ಬೆಂಗಳೂರು: ಚಂದನವನದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳು ಐರಾ ಗೆ ಅ, ಆ, ಇ, ಈ ಕಲಿಸುತ್ತಿದ್ದಾರೆ.
ಯಶ್ ನಟನೆಯ ಜೊತೆಗೆ ತಮ್ಮ ಕುಟುಂಬಕ್ಕೂ ಅಷ್ಟೇ ಸಮಯವನ್ನು ಮೀಸಲಿಡುತ್ತಾರೆ. ಇಂದು ಯಶ್ ಫ್ಯಾಮಿಲಿ ಜೊತೆ ಮನೆಯಲ್ಲೇ ಎಂಜಾಯ್ ಮಾಡುತ್ತಿದ್ದು, ಮಗಳಿಗೆ ಕನ್ನಡ ಕಲಿಸಿಕೊಂಡುತ್ತಿದ್ದಾರೆ. ಈ ಮುದ್ದಾದ ವೀಡಿಯೋವನ್ನು ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ವೀಕೆಂಡ್ ಸ್ವೆಷಲ್ ಕ್ಲಾಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ
ವೀಡಿಯೋದಲ್ಲಿ ಯಶ್ ಸೋಫಾ ಮೇಲೆ ಕುಳಿತುಕೊಂಡಿದ್ದು, ಅವರ ತೊಡೆಯ ಮೇಲೆ ಐರಾ ಕುಳಿತುಕೊಂಡಿದ್ದಾಳೆ. ಆಗ ಯಶ್ ಐರಾಗೆ ಅ, ಆ, ಇ, ಈ ಎಂದು ಕನ್ನಡ ವರ್ಣಮಾಲೆಗಳನ್ನು ಹೇಳಿಕೊಂಡುತ್ತಾರೆ. ಆಗ ಐರಾ ಸಹ ಯಶ್ ಹೇಳಿದ ರೀತಿಯಲ್ಲಿಯೇ ಕ್ಯೂಟ್ ಆಗಿ ಹೇಳುತ್ತಾಳೆ. ಯಶ್ ಮಗಳನ್ನು ಸೂಪರ್ ಎಂದು ಹೈ ಫೈವ್ ಕೊಡುತ್ತಾರೆ.
ಈ ವೀಡಿಯೋ ನೋಡಿದ ನೆಟ್ಟಿಗರು, ಕ್ಲಾಸ್ ಸೂಪರ್, ನಮ್ ಐರಾ ಸಕ್ಕತ್ ಫಾಸ್ಟ್ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಯಶ್‍ಗೆ ಕನ್ನಡದ ಮೇಲಿನ ಅಭಿಮಾನವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್
ಎರಡುವಾರದ ಹಿಂದೆಯಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ಯಶ್ ಸಖತ್ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಯಶ್ ಅಭಿಮಾನಿಗಳು ಹಸಿರು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ನಡೆಯಿತು. ಯಶ್ ಅವರ ‘ಕೆಜಿಎಫ್-2’ ಸಿನಿಮಾಗಾಗಿ ಸಿನಿಮಾರಂಗವೇ ಕಾಯುತ್ತಿದ್ದು, ಇದೇ ವರ್ಷ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ತಿಳಿಸಿದೆ.
ಬೆಂಗಳೂರು: ಚಂದನವನದ ನಟಿ ಶುಭಾಪೂಂಜಾರನ್ನು ನೋಡಲು ಸ್ನೇಹಿತೆ ನೀತು ಅವರ ಹಳ್ಳಿಗೆ ಹೋಗಿದ್ದಾರೆ.
