ಬೆಂಗಳೂರು: ಚಂದನವನದ ನಟಿ ಮೇಘನಾ ರಾಜ್ ತಮ್ಮ ಮುದ್ದು ಮಗ ರಾಯನ್ ರಾಜ್ ಸರ್ಜಾ ಕೇಶಮುಂಡನ ಮಾಡಿಸಿದ್ದು, ಮಗನನ್ನು ಮೊಟ್ಟೆ ಬಾಸ್ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇಘನಾ ಇನ್‍ಸ್ಟಾಗ್ರಾಮ್ ನಲ್ಲಿ ರಾಯನ್ ಕೇಶಮುಂಡನ ಮಾಡಿದ ಫೋಟೋವನ್ನು ಶೇರ್ ಮಾಡಿ, ನಮ್ಮ ಮನೆಯ ಮೊಟ್ಟೆ ಬಾಸ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ರಾಯನ್ ರಿಯಾಕ್ಷನ್ ನನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್
ಈ ಫೋಟೋದ ಮತ್ತೊಂದು ವಿಶೇಷವೆಂದರೆ ಮೇಘನಾ ತನ್ನ ಮಗನ ಜೊತೆ ಪತಿ ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಚಿರು ಅಗಲಿದ ನಂತರ ಮಗನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಮೇಘನಾ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.
ಬೆಳೆದು ದೊಡ್ಡವನಾದ ಮೇಲೆ ನನ್ನನ್ನು ಅಮ್ಮ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು ಎಂದು ರಾಯನ್ ಹೆಮ್ಮೆ ಪಡುವ ರೀತಿ ಬೆಳೆಸಬೇಕು ಎಂಬುದು ಮೇಘನಾ ಅವರ ಆಸೆಯಾಗಿದೆ. ಅದರಂತೆ ಅವರು ರಾಯನ್ ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಲು ಬಹಳ ಉತ್ಸುಕರಾಗಿರುತ್ತಾರೆ. ರಾಯನ್ ಗೆ ಅಭಿಮಾನಿ ಬಳಗವೂ ಹೆಚ್ಚಿದ್ದು, ಅವನ ಅಪ್ಡೇಟ್ ಮತ್ತು ಫೋಟೋಗಳಿಗಾಗಿ ಕಾಯುತ್ತಿರುತ್ತಾರೆ.
ಬೆಂಗಳೂರು: ಅವನು ಇನ್ನೂ ನನ್ನ ಮಡಿಲಲ್ಲಿ ಮತ್ತು ನನ್ನ ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ ಎಂದು ತಮ್ಮನನ್ನು ನೆನೆದು ರಾಘವೇಂದ್ರ ರಾಜ್‍ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋವನ್ನು ಶೇರ್ ಮಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ನಿಧನರಾಗಿ ಇವತ್ತಿಗೆ 6ನೇ ದಿನ. ಇಂದಿಗೂ ಎಷ್ಟೋ ಜನರಿಗೆ ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ತಮ್ಮನನ್ನು ಮಗನಂತೆ ನೋಡುತ್ತಿದ್ದ ರಾಘವೇಂದ್ರ ರಾಜ್‍ಕುಮಾರ್ ಮತ್ತು ಶಿವಣ್ಣ ಈ ವಿಷಯ ತಿಳಿದು ಕುಸಿದು ಹೋಗಿದ್ದರು. ಈಗ ರಾಘವೇಂದ್ರ ರಾಜ್‍ಕುಮಾರ್ ಫೇಸ್ ಬುಕ್ ನಲ್ಲಿ ತಮ್ಮನೊಂದಿಗಿನ ವಿಶೇಷ ಫೋಟೋವನ್ನು ಹಾಕಿದ್ದು, ಅವನು ಇನ್ನೂ ನನ್ನ ಮಡಿಲಲ್ಲಿ ಮತ್ತು ನನ್ನ ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ. ಲವ್ ಯೂ ಮಗನೇ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಸಾಲುಗಳನ್ನು ನೋಡಿದರೆ, ಅಪ್ಪು ಎಷ್ಟೇ ದೊಡ್ಡವನಾದರೂ ಅವನು ಇನ್ನು ನನಗೆ ಮಗುವೇ ಎನ್ನುವ ರೀತಿ ರಾಘವೇಂದ್ರ ಅವರು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ರಾಘವೇಂದ್ರ ಅವರು, ಅವರ ಮತ್ತು ಅಪ್ಪುವಿನ ಚಿಕ್ಕ ವಯಸ್ಸಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋದಲ್ಲಿ ಅಪ್ಪು ತನ್ನ ಮುಗ್ಧ ನಗುವಿನೊಂದಿಗೆ ರಾಘವೇಂದ್ರ ರಾಜ್‍ಕುಮಾರ್ ಅವರ ತೊಡೆಯ ಮೇಲೆ ಕುಳಿತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ರಾಘವೇಂದ್ರ ಅವರು ಇತ್ತೀಚೆಗೆ ಅಪ್ಪುವಿನೊಂದಿಗೆ ತೆಗೆದುಕೊಂಡಂತಹ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಜೊತೆಗೆ ಭಾವುಕ ನುಡಿಗಳನ್ನು ಕೂಡ ಬರೆದುಕೊಂಡಿದ್ದರು. ಇತ್ತೀಚಿಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್ ವತಿಯಿಂದ ಜೀವನ ಸಾಧನೆ ಪ್ರಶಸ್ತಿ ಬಂದಿತ್ತು. ಅದು ಅಪ್ಪುಗೆ ಎಲ್ಲಿಲ್ಲದ ಸಂತಸವನ್ನು ತಂದುಕೊಟ್ಟಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ರಾಘಣ್ಣ ನೀವು ಕೂಡ ಈ ಮೂರ್ತಿಯ ಹಾಗೆಯೇ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್ ಯು ಮಗನೇ ಎಂದು ರಾಘವೇಂದ್ರ ರಾಜ್‍ಕುಮಾರ್ ಅವರು ಬರೆದುಕೊಂಡು ಅಪ್ಪುನನ್ನು ನೆನಪು ಮಾಡಿಕೊಂಡಿದ್ದರು. ಇದನ್ನೂ ಓದಿ: ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ
ನವದೆಹಲಿ: ಚಂದನವನದ ಯುವರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಅಮೂಲ್ ವಿಶೇಷವಾಗಿ ಗೌರವವನ್ನು ಸಲ್ಲಿಸಿದೆ.
ಶುಕ್ರವಾರದಂದು ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನವು ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಆಘಾತವನ್ನುಂಟು ಮಾಡಿತ್ತು. ಇಂದು ಅವರ ಅಂತ್ಯಸಂಸ್ಕಾರವಾಗಿದ್ದು, ಇದನ್ನು ಇನ್ನೂ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ಮಾತ್ರವಲ್ಲ ಪುನೀತ್ ಸಾವಿಗೆ ಇಡೀ ಭಾರತವೇ ಶೋಕಚರಣೆಯಲ್ಲಿ ಮುಳುಗಿತ್ತು. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ
ಇನ್‍ಸ್ಟಾಗ್ರಾಮ್ ನಲ್ಲಿ, ‘ಯುವರತ್ನಾ ಫಾರ್ ಮಿಲಿಯನ್ಸ್’ ಅಂಡ್ ‘ಪುನೀತ್ ರಾಜ್‍ಕುಮಾರ್ 1975-2021’ ಎಂಬ ಪೋಸ್ಟ್ ಹಾಕಿದ್ದು, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಎಂದು ಬರೆದು ಶೇರ್ ಮಾಡಿದೆ. ಈ ಹಿನ್ನೆಲೆ ಅಪ್ಪು ಅಭಿಮಾನಿಗಳು ಈ ಪೋಸ್ಟ್ ಗೆ ಹಾರ್ಟ್ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ.
ಬೆಂಗಳೂರು: ‘ಗಿಣಿರಾಮ’ ಖ್ಯಾತಿಯ ನಟಿ ನಯನಾ ನಾಗರಾಜ್ ಪೋಸ್ಟ್ ಗೆ ಮೋಹಕ ತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.
