Tag: ಗ್ರಾಮ

  • ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಅಂದರ್

    ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಅಂದರ್

    ಕೋಲಾರ: ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ರತ್ನಪ್ಪ ಆರೋಪಿಯಾಗಿದ್ದಾನೆ. ಯಶೋದಮ್ಮ ಮೃತಳಾಗಿದ್ದಾಳೆ. ಕಳೆದ ಮೇ ತಿಂಗಳಲ್ಲಿ ತಲೆ ಇಲ್ಲದೆ ಪತ್ತೆಯಾಗಿದ್ದ ಮಹಿಳೆ ಕೊಲೆ ಆರೋಪಿಯನ್ನ ಬಂಧಿಸುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರದ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿ ಗ್ರಾಮದಲ್ಲಿ ಮೇ 4ರಂದು ಭೀಕರವಾಗಿ ತಲೆ ಕಡಿದು ಕೊಲೆ ಮಾಡಲಾಗಿತ್ತು. ಇದೆ ಗ್ರಾಮದ ಮಹೇಶ್ ಎಂಬುವವರ ಜಮೀನಿನಲ್ಲಿ ತಲೆಯೇ ಇಲ್ಲದ ಮಹಿಳೆಯ ಶವವೊಂದು ಕೈ ಮಾತ್ರ ಮಣ್ಣಿನಿಂದ ಹೊರಕ್ಕೆ ಕಾಣುವಂತೆ ಮುಚ್ಚಲಾಗಿತ್ತು. ಇದನ್ನೂ ಓದಿ: ಕೋಗಿಲೆ ಕಂಠದ ರಾನು ಮಂಡಲ್ ಜೀವನ ಆಧರಿಸಿ ಬರಲಿದೆ ಬಯೋಪಿಕ್

    ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಪಾಪೇನಹಳ್ಳಿ ಗ್ರಾಮದ ಯಶೋದಮ್ಮ ಎಂಬಾಕೆಯೆ ಕೊಲೆಯಾದ ಮಹಿಳೆ ಹಾಗೂ ಗ್ರಾಮದ ರತ್ನಪ್ಪ ಕೊಲೆ ಮಾಡಿದವನು ಎಂದು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿದ ರತ್ನಪ್ಪ ಜಮೀನು ಮಾಲೀಕ ಮಹೇಶ್‍ರಿಗೆ ಮೊಬೈಲ್ ಕರೆ ಮಾಡಿ ಜಮೀನಿನಲ್ಲಿ ಒಂದು ಶವ ಇದೆ ಎಂದು ಹೇಳಿದ್ದ, ಅಂದಿನಿಂದ ಆತನ ಹಿಂದೆ ಬಿದ್ದ ಪೊಲೀಸರಿಗೆ ರತ್ನಪ್ಪ ಮಾಡಿದ ಕೃತ್ಯ ಬಯಲಾಗಿದೆ. ಈ ಹಿಂದೆ ಇಬ್ಬರು ಮಹಿಳೆಯರ ಕೊಲೆ ಕೃತ್ಯದಲ್ಲಿಯೂ ಭಾಗಿಯಾಗಿದ್ದ ರತ್ನಪ್ಪ ಒಂದು ರೀತಿಯ ಕಿರಾತಕನಾಗಿದ್ದಾನೆ.ಇದನ್ನೂ ಓದಿ: ಹೆದ್ದಾರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟೀಲ್ ಸೂಚನೆ

    ಮಹಿಳೆಯರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದು ಇವನ ಸೈಕೋತನವಾಗಿದ್ದು, ಕೊಲೆ ಮಾಡಿ ತನ್ನ ತಮ್ಮ ಮಹೇಶ್ ಮೇಲೆಯೇ ಆರೋಪ ಬಂದರೆ ನಾನು ಜಮೀನು ಅನುಭವಿಸಿಕೊಂಡು ಇರಬಹುದು ಎಂಬ ಲೆಕ್ಕಾಚಾರ ಹಾಕಿದ್ದ. ಆದರೆ ಈಗ ಮೂರನೆ ಕೊಲೆಯ ಆರೋಪದಲ್ಲಿ ಜೈಲುಪಾಲಾಗಿದ್ದಾನೆ.

  • ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳ

    ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳ

    ಕಾರವಾರ: ಗಣೇಶ ಚತುರ್ಥಿ ಬಂತು ಎಂದರೇ ಬಹುತೇಕ ಹಳ್ಳಿಗಳಲ್ಲಿ ಹಬ್ಬಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತವೆ. ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳವನ್ನು ಮಾಡಲಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹಲವು ಗ್ರಾಮದಲ್ಲಿ ಊರಿನವರೆಲ್ಲಾ ಒಟ್ಟಿಗೆ ಸೇರಿ ಕೈ ನಿಂದ ಹೊಸೆದು ಮಾಡುವ ಚಕ್ಕುಲಿ ಕಂಬಳ ನಡೆಸುವ ಮೂಲಕ ಗ್ರಾಮದಲ್ಲಿ ತಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್

    ಕೈ ಚಕ್ಕುಲಿ ಕಂಬಳ ವಿಶೇಷ ಏನು?
    ಶಿರಸಿ ತಾಲೂಕಿನ ಕಲ್ಮನೆ, ಹೆಗಡೆಕಟ್ಟಾ, ಹೆಗ್ಗಾರ ಭಾಗದಲ್ಲಿ ಪ್ರತಿ ವರ್ಷ ಬರಿಗೈ ನಿಂದ ಹೊಸೆದು ಮಾಡುವ ಚಕ್ಕುಲಿ ಸಿದ್ದಪಡಿಸಲಾಗುತ್ತದೆ. ಶನಿವಾರದಿಂದ ಚಕ್ಕುಲಿ ಕಂಬಳಕ್ಕೆ ಚಾಲನೆ ನೀಡಲಾಗಿದೆ. ವಾರವಿಡಿ ದಿನದಲ್ಲಿ ಒಂದು ಬಾರಿಯಂತೆ ಒಂದಲ್ಲಾ ಒಂದು ಮನೆಯಲ್ಲಿ ಈ ಕೈ ಚಕ್ಕಲಿ ಕಂಬಳ ಮಾಡಲಾಗುತ್ತದೆ. ಇದಾಕ್ಕಾಗಿ ನಿಗದಿ ಮಾಡಿದ ಮನೆಗೆ ಗ್ರಾಮದ ಜನರು ಹೋಗಿ ಬರಿಗೈನಲ್ಲಿ ಚಕ್ಕುಲಿ ಹೊಸೆದು ಮಾಡಲಾಗುತ್ತದೆ.

    ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಒಗ್ಗಟ್ಟಾಗಿ ಸೇರಿ ಚಕ್ಕುಲಿ ತೆಯಾರಿಸುತ್ತಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಹಾಡುಗಳು, ಕೃಷಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಮೂಲಕ ಒಬ್ಬರಿಗೊಬ್ಬರು ತಮ್ಮಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಗಮ-ಗಮ ಚಕ್ಕುಲಿ ಸಿದ್ಧವಾದ ನಂತರ ಎಲ್ಲರೂ ಸವಿದು ಚಹ, ಕಾಫಿಗಳನ್ನು ಕುಡಿದು ವೀಳ್ಯದೆಲೆ ಅಡಿಕೆ ಅಗೆದು ನಾಲಿಗೆ, ತುಟಿ ಕೆಂಪಾಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಈ ಮೂಲಕ ಊರಿನಲ್ಲಿ ತಮ್ಮ ತಮ್ಮ ಬಾಂದವ್ಯವನ್ನು ಪ್ರತಿ ವರ್ಷ ಗಣೇಶ ಚತುರ್ಥಿಗೂ ಮೊದಲು ವೃದ್ಧಿಸಿಕೊಳ್ಳುವ ಈ ಗ್ರಾಮದವರು ತಲೆ ತಲಾಂತರದಿಂದ ಈ ಕಂಬಳವನ್ನು ಜೀವಂತವಾಗಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೊಂದು ಪ್ರಕರಣ – ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ, ಅತ್ಯಾಚಾರ ಯತ್ನ

