Tag: ಚಂಡೀಗಢ್

  • ನೈಟ್ ಡ್ಯೂಟಿ ಮಾಡ್ತಿದ್ದ ನರ್ಸ್ ಆತ್ಮಹತ್ಯೆ

    ನೈಟ್ ಡ್ಯೂಟಿ ಮಾಡ್ತಿದ್ದ ನರ್ಸ್ ಆತ್ಮಹತ್ಯೆ

    ಚಂಡೀಗಢ: ನರ್ಸ್‍ಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಮೀನಾಕ್ಷಿ ಸೈನಿ(31) ಆತ್ಮಹತ್ಯೆ ಮಾಡಿಕೊಂಡ ನರ್ಸ್. ಭಾನುವಾರ ಸಾಹಾ ಪ್ರೈಮರಿ ಹೆಲ್ತ್ ಸೆಂಟರಿನಲ್ಲಿ(ಪಿಎಚ್‍ಸಿ) ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು. ಈ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮೀನಾಕ್ಷಿ 22 ನಿಮಿಷಗಳ ಕಾಲ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಅಜಯ್ ಜೊತೆ ಮಾತನಾಡಿದ್ದಳು. ಬಳಿಕ ಅಜಯ್ ಪಿಎಚ್‍ಸಿ ಬಾಗಿಲು ಒಡೆದು ಮೀನಾಕ್ಷಿಯನ್ನು ಎಂಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು. ಆದರೆ ಅಷ್ಟರಲ್ಲಿ ಮೀನಾಕ್ಷಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಪೊಲೀಸರು ಅಜಯ್‍ನನ್ನು ವಿಚಾರಣೆ ನಡೆಸತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಾ ಪೊಲೀಸ್ ಠಾಣೆ ಉಸ್ತುವಾರಿ ಚಂದ್ರಭನ್, “ಮೀನಾಕ್ಷಿ ತಂದೆ ಹರ್ಕಿತ್ ಸಿಂಗ್ ಅವರ ದೂರಿನ ಮೇರೆಗೆ ಅಜಯ್, ಮೀನಾಕ್ಷಿ ಪತಿ ಕುಲ್‍ದೀಪ್ ಶರ್ಮಾ, ಅತ್ತೆ ಜ್ಞಾನ ಚಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೀನಾಕ್ಷಿ ಹಾಗೂ ಅಜಯ್ ಆತ್ಮೀಯ ಸ್ನೇಹಿತರಾಗಿದ್ದರು. ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಅಜಯ್ ಪಿಎಚ್‍ಸಿ ಒಳಗೆ ಅಥವಾ ಸುತ್ತಮುತ್ತ ಇದ್ದನು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಶನಿವಾರ ಮೀನಾಕ್ಷಿ ನೈಟ್ ಡ್ಯೂಟಿ ಮಾಡುತ್ತಿದ್ದಳು ಎಂದು ಪಿಎಚ್‍ಸಿ ಉಸ್ತುವಾರಿ ಡಾ. ವಿಕಾಸ್ ತಿಳಿಸಿದ್ದರು” ಎಂದು ಹೇಳಿದ್ದಾರೆ.

    ಮೀನಾಕ್ಷಿ ಹೊರತಾಗಿ ಸೆಕ್ಯೂರಿಟಿ ಗಾರ್ಡ್ ಪಿಎಚ್‍ಸಿಯಲ್ಲಿ ಇದ್ದರು. ಸೆಕ್ಯೂರಿಟಿ ಬೆಳಗ್ಗೆ 7.10ಕ್ಕೆ ಕೆಲಸ ಮುಗಿಸಿಕೊಂಡು ಹೋಗಿದ್ದರು. ಫೆಬ್ರವರಿ 27 ಹಾಗೂ 28ರಂದು ಅಜಯ್‍ಗೆ ಬೇರೆ ಯುವತಿಯ ಜೊತೆ ಮದುವೆ ನಿಗದಿಯಾಗಿತ್ತು. ಈ ಮೊದಲು ಕೂಡ ಅಜಯ್‍ಗೆ ಬೇರೆ ಕಡೆ ಮದುವೆ ಫಿಕ್ಸ್ ಆಗಿತ್ತು. ಆದರೆ ಮೀನಾಕ್ಷಿ ಆ ಮದುವೆಯನ್ನು ಮುರಿಯುವಂತೆ ಮಾಡಿದ್ದಳು. ಹೀಗಾಗಿ ಈ ಬಾರಿ ಅಜಯ್, ಮೀನಾಕ್ಷಿಗೆ ತಿಳಿಯದಂತೆ ಕದ್ದುಮುಚ್ಚಿ ಮದುವೆ ಆಗಲು ನಿರ್ಧರಿಸಿದ್ದನು. ಈ ವಿಷಯ ತಿಳಿದ ಮೀನಾಕ್ಷಿ ಮೂರು ದಿನಗಳ ಹಿಂದೆ ದೊಡ್ಡ ರಂಪಾಟವನ್ನೇ ಮಾಡಿದ್ದಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

    ಮೀನಾಕ್ಷಿ 12 ವರ್ಷಗಳ ಹಿಂದೆ ಕುಲ್‍ದೀಪ್ ಶರ್ಮಾ ಜೊತೆ ಅಂರ್ತಜಾತಿ ಲವ್ ಮ್ಯಾರೇಜ್ ಆಗಿದ್ದಳು. ಈ ಮದುವೆಗೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ನಂತರ ಮೀನಾಕ್ಷಿ ಮಾವ ಆಕೆಗೆ ಸಾಥ್ ನೀಡಿದ್ದರು. ಆದರೆ ಮೀನಾಕ್ಷಿ ಅತ್ತೆ ಆಕೆಯನ್ನು ತನ್ನ ಸೊಸೆ ಎಂದು ಒಪ್ಪಿಕೊಳ್ಳಲಿಲ್ಲ. ಮದುವೆಯಾದ ಕೆಲವು ದಿನಗಳ ನಂತರ ಕುಲ್‍ದೀಪ್ ಆಸ್ಟ್ರೇಲಿಯಾಗೆ ಹೋಗಿದ್ದರು. ಕಳೆದ 12 ವರ್ಷದಲ್ಲಿ ಕುಲ್‍ದೀಪ್ ಹಾಗೂ ಮೀನಾಕ್ಷಿ ಕೇವಲ ಎರಡು ಅಥವಾ ಮೂರು ಬಾರಿ ಭೇಟಿ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    – ಮನನೊಂದ ಯುವಕ ಎರಡು ದಿನದ ನಂತ್ರ ನೇಣಿಗೆ ಶರಣು

    ಚಂಡೀಗಢ್: ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೋಷಕರು ನಿಂದಿಸಿದ್ದು, ಇದರಿಂದ ಬೇಸತ್ತ ಯುವಕ ಎರಡು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಜಗಾದ್ರಿಯಲ್ಲಿ ನಡೆದಿದೆ.

    ಸುರೇಶ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು. ಆದರೆ ಇದು ಆತನ ತಾಯಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸುರೇಶ್‍ಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಎರಡು ದಿನಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಸುರೇಶ್ ಸಹೋದರ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ನನ್ನ ತಮ್ಮ ಸುರೇಶ್ ಯಾವಾಗಲೂ ಬೈಕ್ ಮೆಕ್ಯಾನಿಕ್ ಜೊತೆ ಇರುತ್ತಿದ್ದನು. ಅಲ್ಲದೆ ಆತ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಸುರೇಶ್, ಬಾಲಕಿಯನ್ನು ಹಲವಾರು ಬಾರಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ನಮ್ಮ ಕುಟುಂಬಸ್ಥರಿಗೆ ತಿಳಿದಾಗ ಆತನಿಗೆ ಬೈದು ಬುದ್ಧಿ ಹೇಳಲಾಗಿತ್ತು. ಜ. 1ರಂದು ನನ್ನ ಪತ್ನಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಸುರೇಶ್, ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು ಎಂದು ತಿಳಿಸಿದ್ದಾರೆ.

    ಈ ವಿಷಯವನ್ನು ನನ್ನ ಪತ್ನಿ ನನ್ನ ತಾಯಿಯ ಬಳಿ ಹೇಳಿದ್ದಳು. ಆಗ ನನ್ನ ತಾಯಿ ಆತನಿಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸೋಮವಾರ ರಾತ್ರಿ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸುರೇಶ್ ಪ್ರೀತಿಸುತ್ತಿದ್ದ ಬಾಲಕಿ 16 ವರ್ಷದವಳಾಗಿದ್ದು, ಇಬ್ಬರು ಈಗಲೇ ಮದುವೆಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಆತನಿಗೆ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಅಲ್ಲದೆ ಯುವಕ ಮೃತದೇಹದ ಬಳಿ ಯಾವುದೇ ಡೆತ್‍ನೋಟ್ ಕೂಡ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಚಂಡೀಗಢ್: ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಹರಿಯಾಣದ ರಾಜೀವ್ ಕಾಲೋನಿಯಲ್ಲಿ ನಡೆದಿದೆ.

    21 ವರ್ಷದ ಫೈಝಾನ್ ತನ್ನ ಪತ್ನಿ ಶಾಬ್-ಇ-ನೂರ್ ನನ್ನು ಕೊಲೆ ಮಾಡಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಫೈಝಾನ್ ಹಾಗೂ ಶಾಬ್‍ನ ಮೊದಲನೇ ವಿವಾಹ ವಾರ್ಷಿಕೋತ್ಸವವಿತ್ತು. ಈ ನಡುವೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಫೈಝಾನ್ ತನ್ನ ಪತ್ನಿಯನ್ನು ಮೊಬೈಲ್ ಚಾರ್ಜಿಂಗ್ ವೈರ್ ಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಎಸ್‍ಎಚ್‍ಒ ಅಧಿಕಾರಿ ನವೀನ್ ಶಹಾರಾನ್ ಪ್ರತಿಕ್ರಿಯಿಸಿ, ಬುಧವಾರ ರಾತ್ರಿ ಫೈಝಾನ್ ಚಾರ್ಜಿಂಗ್ ವೈರ್ ನಿಂದ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮರುದಿನ ಬೆಳಗ್ಗೆ ವಿಕಾಸ್ ನಗರಕ್ಕೆ ಹೋಗಿ ಅಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮಹಿಳೆಯ ಮೃತದೇಹವನ್ನು ಸಿವಿಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೈರನ್ನು ಮಹಿಳೆಯ ಕುತ್ತಿಗೆಗೆ ಸುತ್ತಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

    ಫೈಯಾನ್ ತಂದೆ ದಿಲ್‍ಶಾದ್ ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಸೊಸೆ ಹಲವು ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ನನ್ನ ಮಗ ಆಕೆಯ ಹಾಗೂ ಆಕೆಯ ಪ್ರಿಯಕರನ ಕಾಲ್ ಡೀಟೆಲ್ಸ್ ತಂದಿದ್ದನು. ಬುಧವಾರ ಶಾಬ್ ವಿವಾಹ ವಾರ್ಷಿಕೋತ್ಸವಕ್ಕೆ ಏನೂ ಉಡುಗೊರೆ ಕೊಟ್ಟಿಲ್ಲ ಎಂದು ಜಗಳವಾಡುತ್ತಿದ್ದಳು. ಶಾಬ್ ಅದ್ಧೂರಿ ಜೀವನಶೈಲಿ ನಡೆಸಬೇಕು ಎಂದು ಹೇಳುತ್ತಿದ್ದಳು. ಅಲ್ಲದೆ ಪ್ರತಿದಿನ ಮಾಂಸಹಾರ ತಿನ್ನಬೇಕು, ಆದರೆ ನಮಗೆ ಕೇವಲ ತರಕಾರಿ ತರಲು ಆಗುತ್ತಿತ್ತು ಎಂದು ಹೇಳಿದ್ದಾರೆ.

    ಫೈಝಾನ್ ಮೃತದೇಹ ಗುರುವಾರ ಬೆಳಗ್ಗೆ 9.30ಕ್ಕೆ ಪತ್ತೆಯಾಗಿದ್ದು, 10 ಗಂಟೆಗೆ ಪತ್ನಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೈಝಾನ್ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆಯ ಪೋಷಕರು ಮೀರತ್‍ನಲ್ಲಿದ್ದ ಕಾರಣ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ ಎಂದು ವರದಿಯಾಗಿದೆ.

  • ಹುತಾತ್ಮನಾದ ಮಗನ ಮುಖ ನೋಡದೆಯೇ ಅಂತ್ಯ ಸಂಸ್ಕಾರ

    ಹುತಾತ್ಮನಾದ ಮಗನ ಮುಖ ನೋಡದೆಯೇ ಅಂತ್ಯ ಸಂಸ್ಕಾರ

    – ಸೆಲ್ಯೂಟ್ ಮಾಡಿ, ನಮಸ್ಕರಿಸಿ ಬಿಕ್ಕಿಬಿಕ್ಕಿ ಅತ್ತ ತಾಯಿ

    ಚಂಡೀಗಢ: ಹುತಾತ್ಮನಾದ ಮಗನ ಮುಖ ನೋಡದೆಯೇ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ ಮನಕಲಕುವ ಘಟನೆ ಪಂಜಾಬ್‍ನ ಚಂಡೀಗಢ್‍ನಲ್ಲಿ ನಡೆದಿದೆ.

    ಜಮ್ಮು- ಕಾಶ್ಮೀರದ ರಾಜೌರಿ ಸೆಕ್ಟರಿನ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಸುಖ್ವಿಂದರ್ ಸಿಂಗ್ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸುಖ್ವಿಂದರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಫತೇಪುರವನ್ನು ಗ್ರಾಮದಲ್ಲಿ ತರಲಾಯಿತು. ಈ ವೇಳೆ ಅಲ್ಲಿದ್ದ ಜನರು ಭಾರತ್ ಮಾತಾ ಕೀ ಜೈ ಹಾಗೂ ಸುಖ್ವಿಂದರ್ ಸಿಂಗ್ ಅಮರವಾಗಿರಲಿ ಎಂದು ಘೋಷಣೆ ಕೂಗುತ್ತಿದ್ದರು.

    ಹುತಾತ್ಮರಾದ ಸುಖ್ವಿಂದರ್ ಅವರ ಮುಖವನ್ನು ಯಾರಿಗೂ ತೋರಿಸಲಿಲ್ಲ. ಸುಖ್ವಿಂದರ್ ಅವರ ತಾಯಿ ರಾಣಿ ದೇವಿ ಹಾಗೂ ಅವರ ಸಹೋದರ ಗುರುಪಾಲ್ ಸಿಂಗ್ ಮುಖ ತೋರಿಸಲು ಹೇಳುತ್ತಾರೆ. ಆದರೆ ಅಧಿಕಾರಿಗಳು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸುಖ್ವಿಂದರ್ ಸಿಂಗ್ ಅವರ ಮುಖಕ್ಕೆ ಸಾಕಷ್ಟು ಗಾಯಗಳಾಗಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸುಖ್ವಿಂದರ್ ಅವರ ತಾಯಿ ಜೋರಾಗಿ ಕಿರುಚಿ ಮಗನಿಗೆ ಸೆಲ್ಯೂಟ್ ಮಾಡಿದ್ದಾರೆ.

    ಸುಖ್ವಿಂದರ್ ಹುತಾತ್ಮರಾದ ಸುದ್ದಿ ಅವರ ತಾಯಿಗೆ ಬುಧವಾರ ಬೆಳಗ್ಗೆ ತಿಳಿಸಲಾಯಿತು. ಮಧ್ಯಾಹ್ನ ಸುಮಾರು 3 ಗಂಟೆಗೆ ಗ್ರಾಮದ ಸ್ಮಶಾನದಲ್ಲಿ ಸೇನೆಯ ಗೌರವಗಳೊಂದಿಗೆ ಸುಖ್ವಿಂದರ್ ಅವರ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಈ ವೇಳೆ ಸೈನ್ಯದ ತುಕಡಿ ಹುತಾತ್ಮರ ಗೌರವವನ್ನು ನೀಡಿತು. ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಸುಖ್ವಿಂದರ್ ಸಿಂಗ್ ಅವರ ಫೋಟೋ, ಪೋಸ್ಟರ್ ಹಿಡಿದು ಅಂತಿಮ ವಿದಾಯ ತಿಳಿಸಿದರು. ಸುಖ್ವಿಂದರ್ ಅವರ ಚಿತೆಗೆ ಅವರ ಹಿರಿಯ ಸಹೋದರ ಅಗ್ನಿಸ್ಪರ್ಶ ನೀಡಿದರು.