ನಯನಾ ನಟನೆಯ ಜೊತೆಗೆ ಒಳ್ಳೆಯ ಭರತನಾಟ್ಯ ಕಲಾವಿದೆ ಮತ್ತು ಉತ್ತಮ ಸಿಂಗರ್ ಸಹ ಆಗಿದ್ದಾರೆ. ಈ ಹಿನ್ನೆಲೆ ಇನ್‍ಸ್ಟಾಗ್ರಾಮ್ ನಲ್ಲಿ ನಯನಾ ಸಿನಿಮಾ ಅಥವಾ ಭಕ್ತಿಗೀತೆಗಳನ್ನು ಹಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಇನ್‍ಸ್ಟಾದಲ್ಲಿ ರಮ್ಯಾ ಅವರ ‘ಅಮೃತಧಾರೆ’ ಸಿನಿಮಾದ ‘ನೆನಪಿದೆಯೇ ಮೊದಲ ನೋಟ’ ಹಾಡನ್ನು ಹಾಡಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸ್ವತಃ ರಮ್ಯಾ ಅವರೇ ‘ನೀವು ತುಂಬಾ ಚೆನ್ನಾಗಿ ಹಾಡುತ್ತೀರ ಎಂದು ಕಮೆಂಟ್ ಮಾಡಿದ್ದಾರೆ.
ನಯನಾ ಇದನ್ನು ನೋಡಿ ಫುಲ್ ಖುಷ್ ಆಗಿದ್ದು, ನಾನು ಇದನ್ನು ನಿರೀಕ್ಷೆಯನ್ನು ಮಾಡಿರಲಿಲ್ಲ. ಇದು ನನಗೆ ತುಂಬಾ ದೊಡ್ಡದು ಎಂದು ನಯನಾ ರಿಪ್ಲೈ ಮಾಡಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ರಮ್ಯಾ ಅವರ ಕಮೆಂಟ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ’ ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ
ಒಬ್ಬ ನಟಿ ಇನ್ನೊಂದು ನಟಿಯನ್ನು ಹೊಗಳುವುದು ಕಷ್ಟ ಆದರೆ ಇಲ್ಲಿ ಸ್ಟಾರ್ ನಟಿ ಆದ ರಮ್ಯಾ ನಯನಾ ಅವರ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ನಯನಾ ಅವರು ಬಾರಿ ನಟನೆ ಮಾತ್ರವಲ್ಲದೇ ನೃತ್ಯ, ಸಂಗೀತದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದು ಅಲ್ಲದೇ ಇವರು ಕಿರುತೆರೆಯಲ್ಲಿಯೂ ಸಖತ್ ಫೇಮಸ್ ಆಗಿದ್ದು, ಬಿಗ್ ಬಾಸ್ ಮಿನಿ ಸೀಸನ್ ನಲ್ಲಿಯೂ ಭಾಗವಹಿಸಿದ್ದರು.
ಬೆಂಗಳೂರು: ನಿರ್ದೇಶಕ ರಾಘವ್ ವಿನಯ್ ನವೆಂಬರ್ ನಲ್ಲಿ ‘ಟಾಮ್ ಅಂಡ್ ಜೆರ್ರಿ’ ಕಥೆ ಹೇಳಲಿದ್ದಾರೆ. ಟಾಮ್ ಅಂಡ್ ಜೆರ್ರಿ ಎಂದಾಕ್ಷಣ ನಮಗೆ ನಮ್ಮ ಬಾಲ್ಯ ಕಣ್ಮುಂದೆ ಬರುತ್ತೆ. ಇವತ್ತಿಗೂ ಟಾಮ್ ಅಂಡ್ ಜೆರ್ರಿ ಎಲ್ಲರ ಹಾರ್ಟ್ ಫೇವರೇಟ್. ಈ ಹೆಸರಿನಲ್ಲೀಗ ಸಿನಿಮಾವೊಂದು ಸೆಟ್ಟೇರಿ ಹೊಸ ಕಥೆ ಹೇಳ ಹೊರಟಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ, ಬಿಡುಗಡೆಯ ದಿನಾಂಕವನ್ನು ಹೊತ್ತು ಬಂದಿರುವ ಈ ಚಿತ್ರ ನ.12ಕ್ಕೆ ಬಿಡುಗಡೆಗೆ ಸಜ್ಜಾಗಿದೆ.
