Tag: ಚಂಡಿಗಢ

  • 3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    ಚಂಡೀಗಢ: 12 ವರ್ಷದ ಪೋರ ಹರಿಯಾಣದಲ್ಲಿ ಮೂರು ಆ್ಯಪ್‍ಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾನೆ.

    ಝಜ್ಜರ್‌ನ ಜವಾಹರ್ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಜಖರ್ ಯಾವುದೇ ಮಾರ್ಗದರ್ಶನವಿಲ್ಲದೆ ಮೂರು ಕಲಿಕೆಯ ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ 

    ಕಾರ್ತಿಕೇಯ ಈ ಕುರಿತು ಮಾತನಾಡಿದ್ದು, ನನ್ನ ತಂದೆ ಅಜಿತ್ ಸಿಂಗ್ ಅವರು ರೈತರಾಗಿದ್ದರು. ಕೋವಿಡ್ ಸಮಯದಲ್ಲಿ ಆನ್‍ಲೈನ್ ತರಗತಿಗಳಿಗೆ ಸುಮಾರು 10,000 ರೂ. ವೆಚ್ಚದ ಮೊಬೈಲ್ ಫೋನ್ ಖರೀದಿಸಿ ಮಹನಿಗೆ ಕೊಟ್ಟಿದ್ದರು. ಆದರೆ ಫೋನ್‍ನಲ್ಲಿ ಕೆಲವು ಕೋಡಿಂಗ್ ಸಮಸ್ಯೆ ಇತ್ತು. ಈ ಹಿನ್ನೆಲೆ ಯೂ ಟ್ಯೂಬ್ ನೋಡಿ ನಾನು ಫೋನ್ ಸಮಸ್ಯೆಯನ್ನು ನಿಭಾಯಿಸಿದ್ದಾನೆ ಎಂದು ತಿಳಿಸಿದ್ದಾನೆ.

    ಈ ಹಿನ್ನೆಲೆ ನಾನು ನನ್ನ ಅಧ್ಯಯನವನ್ನು ಮುಂದುವರಿಸಿದೆ. ನಿರತರ ಅಧ್ಯಯನದಿಂದ ನಾನು ಮೂರು ಅಪ್ಲಿಕೇಶನ್‍ಗಳನ್ನು ಸಿದ್ಧಪಡಿಸಿದ್ದೇನೆ. ಮೊದಲ ಅಪ್ಲಿಕೇಶನ್ ಲುಸೆಂಟ್ ಜಿ.ಕೆ ಎಂಬ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದೆ. ಎರಡನೇ ಅಪ್ಲಿಕೇಶನ್ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್ ಆಗಿದ್ದು, ಅದು ಕೋಡಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿಸುತ್ತದೆ. ಮೂರನೇ ಅಪ್ಲಿಕೇಶನ್ ಡಿಜಿಟಲ್ ಶಿಕ್ಷಣ ಕುರಿತು ಇದೆ ಎಂದು ವಿವರಿಸಿದ್ದಾನೆ. ಇದನ್ನೂ ಓದಿ:  ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ 

