Tag: ಗ್ಯಾಲರಿ

  • ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ – ವೀಕ್ಷಕರಿಗೆ ಇನ್ಮುಂದೆ ಪಾಸ್‌ ಸಿಗಲ್ಲ

    ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ – ವೀಕ್ಷಕರಿಗೆ ಇನ್ಮುಂದೆ ಪಾಸ್‌ ಸಿಗಲ್ಲ

    ನವದೆಹಲಿ: ಕಲಾಪ ನಡೆಯುತ್ತಿರುವಾಗಲೇ ಭದ್ರತಾ ಲೋಪ (Security Breach) ಸಂಭವಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್‌ (Lok Sabha Speaker) ಓಂ ಬಿರ್ಲಾ (Om Birla) ಅವರು ವೀಕ್ಷಕರಿಗೆ ನೀಡುವ ಪಾಸ್‌ ಅನ್ನು ನಿರ್ಬಂಧಿಸಿದ್ದಾರೆ.

    ಇಂದು ಇಬ್ಬರು ಲೋಕಸಭಾ (Lok Sabha) ಗ್ಯಾಲರಿಯಿಂದ ಕಲಾಪ ನಡೆಯುವ ವೇಳೆ ಮೇಲಿನಿಂದ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಘಟನೆಯಿಂದ ಎಚ್ಚೆತ್ತು ಬಿರ್ಲಾ ಅವರು ವೀಕ್ಷಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.  ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ

    ಒಳ ನುಗ್ಗಿದ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರಗಡೆ ಪ್ರತಿಭಟನೆ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು  ಓಂ ಬಿರ್ಲಾ ಹೇಳಿದ್ದಾರೆ.

    ಸಂಸತ್‌ ಒಳ ಪ್ರವೇಶಕ್ಕೆ ಪಾಸ್‌ ಇಲ್ಲದೇ ಯಾರನ್ನು ಬಿಡಲ್ಲ. ಮೂರು ಹಂತದಲ್ಲಿ ತಪಾಸಣೆ ಮಾಡಿಯೇ ಬಿಡಲಾಗುತ್ತದೆ. ಪೆನ್‌, ಪುಸ್ತಕ, ನಾಣ್ಯ ಸೇರಿದಂತೆ ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. ಕಲಾಪ ವರದಿ ಮಾಡುವ ಪತ್ರಕರ್ತರು ಮೊಬೈಲನ್ನು ಒಳಗಡೆ ತೆಗೆದುಕೊಂಡು ಹೋಗುವಂತಿಲ್ಲ. ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ತಪಾಸಣೆ ನಡೆಯುವಾಗ ಅವರು ಕಲರ್‌ ಸ್ಮೋಕ್‌ ತೆಗೆದುಕೊಂಡು ಹೋಗಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ಸಂಸತ್‌ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಈ ದೀನವೇ ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದೆ.

     

  • ಫುಟ್‍ಬಾಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ – 200 ಮಂದಿಗೆ ಗಾಯ

    ಫುಟ್‍ಬಾಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ – 200 ಮಂದಿಗೆ ಗಾಯ

    ತಿರುವನಂತಪುರಂ: ಫುಟ್‍ಬಾಲ್ ಪಂದ್ಯದ ವೇಳೆ ತಾತ್ಕಾಲಿಕವಾಗಿ ನಿರ್ಮಿಸಲಾದ ಗ್ಯಾಲರಿಯೊಂದು ಕುಸಿತಗೊಂಡ ಪರಿಣಾಮ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲ್ಲಾಪುರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

    ಪಂದ್ಯ ಆರಂಭಕ್ಕೂ ಮುನ್ನ ಪ್ರೇಕ್ಷಕರು ಗ್ಯಾಲರಿಯಲ್ಲಿ ಕೂತಿದ್ದರು. ಈ ವೇಳೆ ಏಕಾಏಕಿ ಕುಸಿತಗೊಂಡ ಗ್ಯಾಲರಿ ಅಡಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಮಂಜೆರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆ ಸೇರಿದಂತೆ ವಂದೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ

    ಗ್ಯಾಲರಿ ಕುಸಿತಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ಯಾಲರಿ ಕುಸಿತಗೊಂಡಂತೆ ಪ್ರೇಕ್ಷಕರು ಭಯದಿಂದ ಓಡಲಾರಂಭಿಸಿದ್ದಾರೆ. ಇದರಿಂದಾಗಿ ಹಲವು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಗ್ಯಾಂಗ್ ನೋಡಿ ಸ್ಥಳದಿಂದ ಕಾಲ್ಕಿತ್ತ ಪತಿ- ಮಕ್ಕಳ ಮುಂದೆಯೇ ದಲಿತ ಮಹಿಳೆ ಮೇಲೆ ಸಾಮೂಹಿಕ ರೇಪ್

  • ಅಯೋಧ್ಯೆ ರಾಮ ಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶ

    ಅಯೋಧ್ಯೆ ರಾಮ ಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶ

    ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯಾಗಿ ವರ್ಷ ತುಂಬಿದೆ. ಶ್ರೀ ರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ಈವರೆಗೆ ಭಕ್ತರಿಗೆ ನೋಡುವ ಅವಕಾಶ ಇರಲಿಲ್ಲ. ಇದೀಗ ಕನಸಿನ ಮಂದಿರ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ.

    ರಾಮ ಲಲ್ಲಾನ ದರ್ಶನ ಪಡೆಯುವ ಭಕ್ತರಿಗೆ ಜನ್ಮಭೂಮಿಯಲ್ಲಿ ನಡೆಯುವ ಚಟುವಟಿಕೆ ವೀಕ್ಷಣೆಗೆ ಅವಕಾಶವಿರಲಿಲ್ಲ. ಲಕ್ಷಾಂತರ ಭಕ್ತರ ಬೇಡಿಕೆ ಮತ್ತು ಆಸೆಯನ್ನು ಮನ್ನಿಸಿ ಟ್ರಸ್ಟ್ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಅವಕಾಶ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿದೆ. ರಾಮ ಜನ್ಮಭೂಮಿಗೆ ಭೇಟಿ ನೀಡುವವರು, ಸ್ಥಳದಲ್ಲಿ ನಡೆಯುತ್ತಿರುವ ಮಂದಿರ ನಿರ್ಮಾಣ ಕಾಮಗಾರಿ ನೋಡಲು ಸಾಧ್ಯವಾಗಿದೆ.

    ರಾಮ್ ಜರೋಖಾದಿಂದ ಕಾಮಗಾರಿ ನೋಡಲು ಅನುಕೂಲವಾಗುವಂತೆ ಭಕ್ತರಿಗಾಗಿ ಕಿಟಕಿ ತೆರೆಯಲಾಗಿದೆ. ದರ್ಶನ ಮಾರ್ಗದಲ್ಲಿ ಮಾನಸ್ ಭವನದ ಬಳಿ ನಿರ್ಮಿಸಲಾದ ಪಶ್ಚಿಮ ಗೋಡೆಯ ಮಧ್ಯದಲ್ಲಿ ಗ್ಯಾಲರಿ ಮಾಡಲಾಗಿದೆ. ಜನ ಸರತಿ ಸಾಲಿನಲ್ಲಿ ನಿಂತು ಮಂದಿರ ಕಾಮಗಾರಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಫೋಟೋ ಕ್ಲಿಕ್ಕಿಸುವ ಅವಕಾಶವನ್ನು ಸದ್ಯ ಮಾಡಿಕೊಡಲಾಗಿಲ್ಲ. ಇದಕ್ಕೂ ಬೇಡಿಕೆ ಬರಲು ಶುರುವಾಗಿದೆ. ನೆನಪಿಗಾಗಿ ಫೋಟೋ ಕ್ಲಿಕ್ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಆಡಳಿತ ಮಂಡಳಿಯಲ್ಲಿ ಜನ ಕೇಳಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

