Tag: ಗ್ರಾಮ

  • ಕಾರವಾರದಲ್ಲಿ ಸೇತುವೆ ಸಂಪರ್ಕ ಬಂದ್- ಕಿ.ಮೀ ಗಟ್ಟಲೇ ವ್ಯಕ್ತಿ ಹೊತ್ತೊಯ್ದ ಜನ

    ಕಾರವಾರದಲ್ಲಿ ಸೇತುವೆ ಸಂಪರ್ಕ ಬಂದ್- ಕಿ.ಮೀ ಗಟ್ಟಲೇ ವ್ಯಕ್ತಿ ಹೊತ್ತೊಯ್ದ ಜನ

    ಕಾರವಾರ: ದೇಶ ಎಷ್ಟೇ ಮುಂದುವರಿದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಮಾತ್ರ ಅಭಿವೃದ್ಧಿ ಎನ್ನುವುದೇ ಮರೀಚಿಕೆ. ರಸ್ತೆಗಳಿಲ್ಲದೇ ಅದೆಷ್ಟೋ ಗ್ರಾಮಗಳು ಇಂದು ಸಹ ಅನಾರೋಗ್ಯ ಪೀಡಿತ ಜನರನ್ನು ಕರೆತರಲು ಜೋಳಿಗೆಯೇ ಆಶ್ರಯ. ಮಳೆಬಂತು ಎಂದರೇ ಜಲದಿಗ್ಭಂದನವಾಗುವ ಗ್ರಾಮದ ಜನರ ಸಂಕಷ್ಟ ಕೇಳುವರೇ ಇಲ್ಲ.

    ಉತ್ತರ ಕನ್ನಡ (UttaraKannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಕೆಂದಗಿ ಗ್ರಾಮದ ಉಮೇಶ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕತ್ತಿ ಜಾರಿದ ಪರಿಣಾಮ ಕಾಲಿಗೆ ಗಂಭೀರ ಗಾಯಗೊಂಡಿದ್ದ. ಆದರೆ ಭಾರೀ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ನಾಲ್ಕು ಹಳ್ಳಗಳಿಂದಾಗಿ ಜಲದಿಗ್ಭಂದನ ಉಂಟಾಗಿದ್ದು, ಆಸ್ಪತ್ರೆಗೆ (Hospital) ತೆರಳಲಾಗದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ನಾಲ್ಕೈದು ದಿನಗಳ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಈ ವೇಳೆ ಗ್ರಾಮಸ್ಥರು ಒಟ್ಟಾಗಿ ಜೋಳಿಗೆ ಮೂಲಕ ಗಾಯಗೊಂಡಿದ್ದ ಉಮೇಶ್‌ನನ್ನ ಹೆಗಲ ಮೇಲೆ ಹೊತ್ತುಕೊಂಡು ಸುಮಾರು 15 ಕಿಲೋ ಮೀಟರ್ ದೂರ ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಕರೆತಂದಿದ್ದಾರೆ. ಬಳಿಕ ಹಟ್ಟಿಕೇರಿ ಗ್ರಾಮದಿಂದ ವಾಹನದ ಮೂಲಕ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು ರಸ್ತೆಯಿಲ್ಲದ ಪರಿಣಾಮ ಗಾಯಗೊಂಡು ವಾರದ ಬಳಿಕ ಆಸ್ಪತ್ರೆಗೆ ಸೇರುವಂತಾಗಿದೆ.

