Tag: ಗ್ಲಾಸ್

  • ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಟಿ ಮೂಡ್ ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರು ಹತ್ತಿಕೊಂಡು ನಿರ್ಮಾಪಕ ಮುರಾದ್ ಖೇತನಿ ಅವರ ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸುತ್ತಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರನ್ನು ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ತಕ್ಷಣವೇ ತಮ್ಮ ಕೈಯಲ್ಲಿ ಗ್ಲಾಸ್ ಇದೆ ಎಂದು ನೆನಪಾಗಿದೆ ಅನ್ನು ಪ್ಯಾಂಟ್ ಜೇಬಿಗೆ ಇಳಿಸುತ್ತಾರೆ.

    ಕಾರಿನಲ್ಲಿ ಬರುವಾಗಲೇ ಗ್ಲಾಸ್ ಹಿಡಿದುಕೊಂಡು ಬಂದಿದ್ದ ಸಲ್ಮಾನ್, ಗ್ಲಾಸ್ ಅರ್ಧ ತುಂಬಿದ್ದರೂ ಕ್ಯಾಮೆರಾಗಳು ಕಾಣುತ್ತಿದ್ದಂತೆಯೇ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಏನೂ ನಡೆದೇ ಇಲ್ಲ ಎನ್ನುವಂತೆ ಕೂಲ್ ಆಗಿ ನಡೆದುಕೊಂಡು ಹೋಗುತ್ತಾರೆ. ಈ ವಿಡಿಯೋವನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಗ್ಲಾಸ್ ನಲ್ಲಿ ಇರುವುದು ಏನು ಎನ್ನುವ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ದೊಡ್ಡ ನಟ ಗ್ಲಾಸ್ ಹಿಡಿದುಕೊಂಡು ಪಾರ್ಟಿಗೆ ಬಂದಿದ್ದು ಯಾಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಲ್ಮಾನ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಗ್ಲಾಸ್ ನಲ್ಲಿ ಮದ್ಯ ಇತ್ತಾ? ಅಥವಾ ಅವರು ನೀರು ಕುಡಿಯುತ್ತಿದ್ದರಾ ಎನ್ನುವುದು ಅವರಿಗಷ್ಟೇ ಗೊತ್ತು. ಆದರೆ, ಕೆಲವರಂತೂ ವಿಪರೀತ ಕಲ್ಪನೆ ಮಾಡಿಕೊಂಡು ಆ ವಿಡಿಯೋಗೆ ಕಾಮೆಂಟ್ ಬರೆಯುತ್ತಿದ್ದಾರೆ. ಮನೆಯಿಂದಲೇ ಬರುವಾಗಲೇ ಕಾರಿನಲ್ಲಿ ಸಲ್ಮಾನ್ ಕುಡಿಯುತ್ತಾ ಬಂದಿದ್ದಾರೆ ಎಂದು ಕೆಲವರು ಬರೆದಿದ್ದರೆ, ಫೆವರೆಟ್ ಗ್ಲಾಸ್ ನಲ್ಲಿ ಕುಡಿಯಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಗ್ಲಾಸ್ ತಗೆದುಕೊಂಡು ಹೋಗುತ್ತಾರಾ ಎಂದು ಕೆಲವರು ಬರೆದಿದ್ದಾರೆ. ಒಟ್ಟಿನಲ್ಲಿ ಪ್ಯಾಂಟ್ ನಲ್ಲಿ ಗ್ಲಾಸ್ ಇಟ್ಟುಕೊಳ್ಳುವುದು ಭಾರೀ ಚರ್ಚೆಗೆ ಅಂತೂ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಕ್ ಡೌನ್ ನಡುವೆ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ

    ಲಾಕ್ ಡೌನ್ ನಡುವೆ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ

    ಶಿವಮೊಗ್ಗ: ಕಠಿಣ ಲಾಕ್ ಡೌನ್ ನಡುವೆ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಪುಡಿ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿ ಕಾರುಗಳ ಮಾಲೀಕರು ತಮ್ಮ ತಮ್ಮ ಕಾರುಗಳನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಆದರೆ ಮಧ್ಯರಾತ್ರಿ 1.30ರ ಸುಮಾರಿಗೆ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 17 ಕಾರುಗಳು, ಆಟೋ ಹಾಗೂ ಬೈಕ್‍ಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ.

    ಘಟನೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಪದೇ ಪದೇ ಇಂತಹ ದುಷ್ಕøತ್ಯ ನಡೆಯುತ್ತಿದೆ. ಪೊಲೀಸರು ಇಂತಹ ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಇಡೀ ದೇಶ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಸಮಯದಲ್ಲಿ ಕಿಡಿಗೇಡಿಗಳು ಇಂತಹ ದುಷ್ಕೃತ್ಯ ಮೆರೆದಿದ್ದಾರೆ. ದುಷ್ಕೃತ್ಯ ನಡೆಸಿರುವ ಇಬ್ಬರು ಯುವಕರನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ದೊಡ್ಡಪೇಟೆ ಪೊಲೀಸರು ಈಗಾಗಲೇ ಇಬ್ಬರು ಕಿಡಿಗೇಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಅಷ್ಟೇ ಅಲ್ಲದೇ ಇನ್ನು ಕೆಲವು ಕಿಡಿಗೇಡಿಗಳು ಇರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಶ್ವಾನಕ್ಕಾಗಿ ಕಾರು ಗ್ಲಾಸ್ ಒಡೆದ ವ್ಯಕ್ತಿ – ನೆಟ್ಟಿಗರಿಂದ ಮೆಚ್ಚುಗೆ

    ಲಂಡನ್: ಕಾರಿನಲ್ಲಿ ಬಿಟ್ಟು ಹೋಗಿದ್ದ ಶ್ವಾನಕ್ಕಾಗಿ ವ್ಯಕ್ತಿಯೋರ್ವ ಶಾಪಿಂಗ್ ಮಾಲ್ ಮುಂದೆ ಪಾರ್ಕ್ ಮಾಡಿದ್ದ ಬೇರೆಯವರ ಕಾರಿನ ಗ್ಲಾಸ್ ಒಡೆದು ಹಾಕಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಶಾಪಿಂಗ್‍ಗೆಂದು ಕಾರಿನಲ್ಲಿ ಬಂದ ಮಾಲೀಕ ನಾಯಿಯ ಮರಿಯನ್ನು ಕಾರಿನಲ್ಲೇ ಬಿಟ್ಟು ಮಗಳ ಜೊತೆ ಶಾಪಿಂಗ್ ಮಾಡಲು ಹೋಗಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಶ್ವಾನ ಹೊರಗೆ ಬರಲಾಗದೆ ಉಸಿರಾಡಲೂ ಆಗದೇ ಕಷ್ಟಪಟ್ಟಿದೆ. ಕಾರು ಕೂಡ ಬಿಸಿಲಿನಲ್ಲಿ ನಿಂತಿದ್ದು, ಬಿಸಿಲ ಝಳಕ್ಕೆ ನಾಯಿ ಬೊಗಳಲು ಆರಂಭಿಸಿದೆ.

