Tag: ಗ್ರಾಮಪಂಚಾಯತ್

  • ಜನಪ್ರತಿನಿಧಿಗಳೇ ಬದುಕಿದ್ದೀರಾ? ಅಧಿಕಾರಿಗಳೇ ಇತ್ತ ಗಮನಿಸಿ – ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ

    ಜನಪ್ರತಿನಿಧಿಗಳೇ ಬದುಕಿದ್ದೀರಾ? ಅಧಿಕಾರಿಗಳೇ ಇತ್ತ ಗಮನಿಸಿ – ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ

    ಚಿಕ್ಕಬಳ್ಳಾಪುರ: ಗ್ರಾಮದಲ್ಲಿ (Village) ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಯುವಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಹಾಡೋನಹಳ್ಳಿ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಅಭಿವೃದ್ಧಿ ಕಡೆಗಣಿಸಿದ ಜನಪ್ರತಿನಿಧಿಗಳ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದು, ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ‘ಜನಪ್ರತಿನಿಧಿಗಳೇ ಬದುಕಿದ್ದೀರಾ?, ಅಧಿಕಾರಿಗಳೇ ಇತ್ತ ಗಮನಿಸಿ’ ಎಂಬ ಬರಹದ ಬೃಹತ್ ಫ್ಲೆಕ್ಸ್ (Flex)  ಕಟ್ಟಿ, ಅದಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೈಕ್ ರೈಡ್‍ಗೆ ಹೋಗಿದ್ದ ಟೆಕ್ಕಿ ಮೇಲೆ 10 ಮಂದಿಯಿಂದ ಗ್ಯಾಂಗ್ ರೇಪ್

    ಗ್ರಾಮದಲ್ಲಿ ಕುಡಿಯುವ ನೀರು (Water), ರಸ್ತೆ (Road), ಚರಂಡಿ ಸೇರಿದಂತೆ ಯಾವುದೇ ಮೂಲಸೌಕರ್ಯ ವ್ಯವಸ್ಥೆ ಇಲ್ಲ. ಈ ಹಿಂದೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಮೀಲಾಗಿ ಭೌತಿಕವಾಗಿ ಕಾಮಗಾರಿ ನಡೆಸದೇ ದಾಖಲೆಗಳಲ್ಲಿ ತೋರಿಸಿ ಹಣ ಲಪಟಾಯಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತಲ್ಲದೇ ಗ್ರಾಮವೂ ಕೂಡ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ವಿಷ ಸೇವಿಸಿದ ಪತಿ- ಮನನೊಂದು ಕಂದನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವು. ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದೇವು ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ರಸ್ತೆ ಅಭಿವೃದ್ಧಿ ಮಾಡಿರುವುದಾಗಿ ಪಂಚಾಯತ್ ವೆಬ್‍ಸೈಟ್ ದಾಖಲೆ ಹೇಳುತ್ತಿದೆ. ಆದರೆ, ಅಂತಹ ಯಾವುದೇ ಕಾಮಗಾರಿ ನಡೆದಿರುವ ಕುರುಹುಗಳೇ ಇಲ್ಲ. ಕಾಮಗಾರಿಯ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿದ್ದಾರೆ. ಗ್ರಾಮದ ರಸ್ತೆಗಳು ಮಳೆ ಬಂದರೆ ಓಡಾಡಲು ಆಗದಂತಹ ಪರಿಸ್ಥಿತಿಯಲ್ಲಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಹಲವು ಸಮಸ್ಯೆ ಎದುರಾಗಿದೆ. ಇದರಿಂದ ಡೆಂಗ್ಯೂ, ಚಿಕನ್ ಗುನ್ಯಾ ಕಾಯಿಲೆಗಳು ಹೆಚ್ಚಾಗುತ್ತಿವೆ. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದಾಗಿದೆ ಎಂದು ಗ್ರಾಮದ ಯುವಕ ಹರ್ಷ ಅಳಲು ತೋಡಿಕೊಂಡಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಯುವಕರು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಲ್ಯಾಣಿ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ಕಲ್ಯಾಣಿ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ಚಿಕ್ಕಬಳ್ಳಾಪುರ: ಕಲ್ಯಾಣಿ ನಿರ್ಮಾಣದ ವೇಳೆ ತಡೆಗೋಡೆಯ ಮಣ್ಣು ಕುಸಿದ ಪರಿಣಾಮ ಕಲ್ಯಾಣಿಯೊಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ದಿನ್ನೂರು ಗ್ರಾಮದಲ್ಲಿ ನಡೆದಿದೆ.

    ಶ್ರೀನಿವಾಸಪುರ ಮೂಲದ ಅಂಜಿನಪ್ಪ(40) ಮೃತ ಕಾರ್ಮಿಕ. ಗ್ರಾಮಪಂಚಾಯತಿ ವತಿಯಿಂದ ನರೇಗಾ ಮೂಲಕ ಗ್ರಾಮದಲ್ಲಿ ಸುಂದರ ಕಲ್ಯಾಣಿ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿತ್ತು. ಆದರೆ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹಗಲು ರಾತ್ರಿ ಕಾರ್ಮಿಕರ ಕೈಯಲ್ಲಿ ಕೆಲಸ ಮಾಡಿಸಲಾಗುತ್ತಿದ್ದು ಎನ್ನಲಾಗಿದೆ.

    ಮಳೆ ಬಂದಿದ್ದ ಸಂದರ್ಭದಲ್ಲಿಯೇ ಕಾಮಗಾರಿ ನಡೆಸುತ್ತಿದ್ದ ಕಾರಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಕಲ್ಯಾಣಿಯೊಳಗೆ ಬಿದ್ದಿದ್ದಾರೆ. ಕಲ್ಯಾಣಿ ತುಂಬಾ ಆಳವಾಗಿದ್ದು ಕಾರ್ಮಿಕನನ್ನು ಮೇಲೆತ್ತುವಷ್ಟರಲ್ಲೇ ಮೃತಪಟ್ಟಿದ್ದಾರೆ.

    ಸದ್ಯ ಗುತ್ತಿಗೆದಾರ ಹಾಗೂ ಗ್ರಾಮಪಂಚಾಯತ್ ಸದಸ್ಯ ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದೇ ಅವಘಡಕ್ಕೆ ಕಾರಣ ಅಂತ ಆರೋಪಿಸಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ

  • ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಮುಂಬೈ: ಗ್ರಾಮಸ್ಥರಿಗೆ ಕೋವಿಡ್-19 ಸೋಂಕು ಕಂಡು ಬಂದರೆ ಅಂತವರ ಕೊರೊನಾ ಪರೀಕ್ಷೆಯಿಂದ ಹಿಡಿದು, ಆಸ್ಪತ್ರೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪೂರ್ತಿ ಭರಿಸಲು ಖತಿವಾಲಿ ಗ್ರಾಮಪಂಚಾಯತ್ ಸಜ್ಜಾಗಿದೆ.

    ಮಹಾರಾಷ್ಟ್ರದ ಖತಿವಾಲಿ ಗ್ರಾಮಪಂಚಾಯತ್ ತನ್ನ ಗ್ರಾಮದ ಜನರಿಗೆ ಕೊರೊನಾ ಸೋಂಕು ಬಂದರೆ ಅವರ ಚಿಕಿತ್ಸಾ ವೆಚ್ಚ, ಆಸ್ಪತ್ರೆ ಖರ್ಚು ಎಲ್ಲವನ್ನು ಪಂಚಾಯತ್ ವತಿಯಿಂದ ಕೊಡುವುದಾಗಿ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಿಲ್‍ನ್ನು ಪಂಚಾಯತ್‍ಗೆ ಕೊಟ್ಟರೆ ಪಂಚಾಯತ್ ವೆಚ್ಚವನ್ನು ಭರಿಸುವುದಾಗಿ ಪಂಚಾಯತ್‍ನ ಸದಸ್ಯರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಶಹಾಪುರ ತಾಲೂಕಿನಲ್ಲಿ ಖತಿವಾಲಿ ಗ್ರಾಮವಿದ್ದು, ಗ್ರಾಮದಲ್ಲಿ 6000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲೂಕಿನಲ್ಲಿ ಕೇವಲ 1 ಕೊರೊನಾ ಚಿಕಿತ್ಸಾ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗಾಗಿ ಖತಿವಾಲಿ ಗ್ರಾಮದಿಂದ 8 ಕಿಲೋ ಮೀಟರ್ ಬರಬೇಕಾಗಿದೆ. ಅದಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಭರ್ತಿಗೊಂಡಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಅದರೆ ಗ್ರಾಮದ ಜನರಿಗೆ ಖಾಸಗಿ ಅಸ್ಪತ್ರೆಯ ವೆಚ್ಚ ಭರಿಸುವ ಸಾಮರ್ಥ್ಯ ವಿಲ್ಲದೆ ಇರುವುದರಿಂದಾಗಿ ಪಂಚಾಯತ್‍ನಿಂದ ಆಸ್ಪತ್ರೆ ಖರ್ಚು ಭರಿಸುವ ನಿರ್ಧಾರ ಮಾಡಲಾಗಿದೆ.

    ಈಗಾಗಲೇ ಶಹಾಪುರ ತಾಲೂಕಿನಲ್ಲಿ 6,660 ಕೊರೊನಾ ಕೇಸ್ ದಾಖಲಾಗಿದ್ದು,ಇದೀಗ 241 ಸಕ್ರಿಯ ಪ್ರಕರಣಗಳಿವೆ. 170 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾತನಾಡಿರುವ ಖತಿವಾಲಿ ಗ್ರಾಮಪಂಚಾಯತ್ ಸದಸ್ಯರಾದ ದೇವಿದಾಸ್ ಜಾಧವ್, ಕೊರೊನಾದಿಂದಾಗಿ ಗ್ರಾಮದ ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಹೊರಭಾಗದ ಜನರ ಆಗಮನವನ್ನು ನಿಷೇಧಿಸಿದ್ದೇವೆ. ಆದರು ಕೂಡ ಗ್ರಾಮದಲ್ಲಿ ಸೋಂಕು ಕಂಡುಬರುತ್ತಿದೆ. ಗ್ರಾಮದ ಜನರು ಸರಿಯಾದ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್ ವತಿಯಿಂದ ಚಿಕಿತ್ಸಾ ವೆಚ್ಚಭರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

  • ಪಿಡಿಒ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ ಭೂಪ!

    ಪಿಡಿಒ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ ಭೂಪ!

    ಚಿಕ್ಕಬಳ್ಳಾಪುರ: ಗ್ರಾಮಪಂಚಾಯತಿ ಕಚೇರಿಗೆ ಬಂದ ವ್ಯಕ್ತಿಯೊರ್ವ ಪಿಡಿಒ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದಿದೆ.

    ಚಾಕವೇಲ್ ಗ್ರಾಮ ಪಂಚಾಯತಿ ಪಿಡಿಒ ಅಬೂಬಕ್ಕರ್ ಸಿದ್ದೀಕ್ ಮೇಲೆ ರಮಣಪ್ಪ ಹಲ್ಲೆ ಮಾಡಿದ್ದಾನೆ. ಅಂದಹಾಗೆ ಎಸ್‍ಸಿ ಎಸ್‍ಟಿ ವಸತಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ರಮಣಪ್ಪ ಕಳೆದ ಒಂದು ವಾರದ ಹಿಂದೆ ಗ್ರಾಮ ಪಂಚಾಯತಿ ಕಚೇರಿಗೆ ಬಂದು, ತಾನು ಚರ್ಮ ಕರಕುಶಲ ಕೆಲಸ ಮಾಡುತ್ತಿರುವುದಾಗಿ ಧೃಢೀಕರಣ ಪತ್ರ ನೀಡುವಂತೆ ಪಿಡಿಒ ಬಳಿ ಕೇಳಿದ್ದ. ಆಯಿತು ಎಲ್ಲಿ ಕೆಲಸ ಮಾಡುತ್ತೀದ್ದೀಯಾ ಅದನ್ನ ಪರಿಶೀಲನೆ ಮಾಡಿ ಎನ್‍ಓಸಿ ಕೊಡುತ್ತೇನೆ ಅಂತ ಪಿಡಿಒ ಅಬೂಬಕ್ಕರ್ ಹೇಳಿ ಕಳುಹಿಸಿದ್ದರು.

    ಇಂದು ಗ್ರಾಮ ಪಂಚಾಯತಿ ಕಚೇರಿಗೆ ಬಂದ ರಮಣಪ್ಪ ಪಿಡಿಒ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ವಾಗ್ವಾದ ಮಿತಿಮೀರಿ ಪಿಡಿಒಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾನೆ. ಕೊರಳ ಪಟ್ಟಿಗೆ ಕೈ ಹಾಕಿ ಪರಸ್ಪರ ಎಳೆದಾಡುಕೊಂಡು ಕಚೇರಿಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಅಷ್ಟರಲ್ಲೇ ಅಲ್ಲಿದ್ದ ಸಾರ್ವಜನಿಕರು ಹಲ್ಲೆ ತಡೆದಿದ್ದಾರೆ.

    ಸದ್ಯ ಈ ಸಂಬಂಧ ಪಿಡಿಒ ಅಬೂಬಕರ್ ಸಿದ್ದೀಕ್ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಲ್ಲೆಯ ದೃಶ್ಯ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    – ಸಿಡಿಲಿನ ಹೊಡೆತಕ್ಕೆ ಉಡುಪಿಯಲ್ಲಿ ಮಹಿಳೆ ಬಲಿ

    ಉಡುಪಿ: ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಮೆಕ್ನೂ ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಾರ್ಕಳದಲ್ಲಿ ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

    ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಚಂಡಮಾರುತ, ಈಗ ಕರ್ನಾಟಕ ಕರಾವಳಿಯನ್ನು ನಡುಗಿಸುತ್ತಿದೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

    ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಡೆದಿದೆ. ಮಲಗಿದಲ್ಲೇ 34 ವರ್ಷದ ಶೀಲಾ ನಲ್ಕೆ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಭಾರೀ ಗುಡುಗು ಸಹಿತ ಮಳೆಯಾಗಿತ್ತು. ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಶೀಲಾ, ಮನೆಯೊಳಗೆ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.