    ಕೆಂದಗಿ ಗ್ರಾಮವು ದಟ್ಟ ಕಾಡಿನ ನಡುವೆ ಇದ್ದು ಏನೇ ಅಗತ್ಯ ವಸ್ತುಗಳು ಬೇಕಿದ್ದರೂ ಸಹ 18 ಕಿಲೋ ಮೀಟರ್ ದೂರದ ಹಟ್ಟಿಕೇರಿ ಗ್ರಾಮಕ್ಕೆ ಆಗಮಿಸಬೇಕು. ಗ್ರಾಮಕ್ಕೆ ತೆರಳಬೇಕಂದ್ರೆ ರಸ್ತೆಯೇ ಇಲ್ಲ. ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನ ಕಾಲು ಹಾದಿಯಲ್ಲಿ ನಡೆದುಕೊಂಡು ದಾಟಿಯೇ ಬರಬೇಕು. ಮಳೆಗಾಲದಲ್ಲಂತೂ ಗ್ರಾಮಸ್ಥರ ಪಾಡು ಹೇಳತೀರದಾಗಿದ್ದು ಹಳ್ಳಗಳು ತುಂಬಿ ಹರಿಯುವ ಸಂದರ್ಭದಲ್ಲಿ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ. ಹೀಗಾಗಿಯೇ ಗ್ರಾಮದಲ್ಲಿನ ವಿದ್ಯಾರ್ಥಿಗಳು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ದೇಶ ಚಂದ್ರನ ಮೇಲೆ ತಲುಪಿದರೂ ಸಹ ಇದುವರೆಗೂ ರಸ್ತೆ ಸಂಪರ್ಕವಿಲ್ಲದೇ ಈವಗ್ರಾಮದ ಜನ ನಗರ ಪ್ರದೇಶಕ್ಕೆ ತಲುಪದ ಸ್ಥಿತಿ ಇದೆ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಗ್ರಾಮಕ್ಕೆ ಕನಿಷ್ಠ ಸಂಪರ್ಕ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2.16 ಕೋಟಿಗೆ ಹಳ್ಳಿಯೇ ಮಾರಾಟ – ಸ್ಪೇನ್‌ನ ಈ ಗ್ರಾಮದಲ್ಲಿ ಏನೆಲ್ಲಾ ಇದೆ ಗೊತ್ತಾ?

    2.16 ಕೋಟಿಗೆ ಹಳ್ಳಿಯೇ ಮಾರಾಟ – ಸ್ಪೇನ್‌ನ ಈ ಗ್ರಾಮದಲ್ಲಿ ಏನೆಲ್ಲಾ ಇದೆ ಗೊತ್ತಾ?

    ಮ್ಯಾಡ್ರಿಡ್: ಬಹಳಷ್ಟು ಮಂದಿ ಮನೆ, ಸೈಟು ಹಾಗೂ ವಿಲ್ಲಾಗಳನ್ನು ಖರೀದಿಸುವ ಕನಸು ಕಾಣ್ತಾರೆ. ಒಂದು ಹಳ್ಳಿಯನ್ನೇ ಖರೀದಿಸಿದ್ದನ್ನು ಎಂದಾದರೂ ಕಂಡಿದ್ದೀರಾ? ಹೌದು. ಸ್ಪೇನ್‌ನಲ್ಲಿ ಕಳೆದ 30 ವರ್ಷಗಳಿಂದ ಜನವಸತಿ ಇಲ್ಲದ ಗ್ರಾಮವೊಂದು (Spanish Village) 227,000 ಯುರೋಗಳಿಗೆ (2.16 ಕೋಟಿ ರೂ) ಮಾರಾಟವಾಗಿದೆ.

    ಮಾರಾಟವಾಗಿರುವ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು ಪೋರ್ಚುಗಲ್‌ನ ಗಡಿಯ ಝಮೊರಾ ಪ್ರಾಂತ್ಯದಲ್ಲಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಿಂದ 3 ಗಂಟೆಯಲ್ಲಿ ಇಲ್ಲಿಗೆ ಪ್ರಯಾಣಿಸಬಹುದಾಗಿದೆ. ಈ ಗ್ರಾಮವು 44 ಮನೆಗಳು, ಹೋಟೆಲ್ (Hotel), ಚರ್ಚ್, ಶಾಲೆ ಹಾಗೂ ಸುಸಜ್ಜಿತ ಈಜುಕೊಳ (Swimming Pool), ಸಿವಿಲ್ ಗಾರ್ಡ್ ಹಾಗೂ ಬ್ಯಾರಕ್ ಕಟ್ಟಡಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    2000 ಇಸವಿಯ ಆರಂಭದಲ್ಲಿ ಉದ್ಯಮಿಯೊಬ್ಬರು ಈ ಹಳ್ಳಿಯನ್ನು ಜನಪ್ರಿಯ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಖರೀದಿಸಿದ್ದರು. ಆದರೆ ಯುರೋ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿಪಡಿಸುವ ಯೋಜನೆ ಕೈಬಿಡಲಾಯಿತು.

    ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ತಿ ವಾರಸುದಾರ ರೋನಿ ರೋಡ್ರಿಗಸ್, ನಾನು ನಗರವಾಸಿಯಾದ್ದರಿಂದ ಹಾಗೂ ಇದು ನನ್ನ ಪಿತ್ರಾರ್ಜಿತ ಆಸ್ತಿಯಾಗಿರುವುದರಿಂದ ಇದನ್ನು ದೇಣಿಗೆಯಾಗಿ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಗ್ರಾಮ ಶೇ.100 ರಷ್ಟು ಅಭಿವೃದ್ಧಿ ಪಡಿಸಲು 2 ದಶಲಕ್ಷ ಯುರೋ ಮೀರುವುದಿಲ್ಲ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    Live Tv
    [brid partner=56869869 player=32851 video=960834 autoplay=true]

  • ಬೈದವರನ್ನು ಅಟ್ಟಾಡಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಿರುವ ಕೋಣ – ಕಂಟೆಮ್ಮ ದೇವಿಯ ಪಾವಡಕ್ಕೆ ಹೈರಾಣಾದ ಗ್ರಾಮಸ್ಥ

    ಬೈದವರನ್ನು ಅಟ್ಟಾಡಿಸಿಕೊಂಡು ಸೇಡು ತೀರಿಸಿಕೊಳ್ಳುತ್ತಿರುವ ಕೋಣ – ಕಂಟೆಮ್ಮ ದೇವಿಯ ಪಾವಡಕ್ಕೆ ಹೈರಾಣಾದ ಗ್ರಾಮಸ್ಥ

    ಕೊಪ್ಪಳ: ದೇವರಿಗೆ ಹರಕೆಗೆಂದು ಬಿಟ್ಟಿರುವ ಕೋಣವೊಂದು ಬೈದು, ಹೊಡೆದ ಕಾರಣಕ್ಕಾಗಿ ವ್ಯಕ್ತಿಯೋರ್ವನಿಗೆ ಬೆಂಬಿಡದೆ ಕಾಡುತ್ತಿರುವ ವಿಚಿತ್ರ ಘಟನೆಯೊಂದು ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್ ಎಂಬಾತ ಬೈದು ಓಡಿಸಿದ್ದಾನೆ. ಆ ಬಳಿಕ ಕೋಣ ಎಲ್ಲೆಂದರಲ್ಲಿ ರೋಷನ್  ಕಂಡೊಡನೆ ತಿವಿಯಲು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    ದಾರಿಯಲ್ಲಿ ಸಿಕ್ಕರೆ ಅಟ್ಟಾಡಿಸಿಕೊಂಡು ಮನೆಯ ಮುಂದೆ ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಿಗೆ ಹರಕೆಯಾಗಿ ಬಿಟ್ಟಿರುವ ಕೋಣ ಇದಾಗಿರುವುದರಿಂದ ಇದು ದೇವಿಯ ಪವಾಡ ಹಾಗಾಗಿ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ರೋಷನ್ ಜೊತೆ ಕೋಣದೊಂದಿಗೆ ತಪ್ಪಾಯಿತು ಎಂದು ಬೇಡಿಕೊಳ್ಳಲು ಗ್ರಾಮಸ್ಥರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ – ಬೆಕ್ಕು ಸಾಕಿದ ಪೊಲೀಸರು

    Live Tv

  • ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರ: ಇಂದು ಅಂಗೈಯಲ್ಲೇ ಎಲ್ಲವೂ ಅನ್ನೋ ಅಷ್ಟರಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಆದರೂ ಈ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಾಗಿದೆ. ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದ ಹೊರಗಿಟ್ಟಿರುವ ಘಟನೆ ನಡೆದಿದೆ.

