Tag: ಗ್ಲಿಮ್ಸ್

  • ಅಲ್ಲು ಅರ್ಜುನ್ ಉಗ್ರರೂಪ ‘ಗಂಗಮ್ಮ’ ಅವತಾರಕ್ಕೆ ‘ಕಾಂತರ’ ಪ್ರೇರಣೆ ಎಂದ ಫ್ಯಾನ್ಸ್

    ಅಲ್ಲು ಅರ್ಜುನ್ ಉಗ್ರರೂಪ ‘ಗಂಗಮ್ಮ’ ಅವತಾರಕ್ಕೆ ‘ಕಾಂತರ’ ಪ್ರೇರಣೆ ಎಂದ ಫ್ಯಾನ್ಸ್

    ನಿನ್ನೆಯಷ್ಟೇ ಅಲ್ಲು ಅರ್ಜುನ್‌ (Allu Arjun) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಗ್ಲಿಮ್ಸ್  ರಿಲೀಸ್ ಆಗಿದೆ. ಜೊತೆಗೆ ಅಲ್ಲು ಹುಟ್ಟು ಹಬ್ಬಕ್ಕಾಗಿ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ ನಿರ್ದೇಶಕರು. ಇದರಲ್ಲಿ ಅಲ್ಲು ಅರ್ಜುನ್ ಉಗ್ರರೂಪ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೂಪಕ್ಕೆ ಅವರು ಗಂಗಮ್ಮ (Gangamma) ಎಂದು ಹೆಸರಿಟ್ಟಿದ್ದಾರೆ. ಕಾಡು ಜನರ ದೇವತೆಯಂತೆ ಕರೆಯುವ ಗಂಗಮ್ಮ ರೂಪಕ್ಕೆ ಕನ್ನಡದ ಕಾಂತಾರ (Kantara) ಪ್ರೇರಣೆ ಎಂದು ನೆಟ್ಟಿಗರು ವಿಶ್ಲೇಷಣೆ ಮಾಡುತ್ತಿದ್ದಾರೆ.

    ಈ ಹಿಂದೆ ಪುಷ್ಪ ಸಿನಿಮಾ ಬಂದಾಗ ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್ ಪ್ರೇರಣೆಯಿಂದಲೇ ಪುಷ್ಪ ತಯಾರಾಗಿದೆ ಎಂದು ಕ್ಯಾಮೆಂಟ್ ಮಾಡಿದ್ದರು. ಪುಷ್ಪ 2 ಗಂಗಮ್ಮ ಅವತಾರವನ್ನು ಕಾಂತಾರ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲದೇ ಇದ್ದರೂ, ಅಭಿಮಾನಿಗಳು ಮಾತ್ರ ಎರಡೂ ಚಿತ್ರಕ್ಕೂ ಕಂಪೇರ್ ಮಾಡಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಗದ್ದಲದ ನಡುವೆ ಸೈಲೆಂಟ್ ಆಗಿ ಶೂಟಿಂಗ್ ನಲ್ಲಿ ಭಾಗಿಯಾದ ಕಿಚ್ಚ ಸುದೀಪ್

    `ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಿರೀಕ್ಷೆಯ ಮಟ್ಟಕ್ಕೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕ ಸುಕುಮಾರ್ (Sukumar) ಅವರು ಪ್ರಯತ್ನಿಸುತ್ತಿದ್ದಾರೆ. ವಿಲನ್ ಸ್ಟ್ರಾಂಗ್ ಆಗಿ ಇದ್ದಷ್ಟು ಹೀರೋ ಗತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿ ಖಡಕ್ ವಿಲನ್‌ಗಳನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

    ಇರಾನ್ ಮೂಲದ ನಟ ಸಜ್ಜಾದ್ ಡೆಲಾಫ್ರೂಜ್, (Sajjad Delafrooz ) ಈ ಹಿಂದೆ ಸಲ್ಮಾನ್ ಖಾನ್ (Salman Khan) ನಟನೆಯ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಭಯಾನಕ ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡರು. ಭಯಾನಕ ಪಾತ್ರಗಳ ಮೂಲಕ ಬೆಚ್ಚಿ ಬೀಳಿಸಿರುವ ನಟನಿಗೆ ಈಗ `ಪುಷ್ಪ 2′ ಚಿತ್ರದಲ್ಲಿ ನಟಿಸುವ ಚಾನ್ಸ್ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದಷ್ಟು ಬೇಗ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

    ʻಪುಷ್ಪʼ ಪಾರ್ಟ್ 2ಗಾಗಿ ಸಿನಿಮಾದ ಕಥೆಯ ಮೇಲೆ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್‌ನ ಸಾಮ್ರಾಜ್ಯ ದೊಡ್ಡದಾಗಲಿದೆ. ರಕ್ತ ಚಂದನ ಸಾಗಾಣಿಕೆಯ ದಂಧೆ ವಿದೇಶಕ್ಕೂ ಹಬ್ಬಲಿದೆ. ಹಾಗಾಗಿ ವಿವಿಧ ದೇಶಗಳಿಗೆ ಪುಷ್ಪರಾಜ್ ತೆರಳುತ್ತಾನೆ. ಅಲ್ಲಿ ಅನೇಕ ವಿಲನ್‌ಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಈ ರೀತಿಯಾಗಿ ಕಥೆ ಸಾಗಲಿದೆಯಂತೆ.