ್ಮ ಬೆನ್ನು ನೋವು ಮಂಗ ಮಾಯ ಅಂತಾ ಹೇಳಿ ಚೆನ್ನಾಗಿ ದುಡ್ಡು ಬೇರೆ ಮಾಡ್ಕೊಂಡಿದ್ದಾನೆ. ಈ ಡಾಕ್ಟರ್ ಹೆಸರು ರವೀಂದ್ರ. ನಾರಾಯಣ ಯಾಗ ಶಾಲೆ ಅಂತಾ ಬೋರ್ಡ್ ಹಾಕಿಕೊಂಡು ಜನರಿಗೆ ಸುತ್ತಿಗೆಯಲ್ಲಿ ಚಿಕಿತ್ಸೆ ಕೊಡುತ್ತಾನೆ.

    ಬೆನ್ನು ನೋವಿಲ್ಲದ ಗಟ್ಟಿಮುಟ್ಟಾದ ನಮ್ಮ ಪ್ರತಿನಿಧಿನಾ ತೋರಿಸಿ ಇವ್ರಿಗೆ ಬೆನ್ನು ನೋವು, ಭುಜ ನೋವು ಅಂತಾ ಹೇಳಿದ್ದೇ ತಡ, ಫುಲ್ ಪ್ರೊಪೆಷನಲ್ ಡಾಕ್ಟ್ರ ತರ ಹೇಗ್ ಬಂತು ನೋವು ಅಂತಾ ಪ್ರಶ್ನಿಸಿ, ಗಂಟೆಗಟ್ಲೆ ಬೆನ್ನುನೋವು ಯಾಕೆ ಬರುತ್ತೆ ಅಂತಾ ಭಾಷಣ ಮಾಡಲಾರಂಭಿಸಿದ್ದಾನೆ.

    ರವೀಂದ್ರ : ನಿಮ್ಗೆ ಆಕ್ಸಿಡೆಂಟ್ ಅಗಿತ್ ಅಲ್ವಾ ?
    ಪ್ರತಿನಿಧಿ : ಆಕ್ಸಿಡೆಂಟ್ ಆಗಿಲ್ಲ, ಅಂಗಾಲು ಪೇನ್ ಇತ್ತು.
    ರವೀಂದ್ರ : ಎಷ್ಟ್ ಟೈಂ ಆಯ್ತು? ಪೇನ್ ಬಂದು
    ಪ್ರತಿನಿಧಿ : ಒನ್ ಇಯರ್ ಆಯ್ತು. ಆದ್ರೆ ಅದೇನ್ ಇಲ್ಲ ಬೆನ್ನು ನೋವು ಅಷ್ಟೇ
    ರವೀಂದ್ರ : ಬಿದ್ದಿದ್ರಾ ಯಾವಾತ್ತಾದ್ರೂ, ಸಿಟ್ಟಿಂಗ್ ವರ್ಕ್ ಮಾಡ್ತೀರಾ?
    ಪ್ರತಿನಿಧಿ : ಇಲ್ಲ.. ಗಾಡಿಲಿ ಓಡಾಡ್ತೀನಿ
    ರವೀಂದ್ರ : ಬೆನ್ನುನೋವಲ್ಲಿ ಎರಡು ವಿಧ, ಈಗ ಹೆಚ್ಚು ಕಂಪ್ಯೂಟರ್ ಸಿಂಡ್ರೋಮ್ ಅಂತೆಲ್ಲ ಬರ್ತಿದೆ.
    ಪ್ರತಿನಿಧಿ: ನಿಮ್ಮಲ್ಲಿ ಹ್ಯಾಮರ ಥೆರಪಿನಾ ಅಥವಾ ಬೇರೆ ಇರುತ್ತಾ..?
    ರವೀಂದ್ರ: ನಮ್ಮಲ್ಲಿ ಎಲ್ಲಾ ಥೆರಪಿನೂ ಇದೆ. ಪಂಚಕರ್ಮ ಥೆರಪಿ ಎಲ್ಲ ಇದೆ. ಅವರಿಗೆ ಏನಾಗಿದೆ ಅಂತಾ ನೋಡಿ, ಹ್ಯಾಮರ ಥೆರಪಿ ಮಾಡ್ತೀನಿ. ಪ್ರೊಸಿಜರ್ ಮಾಡ್ತೀನಿ,