    ಹೌದು. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದ್ದಾರೆ.

    ಗ್ರಾಮದ ಶ್ರೀರಂಗಪ್ಪ ದೇವರಿಗಾಗಿ ಈ ಮೌಢ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಉಲ್ಲಂಘಿಸಿದ್ರೇ ಗ್ರಾಮಕ್ಕೆ ಕೇಡಾಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರನ್ನು ಆವರಿಸಿದೆ. ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಗಳಿಗೆ ಹಾಗೂ ದೊಡ್ಡವರಾಗುವ ಬಾಲಕಿಯರಿಗೂ ಅನ್ವಯಿಸುತ್ತೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ತಮ್ಮ ದಿನದ ಅವಧಿ ಮುಗಿಯುವರೆಗೂ ಅವರು ಅಲ್ಲೇ ವಾಸವಿರಬೇಕು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಲೆಕ್ಕ ಹಾಕಿದರೆ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರ. ರಾಜಧಾನಿಯಲ್ಲಿ ಆಧುನೀಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಮಾತ್ರ ವಿರ್ಪಯಾಸವೇ ಸರಿ. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

  • ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

    ಹೈದರಾಬಾದ್: ನೀರಿನಲ್ಲಿ ಮುಳುಗುತ್ತಿರುವ ಒಬ್ಬರನೊಬ್ಬರು ಪರಸ್ಪರ ಉಳಿಸಲು ಹೋಗಿ, ಒಂದೇ ಕುಟುಂಬದ ಮೂರು ತಲೆಮಾರುಗಳ ಪುರುಷರು ಸರೋವರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

    ಕೃಷ್ಣಮೂರ್ತಿ (65), ಲಕ್ಕಿ (12), ನಾಗರಾಜು (35) ಮೃತರಾಗಿದ್ದಾರೆ. ನರಸಂಪೇಟೆ ಮಂಡಲದ ಚಿನ್ನ ಗುರಿಜಾಲ ಗ್ರಾಮದ ನಿವಾಸಿಗಳಾಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಮೂವರು ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್ ಸ್ಟೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

    ಕೃಷ್ಣಮೂರ್ತಿ ಕೆರೆಯಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು. ಕೃಷ್ಣಮೂರ್ತಿ ಜೊತೆಯಲ್ಲಿದ್ದ ಅವರ ಮೊಮ್ಮಗ ಲಕ್ಕಿ ತಾತನನ್ನು ರಕ್ಷಿಸಲು ಕೆರೆಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ಮುಳುಗಲು ಪ್ರಾರಂಭಿಸಿದರು. ಸಮೀಪದಲ್ಲಿಯೇ ಇದ್ದ ಕೃಷ್ಣಮೂರ್ತಿ ಮಗ ನಾಗರಾಜು ತನ್ನ ತಂದೆ ಮತ್ತು ಮಗನನ್ನು ರಕ್ಷಿಸಲು ಸರೋವರಕ್ಕೆ ಹಾರಿದನು. ಮೂವರು ನೀರಿನ ಆಳಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    ಪೊಲೀಸರು ಗ್ರಾಮಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಸ್ಥರ ಪ್ರಕಾರ, ಅವರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

  • ಮದುವೆ ಮನೆಯಿಂದ ಹೊರಟವರು ಮಸಣ ಸೇರಿದ್ರು

    ಮದುವೆ ಮನೆಯಿಂದ ಹೊರಟವರು ಮಸಣ ಸೇರಿದ್ರು

    ಭುವನೇಶ್ವರ: ಮದುವೆ ಸಮಾರಂಭಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ, ಭೀಕರವಾದ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಒಡಿಶಾದ ಸೋನಾಪುರ ಜಿಲ್ಲೆಯ ಮಹಾನದಿ ಸೇತುವೆ ಮೇಲೆ ನಡೆದಿದೆ.

