Tag: ಗ್ರಾಮ ಲೆಕ್ಕಿಗ

  • ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಬೆಂಗಳೂರು: ರಾಜ್ಯ ಸರ್ಕಾರವನ್ನ 40% ಕಮಿಷನ್ ಸರ್ಕಾರ ಅಂತಾ ಕಾಂಗ್ರೆಸ್ ಪಕ್ಷ ಟೀಕೆಗಳ ಮೇಲೆ ಟೀಕೆ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ (BJP Government) ಭ್ರಷ್ಟಾಚಾರದ ಸರ್ಕಾರ ಅಂತಾ ವಿಪಕ್ಷಗಳು ಆರೋಪ ಮಾಡ್ತಾನೆ ಬಂದಿದೆ. ಒಂದು ಪಹಣಿಯ ಬದಲಾವಣೆ ಮಾಡಿಸಲು ಲಕ್ಷ ಲಕ್ಷ ಹಣಕೊಟ್ಟು ಕೆಲಸವೂ ಆಗದೇ ನಮಗೆ ನಮ್ಮ ಹಣ (Money) ಕೊಡಿಸಿ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಾಗಿರೋ ಶ್ರೀನಿವಾಸ್, ಮೂಲತಃ ಕಗಲ್ಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದೀಪಾಳ್ಯದ ನಿವಾಸಿ. ತಮ್ಮ ಮುತ್ತಾತನ ಹೆಸರಿನಲ್ಲಿರೋ 4 ಎಕರೆ ಜಾಗ (Property) ವನ್ನ ತಂದೆಯ ಹೆಸರಿಗೆ ಮಾಡಿಸಿ ಕುಟುಂಬದವರಿಗೆ ಹಂಚಿಕೆ ಮಾಡೋ ಪ್ಲಾನ್ ಮಾಡಿಕೊಂಡಿದ್ರು. ಶ್ರೀನಿವಾಸ್ ಅವರು ಕಗ್ಗಲಿಪುರದ ವಿಲೇಜ್ ಅಕೌಂಟೆಂಟ್ (Village Accountant) ಬಳಿ ಪಹಣಿ ಬದಲಾವಣೆ ಮಾಡಿಸಿಕೊಂಡುವಂತೆ ಕೇಳಿಕೊಂಡಿದ್ರು. ಆದರೆ ಪಹಣಿ ಬದಲಾವಣೆ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ಆಗಿರೋ ಮಿಸ್ಟರ್ ಶಾಂತೇಗೌಡ ಬರೋಬ್ಬರಿ 50ಲಕ್ಷ ಕೇಳಿದ್ದಾನೆ.

    ಪಹಣಿ ಬದಲಾವಣೆ ಆದರೆ ಸಾಕು ಅಂತಾ ಶ್ರೀನಿವಾಸ್ ಅವರು ತಮ್ಮ ಹೆಸರಿನಲ್ಲಿದ್ದ ಜಮೀನು (Land) ಮಾರಿ 30 ಲಕ್ಷ ಅಡ್ವಾನ್ಸ್ ಅಂತಾ 2018ರಲ್ಲಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಹಣವನ್ನು ವಾಪಸ್ ನೀಡದೇ ಪಹಣಿ ಕೆಲಸವೂ ಮಾಡಿಸದೇ ಮೋಸ ಮಾಡ್ತಿದ್ದಾರೆ ಎಂದು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಹಣ ಕೊಡಿ ಇಲ್ವಾ ಕೆಲಸ ಮಾಡಿಕೊಡಿ ಅಂತಾ ಕೇಳಲು ಹೋದ್ರೆ ಶಾಂತೇಗೌಡ ಏನ್ ಮಾಡ್ತಿರೋ ಮಾಡ್ಕೋಳಿ ನಿಮ್ಮನ್ನ ಜೀವಂತವಾಗಿ ಉಳಿಸೋಲ್ಲ ಅಂತಾ ದಮ್ಕಿ ಕೂಡ ಹಾಕಿದ್ದರಂತೆ. ಹೇಗೋ ನಮ್ಮ ತಾತನ ಆಸ್ತಿ ಬರುತ್ತೆ ಅಂತಾ ಹಣ ಕೊಟ್ಟು ಈಗ ಜಮೀನು ಕೂಡ ಬದಲಾವಣೆ ಆಗಿದೆ ಕೊಟ್ಟ ಹಣವೂ ಇಲ್ಲದೇ ಹೇಗಪ್ಪ ಜೀವನ ಅಂತಾ ಕಷ್ಟದಲ್ಲೇ ಕಾಲ ಕಳೆಯುವಂತೆ ಆಗಿದೆ ಶ್ರೀನಿವಾಸ್ ಪತ್ನಿ ಹೇಳುತ್ತಾರೆ.

    ಒಟ್ಟಿನಲ್ಲಿ ಒಬ್ಬ ಸಾಮಾನ್ಯ ವಿಲೇಜ್ ಅಕೌಂಟೆಂಟ್ ಹೀಗೆ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾನೆ ಅಂದ್ರೇ ಹೇಗಿದೆ ನಮ್ಮ ವ್ಯವಸ್ಥೆ ಅನ್ನೋದು ಗೊತ್ತಾಗ್ತಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

    ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

    ಮಡಿಕೇರಿ: ಆರ್.ಟಿ.ಸಿಯಲ್ಲಿ ಹೆಸರು ಸೇರ್ಪಡೆಗಾಗಿ ವ್ಯಕ್ತಿಯೊಬ್ಬರಿಂದ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗನನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.

    ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಎಂಬವರೇ ಬಂಧಿತ ಸರ್ಕಾರಿ ನೌಕರನಾಗಿದ್ದಾರೆ. ಕಾರಗುಂದ ನಿವಾಸಿ ಎಂ.ಎನ್ ಯೋಗೇಶ್ ಅವರ ಸರ್ವೇ ನಂಬರ್ 226/11ರಲ್ಲಿ 0.70 ಎಕರೆ ಹಾಗೂ 224/6ರಲ್ಲಿ 2.20 ಎಕರೆ ಆಸ್ತಿ ಇದ್ದು, ಆರ್.ಟಿ.ಸಿಯಲ್ಲಿ ಮೃತರ ಹೆಸರನ್ನು ತೆಗೆದು ಎಂ.ಎನ್. ಯೋಗೇಶ್ ಹೆಸರು ಸೇರ್ಪಡೆಗಾಗಿ ಮಾರ್ಚ್ ತಿಂಗಳಲ್ಲಿ ಮಡಿಕೇರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಕಾರಗುಂದ ಗ್ರಾಮ ಲೆಕ್ಕಿಗರ ಕಚೇರಿಗೆ ವಿಲೇವಾರಿಯಾಗಿತ್ತು. ಈ ನಡುವೆ ಯೋಗೇಶ್ ಅವರು ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಅವರ ಬಳಿ ವಿಚಾರಿಸಿದಾಗ ಖಾಲಿ ಕೈಯಲ್ಲಿ ಕಚೇರಿಗೆ ಬರಬೇಡವೆಂದು ಹೇಳಿದ್ದರು ಎನ್ನಲಾಗಿದೆ. ತದನಂತರ ಯೋಗೇಶ್ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭ ಪೌತಿ ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಸಿ ಕೊಡುವಂತೆ ಕಾರಗುಂದ ನಿವಾಸಿಯಾದ ಬೊಳದಂಡ ನಾಚಪ್ಪ ಅವರನ್ನು ಯೋಗೇಶ್ ಕೋರಿದ್ದರು. ಅದರಂತೆ ಏಪ್ರಿಲ್ 8 ರಂದು ನಾಚಪ್ಪ ಅವರು ಗ್ರಾಮ ಲೆಕ್ಕಿಗರ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಖಾತೆ ಬದಲಾವಣೆಗೆ 2500ರೂ. ನೀಡುವಂತೆ ಗ್ರಾಮ ಲೆಕ್ಕಿಗ ದೇವಯ್ಯ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

    ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ಬೊಳದಂಡ ನಾಚಪ್ಪ ಅವರು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ನಾಚಪ್ಪ ಅವರಿಂದ ಗ್ರಾಮ ಲೆಕ್ಕಿಗ ದೇವಯ್ಯ ಅವರು 2500ರೂ. ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಮೈಸೂರು, ಕೊಡಗು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿ ಗ್ರಾಮ ಲೆಕ್ಕಿಗನನ್ನು ಬಂಧಿಸಿ 2500ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.

  • ವೃದ್ಧಾಪ್ಯ ವೇತನ ಕೇಳ ಬಂದ ಅಜ್ಜಿಗೆ ‘ನೀವು ಸತ್ತು ಹೋಗಿದ್ದೀರಾ’ ಎಂದ ಅಧಿಕಾರಿಗಳು

    ವೃದ್ಧಾಪ್ಯ ವೇತನ ಕೇಳ ಬಂದ ಅಜ್ಜಿಗೆ ‘ನೀವು ಸತ್ತು ಹೋಗಿದ್ದೀರಾ’ ಎಂದ ಅಧಿಕಾರಿಗಳು

    – ಬದುಕಿರುವವರನ್ನ ದಾಖಲೆಯಲ್ಲಿ ಸಾಯಿಸಿದ ಗ್ರಾಮ ಲೆಕ್ಕಿಗ!

    ಚಿಕ್ಕಮಗಳೂರು: ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಕೇಳಲು ಹೋದ ವೃದ್ಧೆಗೆ ನೀವು ಸತ್ತು ಹೋಗಿದ್ದೀರಾ ಎಂಬ ಅಧಿಕಾರಿಯ ಮಾತು ಕೇಳಿ ವೃದ್ಧೆ ದಿಗ್ಭ್ರಾಂತರಾದ ಘಟನೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಸಣ್ಣಕೆರೆ ಗ್ರಾಮದ ವೃದ್ಧೆ ಜಯಮ್ಮ ಅವರಿಗೆ ಕಳೆದ ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿರಲಿಲ್ಲ. ಯಾಕೆ ಎಂದು ಕೇಳಲು ಹೋದಾಗ ತಾಲೂಕು ಪಂಚಾಯಿತಿಯ ಅಧಿಕಾರಿಗಳ ಮಾತು ಕೇಳಿ ವೃದ್ಧಿಗೆ ಬರಸಿಡಿಲು ಬಡಿದಂತಾಗಿದೆ. ವೃದ್ಧೆ ಬ್ಯಾಂಕ್ ಖಾತೆಗೆ ವೃದ್ಧಾಪ್ಯ ವೇತನ ಜನವರಿ ತಿಂಗಳಲ್ಲಿ ಜಮೆ ಆಗಿದ್ದೆ ಕೊನೆ. ಫೆಬ್ರವರಿಯಿಂದ ಹಣ ಜಮೆಯಾಗಿ ಬಂದಿರಲಿಲ್ಲ.

    ಕಳೆದ ನಾಲ್ಕೈದು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣಕೆರೆಯ ಜಯಮ್ಮ ತಮ್ಮ ಮನೆಯ ಪಕ್ಕದ ಯುವಕ ಹರೀಶ್ ಎಂಬವನಿಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಿಲು ಹೇಳಿದ್ದರು. ಬಸ್ ಬೇರೆ ಇಲ್ಲ, ವೃದ್ಧೆ ಅಲ್ಲಿವರೆಗೂ ಹೋಗೋದು ಬೇಡವೆಂದು ಹರೀಶ್ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಆಗ ಅಧಿಕಾರಿಗಳು ಜಯಮ್ಮ ಎಂಬುವರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಈ ವಿಷಯ ಕೇಳಿ ಹರೀಶ್ ಎಂಬ ಯುವಕನಿಗೂ ಶಾಕ್ ಆಗಿತ್ತು. ಅಯ್ಯೋ ದೇವ್ರೆ, ಅಜ್ಜಿ ನಮ್ಮ ಪಕ್ಕದ ಮನೆಯಲ್ಲೇ ವಾಸವಿದ್ದಾರೆ. ಇವ್ರು ಸತ್ತಿದ್ದಾರೆ ಅಂತಾರಲ್ಲ ಎಂದು ಆತನಿಗೂ ಕಂಗಾಲಾಗಿದ್ದಾನೆ. ಹರಂದೂರು ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗ ನೇಸರ್ ಎಂಬವರು ವರದಿ ನೀಡಿದ್ದಾರೆ. ಹಾಗಾಗಿ ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಯಿಂದ ಬರುವ ಹಣವನ್ನ ತಡೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹರಂದೂರು ಗ್ರಾಮ ಪಂಚಾಯಿತಿ ಲೆಕ್ಕಿಗ ನೇಸರ್ ಮಾಡಿದ ಎಡವಟ್ಟಿನಿಂದಾಗಿ ಜಯಮ್ಮ ಎಂಬವರಿಗೆ ಪಿಂಚಣಿ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮ ಲೆಕ್ಕಿಗ ಜಯಮ್ಮ ಅವರ ಮನೆಗೆ ಭೇಟಿ ನೀಡದೆ, ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದರಿಂದ ಬದುಕಿದ್ದವರು ಸಾವನ್ನಪ್ಪಿದ್ದಾರೆ. ಜಯಮ್ಮ ಸೇರಿದಂತೆ ಅಂತಹ ಹಲವರಿಗೆ ಸರ್ಕಾರದ ಪಿಂಚಣಿ ಹಣ ಬರುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಧಿಕಾರಿಗಳು ಬೇಜವಾವ್ದಾರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.