    ಸುಮಾರು 45 ನಿಮಿಷ ನಾಯಿ ಕಾರಿನಲ್ಲಿ ಕಷ್ಟಪಟ್ಟಿದೆ. ಆ ನಂತರ ಸ್ಥಳದಲ್ಲಿ ಇದ್ದ ಜನರು ನಾಯಿಯನ್ನು ಹೊರತೆಗೆಯಲು ಮಾಲೀಕನನ್ನು ಹುಡುಕಿದ್ದಾರೆ. ಆದರೆ ಮಾಲೀಕ ಸಿಕ್ಕಿಲ್ಲ. ಆ ನಂತರ ಸ್ಥಳಕ್ಕೆ ಬಂದ ವ್ಯಕ್ತಿಯೋರ್ವ ತನ್ನ ಬಳಿಯಿದ್ದ ಕೊಡಲಿಯಿಂದ ಕಾರಿನ ಗ್ಲಾಸ್ ಅನ್ನು ಒಡೆದು ಹಾಕಿ ನಾಯಿಯನ್ನು ಹೊರ ತೆಗೆದಿ ದ್ದಾನೆ. ಬರೋಬ್ಬರಿ 8 ಬಾರಿ ಕೊಡಲಿಯಿಂದ ಗ್ಲಾಸ್‍ಗೆ ಒಡೆದು ಅದನ್ನು ಬ್ರೇಕ್ ಮಾಡಲಾಗಿದೆ. ನಂತರ ನಾಯಿಯನ್ನು ಪೆಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಗ್ಲಾಸ್ ಒಡೆದು ಹಾಕಿದ ವ್ಯಕ್ತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ನಾಯಿಯನ್ನು ಕಾರಿನಲ್ಲಿ ಬಿಟ್ಟು ಹೋದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಾಯಿ ಸಾಕಲೂ ಕೂಡ ಅರ್ಹವಾಗಿಲ್ಲ. ಅವರನ್ನು ಜೈಲಿಗೆ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಹಾವೇರಿ: ಕಚೇರಿ ಒಳಗಡೆ ಹೋಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ಹಣ ಎಗರಿಸಿದ ಚೋರರು ಪರಾರಿಯಾದ ಘಟನೆ ಹಾವೇರಿ ನಗರದ ಹಳೆ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ.

    ಗುತ್ತಿಗೆದಾರ ರಾಜಶೇಖರ್ ಮಾದರ ಎಂಬುವರಿಗೆ ಸೇರಿದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಕಳ್ಳರು, ಕಾರಿನಲ್ಲಿದ್ದ 80 ಸಾವಿರ ರುಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.

    ರಾಜಶೇಖರ್ ಬ್ಯಾಂಕ್ ಆಫ್ ಬರೋಡಾದಲ್ಲಿ 2 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಒಬ್ಬರಿಗೆ 1.20 ಲಕ್ಷ ಇಪ್ಪತ್ತು ಸಾವಿರ ನೀಡಿ ಉಳಿದ ಹಣವನ್ನು ಕಾರಿನಲ್ಲಿ ಇಟ್ಟುಕೊಂಡಿದ್ದರು. ಜಿಲ್ಲಾಪಂಚಾಯಿತ್ ಕಟ್ಟಡಕ್ಕೆ ಆಗಮಿಸಿದ ಬಳಿಕ ಕೆಲಸಕ್ಕೆ ಎಂದು ಒಳ ಪ್ರವೇಶಿಸಿದ್ದಾರೆ.

    ಈ ವೇಳೆ ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದ ಕಳ್ಳರು ಹಾಡಹಗಲೇ ಹಣ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನಗರದಲ್ಲಿರೋ ಸಿಸಿಟಿವಿ ಸರಿಪಡಿಸಬೇಕು. ಇಲ್ಲ ಎಂದರೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

    ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

    ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ ನಡೆಯುತ್ತಿತ್ತು. ಪ್ರೇಕ್ಷಕರೆಲ್ಲರೂ ನೋಡುತ್ತಾ ಕುಳಿತಿದ್ದರು. ಆಗ ಆಟಗಾರನೊಬ್ಬನ ಭರ್ಜರಿ ಹೊಡೆತಕ್ಕೆ ಕೈ ಹಾಕಿದ್ದು, ಬಾಲ್ ಆಟವನ್ನು ನೋಡುತ್ತಾ ಕುಳಿತಿದ್ದ ಪ್ರೇಕ್ಷಕರ ಮಧ್ಯೆ ಇದ್ದ ಯುವತಿಯ ಬಿಯರ್ ಗ್ಲಾಸ್ ಗೆ ನೇರವಾಗಿ ಹೋಗಿ ಬಿದ್ದಿದೆ.

