Tag: ಘೋಷಣೆ

  • ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಮೂವರನ್ನು ಪೊಲೀಸರು ಯಾಕೆ ಬಂಧನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಪೊಲೀಸರು ಇಂದು ಮೂವರನ್ನು ಬಂಧನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಿಯಾಂಕ್‌ ಖರ್ಗೆಯವರನ್ನು ಕೇಳಿದಾಗ, ಇವಾಗಲೂ FSL ರಿಪೋರ್ಟ್ ನಲ್ಲಿ‌ ಏನು ಬಂದಿದೆಯೋ ಗೊತ್ತಿಲ್ಲ. ಗೃಹ ಸಚಿವರು ಬಂದ ಮೇಲೆ‌ ಗೊತ್ತಾಗುತ್ತೆ. ವಿಚಾರಣೆ ಆಗಲಿ ಯಾಕೆ ಆತಂಕ ಎಂದಿದ್ದಾರೆ.

    ಮಾಧ್ಯಮಗಳ ಮೇಲೆ ಎಫ್ ಐಆರ್ ಹಾಕಲಿ ಅಂತ ಯಾರು ಹೇಳಿದ್ದಾರೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲೂ ಕೂಗಿ‌ದ್ದಾರೆ ಅಂತ ಇದೆಯಾ..?, ಖಾಸಗಿ ರಿಪೋರ್ಟ್ ನ ಅಧಿಕೃತ ಅಂತ ನಾನು ಬಹಿರಂಗ ಪಡಿಸಿದ್ನಾ?. ಸರ್ಕಾರದ ಎಫ್ ಎಸ್ ಎಲ್ ವರದಿಯನ್ನು ನಾನು ನೋಡಿಲ್ಲ. ನಾಳೆ ಸರ್ಕಾರದ ಎಫ್ ಎಸ್ ಎಲ್ ರಿಪೋರ್ಟ್ ಬರಲಿ ಎಂದು ತಿಳಿಸಿದ್ದಾರೆ.

    ಮೂರು ಜನರನ್ನು ಯಾಕೆ ಆರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ. ಎಫ್ ಎಸ್ ಎಲ್ ಬಂದಿದೆಯಾ ವಾಯ್ಸ್ ಮ್ಯಾಚ್ ಆಗಿದೆಯಾ ಗೊತ್ತಿಲ್ಲ. ಸರ್ಕಾರದ ವರದಿಯೇ ಅಂತಿಮ. ಇವಾಗ್ಲೆ ಕಂಕ್ಲೂಶನ್ ಗೆ ಬರೋದು ಬೇಡ. ಅವರನ್ನ ಕರೆದುಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲದೆ ನಾನು ಮಾತನಾಡಲ್ಲ. ಹಕ್ಕು ಚ್ಯುತಿ ಮಂಡನೆ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

    ಡಿಸಿಪಿ ಸ್ಪಷ್ಟನೆ: ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿ’ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈSಐ ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಈ ಸಂಬಂಧ ಸೆಂಟ್ರಲ್ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

  • ಕಥೆ ನನ್ನ ಎಕ್ಸೈಟ್ ಮಾಡಿದರೆ ಮಾತ್ರ ಸಿನಿಮಾ ಘೋಷಣೆ ಮಾಡುತ್ತೇನೆ : ಯಶ್

    ಕಥೆ ನನ್ನ ಎಕ್ಸೈಟ್ ಮಾಡಿದರೆ ಮಾತ್ರ ಸಿನಿಮಾ ಘೋಷಣೆ ಮಾಡುತ್ತೇನೆ : ಯಶ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಈ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆಯುತ್ತಾ ಬಂದರೂ, ಈವರೆಗೂ ಯಶ್ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ, ಅವರ ಮುಂದಿನ ಸಿನಿಮಾ ಬಗ್ಗೆ ತಿಂಗಳಿಗೊಂದು ಸುದ್ದಿ ಹೊರ ಬರುತ್ತಿವೆ. ಏನೇ ಸುದ್ದಿಗಳು ಹೊರ ಬಂದರೂ, ಅದನ್ನು ಒಪ್ಪುವುದಾಗಲಿ ಅಥವಾ ನಿರಾಕರಿಸುವುದಾಗಲಿ ಯಶ್ ಮಾಡಿರಲಿಲ್ಲ.

    ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಜೊತೆ ತಮ್ಮ ಹೊಸ ಸಿನಿಮಾ ಬಗ್ಗೆ ಮಾತನಾಡಿದ ಯಶ್, ‘ನನಗೆ ಸಿನಿಮಾ ಮಾಡುವಂತಹ ಅವಸರ ಏನೂ ಇಲ್ಲ. ಕೆಲವರು ಹೇಳಿದರು ಕೆಜಿಎಫ್ ಯಶಸ್ಸನ್ನು ಎನ್ ಕ್ಯಾಶ್ ಮಾಡಿಕೊಳ್ಳಿ ಅಂತ. ನಾನು ಹಾಗೆ ಮಾಡುವುದಿಲ್ಲ. ನಾನು ಕೇಳುತ್ತಿರುವ ಕಥೆ ನನ್ನ ಎಕ್ಸೈಟ್ ಮಾಡಬೇಕು. ನನಗೇ ಅದು ಹಿಡಿಸದಿದ್ದರೆ ಜನರೇಕೆ ಅದನ್ನು ನೋಡಬೇಕು? ಹಾಗಾಗಿ ನಾನು ಅವಸರ ಮಾಡುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಒಂದೊಳ್ಳೆ ಸಿನಿಮಾದ ಜೊತೆಗೆ ಬರುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದು, ಕಥೆ ಸಿದ್ಧವಾಗಿ ಆ ಕಥೆಯನ್ನು ಸಿನಿಮಾ ಮಾಡಬಹುದು ಅಂತ ಅನಿಸಿದಾಗ ತಾವೇ ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೊಸ ಬಗೆಯ ಸಿನಿಮಾ ಕೊಡಬೇಕು ಎನ್ನುವ ತುಡಿತ ಯಾವಾಗಲೂ ಅವರ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು

    ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು

    ಬೆಳಗಾವಿ: ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದು ನಗರಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಎದುರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ ಘಟನೆ ನಡೆಯಿತು.

    ಶರದ್ ಪವಾರ್ ಎರಡು ದಿನಗಳ ಕಾಲ ನಗರದ ಪ್ರವಾಸ ಕೈಗೊಂಡಿದ್ದು ಇಂದು ಬೆಳಗಾವಿಯ ಮರಾಠಾ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರದ್ ಪವಾರ್ ಭಾಷಣ ಆರಂಭವಾಗುತ್ತಿದ್ದಂತೆ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗುವ ವೇಳೆ ಶರದ್ ಪವಾರ್ ಸುಮ್ಮನೆ ನಿಂತರು. ನಾಡದ್ರೋಹಿಗಳ ಹಾರಾಟ ಮುಗಿದ ನಂತರ ಭಾಷಣ ಪ್ರಾರಂಭ ಮಾಡಬಹುದಾ ಎಂದು ಎಂಇಎಸ್ ಪುಂಡರನ್ನು ಶರದ್ ಪವಾರ್ ಕೇಳಿ, ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡ್ತಿನಿ ಅಂತಾ ಹೇಳಿದರು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿ, ಕೃಷ್ಣ ಮೊಪಸೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

  • ಮೈಸೂರು ಆಯ್ತು ಈಗ ಮಂಡ್ಯದ ಬೆಳ್ಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

    ಮೈಸೂರು ಆಯ್ತು ಈಗ ಮಂಡ್ಯದ ಬೆಳ್ಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

    ಮಂಡ್ಯ: ರಂಜಾನ್ ಆಚರಣೆ ವೇಳೆ ಇಸ್ಲಾಂ ಜಿಂದಾಬಾದ್ ಜೊತೆಗೆ ಪಾಕಿಸ್ತಾನ ಜಿಂದಬಾದ್ ಘೋಷಣೆ ಕೂಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ನಡದಿದೆ.

