Tag: ಚಂಡಿಗಢ್

  • 1 ಕರೆಯಿಂದ ಕೋಟ್ಯಧಿಪತಿಯಾದ ವ್ಯಕ್ತಿ

    1 ಕರೆಯಿಂದ ಕೋಟ್ಯಧಿಪತಿಯಾದ ವ್ಯಕ್ತಿ

    ಚಂಡಿಗಢ್: ಪಂಜಾಬ್‍ನ ಹೋಶಿಯಾಪುರದಲ್ಲಿ ಒಂದು ಫೋನ್ ಕರೆಯಿಂದ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಾರೆ.

    ಸನ್‍ಪ್ರೀತ್ ಲಾಟರಿ ಗೆದ್ದು ಕೋಟ್ಯಧಿಪತಿ ಆಗಿದ್ದಾರೆ. ಸನ್‍ಪ್ರೀತ್ ಮೊಬೈಲ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಒಂದು ದಿನ ಅವರಿಗೆ ನೀವು ಲಾಟರಿ ಗೆದಿದ್ದೀರಾ ಎಂದು ಕರೆ ಮಾಡಿದ್ದಾರೆ. ಆದರೆ ಸನ್‍ಪ್ರೀತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

    ತಾನು ಲಾಟರಿ ಗೆದಿದ್ದೇನೆ ಎಂದು ಯಾರೋ ಸುಮ್ಮನೆ ಹೇಳಿ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸನ್‍ಪ್ರೀತ್ ಎಂದುಕೊಂಡಿದ್ದರು. ಅಲ್ಲದೆ ಈ ವಿಷಯವನ್ನು ತನ್ನ ಗೆಳೆಯರ ಬಳಿ ಹೇಳಿದ್ದಾಗ ನಿಜ ಗೊತ್ತಾಗಿದೆ. ಸನ್‍ಪ್ರೀತ್ ಹಾಗೂ ಅವರ ಗೆಳೆಯರು ಈ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ್ದಾಗ ಸನ್‍ಪ್ರೀತ್ ಕೆಲವು ದಿನಗಳ ಹಿಂದೆಯೇ ಕೋಟ್ಯಧಿಪತಿ ಆಗಿದ್ದಾರೆ ಎಂದು ತಿಳಿದು ಬಂತು. ಬಳಿಕ ಏಜೆನ್ಸಿ ಅವರನ್ನು ಸಂಪರ್ಕಿಸಿದ್ದಾರೆ.

    ಏಜೆನ್ಸಿ ಅವರು ಕೂಡ ಲಾಟರಿ ಹಣ ನೀಡಲು ಸನ್‍ಪ್ರೀತ್‍ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಬಳಿಕ ಸನ್‍ಪ್ರೀತಿ ಅವರನ್ನು ಭೇಟಿ ಮಾಡಿ ಗೆದ್ದ 1 ಕೋಟಿ ಲಾಟರಿ ಹಣವನ್ನು ಅವರಿಗೆ ನೀಡಿದ್ದಾರೆ.

    ಲಾಟರಿಯಲ್ಲಿ ಒಂದು ಕೋಟಿ ರೂ. ಗೆದಿದ್ದಕ್ಕೆ ಸನ್‍ಪ್ರೀತಿ ಕುಟುಂಬದವರು ಸಂತಸಗೊಂಡಿದ್ದಾರೆ. ಅಲ್ಲದೆ ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ.

  • ಟಾಯ್ಲೆಟ್‍ನಲ್ಲಿ ಸ್ಯಾನಿಟರಿ ಪ್ಯಾಡ್ ಎಸೆತ – ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ವಾರ್ಡನ್ ವಜಾ

    ಟಾಯ್ಲೆಟ್‍ನಲ್ಲಿ ಸ್ಯಾನಿಟರಿ ಪ್ಯಾಡ್ ಎಸೆತ – ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ವಾರ್ಡನ್ ವಜಾ

    ಚಂಡೀಗಢ್: ಬಳಸಿದ ಸ್ಯಾನಿಟರಿ ಪ್ಯಾಡ್ ಶೌಚಾಲಯದಲ್ಲಿ ಹಾಕಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಆರೋಪದ ಮೇರೆಗೆ ಇಬ್ಬರು ವಾರ್ಡನ್ ಗಳನ್ನು ವಜಾ ಮಾಡಲಾಗಿದೆ.

