Tag: ಗ್ರೆನೇಡ್

  • ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಬಾರಿ ಗ್ರೆನೇಡ್ ದಾಳಿ

    ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಬಾರಿ ಗ್ರೆನೇಡ್ ದಾಳಿ

    ಶ್ರೀನಗರ: ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಕಡೆ ಗ್ರೆನೇಡ್ ದಾಳಿಗಳು ನಡೆದಿವೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಗಾಯಗೊಂಡಿರುವುದಾಗಿ ವರದಿಯಾಗಿದೆ.

    ನಿನ್ನೆ(ಸೋಮವಾರ) ಬುದ್ಗಾಮ್‌ನ ಗೋಪಾಲ್‌ಪೋರಾ ಚದೂರ ಪ್ರದೇಶದಲ್ಲಿ ಭಯೋತ್ಪಾದಕರು ಎಸೆದ ಗ್ರೆನೇಡ್ ಸ್ಥಳೀಯ ಕರಣ್ ಕುಮಾರ್ ಸಿಂಗ್ ಗಾಯಗೊಂಡಿದ್ದರು. ಬಳಿಕ ಶ್ರೀನಗರದ ಕಾಶ್ಮೀರ ಪೊಲೀಸ್ ನಿಯಂತ್ರಣ ಕೊಠಡಿ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ನಡೆದಿರುವ ದಾಳಿಯಲ್ಲಿ ಗಾಯಗೊಂಡಿರುವ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    ಭಾನುವಾರವೂ ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಪೊಲೀಸ್ ಕಾನ್‌ಸ್ಟೇಬಲ್ ಸರ್ಫರಾಜ್ ಅಹ್ಮದ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    Live Tv
    [brid partner=56869869 player=32851 video=960834 autoplay=true]

  • ಉಗ್ರರಿಂದ ಗ್ರೆನೇಡ್ ದಾಳಿ- ಪೊಲೀಸ್ ಸಿಬ್ಬಂದಿ ಹುತಾತ್ಮ

    ಉಗ್ರರಿಂದ ಗ್ರೆನೇಡ್ ದಾಳಿ- ಪೊಲೀಸ್ ಸಿಬ್ಬಂದಿ ಹುತಾತ್ಮ

    ಶ್ರೀನಗರ: ಉಗ್ರರು ಎಸೆದ ಗ್ರೆನೇಡ್‍ನಿಂದ ಪೊಲೀಸ್ ಕಾನ್ಸ್‌ಟೆಬಲ್‍ರೊಬ್ಬರು ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖೈಮೋಹ್ ಪ್ರದೇಶದಲ್ಲಿ ನಡೆದಿದೆ.

    ಪೂಂಚ್ ನಿವಾಸಿ ತಾಹಿರ್ ಖಾನ್ ಮೃತಪ ಪೊಲೀಸ್ ಸಿಬ್ಬಂದಿ. ಖೈಮೊಹ್ ಕುಲ್ಗಾಂನಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ತಾಹಿರ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ.

    ಇನ್ನೂ ನಿನ್ನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಎಸೆದಿದ್ದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದರು.

    ಅಷ್ಟೇ ಅಲ್ಲದೇ ಇಂಟೆಲಿಜೆನ್ಸ್ ಬ್ಯೂರೋ(ಐಬಿ) ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವಾರು ನಗರಗಳಲ್ಲಿ ದಾಳಿ ನಡೆಯಬಹುದಾಗಿ ಎಚ್ಚರಿಕೆಯನ್ನೂ ನೀಡಿದೆ. ಐಬಿ ನೀಡಿರುವ ಕೆಲವು ಪ್ರಮುಖ ಎಚ್ಚರಿಕೆಗಳು ಇಂತಿವೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಬಹುದೆಂದು ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದಲ್ಲದೇ ಪಾಕಿಸ್ತಾನದಿಂದ ಪಂಜಾಬ್‍ನ ಗಡಿ ಮೂಲಕ ದೆಹಲಿಗೆ ಡ್ರೋನ್‍ಗಳು ಪ್ರವೇಶಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಬಂಧನಕ್ಕೊಳಗಾದ ಉಗ್ರರ ವಿಚಾರಣೆ ವೇಳೆ ಈ ವಿಷಯ ತಿಳಿದುಬಂದಿರುವುದಾಗಿ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    Live Tv
    [brid partner=56869869 player=32851 video=960834 autoplay=true]

