Tag: ಗ್ಲಾಸ್ ಟ್ಯಾಂಕ್

  • ಮೀನುಗಳಿಂದ ವಾಹನ ಚಾಲನೆ – ವೀಡಿಯೋ ವೈರಲ್

    ಮೀನುಗಳಿಂದ ವಾಹನ ಚಾಲನೆ – ವೀಡಿಯೋ ವೈರಲ್

    ಇಸ್ರೇಲ್: ಗೋಲ್ಡ್ ಫೀಶ್‍ಗಳಿಗೆ ವಿಜ್ಞಾನಿಗಳು ವಾಹನ ಚಾಲನೆ ಮಾಡುವ ತರಬೇತಿಯನ್ನು ಕೊಟ್ಟಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

    6 ಗೋಲ್ಡ್ ಫೀಶ್‍ಗಳಿಗೆ ವಾಹನ ಚಲಾಯಿಸುವ ತರಬೇತಿಯನ್ನು ವಿಜ್ಞಾನಿಗಳು ನೀಡಿದ್ದಾರೆ. ಮೀನುಗಳು ವಾಹನವನ್ನು ಚಲಾಯಿಸುವ ವೀಡಿಯೋವನ್ನು ವಿಜ್ಞಾನಿಗಳ ತಂಡ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳು ಬಿಹೇವಿಯರಲ್ ಬ್ರೈನ್ ರಿಸರ್ಚ್ ಜರ್ನಲ್‍ನಲ್ಲಿ ಮೀನುಗಳು ಕೂಡ ವಾಹನವನ್ನು ನಿಯಂತ್ರಿಸುವುದನ್ನು ಕಲಿಯಬಹುದು ಎನ್ನುವ ಬಗ್ಗೆ ನಡೆಸಿದ ಸಂಶೋಧನೆಯ ವರದಿಯನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ವೀಡಿಯೋದಲ್ಲಿ  ಏನಿದೆ?: ಮೀನು ವಾಹನ ಚಲಾಯಿಸುತ್ತಿರುವ ವೀಡಿಯೋದಲ್ಲಿ ಮೋಟಾರ್ ಅಳವಡಿಸಿದ ನಾಲ್ಕು ಚಕ್ರದ ವಾಹನವನ್ನು ಕಾಣಬಹುದು, ಚಕ್ರದ ಮೇಲೆ ಗ್ಲಾಸ್‍ನ ಟ್ಯಾಂಕನ್ನು ನಿಲ್ಲಿಸಿದ್ದಾರೆ. ಅದರಲ್ಲಿ ನೀರನ್ನು ಹಾಕಲಾಗಿದೆ. ನೀರಿನೊಳಗೆ ಗೋಲ್ಡ್ ಫೀಶ್‍ಗಳನ್ನು ಬಿಡಲಾಗಿದೆ. ಅದರಲ್ಲಿರುವ ಮೀನುಗಳು ತಮ್ಮ ಬಾಯಿಯ ಮೂಲಕ ಗ್ಲಾಸ್ ಟ್ಯಾಂಕ್ ಮುಟ್ಟುತ್ತವೆ. ಆಗ ವಾಹನವು ಚಲಿಸುತ್ತದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮೀನುಗಳು ಮೂರರಿಂದ ನಾಲ್ಕು ಮೀಟರ್ ಕೋಣೆಯಲ್ಲಿ ನ್ಯಾವಿಗೇಟ್ ಮಾಡುವುದನ್ನು ಮೊದಲು ಕಲಿತೆವು. ನಂತರ ಕೆಲವು ದಿನಗಳ ತರಬೇತಿಯ ಬಳಿಕ ಮೀನುಗಳು ಯಶಸ್ವಿಯಾಗಿವೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.