Tag: ಚಂದನವನ

  • ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್

    ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್

    ಚಂದನವನದ ಚುಟು ಚುಟು ಖ್ಯಾತಿಯ ಆಶಿಕಾ ರಂಗನಾಥ್ ಬಹುಬೇಡಿಕೆಯಲ್ಲಿ ಇರುವಾಗಲೇ ಮದುವೆ ಆಗುತ್ತಿರುವ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನಟನೆ, ಡಾನ್ಸ್ ಮೂಲಕ ಹೆಚ್ಚು ಫೇಮಸ್ ಆದ ಇವರು, ಕಡಿಮೆ ಸಮಯದಲ್ಲಿಯೇ ಹೆಚ್ಚು ಅಭಿಮಾನಿ ಬಳಗ ಪಡೆದುಕೊಂಡರು. ಆದರೆ ಈಗ ಆಶಿಕಾ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.

    ಇಷ್ಟು ಬೇಗ ಆಶಿಕಾ ಅವರಿಗೆ ಕಂಕಣ ಭಾಗ್ಯ ಕೂಡಿಬಂತಾ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೌದು, ಆಶಿಕಾ ಇದೇ ವರ್ಷವೇ ಮದುವೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಈ ಕುರಿತು ಅವರೇ ಅಧಿಕೃತವಾಗಿ ಸ್ವಲ್ಪದಿಗಳಲ್ಲಿ ತಿಳಿಸುತ್ತಾರೆ ಎಂದು ಅವರ ಆಪ್ತ ಬಳಗದಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಆಶಿಕಾ ಕೈ ಹಿಡಿಯುವ ಅದೃಷ್ಟವಂತ ಹುಡುಗ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆಶಿಕಾ ಮನೆಯವರೇ ನೋಡಿದ ಹುಡುಗನ ಜತೆ ಚುಟುಚುಟು ಹುಡುಗಿ ಹಸೆಮಣೆ ಏರಲಿದ್ದಾರೆ ಎನ್ನುವುದು ಅಸಲಿ ಕಹಾನಿ. ಹುಡುಗ ಬ್ಯುಸಿನೆಸ್ ಮ್ಯಾನ್ ಆಗಿರುವುದು ಇನ್ನೂ ಲೆಟೆಸ್ಟ್ ನ್ಯೂಸ್.

    ಈ ಹುಡುಗ ಆಶಿಕಾ ಕುಟುಂಬಕ್ಕೆ ತುಂಬಾ ಪರಿಚಯವಿದ್ದ ಹಿನ್ನೆಲೆ ಕುಟುಂಬದವರೇ ಆಗಿದ್ದಾರೆ. ಹಾಗಾಗಿ ಹುಡುಗನನ್ನು ನೋಡಿ ಮಾತುಕತೆ ಮಾಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಹುಡುಗನ ಹೆಸರು ಮತ್ತು ಮದುವೆ ದಿನಾಂಕ ಸದ್ಯದಲ್ಲೇ ತಿಳಿಸಲಿದೆ ಆಶಿಕಾ ಕುಟುಂಬ. ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ಮೊದಲು ಈ ಜೋಡಿಯ ನಿಶ್ವಿತಾರ್ಥ ನೆರವೇರಲಿದ್ದು, ನಂತರ ವಿಜೃಂಭಣೆಯಿಂದ ಮದುವೆ ನಡೆಯಲಿದೆ. ಇದೇ ಡಿಸೆಂಬರ್ ನಲ್ಲಿ ಆಶಿಕಾ ಅವರ ನಿಶ್ವಿತಾರ್ಥ ಫಿಕ್ಸ್ ಆಗುವ ಸಾಧ್ಯತೆ ಇದೆ.

  • ಡಿಂಪಲ್ ಕ್ವೀನ್‍ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್

    ಡಿಂಪಲ್ ಕ್ವೀನ್‍ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್

    ಚಂದನವನದ ಎವರ್‌ಗ್ರೀನ್ ಹೀರೋಹಿನ್ ರಮ್ಯಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಸಿನಿ ತಾರೆಯರಿಗೆ ಮೆಚ್ಚುಗೆಯ ಮಾತುಗಳಾನ್ನಾಡಿ ಪ್ರೋತ್ಸಾಹಿಸುತ್ತಿದ್ದಾರೆ. ಕನ್ನಡದ ಎಲ್ಲ ಸಿನಿಮಾಗಳ ಪೋಸ್ಟರ್ ತಮ್ಮ ಪ್ರೋಫಲ್‍ನಲ್ಲಿ ಹಾಕಿಕೊಂಡು ಅಭಿಮಾನಿಗಳಿಗೆ ಸಿನಿಮಾ ನೋಡಲು ಪ್ರೋತ್ಸಾಹಿಸುವ ಈ ನಟಿ ಇಂದು ಚಂದನವನದ ಡಿಂಪಲ್ ಕ್ವೀನ್ ಫೋಟೋಗೆ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

    ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್‍ವುಡ್ ಬ್ಯುಸಿ ನಟಿಯರಲ್ಲಿ ಒಬ್ಬರು. ಸ್ಯಾಂಡಲ್‍ವುಡ್‍ನಲ್ಲಿ ನಮ್ಮದೇ ಛಾಪು ಮೂಡಿಸಿ ಕನ್ನಡಿಗರ ಮನೆ ಮಗಳಾಗಿರುವ ಈ ನಟಿಗೆ ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹೊಗಳಿಕೆಯ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್‌ ನಲ್ಲಿ ರಚಿತಾ ರಾಮ್, ಇದು ಮಿಂಚುವ ಕಾಲ ಎಂದು ಬರೆದು ಸಾಂಪ್ರದಾಯಿಕ ಸೀರೆಯುಟ್ಟು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದು, ಇದರಲ್ಲಿ ಮತ್ತೊಂದು ವಿಶೇಷತೆಗೆ ಈ ಪೋಸ್ಟ್‌ ಸುದ್ದಿಯಾಗಿದೆ.  ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ರಚ್ಚು ಫೋಟೋ ನೋಡಿದ ಸ್ಯಾಂಡಲ್‍ವುಡ್ ಕ್ವಿನ್ ರಮ್ಯಾ, ಸುಂದರಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ನೋಡಿದ ಅಭಿಮಾನಿಗಳು, ಸ್ಯಾಂಡಲ್‍ವುಡ್ ಕ್ವಿನ್ ನೀವು. ಸಾವಿರಾರು ಜನರು ಬರಬಹುದು ಮತ್ತು ಹೋಗಬಹುದು ಆದರೆ ನೀವು ನಮಗೆ ಕ್ವಿನ್. ಕಿಚ್ಚ ಬಾಸ್ ಜೊತೆ ಮತ್ತೆ ಯಾವಾಗ ನಟಿಸುತ್ತೀರಿ ಎಂದು ಅಭಿಮಾನಿಗಳು ರಮ್ಯಾ ಅವರನ್ನು ಪ್ರೆಶ್ನೆ ಕೇಳಿದ್ದಾರೆ.

    ಕನ್ನಡಿಗರ ಎವರ್‌ಗ್ರೀನ್ ಹೀರೋಹಿನ್ ಆಗಿರುವ ರಮ್ಯಾ ಮತ್ತೆ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದು, ಅವರು ಯಾವ ಸಿನಿಮಾ ಮಾಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಮ್ಯಾ ಮಾತ್ರ ಇಲ್ಲಿವರೆಗೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಇದನ್ನೂ ಓದಿ: ಅಪ್ಪ-ಮಗನ್ನ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳ ಕಾತರ : ‘ಆಚಾರ್ಯ’ದಲ್ಲಿ ಒಂದಾದ ಮಗಧೀರ ಜೋಡಿ

  • ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’  ಟೀಸರ್ ಏಪ್ರಿಲ್ 2 ರಂದು ರಿಲೀಸ್ ಆಗುತ್ತಿದೆ.

    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬೀನೇಷನ್‍ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ‘ವಿಕ್ರಾಂತ್ ರೋಣ’. ಈ ಸಿನಿಮಾದ ಅಪ್ಡೇಟ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಸ್ಟಾರ್ ಜೋಡಿಯ ಸಿನಿಮಾ ಹೇಗೆ ಇರುತ್ತೆ ಎಂದು ಉತ್ಸಾಹದಲ್ಲಿ ಇದ್ದಾರೆ. ಮಂಗಳವಾರ(ಇಂದು) ಅನೂಪ್ ಭಂಡಾರಿ ಅವರು ‘ವಿಕ್ರಾಂತ್ ರೋಣ’ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಟ್ವಿಟ್ಟರ್‍ನಲ್ಲಿ ಅನೂಪ್, ಅಂನೌನ್ಸಿನ್ಗ್ ದಿ ಅರೈವಲ್ ಆಫ್ ದಿ ಡೆವಿಲ್! ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಏಪ್ರಿಲ್ 2ರಂದು 9:55ಕ್ಕೆ ರಿಲೀಸ್ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ರೀ-ಟ್ವೀಟ್ ಮಾಡಿದ್ದು, ನಮ್ಮ ಬಾಸ್, ನಮ್ಮ ಕಿಚ್ಚ ಎಂದು ಬರೆದುಕೊಂಡು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚನ ಅಪ್ಡೇಟ್‍ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಭಂಡಾರಿ ಅವರ ಟ್ವೀಟ್ ನೋಡಿ ಫುಲ್ ಖುಷ್ ಆಗಿದ್ದಾರೆ. ಇದನ್ನು ಕಿಚ್ಚ ಸಹ ಶೇರ್ ಮಾಡಿಕೊಂಡಿದ್ದಾರೆ. ಕಿಚ್ಚನನ್ನು ತೆರೆಮೇಲೆ ನೋಡಬೇಕೆಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ.

    ‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದರಿಂದ, ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ ಈ ಸಿನಿಮಾವನ್ನು 2ಡಿ ಮತ್ತು 3ಡಿಯಲ್ಲಿ ತಯಾರಾಗಿರುವುದು ಮತ್ತೊಂದು ವಿಶೇಷ. ಏಕಕಾಲಕ್ಕೆ ಹಾಲಿವುಡ್ ಮತ್ತು ಭಾರತೀಯ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

  • ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಗತ್ತೇ ತಿರುಗಿನೋಡುವಂಥಹ ಸಿನಿಮಾ ಕೊಟ್ಟ ಕೆಜಿಎಫ್ ಮೇಲೆ ಇಡೀ ದೇಶದ ದೃಷ್ಟಿ ಇದೆ. ಕನ್ನಡ ಮೂಲದ ಚಿತ್ರವಾದ್ದರಿಂದ ಕನ್ನಡ ನೆಲದಲ್ಲೇ ಕೆಜಿಎಫ್ ಅನಾವರಣ ಮಾಡಲಾಗಿದೆ. ವಿಶೇಷ ಅಂದ್ರೆ ಈ ಅದ್ದೂರಿ ಕಾರ್ಯಕ್ರಮವನ್ನ ನಟ, ನಿರ್ದೇಶಕ, ನಿರೂಪಕ ಕರಣ್ ಜೋಹರ್ ನಿರೂಪಣೆ ಮಾಡಿದ್ದಾರೆ.

    ಬೆಂಗಳೂರಿನ ಓರಾಯನ್ ಮಾಲ್‍ನಲ್ಲಿ ನಡೆದ ಅದ್ದೂರಿ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಇಡೀ ದೇಶದ ಸುದ್ದಿ ವೃಂದವನ್ನು ಕರೆಸಿಕೊಂಡಿತ್ತು ಕೆಜಿಎಫ್ ಚಿತ್ರತಂಡ. ಚಿತ್ರದ ಬಿಗ್ ತಾರಾಗಣದ ಜೊತೆ ಪ್ಯಾನ್ ಇಂಡಿಯಾ ಪತ್ರಕರ್ತರ ಸಮ್ಮುಖದಲ್ಲಿ ಕೆಜಿಎಫ್ ಪಾರ್ಟ್ 2 ಟ್ರೈಲರ್ ಅನಾವರಣಗೊಂಡಿದೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಗಿದೆ. ಐದು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದು ರಾಕಿ ಫ್ಯಾನ್ಸ್ ನಿರೀಕ್ಷೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಯ್ತು.

    ಒದೊಂದೂ ಭಾಷೆಯಲ್ಲೂ ಆಯಾ ಸೂಪರ್ ಸ್ಟಾರ್‌ಗಳು ಡಿಜಿಟಲ್ ರಿಲೀಸ್ ಉಸ್ತುವಾರಿಯನ್ನ ವಹಿಸಿಕೊಂಡ್ರು. ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ರಾಮ್‍ಚರಣ್ ತೇಜ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ಹಿಂದಿಯಲ್ಲಿ ಫರಾನ್ ಅಖ್ತರ್ ಸೇರಿದಂತೆ ದೊಡ್ಡ ದೊಡ್ಡ ಕೈಗಳು ಕೆಜಿಎಫ್ ಸ್ಯಾಂಪಲ್‌ನನ್ನು ಅನಾವರಣಗೊಳಿಸಿದ್ರು.

    ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರುವ ಕೆಜಿಎಫ್ 2 ಚಿತ್ರದ ಟೀಸರ್ ಹಾಗೂ ಹಾಡೊಂದು ರಿಲೀಸ್ ಆಗಿದ್ದು ಬಿಟ್ಟರೆ ಪಾರ್ಟ್ 2 ಬಗೆಗಿನ ಚಿಕ್ಕ ಸುಳಿವೂ ಇದುವರೆಗೆ ಇರಲಿಲ್ಲ. ಆ ಕುತೂಹಲವನ್ನ ಹಾಗೇ ಕಾಯ್ದಿರಿಸಿಕೊಂಡಿದ್ದ ಚಿತ್ರತಂಡ ರಿಲೀಸ್‍ಗೆ ಕೆಲವೇ ದಿನಗಳ ಮುಂಚೆ ಈಗ ಆಫಿಷಿಯಲ್ ಟ್ರೈಲರ್ ಲಾಂಚ್ ಮಾಡಿದೆ.

    ಅನಾಥ ಹುಡುಗನೊಬ್ಬ ಮುಂಬೈಗೆ ತೆರಳಿ ಗ್ಯಾಂಗ್‍ಸ್ಟರ್ ಆಗ್ತಾನೆ. ಒಂದು ಡೀಲ್‍ಗಾಗಿ ಬೆಂಗಳೂರಿಗೆ ಬರುವ ಹೀರೋ ಅಲ್ಲಿ ತನ್ನ ನಿರೀಕ್ಷೆಯ ಸಾಮ್ರಾಜ್ಯ ಕಟ್ಟಿಕೊಳ್ಳಲು ಪ್ರಾಣ ಒತ್ತೆಯಿಟ್ಟು ಯುದ್ಧ ಗೆದ್ದು ಯಶಸ್ವಿಯಾಗ್ತಾನೆ. ರಾಕಿ ಜೀವನ ಅಧ್ಯಾಯದ ಎರಡನೇ ಪುಟ ಇದೀಗ ತೆರೆದುಕೊಂಡಿದೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್: ಮಲಯಾಳಂನಲ್ಲಿ ಪೃಥ್ವಿರಾಜ್, ಹಿಂದಿಯಲ್ಲಿ ಫರಾನ್ ಅಖ್ತರ್ ರಿಲೀಸ್

    ಈ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದರು. ಒಂದೇ ಕಾರ್ಯಕ್ರಮದಲ್ಲಿ ರಾಕಿಬಾಯ್ ಮತ್ತು ಮುನ್ನಬಾಯ್ ಒಂದಾಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ಸೇರಿಕೊಂಡಿತು. ಈ ಅದ್ದೂರಿ ಕಾರ್ಯಕ್ರಮಕ್ಕೆ ಚಂದನವನದ ಅನೇಕ ಗಣ್ಯರು ಭಾಗಿಯಾಗಿದ್ದು, ಟಾಲಿವುಡ್ ಮತ್ತು ಬಾಲಿವುಡ್ ಸಿನಿತಾರೆಯರು ಭಾಗಿಯಾಗಿದ್ದರು.