  • ಗಡಿ ಭಾಗದ ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ- ಬೆಳಗಾವಿ ಜಿಲ್ಲೆಯಲ್ಲಿ ಆತಂಕ

    ಗಡಿ ಭಾಗದ ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ- ಬೆಳಗಾವಿ ಜಿಲ್ಲೆಯಲ್ಲಿ ಆತಂಕ

    ಚಿಕ್ಕೋಡಿ: ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

    ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿ 6 ರಾಜ್ಯಗಳ 13 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಭಾನುವಾರ ಪರಿಶೀಲನೆ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.

    ಮಕ್ಕಳು ಬಾಂಬ್ ಎಂದು ತಿಳಿಯದೇ ಗ್ರೆನೇಡ್‍ನೊಂದಿಗೆ ಆಟ ಆಡುತ್ತಿದ್ದದ್ದನ್ನು ಕಂಡು ಶಿಕ್ಷಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸಾಂಗ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಭಾರಿ ಅನಾಹುತ ತಪ್ಪಿದೆ. ಶಾಲೆಯಲ್ಲಿ ಪತ್ತೆಯಾಗಿರುವ ಹ್ಯಾಂಡ್ ಗ್ರೆನೇಡ್ ಮೇಲೆ ಉರ್ದು ಭಾಷೆಯ ಲಿಪಿ ಕಂಡುಬಂದಿದೆ. ಗ್ರೆನೇಡ್ ಜೀವಂತವಾಗಿತ್ತೇ ಅಥವಾ ನಿಷ್ಕ್ರಿಯವಾಗಿತ್ತೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪತ್ರಾ ಚಾವ್ಲ್ ಭೂ ಹಗರಣ: ಇಡಿಯಿಂದ ಸಂಜಯ್ ರಾವತ್‌ ಬಂಧನ

    ಶಾಲೆಯಲ್ಲಿ ಗ್ರೆನೇಡ್ ಕಂಡುಬಂದಿರುವುದು ನೋಡಿದರೆ ಉಗ್ರರು ಶಾಲೆಯನ್ನು ಸ್ಫೋಟಗೊಳಿಸುವ ಯತ್ನದಲ್ಲಿದ್ದರೇ ಅಥವಾ ಇಲ್ಲಿ ವಾಸ್ತವ್ಯ ಹೂಡಿದ್ದರೇ ಎಂಬ ಅನುಮಾನಗಳು ಮೂಡಿವೆ. ಗಡಿಯಲ್ಲಿ ಇಂತಹ ಬೆಳವಣಿಗೆಯಿಂದ ಬೆಳಗಾವಿ ಜಿಲ್ಲೆಯಲ್ಲೂ ಆತಂಕ ಆವರಿಸಿದೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆ!

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ

    ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ

    ಚಂಡೀಗಢ: ಪೊಲೀಸ್‍ನ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ರಾಕೆಟ್ ಲಾಂಚರ್ ಬಳಸಿ ಗ್ರೆನೇಡ್ ದಾಳಿ ನಡೆಸಿದ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

    ಎಸ್‍ಎಎಸ್ ನಗರದದಲ್ಲಿರುವ ಪೊಲೀಸ್ ಇಂಟಲಿಜೆನ್ಸ್ ಹೆಡ್ ಕ್ವಾರ್ಟರ್ಸ್‍ನಲ್ಲಿ ಸಣ್ಣ ಸ್ಫೋಟ ಸಂಭವಿಸಿದೆ. ಗ್ರೆನೇಟ್ ಸ್ಫೋಟವು ಚಿಕ್ಕ ಪ್ರಮಾಣದಲ್ಲಿ ಆಗಿದ್ದು, ಸಂಪೂರ್ಣವಾಗಿ ಕಚೇರಿಯ ಗಾಜುಗಳು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಗಳು ನಡೆದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇದನ್ನು ಆರ್‌ಪಿಜಿ ದಾಳಿ ಶಂಕಿಸಿದ್ದಾರೆ.

