Tag: ಚಂದನಾ ಅನಂತಕೃಷ್ಣ

  • ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ‘ಲಕ್ಷ್ಮಿ ನಿವಾಸ’ (Lakshmi Nivasa) ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ (Wedding) ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.

    ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ. ಇದನ್ನೂ ಓದಿ:ನಿಮ್ಮ ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ- ರಶ್ಮಿಕಾರನ್ನು ಹೊಗಳಿದ ಅಲ್ಲು ಅರ್ಜುನ್

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಲಕ್ಷ್ಮಿ ನಿವಾಸ’ದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿದ್ದು, ಭಾವಿ ಪತಿ ಜೊತೆ ‘ಬಾರೇ ಬಾರೇ ಕಲ್ಯಾಣ ಮಂಟಪಕೆ ಬಾ’ ಎಂದು ನಟಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಚಂದನಾ ಮತ್ತು ಪ್ರತ್ಯಕ್ಷ್ ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಅಪ್ಪು ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ‘ಲಕ್ಷ್ಮಿ ನಿವಾಸ’ ಸೀರಿಯಲ್ ತಂಡ ಕೂಡ ಜೊತೆಯಾಗಿದೆ. ಮಾನಸಾ ದಂಪತಿ, ದಿಶಾ ಮದನ್ ದಂಪತಿ, ನಟ ಮಧು, ಕ್ಲೋಸ್ ಫ್ರೆಂಡ್ ನಯನಾ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಆತ್ಮಿಯರು ಭಾಗಿಯಾಗಿದರು.

    ಇನ್ನೂ ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಟಿ ಮದುವೆಯಾಗಲಿದ್ದಾರೆ. ಈ ಮದುವೆಗೆ (Wedding) ಬಿಗ್ ಬಾಸ್ ಮನೆಯ ಮಾಜಿ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನೆಪೋಟಿಸಂ ಬಗ್ಗೆ ಕೃತಿ ಸನೋನ್ ಶಾಕಿಂಗ್ ಕಾಮೆಂಟ್

     

    View this post on Instagram

     

    A post shared by Prathima Bhat (@prathima.ashoka.18)

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ‘ಬಿಗ್ ಬಾಸ್’, ‘ಲಕ್ಷ್ಮಿ ನಿವಾಸ’ (Lakshmi Nivasa) ಖ್ಯಾತಿಯ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಉದ್ಯಮಿ ಪ್ರತ್ಯಕ್ಷ್ ಎಂಬುವವರ ಜೊತೆ ಇದೇ ನ.28ಕ್ಕೆ ಹಸೆಮಣೆ ಏರಲು ನಟಿ ಸಜ್ಜಾಗಿದ್ದಾರೆ. ಇದೀಗ ಭಾವಿ ಪತಿ ಪ್ರತ್ಯಕ್ಷ್ ಜೊತೆಗಿನ ಚಂದನಾ ಫೋಟೋ ರಿವೀಲ್ ಆಗಿದೆ. ಈ ಜೋಡಿಯನ್ನು ನೋಡಿ ನಟಿಯ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್

    ಕಿರುತೆರೆಯಲ್ಲಿ ಚಿನ್ನುಮರಿ ಅಲಿಯಾಸ್ ಜಾಹ್ನವಿ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಚಂದನಾ ಇದೀಗ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕುರಿತು ನಟಿ ಚಂದನಾ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

    ಇನ್ನೂ ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ‘ದೇವತಾ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದರು. ‘ಆರಂಭ’, ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

     

    View this post on Instagram

     

    A post shared by Lalithanjali Uday (@lalithanjali)

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

    ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

    ‘ಬಿಗ್ ಬಾಸ್ ಕನ್ನಡ ಸೀಸನ್ 7′, ‘ಲಕ್ಷ್ಮಿ ನಿವಾಸ’ ಖ್ಯಾತಿಯ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಉದ್ಯಮಿ ಪ್ರತ್ಯಕ್ಷ್ (Prathyaksh) ಎಂಬುವವರ ಜೊತೆ ಹಸೆಮಣೆ (Wedding) ಏರಲು ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಯಶ್ ಬೇಗ ಸಿನಿಮಾ ಮಾಡಿ: ‘ಟಾಕ್ಸಿಕ್’ ನೋಡುವ ನಿರೀಕ್ಷೆ ವ್ಯಕ್ತಪಡಿಸಿದ ಶಾರುಖ್ ಖಾನ್