    ಪಂಜಾಬಿನ ಬಟಿಂಡಾ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೇಲಿನ ಟಾಯ್ಲೆಟಿನಲ್ಲಿ ಸ್ಯಾನಿಟರಿ ಪ್ಯಾಡ್ ಯಾರೂ ಹಾಕಿದ್ದಾರೆ ಎನ್ನುವುದನ್ನು ಪರಿಶೀಲಿಸಲು ವಾರ್ಡನ್ 12 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದರು. ಇದನ್ನು ವಿರೋಧಿಸಿ 600ರಿಂದ 700 ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿನಿಯರು ಪ್ರತಿಭಟನೆಗೆ ಮಣಿದ ವಿವಿಯ ಆಡಳಿತ ಮಂಡಳಿ ಇಬ್ಬರು ವಾರ್ಡನ್‍ಗಳನ್ನು ಕೆಲಸದಿಂದ ವಜಾ ಮಾಡಿದೆ.

    ಮೊದಲು ಈ ಘಟನೆಯನ್ನು ಆಡಳಿತ ಮಂಡಳಿ ಅಷ್ಟು ಗಂಭಿರವಾಗಿ ತೆಗೆದುಕೊಂಡಿರಲ್ಲ. ಆದರೆ ವಿದ್ಯಾರ್ಥಿನಿಯರ ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಹಾಗೂ ಇಬ್ಬರು ವಾರ್ಡನ್ ಗಳನ್ನು ಕೆಲಸದಿಂದ ಕಿತ್ತು ಹಾಕಿದೆ.

    ವಾರ್ಡನ್ ನಮಗೆ ಹಾಸ್ಟೆಲ್‍ನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅವರು ನಮಗೆ ಹುಡುಗರ ಜೊತೆ ಮಾತನಾಡುವುದಕ್ಕೂ ಬಿಡುವುದಿಲ್ಲ. ಈಗ ಅವರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಜುಗರ ಆಗುವಂತೆ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದರು.

  • ಹಾಸ್ಟೆಲ್‍ನಲ್ಲಿ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡ ಎಂಬಿಎ ವಿದ್ಯಾರ್ಥಿ

    ಹಾಸ್ಟೆಲ್‍ನಲ್ಲಿ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡ ಎಂಬಿಎ ವಿದ್ಯಾರ್ಥಿ

    ಚಂಡಿಗಢ: ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್‍ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪಂಜಾಬ್‍ನ ಲವ್ಲಿ ಪ್ರೋಫೆಷನಲ್ ಯೂನಿರ್ವಸಿಟಿಯಲ್ಲಿ ನಡೆದಿದೆ.

    ಜೈಂಬಲಿ ಮುನೀಶ್ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜೈಂಬಲಿ ಮುನೀಶ್ ಮೂಲತಃ ಆಂಧ್ರ ಪ್ರದೇಶದ ವಿಶಾಕಪಟ್ಟಣದವನು ಎಂದು ಸತ್ನಾಂಪುರ ಎಸ್‍ಎಚ್‍ಒ ಇನ್ಸ್ ಪೆಕ್ಟರ್ ಓಂಕಾರ್ ಸಿಂಗ್ ಬ್ರಾರ್ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಮುನೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೋಕಲ್ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಬಗ್ಗೆ ಮುನೀಶ್ ಪೋಷಕರು ಮಾಹಿತಿ ನೀಡಲಾಗಿದೆ.

    2ನೇ ವರ್ಷದ ವಿದ್ಯಾರ್ಥಿಯಾಗಿರುವ ಮುನೀಶ್ ತನ್ನ ರೂಮಿನಲ್ಲಿ ಫ್ಯಾನಿಗೆ ವಾದ್ಯದ ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುನೀಶ್ ಒತ್ತಡದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.