Tag: ಗ್ರಾನೈಟ್ ಕಲ್ಲು

  • ಮಧ್ಯರಾತ್ರಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ 6 ಲಾರಿ ವಶಕ್ಕೆ

    ಮಧ್ಯರಾತ್ರಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ 6 ಲಾರಿ ವಶಕ್ಕೆ

    ಕೊಪ್ಪಳ: ಗ್ರಾನೈಟ್ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 6 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕುಷ್ಟಗಿ ಸಮೀಪ ನಡೆದಿದೆ.

    ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕುಷ್ಟಗಿ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ಜನವರಿ 3ರಂದು ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 3 ಲಾರಿಯಲ್ಲಿ ದ್ರಾಕ್ಷಿ ಕಲ್ಲಿನ ಕಂಬ ಹಾಗೂ 3 ಲಾರಿಯಲ್ಲಿ ಗ್ರಾನೈಟ್ ಕಲ್ಲು ಸಾಗಿಸಲಾಗುತ್ತಿತ್ತು. ಆರು ಲಾರಿಗಳನ್ನು ತಪಾಸಣೆ ಮಾಡಿದಾಗ ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ಕಲ್ಲು ಸಿಕ್ಕಿವೆ.

    ಪರಿಶೀಲನೆ ಬಳಿಕ 6 ಲಾರಿ ಸೇರಿದಂತೆ ಕಲ್ಲುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭೂ ವಿಜ್ಞಾನಿಗಳಾದ ವಿಶ್ವನಾಥ್ ಹಾಗೂ ದಿಲೀಪ್ ಕುಮಾರ್ ಇದ್ದರು.

  • ತಡೆಗೋಡೆಗೆ ಡಿಕ್ಕಿಯಾಗಿ ಮನೆಗೆ ಗುದ್ದಿದ್ದ ಗ್ರಾನೈಟ್ ತುಂಬಿದ್ದ ಲಾರಿ

    ತಡೆಗೋಡೆಗೆ ಡಿಕ್ಕಿಯಾಗಿ ಮನೆಗೆ ಗುದ್ದಿದ್ದ ಗ್ರಾನೈಟ್ ತುಂಬಿದ್ದ ಲಾರಿ

    ರಾಮನಗರ: ಗ್ರಾನೈಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿ ನಡೆದಿದೆ.

    ಸುಮಾರು 3 ಗಂಟೆಗೆ ಕನಕಪುರ ಕಡೆಯಿಂದ ಗ್ರಾನೈಟ್ ಕಲ್ಲು ತುಂಬಿದ್ದ ಲಾರಿ ಹೊರಟಿದೆ. ಅಚ್ಚಲು ಗ್ರಾಮದ ಬಳಿ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಅಡ್ಡಾದಿಡ್ಡಿ ಚಲಿಸಿದೆ. ನಂತರ ರಸ್ತೆ ಪಕ್ಕದ ಗೌರಮ್ಮ ಎಂಬವರ ಮನೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಒಳನುಗ್ಗಿದೆ. ಅಲ್ಲದೇ ಗೌರಮ್ಮ ಅವರ ಮನೆ ಗೋಡೆಗೂ ಕೂಡ ಡಿಕ್ಕಿ ಹೊಡೆದಿದೆ.

    ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಂತರ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.