     

  • ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಚಂದನವನದ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಿನಿರಸಿಕರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಮೊದಲ ಸಿನಿಮಾದಲ್ಲೇ ಸಾಮಾಜಿಕ ಕಳಕಳಿ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಗೆದ್ದುಬಂದಿದ್ದರು. ಈ ನಟ ಹೆಚ್ಚು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿದ್ದರಿಂದ ಅವರ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ  ಅಭಿಮಾನಿಗಳು ಇದ್ದಾರೆ. ವಿಜಯ್ ಅವರು ದೈಹಿಕವಾಗಿ ಇಲ್ಲದಿದ್ದರೂ, ಅವರು ಮಾಡಿರುವ ಪಾತ್ರಗಳ ಬಗ್ಗೆ ಸಿನಿರಸಿಕರು ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟಿ ಸಂಚಾರಿ ವಿಜಯ್ ಅವರ ‘ತಲೆತಂಡ’ ಸಿನಿಮಾವನ್ನು ನೆನೆದು, ಅವರನ್ನು ಹಾಡಿ ಹೊಗಲಿದ್ದಾರೆ.

    ಹೀರೋ ಎಂದರೆ ಕಮರ್ಷಿಯಲ್ ಸಿನಿಮಾಗಳನ್ನೆ ಹೆಚ್ಚು ಮಾಡಬೇಕು ಎನ್ನುವ ಕಾಸ್ಸೆಪ್ಟ್ ಇಟ್ಟುಕೊಳ್ಳದೆ ಸಮಾಜಕ್ಕೆ  ಸಂದೇಶ ಸಾರುವ ಪಾತ್ರಗಳನ್ನೆ ವಿಜಯ್ ಹೆಚ್ಚು ಮಾಡಿದ್ದಾರೆ. ಭಿನ್ನ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ಮೂಲತಃ ರಂಗಭೂಮಿ ಕಲಾವಿದ. ಶಿಸ್ತಿನ ಮಾತು, ನಡೆ, ನುಡಿಯಿಂದ ಚಿತ್ರರಂಗದಲ್ಲಿ ಭಿನ್ನ ಛಾಪು ಮೂಡಿಸಿದ ನಟ ಇವರು. ಈ ಹಿನ್ನೆಲೆ ಅವರು ಮಾಡಿದ್ದು ಕಡಿಮೆ ಸಿನಿಮಾವಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆ ವಿಜಯ್ ಕುರಿತು ಮಮ್ಮುಟ್ಟಿ ಮೆಚ್ಚುಗೆಯ ಮಾತುಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ಅವರು ‘ತಲೆತಂಡ’ ಸಿನಿಮಾ ಪೋಸ್ಟರ್ ಪೋಸ್ಟ್ ಮಾಡಿದ್ದು, ನಾನು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಇದ್ದೆ. ಅವರು ಪ್ರಸ್ತುತ ನಮ್ಮ ಜೊತೆ ಇಲ್ಲ ಎಂಬುದನ್ನು ನಾನು ನಂಬುವುದಿಲ್ಲ. ನಾವಿಬ್ಬರು ಹೈದರಾಬಾದ್‍ನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆವು. ಈ ವೇಳೆ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಅದನ್ನು ಕೇಳಿಸಿಕೊಂಡು ನಾನು ಧನ್ಯವಾಗಿದ್ದೆ. ಈ ವೇಳೆ ಅವರು ನನಗೆ ‘ತಲೆದಂಡ’ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ ಎಂದಿದ್ದರು. ಆದರೆ ಇದೇ ಅವರ ಕೊನೆ ಸಿನಿಮಾವಾಗುತ್ತೆ ಎಂದು ಯಾರಿಗೆ ಗೊತ್ತಿತ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ

    ಚಿತ್ರಮಂದಿರದಲ್ಲಿ ವಿಜಯ್ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

  • ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ

    ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ

    ಹುಭಾಷಾ ನಟಿ ಹರಿಪ್ರಿಯಾ ತಮ್ಮ ಮುದ್ದು ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ನಟನೆ ಜೊತೆಗೆ ಪ್ರಾಣಿಗಳ ಮೇಲೆ ಹೆಚ್ಚು ಕಾಳಜಿ ಇರುವ ಈ ನಟಿ ತಮ್ಮ ಮನೆಗೆ ಹೊಸದಾಗಿ ತಂದಿರುವ ಮುದ್ದು ಸದಸ್ಯನನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