ನೀತು ಮತ್ತು ಶುಭಾ ಚಂದನವನದ ನಟಿಯರು. ಇವರಿಬ್ಬರು ಒಳ್ಳೆಯ ಸ್ನೇಹಿತರು. ಇತ್ತೀಚೆಗಷ್ಟೇ ಶುಭಾಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್ ಜೊತೆ ಊರಿನ ಮಜಲಬೆಟ್ಟುಬೀಡುವಿನಲ್ಲಿರುವ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಗೆ ನೀತು ಬಂದಿರಲಿಲ್ಲ. ಹೀಗಾಗಿ ನೀತು ಶುಭಾ ಇರುವ ಅವರ ಅಜ್ಜಿಯ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ್ದಾರೆ. ನೀತು ಬಂದ ಕಾರಣ ಶುಭಾ ಫುಲ್ ಖುಷ್ ಆಗಿದ್ದು, ನೀತು ಜೊತೆಗೆ ಸಮಯ ಕಳೆದ ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್
ಫೋಟೋ ಶೇರ್ ಮಾಡಿದ ಶುಭಾ, ಕೊನೆಗೂ ನಮ್ಮ ಮನೆಗೆ ನೀತು ಬಂದಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನೀತು ಸಹ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ, ವಧುವನ್ನು ಅವಳ ಊರಿನಲ್ಲೇ ಭೇಟಿಯಾದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಶುಭಾ ಮತ್ತು ನೀತು ತೋಟಕ್ಕೆ ಹೋಗಿರುವ ಫೋಟೋವನ್ನು ಇವರು ಶೇರ್ ಮಾಡಿಕೊಂಡಿದ್ದು, ಇಬ್ಬರು ಫುಲ್ ಎಂಜಯ್ ಮೂಡಿನಲ್ಲಿ ಇದ್ದಾರೆ. ಇನ್ನೊಂದು ಫೋಟೋದಲ್ಲಿ ಶುಭಾ, ಪತಿ ಸುಮಂತ್ ಮತ್ತು ಇತರೆ ಸ್ನೇಹಿತರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
ಶುಭಾ ತಾನು ಮದುವೆಯಾದ ಪಾರಂಪರಿಕ ಮನೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಅವರು, ನನ್ನ ಮನೆ ಮಜಲಬೆಟ್ಟುಬೀಡು. ನಾನು ಮದುವೆಯಾದ ಮನೆಯನ್ನು ತೋರಿಸುವಂತೆ ಸಾಕಷ್ಟು ಜನ ಕೇಳಿದ್ದರು. ಇದು ನನ್ನ ಅಜ್ಜಿಯ ಮನೆ. ಇದು 800 ವರ್ಷಗಳ ಪರಂಪರೆ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿಯೇ ನಾನು ಬೆಳೆದಿದ್ದು, ನಾನು ಯಾವಾಗಲೂ ಈ ಮನೆಯಲ್ಲಿಯೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದರು.
ಬೆಂಗಳೂರು: ಈ ವರ್ಷ ಶಾಂತಿ, ಸುಂದರ, ಪ್ರಕಾಶಮಾನವಾಗಿ ಇರಬೇಕು ಎಂಬುದಾಗಿ ಆಶಿಸುತ್ತೇನೆ ಎಂದು ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ವಿಶೇಷ ಅನುಭವಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇಂದು ರಾಧಿಕಾ ಇನ್‍ಸ್ಟಾಗ್ರಾಮ್ ನಲ್ಲಿ ಬೀಚ್ ಬಳಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ಹಿನ್ನೆಲೆ ಬಿಡುಗಡೆ ದಿನಾಂಕವನ್ನ ಮುಂದಕ್ಕೆ ಹಾಕಿದ ಬಹುನಿರೀಕ್ಷಿತ ಚಿತ್ರಗಳು
ನಾನು ಈ ಚಿತ್ರದಲ್ಲಿ ಹೇಗೆ ಆರಾಮವಾಗಿ ಶಾಂತಿಯಿಂದ ಇದ್ದೇನೊ ಅದೇ ರೀತಿ ಈ ವರ್ಷ ಇರಲಿ ಎಂದು ಆಶಿಸುತ್ತೇನೆ. ಈ ವರ್ಷ ಶಾಂತಿ, ಸುಂದರ, ಪ್ರಕಾಶಮಾನ, ತೃಪ್ತಿಕರವಾದ ಸಂತೋಷ ಇರಬೇಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಫೋಟೋದಲ್ಲಿ ರಾಧಿಕಾ ಕೂಲ್ ಆಗಿ ಬೀಚ್ ಬಳಿ ವಿಶ್ರಾಂತಿ ಪಡೆಯುತ್ತಿದ್ದು, ಇದೇ ರೀತಿ ಇಡೀ ವರ್ಷ ಇರಬೇಕು ಎಂದು ಆಶಿಸಿದ್ದಾರೆ. ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಯಶ್ ಜೊತೆಗೆ ಹೊಸ ವರ್ಷದ ಶುಭಾಶಯಗಳನ್ನು ವಿಶ್ ಮಾಡಿದ್ದರು. ಈ ವೀಡಿಯೋದಲ್ಲಿ ಮೊದಲು ರಾಧಿಕಾ ಮಾತ್ರ ಫ್ರೇಮ್ ನಲ್ಲಿದ್ದು, ನಂತರ ಯಶ್ ನನ್ನು ಫ್ರೇಮ್ ಒಳಗೆ ಬರುವಂತೆ ಮುದ್ದಾಗಿ ಅವರು ಕೇಳಿಕೊಳ್ಳುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ನಂತರ ಯಶ್ ಸಹ ಫ್ರೇಮ್ ನಲ್ಲಿ ಬಂದರು. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್
ಕ್ರಿಸ್‍ಮಸ್ ಸಮಯದಲ್ಲಿಯೂ ಮಗಳು ಐರಾವೊಂದಿಗೆ ಫೋಟೋಗೆ ಪೋಸ್ ಕೊಟ್ಟ ರಾಧಿಕಾ ಇಬ್ಬರಲ್ಲಿ ಯಾರು ಚೆನ್ನಾಗಿ ಪೋಸ್ ಕೊಟ್ಟಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಕ್ರಿಸ್‍ಮಸ್ ಟ್ರೀ ಪಕ್ಕ ನಿಂತುಕೊಂಡು ಅಮ್ಮ-ಮಗಳು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದರು.
