Tag: ಚಂಡೀಗಢ್

  • ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಚಂಡೀಗಢ್: ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ಬರುತ್ತಿದ್ದ 29 ವರ್ಷದ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾವ್‍ನಲ್ಲಿ ನಡೆದಿದೆ.

    ಈ ಘಟನೆ ಹುಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ನಡೆದಿದೆ. ಈ ಕುರಿತು ಗುರುಗಾಂವ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಜೂನ್ 14 ಸುಮಾರು ರಾತ್ರಿ 9.25ಕ್ಕೆ ನಡೆದಿದೆ. ಈ ಬಗ್ಗೆ ಮಹಿಳೆ ತನ್ನ ಟ್ವಿಟ್ಟರ್‌ನಲ್ಲಿ ಬರೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೆಹಲಿ ಮೂಲದ ಮಹಿಳೆ ಗುರುಗ್ರಾಮ್‍ನಲ್ಲಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದರು. ಮಹಿಳೆ ಇಂಟೀರಿಯರ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 14 ರಂದು ಮೆಟ್ರೋ ನಿಲ್ದಾಣದ ಮಾಲ್‍ನಲ್ಲಿ ಶಾಪಿಂಗ್ ಮುಗಿಸಿ ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿದ್ದರು. ಆಗ ಆಕೆಯ ಹಿಂದೆ ವ್ಯಕ್ತಿಯೊಬ್ಬ ಬರುತ್ತಿದ್ದನು. ಇದನ್ನು ಗಮನಿಸಿದ ಮಹಿಳೆ ಹಿಂದೆ ತಿರುಗಿ ನೋಡಿದ್ದಾರೆ. ಆಗ ಆತ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡು ದಂಗಾದ ಮಹಿಳೆ ಆತನ ಕಪಾಳಕ್ಕೆ ಹೊಡೆದು ಬೈದಿದ್ದಾರೆ. ಅಷ್ಟೇ ಅಲ್ಲದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಮಹಿಳೆ ಕಿರುಚಾಟದಿಂದ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಹಿಳೆಯ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ನಾನು ಮನೆಗೆ ಬಂದು ಗುರುಗ್ರಾಮ್ ಪೊಲೀಸರಿಗೆ ಫೇಸ್‍ಬುಕ್ ಖಾತೆ ಮೂಲಕ ಮೆಸೇಜ್ ಮಾಡಿದೆ. ಆದರೆ ಪೊಲೀಸರು ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ನಂತರ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್​ಸಿ)ಗೆ ಮೆಸೇಜ್ ಮಾಡಿದ್ದೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿ ಹಸ್ತಮೈಥುನ ಮಾಡುತ್ತಿರುವುದು ಸೆರೆಯಾಗಿದೆ ಎಂದು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ. ಅದರ ಆಧಾರದ ಮೇರೆಗೆ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಡಿಎಂಆರ್​ಸಿಯೊಂದಿಗೆ ಚರ್ಚೆ ಮಾಡಲಾಗಿದೆ. ಆದರೆ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕೆನ್ ಹೇಳಿದ್ದಾರೆ.

