Tag: ಗ್ಲುಕೋಸ್

  • ಅವಧಿ ಮೀರಿದ ಗ್ಲುಕೋಸ್ ನೀಡಿ ಮೂವರು ರೋಗಿಗಳು ಅಸ್ವಸ್ಥ

    ಅವಧಿ ಮೀರಿದ ಗ್ಲುಕೋಸ್ ನೀಡಿ ಮೂವರು ರೋಗಿಗಳು ಅಸ್ವಸ್ಥ

    ಚಾಮರಾಜನಗರ: ರೋಗಿಗಳಿಗೆ ಅವಧಿ ಮೀರಿದ ಗ್ಲುಕೋಸ್ ನೀಡಿ ಮೂವರು ರೋಗಿಗಳು ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ತಾಲೂಕು ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಆರೋಗ್ಯ ಕೇಂದ್ರದಲ್ಲಿ ದಾಖಲಾಗುವ ರೋಗಿಗಳಿಗೆ ಅವಧಿ ಮೀರಿದ ಗ್ಲುಕೋಸ್ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದು ಇಂದು ಮೂವರು ರೋಗಿಗಳು ಅಸ್ವಸ್ಥಗೊಂಡ ಬಳಿಕ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಇಲ್ಲಿನ ವೈದ್ಯರು ಗೊತ್ತಿದ್ದು, ಗೊತ್ತಿದ್ದು ಅವಧಿ ಮೀರಿದ ಔಷಧಿ ನೀಡುತ್ತಿದ್ದಾರೆಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ, ವೈದ್ಯರು ಮತ್ತೊಂದು ಚುಚ್ಚುಮದ್ದು ನೀಡಿ ತಪ್ಪು ಮುಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಆಸ್ಪತ್ರೆಯ ಉಗ್ರಾಣದಲ್ಲಿ ಮತ್ತಷ್ಟು ಅವಧಿ ಮೀರಿದ ಔಷಧಿಗಳ ಪತ್ತೆಯಾಗಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ವೈದ್ಯರು ಜಾಗ ಖಾಲಿ ಮಾಡಿದ್ದು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

  • ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ದಾವಣಗೆರೆ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಓವರ್ ಡೋಸ್ ಔಷಧಿ ನೀಡಿ ಸಾವನ್ನಪ್ಪುವಂತೆ ಮಾಡಿದ್ದಾರೆ ಎಂದು ಅರೋಪಿಸಿ ಕ್ಲಿನಿಕ್ ಮುಂಭಾಗ ರೋಗಿಯ ಸಂಬಂಧಿಕರು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

    ನಗರದ ಕೆ ಬಿ ಬಡಾವಣೆಯಲ್ಲಿರುವ ಜಾಧವ್ ಕ್ಲಿನಿಕ್ ಗೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮದ ಮಾರುತಿ (18) ಯನ್ನು ದಾಖಲು ಮಾಡಿದ್ರು. ರಾತ್ರಿ 8 ಗಂಟೆಯಿಂದ 9 ಗಂಟೆಯ ಒಳಗೆ ಐದು ಇಂಜೆಕ್ಷನ್, 2 ಗ್ಲೂಕೋಸ್ ನೀಡಿದ್ರು. ನಂತರ ಹಾಗೇ ಡಿಸ್ಚಾರ್ಜ್ ಮಾಡಿ ಕಳಿಸಿದ್ದಾರೆ.

    ಆದ್ರೆ ಡಿಸ್ಚಾರ್ಜ್ ಮಾಡಿ 2 ಕಿಲೋಮೀಟರ್ ಸಾಗುತ್ತಿದ್ದಂತೆಯೇ ಯುವಕನ ಬಾಯಲ್ಲಿ ನೊರೆ ಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮಾರುತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ.

    ಇದರಿಂದ ಅಕ್ರೋಶಗೊಂಡ ಯುವಕನ ಸಂಬಂಧಿಕರು ಜಾಧವ್ ಕ್ಲಿನಿಕ್ ಬಳಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.