    ಗ್ಲಾಸ್ ಬಿದ್ದ ತಕ್ಷಣ ಯುವತಿ ಎದ್ದು ನಿಂತು, ಬಾಲ್ ಅನ್ನು ಸುತ್ತ ಕುಳಿತಿದ್ದ ಪ್ರೇಕ್ಷಕರಿಗೆ ಸಂತಸದಿಂದ ತೋರಿಸುತ್ತಾ ನಂತರ ಎಲ್ಲರಿಗೂ ಚೀಯರ್ಸ್ ಮಾಡಿ ಬಾಲ್ ತೆಗೆಯದೇ ಬಿಯರ್ ಕುಡಿದಿದ್ದಾಳೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಕಾಣಬಹುದು.

    ಆಟಗಾರ ಹೊಡೆದ ರಭಸಕ್ಕೆ ಬಾಲ್ ನನ್ನ ಹಿಂದೆ ಬರುತ್ತಿತ್ತು. ಆಗ ನಾನು ಬಾಲ್ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಆದರೆ ಅಷ್ಟರಲ್ಲಿ ಅದು ಗ್ಲಾಸಿಗೆ ಬಂದು ಬಿತ್ತು ಎಂದು ಯುವತಿ ಹೇಳಿದ್ದಾಳೆ.

    ಸದ್ಯಕ್ಕೆ ಯುವತಿಯ ಬಿಯರ್ ಗ್ಲಾಸಿಗೆ ಬಿದ್ದ ಬಾಲ್ ಮತ್ತು ಬಾಲ್ ಸಮೇತ ಚೀಯರ್ಸ್ ಮಾಡಿ ಯುವತಿ ಬಿಯರ್ ಕುಡಿದಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

  • ಬೆಂಗ್ಳೂರಲ್ಲಿ ರಾತ್ರಿ 2 ರೌಡಿಗ್ಯಾಂಗ್‍ಗಳ ಅಟ್ಟಹಾಸ- 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಪುಡಿ ಪುಡಿ

    ಬೆಂಗ್ಳೂರಲ್ಲಿ ರಾತ್ರಿ 2 ರೌಡಿಗ್ಯಾಂಗ್‍ಗಳ ಅಟ್ಟಹಾಸ- 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಪುಡಿ ಪುಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರೋ ರಾತ್ರಿ ಮಚ್ಚು ಲಾಂಗುಗಳು ಅಟ್ಟಹಾಸ ಮೆರೆದಿವೆ. ಎರಡು ರೌಡಿ ಗ್ಯಾಂಗ್ ಗಳ ಅಟ್ಟಹಾಸಕ್ಕೆ ಜನ ಭಯಭೀತರಾಗಿದ್ದಾರೆ. ಏಕಾಏಕಿ ರೌಡಿಗಳ ದಾಳಿಯಿಂದ ಅನೇಕ ಜನ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಮಚ್ಚು ಲಾಂಗಿನೇಟಿಗೆ ಅಂಗಡಿ, ಕಾರ್, ಆಟೋಗಳ ಗ್ಲಾಸ್ ಗಳು ಪುಡಿಪುಡಿಯಾಗಿವೆ.

    ಶನಿವಾರ ರಾತ್ರಿ 10 ಗಂಟೆಗೆ 4 ಬೈಕ್ ಗಳಲ್ಲಿ ಬಂದ 10 ಜನ ದುಷ್ಕರ್ಮಿಗಳು ಮಚ್ಚುಲಾಂಗುಗಳಿಂದ ಕಾವಲ್ ಭೈರಸಂದ್ರದ ಮೋದಿ ಗಾರ್ಡನ್ ಬಳಿ ಅಂಗಡಿಗಳು ಸೇರಿ ರಸ್ತೆ ಬದಿ ಪಾರ್ಕ್ ಮಾಡಿದ್ದ 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇದು ಸ್ಥಳೀಯರ ಮನೆ ಮುಂದೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮೋದಿಗಾರ್ಡನ್ ನ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಗ್ಯಾಂಗ್ ನ ದಾಳಿಯಿಂದ ಐದಾರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಡಿ ರೌಡಿಗಳ ದಾಳಿಯಿಂದ ಸ್ಥಳೀಯ ಜನ ಭಯಭೀತರಾಗಿದ್ದಾರೆ.

