Tag: ಗ್ರೀನ್ ಕಾರಿಡಾರ್

  • 23 ಕಿಮೀ ಅನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ಜೀವ ಉಳಿಸಿದ ಆಂಬುಲೆನ್ಸ್

    ಭೋಪಾಲ್: ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯ ಮೂತ್ರಪಿಂಡವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಸಾಗಿಸಿ ಮತ್ತೊಬ್ಬ ರೋಗಿಯನ್ನು ಬದುಕಿಸಲಾಗಿದೆ. ಘಟನೆ ಭೋಪಾಲ್‌ನಲ್ಲಿ ನಡೆದಿದೆ.

    ಭೋಪಾಲ್‌ನಲ್ಲಿ ನಿರ್ಮಿಸಲಾಗಿದ್ದ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ 23 ಕಿಮೀ ದಾರಿಯನ್ನು ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಯೊಬ್ಬರ ಜೀವ ಉಳಿಸಿದೆ.

    ಶಾಹಪುರದ ಬನ್ಸಾಲ್ ಆಸ್ಪತ್ರೆಯಿಂದ ಬೈರ್‌ಗಡದ ವಿವಾ ಆಸ್ಪತ್ರೆಯ ವರೆಗೆ ಸಂಚಾರ ಪೊಲೀಸರು ಶನಿವಾರ ಸಂಜೆ ಗ್ರೀನ್ ಕಾರಿಡಾರ್ ವ್ಯವಸ್ಥೆ ನಿರ್ಮಿಸಿದ್ದರು. ಈ ಎರಡೂ ಆಸ್ಪತ್ರೆಗಳು 23 ಕಿಮೀ ದೂರವಿದ್ದು, ಸಂಜೆ 4:20 ರಿಂದ 4:35ರ ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್ ಕೇವಲ 15 ನಿಮಿಷಗಳಲ್ಲಿ ಕ್ರಮಿಸಿ ರೋಗಿಗೆ ಮೂತ್ರಪಿಂಡ ಸಾಗಿಸಿ, ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವೃದ್ಧ

    ಮಹಿಳೆಯೊಬ್ಬರನ್ನು ಜನವರಿ 25ರಂದು ಮೆದುಳಿನ ರಕ್ತ ಸ್ರಾವದ ಕಾರಣ ಬನ್ಸಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 4 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಮಹಿಳೆ ಗುಣಮುಖರಾಗುವ ಸೂಚನೆ ಕಾಣಿಸಲಿಲ್ಲ. ಬಳಿಕ ಅವರ ಅಂಗಾಂಗ ದಾನಕ್ಕೆ ಕುಟುಂಸ್ಥರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್, ಕಡ್ನಿ, ಕಣ್ಣುಗಳನ್ನು ಬನ್ಸಾಲ್ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಒಂದು ಕಿಡ್ನಿಯನ್ನು ವಿವಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ ಮಾಡಲಾಗಿದ್ದು, 70 ವರ್ಷದ ರೋಗಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

  • ಎರಡೂಕಾಲು ಗಂಟೆಯಲ್ಲಿ ಮೈಸೂರಿನಿಂದ ಬೆಂಗ್ಳೂರು ತಲುಪಿತು ಹೃದಯ

    ಎರಡೂಕಾಲು ಗಂಟೆಯಲ್ಲಿ ಮೈಸೂರಿನಿಂದ ಬೆಂಗ್ಳೂರು ತಲುಪಿತು ಹೃದಯ

    – ತುಮಕೂರಿನ ವ್ಯಕ್ತಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಜೀವಂತ ಹೃದಯನ್ನು ಯಶಸ್ವಿಯಾಗಿ ರವಾನೆ ಮಾಡಲಾಗಿದೆ.

    ಕಳೆದ ತಿಂಗಳು 9ರಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಯುವಕ ಮದನ್ ರಾಜ್ (22)ಗೆ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ಯುವಕನ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.

    ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿ ತುಮಕೂರು ಮೂಲದ ನವೀನ್ (39) ಎಂಬವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಹೊರಟು 2 ಗಂಟೆ 18 ನಿಮಿಷದಲ್ಲಿ ನಾರಾಯಣ ಹೃದಯಾಲಯಕ್ಕೆ ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ ರವಾನೆಯಾಗಿದೆ.

    ಸದ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನವೀನ್ ಅವರಿಗೆ ವೈದ್ಯರು ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಗ್ರೀನ್ ಕಾರಿಡಾರ್ ಮಾಡಲಾಗಿತ್ತು. ಪೊಲೀಸ್ ಭದ್ರತೆಯೊಂದಿಗೆ ಝೀರೋ ಟ್ರಾಫಿಕ್ ಮೂಲಕ ಜೀವಂತ ಹೃದಯವನ್ನು ರವಾನಿಸಲಾಗಿತ್ತು.