‘ಟಾಮ್ ಅಂಡ್ ಜೆರ್ರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿದೆ. ರಾಘವ್ ವಿನಯ್ ಶಿವಗಂಗೆ ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ, ಖ್ಯಾತಿಗಳಿಸಿರುವ ಇವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಹಾಡುಗಳ ಮೂಲಕ ಸಿನಿ ಪ್ರಿಯರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿ ಯು/ಎ ಮುದ್ರೆ ಪಡೆದುಕೊಂಡಿದ್ದು, ಇನ್ನೇನಿದ್ರು ಚಿತ್ರಮಂದಿರಕ್ಕೆ ಕಾಲಿಡೋದೊಂದೇ ಬಾಕಿ ಇದೆ. ಇದನ್ನೂ ಓದಿ: ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್
‘ಟಾಮ್ ಅಂಡ್ ಜೆರ್ರಿ’ ಯೂತ್ ಓರಿಯೆಂಟೆಡ್ ಸಿನಿಮಾವಾಗಿದೆ. ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್ ಸಿನಿಮಾದಲ್ಲಿದೆ. ಒಂದೊಳ್ಳೆಯ ಸಂದೇಶವೂ ಇದೆ. ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ, ತಮಾಷೆ, ಪ್ರೀತಿ, ಆಕ್ಷನ್ ಎಲ್ಲವೂ ಒಳಗೊಂಡಿರುವ ಈ ಸಿನಿಮಾದಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ರಾಜು ಶೇರಿಗಾರ್ ಈ ಚಿತ್ರದ ನಿರ್ಮಾಪಕ. ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ತಮ್ಮದೇ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ,ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿವೆ. ಈಗಾಗಲೇ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಮ್ಯಾಜಿಕ್ ಮಾಡಿದ್ದು, ಎಲ್ಲರ ಫೇವರೇಟ್ ಆಗಿದೆ. ಉಳಿದಂತೆ ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ‘ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕಿದೆ.
ಬೆಂಗಳೂರು: ಚಂದನವನದ ಹೆಸರಾಂತ ನಿರ್ದೇಶಕ ಜಯತೀರ್ಥ ನಿರ್ದೇಶನದ ‘ಬನಾರಸ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸೆಟ್ಟೇರಿದ ದಿನದಿಂದ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.
ಹಲವಾರು ವಿಶೇಷತೆ ಒಳಗೊಂಡಿರುವ ಈ ಚಿತ್ರದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಲವರ್ ಬಾಯ್ ಆಗಿ ಮಿಂಚಲಿರೋ ಝೈದ್ ಖಾನ್ ಜೊತೆ ಕರಾವಳಿ ಬೆಡಗಿ ಸೊನಲ್ ಮೊಂಥೆರೋ ತೆರೆ ಹಂಚಿಕೊಂಡಿದ್ದಾರೆ.
ಬಿಡುಗಡೆಯ ಆಸುಪಾಸಿನಲ್ಲಿರುವ ಸಿನಿಮಾ ಸಖತ್ ಸುದ್ದಿಯಲ್ಲಿದ್ದು, ಸಂಭ್ರಮದಲ್ಲಿದೆ. ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್. ಹೌದು, ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರೋದೆ ಈ ಸಂಭ್ರಮಕ್ಕೆ ಕಾರಣವಾಗಿದೆ. ದೇಶದ ಅತ್ಯುನ್ನತ ಆಡಿಯೋ ಕಂಪನಿ ಲಹರಿ ಸಂಸ್ಥೆ ಹಾಗೂ ಟಿ-ಸೀರೀಸ್ ಜಂಟಿಯಾಗಿ ಚಿತ್ರದ ಆಡಿಯೋ ರೈಟ್ಸ್ ಬರೋಬ್ಬರಿ 3.5 ಕೋಟಿ ರೂ. ದಾಖಲೆ ಮೊತ್ತ ಕೊಟ್ಟು ಖರೀದಿಸಿದೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್ನಲ್ಲಿರುವ ಹೇಮ ಮಾಲಿನಿ, ಧರ್ಮೇಂದ್ರ
ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲಾಗಿದೆ. ಈ ವಿಷಯ ಒಂದು ಕಡೆಯಾದ್ರೆ, ಯುವ ನಟನೊಬ್ಬ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಿನಿಮಾವೊಂದರ ಆಡಿಯೋ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು ಅನ್ನೋದು ವಿಶೇಷ ಸಂಗತಿಯಾಗಿದೆ.