  • ಐಎಂಎನಿಂದ ತರಬೇತಿ ಪಡೆದು ಸೇನೆಗೆ ಸೇರಿ ಇತಿಹಾಸ ಸೃಷ್ಟಿಸಿದ ಅವಳಿ ಸಹೋದರರು

    ಐಎಂಎನಿಂದ ತರಬೇತಿ ಪಡೆದು ಸೇನೆಗೆ ಸೇರಿ ಇತಿಹಾಸ ಸೃಷ್ಟಿಸಿದ ಅವಳಿ ಸಹೋದರರು

    ಚಂಡೀಗಢ: ಇಬ್ಬರು ಅವಳಿ ಸಹೋದರರು ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ)ಯಿಂದ ತರಬೇತಿ ಪಡೆದು ಒಂದೇ ಬಾರಿಗೆ ಸೇನೆಗೆ ಸೇರ್ಪಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಅವಳಿ ಸಹೋದರರಾದ ಅಭಿನವ್ ಮತ್ತು ಪರಿಣವ್ ಇಬ್ಬರು ಕೇವಲ ಎರಡು ನಿಮಿಷಗಳ ಅಂತರದಲ್ಲಿ ಹುಟ್ಟಿದ್ದಾರೆ. ಇವರಿಬ್ಬರೂ ಜಲಂಧರ್ ಮತ್ತು ಲುಧಿಯಾನಾದಲ್ಲಿ ಎಂಜಿನಿಯರಿಂಗ್ ಪದವಿ ಓದಿದ ಬಳಿಕ ಭಾರತೀಯ ಸೇನೆ ಸೇರುವ ಕನಸನ್ನು ಕಂಡಿದ್ದಾರೆ.

    ಕನಸು ನನಸು ಮಾಡುವ ನಿಟ್ಟಿನಲ್ಲಿ ಐಎಂಎ ಆಯ್ಕೆಯಾಗಿ ಶನಿವಾರ ಪದವಿ ಪಡೆದು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇಬ್ಬರನ್ನು ಭಾರತೀಯ ಸೇನೆಯ ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.

    ಈ ಬಗ್ಗೆ ಐಎಂಎ, “ಮಿಲಿಟರಿ ಅಕಾಡೆಮಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಭಿನವ್ ಮತ್ತು ಪರಿಣವ್ ಇಬ್ಬರೂ ಸಹೋದರರು ಐಎಂಎ ಡೆಹ್ರಾಡೂನ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಆದರೆ ಇಬ್ಬರನ್ನು ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ” ಎಂದು ಟ್ವೀಟ್ ಮಾಡಿ ತಿಳಿಸಿದೆ.

    ಅನೇಕ ಬಾರಿ ಡ್ರಿಲ್ ಶಿಕ್ಷಕರು ಪರಿಣವ್ ಬದಲು ನನ್ನನ್ನು ಕರೆಯುತ್ತಿದ್ದರು. ನನ್ನ ಬದಲು ಅವನ ಹೆಸರು ಕರೆಯುತ್ತಿದ್ದರು. ಎಷ್ಟೋ ಬಾರಿ ಸೇನೆಯ ಬೋಧಕರು ಕೂಡ ಗೊಂದಲಕ್ಕೆ ಒಳಗಾಗಿದ್ದರು ಎಂದು ಅಭಿನವ್ ತರಬೇತಿ ವೇಳೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಕೆಲವೊಮ್ಮೆ ನನ್ನ ಊಟದ ಮೆಸ್‍ನಲ್ಲಿ ತುಂಬಾ ಸಿಬ್ಬಂದಿ ಇದ್ದರೆ, ನಾನು ನನ್ನ ಸಹೋದರನ ಮೆಸ್‍ಗೆ ಹೋಗುತ್ತಿದ್ದೆ. ಆಗ ಯಾರು ನನ್ನ ಗುರುತನ್ನು ಪತ್ತೆ ಮಾಡುತ್ತಿರಲಿಲ್ಲ ಎಂದು ಹಾಸ್ಯಮಯ ಸನ್ನಿವೇಶಗಳನ್ನು ಪರಿಣವ್ ಹಂಚಿಕೊಂಡಿದ್ದಾರೆ.

    ಇಬ್ಬರು ಸಹೋದರರು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಒಬ್ಬ 100 ಅಂಕಗಳನ್ನು ಗಳಿಸಿದರೆ, ಮತ್ತೊಬ್ಬ ಅಷ್ಟೇ ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರು ಕೊನೆಗೆ 99 ಅಂಕ ಪಡೆಯುತ್ತಿದ್ದನು. ಇಬ್ಬರು ಸೇನೆಗೆ ಸೇರುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಂದೆ ಅಶೋಕ್ ತಿಳಿಸಿದರು.


    ಮಿಲಿಟರಿ ಆಕಾಡೆಮಿಯಲ್ಲಿ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಇಬ್ಬರು ಎಲ್ಲರ ಗಮನ ಸೆಳೆದಿದ್ದರು. ಅವಳಿ ಮಕ್ಕಳ ಸಾಧನೆಯಿಂದ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

  • ಎಂ.ಎಸ್ ಧೋನಿಗೆ ಬೆದರಿಕೆ ಹಾಕಿದ ನಟಿ ಪ್ರೀತಿ ಜಿಂಟಾ!

    ಎಂ.ಎಸ್ ಧೋನಿಗೆ ಬೆದರಿಕೆ ಹಾಕಿದ ನಟಿ ಪ್ರೀತಿ ಜಿಂಟಾ!

    ಚಂಡೀಗಢ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರಿಗೆ ನಟಿ ಪ್ರೀತಿ ಜಿಂಟಾ ಬೆದರಿಕೆ ಹಾಕಿದ್ದಾರೆ.

    ಪ್ರೀತಿ ಜಿಂಟಾ ತನ್ನ ಟ್ವಿಟ್ಟರಿನಲ್ಲಿ ಧೋನಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶೇಕ್ ಹ್ಯಾಂಡ್ ಮಾಡುತ್ತಾ ಧೋನಿ ಬಳಿ ನಾನು ಏನು ಹೇಳಿದ್ದೇನೆ ಎನ್ನುವುದನ್ನು ಕೂಡ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    “ನಾನು ಸೇರಿದಂತೆ ಕ್ಯಾಪ್ಟನ್ ಕೂಲ್‍ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈಗ ನಾನು ಅವರ ಮುದ್ದಾದ ಮಗಳ ಅಭಿಮಾನಿ ಆಗುತ್ತಿದ್ದೇನೆ. ನಿಮ್ಮ ಮಗಳನ್ನು ಹುಷಾರಾಗಿ ನೋಡಿಕೊಳ್ಳಿ. ಇಲ್ಲದಿದ್ದರೆ ನಾನು ನಿಮ್ಮ ಮಗಳನ್ನು ಕಿಡ್ನಾಪ್ ಮಾಡುತ್ತೇನೆ ಎಂದು ಧೋನಿಗೆ ಹೇಳಿದ್ದೇನೆ” ಎಂದು ಬರೆದು ಈ ಫೋಟೋಗೆ ಶೀರ್ಷಿಕೆ ನೀಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

    ಐಪಿಎಲ್ 2019ನೇ ಆವೃತ್ತಿಯಲ್ಲಿ ಪ್ರೀತಿ ಜಿಂಟಾ ತಮ್ಮ ತಂಡವನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ. ಪಂಜಾಬ್ ತಂಡ ಕೂಡ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಪ್ಲೇ ಆಫ್‍ಗೆ ತಲುಪಲು ಸಾಧ್ಯವಾಗಲಿಲ್ಲ. ಪಂಜಾಬ್ ತಂಡ ಐಪಿಎಲ್‍ನಲ್ಲಿ ಒಟ್ಟು 14 ಪಂದ್ಯದಲ್ಲಿ 6ರಲ್ಲಿ ಗೆದ್ದು 8ರಲ್ಲಿ ಸೋತು 12 ಅಂಕ ಗಳಿಸಿ 6ನೇ ಸ್ಥಾನ ಪಡೆದಿದೆ.

  • ವಿದ್ಯಾರ್ಥಿನಿಯರಿಗೆ ಪ್ರೀತಿಯ ಪಾಠ ಮಾಡಿದ ಗಣಿತ ಉಪನ್ಯಾಸಕ ಅಮಾನತು: ವಿಡಿಯೋ

    ವಿದ್ಯಾರ್ಥಿನಿಯರಿಗೆ ಪ್ರೀತಿಯ ಪಾಠ ಮಾಡಿದ ಗಣಿತ ಉಪನ್ಯಾಸಕ ಅಮಾನತು: ವಿಡಿಯೋ

    ಚಂಡೀಗಢ: ಹರಿಯಾಣದ ಗಣಿತ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಪ್ರೇಮ ಪಾಠ ಹೇಳಿಕೊಟ್ಟು ಕಾಲೇಜಿನಿಂದ ಅಮಾನತುಗೊಂಡಿದ್ದಾನೆ.

    ಕರ್ನಾಲ್‍ನ ಮಹಿಳಾ ಕಾಲೇಜಿನ ಚರಣ್ ಸಿಂಗ್ ಅಮಾನತುಗೊಂಡಿರುವ ಉಪನ್ಯಾಸಕ. ಚರಣ್ ಕ್ಲಾಸಿನಲ್ಲಿ ಪ್ರೀತಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ಅದನ್ನು ವಿಡಿಯೋ ಮಾಡಿ ಪ್ರಿನ್ಸಿಪಾಲ್‍ಗೆ ತೋರಿಸಿದ್ದಾಳೆ. ಈ ವಿಡಿಯೋ ನೋಡಿದ ತಕ್ಷಣ ಪ್ರಿನ್ಸಿಪಾಲ್ ಉಪನ್ಯಾಸಕನನ್ನು ಸಸ್ಪೆಂಡ್ ಮಾಡಿದ್ದಾರೆ. ಉಪನ್ಯಾಸಕನ ಪ್ರೀತಿ ಪಾಠದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಚರಣ್ ಸಿಂಗ್ ವಿದ್ಯಾರ್ಥಿನಿಯರಿಗೆ ಬೋರ್ಡ್ ಮೇಲೆ ಪ್ರೀತಿಯ ಮೂರು ಸೂತ್ರ ಹೇಳಿಕೊಟ್ಟಿದ್ದಾನೆ. ಮೊದಲನೇ ಸೂತ್ರ ಕ್ಲೋಸ್ನೆಸ್- ಅಟ್ರ್ಯಾಕ್ಷನ್ = ಫ್ರೆಂಡ್‍ಶಿಪ್, ಎರಡನೇ ಸೂತ್ರ ಕ್ಲೋಸ್ನೆಸ್ + ಅಟ್ರ್ಯಾಕ್ಷನ್ = ರೊಮ್ಯಾಂಟಿಕ್ ಲವ್ ಹಾಗೂ ಮೂರನೇ ಫಾರ್ಮೂಲಾ ಅಟ್ರ್ಯಾಕ್ಷನ್ – ಕ್ಲೋಸ್ನೆಸ್ = ಕ್ರಶ್ ಎಂದು ಉಪನ್ಯಾಸಕ ಪ್ರೀತಿ ಪಾಠ ಮಾಡಿದ್ದಾನೆ.

    ಈ ಮೂರು ಸೂತ್ರಗಳನ್ನು ಉಪನ್ಯಾಸಕ ಹಿಂದಿಯಲ್ಲಿ ಹೇಳಿಕೊಟ್ಟಿದ್ದಾನೆ. ಸೂತ್ರದ ಪ್ರತಿಯೊಂದು ಪದವನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದ್ದಾರೆ. ಅಲ್ಲದೇ ಮದುವೆಯಾದ ಮೇಲೆ ಪತಿ – ಪತ್ನಿಯ ವೃದ್ಧರಾದ ನಂತರ ಅವರ ನಡುವೆ ಆಕರ್ಷಣೆ ಕಡಿಮೆ ಆಗುತ್ತೆ. ಬಳಿಕ ಅವರು ಕೇವಲ ಸ್ನೇಹಿತರಾಗಿ ಇರುತ್ತಾರೆ ಎಂದು ಕ್ಲಾಸಿನಲ್ಲಿ ವಿವರಿಸಿದ್ದಾನೆ. ಪ್ರೀತಿ ಪಾಠ ಕೇಳಿದ ವಿದ್ಯಾರ್ಥಿನಿಯರು ಜೋರಾಗಿ ನಗುತ್ತಾ ‘ಯೆಸ್’ ಸಾರ್ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

  • ಮಿಗ್ ಹೆಲಿಕಾಪ್ಟರ್ ಪತನ – ಸರ್ಕಾರಿ ಗೌರವದೊಂದಿಗೆ ಪೈಲಟ್ ಸಿದ್ಧಾರ್ಥ ಅಂತ್ಯಕ್ರಿಯೆ

    ಮಿಗ್ ಹೆಲಿಕಾಪ್ಟರ್ ಪತನ – ಸರ್ಕಾರಿ ಗೌರವದೊಂದಿಗೆ ಪೈಲಟ್ ಸಿದ್ಧಾರ್ಥ ಅಂತ್ಯಕ್ರಿಯೆ

    ಚಂಡೀಗಢ: ಭಾರತೀಯ ವಾಯು ಪಡೆಯ ಮಿಗ್ 17 ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರ ಅಂತ್ಯಕ್ರಿಯೆ ಇಂದು ಚಂಡೀಗಢದಲ್ಲಿ ನೆರವೇರಿತು.

    ಮಿ-17 ಯುದ್ಧ ಹೆಲಿಕಾಪ್ಟರ್ ಹಾರಾಟದ ವೇಳೆ ಬುಧವಾರ ಪತನಗೊಂಡು, ಜಮ್ಮು-ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ಬಿದ್ದಿತ್ತು. ಈ ದುರಂತದಲ್ಲಿ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರನ್ನು ಸೇರಿದಂತೆ ಒಟ್ಟು ಆರು ಜನರು ಹುತಾತ್ಮರಾಗಿದ್ದರು.

    ವಾಯು ಪಡೆಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಚಂಡೀಗಢನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಸೇರಿದಂತೆ ನೂರಾರು ಜನರು ಸೇರಿದ್ದರು.

    ಸಿದ್ಧಾರ್ಥ ಅವರ ಪತ್ನಿ ಆರತಿ ಸಿಂಗ್ ಅಂತ್ಯಕ್ರಿಯ ವೇಳೆ ಕಣ್ಣೀರಾದರು. ಆರತಿ ಸಿಂಗ್ ಅವರು ಕೂಡ ಐಎಎಫ್‍ನ ಶ್ರೀನಗರ ಪಡೆಯ ಸಿಬ್ಬಂದಿಯಾಗಿದ್ದಾರೆ. ಹುತಾತ್ಮ ಸಿದ್ಧಾರ್ಥ ಹಾಗೂ ಆರತಿ ಸಿಂಗ್ ದಂಪತಿಗೆ ಎರಡು ವರ್ಷದ ಪುತ್ರನಿದ್ದಾನೆ.

    ಹುತಾತ್ಮ ಸಿದ್ಧಾರ್ಥ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರವಾಹದ ವೇಳೆ ಸಿದ್ಧಾರ್ಥ ಅವರು ಅಸಾಧಾರಣವಾಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ಸಿದ್ಧಾರ್ಥ ಅವರಿಗೆ ಜನವರಿ 26ರಂದು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಚಂಡೀಗಢ: 2 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಾರತದ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಸುದ್ದಿಯಾಗಿದ್ದಾಳೆ.

    ಹೌದು, ಹರ್ಯಾಣ ಪಂಚಕುಲಾದ ಅಮಾರ್ಯಾ ಗುಲಾಟಿ ಎಂಬ ಬಾಲಕಿ ಕೇವಲ 1 ನಿಮಿಷದಲ್ಲಿ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ ಯಶಸ್ವಿಯಾಗುತ್ತಾಳೆ. ಸದ್ಯ ಈಕೆ ರಾಜಧಾನಿಗಳ ಹೆಸರನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಕೆಯ ತೊದಲು ಮಾತುಗಳಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ.

    ತೊದಲು ಮಾತಾಡುತ್ತಿರುವ ಈ ಪುಟ್ಟ ಬಾಲಕಿ ರಾಜ್ಯದ ರಾಜಧಾನಿಗಳ ಹೆಸರನ್ನು ಅಸ್ಪಷ್ಟವಾಗಿಯೇ ಹೇಳುತ್ತಾಳೆ. ಈಕೆಯ ಈ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ಆಕರ್ಷಿಸಿದ್ದಾಳೆ. ಅಮಾರ್ಯಾ 7 ತಿಂಗಳ ಮಗುವಿದ್ದಾಗಲೇ ಆಕೆಯ ತಾಯಿ ರಾಜಧಾನಿಗಳು ಹಾಗೂ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿಕೊಡಲು ಆರಂಭಿಸಿದ್ದರು. ಹೀಗಾಗಿ ಈಕೆ ಇಂದು ಇಷ್ಟೊಂದು ಸುಲಲಿತವಾಗಿ ರಾಜಧಾನಿಗಳ ಹೆಸರನ್ನು ಹೇಳಬಲ್ಲವಳಾಗಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇಷ್ಟು ಮಾತ್ರವಲ್ಲದೇ ಈಕೆ ಈಗಾಗಲೇ ದೇಶದ ವಿವಿಧ ನಗರಗಳ ಹೆಸರನ್ನು ಹೇಳುವ ಸ್ಥರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಸದ್ಯ ಅಮಾರ್ಯ ತನ್ನ ತೊದಲು ಮಾತುಗಳಿಂದ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಗೆದ್ದಿದ್ದಾಳೆ.