    ಪ್ರಾಣಿಗಳ ಜೊತೆ ಮನುಷ್ಯರ ಸಂಬಂಧ ಮೀರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸ್ಪಂದಿಸುವ ಜೀವಗಳಾಗಿ ಈ ಮುದ್ದು ಪ್ರಾಣಿಗಳು ಮನುಷ್ಯರಲ್ಲಿ ಬೆರೆತು ಹೋಗಿರುತ್ತೆ. ಇದಕ್ಕೆ ಹರಿಪ್ರಿಯಾ ಸಹ ಹೊರತಲ್ಲ. ಅವರು ಎಲ್ಲೇ ಹೋದರು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾ ಇರುತ್ತಾರೆ. ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

    ಈ ನಟಿ ತಮ್ಮ ಮನೆಗೆ ಹೊಸದಾಗಿ ಸೇರುತ್ತಿರುವ ಮುದ್ದು ಸದಸ್ಯನ ಬಗ್ಗೆ ಟ್ವಟ್ಟರ್‌ನಲ್ಲಿ, ಕ್ರಿಸ್ಟಲ್‍ನನ್ನು ಮೀಟ್ ಮಾಡಿ. ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ. 3.5 ತಿಂಗಳ ವಯಸ್ಸಿನ ನೀಲಿ ಕಣ್ಣಿನ ಹಸ್ಕಿ. ನಾನು ನನ್ನ ಲಕ್ಕಿಯನ್ನು ಕಳೆದುಕೊಂಡ ನಂತರ, ನಮ್ಮ ಮನೆಗೆ 2 ತಿಂಗಳ ಹಿಂದೆ ಸರ್ಪ್ರೈಸ್ ಗಿಫ್ಟ್ ಆಗಿ ಇವನು ಬಂದನು. ನಾನು ಮತ್ತೆ ನಿಮಗೆ ಲಕ್ಕಿಯನ್ನು ಭೇಟಿ ಮಾಡಿಸುತ್ತಿದ್ದೇನೆ. ಏಕೆಂದರೆ ಲಕ್ಕಿ ಕೂಡ ಡಿಸೆಂಬರ್ 6 ರಂದು ಜನಿಸಿದ್ದು, ಕ್ರಿಸ್ಟಲ್ ಸಹ ಅದೇ ದಿನ ಜನಿಸಿದ್ದಾನೆ. ನಿಮ್ಮ ಆಶೀರ್ವಾವಾದವನ್ನು ಕ್ರಿಸ್ಟಲ್‍ಗೆ ನೀಡಿ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಈ ಫೋಟೋದಲ್ಲಿ ಮುದ್ದು ಹಸ್ಕಿ ಕ್ಯಾಮರಾ ಕಡೆ ನೋಡುತ್ತಿದ್ದು, ಮುದ್ದಾಗಿ ಕಾಣಿಸುತ್ತಿದೆ. ಹರಿಪ್ರಿಯಾ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳ ಜೊತೆ ಕಾಲಕಳೆಯುವ ವೀಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಲ್ಲದೆ ಶಿವರಾತ್ರಿ ಸಮಯದಲ್ಲಿ ಉಡುಪಿ ಮಠಕ್ಕೆ ಹೋಗಿದ್ದ ಈ ನಟಿ ಆನೆಗಳ ಜೊತೆ ಸಮಯ ಕಳೆದಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಹರಿಪ್ರಿಯಾ ತಮ್ಮ ಬೋಲ್ಡ್ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು ಪ್ರಸ್ತುತ ಯಾವುದೇ ಹೊಸ ಸಿನಿಮಾಗಳನ್ನು ಘೋಷಣೆ ಮಾಡಿಲ್ಲ.

  • ಉಪ್ಪಿ, ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿದೆ ಭೂಗತಲೋಕ

    ಉಪ್ಪಿ, ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿದೆ ಭೂಗತಲೋಕ

    ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗೆ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಪ್ಪಿ ಮತ್ತು ವರ್ಮಾ ಇಬ್ಬರು ಭಿನ್ನವಾಗಿ ಸಿನಿಮಾ ತೋರಿಸುವುದಲ್ಲಿ ಫೇಮಸ್. ಈಗ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುತ್ತಿರುವುದಕ್ಕೆ ಸಿನಿರಂಗದಲ್ಲಿ ಭಾರೀ ಸದ್ದು ಮಾಡಿದೆ. ಈ ಕುರಿತು ವರ್ಮಾ ಅವರು ಖುದ್ದಾಗಿ ಅನೌನ್ಸ್ ಮಾಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಟ್ಟರ್‌ನಲ್ಲಿ, ನನ್ನ ಮುಂದಿನ ಸಿನಿಮಾ ಉಪೇಂದ್ರ ಜೊತೆ ಮಾಡುತ್ತಿದ್ದೇನೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ವಿಸ್ಮಯಕಾರಿಯಾಗಿ ವಿಶಿಷ್ಟವಾದ ದರೋಡೆಕೋರನನ್ನು ಆಧರಿಸಿ ‘ಆರ್’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಇದನ್ನು ಎ ಸ್ವ್ಕೇರ್ ಪ್ರೋಡಕ್ಷನ್ಸ್ ನಿರ್ಮಿಸಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ರಾಮ್ ಗೋಪಾಲ್ ವರ್ಮಾ ಅವರು ಶೇರ್ ಮಾಡಿರುವ ‘ಆರ್’ ಸಿನಿಮಾದ ಒಂದೆರಡು ಗ್ಲಿಂಪ್‌ಗಳನ್ನು ಹಾಕಿದ್ದು, ಅದರಲ್ಲಿ ಉಪ್ಪಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವೀಡಿಯೋದಲ್ಲಿ, ಉಪೇಂದ್ರ ಚಾಕುವಿನಿಂದ ತನ್ನ ಬೆರಳುಗಳನ್ನು ಹುಜ್ಜುವುದು, ನಂತರ ಅದನ್ನು ಚುಂಬಿಸುವುದನ್ನು ಕಾಣಬಹುದು. ಈ ಗ್ಲಿಂಪ್‍ಗಳು ವಿಶಿಷ್ಟವಾದ ಖಉಗಿ ಶೈಲಿಯಲ್ಲಿವೆ.

