ಸೋಶಿಯಲ್ ಮೀಡಿಯಾ ಸೆನ್ಸೇಷನ್, ನಟಿ ನಿವೇದಿತಾ ಗೌಡ (Niveditha Gowda) ಸದ್ಯ ಏಕಾಂಗಿ ಬದುಕಿನ ಯಾನದಲ್ಲಿದ್ದಾರೆ. ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಜೊತೆಗಿನ ಪ್ರೇಮವಿವಾಹ ಮುರಿದುಬಿದ್ದು ವರ್ಷ ಕಳೆದಿದೆ. ಸಿನಿಮಾಗಳಲ್ಲೂ ಹೆಚ್ಚು ಅವಕಾಶಗಳಿಲ್ಲ. ರೀಲ್ಸ್ ಹಾಗೂ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರುವ ನಿವೇದಿತಾ ಗೌಡ ಎರಡನೇ ಮದುವೆ (Second Marrigae) ಕುರಿತು ಮನಬಿಚ್ಚಿದ್ದಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಂಪತಿ 2014ರ ಜೂನ್ ತಿಂಗಳಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಸಿನಿಮಾ ಕೆರಿಯರ್ ಕಡೆ ಇಬ್ಬರ ಗಮನ ಇರುತ್ತದೆ ಎಂದು ಆ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಆದರೆ ನಿವೇದಿತಾ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ತಿಲ್ಲ. ಹೀಗಾಗಿ ಇನ್ನೊಂದು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಕೇಳಲಾದ ಪ್ರಶ್ನೆಗೆ ನಿವೇದಿತಾ ಗೌಡ ಇದೀಗ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ
ಇನ್ನೊಂದು ಮದುವೆ ಕುರಿತು ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ, ಭವಿಷ್ಯದಲ್ಲಿ ಒಳ್ಳೆ ಹುಡುಗ ಸಿಕ್ಕರೆ, ಅರ್ಥಮಾಡಿಕೊಳ್ಳುವ ಹುಡುಗ ಸಿಕ್ಕರೆ ಕುಟುಂಬ ಮುಂದುವರೆಸಲು ಇಷ್ಟ ಪಡ್ತೀನಿ ಎಂದಿದ್ದಾರೆ. ಸದ್ಯಕ್ಕಂತೂ ಮದುವೆ ಟಾಪಿಕ್ ಬಂದರೆ ಭಯ. ನನ್ನ ಚೆನ್ನಾಗಿ ನೋಡಿಕೊಳ್ತೀನಿ ಎಂದು ಹೇಳುವ ಹುಡುಗ ಬಂದ್ರೆ ಮದುವೆಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

























ಸಂಜನಾ ಆನಂದ್ ಜೊತೆ 2ನೇ ಮದುವೆ ಆಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿ, ಈ ರೀತಿ ಸುದ್ದಿ ಹರಿದಾಡೋದು ಕಾಮನ್. ಯಾರು ಗಾಸಿಪ್ ಶುರು ಮಾಡಿದ್ರು ಗೊತ್ತಿಲ್ಲ. ಈಗಿನ ಸೋಶಿಯಲ್ ಮೀಡಿಯಾ ಆ ರೀತಿ ಇದೆ. ಏನು ಮಾಡೋಕೆ ಆಗಲ್ಲ. ಯಾರೋ ಏನೋ ಒಂದು ಪೋಸ್ಟ್ ಹಾಕಿದ್ರೆ, ಅದನ್ನೇ ನಿಜ ಎಂದು ಜನ ನಂಬುತ್ತಾರೆ. ಆದರೆ ಈ ವಿಚಾರ ನನ್ನ ವೈಯಕ್ತಿಕ ಜೀವನಕ್ಕೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಪಬ್ಲಿಕ್ ಫಿಗರ್ ಅಂದಾಗ ಹೀಗೆ ಸುದ್ದಿ ಹಬ್ಬೋದು ಕಾಮನ್, ಈ ವಿಚಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: