Tag: ಗ್ರೀಸ್

  • ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

    ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

    ಸೌತ್ ನಟಿ ನಯನತಾರಾ (Nayanthara) ಸಿನಿಮಾ ಕೆಲಸಗಳ ನಡುವೆ ಫ್ಯಾಮಿಲಿಗೂ ಸಮಯ ಮೀಸಲಿಡುತ್ತಾರೆ. ಸದ್ಯ ಮಕ್ಕಳ ಜೊತೆ ನಟಿ ಗ್ರೀಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಮಕ್ಕಳ ಜೊತೆಗಿನ ಕ್ಯೂಟ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ‘ಮೈ ಹಾರ್ಟ್’ ಎಂದು ಅಡಿಬರಹ ನೀಡಿ, ಮಕ್ಕಳ ಜೊತೆಗಿನ ಮುದ್ದಾದ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ. ಇದನ್ನೂ ಓದಿ:24 ಸಾವಿರ ಡ್ಯಾನ್ಸ್‌ ಸ್ಟೆಪ್ಸ್‌ ಮಾಡಿದ ಹೆಗ್ಗಳಿಕೆ- ಮೆಗಾಸ್ಟಾರ್ ಚಿರಂಜೀವಿ ಗಿನ್ನಿಸ್ ದಾಖಲೆ

     

    View this post on Instagram

     

    A post shared by N A Y A N T H A R A (@nayanthara)

    ಇನ್ನೂ ಇತ್ತೀಚೆಗೆ ಪತಿ ವಿಘ್ನೇಶ್ ಬರ್ತ್‌ಡೇಗೆ ವಿಶೇಷವಾಗಿ ನಟಿ ಶುಭಕೋರಿದ್ದರು. ಜನ್ಮದ ದಿನದ ಶುಭಾಶಯಗಳು. ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಪತಿಗೆ ನಯನತಾರಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದರು.

    ಇನ್ನೂ ಹಲವು ವರ್ಷಗಳ ಪ್ರೀತಿಗೆ 2022ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಬಾಡಿಗೆ ತಾಯ್ತನ ಮೂಲಕ ಇಬ್ಬರೂ ಮಕ್ಕಳನ್ನು ನಟಿ ಬರಮಾಡಿಕೊಂಡರು.

    ಅಂದಹಾಗೆ, ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಯನತಾರಾ ನಟಿಸಿದ ಮೇಲೆ ಅವರ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಅವರು ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

  • ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    – ಗ್ರೀಸ್‌ನಲ್ಲಿ ಚಂದ್ರಯಾನ ಗುಣಗಾನ, ಮೋದಿಗೆ ಗ್ರೀಸ್‌ ಅತ್ತುನ್ನತ ನಾಗರಿಕ ಗೌರವ

    ಅಥೆನ್ಸ್:‌ ಭಾರತ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ವಿಶ್ವಕ್ಕೇ ತನ್ನ ಸಾಮರ್ಥ್ಯವನ್ನ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಂದ್ರಯಾನ ಗುಣಗಾನ ಮಾಡಿದ್ದಾರೆ.

    ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ (Greece) ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನ ಗ್ರೀಸ್‌ ರಾಷ್ಟ್ರಪತಿ ಹಾಗೂ ಪ್ರಧಾನಿ ಬರಮಾಡಿಕೊಂಡರು. ಭಾರತೀಯ ಸಮುದಾಯ ಸಾಂಪ್ರದಾಯಿಕವಾಗಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್‌ ನಾಗರಿಕ ಗೌರವ ‘ದಿ ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಹಾನರ್‌’ ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕ್ಯಾಥರೀನಾ ಸಕೆಲ್ಲರೊಪೌಲೊ ಅವರು ಮೋದಿಗೆ ಅವರಿಗೆ ಗ್ರೀಸ್‌ ನಾಗರಿಕ ಗೌರವ ನೀಡಿ ಸನ್ಮಾನಿಸಿದರು.

    ನಂತರ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ (Athens) ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಚಂದ್ರಯಾನ ಸಾಧನೆಯನ್ನ ಹಾಡಿ ಹೊಗಳಿದರು. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ಜಗತ್ತಿಗೆ ಭಾರತ ತನ್ನ ಸಾಮರ್ಥ್ಯ ತೋರಿಸಿದೆ ಎಂದು ಶ್ಲಾಘಿಸಿದರು.

    ಈ ತಿಂಗಳು ಶಿವನನ್ನು ಪೂಜಿಸುವ ಪರ್ವಕಾಲ, ಶ್ರಾವಣ ಮಾಸದಲ್ಲಿ ದೇಶವು ಹೊಸ ಸಾಧನೆ ಮಾಡಿದೆ. ಚಂದ್ರನ ಕತ್ತಲಿನ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ತಿರಂಗವನ್ನು ಚಂದ್ರನ ಮೇಲೆ ಹಾರಿಸುವ ಮೂಲಕ ಜಗತ್ತಿಗೆ ನಮ್ಮ ಸಾಮರ್ಥ್ಯ ತೋರಿಸಿದ್ದೇವೆ. ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಸಂದೇಶಗಳು ಹರಿದು ಬರುತ್ತಿವೆ. ಸಾಧನೆಯು ಇಷ್ಟು ದೊಡ್ಡದಾಗಿರುವಾಗ ಸಂಭ್ರಮವೂ ಸಹ ಮುಂದುವರಿಯುತ್ತದೆ. ಚಂದ್ರಯಾನ-3ರ ಯಶಸ್ಸಿಗೆ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಮುಖದ ಭಾವನೆಗಳೇ ಹೇಳುತ್ತಿವೆ, ನೀವು ಜಗತ್ತಿನ ಯಾವುದೇ ಜಾಗದಲ್ಲಿದ್ದರೂ ಹೃದಯದಲ್ಲಿ ಭಾರತವು ಮಿಡಿಯುತ್ತಿರುತ್ತದೆ ಎಂದು ಹೊಗಳಿದರು.

    ಮುಂದುವರಿದು, ವಿಶ್ವದ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂಚೂಣಿಯಲ್ಲಿವೆ. ಭಾರತದ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ತಜ್ಞರ ಪ್ರಕಾರ ದೇಶವು 3ನೇ ಸ್ಥಾನಕ್ಕೆ ಏರಲಿದೆ. ಆರ್ಥಿಕತೆ ಬೆಳೆಯುತ್ತಿದ್ದಂತೆ ದೇಶವು ಬಡತನದಿಂದ ವೇಗವಾಗಿ ಹೊರಬರುತ್ತದೆ. ಭಾರತದಲ್ಲಿ 5 ವರ್ಷಗಳಲ್ಲಿ 13.5 ಕೋಟಿ ಭಾರತೀಯರು ಬಡತನ ಮಟ್ಟದಿಂದ ಹೊರಬಂದಿದ್ದಾರೆ ಎಂದು ಹೇಳಿದರಲ್ಲದೇ, ಭಾರತ ತಾಂತ್ರಿಕವಾಗಿಯೂ ಬೆಳೆಯುತ್ತಿದ್ದ ಸುಮಾರು 700 ಜಿಲ್ಲೆಗಳಲ್ಲಿ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಬೀಗಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲುಗಳ ನಡುವೆ ಭೀಕರ ಅಪಘಾತ- 32 ಮಂದಿ ದುರ್ಮರಣ

    ರೈಲುಗಳ ನಡುವೆ ಭೀಕರ ಅಪಘಾತ- 32 ಮಂದಿ ದುರ್ಮರಣ

    ಅಥೆನ್ಸ್: ಪ್ಯಾಸೆಂಜರ್ ಹಾಗೂ ಗೂಡ್ಸ್ ರೈಲಿನ (Train) ನಡುವೆ ಅಪಘಾತ ಸಂಭವಿಸಿ 32 ಜನರು ಮೃತಪಟ್ಟು, 85 ಮಂದಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಗ್ರೀಸ್‍ನ (Greece) ಟೆಂಪೆಯಲ್ಲಿ ನಡೆದಿದೆ.

    ಘಟನೆ ಬಗ್ಗೆ ಮಾಹಿತಿ ನೀಡಿರುವ ಥೆಸ್ಸಾಲಿ ಪ್ರದೇಶದ ಗವರ್ನರ್ (Governor) ಕಾನ್ಸಾಂಟಿನೋಸ್ ಅಗೋರಾಸ್ಟೋಸ್, ಅಪಘಾತ (Accident) ಬಹಳ ಪ್ರಬಲವಾಗಿ ನಡೆದಿದೆ. ರೈಲಿನ ಮುಂಭಾಗದ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಎದುರಿನ ಎರಡು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಲಾರಿ ಮೇಲೆ ಮುರಿದು ಬಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆ- ತಪ್ಪಿದ ಅನಾಹುತ

    ರೈಲಿನಲ್ಲಿ ಸುಮಾರು 350 ಪ್ರಯಾಣಿಕರಿದ್ದರು. ಅದರಲ್ಲಿ 250 ಪ್ರಯಾಣಿಕರನ್ನು (Passengers) ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.

    ಎರಡು ರೈಲುಗಳ ನಡುವಿನ ಘರ್ಷಣೆಯ ತೀವ್ರತೆಯಿಂದ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಅಗ್ನಿಶಾಮಕ ದಳದ (Fire service) ವಕ್ತಾರ ವಾಸಿಲಿಸ್ ವರ್ತಕೊಯಾನಿಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವುಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ 6ರ ಬಾಲಕಿ ಶವವಾಗಿ ಪತ್ತೆ – ಅತ್ಯಾಚಾರದ ಶಂಕೆ

  • ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ

    ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ

    ಅಥೆನ್ಸ್: ಗ್ರೀಸ್‍ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಬುಧವಾರ ತಿಳಿಸಿದೆ.

