Tag: ಗ್ರೂಪ್

  • ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

    ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

    ಪ್ರಸ್ತುತ ಸಮಾಜದಲ್ಲಿ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ತುಂಬಾ ವಿರಳ. ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಹೊಸ ವೈಶಿಷ್ಟ್ಯದೊಂದಿಗೆ ಮೂಡಿಬಂದಿದೆ.

    ಈ ಆ್ಯಪ್‍ನಲ್ಲಿ ಗ್ರೂಪ್ ಮಾಡುವುದರಿಂದ ಅದರಲ್ಲಿ ಬರುವ ಕೆಲವು ಸಂದೇಶಗಳು ಕಿರಿಕಿರಿ ಉಂಟು ಮಾಡುತ್ತಿರುತ್ತೆ. ಆದರೆ ನಾವು ಅದರಿಂದ ನಿರ್ಗಮಿಸಲು ಆಗುತ್ತಿರುವುದಿಲ್ಲ. ಆದರೆ ಈಗ ವಾಟ್ಸಪ್ ಇದಕ್ಕೊಂದು ಸರಳ ಮಾರ್ಗ ಕೊಟ್ಟಿದೆ. ಒಂದು ವೇಳೆ ನಮಗೆ ಗ್ರೂಪ್‍ನಲ್ಲಿ ಇರಲು ಇಷ್ಟವಿಲ್ಲದೇ ಅಲ್ಲಿಂದ ನಿರ್ಗಮಿಸಿದರೆ ಗ್ರೂಪ್ ಆಡ್ಮಿನ್‍ಗೆ ಬಿಟ್ಟು ಬೇರೆ ಯಾರಿಗೂ ತಿಳಿಯದಂತೆ ಮಾಡಲಾಗುತ್ತಿದೆ.

    WABetaInfo ಪ್ರಕಾರ, ಈ ಅಪ್ಲಿಕೇಶನ್ ಇನ್ನೂ ಸ್ವಲ್ಪದಿನಗಳಲ್ಲಿ ಅಪ್ಡೇಟ್ ಆಗುತ್ತೆ. ಇದರ ಹೊಸ ವೈಶಿಷ್ಟ್ಯವೆಂದರೆ, ವಾಟ್ಸಪ್ ಬಳಕೆದಾರರು ಗುಂಪನ್ನು ತೊರೆದಾಗ, ನಿರ್ಗಮನದ ಬಗ್ಗೆ ಗ್ರೂಪ್ ಆಡ್ಮಿನ್‍ಗೆ ಮಾತ್ರ ತಿಳಿಯುತ್ತೆ. ಇತರ ಬಳಕೆದಾರರಿಗೆ ಯಾವುದೇ ರೀತಿ ಗೊತ್ತಾಗುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ:  ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ 

    ಪ್ರಸ್ತುತ, ಬಳಕೆದಾರರು ಗುಂಪಿನಿಂದ ನಿರ್ಗಮಿಸಿದಾಗ, ವಾಟ್ಸಪ್ ಗ್ರೂಪ್‍ನಲ್ಲಿರುವ ಎಲ್ಲ ಸದಸ್ಯರಿಗೂ ನೋಟಿಫಿಕೇಷನ್ ಹೋಗುತ್ತೆ. ಇದನ್ನು ಮೊದಲು ಬೀಟಾದಲ್ಲಿ ಪ್ರಯೋಗಿಸಿ ನಂತರ ವಾಟ್ಸಪ್‍ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿ ಉಲ್ಲೇಖಿಸಿದೆ. ಇತ್ತೀಚೆಗೆ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ಎಮೋಜಿ, ಫೈಲ್‍ಗಳು ಮತ್ತು ಗುಂಪುಗಳನ್ನು ಒಳಗೊಂಡಂತೆ ಹೊಸ ವೈಶಿಷ್ಟ್ಯಗಳನ್ನು ಹೊರತರಲಾಗುವುದು ಎಂದು ಹೇಳಿದೆ.

  • ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ಮುಂಬೈ: ಒಪ್ಪಿಗೆ ಪಡೆಯದೆ ತ್ರಿಬಲ್ ಎಕ್ಸ್ ಹೆಸರಿನ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನು ಸೇರಿಸಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಕಾರ್ಪೇಂಟರ್ ಮುಸ್ತಾಕ್ ಅಲಿ ಶೈಖ್ (24) ಬಂಧಿತ ಆರೋಪಿ. ಮುಸ್ತಾಕ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಂಬೈನ ಮಾತುಂಗಾ ಠಾಣೆಯ ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ತ್ರಿಬಲ್ ಎಕ್ಸ್ ಹೆಸರಿನ ಗ್ರೂಪ್‍ಗೆ ಅಡ್ಮಿನ್ ಆಗಿದ್ದ ಮುಸ್ತಾಕ್ ಮುಂಬೈ ಮೂಲದ ಮಹಿಳೆಯನ್ನು ಸೇರಿಸಿದ್ದಾನೆ. ಗ್ರೂಪ್ ಸೇರಿದ ಮಹಿಳೆ ಮೊದಲ ಕೆಲವು ಅಶ್ಲೀಲ ಮೆಸೇಜ್ ನೋಡಿ ಯಾರೋ ಗ್ರೂಪ್‍ನಲ್ಲಿ ಚೇಷ್ಟೆ ಮಾಡುತ್ತಿದ್ದಾರೆ ಅಂತಾ ತಿಳಿದಿದ್ದರು. ಆದರೆ ಸೆಕ್ಸ್ ಸಂದೇಶಗಳು, ನೀಲಿ ಚಿತ್ರಗಳು ಗ್ರೂಪ್‍ನಲ್ಲಿ ಹರಿದಾಡಿದ್ದರಿಂದ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದಾರೆ.

    ನಾನು ಗ್ರೂಪ್ ಸದಸ್ಯರ ಲಿಸ್ಟ್ ನೋಡಿದಾಗ ಯಾರೊಬ್ಬರೂ ನನಗೆ ಪರಿಚಯ ಇಲ್ಲದವೇ ಆಗಿದ್ದರು. ಆದರೂ ನನ್ನ ನಂಬರ್ ಅನ್ನು ತ್ರಿಬಲ್ ಎಕ್ಸ್ ಗ್ರೂಪ್‍ಗೆ ಸೇರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಗ್ರೂಪ್ ಅಡ್ಮಿನ್ ಇರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಒಂದು ತಂಡವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿ ಆರೋಪಿಯನ್ನು ಬಂಧಿಸಿ ಮುಂಬೈಗೆ ತಂದಿದ್ದಾರೆ.

    ನಾನು ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ. ನನ್ನ ಮಾವನ ನಂಬರ್ ಎಂದು ಭಾವಿಸಿ ಮಹಿಳೆಯ ನಂಬರ್ ಅನ್ನು ಗ್ರೂಪ್‍ಗೆ ಸೇರಿಸಿದ್ದೇನೆ. ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ಗ್ರೂಪ್‍ನಲ್ಲಿ ಇರುವ ಎಲ್ಲ ಸದಸ್ಯರು ಪುರುಷರು ಅಂತಾ ಮುಸ್ತಾಕ್ ವಿಚಾರಣೆ ವೇಳೆ ಕ್ಷಮೆ ಯಾಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿ ವಿರುದ್ಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ, ಮುಸ್ತಾಕ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಬಳಿಕ ಆರೋಪಿ ಮುಸ್ತಾಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ರೀತಿಯ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೆ ಇದೇ ತಪ್ಪು ಮರಳಿ ನಡೆದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಅಂತಾ 2000ರ ಐಟಿ ಕಾಯ್ದೆಯಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರು ಪ್ರಾಂಶುಪಾಲನ ಕಾಮ ಪುರಾಣ – ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿಗೆ ಹಾಕ್ದ!

    ಬೆಂಗ್ಳೂರು ಪ್ರಾಂಶುಪಾಲನ ಕಾಮ ಪುರಾಣ – ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿಗೆ ಹಾಕ್ದ!

    ಬೆಂಗಳೂರು: ನಗರದ ಪ್ರಾಂಶುಪಾಲನೊಬ್ಬ ಶಿಕ್ಷಕರ ದಿನಾಚರಣೆಯಂದು ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾನೆ.