ಚಿತ್ರತಂಡ ಈ ಖುಷಿಯ ಸಂಭ್ರಮದಲ್ಲಿದ್ದು, ಚಿತ್ರ ಬಿಡುಗಡೆಗೂ ತಯಾರಿ ನಡೆಸುತ್ತಿದೆ. ‘ಬನಾರಸ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ವಿಭಿನ್ನ ಹಾಗೂ ನವಿರಾದ ಪ್ರೇಮಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಝೈದ್ ಖಾನ್, ಸೊನೆಲ್ ಮೊಂಥೆರೋ ಜೋಡಿ ಲವ್ ಬಡ್ರ್ಸ್ ಆಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು ಒಳಗೊಂಡಂತೆ ಬಹುತೇಕ ಕಾಶಿಯಲ್ಲೇ ನಡೆದಿರೋದು ಚಿತ್ರದ ಮತ್ತೊಂದು ವಿಶೇಷವಾಗಿದೆ.
ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಒಳಗೊಂಡಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ‘ಬನಾರಸ್’ ಸಿನಿಮಾ ಮೂಡಿ ಬಂದಿದ್ದು, ಪ್ರೇಮಕಥೆ ಒಳಗೊಂಡ ಈ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ಇದನ್ನೂ ಓದಿ: ಗೋವು ಕಳ್ಳರನ್ನು ಬಂಧಿಸಿ – ಶಿವಮೊಗ್ಗದ್ದಲ್ಲಿ ವಿಎಚ್‍ಪಿ, ಭಜರಂಗ ದಳ ಪ್ರತಿಭಟನೆ
ಅದ್ವೈತ್ ಗುರುಮೂರ್ತಿ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಎನ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ವೈ.ಬಿ.ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
ಬೆಂಗಳೂರು: ಚಂದನವನದ ಮೋಹಕತಾರೆ ಪ್ರೇಮಾ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಹಲವು ವರ್ಷಗಳ ಬಳಿಕ ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಸಿನಿಮಾದಲ್ಲಿ ಚಂದನವನಕ್ಕೆ ಕಮ್ ಬ್ಯಾಕ್ ಮಾಡಿದ್ದ ಪ್ರೇಮಾ ಮತ್ತೆ ಯಾವ ಸಿನಿಮಾಗಳಲ್ಲಿಯೂ ನಟಿಸಿರಲಿಲ್ಲ. ಆದರೆ ಈಗ ಮೂರು ವರ್ಷಗಳ ನಂತರ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಇದನ್ನೂ ಓದಿ: ಈ ಸೋಮವಾರ ತಲೈವಾಗೆ ಡಬ್ಬಲ್ ಖುಷಿ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕ್ಯಾರೆಕ್ಟರ್‌ಗಳನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ತುಂಬ ಚ್ಯೂಸಿ. ಇಲ್ಲಿವರೆಗೂ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಹಾಗಾಗಿ ನಾನು ಒಪ್ಪಿಕೊಳ್ಳುವ ಪಾತ್ರಗಳು ಮತ್ತು ಸಿನಿಮಾದ ವಿಷಯ ನನಗೆ ಅರ್ಥವಾಗಬೇಕು. ಇತ್ತೀಚೆಗೆ ಹಲವು ಸಿನಿಮಾಗಳ ಕಥೆಗಳನ್ನು ಕೇಳಿದೆ ಆದರೆ ಯಾವುದೂ ನನಗೆ ಇಷ್ಟವಾಗಿರಲಿಲ್ಲ. ಅದು ಅಲ್ಲದೇ ನನ್ನ ತಂದೆಯ ಆರೋಗ್ಯ ಸಹ ಸರಿಯಿರಲಿಲ್ಲ. ಅದಕ್ಕೆ ಸಿನಿಮಾ ಬಗ್ಗೆ ಹೆಚ್ಚು ಗಮನಕೊಂಡಲು ಸಾಧ್ಯವಾಗಿರಲಿಲ್ಲ. ಆದರೆ ಈ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ವಿಷಯ ಮತ್ತು ನನ್ನ ಪಾತ್ರ ನನಗೆ ಇಷ್ಟವಾಯಿತು. ಅದಕ್ಕೆ ನಾನು ಒಪ್ಪಿಕೊಂಡೆ ಎಂದು ತಿಳಿಸಿದರು.