    ರವಿಂದ್ರ: ಅಂಗಿ ತೆಗೀಬೇಕು, ಪ್ಯಾಂಟ್ ತೆಗೆಯಬೇಕು, ಅಂಡರ್‍ವೇರ್‍ನಲ್ಲಿ ನಿಂತ್ಕೋಬೇಕು
    ಪ್ರತಿನಿಧಿ : ವಾಚ್ ತೆಗೆಯಬೇಕಾ ?
    ರವೀಂದ್ರ : ಅಲ್ಲಾ ನಿಮ್ಮ ಫೋಟೋ ತೆಗೆಯಬೇಕು ಅದ್ಕೆ ! ಹಾ ನಿಮ್ಮ ಫೋನ್ ಕೊಡಿ, ಅದ್ರಲ್ಲೆ ತೆಗೆಯುತ್ತೇನೆ, ನಂಗೆ ಬೇಡ ನಿಮ್ ಫೋಟೋ
    (ಮೊಬೈಲ್ ತೆಗೆದುಕೊಂಡು ಫೋಟೋ ಕ್ಲಿಕ್ ಮಾಡಿದ ಬಳಿಕ )
    ರವೀಂದ್ರ : ಹಾ ಹಿಂಗೆ ನಿಂತ್ಕೊಳ್ಳಿ, ನನ್ ಕಡೆ ನೋಡಬೇಡಿ, ಟರ್ನ್ ಮಾಡಿ , ಬ್ಯಾಕ್ ತಿರುಗಿ, ಸರಿಯಾಗಿ ನಿಂತ್ಕೊಳ್ಳಿ , ಕೈಕಾಲು ಸರಿಯಾಗಿ ಹಿಡ್ಕೊಳ್ಳಿ. ಸ್ಟ್ರೈಟ್ ! ಅಯ್ಯೋ ಏನಪ್ಪ ಶಿವಾ ಸರಿಯಾಗಿ ನಿಂತ್ಕ !
    ರವೀಂದ್ರ : ಹಾ ಫೋಟೋ ನೋಡಿ ಹೇಳ್ತೆನೆ. ಕ್ಯಾಲಿಸಿಯಂ ಪ್ರಾಬ್ಲಂ, ಬೋನ್ ಡೆನ್ಸಿಟಿ ಪ್ರಾಬ್ಲಂ ಇದೆ
    ಪ್ರತಿನಿಧಿ – ಅರೇ ಫೋಟೋ ನೋಡಿ ಗೊತ್ತಾಗುತ್ತಾ !
    ರವೀಂದ್ರ : ಹಾ ಮತ್ತೆ, ಬನ್ನಿ ಬನ್ನಿ ನಿಮ್ಗೂ ಡಾಕ್ಟ್ರ್ ಹೇಳಿ ಕೊಡ್ತೀನಿ , ಸೈನ್ಸ್ ಹೇಳ್ ಕೊಡ್ತೀನಿ ಬನ್ನಿ. ನನ್ ತರ ಯಾವ ಡಾಕ್ಟ್ರು ಟ್ರೀಟ್‍ಮೆಂಟ್ ಕೊಡಲ್ಲ.
    ರವೀಂದ್ರ : ನಿಮ್ಮ ಸ್ಟ್ರೈಟ್ ಶೊಲ್ಡರ್ ನೋಡಿ ಒಂದು ಸ್ವಲ್ಪ ಬ್ಯಾಕ್ ಇದೆ. ಇನ್ನೊಂದು ಸ್ವಲ್ಪ ಮುಂದಿದೆ. ಸರ್ವಿಕಲ್ ಪ್ರಾಬ್ಲಂ ಇದೆ ನಿಮ್ಗೆ. ಕಣ್ಣು ನೋಡಿ. ಇಪ್ಪತ್ತಾನಾಲ್ಕು ಗಂಟೆ ಯೋಚನೆ ಮಾಡ್ತಾರೆ. ಇವ್ರು ದುಃಖಿತರಾಗಿರ್ತಾರೆ. ಹೀ ಈಸ್ ನಾಟ್ ಹ್ಯಾಪಿ ಮ್ಯಾನ್, ಸಿವಿಯರ್ ಆಸಿಡಿಡಿ ಪ್ರಾಬ್ಲಂ ಇದೆ. ನಾನ್ ಫುಡ್ ಹೇಳ್ತೀನಿ ಅದ್ ತಗೊಳ್ಳಿ. . ಲಂಗ್ಸ್ ಸರಿಯಿಲ್ಲ ನಿಮ್ಮದು, ಉಸಿರಾಟನೂ ಸರಿಯಿಲ್ಲ . ಮೋಷನ್ ಪ್ರಾಬ್ಲಂ ಇದೆ ಸರಿಯಾಗಿ ಹೋಗಲ್ಲ ನಿಮ್ಗೆ. ಪ್ರೊಸಿಜರ್ ಹೇಳ್ತೀನಿ, ನೀವು ಕರೆಕ್ಟ್ ಆಗಿ ಪಾಲಿಸಿದ್ರೆ ನಿಮ್ಮನ್ನು ಯಾರ್ ಹಿಡಿಯೋಕೆ ಆಗಲ್ಲ.