ಬೆಂಗಳೂರು: ಚಂದನವನದ ಡಿಂಪಲ್ ಕ್ವಿನ್ ರಚಿತಾರಾಮ್ ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿದ್ದಾರೆ. ರಚಿತಾ ರಾಮ್ ಅವರು ಕಳೆದ ಕೆಲ ತಿಂಗಳುಗಳಿಂದ ನಾನ್ ಸ್ಟಾಪ್ ಶೂಟಿಂಗ್ ಹಾಗೂ ಪ್ರಮೋಷನ್ಸ್ ಒತ್ತಡದಿಂದ ಅತಿಯಾದ ಆಯಾಸಕ್ಕೆ ಒಳಗಾಗಿದ್ದು, ಶೀತ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಶಿವಮೊಗ್ಗಕ್ಕೆ ‘ಏಕ್ ಲವ್ ಯಾ’ ಚಿತ್ರದ ಪ್ರಚಾರಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಶಿವಮೊಗ್ಗದಲ್ಲಿ ತಮ್ಮ ಹೊಸ ಚಿತ್ರ ಏಕ್ ಲವ್ ಯಾ ಸಾಂಗ್ ಇವೆಂಟ್ ವೇಳೆ ಮಾತನಾಡಿದ್ದ ರಚಿತಾ, ಡಿಸೆಂಬರ್31 ರಂದು ನನ್ನ ಸಿನಿಮಾ ಲವ್ ಯೂ ರಚ್ಚು ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕಾಗಿ ನಮ್ಮ ನಿರ್ಮಾಪಕರು ತುಂಬ ಫೈಟ್ ಮಾಡುತ್ತಿದ್ದಾರೆ. ನಿರ್ಮಾಪಕರು ಒಂದು ಸಿನಿಮಾ ಮಾಡಲು ಎಲ್ಲೆಲ್ಲಿಂದಲೋ ದುಡ್ಡು ತಂದು ಕಷ್ಟ ಪಟ್ಟು ಇಷ್ಟ ಪಟ್ಟು ಸಿನಿಮಾ ಮಾಡಿರುತ್ತಾರೆ. ಆದರೆ ಈ ನಡುವೆ ನೈಟ್ ಕರ್ಫ್ಯೂ, ಬಂದ್ ಮಾಡುವುದರಿಂದ ತೊಂದರೆಯಾಗುತ್ತದೆ ಎಂದಿದ್ದರು. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್ ಬರ್ಡ್ಸ್
ಒಂದು ಕಡೆ ನಮ್ಮ ರಾಜ್ಯಕೋಸ್ಕರ ಸಪೋರ್ಟ್ ಮಾಡುತ್ತಾ ನಿಲ್ಲಬೇಕಾಗುತ್ತದೆ. ಇನ್ನೊಂದು ಕಡೆ ಸಿನಿಮಾ. ಹೀಗಾಗಿ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲಲ್ಲ. ಒಂದು ಕಡೆ ನಮ್ಮ ಪ್ರೊಡ್ಯೂಸರ್, ಇನ್ನೊಂದು ಕಡೆ ನಮ್ಮ ರಾಜ್ಯ. ಸಪೋರ್ಟ್ ಎರಡು ಕಡೆಯೂ ಇರುತ್ತದೆ. ಆದರೆ ಹೆಚ್ಚು ಸಪೋರ್ಟ್ ನಮ್ಮ ರಾಜ್ಯಕೋಸ್ಕರ ಇರುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ:ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ
ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಕ್ಕಳು ಕ್ರಿಸ್‍ಮಸ್ ಮೂಡ್ ನಲ್ಲಿ ಇದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ರಾಧಿಕಾ ತಮ್ಮ ಮುದ್ದು ಮಕ್ಕಳು ಐರಾ ಮತ್ತು ಯಥರ್ವ್ ಕ್ರಿಸ್‍ಮಸ್ ಟ್ರೀ ಮುಂದೆ ನಿಂತುಕೊಂಡಿರುವ ಫೋಟೋವನ್ನು ಇನ್‍ಸ್ಟಾ ಸ್ಟೋರಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ಜೊತೆಗೆ ಇಬ್ಬರು ಮಕ್ಕಳು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು
ಫೋಟೋದಲ್ಲಿ ಮೊದಲು ಯಥರ್ವ್ ಕ್ರಿಸ್‍ಮಸ್ ಟ್ರೀ ಬಳಿ ಬಂದು ಅಲಂಕಾರವನ್ನು ನೋಡುತ್ತಿರುತ್ತಾನೆ. ನಂತರ ಐರಾ ಸಹ ಅವನ ಬಳಿಗೆ ಬಂದು ಕ್ರಿಸ್‍ಮಸ್ ಟ್ರೀಗೆ ಮಾಡಿರುವ ಅಲಂಕಾರನ್ನ ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ನಂತರ ತಾಯಿ ರಾಧಿಕಾ ಅವರಿಬ್ಬರ ಬಳಿ ಬಂದು ಆ ಅಲಂಕಾರವನ್ನು ತೋರಿಸುತ್ತಿರುವಂತೆ ಫೋಟೋದಲ್ಲಿ ಕಾಣುತ್ತೆ. ಒಟ್ಟಿನಲ್ಲಿ ಎಲ್ಲ ಫೋಟೋಗಳು ಮುದ್ದಾಗಿದ್ದು, ಮಕ್ಕಳು ಮಾತ್ರ ಈ ಅಲಂಕಾರವನ್ನು ಬಹಳ ಕುತೂಹಲದಿಂದ ನೋಡುವುದನ್ನು ನಾವು ಗಮನಿಸಬಹುದು.
ರಾಧಿಕಾ ಅವರಿಗೆ ಕೇಕ್ ಮಾಡುವುದು, ಕ್ರಾಫ್ಟ್ ವರ್ಕ್ ಮಾಡುವುದು, ಕ್ರಿಸ್‍ಮಸ್ ತಯಾರಿ ಮಾಡುವುದೆಲ್ಲ ಸಂಭ್ರಮ ತರುತ್ತೆ. ಎಷ್ಟೂ ಬಾರಿ ಅವರೇ ಕೇಕ್, ಕುಕ್ಕಿಸ್ ಮಾಡಿ ಇನ್‍ಸ್ಟಾ ದಲ್ಲಿ ಪೋಸ್ಟ್ ಅನ್ನು ಮಾಡಿದ್ದಾರೆ. ಇಂದು ಕ್ರಿಸ್‍ಮಸ್ ಆಗಿರುವುದರಿಂದ ರಾಧಿಕಾ ಮನೆಯಲ್ಲಿ ಕ್ರಿಸ್‍ಮಸ್ ಸಂಭ್ರಮವಿದ್ದು, ಆ ಫೋಟೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ
ಮಂಗಳೂರು: ಕೊರೊನಾ ಟೈಮ್‌ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಟ್ಸಾಫ್ ಎಂದು ಚಂದನವನದ ನಟಿ ರಚಿತಾ ರಾಮ್ ಹೇಳಿದರು.
ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆ ರಚಿತಾ ರಾಮ್ ಅವರು ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದರು. ಆಗ ಮಂಗಳೂರು ನಗರ ಪೊಲೀಸರ ಜೊತೆ ಒಂದಷ್ಟು ಹೊತ್ತು ಮಾತುಕತೆ ನಡೆಸಿದರು. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ
ಈ ವೇಳೆ ಅವರು, ಈ ಒಂದು ಸಮಾರಂಭಕ್ಕೆ ನಾನು ಆಕಸ್ಮಿಕವಾಗಿ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು, ತುಂಬಾ ಖುಷಿಯಾಯಿತು. ನಿನ್ನೆಯೇ ನಾವು ಹೊರಡಬೇಕಿತ್ತು. ಆದರೆ ಅಮ್ಮ ಬೇಡ ಎಂದಿದ್ದಕ್ಕೆ ಇವತ್ತು ಹೋಗಲು ನಿರ್ಧರಿಸಿದೆ. ಬೆಳಗ್ಗೆ 10 ಗಂಟೆಗೆ ಹೊರಡಬೇಕು ಎಂದುಕೊಂಡೆ. ಆದರೆ ತಿಂಡಿ ಬರುವುದು ತಡ ಆಯ್ತು. ಅದಕ್ಕೆ ಆ ಪ್ಲಾನ್ ಕೂಡ ಕ್ಯಾನ್ಸಲ್ ಆಯ್ತು. ನಿನ್ನೆಯೇ ನಾನು ಪಬ್ಬಾಸ್‌ಗೆ ಹೋಗಿ ಐಸ್‍ಕ್ರೀಂ ತಿಂದ್ಕೊಂಡು ಬಂದೆ. ಏಕೆಂದರೆ ಅದರಿಂದ ನನಗೆ ಗಂಟಲು ಸರಿಯಾಗುತ್ತೆ ಎಂದು ನಕ್ಕರು.
ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ನನಗೆ ಇಲ್ಲಿಗೆ ಬರುವಂತೆ ಕೇಳಿಕೊಂಡರು. ಆಗ ನಾನು ಬಂದೆ. ಮನೆಗೆ ಹೇಗೆ ಹೊರಟಿದ್ದೇನೋ ಹಾಗೇ ಇಲ್ಲಿಗೆ ಬಂದೆ. ಅದು ಅಲ್ಲದೇ ಈ ರೀತಿ ಸ್ವಾಗತ ಸಿಗುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದರು.
ನಿಮ್ಮ ಬಗ್ಗೆ ಮಾತಾಡಿ ಎಂದು ಸರ್ ಹೇಳಿದರು. ಆದರೆ ನಿಮ್ಮ ಬಗ್ಗೆ ಮಾತನಾಡಲು ಒಂದೆರೆಡು ಮಾತುಗಳಿಲ್ಲ. ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಈ ಮಾತುಗಳನ್ನು ಹೇಳುತ್ತಿಲ್ಲ. ನನ್ನ ತುಂಬು ಹೃದಯದಿಂದ ಹೇಳುತ್ತಿದ್ದೇನೆ. ನೀವು ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಟ್ಸಾಫ್. ನಿಮ್ಮ ಬಗ್ಗೆ ಮಾತನಾಡಬೇಕಾದರೆ ಖುಷಿಯಾಗುತ್ತೆ ಎಂದರು.
ನಿಮ್ಮ ಆರೋಗ್ಯವನ್ನು ಲೆಕ್ಕಿಸದೆ, ನಮಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಈ ಮೂಲಕ ಡಾಕ್ಟರ್ ಗಳಿಗೂ ತುಂಬಾ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಕೊಟ್ಟ ಆ ದೇವರು ಕಾಪಾಡಲಿ. ನಿಮ್ಮಿಂದ ನಾವು ಇಷ್ಟು ಸುರಕ್ಷಿತವಾಗಿ ಇದ್ದೇವೆ. ಸೈನಿಕರು ಅಲ್ಲಿ ನಮಗಾಗಿ ಹೋರಾಡಿದರೆ, ನೀವು ಇಲ್ಲಿ ಹೋರಾಟ ಮಾಡುತ್ತಿದ್ದೀರಾ ಎಂದು ಧನ್ಯವಾದ ತಿಳಿಸಿದರು.