ಬಹುತೇಕ ಹೊಸಬರೆ ತುಂಬಿರುವ ಈ ಸಿನಿಮಾದಲ್ಲಿ ನಾನು ಏನಾದರೂ ಹೊಸದನ್ನು ಕಲಿಯಬಹುದೆಂದು ಒಪ್ಪಿಕೊಂಡೆ. ಅದು ಅಲ್ಲದೇ ಸಿನಿಮಾದ ಮೇಲೆ ನಿರ್ದೇಶಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಇವತ್ತಿನ ಪೀಳಿಗೆ ಬಗ್ಗೆ ಈ ಸ್ಟೋರಿ ಇದೆ. ಇದರಲ್ಲಿ ನಾನು ಅಡ್ವೋಕೇಟ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದೇ ನವಂಬರ್ ನಲ್ಲಿ ನನ್ನ ಪಾತ್ರದ ಶೂಟಿಂಗ್ ಪ್ರಾರಂಭವಾಗುತ್ತೆ. ಈ ಯಂಗ್ ಆ್ಯಂಡ್ ಎನರ್ಜಿಟಿಕ್ ಟೀಮ್ ಸಿಕ್ಕಿರುವುದರಿಂದ ನನಗೂ ಖುಷಿ ಇದೆ ಎಂದು ಹೇಳಿದರು. ಇದನ್ನೂ ಓದಿ: ನೂರಕ್ಕೂ ಹೆಚ್ಚು ಜನರಿಗೆ ಕೃತಕ ಕೈ ಜೋಡಣೆ ಮಾಡಿದ ರೋಟರಿ 7 ಹಿಲ್ಸ್ ಸಂಸ್ಥೆ
ಈ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾದಲ್ಲಿ ಸೋನು ಗೌಡ ಮತ್ತು ನಿಶಾನ್ ನಾಣಯ್ಯ ಪ್ರಮುಖ ಪಾತ್ರದಲ್ಲಿ ಕಾನಿಸಿಕೊಳ್ಳುತ್ತಿದ್ದು, ವಿಕ್ರಂ ಪ್ರಭು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಕ್ರಂ ಪ್ರಭು ಫಿಲಂಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ.
‘ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಮತ್ತೊಂದು ಚಿತ್ರ ಕೈಗೆತ್ತಿಕೊಂಡು ಚಿತ್ರೀಕರಣವನ್ನೂ ಕಂಪ್ಲೀಟ್ ಮಾಡಿದ್ದಾರೆ. ಆ ಚಿತ್ರದ ಹೆಸರೇ ‘ಕನ್ನೇರಿ’. ನೈಜ ಘಟನೆ ಆಧಾರಿತ ಈ ಚಿತ್ರ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರೆದುರು ಬಂದಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ಕನ್ನೇರಿ’ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ಕನ್ನೇರಿ’ ಮಹಿಳಾ ಪ್ರಧಾನ ಚಿತ್ರ. ಚಿತ್ರಕ್ಕೆ ನೈಜ ಘಟನೆಯೇ ಪ್ರೇರಣೆ ಎನ್ನುತ್ತಾರೆ ನಿರ್ದೇಶಕ ನೀಸಾಸಂ ಮಂಜು. ಅದು ಬೇರಾವ ಘಟನೆ ಅಲ್ಲ ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ. ಈ ಹೋರಾಟದ ಜೊತೆ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ. ಇದನ್ನೂ ಓದಿ: ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ
ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೊತೆಯಾಗಿದ್ದಾರೆ.
ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ‘ಕನ್ನೇರಿ’ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್
ಬೆಂಗಳೂರು: ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷದ ದಿನದಂದು ಮೈದುನನಿಗೆ ಮೇಘನಾ ವಿಶ್ ಮಾಡಿದ್ದಾರೆ.
ಚಂದನವನದ ನಟಿ ಮೇಘನಾ ರಾಜ್ ಧ್ರುವ ಹುಟ್ಟುಹಬ್ಬಕ್ಕೆ ಇನ್‍ಸ್ಟಾ ಸ್ಟೋರಿಯಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಬಿಲ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಚಿರು ಮೇಘನಾರನ್ನು ಅಗಲಿದ ನಂತರ, ಮೇಘನಾಗೆ ಒಂದು ಶಕ್ತಿಯಾಗಿ ನಿಂತಿದ್ದು ಧ್ರುವ. ಇವರಿಬ್ಬರು ಅತ್ತಿಗೆ ಮೈದುನ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು ಆಗಿದ್ದಾರೆ. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಹಿಂದೆ ಕೆಲವರು ಈ ಬಾಂಧವ್ಯವನ್ನು ಮುರಿದುಹಾಕಲು ಪ್ರಯತ್ನಿಸಿದ್ದರು. ಆದರೆ ಮೇಘನಾ ಮಗನ ನಾಮಕರಣದಲ್ಲಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದರು. ಇದನ್ನೂ ಓದಿ: ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ
ಧ್ರುವ ಈ ಹಿಂದೆ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 6ರಂದು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲೆಬ್ರಿಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಹಿನ್ನೆಲೆ ಇಂದು ಅವರ ಅಭಿಮಾನಿಗಳು ಅವರ ಮಾತಿಗೆ ಬೆಲೆ ಕೊಟ್ಟು ಯಾವುದೇ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಅದು ಅಲ್ಲದೇ ಧ್ರುವ ಇಂದು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.
ಬೆಂಗಳೂರು: ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗಣೇಶ ಚತುರ್ಥಿಗೆ ಬಿಡುಗಡೆಯಾದ ಲಂಕೆ ಸಿನಿಮಾ ಭರ್ಜರಿ ಓಪನಿಂಗ್ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.
ಬಿಡುಗಡೆಯಾದ ಎಲ್ಲಾ ಭಾಗದಲ್ಲೂ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಸಿನಿಮಾ ಲೂಸ್ ಮಾದ ಯೋಗಿಗೆ ಭರ್ಜರಿ ಕಂಬ್ಯಾಕ್ ನೀಡಿದೆ. ಬಿಡುಗಡೆಯಾದ ದಿನದಿಂದಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಚಿತ್ರಮಂದಿರಗಳಲ್ಲಿ ‘ಲಂಕೆ’ ಓಟ ಜೋರಾಗಿದ್ದು, ಇದೀಗ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ ಚಿತ್ರತಂಡ. ಇದನ್ನೂ ಓದಿ: ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್
ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿ ತೆರೆಕಂಡ ಸಿನಿಮಾ ‘ಲಂಕೆ’. ಒಂದು ಬಿಗ್ ಕಂಬ್ಯಾಕ್ ಗಾಗಿ ಕಾಯುತ್ತಿದ್ದ ಯೋಗಿಗೆ ಪರ್ಫೆಕ್ಟ್ ಸಿನಿಮಾ ಎಂಬಂತೆ ‘ಲಂಕೆ’ ಮೂಡಿ ಬಂದಿತ್ತು. ರಾಮ್ ಪ್ರಸಾದ್ ಮಾಡಿಕೊಂಡಿದ್ದ ಪಕ್ಕಾ ಔಟ್ ಅಂಡ್ ಔಟ್ ಕಮರ್ಶಿಯಲ್ ಎಳೆಯ ಸಬ್ಜೆಕ್ಟ್ ಕೂಡ ಅಷ್ಟೇ ಥ್ರಿಲ್ಲಿಂಗ್ ಆಗಿತ್ತು. ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಯೋಗಿಗೆ ಹೇಳಿ ಮಾಡಿಸಿದಂತಿತ್ತು. ಜೊತೆಗೆ ಸಿನಿಮಾ ಹಾಡುಗಳು, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಎಲ್ಲದರ ಜುಗಲ್ಬಂದಿ ಚಿತ್ರರಸಿಕರಿಗೆ ಫುಲ್ ಪ್ಯಾಕೇಜ್ ಮನೋರಂಜನೆ ನೀಡಿದೆ. ಗಲ್ಲಾಪೆಟ್ಟಿಗೆಯಲ್ಲೂ ಸೌಂಡ್ ಮಾಡಿದೆ. ಇದೀಗ ನಿರೀಕ್ಷೆಯಂತೆ ಗೆಲುವಿನ ನಗೆ ಬೀರಿ 25 ದಿನಗಳನ್ನು ಯಶ್ವಸಿಯಾಗಿ ಪೂರೈಸಿದೆ ‘ಲಂಕೆ’ ಚಿತ್ರ.
ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ, ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿ ಸ್ಟಾರ್ ಕಲಾವಿದರಾದ ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ಹಲವು ಕಲಾವಿದರು ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!
ಕಾರ್ತಿಕ್ ಶರ್ಮಾ ಸಂಗೀತ, ರಮೇಶ್ ಬಾಬು ಕ್ಯಾಮೆರಾ ವರ್ಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಒಟ್ನಲ್ಲಿ, ಪ್ರೇಕ್ಷಕರಿಗೆ ಮನರಂಜನೇ ನೀಡೋದ್ರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆ ಕಲೆಕ್ಷನ್ ಮಾಡಿದೆ ಲಂಕೆ.