Tag: ಗ್ಲೆನ್ ಮ್ಯಾಕ್ಸ್ವೆಲ್

  • ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್‌

    ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್‌

    ಪಂಜಾಬ್ ಕಿಂಗ್ಸ್ (Punjab Kings) ತಂಡದ ಸಹ ಮಾಲೀಕರೂ ಆಗಿರುವ ಬಾಲಿವುಡ್ ನಟಿ ಪ್ರೀತಿ ಝಿಂಟಾ (Preity G Zinta) ವೈಯಕ್ತಿಕ ಬದುಕಿನ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.

    ಪ್ರೀತಿ ಝಿಂಟಾ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಸೆಷನ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಂಜಾಬ್‌ ಕಿಂಗ್ಸ್‌ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಬಗ್ಗೆ ಮಾಡಿದ ಕಾಮೆಂಟ್ ಸಂಚಲನ ಸೃಷ್ಟಿಸಿದೆ. ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಯಿಂದ ಬೇಸರಗೊಂಡ ನಟಿ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್

    ಪ್ರಶ್ನೆ ಕೇಳುವ ಸೆಷನ್‌ ವೇಳೆ ನೆಟ್ಟಿಗರೊಬ್ಬರು, ʻಸತತ ಕಳಪೆ ಪ್ರದರ್ಶನದಿಂದಾಗಿ ಪ್ರೀತಿ, ಮ್ಯಾಕ್ಸ್‌ವೆಲ್‌ರನ್ನ ಮದುವೆಯಾಗುತ್ತಿಲ್ಲʼ ಎಂದು ಕಾಲೆಳೆದಿದ್ದರು. ಮತ್ತೊಬ್ಬರು ʻಮೇಡಂ ನೀವು ಮ್ಯಾಕ್ಸ್‌ವೆಲ್‌ ಅವರನ್ನ ಮದುವೆಯಾಗ್ಲಿಲ್ಲ (Marriage), ಅದಕ್ಕಾಗಿ ಅವರು ನಿಮ್ಮ ತಂಡದಲ್ಲಿ ಚೆನ್ನಾಗಿ ಆಡ್ತಿಲ್ಲʼ ಎಂದು ಕಾಮೆಂಟ್‌ ಮಾಡಿದ್ದರು. ಇದರಿಂದ ಕೆರಳಿದ ನೆಟ್ಟಿಗರನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

    ʻನೀವು ಎಲ್ಲಾ ಫ್ರಾಂಚೈಸಿಗಳ ಮಾಲೀಕರಿಗೂ ಇದೇ ರೀತಿ ಕೇಳ್ತೀರಾ? ಅಥವಾ ಮಹಿಳೆಯರಿಗೆ ಮಾತ್ರ ಮಾಡುತ್ತಿರುವ ತಾರತಮ್ಯವಾ? ನಾನು ಕ್ರಿಕೆಟ್‌ ಫ್ರಾಂಚೈಸಿಗೆ ಬರುವವರೆಗೂ ಕಾರ್ಪೋರೇಟ್‌ ವ್ಯವಸ್ಥೆಗಳಲ್ಲಿ ಮಹಿಳೆಯರು ಬದುಕುವುದು ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ. ನೀವು ಹಾಸ್ಯದಿಂದ ಈ ಪ್ರಶ್ನೆ ಕೇಳಿದ್ದೀರಿ ಅಂದುಕೊಳ್ತೀನಿ.. ಆದ್ರೆ, ಒಮ್ಮೆ ಅದನ್ನ ನೀವೇ ನೋಡಿ, ಏನು ಕೇಳ್ತಾ ಇದ್ದೀರಿ ಅನ್ನೋದು ಅರ್ಥವಾಗುತ್ತೆ, ಇದೆಲ್ಲ ಒಳ್ಳೆಯದಲ್ಲ. ಕಳೆದ 18 ವರ್ಷಗಳಿಂದಲೂ ಬಹಳ ಕಷ್ಟಪಟ್ಟು ಒಂದೊಂದೇ ಹಂತಗಳನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ಈ ರೀತಿ ತಾರತಮ್ಯ ಮಾಡುವುದು ಹಾಗೂ ಅಗೌರವ ತೋರಿಸುವ ಹೇಳಿಕೆ ನೀಡೋದನ್ನ ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

    Preity Zinta

    ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಪ್ರೀತಿ ಝಿಂಟಾ ಐಪಿಎಲ್ ಸಂದರ್ಭದಲ್ಲಿ ಮಾತ್ರ ಭಾರತದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?