    ಕಾರು, ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲದಿದ್ದರೆ, ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ

    ಸೋನಾಪುರ ಜಿಲ್ಲೆಯ ಉಲ್ಲುಂದಾ ನಿಮ್ನಾ ಗ್ರಾಮದ 10 ಜನರು ಕೌದಿಯಾಮುಂಡ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಕಾರ್‌ನಲ್ಲಿ ವಾಪಸ್ ಆಗುತ್ತಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸೋನಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬುರ್ಲಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

  • ಊಟಕ್ಕೆ ಕರೆದಿಲ್ಲವೆಂದು ಹಲ್ಲೆಗೈದು ಗೆಳೆಯನ ಪ್ರಾಣ ತೆಗೆದ

    ಊಟಕ್ಕೆ ಕರೆದಿಲ್ಲವೆಂದು ಹಲ್ಲೆಗೈದು ಗೆಳೆಯನ ಪ್ರಾಣ ತೆಗೆದ

    ಹಾಸನ: ಊಟಕ್ಕೆ ಕರೆಯಲಿಲ್ಲಾ ಎನ್ನುವ ಕಾರಣಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶರತ್ (28) ಕೊಲೆಯಾದ ಯುವಕ. ನಟರಾಜ್‍ ಬಂಧಿತ ಆರೋಪಿಯಾಗಿದ್ದಾನೆ. ಕುರಿ ಊಟಕ್ಕೆ ಕರೆದಿಲ್ಲ ಎಂದು ನಡೆದ ಜಗಳಲ್ಲಿ ಶರತ್ ಮೇಲೆ ಹಲ್ಲೆ ನಡೆಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶರತ್ ಸಾವನ್ನಪಿದ್ದಾನೆ.

    ಜನವರಿ 16 ರಂದು ಗ್ರಾಮದ ಗಿರೀಶ್ ಸಖರಾಯಪಟ್ಟಣದಲ್ಲಿ ದೇವರ ಹರಕೆ ಕೊಟ್ಟು ಊಟ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಶರತ್ ಮತ್ತು ಮನೆಯವರು ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾಮದ ನಟರಾಜ್‍ನನ್ನು ಆಹ್ವಾನಿಸಿರಲಿಲ್ಲ. ನಮ್ಮನ್ನು ಯಾಕೆ ಊಟಕ್ಕೆ ಕರೆದಿಲ್ಲ ಎಂದು ನಟರಾಜ್ ತನ್ನ ಗೆಳೆಯ ಶರತ್ ಜೊತೆ ಜಗಳ ಮಾಡಿದ್ದಾನೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಶರತ್ ಇದು ನಮ್ಮಮನೆ ಕಾರ್ಯಕ್ರಮ ಅಲ್ಲ. ಗಿರೀಶ್ ಅವರ ಮನೆಯ ಕಾರ್ಯಕ್ರಮ. ಹೀಗಾಗಿ ಯಾಕೆ ಕರೆದಿಲ್ಲ ಅವರನ್ನೇ ಕೇಳು ಎಂದಿದ್ದಾನೆ. ಇದೇ ವಿಷ್ಯವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದರು. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    POLICE JEEP

    ಈ ವಿಚಾರವಾಗಿ ಕುಪಿತಗೊಂಡು ಭಾನುವಾರ ರಾತ್ರಿ ಮನೆಗೆ ನುಗ್ಗಿದ ನಟರಾಜ್ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಶರತ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಶರತ್‍ನನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಶರತ್ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    ಜೈಪುರ್: ಗ್ರಾಮದಲ್ಲಿ ಕತ್ತೆ ಕಳವಾಗಿವೆ ಹುಡುಕಿ ಕೊಡಿ ಎಂದು ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಕತ್ತೆಗಳ ಕಳವು ಪ್ರಕರಣ ರಾಜಸ್ಥಾನದ ಹನುಮಾನ್‍ಗಢ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಈ ಜಿಲ್ಲೆಯ ಕಾಲುವೆ ಪ್ರದೇಶದಲ್ಲಿರುವ ಗ್ರಾಮಗಳ ಜನರು ಸರಕುಗಳ ಸಾಗಣೆ, ಮಣ್ಣು ಹೊರುವುದಕ್ಕಾಗಿ ಕತ್ತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿದ್ದರು. ಅವುಗಳ ಕೆಲಸ ಮುಕ್ತಾಯವಾದ ನಂತರ ಬಯಲು ಪ್ರದೇಶಗಳಲ್ಲಿಯೇ ಮೇಯಲು ಬಿಡುತ್ತಿದ್ದರು. ಕೆಲವು ದಿನಗಳ ಹಿಂದೆ ಕತ್ತೆಗಳು ಕಾಣೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಕಳೆದ ಕೆಲವು ದಿನಗಳಿಂದ 40 ಕ್ಕೂ ಹೆಚ್ಚು ಕತ್ತೆಗಳು ನಾಪತ್ತೆಯಾಗಿದ್ದು, ಸ್ಥಳೀಯ ಕಾರ್ಯಕರ್ತರು ಹಾಗೂ ಕತ್ತೆಗಳ ಮಾಲಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. 15 ಕತ್ತೆಗಳನ್ನು ಹುಡುಕಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ ಈ ಕತ್ತೆಗಳನ್ನು ಮಾಲೀಕರು ಕರೆದಾಗ ಕತ್ತೆಗಳು ಯಾವುದೇ ಪ್ರತಿಕ್ರಿಯೇ ನೀಡಿಲ್ಲ.

    ಈ ಕತ್ತೆಗಳು ನಮ್ಮವೇ ಆಗಿದ್ದರೆ ಅವುಗಳಿಗೆ ಇಡಲಾಗಿದ್ದ ಹೆಸರನ್ನು ಕೂಗಿದ ತಕ್ಷಣ ಸ್ಪಂದಿಸಬೇಕಿತ್ತು ಇವು ನಮ್ಮ ಕತ್ತೆಗಳಲ್ಲ, ನಮ್ಮ ಕತ್ತೆಗಳು ಮಾತ್ರ ನಮ್ಮ ಕೆಲಸಗಳಿಗೆ ಪಳಗಿದ್ದವು ಬೇರೆ ಕತ್ತೆಗಳನ್ನು ಉಪಯೋಗಿಸುವುದಕ್ಕೆ ಆಗುವುದಿಲ್ಲ ಎಂದು ಮಾಲೀಕರು ತಗಾದೆ ತೆಗೆದಿದ್ದಾರೆ.

    ಯಾವುದೇ ಗುರುತುಗಳಿಲ್ಲದೇ ಕತ್ತೆಗಳನ್ನು ಹುಡುಕುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಠಾಣಾಧಿಕಾರಿ ವಿಜಯೇಂದ್ರ ಶರ್ಮ ಆದರೆ ನಮಗೆ ಬೇರೆ ಕಥೆಗಳಲ್ಲೆಲ್ಲಾ ಬೇಡ ನಮಗೆ ನಮ್ಮದೇ ಕತ್ತೆಗಳು ಬೇಕೆಂದು ಮಾಲಿಕರು ಪಟ್ಟು ಬಿಡದೇ ಪೊಲೀಸರನ್ನು ಕಾಡುತ್ತಿದ್ದಾರೆ. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ಚುನಾವಣೆ ಸನಿಹದಲ್ಲೇ ಇರುವುದರಿಂದ ರಾಜಕೀಯ ನಾಯಕರೂ ಕತ್ತೆ ಮಾಲಿಕರಿಗೇ ಬೆಂಬಲವಾಗಿ ನಿಂತಿದ್ದು, ಪೊಲೀಸರಿಗೆ ಇದು ಪೀಕಲಾಟಕ್ಕೆ ಬಂದಿರುವುದರಿಂದ 302, 307, ಎನ್ ಡಿಪಿಎಸ್ ಸೇರಿದಂತೆ ಗಂಭೀರ ಪ್ರಕರಣಗಳನ್ನೂ ಬದಿಗಿರಿಸಿ ಕತ್ತೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇದಕ್ಕಾಗಿ 4-5 ಸದಸ್ಯರನ್ನೊಳಗೊಂಡ ತಂಡವನ್ನೂ ರಚಿಸಲಾಗಿದೆ.  ಇದನ್ನೂ ಓದಿ: ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಬೇಡಿಕೆ

  • ವಿದ್ಯುತ್ ತಂತಿ ತಗುಲಿ 11 ಸಾವಿರ ರೂ. ಭತ್ತದ ಹುಲ್ಲು ಸುಟ್ಟು ಭಸ್ಮ

    ವಿದ್ಯುತ್ ತಂತಿ ತಗುಲಿ 11 ಸಾವಿರ ರೂ. ಭತ್ತದ ಹುಲ್ಲು ಸುಟ್ಟು ಭಸ್ಮ

    ಹಾವೇರಿ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿದ್ದು, ಭತ್ತದ ಹುಲ್ಲು ಧಗಧಗನೆ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಬಳಿ ಇರೋ ಕುಡುಪಲಿ-ಕಡೂರು ರಸ್ತೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಗಿಹಳ್ಳಿ ಗ್ರಾಮ ನಿವಾಸಿಯಾಗಿರುವ, ರುದ್ರಪ್ಪ ಮಕರಿ ಅವರಿಗೆ ಸೇರಿದ ಭತ್ತದ ಹುಲ್ಲು ಇದಾಗಿದೆ. ಬೆಂಕಿ ಹೊತ್ತಿಕೊಂಡಿದ್ದನ್ನ ಗಮನಿಸಿ ಟ್ರ್ಯಾಕ್ಟರ್ ನಿಂದ ಭತ್ತದ ಹುಲ್ಲು ಕೆಳಗಿಳಿಸಿ ಪ್ರಾಣಹಾನಿ ಮತ್ತು ವಾಹನ ಹಾನಿಯನ್ನು ರೈತರು ತಪ್ಪಿಸಿದ್ದಾರೆ. ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಕರಕಲು ಆಗಿದೆ.

    ಹನ್ನೊಂದು ಸಾವಿರ ರುಪಾಯಿ ಮೌಲ್ಯದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರೈತರೊಬ್ಬರಿಂದ ಭತ್ತದ ಹುಲ್ಲು ಖರೀದಿಸಿ ತರುತ್ತಿದ್ದ ವೇಳೆ ದುರ್ಘಟನೆ ಈ ನಡೆದಿದೆ. ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರಿಂದ ವಾಹನಗಳ ಓಡಾಟಕ್ಕೆ ಆಗುತ್ತಿದ್ದ ತೊಂದರೆಯಾಗಿದೆ. ಇದನ್ನೂ ಓದಿ:  ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

    ರಸ್ತೆ ಪಕ್ಕಕ್ಕೆ ಬೆಂಕಿ ಹೊತ್ತಿಕೊಂಡಿರೋ ಭತ್ತದ ಹುಲ್ಲು ಸರಿಸಿ ಬಸ್ ದಾಟಿಸಿದ ಬಸ್ಸಿನಲ್ಲಿದ್ದ ಪ್ರಯಾಣಿಕರು. ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದ್ದರೂ ಇನ್ನೂ ಬೆಂಕಿ ಉರಿಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಇನ್ನೂವರೆಗೂ ಬಂದಿಲ್ಲ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

  • ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಯಾದಗಿರಿ: ಕುಡಿದ ಮತ್ತಿನಲ್ಲಿ ಸ್ನೇಹತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಯಾದಗಿರಿಯ ಸೈದಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಸಾಬಯ್ಯ(30) ಮೃತನಾಗಿದ್ದಾನೆ. ಈತ ಯಾದಗಿರಿ ತಾಲೂಕಿನ ನಾಗಾಲಪುರ ಗ್ರಾಮದ ನಿವಾಸಿಯಾಗಿದ್ದನು. ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ವ್ಯಕ್ತಿಯ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

