Tag: ಗ್ರಾಹಕ

  • ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಅಂಗಡಿಯಲ್ಲಿದ್ದ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಪತಿ ಹಲ್ಲೆ!

    ಕಾರವಾರ: ಅಂಗಡಿಯಲ್ಲಿ ಕೊಂಡ ಸೀರೆ ಪತ್ನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಗ್ರಾಹಕ ಸ್ನೇಹಿತನೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿಂ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೊಗಿದ್ದನು. ಆ ಸೀರೆ ಪತ್ನಿಗೆ ಇಷ್ಟ ಆಗದ ಹಿನ್ನೆಲೆ ಅಂಗಡಿಗೆ ಪುನಃ ಬಂದು ಸೀರೆ ನೋಡಿದ್ದಾನೆ. ಆದರೆ ಅಂಗಡಿಯಲ್ಲಿರುವ ಯಾವುದೇ ಸೀರೆ ಪತ್ನಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಸಿಟ್ಟುಗೊಂಡ ಮೊಹಮ್ಮದ್ ಒಳ್ಳೆ ಬಟ್ಟೆ ಇಡೋಕೆ ಆಗಲ್ವಾ ಅಂತಾ ಅವಾಚ್ಯ ಪದ ಬಳಕೆ ಮಾಡಿದ್ದ. ಇದನ್ನೂ ಓದಿ: ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

    ಅಂಗಡಿ ಮಾಲೀಕ, ನಿನ್ನ ಹಣ ರಿಟರ್ನ್ ಕೊಡ್ತೀನಿ, ತಗೊಂಡು ಹೋಗು ಬೈಬೇಡ ಎಂದಿದ್ದನು. ನಂಗೆ ಹಣ ಏನ್ ಕೊಡ್ತಿಯಾ ಸರಿಯಾಗಿ ಬಟ್ಟೆ ಇಡೋಕೆ ಆಗಲ್ವಾ ಎಂದು ತಕರಾರು ತೆಗೆದು ಹೊರಗಡೆಯಿಂದ ಸರ್ಪರಾಜ್ ಎಂಬ ಗೆಳೆಯನನ್ನು ಕರೆಸಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಚ್ಚುವರಿ ಮೋಮೊ ಸಾಸ್ ಕೇಳಿದ್ದಕ್ಕೆ‌ ಮುಖಕ್ಕೆ ಚಾಕುವಿನಿಂದ ಇರಿದ!

    ಹೆಚ್ಚುವರಿ ಮೋಮೊ ಸಾಸ್ ಕೇಳಿದ್ದಕ್ಕೆ‌ ಮುಖಕ್ಕೆ ಚಾಕುವಿನಿಂದ ಇರಿದ!

    ನವದೆಹಲಿ: ಹೆಚ್ಚುವರಿಯಾಗಿ ಮೋಮೊ ಸಾಸ್‌ (Red Sauce) ಕೇಳಿದ್ದಕ್ಕೆ ಗ್ರಾಹಕನ ಮುಖಕ್ಕೆ ಚಾಕುವಿನಿಂದ ಇರಿದ ಘಟನೆ ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ನಡೆದಿದೆ.

    ಗಾಯಾಳು ವ್ಯಕ್ತಿಯನ್ನು 34 ವರ್ಷದ ಸಂದೀಪ್ ಎಂದು ಗುರುತಿಸಲಾಗಿದೆ. ಸದ್ಯ ಸಂದೀಪ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಹೆಚ್ಚಿನ ಕೆಂಪು ಸಾಸ್ ಕೇಳಿದಾಗ ವಾದ ವಿವಾದದಲ್ಲಿ ಮೋಮೊಸ್ (Momo) ಮಾರಾಟಗಾರರಿಂದ ಮುಖಕ್ಕೆ ಇರಿದ 34 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

    ನಡೆದಿದ್ದೇನು..?: ಸಂದೀಪ್ ಅವರು ಸಂಜೆ ರಸ್ತೆಬದಿ ಮಾರುತ್ತಿರುವ ಗಾಡಿಯಿಂದ ಮೋಮೊಗಳನ್ನು ಖರೀದಿಸಲು ಹೋಗಿದ್ದರು. ಹೀಗೆ ಮೋಮೊಸ್ ಖರೀದಿಸಿದ ಬಳಿಕ ಗಾಡಿ ಮಾಲೀಕ ವಿಕಾಸ್ (22) ಬಳಿ ಹೆಚ್ಚಿನ ರೆಡ್ ಸಾಸ್ ನೀಡುವಂತೆ ಕೇಳಿದ್ದಾನೆ. ಆದರೆ ಆತ ಕಡಿಮೆ ಇದೆ ಎಂದು ಹೇಳಿ ಕೊಡಲು ನಿರಾಕರಿಸಿದ್ದಾನೆ. ಇದನ್ನೂ ಓದಿ: ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು

    ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ವಿಕಾಸ್, ಗ್ರಾಹಕ ಸಂದೀಪ್ ಮುಖಕ್ಕೆ ಎರಡು ಬಾರಿ ಇರಿದು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕೊಲೆ ಯತ್ನದಡಿ ಗಾಡಿ ಮಾಲೀಕ ವಿಕಾಸ್‌ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪರಾರಿಯಾಗಿರುವ ವಿಕಾಸ್‌ಗಾಗಿ ಪೊಲೀಸರು ಬಲೆ ಬೀಸಿದ್ದು, ಮರುದಿನ ಬೆಳಗ್ಗೆ ಫರ್ಶ್ ಬಜಾರ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಗಾಯಾಳು ಸಂದೀಪ್, ಶಹದಾರದ ಭೋಲಾನಾಥ್ ನಗರದಲ್ಲಿ ಸಣ್ಣ ಮೊಬೈಲ್ ಚಾರ್ಜರ್ ತಯಾರಿಕಾ ಘಟಕವನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ  ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.

    crime

    ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

    ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

    ಹೈದಾರಾಬಾದ್: ವ್ಯಕ್ತಿಯೊಬ್ಬ ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದಲ್ಲದೆ, ತನಗೆ ಮುಸ್ಲಿಂ ವ್ಯಕ್ತಿ ಆಹಾರ ತರುವುದು ಬೇಡ ಎಂದು ಹೇಳಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಸ್ವಿಗ್ಗಿ ಆರ್ಡರ್ ನ ಸ್ಕ್ರೀನ್‍ಶಾಟ್ ಅನ್ನು ಕಾರ್ಮಿಕರ ಸಂಘಟನೆಯ ಮುಖ್ಯಸ್ಥ ಶೇಕ್ ಸಲಾವುದ್ದೀನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೀವು ನಿಲುವು ತೆಗೆದುಕೊಳ್ಳಿ ಎಂದು ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂದು ಎಲ್ಲರಿಗೂ ಆಹಾರವನ್ನು ತಲುಪಿಸಲು ನಾವು ಇಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಗ್ರಾಹಕನ ಮೆಸೇಜ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ಟ್ವಿಟ್‍ನಲ್ಲೇನಿದೆ..?: ಡಿಯರ್ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು (ವಿತರಣಾ ಕೆಲಸಗಾರರು) ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರಿಗೂ ಆಹಾರವನ್ನು ತಲುಪಿಸಲು ಇಲ್ಲಿದ್ದೇವೆ. ಮಜಬ್ ನಹೀ ಸಿಖಾತಾ ಆಪಾಸ್ ಮೇ ಬೈರ್ ರಖ್ನಾ ಎಂದು ಸಲಾವುದ್ದೀನ್ ಎಂದು ತಿಳಿಸಿದ್ದಾರೆ. ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: 15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

    ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಈ ಟ್ವೀಟ್‌ಗೆ ಆಕ್ರೋಶ ಹೊರಹಾಕಿದ್ದು, ಕಾರ್ಮಿಕರು ಧರ್ಮದ ಹೆಸರಿನಲ್ಲಿ ಇಂತಹ ಕಟುವಾದ ಮತಾಂಧತೆಯನ್ನು ಎದುರಿಸುತ್ತಿರುವುದನ್ನು ಪ್ಲಾಟ್‍ಫಾರ್ಮ್ ಕಂಪನಿಗಳು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಕಂಪನಿಗಳು ಯಾವ ಕ್ರಮ ತೆಗೆದುಕೊಳ್ಳುತ್ತವೆ ಎಂದು  ಸ್ವಿಗಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಮುಂಬೈ: ಆಮ್ಲೆಟ್ ಸೀದು ಹೋಗಿದೆ ಎಂದ ಗ್ರಾಹಕನಿಗೆ ಹೋಟೆಲ್ ಮಾಲೀಕ ಬಿಸಿ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ವಿನೋದ್ ರಾಥೋಡ್(48) ಬಂಧಿತ ಆರೋಪಿಯಾಗಿದ್ದಾನೆ. ಗಾಯಾಳು ಸಂದೀಪ್ ಸಾಯರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿನೋದ್ ರಸ್ತೆ ಬದಿಯ ಸಣ್ಣ ಹೋಟೆಲ್‍ನಲ್ಲಿ ಆಮ್ಲೆಟ್ ಮಾರಾಟ ಮಾಡುತ್ತಿದ್ದನು. ಈತ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ.

    ಸಯಾರೆ ಸಮೀಪದ ರೈಲ್ವೇ ನಿಲ್ದಾಣ ಸಮೀಪದ ಹೋಟೆಲ್‍ವೊಂದರಲ್ಲಿ ಸಂದೀಪ್ ಸಾಯರೆ 40 ರೂ. ಬೆಲೆಯ ಆಮ್ಲೆಟ್ ಆರ್ಡರ್ ಮಾಡಿದ್ದನು. ಆದರೆ ಆ ಅಂಗಡಿಯವನು ಕೊಟ್ಟ ಆಮ್ಲೆಟ್ ಸುಟ್ಟು ಹೋಗಿದ್ದರಿಂದ ಅದರ ಬದಲಾಗಿ ಬೇರೆ ಆಮ್ಲೆಟ್ ನೀಡುವಂತೆ ಆತ ಒತ್ತಾಯಿಸಿದ್ದ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ನಡೆದಿತ್ತು. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

    ನಂತರ ಆ ಅಂಗಡಿಯ ಮಾಲೀಕ ಸಂದೀಪ್ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ. ಸಂದೀಪ್ ರಾಥೋಡ್ ಸಾಯರೆಗೆ ಹೊಡೆದಿದ್ದಕ್ಕಾಗಿ ಐಪಿಸಿ ಸೆಕ್ಷನ್ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸಂದೀಪ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಗನನ್ನ ನೀರಿನ ಸಂಪ್‍ಗೆ ಎಸೆದು ತಂದೆ ಆತ್ಮಹತ್ಯೆ

  • ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ವಾಷಿಂಗ್ಟನ್: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್‍ನಿಂದ ಗ್ರಾಹಕ ಹಣ ವಾಪಾಸ್ ಕೇಳಿರುವ ವಿಚಿತ್ರ ಘಟನೆಯೊಂದು ಸುದ್ದಿಯಾಗಿದೆ.

    ಚೀಸ್, ಐಸ್​ ಕ್ರೀಂ, ಮಿಲ್ಕ್​ಶೇಕ್  ಸೇರಿದಂತೆ ಗ್ರಾಹಕನೊಬ್ಬ ಆರ್ಡರ್ ಮಾಡಿದ್ದನು. ಈ ತಿನಿಸುಗಳು ತಣ್ಣಗಾಗಿದೆ, ಹಣ ಮರು ಪಾವತಿಸಿ ಎಂದು ಗ್ರಾಹಕನನ್ನ ಬಳಿ  ಕ್ಯಾತೆ ತೆಗೆದಿದ್ದನು ಎಂದು ರೆಸ್ಟೋರೆಂಟ್‍ ಮಾಲೀಕ ಹಸನ್ ಹಬೀಬ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ಇತ್ತೀಚೆಗೆ ಡೆಲಿವರಿ ಸೇವೆ ಬಗ್ಗೆ ಗ್ರಾಹಕರಿಂದ ಅತಿ ಹೆಚ್ಚು ದೂರುಗಳು ಬರುತ್ತಿದ್ದು, ಅವುಗಳಲ್ಲಿ ಕೆಲವು ವಿಚಿತ್ರವಾದ ಪ್ರಕರಣಗಳಾಗಿವೆ. ನಾಲ್ಕು ಮಿಲ್ಕ್​ಶೇಕ್, ಚೀಸ್‍ಕೇಕ್ ಮತ್ತು ಐಸ್​ಕ್ರೀಂ ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದಾದ 45 ನಿಮಿಷಗಳ ನಂತರ ಅವರು ಆಹಾರ ತಣ್ಣಗಿರುವ ಕಾರಣ ತಾವು ನೀಡಿದ ಹಣವನ್ನು ಮರುಪಾವತಿ ಮಾಡಬೇಕೆಂದು ದೂರು ನೀಡಿದರು. ಐಸ್‍ಕ್ರೀಂ, ಮಿಲ್ಕ್‍ಶೇಕ್, ಚೀಸ್ ಕೇಕ್ ಎಲ್ಲಾದರೂ ಬಿಸಿಯಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

    ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ. ಟ್ರಾಫಿಕ್‍ನಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಡೆಲಿವರಿ ನೀಡಲು ಆಗುವುದಿಲ್ಲ. ಕೆಲವೊಮ್ಮೆ ನಾವು ಐಟಂಗಳನ್ನು ಕಳೆದುಕೊಳ್ಳುತ್ತೇವೆ ಅಥವಾ ತಪ್ಪು ಐಟಂ ಅನ್ನು ಕಳುಹಿಸುತ್ತೇವೆ. ಆದರೆ ಬದಲಿ ಐಟಂ ಅಥವಾ ಸಂಪೂರ್ಣ ಅರ್ಹ ಮರುಪಾವತಿಯೊಂದಿಗೆ ನಾವು ಅದನ್ನು ಗ್ರಾಹಕರಿಗೆ ಒಪ್ಪಿಸುತ್ತೇವೆ. ಆದರೆ cರು ಹೀಗೆ ವಿಚಿತ್ರವಾದ ಕಾರಣಗಳನ್ನು ನೀಡಿ ಹಣವನ್ನು ಮರುಪಾವತಿ ಮಾಡಲು ದೂರು ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ. ಐಸ್‌ಕ್ರೀಂ ತಣ್ಣಗಿದೆ ಹಣ ವಾಪಸ್‌ ಕೊಡಿ ಎಂದು ಹೇಳಿದ್ದು,  ಆಶ್ಚರ್ಯವಾಗಿದೆ ಎಂದಿದ್ದಾರೆ.

  • 1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    ಮುಂಬೈ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಕೇವಲ 14 ರೂಪಾಯಿ ಉಳಿದಿದ್ದು, ರೈತ ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

    ಕಳೆದೊಂದು 4ರಿಂದ 5 ತಿಂಗಳಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಇದೀಗ ಬೆಳೆ ಬೆಳೆದ ರೈತನಿಗೆ ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚವನ್ನು ಕಳೆದು ಕೇವಲ 14 ರೂಪಾಯಿ ಉಳಿದಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಈ ಕುರಿತು ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ರೈತನಿಗೆ ಆಗುವ ಅನ್ಯಾಯದ ಕುರಿತಾಗಿ ಬೆಳಕು ಚೆಲ್ಲಿದ್ದಾರೆ. ಸೊಲ್ಲಾಪುರದ ಬಾಪು ಕವಾಡೆ 1665 ಕೆಜಿ ಈರುಳ್ಳಿ ಬೆಳೆದು ಮಾರಾಟಕ್ಕೆ ಕಳುಹಿಸಿದ್ದರು. ಆಗ 1 ರೂಪಾಯಿನಂತೆ ಈರುಳ್ಳಿ ಮಾರಾಟ ಮಾಡಿದ್ದಾರೆ. ದಲ್ಲಾಳಿ ಇವರಿಗೆ 1665 ರೂಪಾಯಿ ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಸಾಗಣೆ ವೆಚ್ಚ, ಕಮಿಷನ್ ಎಲ್ಲಾ ಸೇರಿ ಕವಾಡೆಗೆ 1651 ರೂ ವೆಚ್ಚವಾಗಿತ್ತು. ಅಂದರೆ ಉಳಿದಿದ್ದು ಕೇವಲ 14 ರೂಪಾಯಿ ಮಾತ್ರ. ದಲ್ಲಾಳಿ ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ತರಕಾರಿಗಳ ಬೆಲೆ ಮಾತ್ರ ಗಗನಕ್ಕೆ ಏರಿದೆ. ಟೊಮೆಟೋ ಬೆಲೆ 150 ರೂಪಾಯಿಗೂ ಹೆಚ್ಚಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆದರೆ ಇರುಳ್ಳಿ ಬೆಲೆ ಮಾತ್ರ ಭಾರೀ ಕುಸಿತ ಕಂಡಿರುವುದು ರೈತರಿಗೆ ಕಣ್ಣೀರು ತರಿಸಿದೆ.

  • ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ತಿರುವನಂತಪುರಂ: ಆರ್ಡರ್ ಮಾಡಿದ ವಸ್ತುಗಳ ಬದಲಾಗಿ ಗ್ರಾಹಕರಿಗೆ ಬೇರೆ ವಸ್ತುಗಳನ್ನು ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಪಾಸ್‍ಪೋರ್ಟ್ ಕವರ್ ಆರ್ಡರ್ ಮಾಡಿದೆ ಒರಿಜಿನಲ್ ಪಾಸ್‌ಪೋರ್ಟ್‌ ಡೆಲಿವರಿಯಾಗಿದೆ. ಈ ಘಟನೆ ವಯನಾಡು ಜಿಲ್ಲೆಯ ಕಣಿಯಂಬೆಟ್ಟ ಎಂಬಲ್ಲಿ ನಡೆದಿದೆ.

    ನಡೆದಿದ್ದೇನು: ಮಿಥುನ್ ಕಳೆದ ಅಕ್ಟೋಬರ್ 30ರಂದು ಆನ್ಲೈನ್‍ನಲ್ಲಿ ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಆರ್ಡರ್ ಮಾಡಿದ್ದ ಕವರ್‍ನ ಪಾರ್ಸೆಲ್ ತಲುಪಿದೆ. ಪಾರ್ಸೆಲ್ ತೆರೆದು ನೋಡಿದರೆ ಅದರಲ್ಲಿ ಪಾಸ್‍ಪೋರ್ಟ್ ಕವರ್ ಜೊತೆಗೆ ಬೇರೆ ವ್ಯಕ್ತಿಯ ಪಾಸ್‌ಪೋರ್ಟ್‌ ಕೂಡ ಬಂದಿದೆ. ಕೂಡಲೇ ಅವರು ಕಸ್ಟಮರ್ ಕೇರ್‍ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

     

    ಬಳಿಕ ಮಿಥುನ್ ಬಾಬು ಪಾಸ್‌ಪೋರ್ಟ್‌ಅನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಪ್ರಯತ್ನ ಆರಂಭಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿರುವ ವಿವರಗಳ ಪ್ರಕಾರ, ಅದು ತ್ರಿಶೂರ್‍ನ ಮೊಹಮ್ಮದ್ ಸಾಲಿಹ್ ಎಂಬುವರಿಗೆ ಸೇರಿದ್ದೆಂದು ಗೊತ್ತಾಗಿದೆ. ಪಾಸ್‌ಪೋರ್ಟ್‌ನಲ್ಲಿ ಫೋನ್‍ನಂಬರ್‍ನಂತಹ ವಿವರಗಳಿಲ್ಲ. ಹೀಗಿದ್ದರೂ ಮಿಥುನ್, ಸಾಲಿಹ್ ಅವರ ಮಾಹಿತಿ ಸಂಗ್ರಹಿಸಿ ಸಂಪರ್ಕಿಸಿದ್ದಾರೆ. ಶೀಘ್ರವೇ ತಮ್ಮ ಪಾಸ್‌ಪೋರ್ಟ್‌ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ


    ಸಾಲಿಹ್ ಮೊದಲು ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದಾರೆ. ಕವರ್ ಬಂದಾಗ ಅದರಲ್ಲಿ ತನ್ನ ಪಾಸ್‌ಪೋರ್ಟ್‌ ಇಟ್ಟು ಚೆಕ್ ಮಾಡಿದ್ದಾರೆ. ಇಷ್ಟವಾಗದಿದ್ದಾಗ ಕವರ್ ವಾಪಸ್ ಕಳಿಸಿದ್ದಾರೆ. ಆದರೆ ಪಾಸ್‌ಪೋರ್ಟ್‌ ಅನ್ನು ಕವರ್‍ನಲ್ಲೇ ಬಿಟ್ಟು ವಾಪಸ್ ಮಾಡಿರಬಹದು ಎಂದು ಮಿಥುನ್ ಬಾಬು ಹೇಳಿದ್ದಾರೆ. ಕವರ್ ವಾಪಸ್ ಪಡೆದಿದ್ದ ಅಮೆಜಾನ್ ಅದನ್ನು ಪರಿಶೀಲನೆ ಮಾಡದೆ ಬೇರೆ ಆರ್ಡರ್ ಬಂದಾಗ ಅದನ್ನು ಮತ್ತೊಬ್ಬ ಗ್ರಾಹಕನಿಗೆ ಕಳುಹಿಸಿದ್ದಾಗ ಇಂಥಹ ಎಡವಟ್ಟು ಆಗಿದೆ.

  • ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಚಿಕ್ಕಬಳ್ಳಾಪುರ: ಒಂದು ಕಡೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಸಕಲ ತಯಾರಿಯಲ್ಲಿದ್ದರೇ ಇತ್ತ ಹೂವಿನ ಬೆಲೆ ಪಾತಾಳಕ್ಕೆ ಕುಸಿದ ಹಿನ್ನಲೆ ರೈತರೊಬ್ಬರು ತನ್ನ ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಾಲೂಕಿನ ಡಿ. ಹೊಸೂರು ಗ್ರಾಮದ ರೈತ ಪಿಳ್ಳೇಗೌಡ ಅವರು ತಮ್ಮ ಒಂದು ಎಕೆರೆಯಲ್ಲಿ ಬೆಳೆದಿದ್ದ 1300 ಗುಲಾಬಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದಾರೆ. ಸದ್ಯ ಪಿತೃ ಪಕ್ಷದ ಎಫೆಕ್ಟ್ ನಿಂದ ಮಾರುಕಟ್ಟೆಯಲ್ಲಿ ಹೂ ಕೇಳೋರೇ ಇಲ್ಲ. ಕೆಜಿ 5 ರೂಪಾಯಿಗೂ ಖರೀದಿ ಮಾಡೋರಿಲ್ಲದಂತಾಗಿದ್ದು, ನೊಂದ ರೈತ ಪಿಳ್ಳೇಗೌಡ ಅವರು ಇಡೀ ಗುಲಾಬಿ ತೋಟವನ್ನ ಬುಡದವರೆಗೂ ಕಟಾವು ಮಾಡಿ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ:  DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ

    ಮಾರ್ಕೆಟ್‍ನಲ್ಲಿ ರೇಟ್ ಇಲ್ಲ, ಗಿಡದಲ್ಲಿ ಹೂವು ಹಾಗೆ ಬಿಟ್ಟರೆ ಗಿಡ ಹಾಳಾಗುತ್ತದೆ. ಹೂವು ಕಟಾವು ಮಾಡೋಣ ಎಂದರೆ ಕೂಲಿ ಹಣನೂ ಸಿಗಲ್ಲ. ಇದರ ಜೊತೆಗೆ ಗಿಡಗಳನ್ನ ಕಾಪಾಡಿಕೊಳ್ಳೋಕೆ ಫರ್ಟಿಲೈಸರ್ಸ್ ಖರೀದಿ ಮಾಡಬೇಕು. ಅವು ಸಹ ದುಬಾರಿ ಬೆಲೆ, ಏನ್ ಮಾಡೋದು ಸರ್ ಲಾಭ ಇಲ್ಲ ಎಲ್ಲವೂ ನಷ್ಟವಾಗಿದೆ. ಹೀಗಾಗಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದೇವೆ ಎಂದು ರೈತ ಪಿಳ್ಳೇಗೌಡ ಅವರು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

     

    ಕೆಜಿ 5 ರೂಪಾಯಿಗೂ ಕೇಳೋರಿಲ್ಲ:

    ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದಲ್ಲಿ ಪುಷ್ಪೋದ್ಯಮ ಮಾಡಲಾಗುತ್ತದೆ. ಗುಲಾಬಿ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ತರಹೇವಾರಿ ಹೂವುಗಳನ್ನ ಬೆಳೆಯಲಾಗುತ್ತದೆ. ಇನ್ನೂ ಕೊರೊನಾ ಹೊಡೆತಕ್ಕೆ ಪುಷ್ಪೋದ್ಯಮ ನಲುಗಿ ಹೋಗಿದೆ. ಇತ್ತೀಚೆಗೆ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳಿಂದ ಚೇತರಿಸಿಕೊಂಡಿತ್ತು. ಆದರೆ ಪಕ್ಷದ ಕಾರಣ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವು ಕೆಜಿ 5 ರೂಪಾಯಿಗೂ ಕೇಳೋರಿಲ್ಲ. ಬಲವಂತ ಮಾಡಿ ನಾವೇ ಕೊಟ್ಟು ಬರಬೇಕಾಗಿದೆ ಅಂತಾರೆ ರೈತ ಸುನೀಲ್. ಮತ್ತೊಂದೆಡೆ ಚೆಂಡು ಹೂ ಸಹ ಕೇಳೋರು ಇಲ್ಲ, ಹೀಗಾಗಿ ಚಿಕ್ಕಬಳ್ಳಾಪುರ ನಗರದ ಹೂವು ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಎಲ್ಲಂದರಲ್ಲಿ ಬಿಸಾಡಲಾಗಿದೆ. ರೈತರೊಬ್ಬರು ಟ್ರ್ಯಾಕ್ಟರ್ ತುಂಬಾ ಗುಲಾಬಿ ಹೂವನ್ನ ರಸ್ತೆ ಬದಿ ಸುರಿದು ಹೋಗಿದ್ದ. ಮಾರುಕಟ್ಟೆಯಲ್ಲಿ ಎತ್ತ ನೋಡಿದರು ಈಗ ರಾಶಿ ರಾಶಿ ಹೂವುಗಳು ಕಣ್ಣಿಗೆ ಕಾಣುತ್ತಿವೆ.