    ಕಳೆದ ವಾರ ನಡೆದ ರಂಜಾನ್ ಹಬ್ಬದ ಆಚರಣೆ ವೇಳೆ ಸಾವಿರಾರು ಮುಸ್ಲಿಂ ಭಾಂದವರು ಬೆಳ್ಳೂರಿನ ಮಸೀದಿವೊಂದಕ್ಕೆ ಪ್ರಾರ್ಥನೆಗೆ ತೆರಳುತ್ತಿದ್ದ ವೇಳೆ ಘೋಷಣೆ ಕೂಗಲಾಗಿದೆ. ಗುಂಪಿನಲ್ಲಿ ಇಸ್ಲಾಂ ಜಿಂದಾಬಾದ್ ಘೋಷಣೆ ಕೂಗುವ ವೇಳೆ ಓರ್ವ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೂಲಕ ಕಿಡಿಗೇಡಿತನ ಮೆರೆದಿದ್ದಾನೆ.

    ಮೈಸೂರಿನ ಕೌಲಂದೆ ಗ್ರಾಮದಲ್ಲಿ ಈ ರೀತಿಯ ಘೋಷಣೆ ಮೂಲಕ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದೀಗ ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

  • ಘೋಷಣೆಯಲ್ಲೇ ಉಳಿದ ಹಾರಂಗಿ ಜಲಾಶಯದ ಹೂಳು ತೆಗೆಯುವ ಕ್ರಮ

    ಘೋಷಣೆಯಲ್ಲೇ ಉಳಿದ ಹಾರಂಗಿ ಜಲಾಶಯದ ಹೂಳು ತೆಗೆಯುವ ಕ್ರಮ

    ಮಡಿಕೇರಿ: ಕೊಡಗು ಜಿಲ್ಲೆ 2018ರಲ್ಲಿ ಪ್ರವಾಹ, ಭೂಕುಸಿತದಿಂದ ಅಕ್ಷರಶಃ ಕುಸಿದು ಹೋಗಿತ್ತು. ಅದರಲ್ಲೂ ಮಡಿಕೇರಿ ತಾಲೂಕಿನ ಹಟ್ಟಿಹೊಳೆಯಿಂದ ಗಾಳಿಬೀಡು ತನಕ ಒಂದರ್ಥದಲ್ಲಿ ಸರ್ವನಾಶವೇ ಆಗಿತ್ತು. ಅದಕ್ಕೆ ಮುಖ್ಯವಾಗಿ ಹಾರಂಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು.

    ಹೀಗಾಗಿಯೇ 2018-19ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾರಂಗಿ ಜಲಾಶಯದ ಹೂಳು ತೆಗೆಯುವುದಕ್ಕೆ 130 ಕೋಟಿ ರೂಪಾಯಿ ಘೋಷಿಸಿದ್ದರು. ಅದಾದ ಬಳಿಕ 2020 ರ ಮೇ, ಏಪ್ರಿಲ್ ತಿಂಗಳಿನಲ್ಲಿ ಬೋಟ್ ಮತ್ತು ಏರಿಯಲ್ ಸರ್ವೇ ಮಾಡಲಾಗಿತ್ತು. ಅದು ಬಿಟ್ಟರೆ ಇದುವರೆಗೆ ಹೂಳು ತೆಗೆಯುವುದಕ್ಕೆ ಕ್ರಮಕೈಗೊಳ್ಳಲೇ ಇಲ್ಲ. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಹೌದು ಇದೀಗ ಮತ್ತೊಂದು ರಾಜ್ಯ ಬಜೆಟ್‍ನ ಹೊಸ್ತಿಲಿನಲ್ಲಿದ್ದೇವೆ. ಆದರೆ ಹೂಳು ತೆಗೆಯುವುದಕ್ಕಾಗಿ ಘೋಷಣೆಯಾಗಿ 3 ವರ್ಷಗಳೇ ಕಳೆದಿವೆ. ಈ ಬಾರಿಯೂ ಹೂಳು ತೆಗೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 8.5 ಟಿಎಂಸಿ ಹಾರಂಗಿ ಜಲಾಶಯದಲ್ಲಿ ಈಗಲೂ 7 ಟಿಎಂಸಿ ಅಡಿ ನೀರು ಇದೆ. ಫೆಬ್ರವರಿ ತಿಂಗಳ ಕೊನೆಯಿಂದ ಕಾಲುವೆಗಳಿಗೆ ನೀರು ಹರಿಸಲಿದ್ದು, ಏಪ್ರಿಲ್ ಮೇ ತಿಂಗಳಿನಲ್ಲಿ ನೀರೇನೋ ಒಂದಷ್ಟು ಪ್ರಮಾಣದಲ್ಲಿ ಕಡಿಮೆ ಆಗಬಹುದು. ಆದರೆ ವಿಪರ್ಯಾಸವೆಂದರೆ ಹೂಳು ತೆಗೆಯುವುದಕ್ಕೆ ಸಂಬಂಧಿಸಿದಂತೆ ಇದುವರೆಗೆ ಟೆಂಡರ್ ಆಗಿಲ್ಲ.