    ರಮೇಶ್, ಬೆಂಗಳೂರು ಉತ್ತರ ವಿಭಾಗದ ಡಯಟ್ ಪ್ರಾಂಶುಪಾಲನಾಗಿದ್ದು, ತನ್ನದೇ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಾನೆ. ಕ್ಯಾಮೆರಾ ಮುಂದೆ ರಮೇಶ್ ಸಂಪೂರ್ಣ ಬೆತ್ತಲಾಗಿ ವಿಡಿಯೋ ಮಾಡಿದ್ದಾನೆ. ನಂತರ ಈ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಾನೆ. ಈ ವಿಡಿಯೋ ನೋಡಿ ಗ್ರೂಪಿನಲ್ಲಿದ್ದ ಮಹಿಳೆಯರು ಎಕ್ಸಿಟ್ ಆಗಿದ್ದಾರೆ.

    ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದರೆ ಮಹಿಳೆಯರು ಇವನ ಜೊತೆ ಮಲಗಬೇಕು. ಅಲ್ಲದೇ ರಮೇಶ್‍ಗೆ ಅಧಿಕಾರಿಗಳ ಬೆಂಬಲವಿದ್ದು, ಶಿಕ್ಷಣ ಇಲಾಖೆಯಲ್ಲಿ ಈತನ ದರ್ಬಾರ್ ನಡೆಯುತ್ತಿದೆ. ರಮೇಶ್ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗೆ ಟಾರ್ಚರ್ ನೀಡುತ್ತಾನೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    ಸದ್ಯ ರಮೇಶ್ ತನ್ನ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಕ್ಕೆ ಎಲ್ಲರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    https://www.youtube.com/watch?v=ywnBhZyn8N8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಮಾಂಗದ ಫೋಟೋವನ್ನು ಕ್ಲಿಕ್ಕಿಸಿ ಮಿಸ್ ಆಗಿ ಕ್ಲಾಸ್ ಗ್ರೂಪ್‍ಗೆ ಕಳುಹಿಸಿ ಟ್ವಿಟ್ಟರ್‌ನಲ್ಲಿ ಸ್ಟೋರಿ ಹೇಳ್ದ!

    ಮರ್ಮಾಂಗದ ಫೋಟೋವನ್ನು ಕ್ಲಿಕ್ಕಿಸಿ ಮಿಸ್ ಆಗಿ ಕ್ಲಾಸ್ ಗ್ರೂಪ್‍ಗೆ ಕಳುಹಿಸಿ ಟ್ವಿಟ್ಟರ್‌ನಲ್ಲಿ ಸ್ಟೋರಿ ಹೇಳ್ದ!

    ಯುವಕನೊಬ್ಬ ತನ್ನ ಒಡೆದ ಫೋನಿನಲ್ಲಿ ಮರ್ಮಾಂಗದ ಫೋಟೋ ಕ್ಲಿಕಿಸಿ ಅದು ಮಿಸ್ಸಾಗಿ ಕ್ಲಾಸ್ ಗ್ರೂಪ್‍ನಲ್ಲಿ ಶೇರ್ ಆಗಿದ್ದು ಹೇಗೆ ಎಂಬುದರ ಬಗ್ಗೆ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾನೆ.

    ಟ್ವಿಟ್ಟರಿನಲ್ಲಿ ಯುವಕ, ಹೌದು ನನ್ನ ಮರ್ಮಾಂಗದ ಫೋಟೋವನ್ನು ನಾನು ಕ್ಲಿಕ್ಕಿಸಿದೆ. ಆದರೆ ನಾನು ಬೇಕೆಂದು ಆ ಫೋಟೋವನ್ನು ಕ್ಲಾಸ್ ಗ್ರೂಪಿಗೆ ಶೇರ್ ಮಾಡಲಿಲ್ಲ. ಅದು ತಪ್ಪಾಗಿ ಗ್ರೂಪ್‍ನಲ್ಲಿ ಆ ಫೋಟೋ ಶೇರ್ ಆಗಿದೆ. ನನ್ನ ಫೋನ್ ಒಡೆದು ಹೋಗಿತ್ತು. ಹೊಸ ಫೋನ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ ಹಾಗೂ ಫೋನಿನ ಇನ್ಯೂರೆನ್ಸ್ ಸಹ ಇರಲಿಲ್ಲ ಎಂದು ವಿವರಿಸಿದ್ದಾನೆ.