ನಾನು ಚಿಕ್ಕ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂದು ಹೇಳುತ್ತಿದ್ದೆ. ಲಾ ಮಾಡಬೇಕು ಏನಾದರು ಸರ್ಕಾರಿ ವೃದ್ಧೆಯಲ್ಲಿ ಇರಬೇಕು ಎಂದು ನನಗೆ ಅನಿಸಿತ್ತು. ನಮ್ಮ ತಂದೆಗೆ ಸರ್ಕಾರಿ ವಾಹನವನ್ನು ನೋಡಿದಾಗ ನಾನು ಆ ಕಾರಿನಲ್ಲಿ ಬರುತ್ತೇನೆ ಎನ್ನುತ್ತಿದ್ದೆ. ಆದರೆ ನಟಿಯಾಗಿ ಯಾವ ಪಾತ್ರವನ್ನು ಮಾಡಬಹುದು. ಆದರೆ ಈ ಪಾತ್ರ ನನಗೆ ಇನ್ನೂ ಸಿಕ್ಕಿಲ್ಲ ಎಂದು ತಮ್ಮ ಬಾಲ್ಯ ನೆನೆದು ನಕ್ಕರು. ಇದನ್ನೂ ಓದಿ: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್
ನಾನು ಲಾಯರ್ ಆಗಿದ್ದೆ, ಡಾಕ್ಟರ್ ಆಗಿದ್ದೆ, ಆದರೆ ಪೊಲೀಸ್ ಒಂದು ಪಾತ್ರವನ್ನು ನಾನು ಮಾಡಿಲ್ಲ. ಆ ಪಾತ್ರಕ್ಕಾಗಿ ಹುಡುಕುತ್ತಿದ್ದೇನೆ. ಹಿಂದೆ ನನಗೆ ಆ ಪಾತ್ರ ಬಂದಿತ್ತು. ಆದರೆ ಕಾರಣಾಂತರದಿಂದ ಆ ಪಾತ್ರವನ್ನು ಮಾಡಲು ಆಗಿಲ್ಲ ಎಂದರು.
ಬೆಂಗಳೂರು: ಚಂದನವನದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ 36 ವರ್ಷದ ಕನಸನ್ನು ಇಂದು ನನಸು ಮಾಡಿಕೊಂಡಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ಎಂದರೆ ಅವರಿಗೆ ಬಹಳ ಅಚ್ಚುಮೆಚ್ಚು ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಿಚ್ಚ ಇನ್‍ಸ್ಟಾಗ್ರಾಮ್ ನಲ್ಲಿ ಕಪಿಲ್ ಅವರ ಜೊತೆ ಫೋಟೋವನ್ನು ಕ್ಲಿಕಿಸಿಕೊಂಡು ಆ ಫೋಟೋವನ್ನು ಶೇರ್ ಮಾಡಿದ್ದು, ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಚಿತ್ರವಿದು. ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದ ಕಪಿಲ್ ಸರ್. ನೀವು ನಮ್ರತೆಯ ಪ್ರತಿರೂಪ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್
ಈ ಫೋಟೋ ನೋಡಿದ ಇವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ನೀವು ನಮ್ಮ ಹೆಮ್ಮೆ ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ.
ರಣವೀರ್ ನಟನೆಯ ’86’ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಿಸುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಕಪಿಲ್ ಕುರಿತು ಮಾತನಾಡಿದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಅಳ್ತಾ ಇದ್ದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತುಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಭಾವುಕರಾಗಿದ್ದರು.
ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ
ಈ ಸುದ್ದಿಗೋಷ್ಠಿಗೆ ಕಪಿಲ್ ಅವರು ಬಂದಿದ್ದು, ಅವರ ಜೊತೆ ಫೋಟೋ ತೆಗೆಸಿಕೊಂಡು ಕಿಚ್ಚ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಈ ವೇಳೆ ಕಪಿಲ್ ಅವರನ್ನು ನೆನೆದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು ಅಂದ್ರೆ 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಆಳ್ತಾ ಇದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತಿಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವುಕರಾದರು.
ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು.
83 ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರ ಮನಸ್ಸು ಬದಲಾಗುತ್ತೆ. ಬಾರಿ ಕ್ರಿಕೆಟ್ ನೋಡುವವರು ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ರಣವೀರ್ ನಟನೆ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರು ಹೇಗೆ ಇದಕ್ಕೆ ಕೆಲಸ ಮಾಡಿದ್ದಾರೆ ಎಂಬುದು ಈ ಟ್ರೇಲರ್ ನೋಡಿದರೆ ತಿಳಿಯುತ್ತೆ. ಅವರು ಇಲ್ಲಿ ಒಂದು ಡೈಲಾಗ್ ಹೇಳಿದ್ದಾರೆ ಎಂದು ರಣವೀರ್ ಅವರನ್ನು ಮತ್ತೊಮ್ಮೆ ಈ ಸಿನಿಮಾದ ಡೈಲಾಗ್ ಹೇಳಿ ಎಂದು ಕೇಳಿದರು.
Witness the epic tale of the 1983 cricket world cup triumph! #6DaysTo83
ಮೊದಲು ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಆದರೆ ಈ ಸಿನಿಮಾ ಒಂದು ರೀತಿಯ ಭಾವನೆಯನ್ನು ಹೊಂದಿದೆ. ನಾವು 83 ಅಲ್ಲಿ ಕ್ರಿಕೆಟ್ ನಡೆಯಬೇಕಾದರೆ ಚಿಕ್ಕವರಾಗಿದ್ದೆವು. ನಮಗೂ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿತ್ತು. ಆದರೆ ಆಗ ನಮ್ಮ ಭಾಷೆಯಲ್ಲಿ ಕ್ರಿಕೆಟ್ ಇರಲಿಲ್ಲ. ನಮಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಕಾಲೇಜಿಗೆ ಬಂದಾಗ ತಿಳಿಯಿತು ಎಂದರು. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ
ನಮಗೆ ಆಟದ ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು ಎಂದು ಅಷ್ಟೇ ಗೊತ್ತು. ಅದಕ್ಕೆ ಅವರು ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಈಗ ಇವರೆಲ್ಲರ ಕಷ್ಟದಿಂದ ನಮ್ಮ ಕ್ರಿಕೆಟ್ ತಂಡ ವರ್ಷಕ್ಕೆ ಕೋಟಿ ರೂ. ದುಡಿಯುತ್ತಾರೆ. ಅದಕ್ಕೆಲ್ಲ ಇವರ ಪ್ರತಿಫಲ, ಶ್ರಮವೇ ಕಾರಣ ಎಂದು ವೇದಿಕೆ ಮೇಲಿದ್ದ ಗಣ್ಯರನ್ನು ಅಭಿನಂದಿಸಿದರು.
ಈ ಸಿನಿಮಾ ಬಾರಿ ಒಂದು ವಲ್ಡ್ ಕಪ್ ನ ಸ್ಟೋರಿಯಲ್ಲ. ಬದಲಿಗೆ ಇಡೀ ಭಾರತದ ಕ್ರಿಕೆಟ್ ತಂಡದ ಗುರಿಯೇ ಬದಲಾದ ಒಂದು ಕಥೆಯಾಗಿದೆ. ಅದನ್ನೆಲ್ಲ ಮಾಡಿದವರು ಈ ಗಣ್ಯರು. ನಾವು ಅದನ್ನೆಲ್ಲ ನೋಡಿಲ್ಲ, ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇವತ್ತು ನಮ್ಮ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸವಲತ್ತು ಎಲ್ಲ ಇವರ ಪ್ರತಿಫಲ ಎಂದು ಪ್ರಶಂಸಿದರು.
ಈ ವೇಳೆ ರಣವೀರ್ ಬಗ್ಗೆ ಮಾತನಾಡಿದ ಅವರು, 83ರ ವಿಶ್ವಕಪ್ ಸಮಯದಲ್ಲಿ ಯಾರು ಇರಲಿಲ್ಲ. ಆದರೆ ಅದನ್ನು ಮತ್ತೆ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಅವರು ನಮ್ಮ ದೇಶಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂದು ತಿಳಿಸುವುಕ್ಕಾಗಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಈ ಸಿನಿಮಾ ನಮ್ಮ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾವಾಗಿದೆ ಎಂದು ಖುಷಿಪಟ್ಟರು. ಈ ಸಿನಿಮಾ ಮೂಲಕ 83 ಕ್ರಿಕೆಟ್ ಸಮಯದಲ್ಲಿ ಏನು ನಡೆದಿತ್ತು ಎಂಬುದು ನಮ್ಮ ಮುಂದೆ ಬರುತ್ತೆ. ಅದು ರಣವೀರ್ ಕ್ರಿಕೆಟರ್ ಆಗಿ ನಮ್ಮ ಮುಂದೆ ಬರುತ್ತಾರೆ. ಸಿನಿಮಾ ಮುಗಿಯುವಾಗ ರಣವೀರ್ ನಮ್ಮ ಕಣ್ಣಮುಂದೆ ಇರುತ್ತಾರೆ. ಅದಕ್ಕೆ ಇವರು ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾರೆಸ ಎಂದು ಅವರ ಶ್ರಮದ ಬಗ್ಗೆ ವಿವರಿಸಿದರು.
ಬೆಂಗಳೂರು: ಚಂದನವನದ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಸೋಶಿಯಲ್ ಮಿಡಿಯಾದಲ್ಲಿ ಒಬ್ಬರನೊಬ್ಬರು ಕಾಲೆಳೆದುಕೊಂಡಿದ್ದಾರೆ.