    ಸ್ಫೋಟದಿಂದಾಗಿ ಯಾವುದೇ ಹಾನಿ ಆಗಿಲಿಲ್ಲ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡಗಳನ್ನು ಕರೆಸಲಾಗಿದೆ ಘಟನೆ ನಡೆದ ಪ್ರದೇಶದಲ್ಲಿ ಪೊಲೀಸರು ಸುತ್ತುವರಿದಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಲ್ಲಿದೆ. ಎಂದು ಮೊಹಾಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

    ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಮೊಹಾಲಿಯಲ್ಲಿರುವ ಪಂಜಾಬ್ ಪೆÇಲೀಸ್‍ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಚೇರಿಯಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಪಂಜಾಬ್‍ನ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಿದವರನ್ನು ಬಿಡಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

  • ಪುಲ್ವಾಮಾದಲ್ಲಿ ತಪ್ಪಿತು ದುರಂತ – ರಸ್ತೆಗೆ ಬಿತ್ತು ಗ್ರೆನೇಡ್‌, ಸೈನಿಕರು ಪಾರು

    ಪುಲ್ವಾಮಾದಲ್ಲಿ ತಪ್ಪಿತು ದುರಂತ – ರಸ್ತೆಗೆ ಬಿತ್ತು ಗ್ರೆನೇಡ್‌, ಸೈನಿಕರು ಪಾರು

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದಾರೆ. ಸೈನಿಕರ ವಾಹನವನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆಸಿದ್ದು 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

    ಪುಲ್ವಾಮಾದ ಕಾಕಾಪೋರದಲ್ಲಿ ಸಿಆರ್‌ಪಿಎಫ್‌ ಮತ್ತು ಪೊಲೀಸರ ಮೇಲೆ ಉಗ್ರರು  ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೆ ಗ್ರೆನೇಡ್‌ ಗುರಿ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ 10 ಮಂದಿ ನಾಗರಿಗರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಆರೋಗ್ಯ ಸ್ಥಿರವಾಗಿದೆ. ಸದ್ಯ ಈಗ ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು ಉಗ್ರರಿಗಾಗಿ ಹುಡುಕಾಟ ಆರಂಭವಾಗಿದೆ.

    ಕಳೆದ ವರ್ಷದ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿತ್ತು.

  • ಬಸ್ ನಿಲ್ದಾಣದ ಮೇಲೆ ಉಗ್ರರ ಗ್ರೆನೇಡ್ ದಾಳಿ

    ಬಸ್ ನಿಲ್ದಾಣದ ಮೇಲೆ ಉಗ್ರರ ಗ್ರೆನೇಡ್ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೋಪೋರೆನಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಸುಮಾರು 20 ಜನರು ಗಾಯಗೊಂಡಿದ್ದಾರೆ. 20ರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಸ್ಥಳೀಯ ನಿವಾಸಿಗಳನ್ನು ಗುರಿಯಾಗಿಸಿಕೊಂಡ ಉಗ್ರರು ಸೋಪೋರೆ ಬಸ್ ನಿಲ್ದಾಣದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 20 ಜನರು ಗಾಯಗೊಂಡಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

    ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 179 ಬಟಾಲಿಯನ್ ಸಿಆರ್ ಪಿಎಫ್ ಯೋಧರು ಆಗಮಿಸಿ, ಇಲಾಖೆಯನ್ನು ಸಂಪೂರ್ಣ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ತಲೆ ಮರೆಸಿಕೊಂಡಿರುವ ಉಗ್ರರರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್‍ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು 6 ಜನ ಗಂಭೀರ ಗಾಯಗೊಂಡಿದ್ದಾರೆ.

    ಶ್ರೀನಗರದಿಂದ 55 ಕಿ.ಮೀ. ದೂರದಲ್ಲಿರುವ ಅನಂತ್‍ನಾಗ್ ಪಟ್ಟಣದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಆದರೆ ಗುರಿ ತಪ್ಪಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. 6 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ 6 ಜನ ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟ ಸಂಭವಿಸುತ್ತಿದ್ದಂತೆ ಅಲ್ಲಿನ ಭದ್ರತಾ ಪಡೆ ಸುತ್ತುವರಿದಿದ್ದು, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಬಂಧಿಸಲು ಬೇಟೆ ಪ್ರಾರಂಭಿಸಿದ್ದಾರೆ. ಈವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದ ಕಣಿವೆಯಲ್ಲಿ ಉಗ್ರರು ಭದ್ರತಾ ಪಡೆ ಮೇಲೆ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.