    ಈ ಅಪ್ಲಿಕೇಶನ್‍ಗಳು 45,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಿದ್ದರಿಂದ ನನಗೆ ಪ್ರೇರಣೆ ಸಿಕ್ಕಿದೆ. ನಾನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್‌ನಲ್ಲಿ  ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಪಂಜಾಬ್‌ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಚಂಡಿಗಢ: ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರ ಕ್ಯಾಬಿನೆಟ್ ಕೂಡಾ ರಚನೆಯಾಗಿದ್ದು, ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ದಿರ್ಬಾದಿಂದ ಎರಡನೇ ಬಾರಿಗೆ ಶಾಸಕರಾಗಿರುವ ವಿರೋಧ ಪಕ್ಷದ ಮಾಜಿ ನಾಯಕ ಹರ್ಪಾಲ್ ಸಿಂಗ್ ಚೀಮಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಬರ್ನಾಲಾದಿಂದ ಎರಡನೇ ಬಾರಿಗೆ ಗೆದ್ದ ಗುರ್ಮೀತ್ ಸಿಂಗ್ ಮೀತ್ ಹಯರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು‌. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಮಾಲೌಟ್‌ನಿಂದ ಆಯ್ಕೆಯಾಗಿದ್ದ ಡಾ ಬಲ್ಜಿತ್ ಕೌರ್, ಜಂಡಿಯಾಲಾದ ಶಾಸಕ ಹರ್ಭಜನ್ ಸಿಂಗ್ ಇಟಿಒ, ಮಾನ್ಸಾದಿಂದ ಚುನಾಯಿತರಾದ ಡಾ ವಿಜಯ್ ಸಿಂಗ್ಲಾ, ಭೋವಾದಿಂದ ಆಯ್ಕೆಯಾದ ಲಾಲ್ ಚಂದ್ ಕಟಾರು ಚಾಕ್, ಅಜ್ನಾಲಾ ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಪಟ್ಟಿ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಆನಂದಪುರ ಸಾಹಿಬ್‌ ಶಾಸಕ ಹೊಶಿಯಾರ್‌ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಮೊದಲ ಬಾರಿ ಆಯ್ಕೆಯಾಗಿ ಸಚಿವರಾದ ಶಾಸಕರಾಗಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 1ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿಗೆ ಬಲಿ

    ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ‌ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

  • ತಂದೆ ಚುನಾಚಣೆಯಲ್ಲಿ ಗೆಲ್ಲುವವರೆಗೂ ಮದುವೆ ಆಗಲ್ಲ: ಸಿಧು ಮಗಳ ಶಪಥ

    ತಂದೆ ಚುನಾಚಣೆಯಲ್ಲಿ ಗೆಲ್ಲುವವರೆಗೂ ಮದುವೆ ಆಗಲ್ಲ: ಸಿಧು ಮಗಳ ಶಪಥ

    ಚಂಡಿಗಢ: ನವಜೋತ್ ಸಿಂಗ್ ಸಿಧು ಪರವಾಗಿ ಮಗಳು ರಬಿಯಾ ಪ್ರಚಾರ ಮಾಡುತ್ತಿದ್ದಾರೆ. ತಂದೆ ಚುನಾವಣೆಯಲ್ಲಿ ಗೆಲ್ಲುವವರೆಗೂ ಮದುವೆ ಆಗಲ್ಲ ಎಂದ ನವಜೋತ್ ಸಿಂಗ್ ಸಿಧು ಮಗಳು ರುಬಿಯಾ ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಪ್ರಚಾರ ಸಮಯದಲ್ಲಿ ಮಾತನಾಡಿದ ರುಬಿಯಾ, ತಂದೆ ಹಣದ ಕೊರತೆಯಿಂದ ಮಗಳ ಮದುವೆ ಆಗುವುದಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದ್ದರು. ನಾನು ಕೂಡ ತಂದೆಯ ಗೆಲುವಿನ ಬಳಿಕವೇ ಮದುವೆಯಾಗುತ್ತೇನೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿರುವ ಚರಂಜಿತ್ ಸಿಂಗ್ ಚನ್ನಿ ನಿಜವಾಗಿಯೂ ಬಡವರ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಆ ರೀತಿ ಮಾಡಿದರೆ ಅವರ ಖಾತೆಯಲ್ಲಿ 133 ಕೋಟಿಗೂ ಅಧಿಕ ಹಣ ಇರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