    ರವೀಂದ್ರ – ಈ ಪ್ರೊಸಿಜರ್‍ನಲ್ಲಿ ಏನು ನೋವಾಗಲ್ಲ , ನಾನು ನೋವು ಮಾಡಲ್ಲ ಬಾರ್ನ್ ಬೇಬಿ(ನವಜಾತ ಶಿಶು)ಗೂ ಟ್ರೀಟ್‍ಮೆಂಟ್ ಕೊಡುತ್ತೇವೆ
    ಪ್ರತಿನಿಧಿ – ಅರೇ.. ಬಾರ್ನ್ ಬೇಬಿಗೆ ಯಾಕೆ..?
    ರವೀಂದ್ರ – ಅದು ಹೊಟ್ಟೆಯೊಳಗೆ ತೆಗೆಯುವಾಗ ಪ್ರಾಬ್ಲಂ ಆಗಿರುತ್ತೆ.
    ಪ್ರತಿನಿಧಿ – ಒಹೋ,
    ರವೀಂದ್ರ- ಆಮೇಲೆ ಇದು ಏನೂ ಸಮಸ್ಯೆ ಆಗಲ್ಲ, ನೋಡಿ ಬರೇ ಸೌಂಡ್ ಅಷ್ಟೇ ಲೈಟ್ ವೇಟ್, ಇದು ನಾಡಿಮರ್ಧನ ಅಂತಾ ಅಂತಾ ಬಹಳ ಇತಿಹಾಸ ಇದೆ ಇದಕ್ಕೆ,. ಟಕ್ ಸೌಂಡ್ ಟ್ರೀಟ್‍ಮೆಂಟ್ ಅಂತಾ.
    ಪ್ರತಿನಿಧಿ: ಅಲ್ಲಾ ತುಂಬಾ ಜನ ಬರ್ತಾರಾ ?
    ರವೀಂದ್ರ : ಎಲ್ಲಾ ಟಾಪ್ ಮೋಸ್ಟ್ ಬರೋದು, ಬೆಂಗಳೂರುನಲ್ಲಿರೋರು ಕಮೀಷನರ್
    ಪ್ರತಿನಿಧಿ : ಯಾರು ಪೊಲೀಸ್ ಕಮೀಷನರ್
    ರವೀಂದ್ರ : ಎನಿ ಕಮೀಷನರ್, ಎಲ್ಲಾ ಡಾಕ್ಯುಮೆಂಟ್ ಇದೆ, ತೋರಿಸ್ತೀನಿ, ಫಿಲ್ಮ್‍ಂ ಆಕ್ಟರ್, ದೊಡ್ಡ ದೊಡ್ಡ ಬ್ಯುಸಿನೆಸ್, ದೇವೇಗೌಡರ ಫ್ಯಾಮಿಲಿ ನನ್ನ ಕ್ಲೈಂಟ್ಸ್. ಅವ್ರರನ್ನು ಮುಟ್ಟಿದ್ರೆ ಒಂದುವರೆ ಸಾವಿರ ತಗೊಳದೆ ಇರಲ್ಲ.
    ಪ್ರತಿನಿಧಿ: ಅಲ್ಲೆ ಹೋಗ್ತೀರಾ?
    ರವೀಂದ್ರ : ಅವರ ಹತ್ರ ಹೋದ್ರೆ ಎರಡೂವರೆ ಸಾವಿರ, ಅವ್ರು ಇಲ್ಲಿಗೆ ಬಂದ್ರೆ ಒಂದು ಸಾವಿರ , ಒಂದ್ ಸಿಟ್ಟಿಂಗ್ ಗೆ ಸ್ಪೆಷಲ್ ಕೆಟಗರಿ ಗೆ ಮೂರು ಸಾವಿರ ತಗೋತಿನಿ. ಇದೆಲ್ಲ ಸೈಡ್ ಎಫೆಕ್ಟ್ ಇಲ್ಲ, ಮೂಳೆಗೀಳೆ ಕಿಡ್ನಿ ಪ್ರಾಬ್ಲಂ ಆಗಲ್ಲ. ರವಿಶಂಕರ್ ಗುರೂಜಿ, ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಟ್ರೀಟ್ ಮೆಂಟ್ ಕೊಟ್ಟಿದ್ದೀನಿ.

