Tag: ಘಂಟೆ

  • ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಲಕ್ನೋ: ರಾಮಜನ್ಮಭೂಮಿಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಯೋಧ್ಯೆಗೆ ಸಾಕಷ್ಟು ಕೊಡುಗೆಗಳು ಬಂದಿವೆ. ಅವುಗಳಲ್ಲಿ ದೇಶದ ಅತೀ ಗೊಡ್ಡ ಘಂಟೆಯೂ ಸೇರಿದೆ.

    ಹೌದು. 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ (Etah) ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ತಲುಪಿದೆ. ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್‌ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ.

    ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ. ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

    ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು (Bell) ಕೊಡುಗೆಯಾಗಿ ನೀಡಲು ಬಯಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ. ಎಂದರು.

  • Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ

    Ayodhya Ram Mandir: 1,200 ಕೆ.ಜಿಯ 42 ಘಂಟೆಗಳು ತಮಿಳುನಾಡಿನಿಂದ ಅಯೋಧ್ಯೆಗೆ ರವಾನೆ

    ಚೆನ್ನೈ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುವ ಮೂಲಕ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂತೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಲು ಹಲವಾರು ಕಡೆಗಳಿಂದ ಭಕ್ತಿಪೂರ್ವಕ ಕಾಣಿಕೆಗಳನ್ನು ಕಳುಹಿಸಲಾಗುತ್ತಿದೆ. ಅಂತೆಯೇ ತಮಿಳುನಾಡಿನಿಂದ ಕೂಡ ಭಕ್ತಿಯ ಸಂಕೇತವಾಗಿ ಘಂಟೆಗಳನ್ನು ರವಾನಿಸಲಾಗಿದೆ.

    ಹೌದು. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ramamandir) ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನಿಂದ ಅಯೋಧ್ಯೆಗೆ 1,200 ಕೆಜಿ ತೂಕದ ಒಟ್ಟು 42 ಘಂಟೆಗಳನ್ನು ರವಾನಿಸಲಾಗಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಘಂಟೆಗಳನ್ನು ತಯಾರಿಸಲಾಗಿದೆ. ಬಳಿಕ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾಮಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ.‌

    ಈ ಸಂಬಂಧ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಮಾಲೀಕ ಆರ್.ರಾಜೇಂದ್ರನ್ ಮಾತನಾಡಿ, ಒಂದು ಘಂಟೆ ಮಾಡಲು 1,200 ರೂ. ಆಗುತ್ತದೆ. ಆದರೆ ರಾಮಮಂದಿರಕ್ಕೆ ಕೇವಲ 600 ರೂ.ಗಳನ್ನು ಕಾರ್ಮಿಕ ಶುಲ್ಕವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    ಘಂಟೆಗಳ ತೂಕವು ಬದಲಾಗುತ್ತದೆ. ಐದು ಘಂಟೆಗಳು ತಲಾ 120 ಕೆ.ಜಿ ತೂಗಿದರೆ, ಆರು ಘಂಟೆಗಳು ತಲಾ 70 ಕೆ.ಜಿ ತೂಗುತ್ತವೆ. ಆದರೆ ಒಂದು ಘಂಟೆ ಮಾತ್ರ 25 ಕೆ.ಜಿ ತೂಗುತ್ತದೆ ಎಂದು ಅವರು ವಿವರಿಸಿದ್ದಾರೆ.

  • ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

    ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

    ಬೆಂಗಳೂರು: ದೇವಾಲಯಗಳಲ್ಲಿ ಹೆಚ್ಚು ಸೌಂಡ್ ಇರುವಂತಹ ಧ್ವನಿವರ್ಧಕ ಬಳಸುವಂತಿಲ್ಲ. ಪೂಜೆ ಸಂದರ್ಭದಲ್ಲಿ ಡಮರುಗ, ಧ್ವನಿವರ್ಧಕ, ಭಾರೀ ಸದ್ದಾಗುವ ಘಂಟೆ ಹೊಡೆಯದಂತೆ ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟೀಸ್ ನೀಡಿದ ವಿಚಾರ ಪ್ರಸ್ತಾಪಿಸಿದ್ದಾರೆ.