    ಪಕ್ಷ ಕೆಲವೊಮ್ಮೆ ಕಟ್ಟುಪಾಡಿಗೆ ಒಳಗಾಗಿ ಬಿಡುತ್ತದೆ. ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲದವರೆಗೆ ದೂರವಿಡಲು ಸಾಧ್ಯವಿಲ್ಲ. ಕಳೆದ 14 ವರ್ಷಗಳಿಂದ ಪಂಜಾಬ್‍ಗಾಗಿ ತನ್ನ ತಂಧೆ ಕೆಲಸ ಮಾಡುತ್ತಿದ್ದಾರೆ, ಅವರು ರಾಜ್ಯಕ್ಕೆ ಹೊಸ ಮಾದರಿಯನ್ನು ರಚಿಸುತ್ತಿದ್ದು, ಅವರನ್ನು ಗೌರವಿಸಬೇಕು. ತಮ್ಮ ತಂದೆಯನ್ನು ಇತರ ರಾಜಕೀಯ ಪಕ್ಷದ ನಾಯಕರ ಜೊತೆ ಹೋಲಿಸಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಚನ್ನಿ ಅವರ ವಿರುದ್ಧವೂ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಪಂಜಾಬ್ ಕೆಟ್ಟ ಪರಿಸ್ಥಿತಿಯಲ್ಲಿದ್ದು, ರಾಜ್ಯವನ್ನು ಉಳಿಸುವ ಏಕೈಕ ವ್ಯಕ್ತಿಯೆಂದರೆ ಅದು ನನ್ನ ತಂದೆ ನವಜೋತ್ ಸಿಂಗ್ ಸಿಧು ಆಗಿದ್ದಾರೆ. ನನ್ನ ತಂದೆಯನ್ನ ಹಿಂದಕ್ಕೆ ತಳ್ಳಲು ರಾಜಕೀಯ ವಿರೋಧಿಗಳು ಮತ್ತು ಇತರರು ಪ್ರಯತ್ನಿಸುತ್ತಿದ್ದಾರೆ. ಅವರು ಇಲ್ಲಿನ ಡ್ರಗ್ ಮಾಫಿಯಾ ಮತ್ತು ಮರಳು ಮಾಫಿಯಾ ಕೊನೆಗಣಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿನ ಇಂದಿನ ಪರಿಸ್ಥಿತಿಯಿಂದ ಸಿಧುಗೆ ನೋವಾಗಿದೆ. ತಮ್ಮ ತಂದೆ ಈ ಚುನಾವಣೆಯಲ್ಲಿ ಗೆಲ್ಲುವವರೆಗೂ ತಾನು ಮದುವೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ

    ತಂದೆಗೆ ಪ್ರತಿಸ್ಪರ್ಧಿಯಾಗಿರುವ ಅಮೃತಸರದಿಂದ ಸ್ಪರ್ಧಿಸುತ್ತಿರುವ ಎಸ್‍ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧವೂ ವಾಗ್ದಾಳಿ ನಡೆಸಿದ ರಬಿಯಾ ಕ್ಷೇತ್ರದ ಜನರು ಈಗ ನಿರ್ಧಾರ ನಡೆಸಬೇಕು. ಒಂದು ಕಡೆ ಡ್ರಗ್ಸ್ ಮತ್ತು ಇನ್ನೊಂದು ಬದಿಯಲ್ಲಿ ಅಭಿವೃದ್ಧಿ, ಉದ್ಯೋಗಗಳು ಮತ್ತು ಶಿಕ್ಷಣವಿದೆ. ಅವರಿಗೆ ಬೇಕಾದನ್ನು ಆಯ್ಕೆ ಮಾಡುವ ಹಕ್ಕು ಅವರಿಗೆ ಇದೆ ಎಂದು ಕಿಡಿಕಾರಿದ್ದಾರೆ.

  • ತುಂಡುಡುಗೆ ಉಟ್ಟ ಯುವತಿಯರನ್ನು ಕಂಡ್ರೆ ರೇಪ್ ಮಾಡಿ – 7 ಮಂದಿಗೆ ಮಹಿಳೆ ಸೂಚನೆ

    ತುಂಡುಡುಗೆ ಉಟ್ಟ ಯುವತಿಯರನ್ನು ಕಂಡ್ರೆ ರೇಪ್ ಮಾಡಿ – 7 ಮಂದಿಗೆ ಮಹಿಳೆ ಸೂಚನೆ

    – ಹೇಳಿಕೆಗೆ ಕ್ಷಮೆ ಕೇಳಲು ಮಹಿಳೆ ನಿರಾಕರಣೆ

    ಚಂಡೀಗಢ: ಮಹಿಳೆಯೊಬ್ಬರು 7 ಮಂದಿಯ ಜೊತೆ ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಸೂಚನೆ ನೀಡಿರುವ ಹೇಯ ವಿಚಾರವೊಂದು ಬೆಳಕಿಗೆ ಬಂದಿದೆ.

    ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ ಹಾಗೂ ಹುಡುಗಿಯರ ಗುಂಪೊಂದು ಉಡುಗೆಯ ಬಗ್ಗೆ ಮಾತಿನ ಚಕಮಕಿ ನಡೆಸಿದೆ. ಇದನ್ನು ಗುಂಪಿನಲ್ಲಿದ್ದ ಯುವತಿಯೊಬ್ಬಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ.

    ವಿಡಿಯೋದಲ್ಲಿ ಈ ಹಿಂದೆ ಮಧ್ಯವಯಸ್ಸಿನ ಮಹಿಳೆ ಟೀಕಿಸಿದ್ದ ಹುಡುಗಿಯರ ಗುಂಪೊಂದು ಅದೇ ಮಹಿಳೆಯನ್ನು ರೆಸ್ಟೋರೆಂಟ್ ಒಂದರಲ್ಲಿ ಸಂಪರ್ಕಿಸಿತ್ತು. ಈ ವೇಳೆ ಹುಡುಗಿಯರು, ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಹುಡುಗಿಯರ ಗುಂಪು ತನ್ನನ್ನು ಹಿಂಬಾಲಿಸುತ್ತಿರುವುದರಿಂದ ಸಿಟ್ಟುಗೊಂಡ ಮಹಿಳೆ, ಸ್ಟೋರ್ ಸಿಬ್ಬಂದಿಯಲ್ಲಿ ಪೊಲೀಸರಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಇದೇ ವೇಳೆ ಯುವತಿಯರು ಕ್ಷಮೆ ಕೇಳಬೇಕೆಂದು ಕೇಳಿದಾಗ, ಮಹಿಳೆ ತನ್ನ ಹೇಳಿಕೆಯನ್ನು ಪುನರಾವರ್ತಿಸಲು ನಿರಾಕರಿಸಿದರು. ಅಲ್ಲದೆ ವೀಡಿಯೊವನ್ನು ಚಿತ್ರೀಕರಿಸುವ ಹುಡುಗಿಗೆ “ಗೋ ಟು ಹೆಲ್” ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಸ್ಟೋರ್ ಎದುರು ನಡೆಯುತ್ತಿರುವ ಈ ಚರ್ಚೆಯನ್ನು ಗಮನಿಸಿದ ಮಹಿಳೆಯೊಬ್ಬರು ಯುವತಿಯರಿಗೆ ಬೆಂಬಲವಾಗಿ ನಿಂತು, ಮಹಿಳೆ ಜೊತೆ ಕ್ಷಮೆ ಕೇಳುವಂತೆ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ತಾಯಿಯಾಗಿದ್ದವಳು ಪುರುಷರನ್ನು ಪ್ರೋತ್ಸಾಹಿಸುವಂತಹ ಮನೋಭಾವವನ್ನು ಬೆಳೆಸಬಾರದು ಎಂದು ಹೇಳಿದ್ದಾರೆ. ಅಲ್ಲದೆ ಅತ್ಯಾಚಾರದ ಭಾವನೆ ಬಗ್ಗೆ ಕೇಳಿದಾಗ ಮಧ್ಯಮ ವಯಸ್ಸಿನ ಮಹಿಳೆ, ಸಣ್ಣ ಉಡುಪುಗಳನ್ನು ಯುವತಿಯರು ಧರಿಸಬಾರದು ಎಂದು ಪುನರುಚ್ಚರಿಸಿದರು.

    ಕೊನೆಯಲ್ಲಿ ಮಹಿಳೆ ಮೊಬೈಲ್ ಕ್ಯಾಮೆರಾಗಳತ್ತ ನೋಡಿ, ಇಂತಹ ಮಹಿಳೆಯರು ಸಣ್ಣ, ಸಣ್ಣ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿ ಮಹಿಳೆ ಹೇಳುತ್ತಿದ್ದಂತೆಯೇ  ರೆಸ್ಟೋರೆಂಟ್ ನಲ್ಲಿದ್ದ ವ್ಯಾಪಾರಿಗಳು ಚಪ್ಪಾಳೆ ತಟ್ಟಿದರು. ಅಲ್ಲದೆ ಉಡುಗೆ ತೊಡುವಾಗ ಮಕ್ಕಳನ್ನು ಕಂಟ್ರೋಲ್ ಮಾಡುವಂತೆ ಮಹಿಳೆ ಪೋಷಕರಿಗೆ ಸೂಚನೆ ನೀಡಿದರು. ಇಷ್ಟು ಮಾತ್ರವಲ್ಲದೇ ಈ ವಿಡಿಯೋವನ್ನು ದೇಶಾದ್ಯಂತ ಪಸರಿಸುವಂತೆಯೂ ಮಹಿಳೆ ಯುವತಿಯಲ್ಲಿ ಕೇಳಿಕೊಂಡಿದ್ದಾರೆ.

    ಇದನ್ನು ಗುಂಪಲ್ಲಿದ್ದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ಬಳಿಕ ಈ ದೃಶ್ಯ ಸಾಕಷ್ಟು ವೈರಲ್ ಆಗಿದ್ದು, ನಂತರ ಇನ್ ಸ್ಟಾಗ್ರಾಮ್ ನಿಂದ ವಿಡಿಯೋವನ್ನು ಅಳಿಸಲಾಗಿದೆ. ಆ ಬಳಿಕ ಹುಡುಗಿಯರನ್ನು ಟೀಕಿಸುತ್ತಿರುವ ವಿಚಾರವಾಗಿ ಮಹಿಳೆ ತನ್ನ ಫೇಸ್ ಬುಕ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದಾರೆ.

    https://www.facebook.com/shivani.gupta.31/videos/vb.772524933/10156696568474934/?type=2&video_source=user_video_tab

  • ಅಂಬಾಲದಲ್ಲಿ ಬೈಕ್ ಅಪಘಾತ – ಬೀಳಗಿಯ ಯೋಧ ದುರ್ಮರಣ

    ಅಂಬಾಲದಲ್ಲಿ ಬೈಕ್ ಅಪಘಾತ – ಬೀಳಗಿಯ ಯೋಧ ದುರ್ಮರಣ

    ಬಾಗಲಕೋಟೆ: ಬೈಕ್ ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧರೊಬ್ಬರು ಮೃತಪಟ್ಟ ಘಟನೆ ಚಂಡಿಗಢದ ಅಂಬಾಲಾ ಪ್ರದೇಶದ ಬಳಿ ಇಂದು ನಡೆದಿದೆ.

    ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಪಾಂಡು ಲಮಾಣಿ(25) ಮೃತ ಯೋಧ. ಕಳೆದ ಆರು ವರ್ಷದಿಂದ ಭಾರತೀಯ ವಾಯುಸೇನೆಯಲ್ಲಿ ಏರ್ ಮನ್ ಆಗಿ ಪಾಂಡು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತವಾಗಿ ಚಂಡಿಗಢದ ಅಂಬಾಲದ ವಾಯುನೆಲೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹೊರಡುವಾಗ ನಡೆದ ರಸ್ತೆ ಅಪಘಾತದಲ್ಲಿ ಪಾಂಡು ಮೃತಪಟ್ಟಿದ್ದಾರೆ.

    ಈ ಬಗ್ಗೆ ಮಧ್ಯಾಹ್ನದ ಹೊತ್ತಿಗೆ ಕುಟುಂಬಸ್ಥರಿಗೆ ವಿಷಯ ತಿಳಿದಿದ್ದು, ಮನೆಮಂದಿ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪಾಂಡು ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಚಂಡಿಗಢ ವಾಯುಸೇನೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

  • ಅಪ್ರಾಪ್ತೆಯನ್ನು ಅಪಹರಿಸಿ ಗ್ಯಾಂಗ್‍ರೇಪ್!

    ಅಪ್ರಾಪ್ತೆಯನ್ನು ಅಪಹರಿಸಿ ಗ್ಯಾಂಗ್‍ರೇಪ್!

    -ರಾತ್ರಿ ಬಾಲಕಿಯನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿ

    ಚಂಡಿಗಢ: 7 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸೆಗಿರುವ ಅಮಾನವೀಯ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದ ರೈಲ್ವೇ ಯಾರ್ಡ್ ಬಳಿ ನಡೆದಿದೆ.

    ಗುರುವಾರ ಸಂಜೆ ವೇಳೆ ರೋಹ್ಟಕ್ ರೈಲ್ವೇ ನಿಲ್ದಾಣದಿಂದ 300 ಮೀ. ದೂರದಲ್ಲಿರುವ ರೈಲ್ವೇ ಯಾರ್ಡ್ ಬಳಿ ಬಾಲಕಿಯನ್ನು ಮೂವರು ಕಾಮುಕರು ಅಪಹರಿಸಿದ್ದಾರೆ. ಬಳಿಕ ರಾತ್ರಿ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದಾರಿ ಮೇಲೆಯೇ ಬಿಟ್ಟು ಹೋಗಿದ್ದಾರೆ. ನಂತರ ಬಾಲಕಿ ಹೇಗೋ ಮನೆಯನ್ನು ತಲುಪಿ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಈ ಕುರಿತು ತಿಳಿಯುತ್ತಿದ್ದಂತೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳಲ್ಲಿ ಸಂತ್ರಸ್ತೆಯ ತಂದೆ ಓರ್ವನನ್ನು ಗುರುತಿಸಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ರೈಲ್ವೇ ನಿಲ್ದಾಣ ಮತ್ತು ಘಟನಾ ಸ್ಥಳದ ಆಸುಪಾಸಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಹಿನ್ನೆಲೆಯಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿಲ್ಲ. ಆದರೂ ಕೂಡ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಘಟನೆ ಕುರಿತು ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದ ಗಾಯಕಿ ಕಮ್ ಡ್ಯಾನ್ಸರ್

    ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದ ಗಾಯಕಿ ಕಮ್ ಡ್ಯಾನ್ಸರ್

    ಚಂಡಿಗಢ: ಹರ್ಯಾಣದ ಗಾಯಕಿ ಮತ್ತು ಡ್ಯಾನ್ಸರ್ ಒಬ್ಬರು ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅನಾಮಿಕ ಬಾವಾ(30) ಆತ್ಮಹತ್ಯೆಗೆ ಯತ್ನಿಸಿದ ಗಾಯಕಿ. ಅನಾಮಿಕ ಅವರು ಆನ್ನೆ ಬಿ ಎಂದು ಖ್ಯಾತರಾಗಿದ್ದು, ಫೇಸ್‍ಬುಕ್ ಲೈವ್‍ಗೆ ಬಂದು ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನಾಮಿಕ ಈಗ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನಾಮಿಕ ಆತ್ಮಹತ್ಯೆಗೆ ಯತ್ನಿಸಿದ್ದಾಗ ಅವರನ್ನು ಹಿಸ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಣಪಾಯದಿಂದ ಪಾರಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ತನ್ನ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಯತ್ನಿಸಿದ್ದೇನೆ ಎಂದಿದ್ದಾರೆ. ಅನಾಮಿಕ ಶನಿವಾರ ಚಿಕಿತ್ಸೆ ಪಡೆದು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಭಾನುವಾರ ಆಸ್ಪತ್ರೆ ಸಿಬ್ಬಂದಿ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಅನಾಮಿಕ ಅವರ ಹೇಳಿಕೆ ಪಡೆಯಲು ಒಂದು ತಂಡವನ್ನು ರಚಿಸಿ ಅವರ ಮನೆಗೆ ಕಳುಹಿಸಲಾಯಿತು ಎಂದು ಪೊಲೀಸ್ ವಕ್ತಾರ ಹರೀಶ್ ಭಾರದ್ವಾಜ್ ತಿಳಿಸಿದ್ದಾರೆ.

    ಕಳೆದ 12 ವರ್ಷದಿಂದ ಹರ್ಯಾಣದಲ್ಲಿ ನಾನು ಗಾಯಕಿ ಹಾಗೂ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ರೋಹ್ಟಕ್ ನಲ್ಲಿ ವಿಡಿಯೋ ಎಡಿಟರ್ ಶೇಖರ್ ಖನ್ನಾ ಅವರ ಪರಿಚಯವಾಯಿತು. ಬಳಿಕ ನಮ್ಮಿಬ್ಬರ ಪೋಷಕರ ಒಪ್ಪಿಗೆ ಮೇರೆಗೆ 2013ರಲ್ಲಿ ನಮ್ಮ ಮದುವೆ ನಡೆಯಿತು. ಮದುವೆ ಬಳಿಕ ನಮ್ಮಿಬ್ಬರ ಮಧ್ಯೆ ಆಗಾಗ ಜಗಳವಾಗುತಿತ್ತು. ಹಾಗಾಗಿ ನಾನು ನನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಅನಾಮಿಕ ಹೇಳಿದ್ದಾರೆ.

    ಶನಿವಾರ ಶೇಖರ್ ಹುಟ್ಟುಹಬ್ಬವಿತ್ತು. ಈ ದಿನ ದೆಹಲಿ ಮೂಲದ ಮಹಿಳೆ ಜೊತೆ ಶೇಖರ್ ಗೆ ಅನೈತಿಕ ಸಂಬಂಧವಿದೆ ಎಂಬ ವಿಷಯ ನನಗೆ ತಿಳಿಯಿತು. ಆ ಮಹಿಳೆ ಹಲವು ಬಾರಿ ನನಗೆ ಕರೆ ಮಾಡಿ ನಿನ್ನ ಪತಿಗೆ ವಿಚ್ಛೇದನ ನೀಡು ಎಂದು ಹೇಳುತ್ತಿದ್ದಳು. ಅಲ್ಲದೇ ನನ್ನ ಪತಿ ಜೊತೆ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ಆಕೆ ನನಗೆ ಅಂದು ಕಳುಹಿಸಿದ್ದಳು. ಈ ಕಾರಣಕ್ಕೆ ನಾನು ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಾನು ವಿಷ ಸೇವಿಸಲು ನನ್ನ ಪತಿ ಹಾಗೂ ಆ ಮಹಿಳೆ ಕಾರಣ ಎಂದು ಅನಾಮಿಕ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6 ವರ್ಷದ ಮಗನಿಗೆ ಸ್ನಾನ ಮಾಡಿಸೋವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ತಾಯಿ!

    6 ವರ್ಷದ ಮಗನಿಗೆ ಸ್ನಾನ ಮಾಡಿಸೋವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ತಾಯಿ!

    ಚಂಡಿಗಢ: ತಾಯಿಯೊಬ್ಬಳು ತನ್ನ 6 ವರ್ಷದ ಮಗನನ್ನು ಸ್ನಾನ ಮಾಡಿಸುವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ಘಟನೆ ಪಂಜಾಬ್‍ನ ಬಟಿಂದ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ ಬಾಯಿ ಮಾತಿ ದಾಸ್‍ನಗರದ ನಿವಾಸಿಯಾಗಿದ್ದು, ತನಗಿದ್ದ ಒಬ್ಬನೇ ಮಗನನ್ನು ಡ್ರ್ಯಾಗರ್ ನಿಂದ ಹೊಡೆದು ಕೊಂದಿದ್ದಾಳೆ ಎಂದು ಬಟಿಂದದ ಸ್ಟೇಷನ್ ಹೌಸ್ ಅಧಿಕಾರಿ ರಾಶ್‍ಪಲ್ ಸಿಂಗ್ ತಿಳಿಸಿದ್ದಾರೆ.

    ಡ್ರ್ಯಾಗರ್ ಹೊಡೆತದಿಂದ ಬಾಲಕನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ತಾಯಿ ತನ್ನ ಮಗನನ್ನು ಏಕೆ ಕೊಂದಿದ್ದಾಳೆ ಎಂಬ ಸತ್ಯ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯನ್ನು ಬಂಧಿಸಿ ಆಕೆಯ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಘಟನೆಗೆ ಸಂಬಂಧಪಟ್ಟ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಇನ್ನೂ ಮಹಿಳೆ ತನ್ನ ಮಗನನ್ನು ಏಕೆ ಕೊಂದಳು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ರಾಶ್‍ಪಲ್ ಸಿಂಗ್ ತಿಳಿಸಿದ್ದಾರೆ.