    2012ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ತಂಡಗಳಲ್ಲಿ ಆಡಿದ್ದಾರೆ. 2013 ರಿಂದ 2016ರ ಆವೃತ್ತಿಯಲ್ಲಿ ಮ್ಯಾಕ್ಸಿ ಪಂಜಾಬ್‌ ಕಿಂಗ್ಸ್‌ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಆದ್ರೆ 2017ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಫ್ರಾಂಚೈಸಿ ಅವರನ್ನು ಕೈಬಿಟ್ಟಿತ್ತು. 2021ರಿಂದ ಆರ್‌ಸಿಬಿ ಪರ ಆಡ್ತಿದ್ದ ಮ್ಯಾಕ್ಸ್‌ವೆಲ್‌ ಅವರ ಅದ್ಭುತ ಪ್ರದರ್ಶನ ಕಂಡು ಪಂಜಾಬ್‌ 2025ರ ಆವೃತ್ತಿಗೆ ಮತ್ತೆ ಅವರನ್ನ ಖರೀದಿ ಮಾಡಿತ್ತು. ಇದೀಗ ಈ ಆವೃತ್ತಿಯಲ್ಲಿ ಅವರ ಕಳಪೆ ಪ್ರದರ್ಶನದಿಂದ ಫ್ರಾಂಚೈಸಿ ಪ್ಲೇಯಿಂಗ್‌ -11 ನಿಂದಲೇ ಕೈಬಿಟ್ಟಿದೆ.

  • ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ಕ್ಯಾನ್ಬೆರಾ: ಇಲ್ಲಿನ ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಜೊತೆಗೆ ಕಳೆದ 22 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಾಕ್‌, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ. ಇದು ನೂತನ ಕ್ಯಾಪ್ಟನ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಆಗಿದೆ. ಕೊನೆಯದ್ದಾಗಿ 2002ರಲ್ಲಿ ಪಾಕ್‌ ಆಸೀಸ್‌ ನೆಲದಲ್ಲಿ ಸರಣಿ ಗೆದ್ದಿತ್ತು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ ‌84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್‌ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಆಜಂ ಜೋಡಿ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಪಾಕ್‌ ಪರ ಸೈಮ್‌ ಅಯೂಬ್‌ 42 ರನ್‌, ಅಬ್ದುಲ್ಲಾ ಶಫಿಕ್‌ 37 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹಾಗೂ ಬಾಬರ್‌ ಆಜಂ (Babar Azam) 28 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇನ್ನೂ ಆಸ್ಟ್ರೇಲಿಯಾ ಪಾರ ಲ್ಯಾನ್ಸ್‌ ಮೊರಿಸ್‌ 6 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಆಸೀಸ್‌ ತಂಡವು 31.5 ಓವರ್‌ಗಳಲ್ಲಿ ಕೇವಲ 140 ರನ್​ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲಕಚ್ಚಿದರು. ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಸಂಘಟಿತ ದಾಳಿಯೊಂದಿಗೆ ಆಸ್ಟ್ರೇಲಿಯನ್ನರ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಆತಿಥೇಯರನ್ನು 31.5 ಓವರ್​ಗಳಲ್ಲಿ 140 ರನ್​ಗಳಿಗೆ ಆಲೌಟ್ ಮಾಡಿದರು.

    ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 32 ರನ್ ನೀಡಿ 3 ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಹ್ಯಾರಿಸ್ ರೌಫ್ 24 ರನ್​ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 10 ವಿಕೆಟ್‌ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಸರಣಿಶೇಷ್ಠ ಪ್ರಶಸ್ತಿಗೂ ಪಾತ್ರರಾದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ  

  • ಇಂದು ಬೆಂಗ್ಳೂರಿನಲ್ಲಿ ಆರ್‌ಸಿಬಿ V/s ಕೆಕೆಆರ್‌ ನಡುವೆ ಹೈವೋಲ್ಟೇಜ್‌ ಕದನ – ಯಾರಿಗೆ ಗೆಲುವು?