    ಘಂಟೆ ಶಬ್ಧದಿಂದ, ಶಂಖನಾದದಿಂದ ಮಾಲಿನ್ಯ ಅಂತಾರೆ, ಇದೊಂದು ಹೊಸದು, ಘಂಟೆಯಿಂದ ಮಾಲಿನ್ಯ ಆಗುತ್ತಾ? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ? ತಲತಲಾಂತರಗಳಿಂದಲೂ ಘಂಟೆ, ಶಂಖನಾದ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಅಂತಾ ಸಿ.ಟಿ.ರವಿ ಒತ್ತಾಯ ಮಾಡಿದ್ದಾರೆ. ಧ್ವನಿಗೂಡಿಸಿದ ಶಾಸಕ ರವಿಸುಬ್ರಮಣ್ಯ, ಇದು ಏಕೆ ಪದೇ ಪದೇ ಬರುತ್ತಿದೆ? ಇದರ ಹಿಂದೆ ಪಿತೂರಿ ಇರಬಹುದು. ಸರ್ಕಾರ ನಿಮ್ದೇ ಇದೆ, ಪಿತೂರಿ ಯಾರು ಮಾಡ್ತಾರೆ ಎಂದು ಶಿವಲಿಂಗೇಗೌಡ ಕಿಡಿ ಕಾರಿದ್ದಾರೆ.

    ಅಧಿಕಾರಿಗಳ ಹಂತದಲ್ಲೇ ಏನೋ ಮಾಡಿರುತ್ತಾರೆ. ಸರ್ಕಾರದ ಉತ್ತರ ಕೇಳೋಣ ಎಂದ ಸ್ಪೀಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಇಲಾಖೆಯಿಂದ ಯಾವುದೇ ಆದೇಶ ಆಗಿಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬಂದಿತ್ತು, ಅದರ ಮೇರೆಗೆ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ. ಮೈಕ್ ಮೂಲಕ ಕೂಗೂರಿಗೂ ಸೂಚನೆ ಕೊಟ್ಟಿದ್ದಾರೆ, ಗಂಟೆ ಹೊಡೆಯುವವರಿಗೂ ಕೊಟ್ಟಿದ್ದಾರೆ. ಆದರೆ ಈಗ ನೋಟೀಸ್ ವಾಪಸ್ ಪಡೆದಿದ್ದಾರೆ ಎಂದು ಗೃಹ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ದೇಗುಲಗಳಲ್ಲಿ ಗಂಟೆ ಸೌಂಡ್ ಜಾಸ್ತಿ ಬಂದ್ರೆ ದಂಡ, ಕೇಸ್- ಮುಜರಾಯಿ ಇಲಾಖೆಯಿಂದ ಹೊಸ ಆದೇಶ

    ನಡೆದಿದ್ದೇನು?: ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಹೆಚ್ಚು ಸೌಂಡ್ ಬಂದ್ರೆ ಎರಡು ಬಾರಿ ದಂಡ ಹಾಕ್ತಾರೆ. ಮೂರನೇ ಬಾರಿಗೆ ಕೇಸ್ ದಾಖಲಿಸಿಕೊಳ್ತಾರೆ. ಇನ್ನೂ ದೇವಸ್ಥಾನಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಪ್ರಸಿದ್ಧ ದೊಡ್ಡಗಣಪತಿ, ಬನಶಂಕರಿ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯಿಂದ ಯಾವುದೇ ನೊಟೀಸ್ ಕೊಟ್ಟಿಲ್ಲ ಅಂತ ಇಲಾಖೆಯ ಸೆಕ್ರೇಟರಿ ಹೇಳಿದ್ದಾರೆ. ನೊಟೀಸ್ ಪತ್ರದ ಸಂಖ್ಯೆ ನಮ್ಮ ಇಲಾಖೆಯದಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

     

  • ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    – ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅವಘಡ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯಲ್ಲಿ ಇತಿಹಾಸ ಪ್ರಸಿದ್ಧ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಹಾರಿಸಿದ್ದ ಧ್ವಜವನ್ನು ಇಳಿಸುವ ವೇಳೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದೆ.