  • 4ರ ಬಾಲಕಿಯನ್ನ ರೇಪ್ ಮಾಡಿ, ಕೊಂದು ಡ್ರಮ್ ನಲ್ಲಿ ತುಂಬಿಸಿದ!

    4ರ ಬಾಲಕಿಯನ್ನ ರೇಪ್ ಮಾಡಿ, ಕೊಂದು ಡ್ರಮ್ ನಲ್ಲಿ ತುಂಬಿಸಿದ!

    ಚಂಡೀಗಢ: ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ರಾಜಧಾನಿ ನವದೆಹಲಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಫರಿದಾಬಾದ್ ಪಾಲ್ವಾಲ್ನ ಅಸೋತಿ ಗ್ರಾಮದಲ್ಲಿ ಘಟನೆ ಈ ನಡೆದಿದೆ. ಆರೋಪಿ 24 ವರ್ಷದ ಬಾಲು ಅಲಿಯಾಸ್ ವೀರೇಂದ್ರ ಕಳೆದ ಒಂಬತ್ತು ವರ್ಷಗಳಿಂದ ಬಾಲಕಿಯ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಗುರುವಾರ ಮಧ್ಯಾಹ್ನ ವೀರೇಂದ್ರ ಅಂಗಡಿಯಲ್ಲಿ ಕುಳಿತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದಾನೆ.

    ಬಾಲಕಿಯನ್ನು ಕೊಂದು ಅಂಗಡಿ ಸೇರಿಕೊಂಡ ಆರೋಪಿ ವೀರೇಂದ್ರ ತನಗೆ ಏನು ಗೊತ್ತಿಲ್ಲವೆಂಬಂತೆ ಇದ್ದನು. ಸಂಜೆ ವೇಳೆ ಬಾಲಕಿ ಕಾಣದಿದ್ದಾಗ ಪೋಷಕರ ಜೊತೆಯಲ್ಲಿಯೇ ವೀರೇಂದ್ರ ಆಕೆಯನ್ನು ಹುಡುಕಿದಂತೆ ನಟಿಸಿದ್ದನು. ಆದ್ರೆ ನೆರೆಯ ವ್ಯಕ್ತಿಯೊಬ್ಬರು ಕೊನೆಯ ಬಾರಿ ಬಾಲಕಿ ವೀರೇಂದ್ರ ಜೊತೆ ಹೋಗಿರೋದನ್ನು ಗಮನಿಸಿ ಪೋಷಕರಿಗೆ ವಿಷಯ ತಿಳಿಸಿದ್ದರು.

    ವಿಷಯ ತಿಳಿದು ಆರೋಪಿ ವೀರೇಂದ್ರನ ಮನೆಯನ್ನು ಪರಿಶೀಲಿಸಿದಾಗ ಬಾಲಕಿಯ ಶವ ಡ್ರಮ್ ನಲ್ಲಿ ಪತ್ತೆಯಾಗಿದೆ. ನಾವು ಮಗಳನ್ನು ಹುಡುಕಲು ಆರಂಭಿಸಿದಾಗ ನಮ್ಮ ಜೊತೆ ಬಂದು ಹುಡುಕಿದಂತೆ ನಾಟಕ ಮಾಡಿದ್ದನು. ನಾವು ಮನೆಯ ಬಾಗಿಲನ್ನು ತೆಗೆಯುವಂತೆ ಹೇಳಿದ್ರೂ ಆತ ಬಹಳ ಸಮಯದವರೆಗೆ ತೆಗೆದಿರಲಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

    ಆರೋಪಿಯನ್ನು ಮರಣದಂಡನೆಗೆ ಗುರಿಪಡಿಸಬೇಕು. ಆತ ನನ್ನ ಮುದ್ದು ಮಗಳೊಂದಿಗೆ ಕ್ರೂರವಾಗಿ ವರ್ತಿಸಿದ್ದಾನೆ. ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಕಿಯ ತಾಯಿ ಮನವಿ ಮಾಡಿಕೊಂಡಿದ್ದಾರೆ.

    ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ನಂತರ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ತುಣುಕಗಳನ್ನು, ರಕ್ತದ ಕಲೆಗಳನ್ನು ಮತ್ತು ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ದೇವೇಂದರ್ ಸಿಂಗ್ ಹೇಳಿದರು.

  • ಕಾಲೇಜಿನ ಆವರಣದಲ್ಲೇ ಪ್ರೊಫೆಸರ್ ನ ಹಿಡಿದು ಎಳೆದಾಡಿ ಥಳಿಸಿದ ವಿದ್ಯಾರ್ಥಿನಿಯರು – ವಿಡಿಯೋ ವೈರಲ್

    ಕಾಲೇಜಿನ ಆವರಣದಲ್ಲೇ ಪ್ರೊಫೆಸರ್ ನ ಹಿಡಿದು ಎಳೆದಾಡಿ ಥಳಿಸಿದ ವಿದ್ಯಾರ್ಥಿನಿಯರು – ವಿಡಿಯೋ ವೈರಲ್

    ಚಂಡೀಗಢ: ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿಯರು ಪ್ರೊಫೆಸರೊಬ್ಬರನ್ನು ಹಿಡಿದು ಎಳೆದಾಡಿ ಥಳಿಸಿರುವ ಘಟನೆ ಪಂಜಾಬ್ ನ ಪಟಿಯಾಲ ಕಾಲೇಜಿನಲ್ಲಿ ನಡೆದಿದೆ.

    ಪಟಿಯಾಲದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಮಹಿಳಾ ಕಾಲೇಜಿನ ಪ್ರೊಫೆಸರ್ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದಾನೆ. ಇದರಿಂದ ಕೋಪಗೊಂಡು ವಿದ್ಯಾರ್ಥಿನಿಯರು ಆತನನ್ನು ಹಿಡಿದು ಥಳಿಸಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.

    ಅತುಲ್ ಜೋಹ್ರಿ ಪ್ರಾಧ್ಯಾಪಕ ಆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಆತ ಕಾಲೇಜಿನ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮತ್ತೊಬ್ಬಳು ವಿದ್ಯಾರ್ಥಿನಿ ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾಳೆ.

    ಆರೋಪಿ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯರು ಪ್ರತಿಭಟನೆ ಕೂಡ ಮಾಡಿದ್ದಾರೆ. ನಂತರ ದೆಹಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಆರೋಪಿಯನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದಂತೆ ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ದೆಹಲಿ ಪೊಲೀಸ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಮಹಿಳಾ ಸಂಘಟನೆಗಳು ಕೂಡ ಸಾಥ್ ನೀಡಿದ್ದವು.

    ಪ್ರೊಫೆಸರ್ ಈ ರೀತಿಯ ಅಸಭ್ಯವಾಗಿ ವರ್ತಿಸುತ್ತಿರುವುದು ಇದೇ ಮೊದಲೇನಲ್ಲ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನೋರ್ವ ಈ ಹಿಂದೆ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿರುವುದಾಗಿ ವರದಿಯಾಗಿತ್ತು.

  • ಪೋಷಕರ ಕಣ್ಣ ಮುಂದೆಯೇ ಮರ್ಯಾದಾ ಹತ್ಯೆ

    ಪೋಷಕರ ಕಣ್ಣ ಮುಂದೆಯೇ ಮರ್ಯಾದಾ ಹತ್ಯೆ

    ಚಂಡೀಗಢ: ಪೋಷಕರ ಕಣ್ಮುಂದೆಯೇ ಮಗಳನ್ನು ದಾರುಣವಾಗಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಜಜ್ಜರ್ ಸುರ್ಹೆತಿ ಗ್ರಾಮದಲ್ಲಿ ನಡೆದಿದೆ.