    ಸೆಪ್ಟೆಂಬರ್ 28ರಂದು ಶ್ರೀನಗರದ ಡೌನ್ ಟೌನ್‍ನಲ್ಲಿ ಉಗ್ರರು ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ಗ್ರೆನೇಡ್ ಎಸೆದಿದ್ದರು. ಅದೂ ಸಹ ಗುರಿ ತಪ್ಪಿತ್ತು, ಈ ಮೂಲಕ ಆಗಲೂ ಭಾರೀ ಅನಾಹುತ ತಪ್ಪಿದಂತಾಗಿತ್ತು. ಸಿಆರ್ ಪಿಎಫ್‍ನ 38 ಬೆಟಾಲಿಯನ್ ಸಿಬ್ಬಂದಿ ನವಾ ಕಡಲ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ನಿಯೋಜಿಸಿದ್ದಾಗ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು.

  • ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

    ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

    ರಾಮನಗರ: ನಿನ್ನೆ ಬಂಧಿಸಿದ ಹಬೀಬುರ್ ರೆಹಮಾನ್ ಅವರನ್ನು ವಿಚಾರಣೆ ನಡೆಸಿದ ವೇಳೆ ಆತನ ಹೇಳಿಕೆಯ ಆಧಾರದ ಮೇಲೆ ಎನ್‍ಐಎ ಎರಡು ಐಇಡಿಗಳನ್ನು ಇಂದು ವಶಪಡಿಸಿಕೊಂಡಿದೆ.

    ಬಾಂಬ್ ನಿಷ್ಕ್ರೀಯ ದಳದ ಸಹಾಯದಿಂದ ರಾಮನಗರದ ಬಳಿಯ ರೇಲ್ವೆ ಹಳಿಯ ರಾಜಕಾಲುವೆಯಲ್ಲಿದ್ದ ಎರಡು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಂಗಳೂರು ಪೊಲೀಸರು ಐಇಡಿಗಳನ್ನು ಪತ್ತೆ ಹಚ್ಚಿದ್ದಾರೆ.

    ಬೆಂಗಳೂರಿನಲ್ಲಿ ಹಲವು ದುಷ್ಕøತ್ಯಗಳಲ್ಲಿ ಭಾಗಿಯಗಿರುವ ಕುರಿತು ಆರೋಪಿ ಬಹಿರಂಗಪಡಿಸಿದ್ದು, ಜೆಎಂಬಿ ಕಾರ್ಯ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸಲು 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದಾನೆ.

    ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧಿಸಿತ್ತು.

    ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಮಂಗಳವಾರ ಮಧ್ಯಾಹ್ನ ಬೆಂಗಳೂರು ಹಾಗೂ ಕೋಲ್ಕತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿ ಬಳಿ ಬಂಧಿಸಿದ್ದರು.

    ಬಂಧಿತ ಉಗ್ರ ಹಬೀಬುಲ್ಲಾ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು, ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು, ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ.

    ಬಂಧಿತ ಉಗ್ರ ಹಬೀಬುಲ್ಲಾ ರೆಹಮಾನ್‍ನನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್‍ನನ್ನು ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.

  • ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಬೆಂಗಳೂರು: ಮೆಜೆಸ್ಟಿಕ್‍ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ ಕೋಲ್ಕತ್ತಾದಲ್ಲಿ ತಯಾರಾಗಿದ್ದು, ಗ್ರೆನೇಡ್‍ನ ಮೇಲೆ ಯಾವುದೇ ಮಾರ್ಕ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಪಶ್ಚಿಮ ಬಂಗಾಳದ ಸ್ಥಳೀಯ ಫ್ಯಾಕ್ಟರಿಯಲ್ಲಿ ಈ ಗ್ರೆನೇಡ್ ತಯಾರು ಮಾಡಲಾಗಿದೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ದೂರದ ಪಶ್ಚಿಮ ಬಂಗಾಳದಲ್ಲಿ ತಯಾರಾದ ಗ್ರೆನೇಡ್ ಅನ್ನು ಬೆಂಗಳೂರಿಗೆ ತಂದವರು ಯಾರು? ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಟ್ಟವರು ಯಾರು? ಎಂಬ ಬಗ್ಗೆ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!