    ಫೋಟೋಸ್ಕೋಪಿ ತೆಗೆಯಬೇಕು ಅಂತಾ ಪಕ್ಕ ದನದ ದೊಡ್ಡಿ ತರಹ ಇರೋ ರೂಮ್ ಗೆ ಕರೆದುಕೊಂಡ ಹೋದ. ಅಲ್ಲಲ್ಲಿ ಸೊಳ್ಳೆ ಬತ್ತಿ, ಅವಧ ಮುಗಿದ ಹಳೆ ಡಬ್ಬದಲ್ಲಿ ತೈಲ, ವಾಷ್ ಬೇಸಿನ್ ಅಂತೂ, ಪಕ್ಕದಲ್ಲಿ ಗ್ಯಾಸ್ ಸಿಲಿಂಡರ್ ಬೇರೆ. ಮೂಲೆಯಲ್ಲಿ ದೊಡ್ಡ ಸುತ್ತಿಗೆ ಸೈಲೆಂಟ್ ಆಗಿ ಕೂತಿತ್ತು. ಇವನ ಡಾಕ್ಟ್ರ್ ರೂಂಗೆ ಹೋದರೆ ಬರಬಾರದ ಕಾಯಿಲೆ ಬರುವ ಹಾಗಿತ್ತು ಆಸ್ಪತ್ರೆಯ ಆವರಣ. ಹಾ ಬಟ್ಟೆ ಬಿಚ್ಚಿ ಅಂಡರ್‍ವೇರ್‍ನಲ್ಲಿ ನಿಂತುಕ್ಕೊಳ್ಳಿ ಅಂತಾ ಹೇಳಿ ನಮ್ ಪ್ರತಿನಿಧಿ ಫೋನ್ ತೆಗೆದುಕೊಂಡು ಕ್ಯಾಮೆರಾ ಆನ್ ಮಾಡಿ ಕ್ಲಿಕ್..ಕ್ಲಿಕ್ ಅಂತಾ ಫೋಟೋ ತೆಗೆದುಕೊಂಡನು.

    ಇವನ ಸುತ್ತಿಗೆ ಏಟಿಗೆ ಭಯ ಬಿದ್ದು ದುಡ್ಡು ಕೊಟ್ಟು ಪ್ರಾಣ ಉಳಿಸಿಕೊಂಡು ನಮ್ಮ ಪ್ರತಿನಿಧಿ ಹೊರ ಬಂದರು .ಆದರೆ ಇವನು ಬೇರೆಯವರಿಗೆ ಕೊಡುವ ಏಟನ್ನು ರಹಸ್ಯ ಕ್ಯಾಮರದಲ್ಲಿ ಸೆರೆ ಹಿಡಿಯಲಾಯಿತು. ಕಾರ್‍ಪೇಂಟರ್ ತರ ಇವನು ಸುತ್ತಿಗೆನಲ್ಲಿ ಹಿಡಿದು ಹೀಗೆ ಬಾರಿಸಿದ್ರೆ ಬೆನ್ನುಮೂಳೆ ಹೇಗಾಗಬಾರದು. ಆದರೂ ಅಮಾಯಕ ಜನರು ರವೀಂದ್ರ ಬಳಿ ಚಿಕಿತ್ಸೆ ಬರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mB1ePkn59qA