    ಇಂದು ಬೆಂಗ್ಳೂರಿನಲ್ಲಿ ಆರ್‌ಸಿಬಿ V/s ಕೆಕೆಆರ್‌ ನಡುವೆ ಹೈವೋಲ್ಟೇಜ್‌ ಕದನ – ಯಾರಿಗೆ ಗೆಲುವು?

    – ಕೊಹ್ಲಿ – ಗಂಭೀರ್‌ ಮತ್ತೆ ಮುಖಾಮುಖಿ
    – 24.75 ಕೋಟಿ ರೂ. ಸರದಾರ ಮಿಚೆಲ್‌ ಸ್ಟಾರ್ಕ್‌ ಮೇಲೆ ಎಲ್ಲರ ಕಣ್ಣು

    ಬೆಂಗಳೂರು: ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ.

    17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್‌ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಇತ್ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್‌ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್‌ ಗಳಿಸಿರುವ ಗರಿಷ್ಠ ರನ್‌ 222 ರನ್‌ ಆಗಿದೆ.  ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

    ಟಾಪ್‌-4ನಲ್ಲಿ ಕೋಲ್ಕತ್ತಾ:
    ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಪಡೆ, ತನ್ನ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿತ್ತು. ಅತ್ತ ಆರ್‌ಸಿಬಿ ತಂಡವು ಆಡಿರುವ 2 ಪಂದ್ಯಗಳಲ್ಲಿ, ಪಂಜಾಬ್‌ ವಿರುದ್ಧದ ಕೊನೆಯ ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ತಂಡವು ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ 1 ಪಂದ್ಯದಿಂದ 2 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.

    ಪಿಚ್‌ ರಿಪೋರ್ಟ್‌ ಹೇಗಿದೆ?
    ಬೆಂಗಳೂರು ಮೈದಾನವು ಚಿಕ್ಕ ಬೌಂಡರಿಗಳನ್ನು ಹೊಂದಿರುವುದರಿಂದ ಇದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಪವರ್‌ ಹಿಟ್ಟರ್‌ಗಳಿದ್ದಾರೆ. ಹೀಗಾಗಿ ಬ್ಯಾಟರ್‌ಗಳಿಗೆ ಪಿಚ್‌ ಸ್ವರ್ಗವಾಗಿದ್ದು, ರನ್‌ ಹೊಳೆ ಹರಿಯುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

    ಸ್ಟಾರ್ಕ್‌ ಮೇಲೆ ಕಣ್ಣು:
    ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾಗಿರುವ ಮಿಚೆಲ್‌ ಸ್ಟಾರ್ಕ್‌ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಮಿಚೆಲ್‌ ಸ್ಟಾರ್ಕ್‌ ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್‌ ಪಡೆಯದೇ 4 ಓವರ್‌ಗಳಲ್ಲಿ 53 ರನ್‌ ಚಚ್ಚಿಸಿಕೊಂಡು, ಟೀಕೆಗೆ ಗುರಿಯಾಗಿದ್ದರು. ಹಾಗಾಗಿ ಈ ಪಂದ್ಯದಲ್ಲಾದರೂ ಆರ್‌ಸಿಬಿ ಕಲಿಗಳನ್ನು ಕಟ್ಟಿಹಾಕುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

    ಗಂಭೀರ್‌-ಕೊಹ್ಲಿ ಮತ್ತೆ ಮುಖಾಮುಖಿ:
    17ನೇ ಆವೃತ್ತಿಯಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿರುವ ಕೆಕೆಆರ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಾಗೂ ಕೊಹ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿದ್ದ ಗಂಭೀರ್‌ ಹಾಗೂ ಆರ್‌ಸಿಬಿ ಆಟಗಾರ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

  • ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

    ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

    ಗುವಾಹಟಿ: ಪುರುಷರ ಅಂತಾರಾಷ್ಟ್ರೀಯ ಟಿ20 ಯಲ್ಲಿ ಗುರಿ ಬೆನ್ನತ್ತುವ ವೇಳೆ ಕೊನೆ ಓವರ್‌ನಲ್ಲಿ ಅತಿ ಹೆಚ್ಚು ರನ್‌ ಸಿಡಿಸಿ ಮ್ಯಾಚ್‌ ಗೆದ್ದು ಹೊಸ ದಾಖಲೆಯನ್ನು ಆಸ್ಟ್ರೇಲಿಯಾ ಬರೆದಿದೆ.

    ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ಮೂರನೇ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಆ ಮೂಲಕ ಸರಣಿಯನ್ನು ಆಸೀಸ್‌ ಜೀವಂತವಾಗಿರಿಸಿದೆ. ಮೂರನೇ ಪಂದ್ಯದ ಗೆಲುವಿನ ಜೊತೆಗೆ ಆಸ್ಟ್ರೇಲಿಯಾ ದಾಖಲೆಯನ್ನೂ ಬರೆದಿದೆ.

    ಕೊನೆ ಓವರ್‌ನಲ್ಲಿ ಹೆಚ್ಚು ರನ್‌ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಆಸೀಸ್‌ ಬರೆದಿದೆ. ಮಂಗಳವಾರದ ಮ್ಯಾಚ್‌ನಲ್ಲಿ ಆಸೀಸ್‌ 21 ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿತು.

    2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 19 ರನ್ ಗಳಿಸಿತ್ತು. ಕಳೆದ ವರ್ಷದ ಪಲ್ಲೆಕೆಲೆ ಟಿ20ಐ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 19 ರನ್ ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು. ಕೊನೆ ಓವರ್‌ನಲ್ಲಿ ದಾಖಲಾಗಿದ್ದ ಅತಿ ಹೆಚ್ಚು ರನ್‌ ಇದಾಗಿತ್ತು. ಆ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿದೆ.

    ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಭಾರತ 223 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿತು.

    ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್‌ ಎರಡನೇ ಎಸೆತದಲ್ಲಿ ಒಂದು ರನ್‌ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್‌ ಬೌಂಡರಿ ಹೊಡೆದರು. ಆ ಮೂಲಕ ಕೊನೆ ಓವರ್‌ನಲ್ಲಿ 23 ರನ್‌ಗಳು ಹರಿದುಬಂದವು.

  • ಮಿಂಚಿನ ಶತಕ; ವಿಶ್ವ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

    ಮಿಂಚಿನ ಶತಕ; ವಿಶ್ವ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

    ನವದೆಹಲಿ: ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಶರವೇಗದ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ (World Cup 2023) ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 40 ಬಾಲ್‌ಗಳಿಗೆ ಮಿಂಚಿನ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

    ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್‌ 2023 ಟೂರ್ನಿಯ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಮಿಂಚಿನ ಬ್ಯಾಟಿಂಗ್‌ ನಡೆಸಿದರು. ನೆದರ್ಲೆಂಡ್ಸ್‌ ಬೌಲರ್‌ಗಳನ್ನು ಚೆಂಡಾಡಿದ ಮ್ಯಾಕ್ಸ್‌ವೆಲ್‌, ಕೇವಲ 40 ಬಾಲ್‌ಗಳಿಗೆ ಶತಕ ಸಿಡಿಸಿದರು. 8 ಫೋರ್‌ ಮತ್ತು 8 ಸಿಕ್ಸರ್‌ ಬಾರಿಸುವ ಮೂಲಕ ಶರವೇಗದಲ್ಲಿ ಶತಕ ದಾಖಲಿಸಿದರು. ಇದನ್ನೂ ಓದಿ: ಇಂಗ್ಲೆಂಡ್‌ ಪಂದ್ಯದಿಂದಲೂ ಔಟ್‌ – ಪಾಂಡ್ಯಗೆ ಗಾಯ ಗಂಭೀರ ಸ್ವರೂಪದ್ದು

    ವಿಶ್ವಕಪ್‌ ಇತಿಹಾಸದಲ್ಲೇ ಅತೀ ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಆಟಗಾರನಾಗಿ ಮ್ಯಾಕ್ಸ್‌ವೆಲ್‌ ಹೊರಹೊಮ್ಮಿದ್ದಾರೆ. ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ದ.ಆಫ್ರಿಕಾ ತಂಡದ ಏಡೆನ್ ಮಾರ್ಕ್ರಾಮ್ ಅವರ ದಾಖಲೆಯನ್ನು ಮ್ಯಾಕ್ಸ್‌ವೆಲ್‌ ಬ್ರೇಕ್‌ ಮಾಡಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ, ನೆದರ್ಲೆಂಡ್ಸ್‌ಗೆ 400 ರನ್‌ಗಳ ಗುರಿ ನೀಡಿದೆ. 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಆಸ್ಟ್ರೇಲಿಯಾ 399 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ತಂಡದ ಪರವಾಗಿ ಡೇವಿಡ್‌ ವಾರ್ನರ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: World Cup 2023: ಡಿಕಾಕ್‌ ಡಿಚ್ಚಿಗೆ ಬಾಂಗ್ಲಾ ಬರ್ನ್‌ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು

    ಅಬ್ಬರದ ಬ್ಯಾಟಿಂಗ್‌ ನಡೆಸಿದ ಡೇವಿಡ್‌ ವಾರ್ನರ್‌ 93 ಬಾಲ್‌ಗಳಿಗೆ 104 ರನ್‌ (11 ಫೋರ್‌, 3 ಸಿಕ್ಸರ್‌) ಬಾರಿಸಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ 44 ಬಾಲ್‌ಗಳಿಗೆ 106 ರನ್‌ ಸಿಡಿಸಿ (9 ಫೋರ್‌, 8 ಸಿಕ್ಸರ್‌) ಸಿಡಿಸಿ ಮಿಂಚಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್‌ಸಿಬಿ ಪ್ಲೇಯರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿನಿ ರಾಮನ್‌ ದಂಪತಿಗೆ ಗಂಡು ಮಗು ಜನನ

    ಆರ್‌ಸಿಬಿ ಪ್ಲೇಯರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿನಿ ರಾಮನ್‌ ದಂಪತಿಗೆ ಗಂಡು ಮಗು ಜನನ

    ನವದೆಹಲಿ: ಆಸ್ಟ್ರೇಲಿಯಾದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಪತ್ನಿ ಭಾರತೀಯ ಸಂಜಾತೆ ವಿನಿ ರಾಮನ್‌ (Vini Raman) ದಂಪತಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಮ್ಯಾಕ್ಸ್‌ವೆಲ್‌ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಈ ಶುಭಸುದ್ದಿಯನ್ನು ಮ್ಯಾಕ್ಸ್‌ವೆಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ. ಮಗುವಿನ ಹುಟ್ಟಿದ ದಿನಾಂಕ ಮತ್ತು ಹೆಸರನ್ನು ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಮುದ್ದಿನ ಮಗುವಿಗೆ ಲೋಗನ್ ಮಾವೆರಿಕ್ ಮ್ಯಾಕ್ಸ್‌ವೆಲ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: World Cup 2023: ಇಂದಿನಿಂದ ಸೆಮಿಫೈನಲ್‌, ಫೈನಲ್‌ ಪಂದ್ಯ ಆನ್‌ಲೈನ್‌ ಟಿಕೆಟ್‌ ಮಾರಾಟ – ಬುಕ್‌ ಮಾಡೋದು ಹೇಗೆ?

    ತಮಿಳುನಾಡು ಮೂಲದ ವಿನಿ ರಾಮನ್‌ ಅವರನ್ನು ಮ್ಯಾಕ್ಸ್‌ವೆಲ್‌ 2022ರ ಮಾರ್ಚ್‌ 27 ರಂದು ವಿವಾಹವಾಗಿದ್ದರು. ಹಿಂದೂ ಹಾಗೂ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಇವರ ಮದುವೆ ಸಮಾರಂಭ ನಡೆದಿತ್ತು. ತಮಿಳಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಗಮನ ಸೆಳೆದಿದ್ದರು.

    ಆರ್‌ಸಿಬಿ ಪ್ಲೇಯರ್‌ ಕೂಡ ಆಗಿರುವ ಮ್ಯಾಕ್ಸ್‌ವೆಲ್‌ ಕಳೆದ ತಿಂಗಳಷ್ಟೆ ಭಾರತೀಯ ಸಂಪ್ರದಾಯದಂತೆ ಹೆಂಡತಿಯ ಸೀಮಂತ ಮಾಡಿಸಿದ್ದರು. ಈಗ ಅವರ ಮನೆಗೆ ಮತ್ತೊಬ್ಬ ಅತಿಥಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ಸಜ್ಜಾದ ಸಮಂತಾ ಮಾಜಿ ಪತಿ- ಹುಡುಗಿ ಯಾರು ಗೊತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ಬೆಂಗಳೂರು: ಮೊಣಕಾಲು ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) 2023ರ ಐಪಿಎಲ್‍ನಲ್ಲಿ (IPL) ಆರ್‌ಸಿಬಿ ತಂಡದ ಪರವಾಗಿ ಎಲ್ಲಾ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅನುಮಾನ.

