Tag: ಘರ್ ವಾಪ್ಸಿ

  • ವರ್ಗಾವಣೆ ದಂಧೆ, ಕಮಿಷನ್ ಆರೋಪ ಮರೆಮಾಚಲು ಘರ್ ವಾಪ್ಸಿ ಪ್ರಸ್ತಾಪ: ಹೆಚ್‌ಡಿಕೆ

    ವರ್ಗಾವಣೆ ದಂಧೆ, ಕಮಿಷನ್ ಆರೋಪ ಮರೆಮಾಚಲು ಘರ್ ವಾಪ್ಸಿ ಪ್ರಸ್ತಾಪ: ಹೆಚ್‌ಡಿಕೆ

    ಬೆಂಗಳೂರು: ವರ್ಗಾವಣೆ (Transfer) ದಂಧೆ, ಕಮಿಷನ್ (Commission) ದಂಧೆ ವಿಷಯ ಮರೆಮಾಚಲು ಕಾಂಗ್ರೆಸ್‌ನವರು (Congress) ಘರ್ ವಾಪ್ಸಿ (Ghar Vapsi) ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್‌ನಿಂದ ಆಪರೇಷನ್ ಹಸ್ತ ಮತ್ತು ನಾವು ಆಪರೇಷನ್ ಮಾಡಿದರೇ ಜೆಡಿಎಸ್ ಮುಗಿದೇ ಹೋಗುತ್ತದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಘರ್ ವಾಪ್ಸಿ ಬಗ್ಗೆ ಎರಡು ದಿನಗಳಿಂದ ನೋಡುತ್ತಿದ್ದೇನೆ. ಸಣ್ಣ ಸಣ್ಣ ಎಂಎಲ್‌ಎಗಳು, ನಿನ್ನೆ ಮೊನ್ನೆ ಗೆದ್ದವರು ಸಹ 20 ಜನ, 15 ಜನ ಎಂಎಲ್‌ಎಗಳು ಬರುತ್ತಾರೆ ಎನ್ನುತ್ತಾರೆ. ಸರ್ಕಾರ ವರ್ಗಾವಣೆಯಲ್ಲಿ ಲೂಟಿ ಹೊಡೆಯುತ್ತಿದೆ. ಇದು ಜಗಜ್ಜಾಹೀರಾಗಿದೆ. ಕಮಿಷನ್ ಬಗ್ಗೆ ಚರ್ಚೆ ಆಗುತ್ತಿದೆ. ಕೆಂಪಣ್ಣ 40% ಬದಲಾಗಿ 20% ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. 20% ಯಾಕೆ ಕೊಡಬೇಕು? ಇದು ರಾಜ್ಯನಾ? ಏನು ಅಂತ ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ: ಪರಮೇಶ್ವರ್