    ಕೈ ಚಕ್ಕುಲಿ ಮಹತ್ವ ಏನು?
    ಚಕ್ಕುಲಿಯನ್ನು ಬರಿಗೈ ನಿಂದ ಹೊಸೆದು ಸುತ್ತಿ ತೆಯಾರಿಸುವ ಚಕ್ಕುಲಿಯೇ ಕೈಚಕ್ಕುಲಿ. ಆದರೆ ಇಂದಿನ ದಿನಗಳಲ್ಲಿ ಹಿಟ್ಟನ್ನು ಚಕ್ಕುಲಿ ಹುಟ್ಟಿನಲ್ಲಿ ಹಾಕಿ ಒತ್ತಿ ಚಕ್ಕುಲಿ ಮಾಡುತ್ತಾರೆ. ಈ ಚಕ್ಕುಲಿ ಕೈನಿಂದ ಹೊಸೆದು ಮಾಡುತ್ತಾರೆ. ಹೀಗಾಗಿ ಬಾಳಿಕೆ ರುಚಿಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.

    ಗಣೇಶ ಚತುರ್ಥಿ ಮುಗಿಯುವವರೆಗೂ ಈ ಚಕ್ಕುಲಿ ಕಂಬಳ ಈ ಭಾಗದಲ್ಲಿ ನಡೆಯುವುದು ವಿಶೇಷವಾಗಿದೆ. ಕೆಜಿಗಟ್ಟಲೇ ಗ್ರಾಮದವರೆಲ್ಲಾ ಸೇರಿ ಮಾಡುವ ಚಕ್ಕುಲಿಯನ್ನು ನೆಂಟರಿಷ್ಟರು ಹಾಗೂ ಪರಿಚಿತ ಸೇಹಿತರಿಗೂ ನೀಡಿ ಸಹಬಾಳ್ಳೆಯ ಮಹತ್ವವನ್ನು ಈ ಗ್ರಾಮದ ಜನ ಕೈ ಚಕ್ಕುಲಿ ಕಂಬಳದ ಮೂಲಕ ಸಾರುವ ಮೂಲಕ ಮಾದರಿ ಯಾಗಿದ್ದಾರೆ.

  • ಹಾಸನದಲ್ಲಿ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

    ಹಾಸನದಲ್ಲಿ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

    ಹಾಸನ: ಒಂಟಿ ಸಲಗವೊಂದು ಬೆಳ್ಳಂಬೆಳಗ್ಗೆ ಗ್ರಾಮದೊಳಗೆ ಪ್ರವೇಶಿ, ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದಲ್ಲಿ ನಡೆದಿದೆ.

    ಬೆಳ್ಳಂ ಬೆಳಗ್ಗೆ ಗ್ರಾಮದೊಳಕ್ಕೆ ಎಂಟ್ರಿಕೊಟ್ಟ ಒಂಟಿ ಸಲಗ, ಪ್ರಮುಖ ಬೀದಿಯಲ್ಲಿ ಸಂಚಾರ ನಡೆಸಿದೆ. ಒಂಟಿ ಸಲಗದ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೃಹದಾಕಾರದ ಆನೆಯನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಕಂಗಾಲಾಗಿದ್ದಾರೆ. ಗ್ರಾಮಸ್ಥರು ಸಲಗದ ವೀಡಿಯೋ ಮಾಡಿದ್ದು, ವೈರಲ್ ಆಗಿದೆ. ಇದನ್ನೂ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಶೋಕ್ ಸಿಟಿರೌಂಡ್ಸ್

    ಒಂಟಿ ಸಲಗ ಪದೇ ಪದೇ ಗ್ರಾಮದೊಳಗೆ ಪ್ರವೇಶಿಸುತ್ತದೆ. ಹಲವೆಡೆ ಬೆಳೆ ಕೂಡ ನಾಶವಾಗಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ನಾಯಿ ಮರಿ ಹೊತ್ತೊಯ್ದ ಚಿರತೆ- ಗ್ರಾಮಸ್ಥರಲ್ಲಿ ಆತಂಕ

    ನಾಯಿ ಮರಿ ಹೊತ್ತೊಯ್ದ ಚಿರತೆ- ಗ್ರಾಮಸ್ಥರಲ್ಲಿ ಆತಂಕ

    ನೆಲಮಂಗಲ: ಚಿರತೆಯೊಂದು ಹೊಂಚುಹಾಕು ಹಾಕಿ ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಂಟನಕುರ್ಚಿ ಗ್ರಾಮದಲ್ಲಿ ನಡೆದಿದೆ.

    ಮಂಟನಕುರ್ಚಿ ಗ್ರಾಮದ ಮಂಜುನಾಥ್ ಎಂಬುವವರ ತೋಟದ ಮನೆಯ ಮುಂದೆ ಕಾಣಿಸಿಕೊಂಡಿರುವ ಚಿರತೆ ಮನೆಯ ಬಾಗಿಲ ಮುಂದೆ ಮಲಗಿದ್ದ ಎರಡು ನಾಯಿ ಮರಿಗಳಲ್ಲಿ ಒಂದು ಮರಿಯನ್ನು ಸಂಚು ಹಾಕಿ ಕ್ಷಣ ಮಾತ್ರದಲ್ಲಿ ಹೊತ್ತೋಯ್ದಿದೆ. ಇದನ್ನೂ ಓದಿ:  ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಚಿರತೆಯ ಚಲನವಲಗಳು ಮನೆಯ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ಭೇಟಿ ವೇಳೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿ ಆತಂಕ ವ್ಯಕ್ತಪಡಿಸಿದ್ದು ಚಿರತೆ ಸೆರೆಗೆ ಬೋನ್ ಇಡಲು ಮನವಿ ಮಾಡಿದ್ದಾರೆ.

  • ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

    ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

    ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

    ಇಂದು ಬೆಳಿಗ್ಗೆ 9:53ರ ಸುಮಾರಿಗೆ ಭೂಮಿಯಿಂದ ಭಾರೀ ವಿಚಿತ್ರ ರೀತಿಯಲ್ಲಿ ಸದ್ದು ಕೇಳಿಬಂದಿದೆ. ಇದು ಇಂದು ಮಾತ್ರ ಅಲ್ಲ ಗ್ರಾಮದಲ್ಲಿ ಈ ಹಿಂದೆ ಅನೇಕ ಬಾರಿ ಮೇಲಿಂದ ಮೇಲೆ ಭೂಮಿಯಿಂದ ಈ ರೀತಿಯ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ಭೂಕಂಪನದ ಅನುಭವ ಆದಂತಾಗಿದೆ. ಶಬ್ಧ ಬರಲು ಮೂಲ ಕಾರಣ ಏನು ಎನ್ನುವುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಇದನ್ನೂ ಓದಿ: ಕಲಬುರಗಿ ಕೋಟೆ ವೀಕ್ಷಿಸಿದ ನಿರಾಣಿ