    ಗ್ರೆನೇಡ್‍ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಬೆದರಿಕೆ ಕರೆ ಹಾಗೂ ಗ್ರೆನೇಡ್ ಪತ್ತೆಯಾದ ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ರೈಲ್ವೇ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರೈಲ್ವೇ ಎಸ್‍ಪಿ ಗುಳೇದ್ ನೇತೃತ್ವದಲ್ಲಿ ರೈಲ್ವೇ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ ಮೆಜೆಸ್ಟಿಕ್‍ನಲ್ಲಿರುವ ಹತ್ತು ಪ್ಲಾಟ್ ಫಾರ್ಮ್‍ಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮೆಜೆಸ್ಟಿಕ್‍ನಿಂದ ಹೊರಡುವ ಎಲ್ಲಾ ರೈಲುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗುತ್ತಿದಂತೆ ಸಮೀಪದಲ್ಲಿದ್ದ ಕೆಲವು ಸ್ಟಾಲ್‍ಗಳನ್ನು ಮುಚ್ಚಿಸಿದ್ದಾರೆ.

    ಪುಲ್ವಾಮ ದಾಳಿ ನಂತರ ಇಡೀ ರೈಲ್ವೇ ನಿಲ್ದಾಣ ತಪಾಸಣೆ ಮಾಡಲಾಗಿತ್ತು. ಈ ವೇಳೆ ನಿಲ್ದಾಣದ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. ಆಗ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ರೈಲ್ವೇ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈಗ ಗ್ರೆನೇಡ್ ಸಿಕ್ಕಿರುವ ಜಾಗಕ್ಕೆ ಐದಾರು ಕಡೆಗಳಿಂದ ಒಳಬರಲು ದಾರಿ ಇದೆ. ಹೀಗಾಗಿಯೂ ಈ ಬಗ್ಗೆ ರೈಲ್ವೇ ಪೋಲೀಸರು ಯಾವುದೇ ಮುಂಜಾಗ್ರತೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.

    ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಅದು ಡಮ್ಮಿ ವಸ್ತು. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಪಡೆಯುತ್ತೇವೆ. ಅದು ಯಾವ ವಸ್ತು, ಎಲ್ಲಿಂದ ಬಂತು ಅನ್ನೊ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

  • ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಶ್ರೀನಗರ: ಬ್ಯಾಗ್‍ ನಲ್ಲಿ 2 ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    17 ಜಮ್ಮು ಕಾಶ್ಮೀರ ರೈಫಲ್ಸ್ ನ ಗೋಪಾಲ್ ಮುಖಿಯಾ ಬಂಧಿತ ಯೋಧ. ಇವರು ಜಮ್ಮು ಕಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಉರಿ ಸೆಕ್ಟರ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾರೆಂದು ತಿಳಿದುಬಂದಿದೆ. ಗೋಪಾಲ್ ಇಂದು ಬೆಳಿಗ್ಗೆ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ ತಪಾಸಣೆ ಮಾಡಿದಾಗ ಗ್ರೆನೇಡ್ ಇರುವುದು ಪತ್ತೆಯಾಗಿದೆ.

    ಯೋಧ ಗೋಪಾಲ್ ದೆಹಲಿಗೆ ಹೋಗಬೇಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಯೋಧ ಡಾರ್ಜಿಲಿಂಗ್ ಮೂಲದವರಾಗಿದ್ದು, ಗ್ರೆನೇಡ್ ತಗೆದುಕೊಂಡು ಹೋರಟಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕೆರೆಯಲ್ಲಿ ಸ್ಫೋಟಿಸಿ ಮೀನು ಹಿಡಿಯುವ ಸಲುವಾಗಿ ಗ್ರೆನೇಡ್ ತೆಗೆದುಕೊಂಡು ಹೋಗುತ್ತಿದ್ದುದಾಗಿ ಯೋಧ ಹೇಳಿದ್ದಾರೆಂದು ಸೇನಾ ಮೂಲಗಳಿಂದ ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.