    ವರ್ಗಾವಣೆ ದಂಧೆ, ಕಮಿಷನ್ ದಂಧೆ ಮರೆಮಾಚಲು ಘರ್ ವಾಪ್ಸಿ ಶುರುವಾಗಿದೆ ಅಷ್ಟೇ. ಯಾವುದೇ ಪಕ್ಷಗಳನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ. 1999ರಲ್ಲಿ ಎಸ್‌ಎಂ ಕೃಷ್ಣ (SM Krishna) ಅವರ ಬಹುಮತದ ಸರ್ಕಾರ ಇತ್ತು. ಆಗಲೂ ಬಿಜೆಪಿ, ಜೆಡಿಎಸ್‌ನಿಂದ (JDS) ಅನೇಕ ಜನ ಹೋದರು. 2004ರ ಚುನಾವಣೆಯಲ್ಲಿ ಏನಾಯಿತು? 2008ರಲ್ಲಿ ಬಿಜೆಪಿ ಅವರು ಆಪರೇಷನ್ ನಡೆಸಿದರು. 2013ಕ್ಕೆ ಬಿಜೆಪಿ ಕಥೆ ಏನಾಯಿತು? 2013ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂತು. ಆಗ ಜೆಡಿಎಸ್‌ನಿಂದ 7 ಜನರನ್ನು ಎಳೆದುಕೊಂಡು ಹೋದರು. 2018ರಲ್ಲಿ ಅವರ ಕಥೆ ಏನಾಯಿತು? 2019ರಲ್ಲಿ ಬಿಜೆಪಿ ಅವರು 17 ಜನರನ್ನ ಕರೆದುಕೊಂಡು ಹೋಗಿ 3 ವರ್ಷ ಅಧಿಕಾರವನ್ನೂ ಮಾಡಿದರು. 2023ರಲ್ಲಿ ಏನಾಯಿತು ಅವರ ಕಥೆ? ಬಿಜೆಪಿ ಅವರು ಎಲ್ಲಿಗೆ ಬಂದು ನಿಂತುಕೊಂಡಿದ್ದಾರೋ ಕಾಂಗ್ರೆಸ್ ಹಣೆಬರಹವೂ ಅಲ್ಲಿಗೆ ಬಂದು ನಿಲ್ಲುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಣೆಬರಹವೂ ಇಷ್ಟೇ. ಘರ್ ವಾಪ್ಸಿ ಎಲ್ಲಾ ಪಕ್ಷ ಮುಗಿಸುತ್ತೇವೆ ಎನ್ನುವುದು ಯಾವನ ಕೈಯಲ್ಲೂ ಆಗೋದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಆಯನೂರು ಮಂಜುನಾಥ್ (Ayanur Manjunath) ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ಅವರು, ಹೋಗುವವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ಇತ್ತೀಚಿಗೆ ಪಕ್ಷ ನಿಷ್ಠೆಗಿಂತ ಹೆಚ್ಚಾಗಿ ಅವರಿಗೆ ಏನು ಸಿಗುತ್ತದೆ ಎನ್ನುವ ಲೆಕ್ಕಾಚಾರ ಮಾಡುತ್ತಾರೆ. ಪಕ್ಷ ನಿಷ್ಠೆ ಇಂದು ಕಡಿಮೆ ಆಗಿದೆ. ಆದ್ದರಿಂದ ಯಾರು ಇರ್ತಾರೆ? ಯಾರು ಹೋಗ್ತಾರೆ? ಯಾವ ಸಮಯಕ್ಕೆ ಅವರ ಮನಸ್ಸು ಬದಲಾಗಿ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಅವರಿಗೆ ಸೇರಿದ ವಿಷಯ. ನಾನು ಇದರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಆರೋಪಿ ಸಚಿವರಿಗೆ ಸಿಐಡಿ ಅಧಿಕಾರಿಗಳು ತನಿಖೆ ಮಾಹಿತಿ ನೀಡುತ್ತಿದ್ದಾರೆ: ಹೆಚ್‌ಡಿಕೆ

    ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅವರು ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರೇ ಅದನ್ನು ಹೇಳುತ್ತಿದ್ದಾರೆ. ಅನುಕೂಲ ಸಿಂಧು ರಾಜಕೀಯ ಮಾಡಬೇಕು ಎಂದು ಅವರೇ ಹೇಳಿದ್ದಾರೆ. ಬಹಳ ಜನಕ್ಕೆ ಅಪ್ರೋಚ್ ಮಾಡುತ್ತಿದ್ದೇವೆ ಎಂದು ಅವರೇ ಹೇಳಿದ್ದಾರೆ. ಬಿಜೆಪಿ ಮಾಡಿದರೆ ಸರಿ, ನಾವು ಮಾಡಿದರೆ ತಪ್ಪಾ ಎಂದು ಕೇಳುತ್ತಾರೆ. ಪ್ರಯತ್ನ ಪಡುತ್ತಿದ್ದಾರೆ. ಅವರು ಪ್ರಯತ್ನ ಪಡಲಿ ಸಂತೋಷ. ಘರ್ ವಾಪ್ಸಿಯಿಂದ ಆಗುವ ಅನಾಹುತ ಮೊದಲು ಸರಿ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೋಗಿ ಆದಿತ್ಯನಾಥ್‍ರಿಗೂ ಹಂಪಿಗೂ ಇದೆ ಸಂಬಂಧ!

    ಯೋಗಿ ಆದಿತ್ಯನಾಥ್‍ರಿಗೂ ಹಂಪಿಗೂ ಇದೆ ಸಂಬಂಧ!

    ಬಳ್ಳಾರಿ: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಹಂಪಿಗೂ ಅವಿನಾಭಾವ ಸಂಬಂಧವಿದೆ. ಹಂಪಿಗೆ ಅವರು ಭೇಟಿ ನೀಡದಿದ್ದರೂ ಘರ್‍ವಾಪ್ಸಿ ಕಾರ್ಯಕ್ರಮಕ್ಕೆ ಹಂಪಿಯೇ ಮೂಲ ಪ್ರೇರಣೆಯಂತೆ.

