Tag: ಚಂದನವನ

  • ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಹುಭಾಷಾ ನಟಿ ಪ್ರಣಿತಾ ಸುಭಾಷ್ ತಾಯ್ತನದ ಆನಂದದಲ್ಲಿದ್ದು, ಪ್ರತಿಕ್ಷಣವನ್ನು ವಿಶೇಷ ಎಂಬಂತೆ ಕಳೆಯುತ್ತಿದ್ದಾರೆ. ತಾಯಿಯಾಗುತ್ತಿರುವ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ ಈ ನಟಿ ತಮ್ಮ ಅಪ್ಡೇಟ್‍ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಪ್ರಣಿತಾ, ತಮ್ಮ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಮ್ಮಂದಿರ ವಿಶೇಷ ದಿನವಾಗಿರುವುದರಿಂದ ಫೋಟೋವೊಂದನ್ನು ಶೇರ್ ಮಾಡಿ ತನ್ನ ಅಮ್ಮನನ್ನು ನೆನೆದಿದ್ದಾರೆ.

    ಕ್ಯೂಟ್ ಬೆಡಗಿ ಪ್ರಣಿತಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಇಂದು ಮತ್ತೊಂದು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ನಾವು ಮಾತೃತ್ವದ ಪ್ರಯಾಣವನ್ನು ಪ್ರಾರಂಭಿಸುವವರೆಗೂ ನಮ್ಮ ಅಮ್ಮಂದಿರು ನಮಗಾಗಿ ಎಷ್ಟು ತ್ಯಾಗ ಮಾಡಿದ್ದಾರೆಂದು ನಮಗೆ ತಿಳಿದಿರುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಣಿತಾ ಮುದ್ದಾಗಿ ಕಾಣುತ್ತಿದ್ದಾರೆ. ಇದನ್ನೂ ಓದಿ:  ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ: ಕಟೀಲ್ 

    ಈ ಸಾಲುಗಳನ್ನು ಓದಿದ ಅಭಿಮಾನಿಗಳು, ಇದು ಸತ್ಯ. ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಉಸಿರುಗಟ್ಟಿಸುವ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಪತಿ ನಿತಿನ್ ರಾಜು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ನಟಿ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಜೊತೆಗೆ ವರ್ಕೌಟ್ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದರು. ಈ ವೀಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

  • ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

    ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

    ಮಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೋಮವಾರ(ಇಂದು) ಮಂಗಳೂರಿಗೆ ಬಂದಿದ್ದರು. ದೇವಸ್ಥಾನವೊಂದರ ದರ್ಶನಕ್ಕೆ ಬಂದಿದ್ದ ಶಿವಣ್ಣ ಮಂಗಳೂರು ನಗರ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ನಗರದ ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವಣ್ಣ ಎಂಟ್ರಿಯಾಗುತ್ತಿದ್ದಂತೆ ‘ಟಗರು’ ಸಿನಿಮಾದ ಹಾಡಿನ ಮೂಲಕ ಶಿವಣ್ಣ ಅವರನ್ನು ಮಂಗಳೂರು ಪೊಲೀಸರು ಸ್ವಾಗತಿಸಿದರು. ಶಿವಣ್ಣನಿಗೆ ಪತ್ನಿ ಗೀತಾ ಶಿವರಾಜ್‍ಕುಮಾರ್ ಸಾಥ್ ನೀಡಿದರು. ಸಂವಾದಕ್ಕೂ ಮೊದಲು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಅಪ್ಪು ನೆನಪು ಮಾಡಿಕೊಂಡ ಶಿವಣ್ಣ ಭಾವುಕರಾದರು. ಬಳಿಕ ಪುನೀತ್ ಬಗ್ಗೆ ನೋವಿನ ನೆನಪು ಮಾಡಿಕೊಳ್ಳುವುದಕ್ಕಿಂತ ಅಪ್ಪುನ ಸೆಲೆಬ್ರೇಟ್ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್ 