    ಕಿರುತೆರೆಯಲ್ಲಿ ಚಿನ್ನುಮರಿ ಅಲಿಯಾಸ್ ಜಾಹ್ನವಿ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಚಂದನಾ ಇದೀಗ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕುರಿತು ನಟಿ ಚಂದನಾ ‘ಪಬ್ಲಿಕ್‌ ಟಿವಿ’ ಡಿಜಿಟಲ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

    ಇನ್ನೂ ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ‘ದೇವತಾ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದರು. ‘ಆರಂಭ’, ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ‘ಭಾವ ತೀರ ಯಾನ’ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ನಟಿ

    ‘ಭಾವ ತೀರ ಯಾನ’ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ನಟಿ

    ‘ಬಿಗ್ ಬಾಸ್ ಸೀಸನ್ 7’ರ (Bigg Boss Kannada 7)  ಸ್ಪರ್ಧಿ ಚಂದನಾ ಅನಂತಕೃಷ್ಣ (Chandana Ananthakrishna) ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa Serial) ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಇದೀಗ ಕಿರುತೆರೆಯಿಂದ ಹಿರಿತೆರೆಗೆ ನಟಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ನನ್ನ ಆಸೆನೂ ಒಂದು ದಿನ ಸಮುದ್ರನೇ ಆಗಿತ್ತು, ಆದ್ರೆ ಸಮುದ್ರದ ನೀರು ಕುಡಿಯೋಕೆ ಎಲ್ಲಾಗತ್ತೆ ಹೇಳಿ!? ಎಂದು ಡೈಲಾಗ್ ಮೂಲಕ ‘ಭಾವ ತೀರ ಯಾನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟಿಯ ಲುಕ್ ಮತ್ತು ಸಿನಿಮಾದ ಡೈಲಾಗ್ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಇದನ್ನೂ ಓದಿ:‘ಚಿಲ್ಲಿ ಚಿಕನ್’ ಟೀಸರ್ ರಿಲೀಸ್ : ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ

     

    View this post on Instagram

     

    A post shared by Aroha Films (@aroha_films)

    ಮಯೂರ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಅವರು ನಿರ್ಮಾಣ ಮಾಡುತ್ತಿರುವ ‘ಭಾವ ತೀರ ಯಾನ’ (Bhaava Theera Yaana) ಚಿತ್ರದಲ್ಲಿ ಚಂದನಾ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಧೃತಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ನಟಿಯ ಮೊದಲ ಸಿನಿಮಾದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ (Bigg Boss)  ಸೇರಿದಂತೆ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕೂಡ ಗುರುತಿಸಿಕೊಂಡಿದ್ದರು.

  • Bharjari Bachelors ಶೋನಿಂದ ಹೊರಬಂದ ಚಂದನಾ ಅನಂತಕೃಷ್ಣ

    Bharjari Bachelors ಶೋನಿಂದ ಹೊರಬಂದ ಚಂದನಾ ಅನಂತಕೃಷ್ಣ

    ‘ಬಿಗ್ ಬಾಸ್’ (Bigg Boss Kannada) ಬೆಡಗಿ ಚಂದನಾ ಅನಂತಕೃಷ್ಣ (Chandana Ananthakrishna) ಭರ್ಜರಿ ಬ್ಯಾಚುಲರ್ಸ್ (Bharjari Bachelors) ಶೋನಿಂದ ಹೊರಬಂದಿದ್ದಾರೆ. ಜನಪ್ರಿಯ ಶೋನಿಂದ ಸಡನ್ ಆಗಿ ಕ್ವಿಟ್ ಮಾಡಿರೋದ್ದಕ್ಕೆ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

    ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ (Rudra) ಅವರಿಗೆ ಜೋಡಿಯಾಗಿ ಪ್ರತಿ ವಾರ ವೀಕೆಂಡ್‌ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು. ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್‌ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದ್ದಾರೆ. ಈ ವಾಹಿನಿಯಲ್ಲೇ ಹೊಚ್ಚ ಹೊಸ ಪ್ರಾಜೆಕ್ಟ್‌ ಜೊತೆ ಮತ್ತೆ ನಿಮ್ಮೆಲ್ಲರ ಎದುರು ಬರುತ್ತೇನೆ ಅಂತಾ ಕ್ವಿಟ್ ಮಾಡುವುದರ ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಕೂಡ ಮಾತನಾಡಿದ್ದಾರೆ.

    ಶೋ ಕ್ವಿಟ್ ಮಾಡ್ತಿದ್ದೀನಿ ಅಂತಾ ನಾನು ಮತ್ತೆ ಬರದೇ ಇರಲ್ಲಾ. ಮತ್ತೆ ನಿಮ್ಮನ್ನ ರಂಜಿಸೋಕೆ ಹೊಸ ಪಾತ್ರದಲ್ಲಿ ಬಂದೇ ಬರುತ್ತೀನಿ ಅದು ಕೂಡ ಅತೀ ಶೀಘ್ರದಲ್ಲೇ ಅಂತಾ ಹೇಳಿದ್ದಾರೆ. ಇದನ್ನೂ ಓದಿ:ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

    ಚಂದನಾ ಅವರು ಈ ಹಿಂದೆ ‘ರಾಜ ರಾಣಿ’ (Raja Rani) ಸೀರಿಯಲ್ ನಾಯಕಿಯಾಗಿ ಗಮನ ಸೆಳೆದಿದ್ದರು. ಬಳಿಕ ಬಿಗ್ ಬಾಸ್ ಶೋ ಆದ್ಮೇಲೆ ಹೂ ಮಳೆ(Hoo Male) ಧಾರಾವಾಹಿಯ ನಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    ಬೆಂಗಳೂರು: ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಮೂರ್ತಿ ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಭರತನಾಟ್ಯ ಪ್ರ್ಯಾಕ್ಟೀಸ್ ಮಾಡಿದ ನಂತರದ ಫೋಟೋವನ್ನು ಚಂದನಾ ಹಂಚಿಕೊಂಡಿದ್ದಾರೆ. ಇಂದು ಜೀವನದ ಹೊಸದೊಂದು ಹೆಜ್ಜೆ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ. ಭರತನಾಟ್ಯದಲ್ಲಿ ಮುಂದುವರೆಯಬೇಕು ಎಂಬುದು ಅಪ್ಪ, ಅಮ್ಮನ ಕನಸು, ನನ್ನ ಕನಸು ಕೂಡ. ಅದರಂತೆಯೇ ಇವತ್ತು ಎಂಪಿಎ ( Masters in Performing Arts) ಮೊದಲನೇ ಪ್ರ್ಯಾಕ್ಟಿಕಲ್ ಕ್ಲಾಸ್‍ನಲ್ಲಿ ಭಾಗವಹಿಸಿದ ಖುಷಿ ನನ್ನದು. ಎಂದಿನಂತೆಯೇ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ಚಂದನಾ ಅವರು ಬಿಗ್‍ಬಾಸ್‍ಗೆ ಎಂಟ್ರಿ ಪಡೆದ ನಂತರ ಜನರಿಗೆ ಸಾಕಷ್ಟು ಪರಿಚಯವಾದರು. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್‍ಸ್ಟಾಗ್ರಾಮ್‍ನಲ್ಲಿ ಅವರಿಗೆ ಲಕ್ಷಾಂತರ ಹಿಂಬಾಲಕರಿದ್ದಾರೆ. ಭರತನಾಟ್ಯ ಕೂಡ ಕಲಿತಿದ್ದಾರೆ. ಈಗ ಅದರಲ್ಲೇ ಮುಂದುವರಿಯಲು ಅವರು ನಿರ್ಧರಿಸಿದ್ದಾರೆ. ಇದು ಅವರ ಜೀವನದ ಮಹತ್ವದ ಹೆಜ್ಜೆ ಆಗಿರಲಿದೆ. ಈ ಬಗ್ಗೆ ಚಂದನಾ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ಈಗ ಚಂದನಾ ತಂದೆ, ತಾಯಿ ಆಸೆ ಈಡೇರಿಸಲು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಿಗ್‍ಬಾಸ್ ಕಾರ್ಯಕ್ರಮ ಇವರಿಗೆ ಒಂದು ಕಿರುತೆರೆಹಲ್ಲಿ ಕಾಣಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿ ಸಿಕ್ಕಿವೆ.

  • ನಾನು ಮಾಡಿದ ತಪ್ಪು ಯಾರು ಮಾಡಬೇಡಿ: ಚಂದನಾ

    ನಾನು ಮಾಡಿದ ತಪ್ಪು ಯಾರು ಮಾಡಬೇಡಿ: ಚಂದನಾ

    ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ ಆಗಿರುವ ನಟಿ ಚಂದನಾ ಅನಂತಕೃಷ್ಣ ಅವರು ಬಿಗ್‍ಬಾಸ್ ಮಿನಿ ಸೀಸನ್‍ಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಅವರು ತಮ್ಮ ಹಳೆಯ ನೆನೆಪುಗಳನ್ನು ಇಟ್ಟುಕೊಂಡು ಅವರ ಜೊತೆಗೆ ಇರುವ ಸ್ಪರ್ಧಿಗಳಿಗೆ ಕೆಲವು ಸಲಹೆಯನ್ನು ಚಂದನಾ ನೀಡಿದ್ದಾರೆ.

    ಬಿಗ್‍ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚಂದನಾ ಅನಂತಕೃಷ್ಣ ಮನೆಗೆ ಎಂಟ್ರಿಕೊಡುತ್ತಿದ್ದಂತೆ ಅಕುಲ್ ಬಾಲಾಜಿ ಅವರು ಸ್ವಾಗತಿಸಿದ್ದಾರೆ. ಈ ಮನೆಯ ಸ್ಪರ್ಧಿಗಳಿಗೆ ಏನಾದ್ರೂ ಸಲಹೆ ಕೊಡುತ್ತೀರಾ ಇದನ್ನು ಮಾಡಲೇ ಬೇಡಿ, ಮಾಡಬೇಕು ಎಂದು ಹೇಳುತ್ತೀರ. ಯಾಕೆ ಎಂದರೆ ನೀವು 84 ದಿನ ಈ ಹಿಂದೆ ಬಿಗ್‍ಬಾಸ್ ಮನೆಯಲ್ಲಿ ಇದ್ರಿ ಎಂದು ಕೇಳಿದ್ದಾರೆ. ಆಗ ಚಂದನ ನಾನು ಮಾಡಿದ ತಪ್ಪನ್ನು ನೀವು ಮಾಡಬೇಡಿ ಎಂದು ಬಿಗ್ ಬಾಸ್ ಮಿನಿ ಸೀಸನ್‍ನಲ್ಲಿ ಸಹ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ್ದಾರೆ.