    ಇನ್ನೂ ಒಂದು ವೇಳೆ ಟೆಂಡರ್ ಆಗಿ ಯಾರಾದರೂ ಹೂಳು ತೆಗೆಯುವುದಕ್ಕೆ ಮುಂದೆ ಬಂದರೂ ಅದು ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲಕ್ಕೂ ಮುನ್ನ ಮುಗಿಯಲು ಸಾಧ್ಯವಿಲ್ಲ. ಏಕೆಂದರೆ 8.5 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಬರೋಬ್ಬರಿ ಎರಡು ಟಿಎಂಸಿ ಪ್ರಮಾಣದಷ್ಟು ಹೂಳು ತುಂಬಿದೆ. ಹೀಗಾಗಿ ಜಲಾಶಯದ ಸಾಮಥ್ರ್ಯ ಕಡಿಮೆಯಾಗಿದ್ದು, ತೀವ್ರ ಮಳೆಯಾದಾಗಲೆಲ್ಲ ಜಲಾಶಯಕ್ಕೆ ಹರಿದು ಬರುವ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗಾಗಿ ಕುಶಾಲನಗರ, ಕೂಡಿಗೆ ಕಣಿವೆ ಗ್ರಾಮಗಳ ಸುತ್ತಮುತ್ತ ಪ್ರತೀ ವರ್ಷ ಪ್ರವಾಹ ಸೃಷ್ಟಿಯಾಗುತ್ತಿದೆ. ಇದು ಈ ಬಾರಿಯೂ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಒಟ್ಟಿನಲ್ಲಿ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿರುವ ಹೂಳನ್ನು ತೆಗೆದು ಪ್ರವಾಹದ ಆತಂಕ ತಪ್ಪಿಸುವುದಕ್ಕಾಗಿ 130 ಕೋಟಿ ರೂಪಾಯಿಯನ್ನು ಬಜೆಟ್‍ನಲ್ಲಿಯೇ ಘೋಷಿಸಿ ಮೂರು ವರ್ಷಗಳಾಗಿದ್ದರೂ ಅದು ಘೋಷಣೆಯಾಗಿ ಉಳಿದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು

    ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು

    ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕಾಶ್ಮೀರ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿ ಆದೇಶ ಹೊರಡಿಸಿದೆ.

    ಪುಲ್ವಾಮಾ ದಾಳಿಯಾಗಿ ಶುಕ್ರವಾರಕ್ಕೆ ಒಂದು ವರ್ಷವಾದ ಬೆನ್ನಲ್ಲೇ ಕಾಶ್ಮೀರ ಮೂಲದ ಅಮೀರ್, ತಾಲೀಬ್ ಮತ್ತು ಬಸೀತ್ ಪಾಕಿಸ್ತಾನ ಸೇನೆಯ ಹಾಡಿಗೆ ಧ್ವನಿಗೂಡಿಸಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ವಿಡಿಯೋ ಮಾಡಿ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು. ಇಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿದಲ್ಲದೇ ವಿದ್ಯಾರ್ಥಿಗಳನ್ನ ಥಳಿಸಿದ್ದರು.

    ಬಂಧಿತ ಅಮೀರ್ ಸಿವಿಲ್ ಇಂಜಿನಿಯರಿಂಗ್‍ನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ದಕ್ಷಿಣ ಕಾಶ್ಮೀರದ ಅನಂತನಾಗ್ ಭಾಗದವನು ಎಂದು ತಿಳಿದು ಬಂದಿದೆ. ಅಲ್ಲದೇ ತಾಲೀಬ್ ಹಾಗೂ ಬಸೀತ್ ಇಬ್ಬರು ಸಿವಿಲ್ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ತಾಲೀಬ್ ದಕ್ಷಿಣ ಕಾಶ್ಮೀರದ ಅನಂತನಾಗ್ ಭಾಗದ ವಿದ್ಯಾರ್ಥಿಯಾದರೆ, ಬಸೀತ್ ಉತ್ತರ ಕಾಶ್ಮೀರದ ಸಂಪೂರೆಯವನು ಎಂದು ತಿಳಿದು ಬಂದಿದೆ.

    ಈ ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ತನಿಖೆ ಕೈಗೊಳ್ಳುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಮೂವರು ಕಾಶ್ಮೀರ ಮೂಲದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.

  • ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಮಂಗಳೂರು: ಸಿಎಎ ಪರ ಮಂಗಳೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೊಲೆ ಬೆದರಿಕೆ ಘೋಷಣೆ ಬಗ್ಗೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಘೋಷಣೆ ಕೂಗಿದವರ ಬಗ್ಗೆ ಕನಿಕರ ಇದೆ ಎಂದಿದ್ದಾರೆ.

    ಅವರ ವಿರುದ್ಧವಾಗಿ ಯಾವುದೇ ಕೇಸ್ ನೀಡುವುದಿಲ್ಲ. ಕೊಲೆ ಬೆದರಿಕೆಯ ಘೋಷಣೆ ಕೂಗಿದವರು ಯಾರೂ ಜಿಲ್ಲೆಯವರಲ್ಲ. ಎಲ್ಲರೂ ಹೊರಗಿನಿಂದ ಬಂದರವರು. ಅವರೆಲ್ಲಾ ಮಲಯಾಳಂ ಮಾತನಾಡುತ್ತಿದ್ದರು. ಅವರನ್ನು ಜೈಲಿಗೆ ಕಳುಹಿಸೋದು ದೊಡ್ಡ ವಿಷಯವೇನಲ್ಲ. ಆದರೆ ಅವರ ಮನೆಯವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿ ದೂರು ನೀಡೋ ವಿಷಯಕ್ಕೆ ಹೋಗೋದಿಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.

    ಇದೇ ವೇಳೆ ಸಿಎಎ ಸಮಾವೇಶದ ಬಗ್ಗೆ ಟೀಕಿಸಿದ ಖಾದರ್, ಸಮಾವೇಶದಲ್ಲಿ ಯಾರ ಕೈಯಲ್ಲೂ ರಾಷ್ಟ್ರಧ್ವಜ ಇರಲಿಲ್ಲ. ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದ್ದಾರೆ.

    ನಡೆದಿದ್ದೇನು?
    ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿಯ ಮೈದಾನದಲ್ಲಿ ಸೋಮವಾರ ನಡೆದ ಸಿಎಎ ಪರ ಜನಜಾಗೃತಿ ಸಭೆಗೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಯುವಕರ ಗುಂಪೊಂದು ಘೋಷಣೆ ಕೂಗುತ್ತಿದ್ದು, ಖಾದರ್ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದಾರೆ. ಮಲಯಾಳಂ ಭಾಷೆಯಲ್ಲಿ ‘ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ’. ‘ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್’. ‘ಬೇಕಾಗಿದ್ದಲ್ಲಿ ತಲೆಯನ್ನೂ ಕಡಿಯುವೆವು’ ಈ ರೀತಿ ಬೆದರಿಕೆ ಹಾಕುವ ಘೋಷಣೆ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.

  • ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾರಿಂದಿಳಿದು ರಾಹುಲ್ ಜಿಂದಾಬಾದ್ ಅಂದ್ರು ಬೇಳೂರು!

    ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾರಿಂದಿಳಿದು ರಾಹುಲ್ ಜಿಂದಾಬಾದ್ ಅಂದ್ರು ಬೇಳೂರು!

    ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿದರೂ ಮೋದಿ ಘೋಷಣೆಯ ಅಬ್ಬರ ಮುಗಿಯಲಿಲ್ಲ. ಸಾಗರದಲ್ಲಿ ಕಾಂಗ್ರೆಸ್ ಮುಖಂಡ ಕಾರಿಗೆ ಅಡ್ಡ ಹಾಕಿ ಮೋದಿ ಎಂದು ಘೋಷಣೆ ಕೂಗಲಾಗಿದೆ.