    ಮೋದಿಗಾರ್ಡನ್ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯ ರೌಡಿಶೀಟರ್ ಗಳು. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಸ್ಥಳೀಯವಾಗಿ ಸುಬಾನ್ ಗ್ಯಾಂಗ್ ಜೊತೆ ವೈಷಮ್ಯ ಬೆಳೆಸಿಕೊಂಡಿದ್ದ ಅನೀಜ್ ಗ್ಯಾಂಗ್ ಏರಿಯಾದಲ್ಲಿ ಹವಾ ಮುಂದುವರೆಸಲು ಈ ರೀತಿಯ ದುಷ್ಕೃತ್ಯಗಳಿಗೆ ಮುಂದಾಗಿದ್ದಾರೆ. ಡಿ.ಜೆ.ಹಳ್ಳಿ ಠಾಣೆಯಲ್ಲಿ ಇವರ ವಿರುದ್ಧ ಅನೇಕ ದೂರುಗಳಿದ್ದರೂ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ಮೇಯರ್ ಸಂಪತ್ ರಾಜ್ ಪ್ರತಿನಿಧಿಸೋ ಡಿ.ಜೆ.ಹಳ್ಳಿ ವಾರ್ಡ್ 47 ರ ಮೋದಿ ಗಾರ್ಡನ್ ನಲ್ಲಿನ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಭಯವನ್ನುಂಟುಮಾಡಿದೆ. ಒಟ್ಟಿನಲ್ಲಿ ಎರಡು ರೌಡಿ ಗ್ಯಾಂಗುಗಳ ಕೋಲ್ಡ್ ವಾರ್ ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಅನುಮಾನದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ ಪೊಲೀಸರು ನಾಲ್ಕು ಜನ ದುಷ್ಕರ್ಮಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ವಿಂಡೋ ಗ್ಲಾಸ್ ಒಡೆದು ಕಾರಿನೊಳಗೆ ತಲೆದೂರಿಸಿ ಆಹಾರ ಪಾಕೆಟ್ ಕಿತ್ತುಕೊಂಡ ಜಿರಾಫೆ-ವಿಡಿಯೋ ನೋಡಿ

    ವಿಂಡೋ ಗ್ಲಾಸ್ ಒಡೆದು ಕಾರಿನೊಳಗೆ ತಲೆದೂರಿಸಿ ಆಹಾರ ಪಾಕೆಟ್ ಕಿತ್ತುಕೊಂಡ ಜಿರಾಫೆ-ವಿಡಿಯೋ ನೋಡಿ

    ಲಂಡನ್: ಸಫಾರಿ ಕಾರಿನ ಗ್ಲಾಸ್ ಒಡೆದ ಜಿರಾಫೆಯೊಂದು ಆಹಾರದ ಪೊಟ್ಟಣವನ್ನು ಎತ್ತಿಕೊಂಡಿರುವ ವಿಚಿತ್ರ ಘಟನೆ ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ ನ ವರ್ಸೆಸ್ಟಶೈರ್ ನಲ್ಲಿ ಸೋಮವಾರ ನಡೆದಿದೆ.