    ದೇವಾಲಯದಲ್ಲಿ ಷಷ್ಠಿ ಉತ್ಸವ ನಡೆದು ಧೂಮಾವತಿ ದೈವದ ನೇಮ ಜರಗಿತ್ತು. ನೇಮದ ಸಂದರ್ಭದಲ್ಲಿ ಧೂಮಾವತಿ ದೈವದ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ನುಡಿ ಹೇಳಿತ್ತು. ಆದರೆ ಗ್ರಾಮಸ್ಥರು ಬ್ರಹ್ಮಕಲಶ ಮಾಡಲು ನಿರಾಕರಿಸಿದ್ದರು.

    ಉತ್ಸವದ ಮರುದಿನ ಕಾಕತಾಳೀಯ ಎಂಬಂತೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರುಘಂಟೆಯನ್ನು ಇಳಿಸುವಾಗ ಹಗ್ಗ ತುಂಡಾಗಿ ಗರುಡ ಕೆಳಕ್ಕೆ ಬಿದ್ದಿದೆ. ಉತ್ಸವ ಸಂದರ್ಭದಲ್ಲಿ ಏರಿಸಲ್ಪಟ್ಟ ಗರುಡ ಕೆಳಕ್ಕೆ ಬಿದ್ದರೆ ಅನಾಹುತ ಸಂಭವಿಸುತ್ತದೆ ಎನ್ನುವ ನಂಬಿಕೆ ಕರಾವಳಿ ಭಾಗದಲ್ಲಿದೆ.

    ಧೂಮಾವತಿ ದೈವ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ಹೇಳಿದ್ದ ಮರುದಿನವೇ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    19 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಬ್ರಹ್ಮಕಲಶ ನಡೆದಿದ್ದರೂ, ಈಗ ಶಿಥಿಲಾವಸ್ಥೆಗೆ ಬಂದಿತ್ತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ದೈವದ ನುಡಿಯನ್ನು ಉಲ್ಲಂಘಿಸಿದ್ದೇ ಅನಾಹುತಕ್ಕೆ ಕಾರಣ. ಇದರಿಂದ ಮುಂದೆ ಅನಾಹುತ ಕಾದಿದೆ ಅನ್ನುವ ಮಾತು ಈಗ ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತಿದೆ.

    ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸಂತೋಷ್ ಶೆಟ್ಟಿ, 13ರಂದು ಷಷ್ಠಿ ದಿವಸವಾಗಿತ್ತು. ಅಂದು ಧ್ವಜರೋಹಣ ಆಗಿದೆ. ಆಗ ಗರುಡ ಸಮೇತ ಧ್ವಜಸ್ತಂಭಕ್ಕೆ ಏರಿಸುವಾಗ ಹಗ್ಗದ ಗಂಟು ರಾಟೆಗೆ ಸಿಲುಕಿಕೊಂಡಿದೆ. ಆದರೆ ಅಂದಿನ ದಿನ ಯಾರು ಇದನ್ನು ಗಮನಿಸಿರಲಿಲ್ಲ. ನಾಲ್ಕು ದಿನಗಳ ಬಳಿಕ ಪೂಜೆ ಸಲ್ಲಿಸಿ ಗರುಡನನ್ನು ಕೆಳಗೆ ಇಳಿಸಬೇಕಿತ್ತು. ನಾವು ಗರುಡವನ್ನು ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದೆವು. ಆಗ ಅಕಸ್ಮಾತಾಗಿ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.

    ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಆದರೂ ಯಾರಿಗೂ ತೊಂದರೆಯಾಗಬಾದರದು ಎಂದು ಕೆಳಗೆ ಬಿದ್ದ ತಕ್ಷಣ 48 ಕಳಸವಿಟ್ಟು ಪೂಜೆ ಸಲ್ಲಿಸಿದ್ದೇವೆ ಎಂದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv