ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್- ಶ್ರೀನಿ ಜೋಡಿಯ ‘ಘೋಸ್ಟ್’ (Ghost Film) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಘೋಸ್ಟ್ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಶಿವರಾಜ್‌ಕುಮಾರ್ (Shivarajkumar) ‘ಘೋಸ್ಟ್’ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಅದು ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದನ್ನೂ ಓದಿ:ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಟೈಗರ್ 3
ಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಕೊಟ್ಟಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ.
ಅನುಪಮ್ ಕೇರ್ (Anupam Kher), ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಾಯಕಿ ಇಲ್ಲ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಅಬ್ಬರಿಸಿರುವ ಶಿವಣ್ಣನ ‘ಘೋಸ್ಟ್’ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಜೀ5 ಒಟಿಟಿಯಲ್ಲಿ ನೋಡಬಹುದು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನದ ಕಾರಣದಿಂದ ಶಿವಣ್ಣ ಕಳೆದ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಜುಲೈ 12ರಂದು ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಬರ್ತ್‌ಡೇಯನ್ನ ಆಚರಿಸಿಕೊಳ್ತಿದ್ದಾರೆ. ಫ್ಯಾನ್ಸ್‌ಗಾಗಿ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ. ನಾಳೆ ಏನೆಲ್ಲಾ ಸರ್ಪ್ರೈಸ್ ಇರಲಿದೆ ಇಲ್ಲಿದೆ ಡಿಟೈಲ್ಸ್.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಜೂನ್ 12ರಂದು 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ‘ಆನಂದ’ ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ ನಟ, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 60ರ ವಯಸ್ಸಿನಲ್ಲೂ ಯಂಗ್ & ಎನರ್ಜಿಟಿಕ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ.
ಇದೀಗ ಶಿವಣ್ಣ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶಿವರಾಜ್ ಕುಮಾರ್ ಬರ್ತಡೇಗೆ ಫ್ಯಾನ್ಸ್ ಕಡೆಯಿಂದ ಸಿದ್ಧತೆ ನಡೆಯುತ್ತಿದೆ. ಇಂದು ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜೊತೆ ಆಚರಣೆ ಶಿವಣ್ಣ, ಬರ್ತ್‌ಡೇ ಸೆಲೆಬ್ರೆಟ್ ಮಾಡಲಿದ್ದಾರೆ. ಬೆಳಗ್ಗೆ 8ರಿಂದ 10ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಬಳಿಕ 10:30ಕ್ಕೆ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಪೂಜೆ ಇರಲಿದೆ. ಇದಾದ ನಂತರ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾದ ಟೀಸರ್ 11:45ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಲಾಂಚ್ ಆಗಲಿದೆ. ಮತ್ತೆ ಸಂಜೆ ನಾಗವಾರದ ಮನೆಯಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲಿದ್ದಾರೆ. ಅಭಿಮಾನಿಗಳಿಗಾಗಿ ಚಿಕನ್ ಬಿರಿಯಾನಿಯನ್ನ ಶಿವಣ್ಣನ ಆಪ್ತಬಳಗ ಮಡಿಸುತ್ತಿದ್ದಾರೆ.
ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ‘ಘೋಸ್ಟ್’ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಟ್ಟಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ.
ಶಿವಣ್ಣ ಬರ್ತ್‌ಡೇ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ (Ghost Film) ಸಿನಿಮಾ ತಂಡದಿಂದ ಬಿಗ್ ಡ್ಯಾಡಿ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11:45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದನ್ನೂ ಓದಿ:ಸ್ಟೈಲೀಶ್ ಆಗಿ ಕಾಣಿಸಿಕೊಂಡ ‘ಅಮೃತಧಾರೆ’ ಸಾರಾ- ಕಾವ್ಯಾ ಗೌಡ
ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಫ್ಯಾನ್ಸ್‌ಗೆ ನಿರೀಕ್ಷೆ ಮೂಡಿಸಿದೆ. ಘೋಸ್ಟ್ ಸಿನಿಮಾದ ಜೊತೆ ಶಿವಣ್ಣ ನಟಿಸಿರುವ ಪರಭಾಷಾ ಸಿನಿಮಾಗಳ ಲುಕ್ ಕೂಡ ರಿವೀಲ್ ಆಗಲಿದೆ.