    ಕಾರಿನಲ್ಲಿ ಸಫಾರಿ ಮಾಡುವ ವೇಳೆ ಎದುರಿಗೆ ಬಂದ ಜಿರಾಫೆಗೆ ಆಹಾರ ನೀಡಲು ದಂಪತಿ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಆಹಾರದ ಪೊಟ್ಟಣಗಳನ್ನು ನೋಡಿದ ಜಿರಾಫೆ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿದೆ. ಇದ್ರಿಂದ ಭಯಗೊಂಡ ಕಾರಿನಲ್ಲಿದ್ದ ಮಹಿಳೆ ಕಾರಿನ ಕಿಟಕಿಯ ಗ್ಲಾಸ್ ಮೇಲೆರಿಸಲು ಪ್ರಯತ್ನಿಸಿದ್ದಾರೆ. ಜಿರಾಫೆಗೆ ತಗುಲಿದ ಗ್ಲಾಸ್ ಒಡೆದು ಚೂರು ಚೂರಾಗಿದೆ.

    ಈ ಎಲ್ಲ ದೃಶ್ಯಗಳನ್ನು ಪಕ್ಕದ ಸಫಾರಿ ಕಾರಿನಲ್ಲಿದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಸಂಬಂಧ ಸಫಾರಿ ಉದ್ಯಾನದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದ್ದು ಮತ್ತು ಜಿರಾಫೆಗೆ ಯಾವುದೇ ರೀತಿಯಲ್ಲಿ ಅಪಾಯಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಪಾರ್ಕ್ ನಿಯಮವೇನು?: ವರ್ಸೆಸ್ಟಶೈರ್ ಪಾರ್ಕ್ ನಲ್ಲಿ ಸಫಾರಿ ಮಾಡುವ ಜನರು ಕಾರಿನ ಕಿಟಕಿಯ ಅರ್ಧ ಗ್ಲಾಸ್ ಮಾತ್ರ ತೆಗೆಯಬೇಕು. ಇದರ ಮೂಲಕವೇ ಸಫಾರಿಯಲ್ಲಿ ಎದುರಾಗುವ ಜಿರಾಫೆಗಳಿಗೆ ಆಹಾರವನ್ನು ನೀಡಬಹುದು ಎನ್ನುವ ನಿಯಮವಿದೆ.

    ದಂಪತಿ ಕಾರಿನ ವಿಂಡೋ ಪೂರ್ಣ ಪ್ರಮಾಣದಲ್ಲಿ ತೆರೆದು ಆಹಾರವನ್ನು ತೋರಿಸಿ ಜಿರಾಫೆಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಜಿರಾಫೆ ತಮ್ಮ ಹತ್ರ ಬರುತ್ತಿದ್ದಂತೆ ದಂಪತಿ ನಗುತ್ತಾ ಅದಕ್ಕೆ ಆಹಾರ ನೀಡಲು ಮುಂದಾಗಿದ್ದಾರೆ. ಆಹಾರದ ಪೊಟ್ಟಣಕ್ಕೆ ಕಣ್ಣು ಹಾಕಿದ ಜಿರಾಫೆ ಕಾರಿನ ಒಳಗೆಯೇ ತಲೆಯನ್ನ ತೂರಿಸಿದ್ದರಿಂದ ಈ ಅವಘಡ ನಡೆದಿದೆ.

    ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಜಿರಾಫೆಯನ್ನ ನನ್ನ ಹತ್ತಿರ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ ಜಿರಾಫೆ ಪಕ್ಕದ ಕಾರಿನತ್ತ ಹೋಯಿತು. ಕಾರಿನಲ್ಲಿದ್ದ ದಂಪತಿ ಜಿರಾಫೆ ತಮ್ಮತ್ತ ಬರುತ್ತಿದ್ದಂತೆ ಖುಷಿಯಿಂದ ನಗಲಾರಂಭಿಸಿದ್ರು. ಯಾವಾಗ ಜಿರಾಫೆ ತನ್ನ ಕತ್ತನ್ನ ಕಾರಿನೊಳಗೆ ಸೇರಿಸಿತೋ ಭಯಗೊಂಡ ದಂಪತಿ ಗ್ಲಾಸ್ ಮೇಲೆ ಮಾಡಿದ್ದರಿಂದ ಅದು ಚೂರು ಚೂರಾಯಿತು. ಗ್ಲಾಸ್ ಒಡೆದಿದ್ದರಿಂದ ಜಿರಾಫೆಗೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಕಾರಿನಲ್ಲಿದ್ದವರಿಗೆ ತರಚಿದ ಗಾಯಗಳಾಗಿವೆ. ಕಾರಿನ ಗ್ಲಾಸ್ ತೆಗೆಯಬಾರದು ಎಂಬ ನಿಯಮವಿದ್ದರೂ ದಂಪತಿ ವಿಂಡೋ ಓಪನ್ ಮಾಡಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ವಿಡಿಯೋ ಮಾಡಿದ ವ್ಯಕ್ತಿ ಹೇಳಿದ್ದಾನೆ.

  • ಮನೆ ಮುಂದೆ ಕಾರ್ ಪಾರ್ಕ್ ಮಾಡುವವರು ಎಚ್ಚರ ವಹಿಸಿ-ಇಲ್ಲಾಂದ್ರೆ ಬೆಳಗಾಗೋವಷ್ಟರಲ್ಲಿ ನಿಮ್ಮ ಕಾರ್ ಉಡೀಸ್..!

    ಮನೆ ಮುಂದೆ ಕಾರ್ ಪಾರ್ಕ್ ಮಾಡುವವರು ಎಚ್ಚರ ವಹಿಸಿ-ಇಲ್ಲಾಂದ್ರೆ ಬೆಳಗಾಗೋವಷ್ಟರಲ್ಲಿ ನಿಮ್ಮ ಕಾರ್ ಉಡೀಸ್..!

    ಬೆಂಗಳೂರು: ನೀವು ನಿಮ್ಮ ಮನೆಯ ಮುಂದೆ ಕಾರುಗಳನ್ನು ಪಾರ್ಕ್ ಮಾಡುತ್ತೀರಾ, ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು. ಇಲ್ಲವಾದರೆ ಬೆಳಗಾಗುವಷ್ಟರಲ್ಲಿ ನಿಮ್ಮ ಕಾರಿನ ಗ್ಲಾಸ್ ಗಳು ಪುಡಿ ಪುಡಿ ಆಗುತ್ತವೆ.

    ನಗರದಲ್ಲಿಯ ಕೆಲ ಕಿಡಿಗೇಡಿಗಳು ಕಾರಿನ ಗ್ಲಾಸ್ ಗಳನ್ನು ಒಡೆಯುವ ಮೂಲಕ ವಿಕೃತಿಯನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ವಾರದ ಅವಧಿಯಲ್ಲಿ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಪ್ರಕರಣಗಳು ದಾಖಲಾಗಿವೆ.

     

    ಉತ್ತರ ವಿಭಾಗದ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಮತ್ತು ಮಹಾಲಕ್ಷ್ಮೀ ಲೇಔಟ್ ನಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುಡಾರಿಗಳು ಕಾರಿನ ಗ್ಲಾಸ್ ಒಡೆಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಂದಿನಿ ಲೇಔಟ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೇವರಾಜ್ ಮತ್ತು ಮಂಜು ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ಕಿಡಿಗೇಡಿಗಳ ಗ್ಯಾಂಗ್ ಸದಸ್ಯರು ನಗರದ ಬೇರೆ ಕಡೆಯೂ ಕಾರಿನ ಗ್ಲಾಸ್ ಒಡೆದಿರುವ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಗ್ಯಾಂಗ್ ಇತ್ತೀಚೆಗೆ ಕಾರ್ಪೋರೇಟರ್ ರಾಜೇಂದ್ರಕುಮಾರ್ ಕಾರ್ ಸಹ ಒಡೆದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

    ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    https://www.youtube.com/watch?v=GkgYJmxl45A