Tag: ಗ್ರಾಮಪಂಚಾಯ್ತಿ

  • ಉಕ್ರೇನ್‍ನಿಂದ ರಕ್ಷಿಸುವಂತೆ ವೀಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ. ಅಧ್ಯಕ್ಷೆ

    ಉಕ್ರೇನ್‍ನಿಂದ ರಕ್ಷಿಸುವಂತೆ ವೀಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ. ಅಧ್ಯಕ್ಷೆ

    ಲಕ್ನೋ: ಉಕ್ರೇನ್‍ನಿಂದ ತನ್ನನ್ನು ರಕ್ಷಿಸುವಂತೆ ವೀಡಿಯೋ ಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ವೈಶಾಲಿ ಯಾದವ್ ಸಂಕಷ್ಟಕ್ಕೆ ಸಿಲುಕಿರುವ ಗ್ರಾ.ಪಂ ಅಧ್ಯಕ್ಷೆ. ತೇರಾ ಪುರ್ಸಾಯಿಲಿ ಗ್ರಾಮ ಸಭಾ ಮುಖ್ಯಸ್ಥೆಯಾಗಿರುವ ಇವರು, ನಾನು ಉಕ್ರೇನಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದೇನೆ. ಹೀಗಾಗಿ ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಗ್ರಾ.ಪಂ ಮುಖ್ಯಸ್ಥೆಯಾಗಿರುವ ಇವರು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುವಾಗ ಯಾವುದೇ ರೀತಿಯ ಅನುಮತಿಯನ್ನು ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಗ್ರಾಮಸಭೆಯ ಖಾತೆಯನ್ನು ನಿರ್ವಹಣೆ ನಡೆಸುವ ಬಗ್ಗೆ ಹಾಗೂ ಖಾತೆಯಲ್ಲಿ ಹಣಕಾಸಿನ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಹರ್ದೋಯಿ ಮುಖ್ಯ ಅಭಿವೃದ್ಧಿ ಅಧಿಕಾರಿ ಆದೇಶಿಸಿದ್ದಾರೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಸದ್ಯ ವೈಶಾಲಿ ರೊಮೇನಿಯಾದಲ್ಲಿದ್ದು ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗುವುದು. ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

  • ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್

    ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್

    ಚಿಕ್ಕಬಳ್ಳಾಪುರ: ಅಪ್ರಾಪ್ತ ವಿದ್ಯಾರ್ಥಿನಿಗೆ ಗ್ರಾಮ ಪಂಚಾಯ್ತಿ ಸದಸ್ಯನೋರ್ವ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರ ಅಪ್ರಾಪ್ತ ಬಾಲಕಿ ಆನ್‍ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನನ್ನ ಮೊಬೈಲ್ ನಂಬರ್ ಪಡೆದಿರೋ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಎಂಬಾತ ಅಶ್ಲೀಲ ಮೆಸೇಜ್ ಫೋಟೋಸ್ ಕಳುಹಿಸಿದ್ದಾನೆ.

    ಈತನ ಜೊತೆಗೆ ಈತನ ಸ್ನೇಹಿತ ಕೇಶವ್ ಸಹ ಕರೆ ಮಾಡಿ, ಶ್ರೀನಿವಾಸ್ ಗೆ ನೀನು ಇಷ್ಟ ಅಂತ ಹೇಳಿ 1,000 ರೂಪಾಯಿ ಕೊಡ್ತಾನೆ ಬಾ ಅಂತ ಒತ್ತಾಯ ಮಾಡಿದ್ನಂತೆ. ಕರೆ ಮಾಡಿ ಅಶ್ಲೀಲವಾಗಿ ಮಾತನಾಡೋದು ಪ್ರಶ್ನೆ ಮಾಡಿದಾಗ ಕುಡಿದು ಹಲ್ಲೆ ಮಾಡಲು ಸಹ ಮುಂದಾಗಿದ್ದಾನೆ ಅಂತ ದೂರಿನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

    ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳಾದ ಶ್ರೀನಿವಾಸ್ ಹಾಗೂ ಕೇಶವ್ ಇಬ್ಬರು ಸಹ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಗುಡಿಬಂಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

  • ಮಂಗಳಮುಖಿಯರ ಮೇಲೆ ಹಣ ಎಸೆದ ಪಂಚಾಯ್ತಿ ಉಪಾಧ್ಯಕ್ಷ

    ಮಂಗಳಮುಖಿಯರ ಮೇಲೆ ಹಣ ಎಸೆದ ಪಂಚಾಯ್ತಿ ಉಪಾಧ್ಯಕ್ಷ

    ನೆಲಮಂಗಲ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೋರ್ವ ಮಂಗಳ ಮುಖಿಯರ ಮೇಲೆ ಹಣ ಎಸೆದು ಉದ್ಧಟತನ ಮೆರೆದಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬೈಲಪ್ಪ ಕಾಂಚಾಣ ದರ್ಬಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಗ್ರಾಮ ಮಟ್ಟದಲ್ಲಿ ಯಶಸ್ವಿಯಾಗಿ ಸ್ಥಳೀಯ ಆಡಳಿತ ನೀಡಬೇಕಾಗಿದ್ದ ಉಪಾಧ್ಯಕ್ಷ ಜನಸಾಮಾನ್ಯರಿಗೆ ಮಾದರಿಯಾಗಬೇಕಿದ್ದರು. ಆದರೆ ಪಂಚಾಯ್ತಿ ವ್ಯಾಪ್ತಿಯ ಜನ ಬೈಲಪ್ಪ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಹಣ ಎಸೆದು ಅಂಧ ದರ್ಬಾರ್ ಮಾಡಿದ ದೃಶ್ಯ ನೋಡಿದ ಸ್ಥಳೀಯ ಕುಲವನಹಳ್ಳಿ ಮತ್ತು ಲಕ್ಕೇನಹಳ್ಳಿ ಗ್ರಾಮಸ್ಥರು ಸಹ ಉಪಾಧ್ಯಕ್ಷ ಬೈಲಪ್ಪನ ವರ್ತನೆಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.