  • ರಸ್ತೆಬದಿ ತರಕಾರಿ ಮಾರಿದ ಐಎಎಸ್ ಆಫೀಸರ್

    ರಸ್ತೆಬದಿ ತರಕಾರಿ ಮಾರಿದ ಐಎಎಸ್ ಆಫೀಸರ್

    ಲಕ್ನೋ: ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ರಸ್ತೆಬದಿಯ ಸ್ಟಾಲ್‍ನಲ್ಲಿ ತರಕಾರಿ ಮಾರುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    IAS officer

    ಫೋಟೋದಲ್ಲಿರುವ ಐಎಎಸ್ ಅಧಿಕಾರಿಯನ್ನು ಅಖಿಲೇಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಅವರು ಉತ್ತರ ಪ್ರದೇಶದ ಸಾರಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದೀಗ ಫೇಸ್‍ಬುಕ್‍ನಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಅಖಿಲೇಶ್ ಮಿಶ್ರಾರವರು ತರಕಾರಿ ಅಂಗಡಿ ಕೆಳಗೆ ಗೋಣಿಚೀಲದ ಮೇಲೆ ಕುಳಿತುಕೊಂಡು ತರಕಾರಿ ಮಾರುತ್ತಿದ್ದು, ಗ್ರಾಹಕರುಗಳು ಸಹ ಅಂಗಡಿ ಬಳಿ ಖರೀದಿ ಮಾಡಲು ನಿಂತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸರ್ಕಾರವನ್ನು ಮುಜುಗರಕ್ಕಿಡು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೈಕ್, ಡಬಲ್ ಬ್ಯಾರಲ್ ಕೋವಿ ಕದ್ದಿದ್ದ ಆರೋಪಿ ಅಂದರ್

    IAS officer

    ಈ ಬಗ್ಗೆ ಮಾತನಾಡಿದ ಅಖಿಲೇಶ್ ಮಿಶ್ರಾರವರು, ನಾನು ಕೆಲವು ಅಧಿಕೃತ ಕೆಲಸದ ಮೇಲೆ ಪ್ರಯಾಗರಾಜ್‍ಗೆ ಭೇಟಿ ನೀಡಿದ್ದೆ. ನಂತರ ಅಲ್ಲಿಂದ ಹಿಂತಿರುವಾಗ ತರಕಾರಿ ಖರೀದಿಸಲೆಂದು ಬಂದೆ. ಆಗ ತರಕಾರಿ ಮಾರಾಟಗಾರ ಮತ್ತು ವೃದ್ಧೆಯೊಬ್ಬರು ತಮ್ಮ ಮಗು ಇಲ್ಲಿ ಎಲ್ಲೋ ಹೋಗಿದೆ. ಮಗುವನ್ನು ಹುಡುಕಿ ಬರುವವರೆಗೂ ಸ್ವಲ್ಪ ಅಂಗಡಿಯನ್ನು ನೋಡಿಕೊಳ್ಳುವಂತೆ ಮನವಿ ಮಾಡಿದರು. ಹಾಗಾಗಿ ನಾನು ಅವರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಈ ವೇಳೆ ಗ್ರಾಹಕರೊಬ್ಬರು ಬಂದರು. ಆಗ ನನ್ನ ಸ್ನೇಹಿತ ಫೋಟೋ ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