  • ಕಲಬುರಗಿಯಲ್ಲಿ ಹುಲಿ ಪ್ರತ್ಯಕ್ಷ ವದಂತಿಗೆ ಹೈರಾಣಾದ ಜನ: ಅಷ್ಟಕ್ಕೂ ಆ ಹುಲಿ ಫೋಟೋ ಎಲ್ಲಿಯದು ಗೊತ್ತಾ?

    ಕಲಬುರಗಿಯಲ್ಲಿ ಹುಲಿ ಪ್ರತ್ಯಕ್ಷ ವದಂತಿಗೆ ಹೈರಾಣಾದ ಜನ: ಅಷ್ಟಕ್ಕೂ ಆ ಹುಲಿ ಫೋಟೋ ಎಲ್ಲಿಯದು ಗೊತ್ತಾ?

    ಕಲಬುರಗಿ:  ಜಿಲ್ಲೆಯ ಜನರು ಇಷ್ಟು ದಿನ ತಮ್ಮ ಜಿಲ್ಲೆಯಲ್ಲಿ ಚಿರತೆಗಳನ್ನು ನೋಡಿದ್ರು. ಆದ್ರೆ ಕಳೆದ ರಾತ್ರಿಯಿಂದ ಹುಲಿ ಇದೆ ಅನ್ನೋದನ್ನು ಕೇಳಿ ಶಾಕ್ ಆಗಿದ್ದಾರೆ.

    ಕಳೆದ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಬಳಿಯಿರುವ ಚಂದಾಪುರ ಬಳಿ ಹುಲಿಯೊಂದು ರಸ್ತೆ ದಾಟಿಕೊಂಡು ಹೋಗಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳನ್ನು ಹರಿಬಿಡಲಾಗುತ್ತಿದೆ. ಚಂದಾಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ ವದಂತಿ ಜೋರಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಹುಲಿ ಫೋಟೋ ನೋಡಿ ಚಂದಾಪುರ ಸೇರಿದಂತೆ ಅಕ್ಕಪಕ್ಕ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಅಲ್ಲದೆ ಬೆಳಗಿನ ಜಾವದವರೆಗೆ ಚಿಂಚೋಳಿ-ಚಂದಾಪುರ ರಸ್ತೆ ಬಂದ್ ಮಾಡಲಾಗಿತ್ತು.

    ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಫೋಟೋಗಳು ಹರಿದಾಡುತ್ತಿವೆ. ಆದ್ರೆಯಾರು ನೋಡಿದ್ದಾರೆ ಅನ್ನೋದು ಗೊತ್ತಾಗಿಲ್ಲಾ. ಇಲ್ಲಿವರಗೆ ಈ ಭಾಗದ ಅರಣ್ಯದಲ್ಲಿ ಹುಲಿ ಕಂಡುಬಂದಿರುವ ಉದಾಹರಣೆಗಳಿಲ್ಲ.

