Tag: ಘಾಟಿ ಸುಬ್ರಹ್ಮಣ್ಯ ದೇವಸ್ಥಾನ

  • ಚಂದ್ರಗ್ರಹಣ ಎಫೆಕ್ಟ್ – ಭಾನುವಾರ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಂಜೆ ವೇಳೆಗೆಲ್ಲ ಬಂದ್‌

    ಚಂದ್ರಗ್ರಹಣ ಎಫೆಕ್ಟ್ – ಭಾನುವಾರ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಂಜೆ ವೇಳೆಗೆಲ್ಲ ಬಂದ್‌

    ಚಿಕ್ಕಬಳ್ಳಾಪುರ: ಸೆಪ್ಟಂಬರ್ 7 ರಂದು ಭಾನುವಾರ ಮಧ್ಯರಾತ್ರಿ ಚಂದ್ರಗ್ರಹಣ (Lunar Eclipse) ಗೋಚರಿಸಲಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನ (Ghati Subrahmanya Swamy Temple) ಸಂಜೆ 4:30 ಗಂಟೆಗೆ ಬಂದ್‌ ಮಾಡಲಾಗುತ್ತಿದೆ.

    ಅಂದಹಾಗೆ ಗ್ರಹಣದ ಅಂಗವಾಗಿ ಪ್ರತಿ ದಿನವೂ 8:30ಕ್ಕೆ ಕ್ಲೋಸ್ ಮಾಡಲಾಗುತ್ತಿದ್ದ ದೇವಾಲಯದ ಬಾಗಿಲನ್ನ ಈ ವರ್ಷ ಸಂಜೆ 4:30ಕ್ಕೆ ಮುಚ್ಚಲಾಗುತ್ತದೆ. ಇನ್ನೂ ಗ್ರಹಣದ ನಂತರ ಎಂದಿನಂತೆ ಮರುದಿನ ಬೆಳಿಗ್ಗೆ ಶುದ್ದೀಕರಣ ಮಾಡಿ ಬಳಿಕ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ: ಗವಿಗಂಗಾಧರ ದೇವಾಲಯ ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್

    ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಭಾರತದಾದ್ಯಂತ ಗೋಚರಿಸಲಿದೆ. ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದೆ.

    ಸೆ.7 ಮತ್ತು 8 ರಂದು ಗ್ರಹಣ ಸಂಭವಿಸಲಿದೆ. ಸೆ.7ರ ರಾತ್ರಿ 9:57ರ ರಾತ್ರಿ ಸ್ಪರ್ಶಕಾಲ ಹಾಗೂ ಸೆ.8ರ ಮಧ್ಯರಾತ್ರಿ 1:26ಕ್ಕೆ ಮೋಕ್ಷಕಾಲ ಸಂಭವಿಸಲಿದೆ. ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12:28 ರಿಂದ 1:56ರ ವರೆಗೆ ಇರಲಿದೆ. ಸುದೀರ್ಘ ಅವಧಿ ಅಂದರೆ ಮೂರು ಗಂಟೆಗಳ ಕಾಲ ಸಂಭವಿಸಲಿದೆ. ಭಾರತದಲ್ಲಿ ಎಲ್ಲೆಡೆ ಗ್ರಹಣ ಗೋಚರವಾಗಲಿದೆ. ರಕ್ತವರ್ಣದಲ್ಲಿ ಚಂದಿರ ಗೋಚರಿಸಲಿದ್ದಾನೆ.

    ಇದು ಪೂರ್ಣ ಚಂದ್ರಗ್ರಹಣ. ಇಡೀ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಇದೊಂದು ಅಪರೂಪದ ವಿದ್ಯಮಾನ. ಖಗೋಳ ವಿಸ್ಮಯ ಎಂದು ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಜಮೀನು ಡಿನೋಟಿಫೈ ಮಾಡಿ BSY ರೀತಿ ಜೈಲಿಗೆ ಹೋಗಲು ಸಿದ್ಧನಿಲ್ಲ: ಡಿಕೆಶಿ

  • ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ –  72 ಲಕ್ಷ ರೂ. ಸಂಗ್ರಹ

    ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ – 72 ಲಕ್ಷ ರೂ. ಸಂಗ್ರಹ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಐತಿಹಾಸಿಕ ನಾಗರಾಧಾನ ಕ್ಷೇತ್ರ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ (Ghati Subramanya Temple) ಎರಡು ತಿಂಗಳ ನಂತರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು 72 ಲಕ್ಷ ರೂ. ಸಂಗ್ರಹವಾಗಿದೆ.

    ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ (Temple) ಒಟ್ಟು 72,37098 ರೂ. ಮೊತ್ತ ಸಂಗ್ರಹವಾಗಿದ್ದು, ಜೊತೆಗೆ 40 ಸಾವಿರ ರೂಪಾಯಿ ಮೌಲ್ಯದ 9 ಗ್ರಾಂ 870 ಮಿಲಿ ಚಿನ್ನ, 72,200 ರೂ. ಮೌಲ್ಯದ 2 ಕೆ.ಜಿ 400 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ

    ಈ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್.ಸುಬ್ಬಕೃಷ್ಣಶಾಸ್ತ್ರೀ, ದೇವಾಲಯದ ಸೂಪರ್ ಡೆಂಟ್ ರಘು, ನಂಜಪ್ಪ ಹುಚ್ಚಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್

    ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್

    ಚಿಕ್ಕಬಳ್ಳಾಪುರ: ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಗೆಳೆಯರೊಡನೆ ದೇವಾಲಯಕ್ಕೆ ಬಂದ ಅವರನ್ನು, ದೇವಾಲಯದ ಇಒ ನಾಗರಾಜ್, ಅಧೀಕ್ಷಕ ರಘು ಹುಚ್ಚಪ್ಪ, ಎಸ್‌ಡಿಸಿ ನಾಗರಾಜ್ ಭೇಟಿಯಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇದನ್ನೂ ಓದಿ: CWG 2022: ನಡಿಗೆ, ಜಾವೆಲಿನ್‌ನಲ್ಲಿ ಭಾರತಕ್ಕೆ ಕಂಚು

    ಕಳೆದ ಐದು ವರ್ಷಗಳ ಹಿಂದೆ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ರಾಹುಲ್ ಪೂಜೆ ಸಲ್ಲಿಸಿದ್ದರು. ಇಂದು ಸಂಜೆ ಕೂಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಳಿಕ ಗಾಯದ ಸಮಸ್ಯೆ ಹಾಗೂ ಕೋವಿಡ್‌-19 ನಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಸದ್ಯ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡವನ್ನು ರಾಹುಲ್‌ ಮುನ್ನಡೆಸಬೇಕಿತ್ತು. ಆದರೆ ಗಂಭೀರ ಗಾಯಕ್ಕೆ ತುತ್ತಾಗಿದ್ದರಿಂದ ಅವರು ತಂಡದಿಂದ ಹೊರ ನಡೆದು ಚಿಕಿತ್ಸೆಗಾಗಿ ಜಪಾನ್‌ಗೆ ತೆರಳಿದ್ದರು. ಇನ್ನೇನು ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ಅವರಿಗೆ ಕೋವಿಡ್‌-19 ಪಾಸಿಟಿವ್ ಬಂದಿತ್ತು. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಬೆಳ್ಳಿ

    Live Tv
    [brid partner=56869869 player=32851 video=960834 autoplay=true]