    ಸುಮಾರು 6.9 ಮತ್ತು 5.9ರಷ್ಟು ಭೂಕಂಪದ ತೀವ್ರತೆ ವರದಿಯಾಗಿದೆ. ಕೇಂದ್ರ ಗ್ರೀಸ್ ಎಲಾಸೊನಾ ಪಟ್ಟಣದಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿ,  10 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದು ಪತ್ತೆಯಾಗಿದೆ.

    ನನ್ನ ಸಹೋದ್ಯೋಗಿಗಳಿಗೆ ಭೂಕಂಪದ ಅನುಭವ ಮತ್ತು ಅದರ ತೀವ್ರತೆಯ ಅನುಭವವಾಗಿದೆ ಎಂದು ಅಥೆನ್ಸ್‍ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಗ್ರೀಸ್‍ನ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ ಗ್ರೀಕ್ ಭೂಕಂಪ ಶಾಸ್ತ್ರಜ್ಞ ವಾಸಿಲಿಸ್ ಕರಥಾನಸಿಸ್ ತಿಳಿಸಿದ್ದಾರೆ.

  • ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಬೆಂಗಳೂರು: ಗ್ರೀಸ್ ದೇಶಕ್ಕೆ ಹನಿಮೂನಿಗೆ ತೆರಳಿದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ 4 ಇದ್ದ ಕೊರೊನಾ ಪಾಸಿಟಿವ್ ಕೇಸ್ ಇಂದು 5ಕ್ಕೇರಿದೆ.

    ಗ್ರೀಸ್‍ನಿಂದ ಬೆಂಗಳೂರಿಗೆ ಬಂದ 26 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಜಯನಗರ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ವ್ಯಕ್ತಿಯನ್ನು ದಾಖಲಿಸಲಾಗಿದ್ದು, ಕಿತ್ಸೆ ನೀಡಲಾಗ್ತಿದ್ದು, ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ.

    ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು. ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಈ ವಿಚಾರವನ್ನು ಅಲ್ಲಿ ಉತ್ತರ ಪ್ರದೇಶ ಸರ್ಕಾರದ ಜೊತೆ ಮಾಹಿತಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ.

    ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದರೂ, ನಾಲ್ವರ ಜೊತೆ ಮಾತ್ರ ಸಂಪರ್ಕದಲ್ಲಿದ್ದ. ಮಾರ್ಚ್ 10 ರಂದು ಸಂಕಿತ ವ್ಯಕ್ತಿಗೆ ಅನಾರೋಗ್ಯ ಕಂಡು ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೋಂಕಿತನ ತಂದೆ, ತಾಯಿ, ಸಹೋದರ ಸೇರಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸೋಂಕಿತ ಪಯಣಿಸಿದ್ದ ಇಂಡಿಗೋ ವಿಮಾನದ ಸಹ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ರಿಕ್ಷಾದಲ್ಲಿ ಸೋಂಕಿತ ವ್ಯಕ್ತಿ ಸಂಚರಿಸಿದ್ದು ರಿಕ್ಷಾ ಚಾಲಕನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ.

    ಇವತ್ತು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 12 ಮಂದಿ, ಹಾಸನದಲ್ಲಿ ಇಬ್ಬರು ಮತ್ತು ದಕ್ಷಿಣ ಕನ್ನಡದಲ್ಲಿ ಮೂವರು ಮತ್ತು ಬಳ್ಳಾರಿಯಲ್ಲಿ ಒಬ್ಬರ ಮೇಲೆ ನಿಗಾ ಇಡಲಾಗಿದೆ.

  • ಬೆಂಗಳೂರಲ್ಲಿ ಮತ್ತೊಂದು – ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆ

    ಬೆಂಗಳೂರಲ್ಲಿ ಮತ್ತೊಂದು – ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆ

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಗ್ರೀಸ್‍ನಿಂದ ಆಗಮಿಸಿದ 26 ವರ್ಷದ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಯುವಕನ ಆರೋಗ್ಯನ ಸ್ಥಿರವಾಗಿದ್ದು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

    ಇವತ್ತಿನವರೆಗೆ 1,220 ಮಂದಿಯನ್ನು ನಿಗಾ ಇಡಲಾಗಿದ್ದು ಈ ಪೈಕಿ 292 ಕಳೆದ 28 ದಿನಗಳಿಂದ ನಿಗಾದಲ್ಲಿದ್ದಾರೆ. 906 ಮಂದಿ ಮನೆಯಲಿದ್ದರೆ 18 ಮಂದಿ ಆಸ್ಪತ್ರೆ ನಿಗಾದಲ್ಲಿದ್ದಾರೆ ಎಂದು ತಿಳಿಸಿದೆ.

    ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಒಟ್ಟು 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ 12, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿಯಲ್ಲಿ ಒಬ್ಬರು ನಿಗಾದಲ್ಲಿದ್ದಾರೆ. ಈ 18 ಮಂದಿ ಪರೀಕ್ಷೆ ನಡೆದಿದ್ದು ವರದಿ ಬರಬೇಕಿದೆ. ದೇಶದಲ್ಲಿ ಇಲ್ಲಿಯವರೆಗೆ 74 ಮಂದಿ ಕೊರೊನಾ ಸೋಂಕು ಬಂದಿದೆ.