    ಆಗ ಸ್ಪರ್ಧಿಗಳು ಏನು ಎಂದು ಕೇಳಿದಾಗ ನಾನು ತುಂಬ ಕಾನ್ಶಿಯಸ್ ಆಗಿ, ಭಯದಿಂದ ಹೊರಗಡೆ ಹೇಗೆ ಕಾಣುತ್ತಿದ್ದೇನೆ ಎನ್ನುವುದು ಮನಸ್ಸಿನಲ್ಲಿ ಇಟ್ಟುಕೊಂಡೆ ಬಿಗ್‍ಬಾಸ್ ಮನೆಯಲ್ಲಿ 84 ದಿನಗಳ ಕಾಲ ಇದ್ದೆ. ಹೊರಗಡೆ ನಾನು ಹೇಗೆ ಕಾಣಿಸುತ್ತಿದ್ದೆ ಎಂಬ ಭಯದಲ್ಲಿಯೇ ಅಷ್ಟು ದಿನ ಕಳೆದೆ. ಈ ತಪ್ಪನ್ನು ನೀವು ಮಾಡಬೇಡಿ, ಚೆನ್ನಾಗಿ ಆಡಿ ಎಂದು ಚಂದನಾ ಅನಂತಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ:  ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    ಕೊರೊನಾ ವೈರಸ್ ಎರಡು ಅಲೆಗಳನ್ನು ಮುಗಿಸಿ ಬಿಗ್‍ಬಾಸ್ ಮನೆಗೆ ಬಂದಹಾಗೆ ಅನುಭವ ಇದೆ. ನನಗೆ ವಾಶ್‍ರೂಮ್ ತುಂಬ ಇಷ್ಟ, ಅಲ್ಲಿಯೇ ನಾನು ಹಾಡು ಹೇಳುತ್ತಾ ಜಾಸ್ತಿ ಇರುತ್ತಿದ್ದೆ. ನಾನು ತುಂಬ ಅಡಿಗೆ ಮಾಡಿದ್ದೇನೆ. ಏನೇನು ಸಾಮಗ್ರಿ ನೀಡುತ್ತಿದ್ರೋ ಅದರಲ್ಲಿ ಅಡುಗೆ ಮಾಡುತ್ತಿದ್ದೆವು ಎಂದು ಚಂದನಾ ಅನಂತಕೃಷ್ಣ ಹೇಳುತ್ತಾ ತಾವು ಬಿಗ್‍ಬಾಸ್ ಮನೆಯಲ್ಲಿ ಕಳೆದ ನೆನಪುಗಳನ್ನು ಮೆಲಕು ಹಾಕಿದ್ದಾರೆ.

  • ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    – ಅಪ್ಪನ ಸ್ಥಾನ ತುಂಬಿದ್ರು ಅಂದ್ರು ಚಂದನಾ

    ಬೆಂಗಳೂರು: ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

    ರವಿ ಬೆಳಗೆರೆ ನಿಧನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಸರ್ ನಮ್ಮಿಂದ ದೂರ ಹೋಗಿರಬಹುದು. ಆದರೆ ಪುಸ್ತಕಗಳಲ್ಲಿ ಹಾಗೂ ನಮ್ಮಲ್ಲಿ ಅವರು ಯಾವತ್ತೂ ಅಮರರಾಗಿರುತ್ತಾರೆ. ಅವರು ಜೊತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರ ಅದು ಜೀವನಪರ್ಯಂತ ಅನುಭವವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಒಂದು ಒಳ್ಳೆಯ ಮೆಮೊರಿ ಕೂಡ ಆಗಿದೆ. ಕೊನೆಗೆ ಉಳಿಯೋದು ಬರೀ ನೆನಪು ಮಾತ್ರ ಅಂತಾರಲ್ವ. ಅದು ಯಾವತ್ತಿಗೂ ನಿಜವಾದ ಮಾತು. ಬೇಜಾರಾಗುತ್ತದೆ, ಆದರೆ ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಚಂದನ ಅನಂತಕೃಷ್ಣ ಮಾತನಾಡಿ, ರವಿ ಸರ್ ನಿಧನದ ಬಗ್ಗೆ ಬೆಳಗ್ಗೆ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಮರೆಯಲಾದರಂತಹ ದಿನಗಳಾಗಿವೆ. ಅವರಿಂದ ತುಂಬಾ ಕಲಿತಿದ್ದೇವೆ. ಅಲ್ಲದೆ ಸ್ಫೂರ್ತಿ ಪಡೆದವು. ಆ ಒಂದು ವಾರ ಹೇಗೆ ಹೋಯಿತು ಅಂತಾನೇ ನಮಗೆ ಗೊತ್ತಾಗಿಲ್ಲ. ನಾವು ಅದೃಷ್ಟವಂತರು. ಅಲ್ಲಿ ಅವರು ನಮಗೆ ಅಪ್ಪನ ಸ್ಥಾನ ತುಂಬಿದ್ರು ಎಂದು ಭಾವುಕರಾದ್ರು.

    ಡಯಾಬಿಟಿಸ್ ಹಾಗೂ ಕಾಲುಗಳ ನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಈಗಾಗಲೇ ಅವರ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್