    ಈ ರಾಮ್ ಜರೋಖಾದ ವ್ಯವಸ್ಥೆಗೆ ಟ್ರಸ್ಟ್ ರಾಮ ಕಿಂಡಿ ಎಂದು ಹೆಸರಿಸಲಾಗಿದೆ. ಕಿಂಡಿಯನ್ನು 6 ಅಡಿ ಎತ್ತರ 8 ಅಡಿ ಉದ್ದದಲ್ಲಿ ಮಾತ್ರ ತೆರೆಯಲಾಗಿದೆ. ಮುಂದೆ ಸುಮಾರು 20 ಅಡಿ ಉದ್ದದಲ್ಲಿ ಕಿಂಡಿಯನ್ನು ತೆರೆಯಲಾಗುತ್ತದೆ. ಕಬ್ಬಿಣದ ಜಾಲರಿಯನ್ನು ಅಳವಡಿಸಲಾಗಿದೆ. ಇದನ್ನೂ ಓದಿ:ಆ ಪುಸ್ತಕ ಓದಿ ನಾನು ಮಾಂಸಾಹಾರ ತಿನ್ನೋದು ಬಿಟ್ಟೆ: ಸಿಎಂ ಬೊಮ್ಮಾಯಿ

  • ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಕಡೆಗೂ ಕೂಡಿ ಬಂದ ಕಾಲ

    ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಕಡೆಗೂ ಕೂಡಿ ಬಂದ ಕಾಲ

    ಚೆನ್ನೈ: ಕಳೆದ ವರ್ಷ ದೇಶಕ್ಕೆ ಕಾಲಿಟ್ಟ ಹೆಮ್ಮಾರಿ ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಮೆಲ್ಲನೆ ಎಲ್ಲವೂ ಆರಂಭವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಪ್ರೇಮಿಗಳಿಗೆ ಶುಭ ಸುದ್ದಿ ಹೊರಬಿದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಡೆಗೂ ಕೂಡಿ ಬಂದಿದೆ.

    ಈವರೆಗೆ ಕ್ರೀಡಾ ಚಟುವಟಿಕೆಗಳು ನಡೆದರು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆಯುತ್ತಿತ್ತು. ವಿಶೇಷವಾಗಿ ಚೆನ್ನೈನ ಚಿದಂಬರಂ ಕ್ರೀಡಾಂಗಣ ಕೊರೊನಾ ಮುಂಚೆಯೆ 2011ರ ವಿಶ್ವಕಪ್ ಬಳಿಕ ಸ್ಥಳೀಯಾಡಳಿತ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ತಕರಾರಿನಿಂದಾಗಿ ಐ, ಜೆ ಮತ್ತು ಕೆ ಗ್ಯಾಲರಿಗಳು ಪ್ರೇಕ್ಷಕರಿಂದ ದೂರ ಉಳಿದಿತ್ತು. ಇದೀಗ ಈ ಸಮಸ್ಯೆಯೂ ಬಗೆಹರಿದು ಪ್ರೇಕ್ಷಕರಿಗೆ ಮುಕ್ತವಾಗುವ ಸನಿಹದಲ್ಲಿದೆ.

    ಈಗಾಗಲೇ 2ನೇ ಟೆಸ್ಟ್ ಪಂದ್ಯಕ್ಕೆ ಕೇಂದ್ರ ಸರ್ಕಾರದಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಬರಲು ಅವಕಾಶ ಸಿಕ್ಕಿರುವ ಕಾರಣ ಟಿಕೆಟ್ ಮಾರಾಟವು ಪ್ರಾರಂಭಗೊಂಡಿದೆ. 2ನೇ ಟೆಸ್ಟ್ ವೇಳೆ 15 ಸಾವಿರ ಟಿಕೆಟ್ ಸಾರ್ವಜನಿಕರಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಟಿಕೆಟ್‍ಗಳನ್ನು 3 ವಿಧಗಳಲ್ಲಿ ವರ್ಗಿಕರಿಸಲಾಗಿದ್ದು, 100, 150 ಮತ್ತು 200 ರೂಪಾಯಿ ಬೆಲೆಯ ಟಿಕೆಟ್‍ಗಳನ್ನು ಕೌಂಟರ್ ನಲ್ಲಿ ಮಾರಾಟ ಮಾಡದೆ ಪೇಟಿಂ ಆ್ಯಪ್‍ನ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಸಂಪೂರ್ಣ ಅಟದ ರಸವತ್ತತೆಯನ್ನು ಸವಿಯುವ ಅವಕಾಶ ದೊರೆತಂತಾಗಿದೆ.