    POLICE JEEP

    ಪ್ರಕರಣದ ಹಿನ್ನೆಲೆ: ಕಳೆದ ನಾಲ್ಕು ವರ್ಷಗಳಿಂದ ಸಾಬಯ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಡಿಪಿ ಜೈನ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಸಾಬಯ್ಯಗೆ ಕಳೆದ ಐದು ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದು, ಮೂವರು ಮುದ್ದಾದ ಮಕ್ಕಳಿದ್ದಾರೆ. ಮೂರನೇ ಮಗನ ತೊಟ್ಟಿಲು ಕಾರ್ಯಕ್ರಮವನ್ನ ಮುಂದಿನ ಸೋಮವಾರ ಇಟ್ಟುಕೊಂಡಿದ್ದ. ಇನ್ನು ಸಾಬಯ್ಯ ಮತ್ತು ಸ್ನೇಹಿತ ಜನ್ನಪ್ಪ ಇಬ್ಬರು ಸೇರಿ ನಿನ್ನೆ ಮದ್ಯಹ್ನದಿಂದಲೇ ಎಣ್ಣೇ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ನಿನ್ನೆ ಸಾಬಯ್ಯ ಜನ್ನಪ್ಪನ ಕರೆದುಕೊಂಡು ತನ್ನ ಸಂಬಂಧಿಕರ ಊರುಗಳಿಗೆ ಸಹ ಹೋಗಿ ಬಂದಿದ್ದಾನೆ. ಇದಾದ ಬಳಿ ನಿನ್ನೆ ಸಂಜೆ ಸೈದಾಪುರ ಪಟ್ಟಣದಲ್ಲಿ ಎಣ್ಣೆ ಖರೀದಿ ಮಾಡಿಕೊಂಡು ಹೋಗಿ ಸೈದಾಪುರದಿಂದ ಸ್ವಲ್ಪ ದೂರ ಹೋಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹತ್ತಿ ಜಮೀನಿನಲ್ಲಿ ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ಇಬ್ಬರ ಮದ್ಯ ಜಗಳ ಕೂಡ ಆಗಿದೆ ಅಂತ ಹೇಳಲಾಗುತ್ತಿದೆ. ಜನ್ನಪ್ಪ ಮದ್ಯದ ನಶೆಯಲ್ಲಿ ತನ್ನ ಸ್ನೇಹಿತ ಸಾಬಯ್ಯಯನ್ನ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಪಾರ್ಟಿ ಮಾಡುವಾಗ ಪದೇ ಪದೇ ನಾನಾ ಎಣ್ಣೆ ಕೊಡಿಸಬೇಕಾ ನಿಂಗೆ ಅಂತ ಸಾಬಯ್ಯ ಜಗಳ ಮಾಡಿದ್ದಾನಂತೆ. ಆದರೆ ಇಬ್ಬರಿಗೂ ನಶೆಯಾಗಿದ್ದ ಅಲ್ಲೆ ರಾತ್ರಿ ವೇಳೆ ಮಲಗಿದ್ದಾರೆ. ಆದರೆ ಜನ್ನಪ್ಪನಿಗೆ ಎಚ್ಚರ ಆದ ಮೇಲೆ ಮದ್ಯದ ನಶೆಯಲ್ಲಿ ಗುಂಡು ಕಲ್ಲು ಎತ್ತಿ ಸಾಬಯ್ಯ ತಲೆ ಮೇಲೆ ಮೂರು ಬಾರಿ ಹಾಕಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ ಸಾಬಯ್ಯ ಸಂಬಂಧಿಕರ ಪ್ರಕಾರ ಯಾರ ಜೊತೆಗೂ ಜಗಳ ಮಾಡಿಕೊಳ್ಳದ ವ್ಯಕ್ತಿ ಅವನಿಗೆ ಯಾರು ಕೊಲೆ ಮಾಡಿದ್ದಾರೆ ಎಲ್ಲರನ್ನ ಬಂಧಿಸಬೇಕು. ಒಬ್ಬನೇ ಸಾಬಯ್ಯನನ್ನ ಕೊಲೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಈ ಕೊಲೆ ಹಿಂದೆ ನಾಲ್ಕೈದು ಮಂದಿಯ ಕೈವಾಡವಿದೆ ಅಂತ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.