Tag: ಗ್ರಿಲ್

  • ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ

    ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ

    ಬೆಂಗಳೂರು: ಗ್ರಿಲ್ ಹಾಕಿದ್ದರಿಂದ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ ಎಂದು ಅಪಾರ್ಟ್‍ಮೆಂಟ್ ಮಹಿಳಾ ನಿವಾಸಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ಅಪಾರ್ಟ್‍ಮೆಂಟ್ ನನ್ನು ನೋಡಿಕೊಳ್ಳುವವರು ಅಗ್ನಿ ದುರಂತವನ್ನು ತಡೆಯಲು ಫೈರ್ ಎಕ್ಸಟೆನ್ಶನ್ ಇಟ್ಟುಕೊಳ್ಳಬೇಕು. ಅದು ಖಾಲಿಯಾಗುತ್ತಿದಂತೆ ತುಂಬಿಸಬೇಕು. ಅದನ್ನು ನೋಡಿಕೊಳ್ಳಲು ವಿಭಾಗ ಇರಬೇಕು. ಆದರೆ ಇಲ್ಲಿ ಯಾವುದೇ ರೀತಿಯ ಮುಂಜಾಗರುಕತೆ ಇಲ್ಲದೆ ಇರುವುದನ್ನು ನಾವು ನೋಡಬಹುದು. ಇಲ್ಲಿರುವ ಅಪಾರ್ಟ್‍ಮೆಂಟ್‍ಗಳಿಗೆ ಅದರ ಪರಿವೇ ಇಲ್ಲ ಎಂಬುದನ್ನು ನಾವು ಈ ದುರಂತದ ಮೂಲಕ ನೋಡಬಹುದು ಎಂದರು. ಇದನ್ನೂ ಓದಿ:  ಅಂಗನವಾಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್

    ಇದು 4 ಮಹಡಿಗಳಿರುವ ಅಪಾರ್ಟ್‍ಮೆಂಟ್. ಆದರೆ ನಮ್ಮ ಬೆಂಗಳೂರಿನಲ್ಲಿ 10-20 ಮಹಡಿಗಳಿರುವ ಅಪಾರ್ಟ್‍ಮೆಂಟ್ ಗಳಿರುತ್ತೆ. ಅಂತಹ ಅಪಾರ್ಟ್‍ಮೆಂಟ್ ಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದರೆ ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ

    ನಮಗೆ 3ನೇ ಮಹಡಿಯಲ್ಲಿ ಇದ್ದ ಮಹಿಳೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದು ಅಲ್ಲದೇ ಇದು ಅವರೇ ತಂದುಕೊಂಡ ಆಪತ್ತು. ಏಕೆಂದರೆ ಅವರ ಮನೆಯು ಗ್ರಿಲ್‍ನಲ್ಲಿ ಪೂರ್ತಿಯಾಗಿ ಮುಚ್ಚಿಕೊಂಡಿದ್ದೆ ಈ ಘಟನೆಗೆ ಕಾರಣವಾಯಿತು. ಕೆಲವೊಂದು ಕಡೆ ಗ್ರಿಲ್ ನನ್ನು ಓಪನ್ ಮಾಡಲು ಅವಕಾಶಗಳಿವೆ. ಆದರೆ ಅಪಘಾತವಾದ ಮನೆಯಲ್ಲಿ ಆ ರೀತಿ ಅವಕಾಶಗಳಿಲ್ಲ. ಹೀಗಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

  • ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಶಿವಮೊಗ್ಗ: ತಾಯಿಯೊಂದಿಗೆ ಪಾರ್ಕ್ ನಲ್ಲಿ ಹುಲ್ಲು ಮೇಯುತ್ತಿದ್ದಾಗ ಪಾರ್ಕ್ ನಲ್ಲಿ ಅಳವಡಿಸಿದ್ದ ಗ್ರಿಲ್ ಗೆ ಸಿಲುಕಿಕೊಂಡ ಪರಿಣಾಮ ಮರಿ ಕುದುರೆಯ ಕರುಳು ಹೊರ ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗದ ವಿನೋಬನಗರದ ಪಾರ್ಕ್‍ನಲ್ಲಿ ತಾಯಿ ಕುದುರೆಯೊಂದಿಗೆ ಮರಿ ಕುದುರೆ ಹುಲ್ಲು ಮೇಯುತಿತ್ತು. ಈ ವೇಳೆ ಪಾರ್ಕ್‍ನಿಂದ ತಾಯಿ ಕುದುರೆ ಮರೆಯಾಗಿದೆ. ಇದನ್ನು ಗಮನಿಸದ ಮರಿ ಕುದುರೆ ಅಲ್ಲಿಯೇ ಹುಲ್ಲು ಮೇಯುತಿತ್ತು. ನಂತರ ಪಾರ್ಕ್ ನಿಂದ ಹೊರ ಬರಲಾರದೇ ಚಡಪಡಿಸಿದೆ. ಅಲ್ಲದೇ ಪಾರ್ಕ್ ಅಳವಡಿಸಿದ್ದ ಗ್ರಿಲ್ ದಾಟಿ ಹೋಗಲು ಪ್ರಯತ್ನಿಸಿದೆ.

    ಆದರೆ ಈ ವೇಳೆ ಗ್ರಿಲ್‍ಗೆ ಅಳವಡಿಸಿದ್ದ ಚೂಪಾದ ಭರ್ಜಿಗೆ ಸಿಲುಕಿಕೊಂಡ ಕುದುರೆಯ ಕರುಳು ಹೊಟ್ಟೆ ಭಾಗದಿಂದ ಹೊರಬಂದಿದೆ. ನಂತರ ಕುದುರೆ ಅಲ್ಲಿಯೇ ನರಳಾಡುತ್ತಿದ್ದ ದೃಶ್ಯ ಗಮನಿಸಿದ ಯುವಕರು ತಕ್ಷಣವೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಸ್ಥಳದಲ್ಲಿಯೇ ಕುದುರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕರಳನ್ನು ಉದರದ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.