    ಬಳಿಕ ನಡೆದ ಸಂವಾದದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಶಿವರಾಜ್‍ಕುಮಾರ್ ಉತ್ತರ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದಾಗ, ಪೊಲೀಸ್ ಪಾತ್ರದಲ್ಲಿ ‘ಟಗರು-2’ ಸಿನಿಮಾ ಮೂಲಕ ನಾನು ಕಾಣಿಸಿಕೊಳ್ಳಬಹುದು ಎಂದು ಹೇಳಿದರು. ಈ ಮೂಲಕ ಅಭಿಮಾನಿಗಳಿಗೆ ‘ಟಗರು-2’ ಸಿನಿಮಾ ಬರುವ ಸುಳಿವು ನೀಡಿದರು. ಕರಾವಳಿ ಜಿಲ್ಲೆಯ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ದಿನಗಳನ್ನು ಮೆಲುಕು ಹಾಕಿದ ಶಿವಣ್ಣ ಮಂಗಳೂರು ನನ್ನ ಫೇವರೇಟ್ ಸ್ಥಳಗಳಲ್ಲಿ ಒಂದು ಎಂದು ಹೇಳಿದರು.

    ಅಪ್ಪುವನ್ನು ನೆನೆದ ಶಿವರಾಜ್‍ಕುಮಾರ್ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡನ್ನು ಹಾಡಿದರು. ಈ ನಡುವೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಶಿವಣ್ಣ ಸಮ್ಮುಖದಲ್ಲಿ ‘ಟಗರು ಬಂತು ಟಗರು’ ಹಾಡನ್ನು ಎನರ್ಜಿಟಿಕ್ ಆಗಿ ಹಾಡಿದ್ರು. ಕಮೀಷನರ್ ಹಾಡು ಹಾಡುತ್ತಿದ್ದಂತೆ ಶಿವಣ್ಣ ಅದೇ ಹಾಡಿಗೆ ಸಖತ್ ಸ್ಟೆಪ್ ಸಹ ಹಾಕಿದರು. ಸಂವಾದದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹ ಜೊತೆಯಾಗಿ ಸ್ಟೆಪ್ ಹಾಕಿದರು. ಇದನ್ನೂ ಓದಿ: ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ 

    ಹಾಡು ಹಾಡಿ, ಡ್ಯಾನ್ಸ್ ಮಾಡಿ ಶಿವಣ್ನ ಖಾಕಿಯನ್ನು ರಂಜಿಸಿದರು. ಒಟ್ಟಿನಲ್ಲಿ ಅಲ್ಪಾವಧಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಂಭ್ರಮ, ಭಾವುಕತೆಗೆ ಸಾಕ್ಷಿಯಾಯಿತು.

  • ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಸಿನಿಮಾ ಮಾಡುವುದು ಒಂದು ಸವಾಲು. ಅದರಲ್ಲಿಯೂ ಮಾಡಿದ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಸವಾಲು. ಅದೇ ರೀತಿ ಸಿನಿಮಾ ರಿಲೀಸ್ ಆದ್ಮೇಲೆ ಸೌಂಡ್ ಮಾಡೋದು ಕಾಮನ್. ಆದರೆ ‘ಈಟ್ಸ್ ನಾಟ್ ಎ ಈಸಿ ಜಾಬ್’ ಹಾಡು ರಿಲೀಸ್‍ಗೂ ಮುನ್ನ ಸ್ಯಾಂಪಲ್‌ನಿಂದಲೇ ಕಿಚ್ಚು ಹಚ್ಚಿದೆ. ಆದರೆ ಹಾಡುಗಳು, ಟೀಸರ್ ಮೂಲಕವೇ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ‘ಚೇಸ್’.

    ಬೆಳ್ಳಿತೆರೆ ಬಾನಂಗಳದಲ್ಲಿ ಮಿಂಚಲು ಸನ್ನದ್ಧವಾಗಿರುವ ‘ಚೇಸ್’ ಸಿನಿಮಾದ ಆರು ಹಾಡುಗಳು ವೈರೆಟಿ ಫ್ಲೇವರ್‌ಗಳು. ಮೆಲೋಡಿ, ಎನರ್ಜಿಟಿಕ್ ನಂಬರ್ ಎಲ್ಲವೂ ಕೇಳುಗರಿಗೆ ಮುದ ನೀಡುತ್ತಿವೆ. ನಿಂತಲ್ಲೇ ಗುನುಗುವಂತೆ ಮಾಡಿವೆ. ಈಗ ಚಿತ್ರತಂಡ ಇಡೀ ಆಲ್ಬಂ ಗಾನಲಹರಿ ಬಿಡುಗಡೆ ಮಾಡಿ ಗಮನಸೆಳೆಯುತ್ತಿದೆ. ಇದನ್ನೂ ಓದಿ:  90 ಕಿ.ಮೀವರೆಗೂ ಬೈಕ್‍ನಲ್ಲಿ ಮೃತಮಗನ ಸಾಗಿಸಿದ ತಂದೆ