    ಶುಕ್ರವಾರ ರಾತ್ರಿ ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಕಾರಿಗೆ ಅಡ್ಡಹಾಕಿ ಮೋದಿ ಮೋದಿ ಎಂದು ಘೋಷಣೆ ಕೂಗಲಾಗಿತ್ತು. ಈ ವೇಳೆ ಬೇಳೂರು ಗೋಪಾಲಕೃಷ್ಣ ಕಾರಿಂದ ಇಳಿದು, ರಾಹುಲ್ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ.

    ಗೋಪಾಲಕೃಷ್ಣ ಅವರು ರಾಹುಲ್ ಜಿಂದಾಬಾದ್ ಹೇಳುತ್ತಿದ್ದಂತೆ ಮೋದಿ ಪರ ಘೋಷಣೆ ಇನ್ನಷ್ಟು ಜಾಸ್ತಿ ಆಗಿದೆ. ಘೋಷಣೆ ಜಾಸ್ತಿ ಆಗುತ್ತಿದ್ದಂತೆ ಬೆಂಬಲಿಗರು ಬೇಳೂರು ಅವರನ್ನು ಒತ್ತಾಯದಿಂದ ಕಾರತ್ತಿಸಿದ್ದಾರೆ. ಬೇಳೂರು ಜೊತೆಗಿದ್ದವರ ಒತ್ತಾಯಕ್ಕೆ ಕಾರು ಹತ್ತಿ ತೆರಳಿದ್ದರು.

    ಗೋಪಾಲಕೃಷ್ಣ ಅವರು ಹೋದ ಮೇಲೂ ಮುಂದುವರಿದ ಮೋದಿ ಮೋದಿ ಎಂಬ ಘೋಷಣೆ ಕೂಗಲಾಯಿತು.

  • ಯೋಧರ ಕಂಡು ಮುಗಿಲುಮುಟ್ಟಿದ ಪುಟಾಣಿಗಳ ಘೋಷಣೆ – ವಿಡಿಯೋ ವೈರಲ್

    ಯೋಧರ ಕಂಡು ಮುಗಿಲುಮುಟ್ಟಿದ ಪುಟಾಣಿಗಳ ಘೋಷಣೆ – ವಿಡಿಯೋ ವೈರಲ್

    ನವದೆಹಲಿ: ಯೋಧರು ತಮ್ಮ ಮುಂದೆ ಹೋಗುತ್ತಿರುವುದನ್ನು ಗಮನಿಸಿದ ಪುಟಾಣಿಗಳ ತಂಡವೊಂದು ಜೋರಾಗಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮನಮುಟ್ಟುವ ವಿಡಿಯೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಇದೀಗ ಬಿಜೆಪಿ ನಾಯಕ, ಮೇಜರ್ ಸುರೇಂದ್ರ ಪೂನಿಯಾ ಅವರು ತಮ್ಮ ಟ್ವಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಚುನಾವಣಾ ಭರ್ಜರಿ ಪ್ರಚಾರದ ಬ್ಯುಸಿ ಮಧ್ಯೆಯೂ ಮಕ್ಕಳ `ಭಾರತ್ ಮಾತಾಕಿ ಜೈ ಹಾಗೂ ಹೌ ಈಸ್ ದಿ ಜೋಶ್ ಅನ್ನೋ ಘೋಷಣೆ ನನ್ನ ಮನಮುಟ್ಟಿದೆ. ಈ ವಿಡಿಯೋ ನೋಡಿದ ಬಳಿಕ ನನ್ನ ಡ್ರೈವರ್, ಮೇಜರ್ ಸಾಬ್ ಈ ಮಕ್ಕಳ ದೇಶಪ್ರೇಮ ಹಾಗೂ ಸೈನಿಕರ ಮೇಲಿ ಅಭಿಮಾನವನ್ನು ನೋಡಿದ್ರೆ ಸಿನಿಮಾದಲ್ಲಿ ಹೀರೋಗಳು ಬದಲಾಗುತ್ತಲೆ ಇರುತ್ತಾರೆ. ಆದ್ರೆ ನಮ್ಮ ದೇಶದ ಯೋಧರು ಶಾಶ್ವತ ಹೀರೋಗಳು ಎಂಬುದನ್ನು ನಾವು ಅರಿತುಕೊಳ್ಳಬಹುದು” ಎಂದಿದ್ದಾರೆ. ಇದು ಒಬ್ಬ ನಾಗರಿಕ ದೇಶದ ಮೇಲಿಟ್ಟಿರುವ ಗೌರವ ಎಂದು ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ?
    30 ಸೆಕೆಂಡಿನ ಈ ವಿಡಿಯೋದಲ್ಲಿ ಮಕ್ಕಳ ಜೋಶ್ ಎಷ್ಟಿದೆ ಎಂಬುದನ್ನು ನಾವು ಕಾಣಬಹುದು. ರಸ್ತೆಯಲ್ಲಿ ಸೈನಿಕರು ಸಾಲಾಗಿ ಹೋಗುತ್ತಿರುವಾಗ ಮಕ್ಕಳ ಗುಂಪಿನಲ್ಲಿದ್ದ ಬಾಲಕನೊಬ್ಬ `ಭಾರತ್ ಮಾತಾ ಕೀ ಜೈ’ ಹಿಂದೂಸ್ತಾನ್ ಜಿಂದಾಬಾದ್ ಎಂದು ಜೋರಾಗಿ ಘೋಷಣೆ ಕೂಗುತ್ತಾನೆ. ಇದಕ್ಕೆ ಉಳಿದ ಮಕ್ಕಳು ಹಾಗೂ ಸೈನಿಕರು ದನಿಗೂಡಿಸುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.