ಬಾಲಿವುಡ್ (Bollywood) ನಟ ಅನುಪಮ್ ಖೇರ್ ಇದೀಗ ಶಿವಣ್ಣ (Shivanna) ನಟನೆಯ ‘ಘೋಸ್ಟ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಅನುಪಮ್ ಖೇರ್‌ಗೆ ಶಿವಣ್ಣ ಸ್ವಾಗತಿಸಿದ್ದಾರೆ.
ನಟ-ನಿರ್ದೇಶಕ ಶ್ರೀನಿ ನಿರ್ದೇಶನದ ‘ಘೋಸ್ಟ್’ (Ghost) ಚಿತ್ರದಲ್ಲಿ ಶಿವಣ್ಣ ಜೊತೆ ಹಿಂದಿ ನಟ ಅನುಪಮ್ ಖೇರ್ (Anupam Kher) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಪಾತ್ರಕ್ಕೆ ಆದ್ಯತೆಯಿದ್ದು, ಶಿವಣ್ಣ ಜೊತೆಗಿನ ಜುಗಲ್‌ಬಂದಿ ಮೋಡಿ ಮಾಡಲಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್
‘ ದಿ ಕಾಶ್ಮೀರ್ ಫೈಲ್ಸ್’ (Kashmir Files) ನಟ ಅನುಪಮ್ ಖೇರ್ ಸ್ಯಾಂಡಲ್‌ವುಡ್‌ಗೆ ಬಂದಿರೋದ್ದಕ್ಕೆ ಶಿವಣ್ಣ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಕುರಿತ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು, ತುಂಬಾ ಖುಷಿ ಆಯ್ತು ಅನುಪಮ್ ಸರ್. ನಿಮ್ಮ ಅಭಿನಯ ಮತ್ತು ವ್ಯಕ್ತಿತ್ವ ಎರಡು ಅದ್ಭುತ. ನಿಮ್ಮನ್ನು ‘ಘೋಸ್ಟ್’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತೇನೆ.
ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು @AnupamPKher ಸರ್.
ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು #Ghost ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ. pic.twitter.com/w6kJG6CfPy
ಶಿವರಾಜ್‌ಕುಮಾರ್ (Shivarajkumar) ನಟನೆಯ ನಿರೀಕ್ಷಿತ ಚಿತ್ರ `ಘೋಸ್ಟ್’ (Ghost) ಸಿನಿಮಾ ಶೂಟಿಂಗ್‌ನಲ್ಲಿ ನಟ ಬ್ಯುಸಿಯಾಗಿದ್ದಾರೆ. ಶಿವಣ್ಣನ ಸಿನಿಮಾಗೆ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಸಾಥ್ ನೀಡಲಿದ್ದಾರೆ.
ಶಿವಣ್ಣ ನಟನೆಯ `ವೇದ’ (Vedha Film) ಸಿನಿಮಾ ಇದೀಗ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾದತ್ತ ನಟ ಗಮನ ಕೊಡ್ತಿದ್ದಾರೆ. ಸದ್ಯ ʻಘೋಸ್ಟ್ʼ ಚಿತ್ರದ ಶೂಟಿಂಗ್‌ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.
ಬೀರ್‌ಬಲ್, ಓಲ್ಡ್‌ಮಾಂಕ್ ಚಿತ್ರಗಳನ್ನ ನಟಿಸಿ ನಿರ್ದೇಶಿಸಿದ್ದ ಶ್ರೀನಿ ಇದೀಗ ಘೋಸ್ಟ್ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ. ಘೋಸ್ಟ್ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಲೆಯುತ್ತಲೇ ಬಂದಿದೆ. ಹೀಗಿರುವಾಗ ಬಾಲಿವುಡ್ ನಟ ಅನುಪಮ್ ಖೇರ್ ಶಿವಣ್ಣನ ಟೀಮ್ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್
ಮಾಲಿವುಡ್ ನಟ ಜಯರಾಮ್ ನಂತರ ಅನುಪಮ್ ಖೇರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಜೀವತುಂಬಲಿದ್ದಾರೆ. ಶಿವಣ್ಣನ ಜೊತೆ ನಟಿಸಲಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಕಥೆ ಕೇಳಿ ಥ್ರಿಲ್ ಆಗಿ, ಚಿತ್ರತಂಡಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ಗೆ ಭಾಗಿಯಾಗಲಿದ್ದಾರೆ.
Live Tv
[brid partner=56869869 player=32851 video=960834 autoplay=true]