    ವಿಜಯ್ ಪ್ರಕಾಶ್ ಮತ್ತು ಕೇರಳದ ಪ್ರಖ್ಯಾತ ಗಾಯಕ ಮನ್ಸೂರ್ ಮೊಹಮದ್ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಮನದ ಹೊಸಿಲಾ ಡ್ಯುಯೇಟ್ ಸಿಂಗಿಂಗು’, ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಕಂಠಕುಣಿಸಿರುವ ‘ಶಾ ಲಾಲಾ ಗಾನಬಜಾನ’, ಸಂಚಿತ್ ಹೆಗ್ಡೆ ಧ್ವನಿಯಾಗಿರುವ ಹಾಡು, ಟೈಟಲ್ ಟ್ರ್ಯಾಕ್ ಸೇರಿದಂತೆ ಚೇಸ್ ಸಿನಿಮಾದ ಎಲ್ಲ ಹಾಡುಗಳು ಸಂಗೀತ ಪ್ರಿಯರ ಮನಸ್ಸಿನಲ್ಲಿ ನೆಲೆಸಿವೆ.

    ಇಷ್ಟು ಹಾಡುಗಳನ್ನು ನಿರ್ದೇಶಕ ಅಲೋಕ್ ಶೆಟ್ಟಿ ಚೆಂದವಾಗಿ ರೂಪಿಸುವುದರ ಜೊತೆಗೆ ಹಾಡೊಂದಕ್ಕೆ ತಾವೇ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ ಎಲ್ಲ ಗಾನಲಹರಿಗೂ ಉಮೇಶ್ ಪಿಲಿಕುಡೇಲು ಸಾಹಿತ್ಯದ ತಂಪು, ಕಾರ್ತಿಕ್ ಆಚಾರ್ಯ ಸಂಗೀತದ ಇಂಪು ಹಾಡುಗಳಿಗಿದೆ.

    ಮನೋಹರ್ ಸುವರ್ಣ ನಿರ್ಮಾಣದ ಚೇಸ್ ಸಿನಿಮಾಗೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅನಂತ್ ರಾಜ್ ಅರಸ್ ಕ್ಯಾಮೆರಾ ಕೈಚಳಕ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಸಿನಿಮಾಕ್ಕಿದೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಮಿ, ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ:  ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್ 

    ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

  • ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

    ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

    ರಾಯಚೂರು: ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ನಟ ಕಿಚ್ಚ ಸುದೀಪ್ ಮಹರ್ಷಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದರು. ಈ ಹಿಂದೆ ಸುದೀಪ್ ಅಭಿಮಾನಿಗಳು ಸುದೀಪ್ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿದ್ದರು. ಆದ್ರೆ ಸುದೀಪ್ ತಮ್ಮ ಮೂರ್ತಿ ಸ್ಥಾಪನೆಗೆ ಒಪ್ಪದ ಹಿನ್ನೆಲೆ ವಿಚಾರ ಕೈಬಿಡಲಾಗಿತ್ತು.

    ರಾಯಚೂರಿನ ಸಿರವಾರ ತಾಲೂಕಿನ ಕುರಕುಂದದಲ್ಲಿ ಮಾತನಾಡುವ ಸುದೀಪ್, ನನ್ನ ಮೂರ್ತಿ ಪ್ರತಿಷ್ಟಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಶರಣು. ನನ್ನ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ ಅದಕ್ಕೆ ಬೇಡ ಅಂದೆ. ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ ಅವರಿಗೆ ಗೌರವ ಸಲ್ಲಬೇಕು, ನಾನು ಅಷ್ಟು ದೊಡ್ಡವನಲ್ಲ. ನಾನು ಸಾಧನೆ ಮಾಡಬೇಕಾದದ್ದು ತುಂಬಾ ಇದೆ. ಮುಂದೆ ಅಂತ ದಿನ ಬಂದಾಗ ನನ್ನ ಮೂರ್ತಿ ಇಡಲಿ ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆ ನನಗೆ ಗೊತ್ತಾಗಿದ್ದು, ಮೊದಲೇ ಬೇಡ ಅಂತಿದ್ದೆ ಎಂದರು. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ 

    ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲ. ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಸಿನಿಮಾದಿಂದ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು. ಅದರ ಬಗ್ಗೆ ಕಾಳಜಿ, ಜವಾಬ್ದಾರಿ ನನಗಿದೆ. ಇವತ್ತು ಏನೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು ಸಿನಿಮಾದಿಂದ ಬಂದ ದುಡ್ಡಲ್ಲಿ ಮಾಡುತ್ತಿದ್ದೇವೆ ಎಂದರು.

