Tag: ಗ್ರಾಹಕ

  • ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳು ಇನ್ನು ಮುಂದೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಅಲ್ಲ ಅವುಗಳ ಎಕ್ಸ್​ಪೈರಿ ದಿನಾಂಕ ಮತ್ತು ಗ್ರಾಹಕ ಸೇವೆಗಳ ಮಾಹಿತಿಯನ್ನು ನೀಡಬೇಕು.

    ಹೌದು. ಆನ್‍ಲೈನ್ ತಾಣಗಳಲ್ಲಿ ಇಲ್ಲಿಯವರೆಗೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಹಾಕಲಾಗುತಿತ್ತು. ಗ್ರಾಹಕರಿಗೆ ವಂಚನೆ ಆಗುತ್ತಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜನವರಿ 2018ರ ನಂತರ ಕಡ್ಡಾಯವಾಗಿ ಎಂಆರ್‍ಪಿ ಜೊತೆ ಎಕ್ಸ್​ಪೈರಿ ದಿನಾಂಕವನ್ನು ಪ್ರಕಟಿಸಬೇಕೆಂದು ಆನ್‍ಲೈನ್ ಶಾಪಿಂಗ್ ಕಂಪೆನಿಗಳಿಗೆ ಸೂಚಿಸಿದೆ.

    ಆನ್‍ಲೈನ್ ತಾಣಗಳು ಎಂಆರ್‍ಪಿ ಜೊತೆಗೆ, ಉತ್ಪಾದನಾ ದಿನಾಂಕ, ಎಕ್ಸ್​ಪೈರಿ ದಿನಾಂಕ, ಪ್ರಮಾಣದ ಮಾಹಿತಿ, ಯಾವ ದೇಶದಲ್ಲಿ ತಯಾರಾಗಿದೆ, ಗ್ರಾಹಕ ಸೇವೆಯ ಮಾಹಿತಿಯನ್ನು ತೋರಿಸಬೇಕಾಗುತ್ತದೆ.

    ಲೀಗಲ್ ಮೆಟ್ರೊಲಜಿ ಕಾಯ್ದೆ(ಪ್ಯಾಕ್ ಮಾಡಿದ ಸರಕು) ಪ್ರಕಾರ ಈ ಎಲ್ಲ ಮಾಹಿತಿಗಳನ್ನು ತೋರಿಸುವಂತೆ ಕೇಂದ್ರ ಸರ್ಕಾರ ಕಂಪೆನಿಗಳಿಗೆ 6 ತಿಂಗಳ ಡೆಡ್‍ಲೈನ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜನವರಿ 1ರಿಂದ ಆನ್‍ಲೈನ್ ತಾಣಗಳು ಸರ್ಕಾರ ಕೇಳಿರುವ ಮಾಹಿತಿಗಳನ್ನು ದಪ್ಪ ಅಕ್ಷರದಲ್ಲಿ ನಲ್ಲಿ ತೋರಿಸಬೇಕು. ಒಂದು ವೇಳೆ ಉಲ್ಲಂಘನೆ ಎಸಗಿದ್ದು ಕಂಡು ಬಂದಲ್ಲಿ ಆ ಕಂಪೆನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

    ಆನ್‍ಲೈನ್ ಶಾಪಿಂಗ್ ತಾಣಗಳಿಂದ ಆಗುತ್ತಿರುವ ವಂಚನೆಯ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾಯ್ದೆ ತಿದ್ದುಪಡಿ ಮಾಡಿ ಈ ಕಾನೂನು ತಂದಿದೆ.

    ಇದನ್ನೂ ಓದಿ: ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

     

  • ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೆಂಗಳೂರು: ಜಿ.ಎಸ್.ಟಿ ಜಾರಿಯಾದ ಮೇಲೆ ಬೇಳೆ ಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಉಲ್ಟಾ ಆಗಿದೆ.

    ಈ ಮೂಲಕ ದಿನಸಿ ಅಂಗಡಿಗಳು ಗ್ರಾಹಕರಿಗೆ ಜಿ.ಎಸ್.ಟಿ ಶಾಕ್ ನೀಡಿದೆ. ಬ್ರಾಂಡೆಡ್ ಬೇಳೆ ಕಾಳುಗಳ ಬೆಲೆ ಕೆಜಿಗೆ ಐದು ರೂ. ಏರಿಕೆಯಾಗಿದೆ, ಬ್ರಾಂಡೆಡ್ ಅಲ್ಲದೇ ಇರುವ ಬೇಳೆ ಕಾಳುಗಳ ದರ ಇಳಿಕೆಯಾಗಿದೆ, ಇನ್ನು ಕೇಶ ತೈಲ, ಸೋಪು, ಕಾಸ್ಮೆಟಿಕ್ಸ್ ಸೇರಿದಂತೆ ಕೆಲ ಹೆಚ್ಚು ಬೆಲೆ ಏರಿಕೆಯಾದ ಐಟಂಗಳ ಸರಬರಾಜು ಸದ್ಯಕ್ಕೆ ಸ್ಥಗಿತಗೊಂಡಿದೆ.

    ಇದನ್ನೂ ಓದಿ: ಟೀ, ಕಾಫಿ, ತಿಂಡಿ ತಿನ್ನೋಕೆ ಹೋಗ್ತಿದೀರಾ..? ನಿಮಗೆ ಕೊಡೋ ಬಿಲ್ ಗಳಲ್ಲಿ ಈ ಬದಲಾವಣೆ ಗಮನಿಸಿ!

    ಹೊಸ ಎಂ.ಆರ್.ಪಿ ಬರುವವರೆಗೆ ಹಳೆ ಸ್ಟಾಕ್ ಗಳನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಇನ್ನು ಅಕ್ಕಿ, ಸಕ್ಕರೆ ಧನಿಯಾ ಸೇರಿದಂತೆ ನಾನಾ ದಿನಸಿ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿದೆ.

    ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿ.ಎಸ್.ಟಿ.ಯಿಂದ ಎಲೆಕ್ಟ್ರಾನಿಕ್ಸ್ ಐಟಂ ದುಬಾರಿಯಾಗಿದೆ. 2000 ರೂ.ನ ಸ್ಟೆಬಿಲೈಸರ್ ಗೆ ಗ್ರಾಹಕರು 14% ಸಿ.ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ.ಯಂತೆ ತಲಾ 218 ರೂ.ಗಳಂತೆ ಒಟ್ಟು 437 ರೂ. ಟ್ಯಾಕ್ಸ್ ಪಾಲಾಗುತ್ತದೆ.

     

  • ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಎಗರಿಸಿ ಬಿಡುತ್ತಾರೆ. ಅದನ್ನು ತೋರಿಸಿ ಇದನ್ನು ತೋರಿಸಿ ಎಂದು ಕೇಳುತ್ತಾ ರೆಪ್ಪೆ ಮಿಟಕಿಸುವಷ್ಟರಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಮೂರು ಸಾವಿರ ಮಠದ ಬಳಿ ಇರುವ ಶ್ರೀಸಾಯಿ ಪ್ಲೈವುಡ್ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಪ್ಲೈವುಡ್‍ಗಳನ್ನು ವಿಚಾರಿಸಿ ಮತ್ತೆ ಬೇರೆ ಕ್ವಾಲಿಟಿ ತೋರಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಅಂಗಡಿ ಮಾಲೀಕ ಸುರೇಶ್ ಇನ್ನಷ್ಟು ಬೇರೆ ಪ್ಲೈವುಡ್‍ಗಳನ್ನು ತರಲು ಒಳಗಡೆ ಹೋಗಿದ್ದಾರೆ. ಈ ಸಮಯವನ್ನೇ ಕಾಯುತ್ತಿದ್ದ ವ್ಯಾಪಾರದ ಸೋಗಿನಲ್ಲಿ ಬಂದಿದ್ದ ಕಳ್ಳ ಕೌಂಟರ್‍ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಫೋನನ್ನು ಕದ್ದು ಪರಾರಿಯಾಗಿದ್ದಾನೆ.

    ಅಷ್ಟರಲ್ಲಿ ಅಂಗಡಿ ಮಲೀಕ ಸುರೇಶ ಬೇರೆ ಕ್ವಾಲಿಟಿ ಪ್ಲೈವುಡ್ ತಂದಿದ್ದರು. ಆತ ಇಲ್ಲದಿರುವುದನ್ನು ನೋಡಿ, ಬೇರೆ ಗ್ರಾಹಕರತ್ತ ಗಮನ ಹರಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೆಲ ಸಮಯದ ನಂತರ ಮೊಬೈಲ್ ಫೋನ್ ನೋಡಿದಾಗ ಫೋನ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಸಿಸಿಟಿವಿ ನೋಡಿದಾಗ ಕೆಲ ನಿಮಿಷದ ಹಿಂದೆ ಬಂದ ಯುವಕ ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಕೂಡಲೇ ಉಪನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

    https://youtu.be/L_A0e7ANQs4