Tag: ಗ್ಯಾರೆಂಟಿ ಕಾರ್ಡ್

  • ಗ್ಯಾರಂಟಿ ಕಾರ್ಡ್ ಹಂಚಲು ಹೋದಾಗ ಡೇಟಾ ಸಂಗ್ರಹ – ಕಾಂಗ್ರೆಸ್ ಕಾರ್ಯಕರ್ತೆಗೆ ಕ್ಲಾಸ್

    ಗ್ಯಾರಂಟಿ ಕಾರ್ಡ್ ಹಂಚಲು ಹೋದಾಗ ಡೇಟಾ ಸಂಗ್ರಹ – ಕಾಂಗ್ರೆಸ್ ಕಾರ್ಯಕರ್ತೆಗೆ ಕ್ಲಾಸ್

    ಬೀದರ್: ಗ್ಯಾರಂಟಿ  ಘೋಷಣೆಯ ನೆಪದಲ್ಲಿ ಡೇಟಾ ಸಂಗ್ರಹ (Data Collection) ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ವ್ಯಕ್ತಿಯೊಬ್ಬರು ತರಾಟೆ ತೆಗೆದುಕೊಂಡ ಘಟನೆ ಬೀದರ್‌ನ (Bidar) ಓಲ್ಡ್ ಸಿಟಿಯಲ್ಲಿ ನಡೆದಿದೆ.

    ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಪರ ಗ್ಯಾರಂಟಿ ಕಾರ್ಡ್ (Guarantee Card) ಹಂಚುತ್ತಿದ್ದಾಗ, ಕಾಂಗ್ರೆಸ್ (Congress) ಕಾರ್ಯಕರ್ತೆಯನ್ನು ವ್ಯಕ್ತಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral) ಆಗಿದೆ. ಇದನ್ನೂ ಓದಿ: ಇಂದು ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತಡೆ – ಡಿಕೆಶಿ ಹೇಳಿದ್ದೇನು? 

     ನೀವು ಬರೀ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಮಾತ್ರ ಹಂಚಿ. ಅದನ್ನು ಬಿಟ್ಟು ಐಡಿ ಕಾರ್ಡ್ (ID Card) ಕೇಳುವುದು ಐಪಿಸಿ ಸೆಕ್ಷನ್ 420 ಕೇಸ್ ಆಗುತ್ತದೆ ಎಂದು ವ್ಯಕ್ತಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ನಮ್ಮ ಡೇಟಾ ಸಂಗ್ರಹ ಮಾಡಲು ಏನು ಅಧಿಕಾರವಿದೆ ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಿದ್ದಂತೆ ನೀವು ಪಕ್ಕಾ ಬಿಜೆಪಿಯವರು (BJP) ಇರಬೇಕು ಎಂದು ಕಾರ್ಯಕರ್ತೆ ಆ ವ್ಯಕ್ತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇಬ್ಬರ ನಡುವೆಯ ಮಾತುಕತೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಯಾದ ಮಂಡ್ಯ ಕಾಂಗ್ರೆಸ್ ಮುಖಂಡ

  • ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧವಾಗಿರುವ ಆಮ್ ಆದ್ಮಿ ಪ್ರಣಾಳಿಕೆ ಬದಲು ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿದೆ. ಅಧಿಕಾರಕ್ಕೆ ಬಂದಲ್ಲಿ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಹತ್ತು ಅಂಶಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ಭರವಸೆ ನೀಡಿದೆ.

    ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ರಚನೆಯಾಗಿ ಹತ್ತು ದಿನಗಳಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ.

    ಹತ್ತು ಅಂಶಗಳ ಗ್ಯಾರೆಂಟಿ ಕಾರ್ಡ್ ನಲ್ಲಿ ಶಾಲಾ ಮಕ್ಕಳಿಗೆ ಭಾನುವಾರ ಉಚಿತ ಬಸ್ ಪ್ರಯಾಣ ಅವಕಾಶ ನೀಡುವ ಭರವಸೆ ನೀಡಿದೆ. ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಬಸ್ ಗಳಲ್ಲಿ ‘ಮೊಹಲ್ಲಾ ಮಾರ್ಷಲ್’ಗಳನ್ನ ನೇಮಕ ಮಾಡಲಿದೆ. 200 ಯೂನಿಟ್ ವಿದ್ಯುತ್ ಮತ್ತು 2000 ಲೀಟರ್ ನೀರಿನ ಉಚಿತ ಬಳಕೆಯನ್ನ ಮುಂದುವರಿಸುವ ಆಶ್ವಾಸನೆ ಗ್ಯಾರೆಂಟಿ ಕಾರ್ಡ್ ನಲ್ಲಿ ನೀಡಿದೆ.

    ದೆಹಲಿಯ ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ, ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‍ಸಿಆರ್ ಭಾಗದಲ್ಲಿ ಎರಡು ಕೋಟಿ ಸಸಿಗಳನ್ನು ನೆಡುವುದು, ಸಾರಿಗೆ ಉನ್ನತಿಕರಿಸುವ ನಿಟ್ಟಿನಲ್ಲಿ 11,000 ಹೆಚ್ಚುವರಿ ಬಸ್ ಗಳ ರಸ್ತೆಗಿಳಿಸುವುದು 500 ಕಿಮೀ ಮೆಟ್ರೊ ಲೈನ್ ಅಭಿವೃದ್ಧಿ ಪಡಿಸುವ ವಾಗ್ದಾನ ಆಮ್ ಆದ್ಮಿ ನೀಡಿದೆ.

    ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಅನಧಿಕೃತ ಕಾಲೋನಿಗಳಿಗೆ ರಸ್ತೆ ನೀರು, ಬೆಳಕಿನ ಸೌಲಭ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅವಳವಡಿಕೆ, ನಿವಾಸ ರಹಿತರಿಗೆ ಸೂರು ಕಲ್ಪಿಸುವುದು, ಪಾರ್ಕ್ ಮತ್ತು ರೋಡ್ ಗಳನ್ನು ಸುಂದರಗೊಳಿಸುವುದು, ಯಮುನಾ ನದಿಯನ್ನ ಸ್ವಚ್ಛಗೊಳಿಸುವ ಆಶ್ವಾಸನೆ ನೀಡಲಾಗಿದೆ.