    ಕಳೆದ ಐದು ವರ್ಷಗಳಿಂದ ಈ ಗ್ರಾಮದಲ್ಲಿ ಭೂಮಿಯಿಂದ ಕಂಪಿಸುವ ಶಬ್ದ ಅನೇಕ ಬಾರಿ ಕೇಳಿ ಬಂದ ಪರಿಣಾಮ, ಇಲ್ಲಿ ರಿಕ್ಟರ್ ಮಾಪನ ಸಹ ಕೆಲ ವರ್ಷಗಳ ಹಿಂದೆ ಅಳವಡಿಸಿದ್ದರು. ಆದರೆ ರಿಕ್ಟರ್ ಮಾಪನದಲ್ಲಿ ಇಲ್ಲಿಯವರೆಗೆ ಭೂಕಂಪದ ಬಗ್ಗೆ ಯಾವುದೇ ದಾಖಲಾಗಿಲ್ಲ. ಹೀಗಾಗಿ ಇದು ವಿಜ್ಞಾನಿಗಳಿಗೆ ದೊಡ್ಡ ತಲೆ ನೋವಾಗಿದೆ. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

  • ಮಂಗಗಳ ಹಾವಳಿಗೆ ತತ್ತರಿಸಿದ ರಾಯಚೂರಿನ ಗ್ರಾಮ – ಮನೆಗೆ ಬೀಗ ಹಾಕಿಕೊಂಡು ಕುಳಿತ ಜನ

    ಮಂಗಗಳ ಹಾವಳಿಗೆ ತತ್ತರಿಸಿದ ರಾಯಚೂರಿನ ಗ್ರಾಮ – ಮನೆಗೆ ಬೀಗ ಹಾಕಿಕೊಂಡು ಕುಳಿತ ಜನ

    ರಾಯಚೂರು: ತಾಲೂಕಿನ ಪಲವಲದೊಡ್ಡಿ ಗ್ರಾಮದ ರಸ್ತೆಗಳಲ್ಲಿ ಮನುಷ್ಯರು ಕಾಣದಿದ್ದರೂ ಕೋತಿಗಳು ಮಾತ್ರ ಕಣ್ಣಿಗೆ ಬಿದ್ದೇ ಬೀಳುತ್ತಿದ್ದು, ಜನ ಮಂಗಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಕೋತಿಗಳಿಗೆ ಹೆದರಿ ಜನ ಮನೆ ಬಾಗಿಲು ಹಾಕಿಕೊಂಡು ಕುಳಿತಿದ್ದಾರೆ. ಕಳೆದ ಒಂದು ತಿಂಗಳಿಂದ ಅದೆಲ್ಲಿಂದಲೋ ಬಂದ ಕೋತಿಗಳು ಗ್ರಾಮಸ್ಥರನ್ನೇ ಊರು ಬಿಡುವಂತೆ ಮಾಡುತ್ತಿವೆ. ರಾಯಚೂರಿನ ಈ ಊರಲ್ಲಿ ಮನೆಗೊಂದು ಕೋತಿ ಇವೆ.