    ನಾನು ನನ್ನ ಮರ್ಮಾಂಗದ ಫೋಟೋ ಕ್ಲಿಕಿಸಿ ನಂತರ ಮಲಗಿದೆ. ಮರುದಿನ ಎದ್ದ ತಕ್ಷಣ ನನ್ನ ಕ್ಲಾಸ್ ಸ್ನೇಹಿತರು ಮೆಸೆಜ್ ಮಾಡಲು ಶುರು ಮಾಡಿದ್ದರು. ಮೊದಲಿಗೆ ಏನು ಆಗುತ್ತಿದೆ, ಏಕೆ ಹೀಗೆ ಮೆಸೆಜ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗಲಿಲ್ಲ. ರಾತ್ರಿ ನಾನು ನನ್ನ ಗುಪ್ತಾಂಗದ ಫೋಟೋ ಕ್ಲಿಕಿಸಿದ್ದು, ನಾನು ಮರೆತು ಹೋಗಿದ್ದೆ. ನಂತರ ಪರಿಶೀಲಿಸಿದ್ದಾಗ ನಾನು ಮಲಗಿದ ವೇಳೆ ಆ ಫೋಟೋ ಮಿಸ್ಸಾಗಿ ಕ್ಲಾಸ್ ಗೂಪ್‍ಗೆ ಶೇರ್ ಆಗಿತ್ತು ಎಂದು ಹೇಳಿಕೊಂಡಿದ್ದಾನೆ.

    ನಾನು ನನ್ನ ಕ್ಲಾಸ್ ಗ್ರೂಪಿನಲ್ಲಿ ಈ ಘಟನೆ ಬಗ್ಗೆ ವಿವರಿಸಲು ಯತ್ನಿಸಿದೆ. ಆದರೆ ಯಾರೂ ನನ್ನ ಮಾತು ಕೇಳಲು ಒಪ್ಪಲಿಲ್ಲ. ನಾನು ಈ ಫೋಟೋವನ್ನು ಬೇಕೆಂದು ಕ್ಲಾಸ್ ಗ್ರೂಪಿಗೆ ಕಳುಹಿಸಿದೆ ಎಂದು ಅಂದುಕೊಂಡರು. ಈ ಘಟನೆಯಿಂದ ನನಗೆ ಬಹಳ ಮುಜುಗರ ಹಾಗೂ ನಾಚಿಕೆ ಆಯ್ತು. ಹಾಗಾಗಿ ನಾನು ಈ ಘಟನೆಯನ್ನು ಟ್ವಿಟ್ಟರಿನಲ್ಲಿ ಹೇಳಿಕೊಳ್ಳುತ್ತಿದ್ದೇನೆ ಎಂದು ಯುವಕ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರೂಪ್ ಅಡ್ಮಿನ್‍ಗೆ ಪರಮಾಧಿಕಾರ ಕೊಟ್ಟ ವಾಟ್ಸಪ್: ಏನಿದು ಹೊಸ ಫೀಚರ್?

    ಗ್ರೂಪ್ ಅಡ್ಮಿನ್‍ಗೆ ಪರಮಾಧಿಕಾರ ಕೊಟ್ಟ ವಾಟ್ಸಪ್: ಏನಿದು ಹೊಸ ಫೀಚರ್?

    ಕ್ಯಾಲಿಫೋರ್ನಿಯಾ: ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ಪರಮಾಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ.

    ಈ ಹೊಸ ಫೀಚರ್ ನಲ್ಲಿ ಒಂದು ಗ್ರೂಪ್‍ನಲ್ಲಿರುವ ಸದಸ್ಯರಿಗೆ ಆ ನಿರ್ದಿಷ್ಟ ಗ್ರೂಪ್‍ಗೆ ಸಂದೇಶ ಕಳುಹಿಸುವ ಹಕ್ಕನ್ನು ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಅಧಿಕಾರಿವನ್ನು ಅಡ್ಮಿನ್ ಗಳಿಗೆ ಕೊಟ್ಟಿದೆ.

    ಗ್ರೂಪ್ ಚಾಟಿಂಗ್‍ಗಳಲ್ಲಿ ಕಿರಿಕಿರಿ ಉಂಟು ಮಾಡುವ ಹಾಗೂ ಅನಗತ್ಯ ಸಂದೇಶಗಳನ್ನು ಹಾಕುವುದರಿಂದ ಗ್ರೂಪ್ ಅಡ್ಮಿನ್‍ಗಳು ಬೇಸತ್ತು ಹೋಗಿದ್ದಾರೆ. ಈ ಹೊಸ ಫೀಚರ್ ಇಂತಹ ಗ್ರೂಪ್ ಅಡ್ಮಿನ್‍ಗಳಿಗೆ ವರದಾನವಾಗಿದೆ. ಆದರೆ ಗ್ರೂಪ್‍ನಲ್ಲಿ ಒಬ್ಬ ಅಥವಾ ಇಬ್ಬರು ಸದಸ್ಯರನ್ನು ಮಾತ್ರವೇ ಬ್ಲಾಕ್ ಮಾಡಲು ಈ ಫೀಚರ್ ನಲ್ಲಿ ಸಾಧ್ಯವಿಲ್ಲ.

    ಈ ಹೊಸ ಫೀಚರ್ ನಲ್ಲಿ ಗ್ರೂಪ್‍ನ ಎಡಿಟ್, ಐಕಾನ್ ಚೇಂಜ್ ಹಾಗೂ ವಿಷಯಗಳನ್ನು ಬದಲಾವಣೆಗೊಳಿಸುವ ಅಧಿಕಾರ ಕೇವಲ ಗ್ರೂಪ್ ಅಡ್ಮಿನ್‍ಗೆ ಮಾತ್ರವೇ ಸೀಮಿತವಾಗಿರುವ ಆಯ್ಕೆಯನ್ನು ಒಳಗೊಂಡಿದೆ. ವಾಟ್ಸಪ್‍ನ ಒಂದು ನಿರ್ದಿಷ್ಟ ಗ್ರೂಪ್ ಅಡ್ಮಿನ್ ಆಯ್ಕೆ ಮಾಡಿದ ಸದಸ್ಯರನ್ನು ಇತರೆ ಅಡ್ಮಿನ್‍ಗಳು ತೆಗೆದು ಹಾಕದಂತೆ ಆಯ್ಕೆಯನ್ನು ಸಹ ಕಲ್ಪಿಸಿದೆ.

    ಎಲ್ಲಿ ಚೆಂಜ್ ಮಾಡಬಹುದು?
    ವಾಟ್ಸಪ್‍ನ ಹೊಸ ಆವೃತ್ತಿಯನ್ನು ಅಪ್ ಡೇಟ್ ಮಾಡಿಕೊಂಡ ನಂತರ, ವಾಟ್ಸಪ್ ನ ಒಂದು ನಿರ್ದಿಷ್ಟ ಗ್ರೂಪ್ ಸೆಟ್ಟಿಂಗ್ಸ್‍ನಲ್ಲಿ `ಗ್ರೂಪ್ ಇನ್ಫೋ’ ಮೇಲೆ ಕ್ಲಿಕ್ ಮಾಡಿದಾಗ `ಗ್ರೂಪ್ ಸೆಟ್ಟಿಂಗ್ಸ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಇದರಲ್ಲಿ `ಸೆಂಡ್ ಮೆಸೇಜ್’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಾಗ `ಆಲ್ ಪಾರ್ಟಿಸಿಪಂಟ್ಸ್’ ಅಥವಾ `ಓನ್ಲಿ ಅಡ್ಮಿನ್ಸ್’ ಎಂಬ ಎರಡು ಆಯ್ಕೆಗಳಿರುತ್ತವೆ. `ಓನ್ಲಿ ಅಡ್ಮಿನ್ಸ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೇ ಉಳಿದ ಸದಸ್ಯರಿಗೆ ಸಂದೇಶ ಕಳುಹಿಸುವ ಅಧಿಕಾರವೇ ಇರುವುದಿಲ್ಲ. ಅಡ್ಮಿನ್‍ಗಳು ಹಾಕಿದ್ದನ್ನಷ್ಟೇ ವೀಕ್ಷಿಸಬಹುದಾಗಿದೆ.  ಇದನ್ನೂ ಓದಿ: ವಾಟ್ಸಪ್ ಬಳಕೆದಾರರಿಗೆ ಗುಡ್‍ನ್ಯೂಸ್: ಮೆಮೊರಿ ಉಳಿಸಲು ಹೊಸ ಫೀಚರ್

    ಎಲ್ಲರನ್ನು ಅಡ್ಮಿನ್ ಮಾಡಬೇಕಾಗುತ್ತೆ!
    ಒಂದು ವೇಳೆ ಈ ಆಯ್ಕೆಯನ್ನು ಬಳಸಿದರೆ ಎಲ್ಲ ಸದಸ್ಯರ ಹಕ್ಕನ್ನೂ ಕಸಿದು ಕೊಳ್ಳಬೇಕಾಗುತ್ತದೆ. ಹೀಗಾಗಿ ಕಿರಿಕ್ ಮಾಡುವ ಸದಸ್ಯರನ್ನು ಬಿಟ್ಟು ಉಳಿದ ಸದಸ್ಯರನ್ನು ಅಡ್ಮಿನ್ ಮಾಡಿದರೆ ಮಾತ್ರ ಈ ವಿಶೇಷತೆಯನ್ನು ಬಳಸಬಹುದಾಗಿದೆ.

  • ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ಚಿಕ್ಕಮಗಳೂರು: ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಇಂದು ಯುವ ಜನತೆ ಹಾಳಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಡುವೆ ಈ ಮಾಧ್ಯಮಗಳನ್ನು ಬಳಸಿ ಚಿಕ್ಕಮಗಳೂರಿನ ಯುವಕರು ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ.

    ಹೌದು. 4 ವರ್ಷದ ಹಿಂದೆ ನಿವಾಸಿ ದಿವಿನ್ ಎಂಬವರು ಮಾಡಿದ ನಮ್ಮುಡುಗ್ರು ಗ್ರೂಪ್ ಇಂದು ಒಂದು ಗುಡ್ಡವನ್ನೇ ಕ್ಲೀನ್ ಮಾಡಿದೆ.

    ಪ್ರವಾಸಿಗರಿಂದ ಹಾಳಾದ ಮೂಡಿಗೆರೆಯ ದೇವರಮನೆ ಗುಡ್ಡದ ಫೋಟೋವನ್ನ ಸದಸ್ಯರೊಬ್ಬರು ಗ್ರೂಪ್‍ನಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿ ಕೂಡಲೇ ಕಾರ್ಯಪ್ರವೃತರಾದ ಸದಸ್ಯರು ನಾವೇ ಕ್ಲೀನ್ ಮಾಡೋಣ ಎಂದು ನಿರ್ಧರಿಸಿ ಜನವರಿ 14ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರೂ ಒಂದುಗೂಡಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ.

    ಗುಡ್ಡವನ್ನು ಕ್ಲೀನ್ ಮಾಡಿದ ಸದಸ್ಯರೇ ನಾಮಫಲಕವನ್ನು ಹಾಕಿದ್ದಾರೆ. ಇದು ನಿಮ್ಮ ಪ್ರಕೃತಿ, ಒಮ್ಮೆ ಹಾಳಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನ ಉಳಿಸಿ-ಬೆಳೆಸುವ ಮನಸ್ಥಿತಿಯವರು ಮಾತ್ರ ಬನ್ನಿ ಎಂದು ಗ್ರೂಪ್ ಅಡ್ಮಿನ್ ದಿವಿನ್ ನಾಮಫಲಕ ಹಾಕಿದ್ದಾರೆ.

    ಮತ್ತೊಂದು ವಿಷಯ ಏನೆಂದರೆ ಈ ಗ್ರೂಪಿನ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿಲ್ಲ. ಮುಖವನ್ನೂ ನೋಡಿಲ್ಲ. ಆದರು ಗ್ರೂಪ್‍ನಲ್ಲಿ ಬಂದ ಒಂದು ಮೇಸೆಜ್ ಹಾಗೂ ಫೋಟೋಗೆ ಎಲ್ಲರೂ ಸ್ಪಂದಿಸಿದ್ದಾರೆ. ಹಬ್ಬ ಎನ್ನುವುದನ್ನು ಮರೆತು 250ಕ್ಕೂ ಅಧಿಕ ಗ್ರೂಪಿನ ಸದಸ್ಯರು ಎಲ್ಲರೂ ಒಂದೆಡೆ ಸೇರಿ ದೇವರಮನೆ ಗುಡ್ಡವನ್ನ ಸ್ವಚ್ಛ ಮಾಡಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಎರಡೂ ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಿಕ್ಕಿದೆ.

    ಎಲ್ಲ ರಾಜಕೀಯ ಪಕ್ಷದ ಸದಸ್ಯರು ಈ ಗ್ರೂಪಿನಲ್ಲಿದ್ದು ಎಲ್ಲರೂ ರಾಜಕೀಯವನ್ನು ಬಿಟ್ಟು ಈ ಒಳ್ಳೆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ವಿಶೇಷ. ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದಲೂ ಒಳ್ಳೆ ಕೆಲಸ ಆಗುತ್ತೆ ಅನ್ನೋದಕ್ಕೆ ಮಲೆನಾಡಿನ ಈ ಗ್ರೂಪ್ ಸಾಕ್ಷಿಯಾಗಿದೆ. ವಾಟ್ಸಪ್‍ನಿಂದ ಆರಂಭವಾದ ಒಂದು ಗ್ರೂಪ್ ಈ ಪ್ರಮಾಣದ ಕೆಲಸ-ಕಾರ್ಯ ಮಾಡಿರೋದಕ್ಕೆ ಮಲೆನಾಡಿಗರು ಶಹಬ್ಬಾಸ್ ಎಂದಿದ್ದಾರೆ.

  • ಎಲೆಕ್ಷನ್ ಬಂದಾಗ ನಾವು ನೆನಪಾದ್ವಾ – ವಾಟ್ಸಪ್ ಗ್ರೂಪಲ್ಲಿ ಮೈಸೂರು ಶಾಸಕನಿಗೆ ಫುಲ್ ಕ್ಲಾಸ್

    ಎಲೆಕ್ಷನ್ ಬಂದಾಗ ನಾವು ನೆನಪಾದ್ವಾ – ವಾಟ್ಸಪ್ ಗ್ರೂಪಲ್ಲಿ ಮೈಸೂರು ಶಾಸಕನಿಗೆ ಫುಲ್ ಕ್ಲಾಸ್

    ಮೈಸೂರು: ಕ್ಷೇತ್ರದ ಮತದಾರರ ಸಮಸ್ಯೆ ಆಲಿಸಲು ಗ್ರೂಪ್ ಮಾಡಿ ಕಾಂಗ್ರೆಸ್ ಶಾಸಕರೊಬ್ಬರು ಪೇಚಿಗೆ ಸಿಲುಕಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಶಾಸಕರಿಗೆ ಮತದಾರರು ಹಿಗ್ಗಾಮುಗ್ಗಾ ತರಾಟೆ ತೆಗೆದು ಕೊಂಡಿದ್ದಾರೆ.

    ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಯಾಕಾದರೂ ತಾನೂ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದಿನೋ ಅನ್ನೋ ಪರಿಸ್ಥಿತಿಗೆ ಸಿಲುಕಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕ ಎಂ.ಕೆ. ಸೋಮಶೇಖರ್ `MLA ಕೆಆರ್ ಕ್ಷೇತ್ರ ಪಬ್ಲಿಕ್ 7′ ಎಂಬ ಹೆಸರಿಸಲ್ಲಿ ಗ್ರೂಪ್ ರಚನೆ ಮಾಡಿದ್ದಾರೆ.

     

    ಕ್ಷೇತ್ರದ ಮತದಾರರನ್ನು ಒಳಗೊಂಡಂತೆ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಗ್ರೂಪ್ ರಚನೆಯಾಗ್ತಿದಂತೆ ಶಾಸಕರಿಗೆ ಬೈಗುಳದ ಸುರಿಮಳೆ ಸುರಿಯುತ್ತಿದೆ. ಬಾಯಿಗೆ ಬಂದ ಯಾವ ಬೈಗುಳಗಳನ್ನು ಜನರು ಬಿಡದೆ ಶಾಸಕರಿಗೆ ಬೈಯುತ್ತಿದ್ದಾರೆ. ಎಲೆಕ್ಷೆನ್ ಹತ್ರಾ ಬಂತಾ ಈಗ. ಈ ಈಡಿಯಟ್ ಗ್ರೂಪ್.! ರಚನೆ ಮಾಡಿದ್ದೀರಾ…? ಎಂದು ಬಾಯಿಗೆ ಬಂದಂತೆ ಪ್ರಶ್ನೆ ಮಾಡಿ ಶಾಸಕರಿಗೆ ಬೈಯುತ್ತಿದ್ದಾರೆ.

    ಗ್ರೂಪ್ ನ ಒಬ್ಬ ಸದಸ್ಯ ಕೀಟಲೆ ಮಾಡೋ ಸಲುವಾಗಿ ಗ್ರೂಪ್ ಡಿಪಿಗೆ ಪ್ರಧಾನಿ ಮೋದಿ ಭಾವಚಿತ್ರ ಹಾಕಿದ್ದಾರೆ. ಮತದಾರರ ಈ ಬೈಗುಳಕ್ಕೆ ಶಾಸಕರದು ಮೌನವೇ ಉತ್ತರವಾಗಿದೆ.