Tag: ಗ್ರಾಮ

  • ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿ – ಸವಾರನನ್ನು ಒದ್ದು ಕೊಂದ ಕಿರಾತಕ

    ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿ – ಸವಾರನನ್ನು ಒದ್ದು ಕೊಂದ ಕಿರಾತಕ

    ಬೆಳಗಾವಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿಗೊಂಡ ಬಳಿಕ ಬೈಕ್ ಸವಾರನನ್ನು ಕಾಲಿನಿಂದ ಒದ್ದು ಹಲ್ಲೆ ನಡೆಸಿ ಕೊಂದ ಅಮಾಯಕ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ಚೌಕಿ ಕ್ರಾಸ್ ಬಳಿ ನಡೆದಿದೆ.

    ವಿಜಯ ಮಹಾಂತೇಶ್ ಹಿರೇಮಠ್ (67) ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದರಿಂದ ಆಕ್ರೋಶಗೊಂಡ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದ ಅದೃಶ್ಯ ಎಂಬಾತ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲೂ ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ? – ಎಎಪಿ ಪ್ರಶ್ನೆ

    ಹಲ್ಲೆಯಿಂದ ಗಾಯಗೊಂಡ ಮಹಾಂತೇಶ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಿತ್ತೂರು ಪೊಲೀಸರು ಹಲ್ಲೆ ನಡೆಸಿದ ಅದೃಶ್ಯನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್‌

  • ಶಾಸಕರೇ ನಿಮ್ಮ ಪಾದಪೂಜೆ ಮಾಡ್ತೀವಿ ರಸ್ತೆ ಮಾಡಿ- ಗ್ರಾಮಸ್ಥರ ವಿನೂತನ ಪ್ರತಿಭಟನೆ

    ಶಾಸಕರೇ ನಿಮ್ಮ ಪಾದಪೂಜೆ ಮಾಡ್ತೀವಿ ರಸ್ತೆ ಮಾಡಿ- ಗ್ರಾಮಸ್ಥರ ವಿನೂತನ ಪ್ರತಿಭಟನೆ

    ನೆಲಮಂಗಲ: ಶಾಸಕರೇ ನಿಮ್ಮ ಪಾದಪೂಜೆ ಮಾಡ್ತೀವಿ ದಯಮಾಡಿ ರಸ್ತೆ ಮಾಡಿಕೊಡಿ ಎಂದು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತೊರಪಾಳ್ಯ ಗ್ರಾಮದ ಗ್ರಾಮಸ್ಥರು, ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

    ಇಂದು ನೆಲಮಂಗಲ ತಾಲೂಕಿನ ತೊರಪಾಳ್ಯ ಗ್ರಾಮಸ್ಥರು ರಸ್ತೆಯಲ್ಲಿ ಹೂ ಗಿಡ ನೆಟ್ಟು ಪೂಜೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ನೆಲಮಂಗಲ ತಾಲೂಕಿನಿಂದ ಕೇವಲ 7 ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ, ಇಂದಿಗೂ ಸಹ ರಸ್ತೆಯಿಲ್ಲದೆ ಜನರು ಪರದಾಡುತ್ತಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು ಗ್ರಾಮಸ್ಥರು ಓಡಾಡಲು ಕೂಡ ಕಷ್ಟವಾಗಿದೆ ಈ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ರಸ್ತೆ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಕಿ ಕ್ಯಾಪ್ ಧರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗ್ರಾಮಸ್ಥರು, ನಾವು ನಮ್ಮ ಮೊಮ್ಮಕ್ಕಳನ್ನು ಕಂಡರೂ ನಮ್ಮೂರಿನ ರಸ್ತೆಗೆ ಡಾಂಬರು ಕಾಣಲಿಲ್ಲ. ಈ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚು ಮಳೆ ಬಂದಾಗಲಂತೂ ನಿತ್ಯ ನರಕ ದರ್ಶನವಾಗುತ್ತದೆ. ಕೂಡಲೇ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಸಾಹೇಬರು ಇತ್ತ ಗಮನವರಿಸಿ ಗ್ರಾಮಸ್ಥರ ನೆರವಿಗೆ ನಿಂತು ರಸ್ತೆ ಅಭಿವೃದ್ಧಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಫೇಸ್ ಕ್ರೀಮ್‍ನಲ್ಲಿ ಚಿನ್ನ ಸಾಗಾಟ ಮಾಡಿ ಪೊಲೀಸರ ಬಲೆಗೆ ಬಿದ್ದ

  • ಕಲಬುರಗಿಯ ಎರಡು ಗ್ರಾಮಗಳಲ್ಲಿ ಮತ್ತೆ ಭೂಕಂಪನ

    ಕಲಬುರಗಿಯ ಎರಡು ಗ್ರಾಮಗಳಲ್ಲಿ ಮತ್ತೆ ಭೂಕಂಪನ

    ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ಮತ್ತೆ ಲಘು ಭೂಕಂಪನ ಅನುಭವ ಆಗಿದೆ.

    ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಆಗಿದ್ದು, ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ.

    ನಿನ್ನೆ ಕೂಡಾ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬಾರಿ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನ ಅನುಭವ ಆಗುತ್ತಿದೆ. ಇದನ್ನೂ ಓದಿ: RSS ಆನೆ ಇದ್ದಂತೆ, ಅಕ್ಕ-ಪಕ್ಕದವರಿಗೆ ತಲೆಕೆಡಿಸಿಕೊಳ್ಳಲ್ಲ: ಸಿ.ಟಿ.ರವಿ

    ಕೂಡಲೇ ಸರ್ಕಾರ ಗ್ರಾಮದಲ್ಲಿ ಭೂಕಂಪದ ಆಗುತ್ತಿರುವುದರ ನಿಖರ ಮಾಹಿತಿ ತಿಳಿಸಬೇಕು. ಒಂದು ವೇಳೆ ಭೂಕಂಪ ಕೇಂದ್ರ ಸ್ಥಾನ ಆಗಿದ್ದರೆ ಎರಡು ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ:   ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ

  • ಮಂಡ್ಯದಲ್ಲಿ 20 ಮೇಕೆಗಳ ನಿಗೂಢ ಸಾವು

    ಮಂಡ್ಯದಲ್ಲಿ 20 ಮೇಕೆಗಳ ನಿಗೂಢ ಸಾವು

    ಮಂಡ್ಯ: ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಮೇಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪಾಲಹಳ್ಳಿ ಗ್ರಾಮದಲ್ಲಿ ಆಡುಗಳನ್ನು ಸಾಕಿ ಜೀವನ ಸಾಗಿಸುತ್ತಿದ್ದ, ಶ್ರೀನಿವಾಸು ಅವರಿಗೆ ಸೇರಿದ ಈ ಮೇಕೆಗಳು ಇಂದು ಬೆಳಿಗ್ಗೆ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನೆನ್ನೆ ಸಂಜೆ ಮೇಕೆಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಗೆ ಕೂಡಿ ಹಾಕಲಾಗಿತ್ತು. ಇದನ್ನೂ ಓದಿ:  ಫಟಾಫಟ್ ಅಂತ ಮಾಡಿ ಬಿಸಿ ಬಿಸಿಯಾದ ಅನ್ನದ ಪಕೋಡ

    ಮೇಕೆಗಳ ನಿಗೂಢ ಸಾವಿನಿಂದ ಮೇಕೆಗಳನ್ನು ಸಾಕಿದ್ದ ವ್ಯಕ್ತಿ ಕಂಗಾಲಾಗಿದ್ದು, ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಷದ ಪದಾರ್ಥ ತಿಂದು ಸಾವನ್ನಿಪ್ಪಿರಬೇಕೆಂದು ಶಂಕಿಸಿದ್ದಾರೆ.

  • ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು ನೀಡಿರುವ ಘಟನೆ ನಡೆದಿದೆ.

    ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. 20 ವರ್ಷದ ಲಾಲನ್ ಕುಮಾರ್ ಸಫೀ ಈ ಷರತ್ತಿನನ್ವಯ ಜಾಮೀನು ಪಡೆದಿದ್ದಾನೆ. ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜೆಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿ ಸರಿಸುಮಾರು 2000 ಮಹಿಳೆಯರು ಇದ್ದಾರೆ. ಇದನ್ನೂ ಓದಿ: ಸಾಮಾನ್ಯ ಶೀತವಾಗಲಿದೆ ಕೊರೊನಾ ವೈರಸ್ – ತಜ್ಞರ ಭವಿಷ್ಯ

    ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ಧೋಬಿಯಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ 2021 ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು. ಲಾಲನ್ ಕುಮಾರ್ ಷರತ್ತು ಜಾರಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕೋರ್ಟಿನ ತೀರ್ಮಾನವು ಗ್ರಾಮದ ಎಲ್ಲ ಮಹಿಳೆಯರಿಗೆ ಸಂತಸ ತಂದಿದೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧಿಕಾರಿಯಾದ ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.

    ಗ್ರಾಮ ಪರಿಷತ್‍ನ ಮುಖ್ಯಸ್ಥೆಯಾಗಿರುವ ನಸೀಮಾ ಖತೂನ್. ಇದು ಐತಿಹಾಸಿಕ ನಿರ್ಧಾರ. ಮಹಿಳೆಯರ ಬಗೆಗಿನ ಗೌರವ ಹೆಚ್ಚಿಸಲಿದೆ ಎಂದಿದ್ದಾರೆ. ಈ ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ. ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಅಂಜುಂ ಪರ್ವೀನ್ ಹೇಳಿದರು.

    ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. 2020ರಲ್ಲಿ 28,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

  • ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪಗಡೆಕಲ್ಲಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ನಾಗರೀಕರ ದಾಖಲೆಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿ, ಬೇರೆ ಗ್ರಾಮದ ಹೆಸರು ಬರುತ್ತಿದ್ದು, ಇದರಿಂದ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ 50 ಕುಟುಂಬಗಳಿದ್ದು, 250 ಮಂದಿ ಮತದಾರರಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿರುವ ಎಲ್ಲ ನಾಗರೀಕರ ಪಡಿತರ ಚೀಟಿ, ಮತದಾರರ ಚೀಟಿ, ಇ-ಸ್ವತ್ತು ಹಾಗೂ ಜಾತಿ, ಆದಾಯ ದೃಢೀಕರಣ ಪತ್ರ, ನರೇಗಾ ಜಾಬ್ ಕಾರ್ಡ್ ಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿದೆ. ಪಕ್ಕದ ಕನಗೋನಹಳ್ಳಿ ಗ್ರಾಮದ ಹೆಸರು ಬರುತ್ತಿದೆ ಎಂದರು. ಇದನ್ನೂ ಓದಿ: ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಬೇರೆ ಗ್ರಾಮದ ಹೆಸರು ಬರುತ್ತಿರುವುದರಿಂದ ರೈತರು, ವಿದ್ಯಾರ್ಥಿಗಳು, ಬಡವರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಶಾಲಾ ದಾಖಲಾತಿಗಳಲ್ಲಿ ಮಾತ್ರ ಪಗಡೆಕಲ್ಲಹಳ್ಳಿ ಎಂದು ತೋರಿಸಲಾಗಿದೆ. ಉಳಿದ ದಾಖಲಾತಿಗಳಲ್ಲಿ ಬೇರೆ ಗ್ರಾಮದ ಹೆಸರು ಬರುತ್ತಿದೆ ಎಂದು ಅಳಲು ತೋಡಿಕೊಂಡರು.

    ಈ ಬಗ್ಗೆ ಪಾಂಡವಪುರ ತಾಲೂಕು ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮ ತುಂಬಾ ಹಿಂದುಳಿದಿದ್ದು, ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ರಸ್ತೆಗಳು ಕಲ್ಲು, ಮಣ್ಣಿನಿಂದ ಕೂಡಿದ್ದು, ಓಡಾಡಲು ತೊಂದರೆಯಾಗಿದೆ. ಒಳಚರಂಡಿಗಳು ಆಗಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡು ಗ್ರಾಮದ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

  • ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

    ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

    ದಾವಣಗೆರೆ: ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ, ಅದರೂ ಕೂಡ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಹೆಚ್ ರಾಮಪುರ ಗ್ರಾಮಕ್ಕೆ ಇಂದಿಗೂ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಹೀಗೆ ಹಲವಾರು ಸಮಸ್ಯೆಯನ್ನು ಕಂಡು ಬೇಸತ್ತ ಈ ಗ್ರಾಮದ ಯುವತಿಯೊಬ್ಬಳು ದಿಟ್ಟತನ ಪ್ರದರ್ಶನ ಮಾಡಿದ್ದು, ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದು ನಮ್ಮ ಊರಿನ ರಸ್ತೆ ಆಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪತ ಮಾಡಿದ್ದಾಳೆ.

    ರಾಂಪುರ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿಲೋ ಮೀಟರ್ ದೂರವಿದ್ದರೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 6 ಕಿಲೋ ಮೀಟರ್ ದೂರವಷ್ಟೇ ಇದೆ. ಆದರೂ ಈ ಊರು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ. ಈ ಊರಲ್ಲಿ ಯುವತಿಯರು ಶಾಲಾ-ಕಾಲೇಜ್‍ಗೆ ಹೋಗಬೇಕೆಂದರೆ ನಡೆದುಕೊಂಡೆ ಹೋಗಬೇಕು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದು ಶಾಲಾ-ಕಾಲೇಜ್‍ಗೆ ತೆರಳಬೇಕಾದ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಈ ಗ್ರಾಮಕ್ಕೆ ಇನ್ನೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಬಸ್ ಇಲ್ಲದ ಕಾರಣ ಗ್ರಾಮದಲ್ಲಿ ಎಷ್ಟೋ ಯುವತಿಯರು ವಿದ್ಯಾಭ್ಯಾಸವನ್ನೇ ಮೊಟುಕುಗೊಳಿಸಿದ್ದಾರೆ. ಇದರಿಂದ ಬಾಲ್ಯ ವಿವಾಹ ಕೂಡ ಹೆಚ್ಚಾಗುತ್ತಿವೆ. ವಿಪರ್ಯಾಸವೆಂದರೆ ಓದುವ ಆಸೆಯಿದ್ದರು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂಬ ಕಾರಣ ಮಹಿಳೆಯರು ಮನೆಯಲ್ಲೇ ಕೂರುವಂತಾಗಿದೆ. ಇದರಿಂದ ಈ ಊರಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ಈ ಎಲ್ಲಾ ಸಮಸ್ಯೆಗಳನ್ನ ಗ್ರಾಮದ ಬಿಂದು ಎಂಬ ಯುವತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರ ಬರೆದಿದ್ದಾರೆ. ತಮ್ಮ ಗ್ರಾಮದ ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದು, ಅಲ್ಲದೆ ಗ್ರಾಮಕ್ಕೆ ರಸ್ತೆ ಆಗುವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ.

    ರಾಜಕಾರಣಿಗಳು ಚುನಾವಣೆ ಮಾತ್ರ ಬರುತ್ತಾರೆ ನಂತರ ಯಾರು ಬರಲ್ಲ ಎಂದು ಅಳಲು ತೋಡಿಕೊಂಡಿರುವ ಗ್ರಾಮಸ್ಥರು, ಮಕ್ಕಳನ್ನ ಹೆಚ್ಚು ಓದಿಸಬೇಕೆಂದು ಆಸೆ ಇದೆ ಆದರೆ, ಬಸ್ ಹಾಗೂ ರಸ್ತೆ ವ್ಯವಸ್ಥೆ ಇಲ್ಲ ಎಂಬ ಕಾರಣ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಬೇಕಾದ ಅನಿವಾರ್ಯವಿದೆ ಮೊಬೈಲ್ ಟವರ್, ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಇದಲ್ಲದೆ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಪಡೆಯಲು 12 ಕಿಲೋಮೀಟರ್ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಊರಿಗೆ ಬೇರೆ ಗ್ರಾಮದಿಂದ ಯಾರು ಕೂಡ ಹುಡುಗರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಹಾಗೂ ಇಲ್ಲಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗುತ್ತಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

    ಬಿಂದು ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ಸಿಎಂ ಕೂಡ ಅವರ ಪತ್ರಕ್ಕೆ ಸ್ಪಂದಿಸಿದ್ದು ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಅಧಿಕೃತ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ ಬುಡಕಟ್ಟು ಜನಾಂಗದ ನಾಲ್ವರು

  • ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಪುತ್ರ

    ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಪುತ್ರ

    ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಪಾಪಿ ಪುತ್ರನೋರ್ವ ಜನ್ಮ ನೀಡಿದ ತಾಯಿಯನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ತಾಲೂಕಿನ ಬುಳ್ಳಾಪುರದಲ್ಲಿ ನಡೆದಿದೆ.

    ವನಜಾಕ್ಷಿ ಬಾಯಿ (45) ಕೊಲೆಯಾದ ಮಹಿಳೆಯಾಗಿದ್ದಾರೆ. ಆರೋಪಿ ದೇವರಾಜ್ (27) ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ.

    ಪ್ರತಿದಿನ ಕುಡಿದು ಬಂದು ತನ್ನ ತಂದೆ ಲೋಕೇಶ್ ನಾಯ್ಕ, ತಾಯಿ ವನಜಾಕ್ಷಿ ಜೊತೆ ಜಗಳವಾಡುತ್ತಿದ್ದನು. ಮಗನ ಕಾಟಕ್ಕೆ ಅಪ್ಪ ಅಮ್ಮಇಬ್ಬರು ಬೇಸತ್ತು ಹೋಗಿದ್ದರು. ಅವನ ಸಹವಾಸವೇ ಬೇಡ ಎಂದುಕೊಂಡಿದ್ದರು. ಆದರೆ ದೇವರಾಜ್ ಮಾತ್ರ ಪ್ರತಿದಿನ ಹೆತ್ತವರನ್ನು ಹಿಂಸಿಸುತ್ತಿದ್ದನು. ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

    ಸೋಮವಾರ ರಾತ್ರಿ ಸಹ ಎಂದಿನಂತೆ ಕುಡಿದು ಬಂದು ತಾಯಿ ವನಜಾಕ್ಷಿ ಬಾಯಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಈ ವೇಳೆ ತನ್ನ ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಕಪಾಳಕ್ಕೆ ಹೊಡೆಯುತ್ತಿದ್ದಂತೆ ತಾಯಿ ನೆಲಕ್ಕೆ ಬಿದ್ದಿದ್ದಾಳೆ. ಆದರೂ ಬಿಡದ ಪಾಪಿ ಪುತ್ರ ತಾಯಿಯ ಕುತ್ತಿಗೆಯನ್ನು ಕಾಲಲ್ಲಿ ತುಳಿದಿದ್ದಾನೆ. ಕ್ಷಣಾರ್ಧದಲ್ಲೇ ವನಜಾಕ್ಷಿ ಬಾಯಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ಭೀಕರ ಅಪಘಾತ

    ಮಗನೇ ವನಜಾಕ್ಷಿ ಬಾಯಿಯನ್ನು ಕೊಲೆ ಮಾಡಿರುವ ಬಗ್ಗೆ ಲೋಕೇಶ್ ನಾಯ್ಕ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ದೇವರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ.

  • ಗದಗ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

    ಗದಗ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

    ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂದು ರಾತ್ರಿ 8:25 ರ ಸುಮಾರಿಗೆ ಲಘು ಭೂಕಂಪನವಾಗಿದೆ.

    ಭೂಮಿ 2 ಕ್ಷಣ ಕಂಪಿಸಿದಾಗ ಗ್ರಾಮಸ್ಥರು ಭಯದಿಂದ ಹೊರಗಡೆ ಓಡಿ ಬಂದಿದ್ದಾರೆ. ಸುಮಾರು 5 ರಿಂದ 10 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ: ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್ ಶಾ

    ಮನೆಯ ಪಾತ್ರೆ ಕೆಲವು ವಸ್ತುಗಳು ಕೆಳಗೆ ಬಿದ್ದಿವೆ. ಜನತೆ ಮೊದಲು ಗಣಪತಿ ವಿಸರ್ಜನೆಯ ಪಟಾಕಿಯ ಸದ್ದು ಎಂದು ತಿಳಿದಿದ್ದರು. ಆದರೆ ಗ್ರಾಮದ ಬಹುತೇಕ ಕಡೆಗಿನ ಜನರು ಹೊರಗಡೆ ಬಂದು ಅನುಭವ ಹಂಚಿಕೊಂಡಾಗಲೆ ಇದು ಭೂಕಂಪನ ಎಂದು ತಿಳಿದಿದೆ. ಇದರಿಂದ ಗ್ರಾಮಸ್ಥರು ಭಯ ಭೀತಗೊಂಡಿದ್ದಾರೆ.

  • ಒಂದೇ ಗ್ರಾಮದ 51 ಜನರಿಗೆ ಕೊರೊನಾ ಪಾಸಿಟಿವ್- ಗ್ರಾಮಸ್ಥರಲ್ಲಿ ಆತಂಕ

    ಒಂದೇ ಗ್ರಾಮದ 51 ಜನರಿಗೆ ಕೊರೊನಾ ಪಾಸಿಟಿವ್- ಗ್ರಾಮಸ್ಥರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದರೂ, ಇಲ್ಲೊಂದು ಗ್ರಾಮದಲ್ಲಿ 51 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ ಮೂಲಕ ಇಡೀ ಗ್ರಾಮ ಸೀಲ್ ಡೌನ್ ಆಗುವಂತಾಗಿದೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜನಗೇರಿಯಲ್ಲಿ 25 ಕ್ಕೂ ಹೆಚ್ಚು ಕುಟುಂಬಗಳ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಷ್ಟಕ್ಕೂ ಕಾಫಿತೋಟ ಬಿಟ್ಟು ಎಲ್ಲೂ ಹೊರ ಹೋಗದೆ, ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಜನರಿಗೆ ಸೋಂಕು ಹರಡಿರುವುದೇ ಅಚ್ಚರಿಯ ವಿಷಯವಾಗಿದೆ. ಆದರೆ ಬೆಟ್ಟಗೇರಿ ಕಾಫಿ ಎಸ್ಟೇಟ್ ನಲ್ಲಿರುವ ಬಿಜನಮೊಟ್ಟೆ ಬ್ರಾಂಚಿನಲ್ಲಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಹರಡಿತ್ತು. ಮಡಿಕೇರಿಯ ಕಾಲೇಜಿಗೆ ಹೋಗುತ್ತಿದ್ದವರಿಗೆ ಮೊದಲು ಸೋಂಕು ಕಂಡುಬಂದಿತ್ತು. ಬಳಿಕ ಬಿಜನಮೊಟ್ಟೆ ಎಸ್ಟೇಟ್ ಗೆ ಕೂಲಿ ಕೆಲಸಕ್ಕೆ ಹೋಗಿದ್ದ 15 ಮಂದಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು. ಇವರೆಲ್ಲರಿಗೂ ಸೋಂಕಿನ ಲಕ್ಷಣಗಳಿದ್ದರೂ ಇತ್ತೀಚೆಗೆ ಗ್ರಾಮದಲ್ಲಿ ಮೃತಪಟ್ಟಿದ್ದ ವೃದ್ದರೊಬ್ಬರ ಸಾವಿಗೆ ಹೋಗಿದ್ದಾರೆ. ಇದರಿಂದಾಗಿ ಗ್ರಾಮದ 51 ಜನರಿಗೆ ಸೋಂಕು ವ್ಯಾಪಿಸಿದೆ. ಇದನ್ನೂ ಓದಿ: ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ವಿದ್ಯಾರ್ಥಿಗಳಿಗೆ ಮೊದಲು ಪಾಸಿಟಿವ್ ಬಂದ ಪರಿಣಾಮವಾಗಿ ಅನುಮಾನಗೊಂಡು ಅಂಜನಗೇರಿಯ 300 ಕ್ಕೂ ಹೆಚ್ಚು ಜನರಿಗೆ ಕೋವಿಡ್ ತಪಾಸಣೆ ಮಾಡಿದ್ದಾರೆ. ಈ ವೇಳೆ 51 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಇದನ್ನೂ ಓದಿ: ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!