    ಹುಲಿ ವದಂತಿ ಬಗ್ಗೆ ಮಾಹಿತಿ ನೀಡಿರುವ ಚಿಂಚೋಳಿ ಆರ್‍ಎಫ್‍ಓ ಸುನೀಲ್ ಕುಮಾರ್ ಚವ್ಹಾಣ್, ಈ ಭಾಗದಲ್ಲಿ ಇಲ್ಲಿವರಗೆ ಹುಲಿ ಕಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಯಾರೋ ಫೋಟೋ ಹರಿಬಿಡುತ್ತಿದ್ದಾರೆ. ಇಂದು ಮುಂಜಾನೆ ಹುಲಿ ಹೆಜ್ಜೆಗಳನ್ನು ಕೂಡಾ ಪರಿಶೀಲಿಸಲಾಗಿದೆ. ಆದ್ರೆ ಯಾವುದೇ ಹೆಜ್ಜೆ ಗುರುತು ಸಿಕ್ಕಿಲ್ಲ. ಯಾರು ಕೂಡಾ ಪ್ರತ್ಯಕ್ಷವಾಗಿ ನೋಡಿದವರಿಲ್ಲ. ಆದ್ರು ವಿನಾಕಾರಣ ವದಂತಿ ಹಬ್ಬಿಸಲಾಗುತ್ತಿದೆ. ಈ ಭಾಗದ ಅರಣ್ಯ ಹುಲಿಗೆ ಸೂಕ್ತವಾದ ಅರಣ್ಯವಲ್ಲ. ಹೀಗಾಗಿ ಇಲ್ಲಿ ಹುಲಿಗಳು ಇಲ್ಲ ಅಂತ ಹೇಳಿದ್ದಾರೆ.

    ಹುಲಿ ಫೋಟೋ ಗುಜರಾತ್ ನದ್ದು: ಚಂದಾಪುರ ದಲ್ಲಿ ಕಂಡುಬಂದಿದೆ ಅಂತ ಹೇಳಲಾಗುತ್ತಿರುವ ಹುಲಿಯ ವೈರಲ್ ಫೋಟೋ ಗುಜರಾತ್‍ನದ್ದು ಅಂತ ಹೇಳಲಾಗುತ್ತಿದೆ. ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ತಗೆಯಲಾಗಿರುವ ಫೋಟೋ ಇದಾಗಿದ್ದು, ರಾಜ್ಯದ ಅನೇಕ ಜಿಲ್ಲೆಯ ಜನರು ಇದು ನಮ್ಮ ಜಿಲ್ಲೆಯದ್ದು ಅಂತ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ ಎನ್ನಲಾಗಿದೆ.

    A tiger beat the heat at a pond at Nagarahole forest. 

    ಯಾವ ಪ್ರದೇಶದಲ್ಲಿ ಹುಲಿ ಇರುತ್ತವೆ?: ಜಿಂಕೆ, ಕಡವೆಗಳು ಹೆಚ್ಚು ಇದ್ದರೆ ಹುಲಿ ಬರುತ್ತವೆ. ನಾಯಿಗಳು ಹೆಚ್ಚಾಗಿದ್ದ ಪ್ರದೇಶದಕ್ಕೆ ಚಿರತೆಗಳು ಬರುತ್ತವೆ. ಬಿಸಿಲಿನಿಂದ ಕೂಡಿರುವ ಅರಣ್ಯದಲ್ಲಿ ಹುಲಿಗಳು ವಾಸವಾಗೋದಿಲ್ಲ. ಹುಲಿಗಳು ಒಂದೋದಾಗಿ ಓಡಾಡೋದಿಲ್ಲ. ಹೆಚ್ಚಾಗಿ ಗುಂಪಾಗಿ ಹೋಗುತ್ತವೆ. ಚಿರತೆ ಮಾತ್ರ ಒಂದೊಂದಾಗಿ ಅಡ್ಡಾಡುತ್ತದೆ. ಚಿಂಚೋಳಿ ಕಾಡು ಬಿಸಿಲಿನಿಂದ ಕೂಡಿದ ಕಾಡು. ಹೀಗಾಗಿ ಹುಲಿ ಇರೋದಿಲ್ಲ. ದಟ್ಟವಾದ ಕಾಡಿನಲ್ಲಿ ಮಾತ್ರ ಹುಲಿ ಇರುತ್ತವೆ ಎಂದು ಆರ್‍ಎಫ್‍ಓ ಸುನೀಲ್ ಕುಮಾರ್ ತಿಳಿಸಿದ್ದಾರೆ.

    A tiger crossing the safari trail inside Bandipur National Park in Mysuru 

                            A tiger passing a dry area of Bandipur Forest 

    Eye to eye: Tiger seen at Nagarahole National Forest