    ಮಕ್ಕಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಕ್ಕಳ ದೇಶಾಭಿಮಾನ, ಉತ್ಸಾಹ ಹಾಗೂ ಅಭಿಮಾನವನ್ನು ಕೊಂಡಾಡುತ್ತಿದ್ದಾರೆ.

    https://twitter.com/MajorPoonia/status/1118354199916556290

  • ಮದ್ವೆ ಮನೆಯಲ್ಲೂ ಶುರುವಾಯ್ತು ಮೋದಿ ಮತ್ತೊಮ್ಮೆ ಘೋಷಣೆ!

    ಮದ್ವೆ ಮನೆಯಲ್ಲೂ ಶುರುವಾಯ್ತು ಮೋದಿ ಮತ್ತೊಮ್ಮೆ ಘೋಷಣೆ!

    ದಾವಣಗೆರೆ: ನವ ಜೋಡಿಗಳು ತಮ್ಮ ಆಹ್ವಾನ ಪತ್ರಿಕೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿರುವುದು ಗೊತ್ತೇ ಇದೆ. ಈಗ ಮದುವೆ ಮನೆಯಲ್ಲಿ ನವಜೋಡಿಗಳು ‘ಮತ್ತೊಮ್ಮೆ ಮೋದಿ’ ಎಂದು ಕೂಗಿದ್ದಾರೆ.

    ದಾವಣಗೆರೆಯ ಹರಿಹರದ ಸೀತಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನವಜೋಡಿ ವಿಜಯ್ ಮತ್ತು ನಾಗಲಕ್ಷ್ಮಿ ಮದುವೆಯ ಆರತಕ್ಷತೆಯಲ್ಲಿ ಮೋದಿ ಮತ್ತೊಮ್ಮೆ ಎಂದು ಕೂಗಿ ಸ್ನೇಹಿತರಲ್ಲಿ, ಬಂಧು-ಬಾಂಧವರಲ್ಲಿ ಮೋದಿಗೆ ವೋಟ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

    ವಿಜಯ್ ಹಾಗೂ ನಾಗಲಕ್ಷ್ಮಿ ಮೋದಿ ಬಗ್ಗೆ ಅಪಾಯ ಅಭಿಮಾನ ಹೊಂದಿದ್ದಾರೆ. ಈ ಬಾರಿ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ನವಜೋಡಿ ಆರತಕ್ಷತೆಯಲ್ಲಿ ಸ್ನೇಹಿತರ ಜೊತೆ ಮೋದಿ ಮತ್ತೊಮ್ಮೆ ಎಂದು ಘೋಷಣೆ ಕೂಗಿದ್ದಾರೆ.

    ಈ ಹಿಂದೆ ದಕ್ಷಿಣ ಕನ್ನಡದ ಸುಳ್ಯದ ಮದುವೆ ಮನೆಯಲ್ಲಿ ಮೋದಿ ಅವರ ಮನ್ ಕೀ ಬಾತ್ ಕೇಳಿಸಿತ್ತು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದರು. ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.

    ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv