Tag: ಗ್ರಾಮೀಣ ಪ್ರದೇಶ

  • ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ: ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ (Tokyo, Population) ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ಲಕ್ಷಗಟ್ಟಲೇ ಹಣ ನೀಡುವ ಯೋಜನೆ ಪ್ರಕಟಿಸಿದೆ.

    ಟೋಕಿಯೋದಿಂದ ಯಾರು ಹೊರ ಹೋಗ್ತಾರೋ ಅಂತಹ ಕುಟುಂಬಗಳ ಪ್ರತಿಯೊಂದು ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ (Japan Government) ಆಫರ್ ನೀಡಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಕಳೆದ ವರ್ಷ ಮೊದಲಬಾರಿಗೆ ಜಪಾನ್‌ನಲ್ಲಿ (Japan) ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೊನಾ ಕಾರಣದಿಂದಾಗಿಯೇ ಜನಸಂಖ್ಯೆ ಕುಸಿದಿರುವುದಾಗಿ ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ. ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಈ ಹಿನ್ನೆಲೆ ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ನೀಡಲಾಗ್ತಿತ್ತು. ಆದ್ರೆ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ.

    ಪ್ರಸ್ತುತ ಜಪಾನ್ ಜನಸಂಖ್ಯೆ 12.57 ಕೋಟಿಯಿದ್ದು ಟೋಕಿಯೋ ನಗರದಲ್ಲೇ 1.4 ಕೋಟಿ ಜನ ವಾಸಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗ್ರಾಮೀಣ ಪ್ರದೇಶದ ಬಡ SSLC ಟಾಪರ್ಸ್‍ಗೆ ಚಿನ್ನದ ಉಂಗುರ ಕೊಟ್ಟ ನಾಟಿ ವೈದ್ಯ

    ಗ್ರಾಮೀಣ ಪ್ರದೇಶದ ಬಡ SSLC ಟಾಪರ್ಸ್‍ಗೆ ಚಿನ್ನದ ಉಂಗುರ ಕೊಟ್ಟ ನಾಟಿ ವೈದ್ಯ

    ನೆಲಮಂಗಲ: ಗ್ರಾಮೀಣ ಭಾಗದ ಶಾಲೆಯ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಂದೆ-ತಾಯಿ ಹೆಸರಲ್ಲಿ ವಿದ್ಯಾರ್ಥಿಗಳಿಗೆ ನಾಟಿ ವೈದ್ಯ ರವಿಕುಮಾರ್‌ ಚಿನ್ನದ ಉಂಗುರ ಕೊಟ್ಟಿದ್ದಾರೆ.

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ಸ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮೂರು ವಿದ್ಯಾರ್ಥಿಗಳಿಗೆ ಚಿನ್ನದ ಉಂಗುರಗಳನ್ನು ಪ್ರತಿಭಾ ಪುರಸ್ಕಾರವಾಗಿ ನೀಡಲಾಯಿತು. ಭಟ್ಟರಹಳ್ಳಿ ಗ್ರಾಮದ ನಾಟಿ ವೈದ್ಯ ಗಂಗಣ್ಣ ಅವರು ನಿರ್ಮಿಸಿ ಸರ್ಕಾರಕ್ಕೆ ಬಿಟ್ಟುಕೊಟ್ಟ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿ ವರ್ಷವು ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿತ್ತು. ಇದನ್ನೂ ಓದಿ:  ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕ 

    ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣ ಕಾರ್ಯಕ್ರಮ ಮುಂದೂಡಿದ್ದು, ಈಗ ಮೂರು ಸಾಲಿನ ಒಬ್ಬೊಬ್ಬ ವಿದ್ಯಾರ್ಥಿಗೆ ಚಿನ್ನದ ಉಂಗುರ ನೀಡಿದ ರವಿಕುಮಾರ್ ತನ್ನ ತಂದೆ-ತಾಯಿಯ ಕೆಲಸವನ್ನು ಮುಂದುವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಸೇರಿದಂತೆ ಶಾಲೆಯ ಉಪನ್ಯಾಸಕ ವೃಂದ ಹಾಗೂ ಗ್ರಾಮ ಪಂಚಾಯಿತಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

  • ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ

    ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ

    ಯಾದಗಿರಿ: ಅನ್‍ಲಾಕ್ ಹಿನ್ನೆಲೆ ಮತ್ತೆ ಮಹಾನಗರಗಳತ್ತ ಜಿಲ್ಲೆಯ ಜನರ ಮಹಾ ವಲಸೆ ಆರಂಭವಾಗಿದೆ. ರೈಲಿನ ಮೂಲಕ ಬೆಂಗಳೂರು, ಮುಂಬೈ, ಪುಣೆ ಕಡೆ ಗ್ರಾಮೀಣ ಜನರ ಗುಳೆ ಹೋಗುತ್ತಿದ್ದಾರೆ.ವಿಪರ್ಯಾಸ ಎಂದರೆ ರಾಜ್ಯದಲ್ಲೇ ಅತೀ ಹೆಚ್ಚು ಜನ ಗುಳೆ ಹೋಗುವ ಕುಖ್ಯಾತಿಗೆ ಯಾದಗಿರಿ ಪಾತ್ರವಾಗಿದೆ.

    ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ರಾಜ್ಯದಲ್ಲಿ ಘೋಷಣೆಯಾದ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನರ ಬದುಕು ದುಸ್ಥರವಾಗಿದೆ. ಎರಡೆರಡು ಬಾರಿ ಲಾಕ್‍ಡೌನ್ ಆದ ಪರಿಣಾಮ ಕೃಷಿಗಾಗಿ ಊರಿನಲ್ಲಿ ಸಾಲ ಮಾಡಿ ಅದನ್ನು ತೀರಸಲಾಗದೆ, ಸಾಲಕ್ಕೆ ಅಂಜಿ ಕೆಲವರು ಊರು ಬೀಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಬದುಕನ್ನು ಕಟ್ಟಿಕೊಳ್ಳಲು ದೂರದ ಪಟ್ಟಣಗಳಿಗೆ ರೈಲಿನ ಮೂಲಕ ಗುಳೆ ಹೊರಟಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯ ನದಿಪಾತ್ರದಲ್ಲಿ ಫುಲ್ ಅಲರ್ಟ್ – 9 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ

    ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ನರೇಗಾ ಯೋಜನೆಯೂ ಸಹ ಹಳ್ಳ ಹಿಡಿದಿದೆ. ಅಧಿಕಾರಿಗಳು ಸಹ ಜನರಿಗೆ ಸಮರ್ಪಕವಾಗಿ ಕೂಲಿ ನೀಡುತ್ತಿಲ್ಲ. ಇನ್ನೂ ಕೆಲವು ಕಡೆ ದುಡಿದ ಕೆಲಸಕ್ಕೆ ಕೂಲಿ ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಬೇಸತ್ತು ಜನ ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡಿದ್ದಾರೆ.

  • ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗೆ ಪಿಂಕ್ ವೆಹಿಕಲ್ ಬಿಡುಗಡೆಗೆ ಚಿಂತನೆ

    ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗೆ ಪಿಂಕ್ ವೆಹಿಕಲ್ ಬಿಡುಗಡೆಗೆ ಚಿಂತನೆ

    – ಬಜೆಟ್‍ನಲ್ಲಿ ಆರೋಗ್ಯ ಇಲಾಖೆಯಡಿ ಘೋಷಿಸುವ ಸಾಧ್ಯತೆ

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿದ್ದ ಶ್ರೀರಾಮುಲು ಅವರ ಕನಸಿನ ಕೂಸು 108 ಆರೋಗ್ಯ ಕವಚ ವಾಹನ ಸೌಲಭ್ಯ ಜಾರಿಗೆ ತಂದಿದ್ದು ಈಗ ಇತಿಹಾಸ. 108 ವಾಹನ ಶ್ರೀರಾಮುಲುಗೆ ಜನಪ್ರಿಯತೆಯ ಜೊತೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.

    ಈಗ ಅಂತಹದ್ದೇ ಜನಪ್ರಿಯತೆಯನ್ನು ನೀಡಬಲ್ಲ ಮತ್ತೊಂದು ವಾಹನವನ್ನು ಆರೋಗ್ಯ ಸಚಿವ ಶ್ರೀರಾಮುಲು ಈ ಸರ್ಕಾರದಲ್ಲಿ ಬಿಡಲು ಹೊರಟಿದ್ದಾರೆ. ‘ಪಿಂಕ್ ಬಸ್’ ಹೆಸರಿನ ಮೊಬೈಲ್ ವಾಹನವನ್ನು ಗ್ರಾಮೀಣ ಭಾಗದ ಜನರಿಗಾಗಿ ಆರೋಗ್ಯ ಇಲಾಖೆಯಡಿ ಈ ಬಾರಿಯ ಬಜೆಟ್‍ನಲ್ಲಿ ಘೋಷಿಸಲಾಗುತ್ತಿದೆ ಎನ್ನಲಾಗುತ್ತಿದೆ.

    2008 ರ ನವಂಬರ್ 01 ರಂದು ಜಾರಿಯಾದ ‘108 ಆರೋಗ್ಯ ಕವಚ’ ಸೇವೆಯು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಮಗ್ರ ತುರ್ತು ಚಿಕಿತ್ಸೆ ಸೇವೆಯನ್ನು ನೀಡುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪಿಂಕ್ ಬಸ್ ವಿಶೇಷವಾಗಿ ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗಾಗಿ ಜಾರಿಗೊಳಿಸಲಾಗುತ್ತಿದೆ. ಈ ಪಿಂಕ್ ಸಂಚಾರಿ ಬಸ್ ಕ್ಯಾನ್ಸರ್ ತಪಾಸಣೆಯ ಪ್ರಯೋಗಾಲಯ ಹೊಂದಿರುತ್ತದೆ. ಸುಮಾರು 4-5 ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ.

    ಮಹಿಳೆಯರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಾಣಸಿಗುತ್ತಿರುವ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ಪರೀಕ್ಷೆ ಪಿಂಕ್ ಪ್ರಯೋಗಾಲಯದಲ್ಲಿ ನಡೆಯಲಿದೆ. ಮೆಮೋಗ್ರಫಿ ಪರೀಕ್ಷೆಗಳನ್ನು ಮಾಡಿಸಲು ದೂರದ ಗ್ರಾಮೀಣ ರೋಗಿಗಳು ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೆ ಹೋಗುವುದು ಪಿಂಕ್ ವಾಹನದಿಂದ ತಪ್ಪಲಿದೆ. ಪಿಂಕ್ ವಾಹನದ ರೂಪುರೇಷೆ ಹೇಗಿರಲಿದೆ ಯೋಜನೆಗೆ ತಗಲುವ ವೆಚ್ಚ ಸೇರಿದಂತೆ ಇನ್ನಷ್ಟು ವಿವರಗಳು ಬಜೆಟ್‍ನಲ್ಲಿ ಹೊರಬೀಳಲಿದೆ.