Tag: ಗ್ರಾಮದೇವತೆ

  • ಗ್ರಾಮದೇವತೆಗಾಗಿ ಊರಿಗೆ ಊರೇ ಖಾಲಿ- ಕಲಘಟಗಿಯಲ್ಲಿ ವಿಶಿಷ್ಟ ಜಾತ್ರೆ

    ಗ್ರಾಮದೇವತೆಗಾಗಿ ಊರಿಗೆ ಊರೇ ಖಾಲಿ- ಕಲಘಟಗಿಯಲ್ಲಿ ವಿಶಿಷ್ಟ ಜಾತ್ರೆ

    ಹುಬ್ಬಳ್ಳಿ: ಜಾತ್ರೆ ಅಂದರೆ ಎಷ್ಟು ಖುಷಿ ಹೇಳಿ. ಊರ ಜಾತ್ರೆ ಅಂದರೆ ಅಕ್ಕ-ಪಕ್ಕದ ಊರುಗಳಿಂದ ಸಂಬಂಧಿಕರನ್ನು ಮನೆಗೆ ಕರೆಯಿಸಿ, ಮನೆಯಲ್ಲಿ ಸಿಹಿ ಊಟ ಮಾಡಿ, ಹೊಸ ಬಟ್ಟೆ, ತೇರು.. ಈ ಖುಷಿನೇ ಬೇರೆ. ಆದರೆ ಈ ಊರಲ್ಲಿ ಜಾತ್ರೆ ಇದಕ್ಕೆ ಪೂರ್ತಿ ವಿರುದ್ಧವಾಗಿದೆ.

    ಹೌದು. ಮಾರ್ಚ್ 1ರಿಂದ 9ರವರೆಗೆ ಕಲಘಟಗಿಯಲ್ಲಿ ಗ್ರಾಮದೇವಿ ಜಾತ್ರೆ ನಡೆಯಲಿದೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ ಎಂಬ ನಂಬಿಕೆ. ಗ್ರಾಮದಲ್ಲಿ ಸಂಚರಿಸಿ ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬ ನಂಬಿಕೆ. ಹೀಗಾಗಿ 5 ದಿನ ಮನೆಗಳಿಗೆ ಬೀಗ ಹಾಕಿ ಕುಟುಂಬ ಸಮೇತ ಜನ ಊರು ತೊರೆಯುತ್ತಾರೆ. ಜಾತ್ರೆಗಾಗಿ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ.

    ಸಾಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರಾವಾರ ಪದ್ಧತಿ ಆಚರಿಸುತ್ತಾರೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡಲ್ಲ. ಇದನ್ನೂ ಓದಿ: ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ಸರ್ವ ಧರ್ಮೀಯರು ಮನೆ ತೊರೆದು ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲಿಸುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಜನರು ಉದ್ಯಾನಗಳಲ್ಲಿ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ.

    ಕಲಘಟಗಿ (Kalaghatagi) ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಎನ್ನುವ ಶಕ್ತಿ ದೇವತೆಗಳಿದ್ದಾರೆ. ಈ ಮೂವರು ಸಹೋದರಿಯರು ಅನಾದಿಕಾಲದಿಂದಲೂ ಊರಿನ ಜನರನ್ನು ರಕ್ಷಿಸುತ್ತಿದ್ದಾರೆ ಅನ್ನೋ ನಂಬಿಕೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳಾ ದಿನಾಚರಣೆ ದಿನ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರಿಂದ ಪ್ರತ್ಯೇಕ ಅಶ್ಲೀಲ ನೃತ್ಯ

    ಮಹಿಳಾ ದಿನಾಚರಣೆ ದಿನ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರಿಂದ ಪ್ರತ್ಯೇಕ ಅಶ್ಲೀಲ ನೃತ್ಯ

    ಮಂಡ್ಯ: ವಿಶ್ವ ಮಹಿಳೆಯರ ದಿನದಂದೇ ಮಧ್ಯರಾತ್ರಿವರೆಗೆ ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆತಂದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಅಶ್ಲೀಲ ನೃತ್ಯ ಮಾಡಿಸಿದ್ದಾರೆ.

    ನಾಗಮಂಗಲ ತಾಲೂಕಿನ ತೊಳಸಿ ಕೊಂಬರಿ ಗೇಟ್ ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಜೆಡಿಎಸ್ ಶಾಸಕ ಸುರೇಶ್‍ಗೌಡ ಹಾಗೂ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬೆಂಬಲಿಗರು ಪ್ರತ್ಯೇಕವಾಗಿ ಆರ್ಕೇಸ್ಟ್ರಾ ಆಯೋಜನೆ ಮಾಡಿದ್ದರು. ಈ ವೇಳೆ ಎರಡು ಪಕ್ಷದ ಬೆಂಬಲಿಗರು ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆಸಿ ಹಸಿ-ಬಿಸಿಯಾಗಿ ನೃತ್ಯ ಮಾಡಿಸಿದ್ದಾರೆ. ಇದನ್ನೂ ಓದಿ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    ಕಾಂಗ್ರೆಸ್ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಬೆಳಗ್ಗೆ ವೈರಲ್ ಆಗಿತ್ತು. ಇದೀಗ ಜೆಡಿಎಸ್ ಬೆಂಬಲಿಗರು ಆಯೋಜಿಸಿದ್ದ ಅಶ್ಲೀಲ ಮಾದರಿ ನೃತ್ಯ ಬಿಡುಗಡೆಯಾಗಿದೆ. ರಾಜಕೀಯ ಲಾಭಕ್ಕಾಗಿ ಎಲ್ಲದಕ್ಕೂ ಜೈ ಅನ್ನುವ ಈ ರಾಜಕೀಯ ಪಕ್ಷಗಳು, ವಿಶ್ವ ಮಹಿಳಾ ದಿನದಂದೇ ಅಶ್ಲೀಲ ಮಾದರಿ ಡ್ಯಾನ್ಸ್ ಮಾಡಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುವಕರ ಓಲೈಕೆಗೆ ಹೀಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರು ಮಾಡುತ್ತಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಗ್ರಾಮ ದೇವತೆ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನ ಕರೆಸಿ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಗ್ರಾಮದಲ್ಲಿಯೇ ಆಯೋಜನೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯರಾತ್ರಿ ಅರೆಬರೆ ಬಟ್ಟೆ ತೊಟ್ಟು ಮಾದಕ ನೃತ್ಯ ಮಾಡಿ ಗ್ರಾಮದ ಯುವಕರನ್ನು ಹುಡುಗಿಯರು ಹುಚ್ಚೆಬ್ಬಿಸಿದ್ದು, ಹಾಲಿ-ಮಾಜಿ ಶಾಸಕರ ಬೆಂಬಲಿಗರಿಂದ ಪ್ರತ್ಯೇಕ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಜೆಡಿಎಸ್ ಪಕ್ಷದ ಶಾಸಕ ಸುರೇಶ್ ಗೌಡ ಬೆಂಬಲಿಗರು ಪ್ರತ್ಯೇಕವಾಗಿ ಪ್ರತ್ಯೇಕ ವೇದಿಕೆಯಲ್ಲಿ ಸನ್ಮಾನ ಮಾಡಿ ನಂತರ ಅವರಿಬ್ಬರೂ ತೆರಳಿದ ನಂತರ ಈ ರೀತಿ ನೃತ್ಯ ನಡೆಸಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ದಿನವೇ ಪಡ್ಡೆ ಹುಡುಗಿಯರನ್ನು ಕರೆಸಿ ಮಧ್ಯರಾತ್ರಿವರೆಗೂ ಕುಣಿಸಿದ್ದಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.

  • ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    – ವೇದಿಕೆ ಮೇಲೆ ಬಾಲಕನನ್ನು ಕರೆ ತಂದ ಡ್ಯಾನ್ಸರ್‌ಗಳು

    – ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್‍ನಿಂದ ರಸಮಂಜರಿ ಕಾರ್ಯಕ್ರಮ

    ಮಂಡ್ಯ: ಚುನಾವಣೆ ಅಖಾಡ ಹತ್ತಿರ ಆಗುತ್ತಿದ್ದ ಹಾಗೆ ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಒಂದೆಲ್ಲಾ ಒಂದು ಗಿಮಿಕ್‍ಗಳನ್ನು ಮಾಡುತ್ತಾನೆ ಇರುತ್ತಾರೆ. ಇದೀಗ ಅಂತಹದೇ ಒಂದು ಗಿಮಿಕ್ ಮಾಡಲು ಹೋಗಿ ಕಾಂಗ್ರೆಸ್ ಮುಖಂಡನ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮದ ಗ್ರಾಮದೇವತೆ ಹಬ್ಬದ ಅಂಗವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಎರಡು ಗುಂಪು ಪ್ರತ್ಯೇಕವಾಗಿ ವೇದಿಕೆ ನಿರ್ಮಾಣ ಮಾಡಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಂದು ಗುಂಪು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಮತ್ತೊಂದು ಗುಂಪು ಶಾಸಕ ಸುರೇಶ್‍ಗೌಡರನ್ನು ಕರೆಸಿ ವೇದಿಕೆಯ ಮೇಲೆ ಸನ್ಮಾನ ಮಾಡಿ ವೇದಿಕೆ ಮೇಲೆ ಭಾಷಣ ಮಾಡಿಸಿದ್ದರು. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಇದಾದ ಬಳಿಕ ಸುರೇಶ್‍ಗೌಡ ಬೆಂಬಲಿಗರು ವೇದಿಕೆಯ ಮೇಲೆ ಒಂದಷ್ಟು ನೃತ್ಯ ಕಾರ್ಯಕ್ರಮವನ್ನು ನಡೆಸಿದರು. ಇನ್ನೊಂದು ಕಡೆ ಇದೇ ಊರಿನಲ್ಲಿ ಚಲುವರಾಯಸ್ವಾಮಿ ಬೆಂಬಲಿಗರು ಸಹ ನೃತ್ಯ ಕಾರ್ಯಕ್ರಮ ಮಾಡಿದ್ದರು. ಆದರೆ ಚಲುವರಾಯಸ್ವಾಮಿ ಬೆಂಬಲಿಗರು ಮಾಡಿಸಿದ ಈ ನೃತ್ಯ ಕಾರ್ಯಕ್ರಮದಲ್ಲಿ ಡ್ಯಾನ್ಸರ್‍ಗಳು ಅರೆಬರೆ ಬಟ್ಟೆ ಧರಿಸಿ ನೃತ್ಯ ಮಾಡಿದ್ದರು. ಈ ವೇಳೆ ಬಾಲಕನೊಬ್ಬನನ್ನು ಡ್ಯಾನ್ಸರ್‍ಗಳು ವೇದಿಕೆಯ ಮೇಲೆ ಕರೆತಂದು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ನೃತ್ಯಗಾರ್ತಿಯರು ಇಡೀ ಕಾರ್ಯಕ್ರಮ ಉದ್ದಕ್ಕೂ ಅಶ್ಲೀಲವಾಗಿ ನಡೆದುಕೊಂಡಿದ್ದು, ಸಭ್ಯಸ್ಥರು ತಲೆ ತಗ್ಗಿಸುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಚಲುವರಾಯಸ್ವಾಮಿ ಬೆಂಬಲಿಗರು ಈ ರೀತಿ ಕಾರ್ಯಕ್ರಮ ನಡೆಸಿದ್ದರಿಂದ ಮಂಡ್ಯ ಜಿಲ್ಲೆಯ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಹಿಂದೆ 2004ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ಚುನಾವಣೆ ಪೂರ್ವದಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಸಿದ್ದರು. ಇದಾದ ಬಳಿಕ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರ ಜೊತೆಗೆ ಆ ಚುನಾವಣೆಯಲ್ಲಿ ಶಿವರಾಮೇಗೌಡ ಸೋಲು ಕಂಡಿದ್ದರು. ಇದೀಗ ಅದೇ ಹಾದಿಯನ್ನು ಚಲುವರಾಯಸ್ವಾಮಿ ಬೆಂಬಲಿಗರು ಹಿಡಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

    ಒಟ್ಟಾರೆ ಗ್ರಾಮದೇವತೆ ಹಬ್ಬದ ನೆಪದಲ್ಲಿ ಈ ರೀತಿಯ ಅಶ್ಲೀಲ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಕ್ಕರೆ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಲುವರಾಯಸ್ವಾಮಿ ಬೆಂಬಲಿಗರ ಈ ವರ್ತನೆ ವಿರುದ್ಧ ಹಾಗೂ ಚಲುವರಾಯಸ್ವಾಮಿ ವಿರುದ್ಧ ಸದ್ಯ ನಾಗಮಂಗಲದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.