    ಅಪ್ಪುನನ್ನು ನೆನೆದ ಕಿಚ್ಚ
    ಅಪ್ಪು ಬಗ್ಗೆ ನಾವು ಏನೆ ಮಾತನಾಡಿದರೂ ಅದು ಒಳ್ಳೆಯ ರೀತಿಯಲ್ಲೇ ಇರಬೇಕು. ಅವರ ಬಗ್ಗೆ ನಾವು ಏನ್ ಮಾತನಾಡಕೂಡದು ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಅದೇ ಜನರ ಮನಸ್ಸಿನಲ್ಲಿದೆ. ನಮ್ಮ ತಂದೆ, ತಾಯಿ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮನಸ್ಸಿಗೆ ಬಂದಿದ್ದನ್ನ ಮನಸ್ಪೂರ್ವಕವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್ 

    ನಂತರ ಸುದೀಪ್ ‘ಸೊಂಟದ ವಿಷಯ ಬೇಡವೋ ಶಿಷ್ಯ’ ಹಾಡು ಹೇಳಿ ಅಭಿಮಾನಿಗಳನ್ನ ರಂಜಿಸಿದರು.

  • ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

    ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

    ಹುಭಾಷಾ ನಟಿ ಪ್ರಣಿತಾ ಸುಭಾಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾಗಿಂತ ಹೆಚ್ಚು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ನಡುವೆ ಸೋಮವಾರ ಪ್ರಣಿತಾ ಸೋಶಿಯಲ್ ಮೀಡಿಯಾದಲ್ಲಿ ತಾವು ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಸುದ್ದಿ ತಿಳಿದ ಅಭಿಮಾನಿಗಳು, ಸೆಲೆಬ್ರಿಟಿಗಳು ಫುಲ್ ಖುಷ್ ಆಗಿ ಕಾಮೆಂಟ್ ಮಾಡಿದ್ದರು. ಅಲ್ಲದೇ ಈ ನಟಿ ಮಹಿಳೆಯರು ಗರ್ಭಿಣಿ ಎಂದು ತಿಳಿದ ತಕ್ಷಣ ಏನು ಮಾಡ್ತಾರೆ ಗೊತ್ತಾ ಎಂಬುದು ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ.

    ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಮೊದಲ ಬೇಬಿ ಬೊಮ್ಬ್ ಫೋಟೋ ಶೇರ್ ಮಾಡಿದ ಈ ನಟಿ, ಪ್ರೆಗ್ನೆಂಟ್ ಎಂದು ತಿಳಿದಾಗ ನೀವು ಮಾಡುವ ಮೊದಲ ಕೆಲಸವೆಂದರೆ, ನೀವು ಪ್ರತಿ ಬಾರಿ ಕನ್ನಡಿಯಲ್ಲಿ ನಿಮ್ಮ ಹೊಟ್ಟೆಯನ್ನು ನೋಡಿಕೊಳ್ಳುವುದು ಎಂದು ಬರೆದು ವಿಶೇಷ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಣಿತಾ ಕನ್ನಡಿ ಮುಂದೆ ನಿಂತುಕೊಂಡು ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಣೀತಾ ತಮ್ಮ ತಾಯ್ತನದ ಆನಂದ ಸವಿಯಲು ಎಷ್ಟು ಕಾತುರದಿಂದ ಕಾಯುತ್ತಿದ್ದಾರೆ ಎಂಬುದು ತಿಳಿಯುತ್ತೆ. ಇದನ್ನೂ ಓದಿ: ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆನ್ಸಿ ರಿಪೋರ್ಟ್ 


    ಫೋಟೋ ನೋಡಿದ ಅಭಿಮಾನಿಗಳು, ಫೋಟೋಗಳನ್ನು ಹೆಚ್ಚು ಶೇರ್ ಮಾಡಬೇಡಿ ಮೇಡಮ್ ದೃಷ್ಟಿ ತಗಲುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.