    ಹಂಪಿಯ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ನೀಡಿದ ಪ್ರವಚನದಿಂದ ಪ್ರೇರಣೆ ಪಡೆದು ಯೋಗಿ ಆದಿತ್ಯನಾಥ್ ಅವರು ಘರ್ ವಾಪ್ಸಿ ಕಾರ್ಯಕ್ರಮ ರೂಪಿಸಿದ್ದರಂತೆ.

    ಕ್ರಿ.ಶ. 1336ರಲ್ಲಿ ಶ್ರೀ ವಿದ್ಯಾರಣ್ಯರಿಂದ ಪ್ರೇರಣೆ ಪಡೆದ ಹಕ್ಕ-ಬುಕ್ಕ ಸಹೋದರರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು. ಅದಕ್ಕೂ ಮುನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಅವರನ್ನು ಹಿಂದೂ ಧರ್ಮಕ್ಕೆ ಪುನಃ ಬರಮಾಡಿಕೊಳ್ಳಲಾಗಿತ್ತು ಎಂಬುದನ್ನು ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಹಿಂದೂ ಆಚಾರ್ ಸಭಾದಲ್ಲಿ ಪ್ರವಚನ ನೀಡಿದ್ದರು. ಈ ಪ್ರವಚನದಿಂದ ಆದಿತ್ಯಾನಾಥ್ ಪ್ರೇರಣೆ ಪಡೆದಿದ್ದರು ಎಂದು ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದ್ದಾರೆ.

    2004ರಿಂದಲೂ ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿರುವ ಯೋಗಿ ಆದಿತ್ಯನಾಥರು ಹಂಪಿಗೆ ಖುದ್ದು ಭೇಟಿ ನೀಡುವ ಇಚ್ಛೆಯನ್ನು ಹಿಂದೊಮ್ಮೆ ವ್ಯಕ್ತಪಡಿಸಿದ್ದರು. ಆದರೆ ಅವರು ಇದುವರೆಗೆ ಹಂಪಿಗೆ ಭೇಟಿ ನೀಡಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಹಿಂದೂ ಆಚಾರ್ ಸಭಾದಲ್ಲಿ ಶ್ರೀಗಳಿಂದ ಧರ್ಮ, ಸಂಸ್ಕೃತಿ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಾರೆ. ಜತೆಗೆ ದಕ್ಷಿಣ ಭಾರತದ ಕಾಶಿ ಹಂಪಿ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತೀವ ಕುತೂಹಲವನ್ನು ಹೊಂದಿದ್ದಾರೆ.

    ಚೆನ್ನೈ, ಹೈದರಾಬಾದ್, ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಹಾಗೂ ಗೋವಾದಲ್ಲಿ ನಡೆದ ಹಿಂದೂ ಆಚಾರ್ ಸಭಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರೊಂದಿಗೆ ಹಿಂದೂ ಧರ್ಮದ ಕುರಿತು ಚರ್ಚಿಸಿದ್ದಾರೆ. ಈ ಮೂಲಕ ಕೆಲ ಸಲಹೆಯನ್ನು ಪಡೆದುಕೊಂಡಿದ್ದಾರೆ.

    ಬಡವರನ್ನು ಮೇಲಕ್ಕೆ ತರುವ ಮೂಲಕ ಹಿಂದೂ ಧರ್ಮವನ್ನು ರಕ್ಷಿಸುವ ಕನಸನ್ನು ಆದಿತ್ಯನಾಥ್ ಹೊಂದಿದ್ದಾರೆ. ಯೋಗ ಯಾವ ಬಗೆಯಲ್ಲಿ ವಿಶ್ವ ಮಾನ್ಯತೆ ಪಡೆಯಿತೋ ಅದರಂತೆ ಹಿಂದೂ ಸಂಸ್ಕೃತಿಯ ಪ್ರತಿ ಆಚರಣೆಯೂ ಮನ್ನಣೆ ಪಡೆಯಬೇಕೆಂಬ ಸದುದ್ದೇಶವನ್ನು ಯೋಗಿ ಆದಿತ್ಯನಾಥ್ ಹೊಂದಿದ್ದಾರೆ ಎಂದು ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಆದಿತ್ಯಾನಾಥ್ ಅವರನ್ನು ಹೊಗಳುತ್ತಾರೆ.