    ವಂದನಾ (21) ಪೋಷಕರ ಮುಂದೆಯೇ ಹತ್ಯೆಯಾದ ದುರ್ದೈವಿ ಮಗಳು. ಈಕೆಯ ಚಿಕ್ಕಪ್ಪನಾದ ಜಸ್ವಂತ್ (40) ವಂದನಾ ತಂದೆ ವೇದ್‍ಪಾಲ್ (48) ಮತ್ತು ತಾಯಿ ಮೋನಿ ದೇವಿಯ ಮುಂದೆಯೇ ದಾರುಣವಾಗಿ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಪೋಷಕರೇ ಪ್ರತ್ಯಕ್ಷ ಸಾಕ್ಷಿಗಳಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ವೇದ್‍ಪಾಲ್ ಸೇನೆಯಲ್ಲಿ ನಿವೃತ್ತಿಯಾದ ಬಳಿಕ ದೆಹಲಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದನು. ಈಕೆಯ ಮಗಳೇ ವಂದನಾ. ಈಕೆ ಒಬ್ಬ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಧಾಕ್ಲಾ ಗ್ರಾಮದ ನಿವಾಸಿ ರಾಹುಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದು ಇವರ ಪ್ರೀತಿಯ ವಿಚಾರ ವಂದನಾ ಕುಟುಂಬದವರಿಗೆ ತಿಳಿದಿತ್ತು. ನಂತರ ವಂದನಾಗೆ ಅವನನ್ನು ಭೇಟಿಯಾಗಬಾರದು ಎಂದು ಎಚ್ಚರಿಸಿದ್ದಾರೆ. ಆದರೆ ಪೋಷಕರ ಮಾತನ್ನು ಲೆಕ್ಕಿಸದೇ ಮತ್ತೆ ಹುಡುಗನನ್ನು ಭೇಟಿ ಮಾಡಿದ್ದಾಳೆ.

    ಅ.25 ರಾತ್ರಿ ವಂದನಾ ಚಿಕ್ಕಪ್ಪ, ಅಪ್ಪ ಅಮ್ಮ ಎಲ್ಲರೂ ಮತ್ತೆ ಅವನನ್ನು ಭೇಟಿಯಾಗಬೇಡ ಎಂದು ಹೇಳಿದ್ದಾರೆ. ಆದರೆ ವಂದನಾ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಚಿಕ್ಕಪ್ಪ ಸುಮಾರು ರಾತ್ರಿ 1.30 ಕ್ಕೆ ಕೊಲೆ ಮಾಡಿದ್ದಾನೆ. ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದರು. ಆದರೆ ಗ್ರಾಮಸ್ಥರು ಇದೊಂದು ಮರ್ಯಾದಾ ಕೊಲೆ ಪ್ರಕರಣ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದರು ಎಂದು ಜಜ್ಜರ್ ಪೊಲೀಸರು ತಿಳಿಸಿದರು.

    ಸಬ್ ಇನ್ಸ್ ಪೆಕ್ಟರ್ ಸತ್‍ಬೀರ್ ಸಿಂಗ್ ಅವರು, ಮಗಳನ್ನು ಕೊಲೆ ಮಾಡಲು ಪೋಷಕರೇ ಒಪ್ಪಿಗೆ ನೀಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡ ದುಃಖ ವ್ಯಕ್ತ ಪಡಿಸುತ್ತಿದ್ದರು ಎಂದು ಹೇಳಿದ್ದಾರೆ.

    ಈ ಪ್ರಕರಣವನ್ನು ಕೊಲೆ ಆರೋಪಡಿ ಮೂವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪೋಷಕರನ್ನು ಬಂಧಿಸಿ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವು. ಆದರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಆದೇಶ ನೀಡಿದೆ. ಪರಾರಿಯಾಗಿರುವ ಆರೋಪಿ ಚಿಕ್ಕಪ್ಪನಿಗೆ ಬಲೆ ಬೀಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.