    ಸೋಮವಾರ ಈ ನಟಿ, ನನ್ನ ಪತಿಯ 34ನೇ ಹುಟ್ಟುಹಬ್ಬದಂದು ಒಂದು ವಿಶೇಷ ಸುದ್ದಿಯನ್ನು ಹೇಳುತ್ತಿದ್ದೇನೆ. ನಮ್ಮ ಮನೆಗೆ ದೇವರ ಆರ್ಶಿವಾದದಿಂದ ವಿಶೇಷ ಅತಿಥಿಯ ಆಗಮನವಾಗುತ್ತಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಪ್ರಣೀತಾ ಅವರು ತಮ್ಮ ಪತಿ ನಿತಿನ್ ರಾಜ್ ಮೇಲೆ ಕುಳಿತುಕೊಂಡು ನಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿತ್ತು.

    2021ರ ಮೇ 30ರಂದು ಪ್ರಣಿತಾ ಮತ್ತು ನಿತಿನ್ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಈಗ ಹೊಸದೊಂದು ಜೀವದ ಆಗಮನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ರಮ್ಯಾ ಭೇಟಿ ಮಾಡಿದ ಮತ್ತೋರ್ವ ನಟಿ : ಸಂಜೆಗೆ ಧನ್ಯವಾದ ಎಂದ ಅಮೃತಾ 

  • ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆನ್ಸಿ ರಿಪೋರ್ಟ್

    ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆನ್ಸಿ ರಿಪೋರ್ಟ್

    ಹುಭಾಷಾ ನಟಿ ಪ್ರಣೀತಾ ಸುಭಾಷ್ 2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಈ ಸಂತಸದ ವಿಚಾರವನ್ನು ಕೊರೊನಾ ಕಾರಣದಿಂದ ಅಭಿಮಾನಿಗಳಿಗೆ ತಡವಾಗಿ ತಿಳಿಸಿದ್ದರು. ಈಗ ತಾವು ಗರ್ಭಿಣಿಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರಣೀತಾ ಇನ್‍ಸ್ಟಾಗ್ರಾಮ್‍ನಲ್ಲಿ, ನನ್ನ ಪತಿಯ 34ನೇ ಹುಟ್ಟುಹಬ್ಬದಂದು ಒಂದು ವಿಶೇಷ ಸುದ್ದಿಯನ್ನು ಹೇಳುತ್ತಿದ್ದೇನೆ. ನಮ್ಮ ಮನೆಗೆ ಏಂಜಲ್ಸ್ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‍ನಲ್ಲಿ ಪ್ರಣೀತಾ ಅವರು ತಮ್ಮ ಪತಿ ನಿತಿನ್ ರಾಜ್ ಜೊತೆ ಕುಳಿತುಕೊಂಡು ನಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದಾರೆ. ಈ ಫೋಟೋದಲ್ಲಿ ಪ್ರಣೀತಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಆಲಿಯಾ, ರಣಬೀರ್ ಮದುವೆ: 200 ಬೌನ್ಸರ್ ನೇಮಕ, ಹೊಸ ಮನೆ ಸೇರಿ RK ಸ್ಟುಡಿಯೋ ಫುಲ್ ಲಕಲಕ

    ಈ ಹಿಂದೆ ಪ್ರಣೀತಾ ತಮ್ಮ ಮದುವೆ ವಿಷಯವನ್ನು ತಡವಾಗಿ ತಿಳಿಸಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ ಈ ನಟಿ, ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಲ್ಲದೆ ಮದುವೆಗೆ ಒಂದು ದಿನ ಮುಂಚೆಯಷ್ಟೇ ದಿನ ನಿಗದಿ ಮಾಡಿರುವುದಾಗಿತ್ತು ಎಂದು ಬರೆದು ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

    ಈ ಫೋಟೋ ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವು ಅಭಿಮಾನಿಗಳು ಪ್ರಣೀತಾಗೆ ಟಿಪ್ಸ್‌ಗಳನ್ನು ಕೊಡುತ್ತಿದ್ದಾರೆ. ಇದನ್ನೂ ಓದಿ:  ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ 

  • ಯಶ್‍ನ ನಾನು ಹೀರೋ ಆಗಿ ಟ್ರೀಟ್ ಮಾಡಲ್ಲ: ಹೆಚ್.ಆರ್ ರಂಗನಾಥ್

    ಯಶ್‍ನ ನಾನು ಹೀರೋ ಆಗಿ ಟ್ರೀಟ್ ಮಾಡಲ್ಲ: ಹೆಚ್.ಆರ್ ರಂಗನಾಥ್

    ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ – 2 ಸಿನಿಮಾ ಕುರಿತು ಸಂದರ್ಶನ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ರಾಕಿಭಾಯ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ಮತ್ತೆ ಯಶ್ ನಡುವೆ ಇದ್ದ ಸಂಬಂಧದ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು.

    ನಾನು ಯಶ್‍ನನ್ನು ಎಂದೂ ಹೀರೋ ಆಗಿ ನೋಡಿಲ್ಲ. ನಾನು ಅವರನ್ನು ಒಬ್ಬ ಮನುಷ್ಟತ್ವವಿರುವ ಮಾನವನ ರೀತಿ ನೋಡಿದ್ದೇನೆ. ಜವಾಬ್ದಾರಿಗಳು ಯಶಸ್ಸಿನ ಜೊತೆಗೆ ಬೆಳೆಯುತ್ತೆ ಎಂಬುದನ್ನು ನಾನು ನಂಬುತ್ತೇನೆ. ಯಶ್‍ಗೆ ಮುಂದೆ ಇರುವ ಜವಾಬ್ದಾರಿ ಬಗ್ಗೆ ನನಗೆ ಪೂರ್ತಿಯಾಗಿ ಗೊತ್ತಿದೆ. ಆ ಸಂಪೂರ್ಣ ಚಿತ್ರಣ ನನ್ನ ಕಣ್ಣ ಮುಂದೆ ಇದೆ. ಅವರು ಕೇಳಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟಿದೆ ಎಂದು ನೇರವಾಗಿ ಹೇಳಿದರು. ಇದನ್ನೂ ಓದಿ: EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ನನ್ನ ಮತ್ತೆ ಯಶ್ ಸಾಮೀಪ್ಯ ಬೆಳೆದಿದ್ದೆ ಆ ಮನುಷ್ಯತ್ವದ ಆಧಾರದ ಮೇಲೆ. ಅವರು ಹೀರೋ ಆಗಿದ್ದಾರೆ ಎಂಬ ಕಾರಣಕ್ಕೆ ನಮ್ಮಿಬ್ಬರ ಸಂಬಂಧ ಬೆಳೆದಿಲ್ಲ. ನನಗೂ ಮತ್ತು ಯಶ್ ಒಂದೇ ರೀತಿಯ ಸಾಮ್ಯತೆ ಕಾಣಿಸಿದ್ದು ಎಂದರೆ ನಮಗಿಬ್ಬರಿಗೂ ಗಾಡ್ ಫಾದರ್ ಇಲ್ಲ. ನಮ್ಮಿಬ್ಬರನ್ನು ಕರೆದುಕೊಂಡು ಹೋಗಿ ಬೆಳೆಸುತ್ತೇವೆ ಎಂದು ಹೇಳಿದವರು ಯಾರೂ ಇಲ್ಲ.

    ಯಶ್ ಈ ಹಿಂದೆ ಸಂದರ್ಶನವೊಂದರಲ್ಲಿ ನನಗೆ ಏನೂ ಗೊತ್ತಾಗುತ್ತಿಲ್ಲ ಅಂತ ಮೆಜೆಸ್ಟಿಕ್‍ನಲ್ಲಿ ನಿಂತಿದ್ದೆ ಅಂತ ಹೇಳಿದ್ದರು. ನಾವು ಸಹ ಫುಟ್‍ಪಾತ್ ಮೇಲೆ ನಿಂತು ಬಂದವರೇ ಆಗಿದ್ದೇವೆ. ಇಬ್ಬರದ್ದು ಒಂದೇ ರೀತಿ ಪರಿಸ್ಥಿತಿ ಇದ್ದಾಗ ಒಬ್ಬರನ್ನೊಬ್ಬರು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೆ. ಅದಕ್ಕೆ ನಾವು ಅದೇ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದೇವೆ. ಇದನ್ನೂ ಓದಿ: ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

  • ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಟೈಟಲ್ ಹಾಗೂ ಟ್ರೇಲರ್ ಮೂಲಕ ಸುದ್ದಿಯಲ್ಲಿರುವ ‘ತ್ರಿಕೋನ’ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಏಪ್ರಿಲ್ 8 ರಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ಬಹಳ ವರ್ಷಗಳ ನಂತರ ಮತ್ತೆ ನಿರ್ದೇಶನದ ಟ್ರ್ಯಾಕ್ ಮರಳಿರುವ ಚಂದ್ರಕಾಂತ್ ಈ ಚಿತ್ರದ ಗೆಲುವಿಗೆ ಎದುರು ನೋಡುತ್ತಿದ್ದು ಸಿನಿಮಾ ಬಗ್ಗೆ ಸಾಕಷ್ಟು ಹೋಪ್ ಇಟ್ಟುಕೊಂಡಿದ್ದಾರೆ.

    ‘ತ್ರಿಕೋನ’ ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಕಹಾನಿ ಒಳಗೊಂಡ ಸಿನಿಮಾ. 2014ರಲ್ಲಿ ತೆರೆಕಂಡ 143 ಸಿನಿಮಾ ಮುಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದ್ರಕಾಂತ್ ಎರಡನೇ ಸಿನಿಮಾವಿದು. ಸಿನಿಮಾದ ಕಟೆಂಟ್ ಬಗ್ಗೆ ಅಪಾರ ನಂಬಿಕೆ ಇಟ್ಟು ನಿರ್ದೇಶನಕ್ಕೆ ಮರಳಿರುವ ಇವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ನಿಭಾಯಿಸಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕಥೆಯ ರೂವಾರಿ ನಿರ್ಮಾಪಕರಾದ ರಾಜ್ ಶೇಖರ್, ಅಷ್ಟೇ ಅಲ್ಲ ‘ತ್ರಿಕೋನ’ ಸಿನಿಮಾ ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಕಷ್ಟಗಳು ಎದುರಾದಾಗ ಆಯಾ ವಯೋಮನಾದ ಜನರು ಶಕ್ತಿ, ಅಹಂ, ತಾಳ್ಮೆ ಅಸ್ತ್ರ ಉಪಯೋಗಿಸಿ ಹೇಗೆ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ‘ತಾಳ್ಮೆ’ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಮೂರು ಜನರೇಷನ್ ಇಟ್ಟುಕೊಂಡು ಕಥೆ ಹೆಣೆದು ಕಮರ್ಶಿಯಲ್ ಎಳೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್ ಅಪರೂಪದ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು. ಹಾಗೆಯೇ ಅಚ್ಯುತ್ ಕುಮಾರ್, ಸುಧಾರಾಣಿ ಜುಗಲ್ಬಂದಿ, ಸಾಧು ಕೋಕಿಲ, ಮನದೀಪ ರಾಯ್, ರಾಜ್ ವೀರ್, ಮಾರುತೇಶ್ ಹೀಗೆ ಹಲವು ಕಲಾವಿದರು ತ್ರಿಕೋನದಲ್ಲಿ ಜೊತೆಯಾಗಿ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

    ಕಟೆಂಟ್ ಎಷ್ಟು ಗಟ್ಟಿತನ ಹೊಂದಿದೆಯೋ ತಾಂತ್ರಿಕವಾಗಿಯೂ ಸಿನಿಮಾ ಅಷ್ಟೇ ಸ್ಟ್ರಾಂಗ್ ಆಗಿದೆ ಅನ್ನೋದು ಚಿತ್ರತಂಡದ ಮಾತು. ಸುರೇಂದ್ರನಾಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಾಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಲೀಸ್ ಪ್ರಕಿ ಪ್ರೋಡಕ್ಷನ್ ಬ್ಯಾನರ್ ನಿರ್ಮಾಣದಲ್ಲಿ ಬರ್ತಿರುವ ಈ ಚಿತ್ರಕ್ಕೆ ರಾಜ್ ಶೇಖರ್ ನಿರ್ಮಾಪಕರು. ಇದನ್ನೂ ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

  • ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

    ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

    ಹುಭಾಷಾ ನಟಿ ಸಂಜನಾ ಗಲ್ರಾನಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಮಧ್ಯೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾನುವಾರ ತಮ್ಮ ಬೋಳುತಲೆ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

    ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿರುವ ಸಂಜನಾ, ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ನನ್ನ ಜೀವನದಲ್ಲಿ ತಾಯ್ತನದ ಹಂತ ಕೊಟ್ಟಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಷ್ಟಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಇತ್ತೀಚಿನ ಸಂದರ್ಶನದಲ್ಲಿ ಸಂಜನಾ ಲಾಕ್‍ಡೌನ್‍ನಿಂದ ತಾವು ಕಲಿತ ಪಾಠವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಯಾವುದು ನಿಜ ಎಂಬುದನ್ನು ತಿಳಿದುಕೊಳ್ಳುವ ಪ್ರಬುದ್ಧತೆ ನನಗೆ ಕೋವಿಡ್ ಸಮಯದಲ್ಲಿ ಬಂದಿದೆ ಎಂದು ವಿವರಿಸಿದ್ದರು.

  • ದೆಹಲಿಯಲ್ಲಿ ರಾಕಿಭಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ದೆಹಲಿಯಲ್ಲಿ ರಾಕಿಭಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಚಂದನವನದ ರಾಕಿಂಗ್ ಸ್ಟಾರ್ ಆಗಿದ್ದವರು ಕೆಜಿಎಫ್ ಹವಾ ಎಲ್ಲಕಡೆ ಹಬ್ಬಿದ ಮೇಲೆ ರಾಕಿಭಾಯ್ ಆದ ಯಶ್ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಯಶ್ ಬದಲಿಗೆ ಕೆಜಿಎಫ್ ರಾಕಿಭಾಯ್ ಎಂದೇ ಇವರು ಫುಲ್ ಫೇಮಸ್ ಆಗುತ್ತಿದ್ದಾರೆ.

    ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿರುವ ಸಿನಿಮಾ ಎಂದರೆ ಕೆಜಿಎಫ್ 2. ಈ ಸಿನಿಮಾ ರಿಲೀಸ್‍ಗೆ ವಾರವಾಷ್ಟೇ ಇದೆ. ಈ ಹಿನ್ನೆಲೆ ಕೆಜಿಎಫ್-2 ಚಿತ್ರತಂಡ ಪ್ರಚಾರಕ್ಕಾಗಿ ಭಾರತದ ಪೂರ್ತಿ ಪ್ರಚಾರ ಮಾಡುತ್ತಿದ್ದಾರೆ. ಸಾಲು, ಸಾಲು ಪ್ರೆಸ್‍ಮೀಟ್‍ಗಳಲ್ಲಿ ಯಶ್ ಮತ್ತು ‘ಕೆಜಿಎಫ್ 2’ ಚಿತ್ರತಂಡ ಭಾಗಿ ಆಗುತ್ತಿದೆ.  ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

     

    View this post on Instagram

     

    A post shared by Kannadapichhar (@kannada_pichhar)

    ‘ಕೆಜಿಎಫ್-2’ ತಂಡ ದೆಹಲಿಯಲ್ಲಿ ಪ್ರಚಾರ ಮಾಡುತ್ತಿದೆ. ಈ ವೇಳೆ ಹೋಟೆಲ್ ಮುಂದೆ ನೂರಾರು ಯಶ್ ನೋಡಲು ಅಭಿಮಾನಿಗಳು ಕಾಯುತ್ತಾ ಇದ್ದರು. ಅದಕ್ಕೆ ಯಶ್ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ಫೋಟೋ ತೆಗೆಸಿಕೊಂಡು, ಆಟೋಗ್ರಾಫ್ ಕೂಡ ಕೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗದ್ದಾರೆ.

    ಮುಂಬೈನಲ್ಲೂ ಯಶ್‍ಗೆ ಅಭಿಮಾನಿಯ ದೊಡ್ಡ ಬಳಗವಿದೆ. ಯಶ್ ಮುಂಬೈಗೆ ಹೋದರೆ ಅಲ್ಲಿ ಅವರನ್ನು ನೋಡಲು, ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಕಾಯುತ್ತಾರೆ. ಯಶ್ ಫೋಟೋ, ವೀಡಿಯೋಗಳು ಮುಂಬೈ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದವು. ಈಗ ದೆಹಲಿಯಲ್ಲಿ ಯಶ್ ಹವಾ ಮುಂದುವರಿದಿದೆ. ಇದನ್ನೂ ಓದಿ: ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್