    ಈ ಸಿನಿಮಾದಲ್ಲಿ ಉಪೇಂದ್ರ ಅವರು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಮುಂಬೈನ ಮಾಫಿಯಾ ಮತ್ತು ದುಬೈನ ಡಿ ಕಂಪನಿಯನ್ನು ಹೆದರಿಸುವ ಭಯಾನಕ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ‘ಆರ್ ಡೇರ್‍ಡೆವಿಲ್’ ಅತ್ಯಂತ ಯಶಸ್ವಿ ದರೋಡೆಕೋರ.

    Why Ram Gopal Varma would not wish his own mom on Mother's Day: 'Gave birth to a good for nothing bum like me' | Bollywood - Hindustan Times

    ಉಪ್ಪಿ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಕಾಂಬಿನೇಷನ್ ಮೂಡಿಬರುತ್ತಿರುವ ಈ ಸಿನಿಮಾಗೆ ‘ಆರ್’ ಎಂದು ಹೆಸರು ಕೊಟ್ಟಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಸ್ಟಾರ್ ಜೋಡಿ ಸಿನಿರಸಿಕರನ್ನು ಯಾವ ರೀತಿ ಕಮಾಲ್ ಮಾಡುತ್ತೆ ಎಂಬುದನ್ನು ಕಾದು ನೋಡಬೇಕು. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

  • RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ಡೀ ಭಾರತೀಯ ಚಿತ್ರರಂಗ ಕಾಯುತ್ತಿರುವ ಸಿನಿಮಾಗಳಲ್ಲಿ RRR ಮತ್ತು ಕೆಜಿಎಫ್ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಎರಡು ಸಿನಿಮಾ ನೋಡಬೇಕೆಂದು ಸಿನಿರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ನಾಳೆಯೇ RRR ರಿಲೀಸ್ ಆಗಬೇಕಿರುವ ವೇಳೆಯೇ ಕರ್ನಾಟಕದಲ್ಲಿ ವಿರೋಧ ಎದುರಾಗುತ್ತಿದ್ದು, ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಕೆಜಿಎಫ್ ಸಿನಿಮಾಗೂ ಸಂಕಟ ಪ್ರಾರಂಭವಾಗಿದೆ.

    RRR ಸಿನಿಮಾ ರಿಲೀಸ್‍ಗೆ ಮಾಡುವುದಾಗಿ ಹೇಳಿದಾಗಿನಿಂದ ಒಂದಲ್ಲ ಒಂದು ವಿವಾದ ಬರುತ್ತಿದೆ. ಈ ಬೆನ್ನಲ್ಲೇ ಸಿನಿಮಾ ರಿಲೀಸ್‍ಗೆ ಕ್ಷಣಗಣನೇ ಪ್ರಾರಂಭವಾಗುತ್ತಿರುವ ಸಮಯದಲ್ಲಿ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

    ಬೇರೆ ಭಾಷೆಗಳ ಸಿನಿಮಾಗೆ ಅವಕಾಶಕೊಡಲು ನಮ್ಮ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಂದ ತೆಗೆದುಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಹೆಸರಿನಲ್ಲಿ ಕನ್ನಡ ಸಿನಿಮಾಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ RRR ಸಿನಿಮಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಾಯ್‍ಕಾಟ್ ಆಭಿಯಾನ ಪ್ರಾರಂಭ ಮಾಡಿದ್ದಾರೆ. ಕರ್ನಾಟಕದಲ್ಲಿ RRR ರಿಲೀಸ್ ಆಗುವುದು ಬೇಡ ಎಂದು ಟ್ವೀಟ್ ಮಾಡುತ್ತಿದ್ದಾರೆ.

    ಪರಿಣಾಮ RRR ಆಭಿಮಾನಿಗಳು, ಒಂದು ವೇಳೆ RRR ಸಿನಿಮಾಗೆ ಕರ್ನಾಟಕದಲ್ಲಿ ತೊಂದರೆ ಕೊಟ್ಟರೆ ಕೆಜಿಎಫ್ ಬ್ಯಾನ್ ಮಾಡಬೇಕಾಗುತ್ತೆ ಹುಷಾರ್ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

    ರೋಚಿಗೆದ್ದ RRR ಫಾನ್ಸ್
    RRR ಫ್ಯಾನ್ಸ್‌ಗೆ ಬಾಯ್‍ಕಾಟ್ ವಿಚಾರ ತಿಳಿದು ಆಕ್ರೋಶಗೊಂಡಿದ್ದಾರೆ. ಈ ಕುರಿತು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ, ಒಂದು ವೇಳೆ ‘RRR’ ಸಿನಿಮಾ ನೀವು ಬ್ಯಾನ್ ಮಾಡಿದ್ದೇ ಆದಲ್ಲಿ, ‘ಕೆಜಿಎಫ್ 2’ ರಿಲೀಸ್ ಹತ್ತಿರದಲ್ಲೇ ಇದೆ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ‘RRR’ ಕನ್ನಡ ವರ್ಷನ್‍ನಲ್ಲಿ ರಿಲೀಸ್ ಆಗುತ್ತಿಲ್ಲ ಅನ್ನೋದು ಚಿತ್ರತಂಡದ ಸಮಸ್ಯೆ ಅಲ್ಲ. ನೀವು ಈ ಸಮಸ್ಯೆಯನ್ನು ಚಿತ್ರತಂಡಕ್ಕೆ ಪ್ರಶ್ನೆ ಮಾಡುವುದು ಸರಿಯಲ್ಲ. ನಿಮ್ಮ ರಾಜ್ಯದ ಡಿಸ್ಟ್ರಿಬ್ಯೂಟರ್ ಜೊತೆ ಮಾತನಾಡಿ ಈ ಸಮಸ್ಯೆ ಬಗ್ಗೆ ಬಗೆಹರಿಸಿಕೊಳ್ಳಿ. ಅದು ಬಿಟ್ಟು ‘RRR’ ಸಿನಿಮಾಗೆ ತೊಂದರೆ ಮಾಡಬೇಡಿ. ಹಾಗೇನಾದರೂ ಆದರೆ, ‘ಕೆಜಿಎಫ್ 2’ ಸಿನಿಮಾಗೆ ನೀವು ಮಾಡಿದ ದುಪ್ಪಟ್ಟು ಡ್ಯಾಮೇಜ್ ಅನ್ನು ನಾವು ‘ಕೆಜಿಎಫ್ 2’ಗೆ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ʼಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    RRR ಸಿನಿಮಾ ಬಂದ್ರೆ ‘ಜೇಮ್ಸ್’ ಸಿನಿಮಾ ಎತ್ತಂಗಡಿ ಮಾಡುತ್ತಾರೆ ಎಂದು ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ‘RRR’ ಸಿನಿಮಾ ಬಾಯ್‍ಕಾಟ್ ಎಂಬ ಹೋರಾಟ ನಡೆಯುತ್ತಿದೆ. ಇದೀಗ ಈ ದ್ವೇಷದ ಕಿಡಿ ‘ಕೆಜಿಎಫ್ 2’ ಸಿನಿಮಾ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.

  • ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೇ ಜೊತೆಗೆ ಸರಳತೆಯಿಂದ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಪತಿ ರಾಕಿಂಗ್ ಸ್ಟಾರ್ ಯಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾದಲ್ಲಿ ಅಷ್ಟು ಕಾಣಿಸಿಕೊಳ್ಳದಿಂದ್ರೂ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಯಾವಾಗಲೂ ಕನೆಕ್ಟ್ ಆಗಿರುತ್ತಾರೆ. ಮದುವೆಯಾದ ನಂತರ ಇಬ್ಬರು ಸ್ಟಾರ್ ಕಪಲ್‍ಗಳು ಸಿನಿಮಾ ಜೊತೆಗೆ ಜನಸಾಮಾನ್ಯರಿಗೆ ಸಹಾಯವಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಇಂದು ಸಹ ರಾಧಿಕಾ ಎದೆಹಾಲನ್ನು ದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಎದೆಹಾಲು ದಾನ ಮಾಡಿ ಎಂದು ಸಂದೇಶ ಕೊಟ್ಟಿದ್ದಾರೆ.

    ಎದೆಹಾಲು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ಕುರಿತು ರಾಧಿಕಾ ವೀಡಿಯೋ ಮಾಡಿದ್ದು, ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋವನ್ನು ವೈದ್ಯರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ
    ಈ ವೀಡಿಯೋದಲ್ಲಿ ರಾಧಿಕಾ, ಜೀವನ ಅತ್ಯಮೂಲ್ಯ ಉಡುಗೊರೆಗಳಲ್ಲಿ ಎದೆಹಾಲು ಕೂಡ ಒಂದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಮತ್ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಆಗಷ್ಟೇ ಹುಟ್ಟಿರುವ ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ. ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿಯ ಗುಣಗಳು ಈ ಎದೆ ಹಾಲಿನಲ್ಲಿ ಮಾತ್ರ ಇದೆ ಎಂದು ತಿಳಿಸಿದ್ದಾರೆ.

    ಎದೆ ಹಾಲು ದಾನ ಮಾಡಿ
    ಎಳೆ ಮಕ್ಕಳಿಗೆ ಎದೆಹಾಲು ತುಂಬಾನೇ ಮುಖ್ಯ. ಭಾರತದಲ್ಲಿ ಅದೆಷ್ಟೋ ಮಕ್ಕಳು ಈ ಎದೆ ಹಾಲು ಸಿಗದೆ ವಂಚಿತರಾಗುತ್ತಾರೆ. ಇಂತಹವರಿಗಾಗಿ ಎದೆ ಹಾಲು ದಾನ ಮಾಡಿ ಎಂದು ಹೇಳಿದ್ದಾರೆ. ಅಂತಹ ಮಕ್ಕಳಿಗೆ ಸಹಾಯ ಮಾಡಲಿ ಅಂತಾನೇ ಮಿಲ್ಕ್ ಬ್ಯಾಂಕ್ ಶುರುಮಾಡಿದ್ದಾರೆ ಎಂದು ಮಿಲ್ಕ್ ಬ್ಯಾಂಕ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಯಾವ ತಾಯಂದಿರಲ್ಲಿ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಇದೆ. ಯಾವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು ಅಂತಹವರಿಂದ ತುಂಬಾನೇ ಸಹಾಯ ಆಗುತ್ತೆ. ನಿಮ್ಮ ಜಿಲ್ಲೆಗಳಲ್ಲಿ ಈ ಮಿಲ್ಕ್ ಬ್ಯಾಂಕ್ ಇರುತ್ತೆ. ಅಲ್ಲಿ ಬಂದು ನೀವು ಎದೆಹಾಲು ದಾನ ಮಾಡಿದರೆ, ಅದೆಷ್ಟೋ ಮಕ್ಕಳಿಗೆ ಸಹಾಯ ಆಗುತ್ತೆ ಎಂದು ಮಹತ್ವದ ಮಾಹಿತಿಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’ ‌

    ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಉದ್ದೇಶದಿಂದ ಮಾರ್ಚ್ 27 ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಭಾಗವಹಿಸುವಂತೆ ವೀಡಿಯೋ ಮೂಲಕ ಅಭಿಮಾನಿಗಳಿಗೆ ರಾಧಿಕಾ ಸಂದೇಶ ಕೊಟ್ಟಿದ್ದಾರೆ.

  • ‘ದಸರಾ’ ಟೈಟಲ್ ವಿವಾದ: ತೆಲುಗು ಚಿತ್ರದ ವಿರುದ್ಧ ಚಲನಚಿತ್ರ ಮಂಡಳಿ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

    ‘ದಸರಾ’ ಟೈಟಲ್ ವಿವಾದ: ತೆಲುಗು ಚಿತ್ರದ ವಿರುದ್ಧ ಚಲನಚಿತ್ರ ಮಂಡಳಿ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

    ಚಂದನವನದ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಪ್ರೊಡಕ್ಷನ್ ಹೌಸ್‍ನಲ್ಲಿ ನಿರ್ಮಾಣ ಮಾಡುತ್ತಿರುವ ‘ದಸರಾ’ ಸಿನಿಮಾ ಟೈಟಲ್‍ನನ್ನು ತೆಲುಗು ಸಿನಿಮಾ ಸಹ ಇಟ್ಟುಕೊಂಡಿದೆ. ಇದರಿಂದ ನಮ್ಮ ಸಿನಿಮಾಗೆ ತೊಂದರೆಯಾಗುವುದೆಂದು ಬೇಸರಗೊಂಡ ಚಿತ್ರತಂಡ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.

    ‘ದಸರಾ’ ಸಿನಿಮಾ ಮುಖ್ಯಪಾತ್ರದಲ್ಲಿ ಸತೀಶ್ ನೀನಾಸಂ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಪ್ರಸ್ತುತ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನೆಡೆಯುತ್ತಿದೆ. ಈ ವೇಳೆ ತೆಲುಗು ಸಿನಿಮಾ ‘ದಸರ’ ಹೆಸರಿನಲ್ಲಿ ಕಳೆದ ವಾರವಷ್ಟೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿತ್ತು. ತನ್ನ ಮೊದಲ ನಿರ್ಮಾಣದಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಶರ್ಮಿಳಾ ಬೇಸರಗೊಂಡಿದ್ದು, ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಈ ಮನವಿ ಪತ್ರದಲ್ಲಿ ಶರ್ಮಿಳಾ, ನಾನು ನನ್ನ ನಿರ್ಮಾಣದ ಮೊದಲ ಸಿನಿಮಾ ‘ದಸರ’ ಟೈಟಲ್ 2020 ರ ಸೆಪ್ಟೆಂಬರ್ ತಿಂಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದೆ. ಈಗ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ನಡುವೆ ಸುಧಾಕರ್ ಚೆರುಕುರಿ ಎಸ್‍ಎಲ್‍ವಿ ಬ್ಯಾನರ್ ಅಡಿಯಲ್ಲಿ ‘ದಸರ’ ಹೆಸರಿನ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ನಮ್ಮ ಸಿನಿಮಾದ ಹೆಸರನ್ನು ನಾವು ಈಗಾಗಲೇ ಬಹಿರಂಗಗೊಳಿಸಿದ್ದೇವೆ. ಅದೇ ಹೆಸರಿನಿಂದ ಸಿನಿಮಾದ ಪ್ರಚಾರ ಸಹ ಮಾಡಿದ್ದೇವೆ. ಈಗ ಅದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮ್ಮ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ. ನಮ್ಮ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ತೆಲುಗಿನ ನಿರ್ಮಾಪಕರು ತಮ್ಮ ಸಿನಿಮಾದ ಹೆಸರನ್ನು ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್ ವರ್ಷನ್‍ನಲ್ಲಿಯಾದರೂ ಬದಲಾಯಿಸುವಂತೆ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.

    ತೆಲುಗಿನ ‘ದಸರಾ’ ಸಿನಿಮಾದಲ್ಲಿ ನಟ ನಾನಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.