    21 ವರ್ಷದ ರೈಫಲ್‍ಮ್ಯಾನ್ ಆಗಿರುವ ಸುಖ್ವಿಂದರ್ ಅವರ ತಂದೆ ಅವಿನಾಶ್ ಸಿಂಗ್ ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೂಡ 2007ರಲ್ಲಿ ನಿಧನರಾಗಿದ್ದರು. ಸಿಖ್ವಿಂದರ್ 2017ರಲ್ಲಿ ಸೇನೆಗೆ ಸೇರಿದ್ದರು. ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲು ಸಿಖ್ವಿಂದರ್ ನವೆಂಬರ್ 22ರಿಂದ 15 ದಿನ ರಜೆ ತೆಗೆದುಕೊಂಡು ಡ್ಯೂಟಿಗೆ ಹಿಂದಿರುಗಿದ್ದರು.

  • ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಚಂಡೀಗಢ್: ಮದುವೆಯಾಗಿ ಎರಡೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಆಶ್ರಮದಿಂದ ಮಗುವನ್ನು ಕದ್ದು ಅರೆಸ್ಟ್ ಆದ ಘಟನೆ ಹರಿಯಾಣದ ಕೈತಲ್ ಜಿಲ್ಲೆಯಲ್ಲಿ ನಡೆದಿದೆ.

    ವಿಕಾಸ್ ಮಗುವನ್ನು ಕದ್ದು ಅರೆಸ್ಟ್ ಆದ ವ್ಯಕ್ತಿ. ಮದುವೆಯಾಗಿ ಎರಡೂವರೆ ವರ್ಷವಾದರೂ ದಂಪತಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದನು.

    ಆಶ್ರಮದಿಂದ ವಿಕಾಸ್ ಮಗುವನ್ನು ಕದ್ದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಶುರುವಾಯಿತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಕಾಸ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಹಿಂದಿರುಗಿಸಿದ್ದನು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಪಿ ವಿರೇಂದ್ರ ಅವರು, ಮದುವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಕಳಾಗದ ಕಾರಣ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೆ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದಾನೆ ಎಂದರು.

    ಮಾಧ್ಯಮದಲ್ಲಿ ಈ ಸುದ್ದಿ ಪ್ರಸಾರವಾಗಿದ್ದಕ್ಕೆ ವಿಕಾಸ್ ತನ್ನ ಮನಸ್ಸು ಬದಲಾಯಿಸಿ ಮಗುವನ್ನು ನಮ್ಮ ಬಳಿ ಬಿಟ್ಟು ಹೋಗಿದ್ದಾನೆ ಎಂದು ಎಸ್‍ಪಿ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಶನಿವಾರ ಆಶ್ರಮದಿಂದ ಕಾಣೆಯಾದ ಮಗುವನ್ನು ಕೇವಲ 18 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಬಳಿ ಕರೆಸಿಕೊಂಡಿದ್ದೆವೆ. ಸದ್ಯ ನಾವು ವಿಕಾಸ್‍ನನ್ನು ವಿಚಾರಣೆ ನಡೆಸುತ್ತಿದ್ದೆವೆ ಎಂದು ಎಸ್‍ಪಿ ವಿರೇಂದ್ರ ತಿಳಿಸಿದರು.

  • 5 ವರ್ಷದ ಮಗಳ ಮುಂದೆ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ

    5 ವರ್ಷದ ಮಗಳ ಮುಂದೆ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ

    ಚಂಡೀಗಢ್: 5 ವರ್ಷದ ಮಗಳ ಮುಂದೆಯೇ ಶಿಕ್ಷಕಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

    ಸರಂಜೀತ್ ಕೌರ್(35) ಕೊಲೆಯಾದ ಶಿಕ್ಷಕಿ. ಏಪ್ರಿಲ್ ತಿಂಗಳಿನಿಂದ ಸರಂಜೀತ್ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯಲ್ಲಿ ಫ್ರೆಂಚ್ ಹಾಗೂ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಗೆ ಬಂದ ಸಂದರ್ಭದಲ್ಲಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಂದು ಬೆಳಗ್ಗೆ ಖರಾರ್ ನ ಸನ್ನಿ ಎನ್‍ಕ್ಲೇವ್ ಪ್ರದೇಶದ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯ ಹೊರಗಡೆ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 7.45ಕ್ಕೆ ಸರಂಜೀತ್ ಶಾಲೆಗೆ ಆಗಮಿಸಿ ತನ್ನ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

    ವ್ಯಕ್ತಿಯೊಬ್ಬ ಶಾಲು ಹಾಕಿಕೊಂಡು ಬೆಳಗ್ಗೆಯಿಂದ ಶಾಲೆಯ ಬಳಿ ತಿರುಗಾಡುತ್ತಿದ್ದನು. ಶಿಕ್ಷಕಿ ಬರುತ್ತಿದ್ದಂತೆ ಆತ ಅವರ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾರಿನಲ್ಲಿ ಪರಾರಿ ಆಗಿದ್ದಾನೆ ಎಂದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

    ಗುಂಡು ಬಿದ್ದ ತಕ್ಷಣ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಚಂಡೀಗಢ್: ಮದುವೆ ಆಗಲು ನಿರಾಕರಿಸಿದ್ದಕ್ಕೆ ತರಬೇತುದಾರ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ಹರಿಯಾಣದ ಪಟೌದಿಯಲ್ಲಿ ನಡೆದಿದೆ.

    ಸರಿತಾ(25) ಮೃತಪಟ್ಟ ಯುವತಿ. ಸರಿತಾ ಟೇಕ್ವಾಂಡೋ (ಬಾಕ್ಸರ್) ಆಟಗಾರ್ತಿಯಾಗಿದ್ದು, ಆಕೆ ಬಾಕ್ಸಿಂಗ್ ಕಲಿಯುತ್ತಿದ್ದಳು. ಸರಿತಾಗೆ ಬಾಕ್ಸಿಂಗ್ ಹೇಳಿಕೊಡುತ್ತಿದ್ದ ತರಬೇತಿದಾರ ಸೋಮ್‍ಬೀರ್ ಆಕೆಯನ್ನು ಪ್ರೀತಿಸಲು ಶುರು ಮಾಡಿದ್ದನು.

    ಸೋಮ್‍ಬೀರ್ ಮದುವೆಯಾಗುವಂತೆ ಸರಿತಾ ಬಳಿ ಕೇಳಿಕೊಂಡಿದ್ದಾನೆ. ಆದರೆ ಸರಿತಾ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ತರಬೇತುದಾರ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ರಾಜ್ಯಮಟ್ಟದ ಕುಸ್ತಿ ಆಟಗಾರನಾಗಿರುವ ಸೋಮ್‍ಬೀರ್ ಆಗಾಗ ಸರಿತಾ ಮನೆಗೆ ಭೇಟಿ ನೀಡುತ್ತಿದ್ದನು. ಸೋಮ್‍ಬೀರ್ ವಿರುದ್ಧ ಬಿಲಾಸ್‍ಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಆತ ಯಾವಾಗಲೂ ನಶೆಯಲ್ಲಿ ತೇಲಾಡುತ್ತಿದ್ದನು.

    ಸೋಮ್‍ಬೀರ್, ಸರಿತಾಳನ್ನು ಮದುವೆ ಆಗಲು ಇಚ್ಛಿಸಿದ್ದನು. ಆದರೆ ಸರಿತಾ, ಸೋಮ್‍ಬೀರ್ ನಶೆ ಮಾಡುವುದನ್ನು ನೋಡಿದ್ದಳು. ಹಾಗಾಗಿ ಆಕೆ ಸೋಮ್‍ಬೀರ್ ನನ್ನು ಮದುವೆ ಆಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸೋಮ್‍ಬೀರ್ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

  • ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಚಂಡೀಗಢ್: ಸ್ನೇಹಿತರಾಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಯುವತಿಗೆ ಪೋರ್ನ್ ವಿಡಿಯೋವನ್ನು ವಾಟ್ಸಪ್‍ಗೆ ಕಳುಹಿಸುವ ಮೂಲಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    25 ವರ್ಷದ ಯುವತಿ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಅಪರಿಚಿತ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಯಿಂದ ಫೋನ್ ಬಂದಿದ್ದು. ಯುವತಿ ರಿಸೀವ್ ಮಾಡಿ ಮಾತನಾಡಿದ್ದಾರೆ. ಆಗ ಆರೋಪಿ ನಿಮ್ಮೊಂದಿಗೆ ಸ್ನೇಹ ಬೆಳೆಸಬೇಕೆಂದು ತಿಳಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ.

    ಅಷ್ಟಕ್ಕೆ ಸುಮ್ಮನಾದ ಆರೋಪಿ ಯುವತಿ ಸ್ನೇಹ ಬೆಳೆಸಬೇಕು ಎಂದು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದಾನೆ. ಆದರೂ ಯುವತಿ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ನಂತರ ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿದ್ದಾನೆ. ಜೊತೆಗೆ ಯುವತಿಯ ವಾಟ್ಸಪ್‍ಗೆ ಪೋರ್ನ್ ಮತ್ತು ಅಶ್ಲೀಲ ವಿಡಿತಯೋವನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲಿಗೆ ನಾನು ಆತನ ಕರೆಗಳನ್ನು ನಿರ್ಲಕ್ಷಿಸಿದೆ. ಆದರೆ ವ್ಯಕ್ತಿಯು ಬೇರೆ ಬೇರೆ ನಂಬರ್‌ಗಳನ್ನು ಬಳಸಿ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಕೊನೆಗೆ ಬೇರೆ ನಂಬರ್‌ನಿಂದ ಫೋನ್ ಬಂದರೆ ರಿಸೀವ್ ಮಾಡಲು ಹೆದರುತ್ತಿದ್ದೇನೆ. ಇದರಿಂದ ನನ್ನ ಕೆಲಸ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಯುವತಿಯ ದೂರಿನ ಆಧಾರದ ಮೇಲೆ ಅಪರಿಚಿತ ಆರೋಪಿ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಆತನ ಮೊಬೈಲ್ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅಪರಿಚಿತರು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಫ್ಲೈಯಿಂಗ್ ಕಿಸ್ ಕೊಟ್ಟ ವ್ಯಕ್ತಿಗೆ 3 ವರ್ಷ ಜೈಲು, 3 ಸಾವಿರ ದಂಡ

    ಫ್ಲೈಯಿಂಗ್ ಕಿಸ್ ಕೊಟ್ಟ ವ್ಯಕ್ತಿಗೆ 3 ವರ್ಷ ಜೈಲು, 3 ಸಾವಿರ ದಂಡ

    ಚಂಡೀಗಢ್: ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿದ ವ್ಯಕ್ತಿಗೆ  ಮೂರು ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.

    ವಿನೋದ್ ಜೈಲು ಸೇರಿದ ವ್ಯಕ್ತಿ. ವಿನೋದ್ ತನ್ನ ಪಕ್ಕದ ಮನೆ ಮಹಿಳೆಯನ್ನು ನೋಡಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನು. ಅಲ್ಲದೆ ಸನ್ನೆ ಮಾಡುವ ಮೂಲಕ ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಮಹಿಳೆ ತನ್ನ ಪತಿಯ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಈ ವಿಷಯವನ್ನು ಪತಿಗೆ ಹೇಳಿದ್ದಾರೆ. ಬಳಿಕ ಇಬ್ಬರು ದೂರು ನೀಡಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ, “ವಿನೋದ್ ಹಲವು ಬಾರಿ ಫ್ಲೈಯಿಂಗ್ ಕಿಸ್ ಮಾಡಿ ಅಶ್ಲೀಲ ಸನ್ನೆ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾನೆ” ಎಂದು ಉಲ್ಲೇಖಿಸಿದ್ದರು.

    ಆರೋಪಿ ವಿನೋದ್ ಟಾಪ್ ಫ್ಲೋರ್ ಫ್ಲಾಟ್‍ನಲ್ಲಿ ವಾಸಿಸುತ್ತಾನೆ. ಅಲ್ಲದೆ ಆತ ನನ್ನನ್ನು ನೋಡಿ ಅಶ್ಲೀಲವಾಗಿ ಸನ್ನೆ ಮಾಡುತ್ತಾನೆ. ಕೆಲವು ಬಾರಿ ಅಶ್ಲೀಲವಾಗಿ ಕಮೆಂಟ್ ಕೂಡ ಮಾಡುತ್ತಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

    ಮಹಿಳೆ ವಿರುದ್ಧ ದೂರು ದಾಖಲಿಸುತ್ತಿದ್ದಂತೆ, ಆರೋಪಿ ವಿನೋದ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪತಿ – ಪತ್ನಿ ಇಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾನೆ. ಆದರೆ ಪೊಲೀಸರಿಗೆ ದಂಪತಿ, ವಿನೋದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ.

    ಸದ್ಯ ಮೋಹಾಲಿ ನ್ಯಾಯಾಲಯ ಆರೋಪಿ ವಿನೋದ್‍ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.

  • ರಾಜ್ಯಮಟ್ಟದ ಕುಸ್ತಿಪಟುವಿನ ಬರ್ಬರ ಹತ್ಯೆ

    ರಾಜ್ಯಮಟ್ಟದ ಕುಸ್ತಿಪಟುವಿನ ಬರ್ಬರ ಹತ್ಯೆ

    ಚಂಡೀಗಢ್: ರಾಜ್ಯಮಟ್ಟದ ಕುಸ್ತಿಪಟುವನ್ನು ಕತ್ತಿ ಮತ್ತು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‍ನಲ್ಲಿ ನಡೆದಿದೆ.

    ಹರಿಯಾಣದ ಇಸ್ರಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಕುಲ್‍ದೀಪ್ ಅಲಿಯಾಸ್ ದೀಪಾ ಎಂದು ಗುರುತಿಸಲಾಗಿದೆ. ಗ್ರಾಮದ ಧಾನ್ಯ ಮಾರುಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಕುಲದೀಪ್‍ಗೆ ಬುಧವಾರ ರಾತ್ರಿ ಮಾರುಕಟ್ಟೆಯಲ್ಲಿ ಭೇಟಿಯಾಗುವಂತೆ ಫೋನ್ ಬಂದಿದೆ. ಫೋನಿನಲ್ಲಿ ಮಾತನಾಡಿದ ನಂತರ ಅವರನ್ನು ಭೇಟಿಯಾಗಲು ಮಾರುಕಟ್ಟೆಗೆ ಹೋಗಿದ್ದಾನೆ. ಆದರೆ ಈತ ಬರುವಷ್ಟರಲ್ಲೇ ಆರೋಪಿಗಳು ಮುಂಚಿತವಾಗಿ ಬಂದು ಪವರ್ ಕಟ್ ಮಾಡಿದ್ದಾರೆ. ನಂತರ ಕತ್ತಲೆಯಲ್ಲಿ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಸ್ತಸ್ರಾವವಾಗಿ ಕಲ್‍ದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಕುಲ್‍ದೀಪ್ ಕುಟುಂಬ ಸದಸ್ಯರು ಈ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಶಂಕಿತರ ಹೆಸರನ್ನೂ ಸೂಚಿಸಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಕುಲ್‍ದೀಪ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದನು. ಇತ್ತೀಚೆಗೆ ಗಂಗಾನದಿಯ ಗೋಮುಖ್‍ನ ಕನ್ವಾಡ್ ಯಾತ್ರೆಗೆ ಹೋಗಿ ಮನೆಗೆ ಮರಳಿದ್ದನು. ಕುಲ್‍ದೀಪ್ ಕೆಲವು ಪುರುಷರೊಂದಿಗೆ ಫೋನ್‍ನಲ್ಲಿ ಮಾತಿನ ಚಕಮಕಿ ನಡೆಸಿದ್ದಾನೆ. ನಂತರ ಈ ಘಟನೆ ನಡೆದಿದೆ ಎಂದು ಆತನ ಸಹೋದರ ಆರೋಪಿಸಿದ್ದಾರೆ.