    ಈ ಬಗ್ಗೆ ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಮಾತಾಡಿರುವ ಮ್ಯಾಕ್ಸ್‌ವೆಲ್, ಗಾಯ ಗುಣವಾಗಲು ತಿಂಗಳುಗಳು ಬೇಕಾಗಬಹುದು. ಆದರೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ

    ಕೋವಿಡ್ ನಿರ್ಬಂಧದಿಂದ ಎರಡು ವರ್ಷಗಳ ನಂತರ ಆರ್‌ಸಿಬಿಯ (RCB) ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆಡಲು  ಮ್ಯಾಕ್ಸ್‌ವೆಲ್ ಕಾತುರದಲ್ಲಿದ್ದಾರೆ.

    ಇತ್ತೀಚೆಗೆ ನಡೆದ ಟೀಂ ಇಂಡಿಯಾ (Team India)ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಆಡಿ, ಉಳಿದ ಎರಡು ಪಂದ್ಯಗಳಲ್ಲಿ ಗೈರಾಗಿದ್ದರು. ಸ್ನೇಹಿತನೊಂದಿಗೆ ಟೆನ್ನಿಸ್ ಕೋರ್ಟ್‍ನಲ್ಲಿ (Tennis court) ಓಡುವಾಗ ಇಬ್ಬರೂ ಸಿಲುಕಿ ಬಿದ್ದು ಮ್ಯಾಕ್ಸ್ ಗಾಯಗೊಂಡಿದ್ದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

  • ಸಮಂತಾ ನಟನೆಯ `ಊ ಅಂಟಾವ ಮಾಮ’ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ

    ಸಮಂತಾ ನಟನೆಯ `ಊ ಅಂಟಾವ ಮಾಮ’ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ

    ಕ್ರಿಕೆಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಹೆಸರೆಂದರೆ ವಿರಾಟ್ ಕೊಹ್ಲಿ. ಅಪಾರ ಅಭಿಮಾನಿ ಬಳಗವನ್ನು ಹೊಂದಿರೋ ವಿರಾಟ್, ಕ್ರಿಕೆಟ್‌ನಲ್ಲಿ ಮಾತ್ರ ಸೈ ಎನಿಸಿಕೊಂಡಿಲ್ಲ ಡ್ಯಾನ್ಸ್ ಮಾಡೋದಕ್ಕೂ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿನ ಸಮಾರಂಭವೊಂದರಲ್ಲಿ ವಿರಾಟ್ ಸಮಂತಾ ಹಾಡಿಗೆ ಹೆಜ್ಜೆ ಹಾಕಿರೋ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್ ವಿವಾಹ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹಾಜರಾಗಿದ್ದರು ಜತೆಗೆ ಆರ್‌ಸಿಬಿ ತಂಡದ ಆಟಗಾರರು ಕೂಡ ಭಾಗವಹಿಸಿದ್ದರು. ಈ ವೇಳೆ ವಿರಾಟ್ ಸಮಾರಂಭದಲ್ಲಿ ಸೌತ್ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ವಿವಾದದ ನಡುವೆಯೂ ಹಿಂದಿ ಬಾಕ್ಸ್ಆಫೀಸ್‌ನಲ್ಲಿ 343 ಕೋಟಿ ಬಾಚಿದ `ಕೆಜಿಎಫ್ 2′

    ಗ್ಲೆನ್ ಮ್ಯಾಕ್ಸ್ವೆಲ್ ವಿವಾಹದಲ್ಲಿ ವಿರಾಟ್ ಕೊಹ್ಲಿ ಪುಷ್ಪ ಚಿತ್ರದ ಸಮಂತಾ ನಟನೆಯ ʻಊ ಅಂಟಾವ ಮಾಮʼ ಸಾಂಗಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಜತೆಗೆ `ಆರ್‌ಆರ್‌ಆರ್’ ಚಿತ್ರದ ನಾಟೋ ಹಾಡಿಗೆ ಸ್ಟೇಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ವಿರಾಟ್ ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.