    ಪಲವಲದೊಡ್ಡಿ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ. ಅಂದಾಜು ಅಷ್ಟೇ ಪ್ರಮಾಣದ ಕೋತಿಗಳು ಗ್ರಾಮದಲ್ಲಿದ್ದು ಗ್ರಾಮಸ್ಥರನ್ನ ರಸ್ತೆಯಲ್ಲಿ ನಿರಾತಂಕವಾಗಿ ಓಡಾಡದಂತೆ ಮಾಡಿವೆ. ಮನೆ ಬಾಗಿಲು ತೆರೆದಿಟ್ಟರೆ ಮನೆಯೊಳಗೆ ನುಗ್ಗಿ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುತ್ತವೆ. ಮಕ್ಕಳು ಆಟವಾಡುತ್ತಿದ್ದರೆ ಕೈಯಲ್ಲಿದ್ದ ವಸ್ತುಗಳನ್ನ ಕಸಿದುಕೊಂಡು ಹೋಗುತ್ತವೆ. ಮಕ್ಕಳು ವಸ್ತು ಕೊಡದೆ ಗಲಾಟೆ ಮಾಡಿದರೆ ಪರಚಿ ಹೆದರಿಸುತ್ತವೆ. ಹೀಗಾಗಿ ಗ್ರಾಮದಲ್ಲಿ ವಯೋವೃದ್ದರು, ಮಕ್ಕಳು ಓಡಾಡದಂತಾಗಿದೆ. ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಒಂದೂ ಮಂಗ ಇರಲಿಲ್ಲ. ಏಕಾಏಕಿ ವಾನರ ಸೈನ್ಯ ಗ್ರಾಮಕ್ಕೆ ಲಗ್ಗೆ ಇಟ್ಟಿದೆ. ಯಾರೋ ಈ ಎಲ್ಲಾ ಕೋತಿಗಳನ್ನ ಬಿಟ್ಟು ಹೋಗಿರಬೇಕು ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಗ್ರಾಮ ಪಂಚಾಯತಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೇವಲ ಪರಿಶೀಲನೆ ಮಾಡಿ ಹೋಗಿರುವ ಅಧಿಕಾರಿಗಳು ಮಂಗಗಳನ್ನ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಗ್ರಾಮದಲ್ಲಿ ಸುಮಾರು ಜನರಿಗೆ ಕಚ್ಚಿರುವ ಕೋತಿಗಳು, ಜನರ ನೆಮ್ಮದಿಯನ್ನೆ ಕೆಡಿಸಿವೆ. ಕೋತಿಗಳ ಕಾಟಕ್ಕೆ ಜನರೇ ಗ್ರಾಮವನ್ನ ಬಿಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಯಚೂರು ನಗರಸಭೆಯಿಂದ ರಿಮ್ಸ್‌ಗೆ 2ಡಿ ಎಕೋ ಯಂತ್ರ ದೇಣಿಗೆ

    ಒಟ್ನಲ್ಲಿ, ಎಲ್ಲಿಂದಲೋ ಬಂದು ಸೇರಿರುವ ಅತಿಥಿಗಳು ಇಡೀ ಊರನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ದಿನ ಬೆಳಕು ಹರಿಯುವುದರೊಳಗೆ ಏನಾದರೊಂದು ಅವಾಂತರವಾಗಿರುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಕೋತಿಗಳನ್ನ ಹಿಡಿದು ಸ್ಥಳಾಂತರಿಸಬೇಕಿದೆ. ಇದನ್ನೂ ಓದಿ: ಮಾಸ್ಕ್ ಧರಿಸದೇ ಜನರ ಓಡಾಟ- ದಾಂಡೇಲಿಯಲ್ಲಿ 1,02,800 ರೂ. ದಂಡ ವಸೂಲಿ

  • ಮನೆ ಬೀಗ ಮುರಿದು ಕಳ್ಳತನ – ಆರೋಪಿಗಳು ಅರೆಸ್ಟ್

    ಮನೆ ಬೀಗ ಮುರಿದು ಕಳ್ಳತನ – ಆರೋಪಿಗಳು ಅರೆಸ್ಟ್

    ಬಳ್ಳಾರಿ: ಮನೆ ಬೀಗ ಮುರಿದು ಕಳ್ಳತನ ಮಾಡುತಿದ್ದ, ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

    ಶ್ರೀಕಾಂತ್ (26) ರೇಣುಕಪ್ಪ ( 24) ಗಾದೆಪ್ಪ (33) ಬಂಧಿತ ಆರೋಪಿಗಳಾಗಿದ್ದಾರೆ. ಹಲವಾರು ದಿನಗಳಿಂದ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಕಳ್ಳರನ್ನು ಪೊಲೀಸರು ಬಂಧನ ಮಾಡಿದ್ದಾರೆ.

    ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 7,63,000 ಬೆಲೆಯ ಸುಮಾರು 21 ತೊಲೆ 2 ಗ್ರಾಮ ಬಂಗಾರದ ಆಭರಣ ಮತ್ತು 10,5000 ನಗದು ಹಣವನ್ನು ದೋಚಿದ್ದಾರೆ. ಹಾಗೇ ಬಾದನಹಟ್ಟಿ ಗ್ರಾಮದಲ್ಲಿ  ಮನೆಯ ಬೀಗ ಮುರಿದು 4,37,500 ಬೆಲೆಯ ಬೆಳ್ಳಿ ಹಾಗೂ 12  ತೊಲೆಯ ತೂಕದ ಬಂಗಾರ ಆಭರಣಗಳು ಹಾಗೂ 1,50,000 ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಇದನ್ನೂ ಓದಿ:  ನನಗೆ ಇಂತಹದ್ದೇ ಖಾತೆ ಬೇಕು ಅಂತ ಕೇಳುವುದು ನನ್ನ ಧರ್ಮ: ಆನಂದ್ ಸಿಂಗ್

    ಈ ಪ್ರಕರಣವನ್ನು ಕುರುಗೋಡು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

  • ತಗ್ಗದ ಕೃಷ್ಣೆಯ ಅಬ್ಬರ- ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ

    ತಗ್ಗದ ಕೃಷ್ಣೆಯ ಅಬ್ಬರ- ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ

    ರಾಯಚೂರು: ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕೃಷ್ಣಾ ನದಿಯ (Krishna River) ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಕ್ಷಣ ಕ್ಷಣಕ್ಕೂ ಪ್ರವಾಹದ ಆತಂಕ ಹೆಚ್ಚುತ್ತಲೇ ಇದ್ದು, ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಐತಿಹಾಸಿಕ ಅಲ್ಲಮಪ್ರಭು ದೇವಾಲಯ ಸಂಪೂರ್ಣ ಜಲಾವೃತವಾಗಿದೆ.

    ದೇವಾಲಯ ಬಳಿಯ ಹೋಟೆಲ್‍ಗಳಿಗೆ ನೀರು ನುಗ್ಗಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಬಳಿಯ ಮೀನುಗಾರರ ಬದುಕು ಅತಂತ್ರವಾಗಿದೆ. ಇಲ್ಲಿನ ಕಲ್ಯಾಣ ಮಂಟಪ, ರಥ ಸಂಪೂರ್ಣ ಜಲಾವೃತವಾಗಿವೆ. ಕೃಷ್ಣೆಯ ಪ್ರವಾಹದಿಂದಾಗಿ ರಾಯಚೂರು, ಲಿಂಗಸುಗೂರು ತಾಲೂಕಿನ ನಡುಗಡ್ಡೆ ನಿವಾಸಿಗಳು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಸೀರೆ ಎಳೆದವನಿಗೆ ಬಿತ್ತು ಧರ್ಮದೇಟು

    ಪ್ರವಾಹದಿಂದ ಈಗಾಗಲೇ ಜಿಲ್ಲೆಯ ಶೀಲಹಳ್ಳಿ, ಹೂವಿನ ಹೆಡಗಿ ಹಾಗೂ ಗುರ್ಜಾಪೂರ ಸೇತುವೆ ಮುಳುಗಡೆಯಾಗಿವೆ. ಜಿಲ್ಲೆಯ ಪ್ರವಾಹ ಪೀಡಿತ ಮೂರು ತಾಲೂಕುಗಳ ಐದಾರು ದೇವಸ್ಥಾನಗಳು ಸಂಪೂರ್ಣ ಜಲಾವೃತವಾಗಿವೆ. ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗುವ ಮುನ್ಸೂಚನೆ ಹಿನ್ನೆಲೆ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕವು ಹೆಚ್ಚಾಗಿದೆ.

    ನಾರಾಯಣಪುರ ಜಲಾಶಯದಿಂದ 30 ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜಲಾಶಯದಿಂದ ಕೃಷ್ಣಾ ನದಿಗೆ 4.14 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯಕ್ಕೆ 4.20 ಲಕ್ಷ ಒಳಹರಿವು ಇದೆ. ಶೇಕಡಾ 64.67 ರಷ್ಟು ಜಲಾಶಯ ಭರ್ತಿಯಾಗಿದೆ.

  • ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾ.ಪಂ ಪಿಡಿಓ ಶ್ರೀನಿವಾಸ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮನೆಯ ಇ-ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಗ್ರಾಮದ ಗುರುಶಾಂತಪ್ಪ ಎಂಬುವರ ಬಳಿ ಪಿಡಿಓ ಶ್ರೀನಿವಾಸ್ ಅವರು, 2ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ, ತಮ್ಮ ಕೆಲಸ ಮಾಡಿಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಇಂದು ಪಿಡಿಓ ಸಾಹೇಬ್ರು ಲಂಚ ಸ್ವೀಕರಿಸುವ ವೇಳೆ  ಗ್ರಾಮಪಂಚಾಯ್ತಿ ಕಚೇರಿ ಮೇಲೆ ಎಸಿಬಿ ಎಸ್ ಐ ಪ್ರವೀಣ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿನಡೆಸಿದ್ದು, ಶ್ರೀನಿವಾಸ್‍ನನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

    ಭ್ರಷ್ಟಚಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಹಲವು ತಂತ್ರಜ್ಞಾನಗಳನ್ನು ಜಾರಿಗೊಳಿಸಿದೆ. ಆದರೂ ಅಧಿಕಾರಿಗಳು ಮಾತ್ರ ಅವರ ಕೈ ಕಸುಬನ್ನು ಬಿಟ್ಟಿಲ್ಲ, ಇದಕ್ಕೆ ತಾಜಾ ಉಧಾಹರಣೆಈ ಘಟನೆಯಾಗಿದೆ.

  • ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಬೆಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಗ್ರಾಮಗಳಿಗೆ ಕನ್ನಡ ಹೆಸರು ತೆಗೆದು ಮಲೆಯಾಳಂ ಹೆಸರು ಮರು ನಾಮಕರಣ ಮಾಡಿರುವ ಕೇರಳ ಸರ್ಕಾರದ ನಿರ್ಧಾರವನ್ನ ಹಿಂಪಡೆಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರನ್ನ ಬದಲಿಸದಂತೆ ಮನವಿ ಮಾಡಿದ್ದಾರೆ.

    ಕನ್ನಡ ಪರಿಮಳವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೆಲವು ಗ್ರಾಮಗಳನ್ನು ಮಲಯಾಳಂ ಹೆಸರು ಮರುನಾಮಕರಣ ಮಾಡಲು ಕೇರಳ ಸರ್ಕಾರದ ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು. ಇದು ಸರಿಯಿದ್ದರೂ, ಭಾಷಾ ಸಾಮರಸ್ಯದ ಹೆಸರಿನಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ. ಕರ್ನಾಟಕದೊಂದಿಗೆ ಈ ಭಾಗದ ಜನರಿಗೆ ದಶಕಗಳಿಂದ ಉತ್ತಮ ಭಾಂದವ್ಯವಿದೆ. ಮತ್ತು ಈ ಪ್ರದೇಶದ ಜನರು ಯಾವಾಗಲೂ ಪರಸ್ಪರರ ಭಾಷಾ ಪರಂಪರೆಗೆ ಅನುಗುಣವಾಗಿರುತ್ತಾರೆ. ಅದು ಸಾಂಸ್ಕೃತಿಕ ಸಹಬಾಳ್ವೆಯಾಗಿದೆ.

    ಈ ಸಂಪ್ರದಾಯವನ್ನು ಮುಂದುವರಿಸ ಬೇಕಾಗಿದೆ. ಹೆಸರು ಬದಲಾವಣೆಯು ಅರ್ಥದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಹಳ್ಳಿಯ ಹೆಸರುಗಳು ಮೂಲ ಕನ್ನಡ ಪರಿಮಳವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುವುದು ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಪತ್ರದ ಮೂಲಕ ಹೆಸರು ಮರುನಾಮಕರಣ ಮಾಡದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್