ರಾಧಿಕಾ ಇನ್‍ಸ್ಟಾಗ್ರಾಮ್ ನಲ್ಲಿ ಅವರು ಫಿಲ್ಮಿ ಸ್ಟೈಲ್‍ನಲ್ಲಿ ಕೊದಲನ್ನು ಹಾರಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಹೇರ್ ಕಮರ್ಷಿಯಲ್ ಅಲ್ಲ. ಕ್ಯಾಮೆರಾಮನ್ ಇದನ್ನು ಉಚಿತವಾಗಿ ಸೆರೆಹಿಡಿಯಲು ಮುಂದಾದಾಗ ನಾನು ಫಿಲ್ಮಿ ಸ್ಟೈಲ್ ನಲ್ಲಿ ಪೋಸ್ ಕೊಟ್ಟೆ ಎಂದು ಬರೆದು ಶೇರ್ ಮಾಡಿದರು.
ಈ ಪೋಸ್ಟ್ ನೋಡಿದ ಯಶ್, ಹೌದು, 45 ಟೇಕ್ ಆದ ನಂತರ ನನಗೆ ಈ ವೀಡಿಯೋಗೆ ಚಾರ್ಜ್ ಮಾಡುವ ಇಚ್ಛೆ ಅಥವಾ ಶಕ್ತಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇವರಿಬ್ಬರ ಈ ಮುದ್ದು ಜಗಳ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ನಿಮ್ಮಂದು ಕ್ಯೂಟ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ರಾಧಿಕಾ ಇನ್‍ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಬರೆದು, ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ, ಯಾರಾದರೂ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ ನೀವು ಧೈರ್ಯಶಾಲಿ ಸಂತೋಷದ ವ್ಯಕ್ತಿಯಾಗಿರುತ್ತೀರಿ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ ಎಂದು ಬರೆದು ಯಶ್ ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದರು.
ನಂತರ ಯಶ್ ಜೊತೆಗೆ ಆ್ಯನಿವರ್ಸರಿ ಸೆಲೆಬ್ರೆಷನ್ ನಲ್ಲಿ, ಛೆ.. ಯಶ್ ಜೊತೆಗೆ ನಾನು ಸೆಲ್ಫಿ ತೆಗೆದುಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದೇನೆ. ಈಗ ನಮಗೆ ಟಾಸ್ಕ್‍ಮಾಸ್ಟರ್ ಯಾರೆಂದು ತಿಳಿದಿದೆ ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್
ಬೆಂಗಳೂರು: ಚಂದನವನದ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇಂದು 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ರಾಧಿಕಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಬರೆದು, ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ, ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಮತ್ತೆ ತಳ್ಳುವವರು, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ, ನೀವು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತೆ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ ಎಂದು ಬರೆದು ಯಶ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
ಇನ್‍ಸ್ಟಾದಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್ ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದು, ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಯಶ್ ಗೆ ಅರ್ಪಿಸಿದ್ದಾರೆ. ಈ ಸಾಲುಗಳ ಮೂಲಕ ಯಶ್ ನನಗೆ ಎಷ್ಟು ಪರ್ಫೆಕ್ಟ್ ಜೋಡಿ ಎಂದು ಹೇಳಿದ್ದಾರೆ.
ಈ ಜೋಡಿ ಚಂದನವನದ ರಾಕಿಂಗ್ ಜೋಡಿಯಾಗಿದ್ದು, ಇವರ ಕುಟುಂಬ ಎಲ್ಲರಿಗೂ ಆಕರ್ಷಣೆಯ ಕೇಂದ್ರವಾಗಿರುತ್ತೆ. ಇವರ ಪ್ರತಿಯೊಂದು ಅಪ್ಡೇಟ್ ಗಳನ್ನು ಅಭಿಮಾನಿಗಳು ಕೇಳಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ಜೋಡಿ ಸಿನಿಮಾದಲ್ಲಿಯೂ ಸೂಪರ್ ಹಿಟ್ ಆಗಿದ್ದು, ನಿಜ ಜೀವನದಲ್ಲಿಯೂ ವೈಯಕ್ತಿಕ ಜೀವನದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ
ಈ ಜೋಡಿ 2016ರ ಡಿಸೆಂಬರ್ 9 ರಂದು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಐರಾ’ ಎಂದು ಹೆಸರಿಟ್ಟರು. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಆ ಮಗುವಿಗೆ ‘ಯಥರ್ವ್’ ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ.