Tag: ಗ್ಯಾಜೆಟ್

  • ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

    ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

    ಮುಂಬೈ: ಬಿಡುಗಡೆಯಾದ 1 ತಿಂಗಳಿನಲ್ಲಿ ಎಚ್‍ಟಿಸಿ ಕಂಪೆನಿಯ ದುಬಾರಿ ಬೆಲೆಯ ಅಲ್ಟ್ರಾ ಯು ಫೋನಿನ ಬೆಲೆ 7 ಸಾವಿರ ರೂ. ಕಡಿಮೆಯಾಗಿದೆ. ಎಚ್‍ಟಿಸಿ ಯು ಆಲ್ಟ್ರಾ ಫೋನ್ ಈ ಹಿಂದೆ 59,990 ರೂ. ಬೆಲೆಯಲ್ಲಿ ಮಾರ್ಚ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನನ್ನು 52,990 ರೂ. ನೀಡಿ ಖರೀದಿಸಬಹುದು.

    ಎಚ್‍ಟಿಟಿ ಡಿಸೈರ್ 10 ಪ್ರೋ ಬಿಡುಗಡೆಯಾದಾಗ 26,490 ರೂ. ನಿಗದಿಯಾಗಿತ್ತು. ಆದರೆ ಈಗ ಈ ಫೋನ್ 23,990 ರೂ.ಗೆ ಲಭ್ಯವಿದೆ. ಎರಡೂ ಫೋನ್‍ಗಳು ಎಚ್‍ಟಿಸಿ ಇಂಡಿಯಾ ಸ್ಟೋರ್‍ನಲ್ಲಿ ಲಭ್ಯವಿದ್ದು, ಒಂದು ತಿಂಗಳು ಮಟ್ಟಿಗೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಎಚ್‍ಟಿಸಿ ತಿಳಿಸಿದೆ.

    ಈ ಎರಡು ಫೋನ್‍ಗಳು ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್ ಹೊಂದಿದ್ದು, ಎರಡು ಸಿಮ್ ಕಾರ್ಡ್ ಆಥವಾ ಒಂದು ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಗಳನ್ನು ಹಾಕಬಹುದಾಗಿದೆ.

    ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಎಚ್‍ಟಿಸಿ ಆಲ್ಟ್ರಾ ಯು ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಲ್ಪೇ:
    ಹೈಬ್ರಿಡ್ ಡ್ಯುಯಲ್ ಸಿಮ್, 162.4*79.8*8 ಮಿಮಿ ಗಾತ್ರ, 170 ಗ್ರಾಂ ತೂಕ, 5.7 ಇಂಚಿನ ಸೂಪರ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1440*2560 ಪಿಕ್ಸೆಲ್, 513 ಪಿಪಿಐ) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, ಎರಡನೇ ಸಿಮ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿ ವಿಸ್ತರಣೆ, 64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್

    ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಕ್ಯಾಮೆರಾ, ಬ್ಯಾಟರಿ:
    ಹಿಂದುಗಡೆ 12 ಎಂಪಿ ಆಲ್ಟ್ರಾಪಿಕ್ಸೆಲ್ ಕ್ಯಾಮೆರಾ, ಮುಂದುಗಡೆ, 16 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ

    ಎಚ್‍ಟಿಸಿ ಡಿಸೈರ್ 10 ಪ್ರೋ ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    ಡ್ಯುಯಲ್ ಹೈ ಬ್ರಿಡ್ ಸಿಮ್, 156.5*76*7.9 ಮಿ.ಮೀ ಗಾತ್ರ, 165 ಗ್ರಾಂ ತೂಕ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಟಿವ್ ಟಚ್‍ಸ್ಕ್ರೀನ್(1080*1920 ಪಿಕ್ಸೆಲ್, 400 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್‍ಮೆಲೋ 6. ಓಎಸ್, ಮೀಡಿಯಾಟೆಕ್ ಆಕ್ಟೋ ಕೋರ್ ಪ್ರೊಸೆಸರ್, ಮಾಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮಥ್ರ್ಯ, 64 ಜಿಬಿ ಆಂತರಿಕ, ಮೆಮೊರಿ, 4ಜಿಬಿ ರಾಮ್,

    ಕ್ಯಾಮೆರಾ, ಬ್ಯಾಟರಿ:
    ಹಿಂದುಗಡೆ 20 ಎಂಪಿ, ಮುಂದುಗಡೆ 13 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ

    ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

  • ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ.

    ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್ ಇ ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಿಂದ ಖರೀದಿಸಬಹುದು.

    ಮೈಕ್ರೋಮ್ಯಾಕ್ಸ್ ಇದೇ ಮೊದಲ ಬಾರಿಗೆ ಫೋನಿಗೆ ಎರಡು ಕ್ಯಾಮೆರಾ ನೀಡಿದೆ. ಸೋನಿ ಕಂಪೆನಿಯ ಎರಡು 13 ಮೆಗಾ ಪಿಕ್ಸೆಲ್ ಐಎಂಎಕ್ಸ್ 258 ಸೆನ್ಸರ್ ಮೈಕ್ರೋಮ್ಯಾಕ್ಸ್ ಕ್ಯಾಮೆರಾದಲ್ಲಿದೆ. ಒಂದು ಸೆನ್ಸರ್ ಫೋಕಸ್ ಸೆರೆ ಹಿಡಿದರೆ, ಇನ್ನೊಂದು ಸೆನ್ಸರ್ ಡೆಪ್ತ್ ಮತ್ತು ಫೀಲ್ಡ್ ಸೆರೆಹಿಡಿಯುತ್ತದೆ. ಈ ಫೋನಿನಲ್ಲಿ 4ಕೆ ಯುಎಚ್‍ಡಿ ರೆಸಲ್ಯೂಶನ್‍ನಲ್ಲಿ ವಿಡಿಯೋ ಸೆರೆ ಹಿಡಿಯಬಹುದು.

    ಮುಂದುಗಡೆ 1.13 ಮೈಕ್ರಾನ್ ಪಿಕ್ಸೆಲ್ ಸೋನಿ ಐಎಂಎಕ್ಸ್258 ಸೆನ್ಸರ್ ಇರುವ 13 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ ಕ್ಯಾಮೆರಾದಲ್ಲಿ ಸ್ಮಾರ್ಟ್ ಬ್ಯೂಟಿ, ಮೋಡ್, ಗೆಸ್ಟರ್ ಕಂಟ್ರೋಲ್, ಮತ್ತು ಜಿಫ್ ವಿಡಿಯೋಗಳನ್ನು ಮಾಡಬಹುದು.

    ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವ ಈ ಫೋನ್ ನಲ್ಲಿ ಪ್ರೈವೆಟ್ ಮೂಡ್ ಮತ್ತು ಪಬ್ಲಿಕ್ ಮೂಡ್ ಆಯ್ಕೆ ಇದೆ.

    ಈ ಫೋನಿಗೆ ಮೈಕ್ರೋಮ್ಯಾಕ್ಸ್ ‘ಸೇಫ್ ಸ್ವಿಚ್’ ವಿಶೇಷತೆ ಇದೆ. ಒಂದು ವೇಳೆ ಮೊಬೈಲ್ ಕಳೆದು ಹೋಗಿ 30 ನಿಮಿಷದ ಒಳಗಡೆ ಸರಿಯಾದ ಪಾಸ್ ವರ್ಡ್ ಹಾಕದಿದ್ದರೆ ಫೋನ್ ಆಟೋಮ್ಯಾಟಿಕ್ ಆಗಿ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಒಂದು ವೇಳೆ ಸಿಮ್ ತೆಗೆದು 60 ನಿಮಿಷ ಬಳಿಕ ಸರಿಯಾದ ಪಾಸ್‍ವರ್ಡ್ ಹಾಕದೇ ಇದ್ದರೆ ಫೋನ್ ಫೋನ್ ಲಾಕ್ ಆಗುತ್ತದೆ.

    ಫೋನಿಗೆ 3,200 ಎಂಎಎಚ್ ಬ್ಯಾಟರಿ ನೀಡಿದ್ದು, ಕ್ವಿಕ್ ಚಾರ್ಜ್ ವಿಶೇಷತೆ ನೀಡಿದೆ. ಇದರಿಂದಾಗಿ ಕೇವಲ 45 ನಿಮಿಷದಲ್ಲಿ ಶೇ.95 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೇ 10 ನಿಮಿಷ ಚಾರ್ಜ್ ಮಾಡಿದರೆ 4 ಗಂಟೆ ಫೋನ್ ಬಳಕೆ ಮಾಡಬಹುದು ಎಂದು ಮೈಕ್ರೋ ಮ್ಯಾಕ್ಸ್ ತಿಳಿಸಿದೆ.

    ಮೈಕ್ರೋಮ್ಯಾಕ್ಸ್ ಡ್ಯುಯಲ್5 ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್( 2 ಸಿಮ್ ಅಥವಾ 1 ಸಿಮ್ + ಒಂದು ಮೆಮೊರಿ ಕಾರ್ಡ್), 164 ಗ್ರಾಂ ತೂಕ, 4ಜಿ ವೋಲ್ಟ್, 5.5 ಇಂಚಿನ ಅಮೋಲೆಡ್ ಫುಲ್ ಎಚ್‍ಡಿ ಸ್ಕ್ರೀನ್(1920*1980 ಪಿಕ್ಸೆಲ್), 401 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್ ಮೆಲೊ ಓಎಸ್, 128 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್, ಎಸ್‍ಡಿ ಕಾರ್ಡ್ ಮೂಲಕ 128 ಜಿಬಿವರೆಗೆ ಮೆಮೊರಿ ವಿಸ್ತರಣೆ, ಕ್ವಾಲಕಂ ಸ್ನಾಪ್‍ಡ್ರಾಗನ್ 652 1.8 GHz ಅಕ್ಟಾಕೋರ್  ಪ್ರೊಸೆಸರ್

    ಕ್ಯಾಮೆರಾ
    ಹಿಂದುಗಡೆ 13 ಎಂಪಿ ಡ್ಯುಯಲ್ ಕ್ಯಾಮೆರಾ, F / 1.8 ಅಪಾರ್ಚರ್, 1.12um ಪಿಕ್ಸೆಲ್ ಸೈಜ್, 6 ಲೆನ್ಸ್ ಟೈಪ್ ಸ್ಟ್ರಕ್ಚರ್, ಕಲರ್ ಟೆಂಪರೇಚರ್ ಸೆನ್ಸರ್, ಡ್ಯುಯಲ್ ಎಲ್‍ಇಡಿ ಫ್ಯಾಶ್, ಮುಂದುಗಡೆ 13 ಎಂಪಿ ಕ್ಯಾಮೆರಾ ವನ್ನು ಹೊಂದಿದೆ.

    ಇತರೇ:
    3200 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, 4ಜಿ ಎಲ್‍ಟಿಇ,3ಜಿ, 2ಜಿ ನೆಟ್‍ವರ್ಕ್, ಗ್ರಾವಿಟಿ, ಫಿಂಗರ್ ಪ್ರಿಂಟ್, ಡಿಜಿಟಲ್ ಕಂಪಾಸ್, ಲೈಟ್ ಸೆನ್ಸರ್.

  • 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಲಂಡನ್: 2016ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಫೋನ್‍ಗಳ ಪಟ್ಟಿಯನ್ನು ಹಣಕಾಸು ಸೇವಾ ಸಂಸ್ಥೆ ಐಎಚ್‍ಎಸ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಆಪಲ್ ಕಂಪೆನಿಯ ವಿವಿಧ ಐಫೋನ್‍ಗಳು ಪಡೆದುಕೊಂಡಿದ್ದರೆ, ನಂತರ ಸ್ಥಾನವನ್ನು ಸ್ಯಾಮ್‍ಸಂಗ್ ಕಂಪೆನಿಯ ಫೋನ್‍ಗಳು ಪಡೆದುಕೊಂಡಿದೆ.

    ಟಾಪ್ 10 ಪಟ್ಟಿಯಲ್ಲಿ ಚೀನಾದ ಒಪ್ಪೋ ಕಂಪೆನಿಯ ಒಂದು ಫೋನ್ ಇರುವುದು ವಿಶೇಷ. ಅದರೆ ಗೂಗಲ್ ನೆಕ್ಸಸ್ ಸರಣಿಯ ಯಾವೊಂದು ಫೋನ್ ಸ್ಥಾನ ಪಡೆದುಕೊಂಡಿಲ್ಲ.

    ಹೀಗಾಗಿ ಇಲ್ಲಿ ಟಾಪ್ 10 ಫೋನ್‍ಗಳ ಪಟ್ಟಿ, ಗುಣವೈಶಿಷ್ಟ್ಯ ಮತ್ತು ಆ ಫೋನ್‍ಗಳು ಪ್ರಸ್ತುತ ಭಾರತದಲ್ಲಿ ಎಷ್ಟು ರೂ. ಮಾರಾಟವಾಗುತ್ತಿದೆ ಎನ್ನುವ ಅಂದಾಜು ಬೆಲೆಯನ್ನು ನೀಡಲಾಗಿದೆ.

    1. ಆಪಲ್ ಐಫೋನ್ 6ಎಸ್

    ಸೆಪ್ಟೆಂಬರ್ 2015ರಲ್ಲಿ ಬಿಡುಗಡೆಯಾದ ಈ ಫೋನಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 38 ಸಾವಿರ ರೂ. ಬೆಲೆಯಿದೆ. 4.7 ಇಂಚಿನ ಸ್ಕ್ರೀನ್, ಎ9 ಪ್ರೊಸೆಸರ್, 2ಜಿಬಿ ರಾಮ್, 12 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 5ಎಂಪಿ ಕ್ಯಾಮೆರಾವನ್ನು ಹೊಂದಿದೆ.

    2.ಆಪಲ್ ಐಫೋನ್ 7:

    ಭಾರತದಲ್ಲಿ 2016ರ ಅಕ್ಟೋಬರ್‍ನಲ್ಲಿ ಬಿಡುಗಡೆಯಾದ ಫೋನಿಗೆ 50 ಸಾವಿರ ರೂ. ಬೆಲೆಯಿದೆ. 4.7 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ ಕ್ವಾಡ್ ಕೋರ್ ಎ10 ಪ್ಯೂಶನ್ ಪ್ರೊಸೆಸರ್ ಹೊಂದಿದೆ. ಐಓಎಸ್ 10, ಎ10 ಪ್ರೊಸೆಸರ್, ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 7 ಎಂಪಿ ಕ್ಯಾಮೆರಾ, 4.7 ಇಂಚಿನ ಸ್ಕ್ರೀನ್ ಹೊಂದಿದೆ.

    3. ಆಪಲ್ ಐಫೋನ್ 7 ಪ್ಲಸ್:

    ಮೂರನೇ ಸ್ಥಾನದಲ್ಲಿ ಐಫೋನ್ 7 ಪ್ಲಸ್ ಇದ್ದು, 2016ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಪ್ರಸ್ತುತ ಈ ಫೋನಿಗೆ 60 ಸಾವಿರ ರೂ. ಬೆಲೆಯಿದೆ. ಎ10 ಫ್ಯೂಶನ್ ಪ್ರೊಸೆಸರ್ 2 ಜಿಬಿ ರಾಮ್, 5.5 ಇಂಚಿನ ಸ್ಕ್ರೀನ್, 12 ಎಂಪಿ ಹಿಂದುಗಡೆ, ಮುಂದುಗಡೆ 7 ಎಂಪಿ ಕ್ಯಾಮೆರಾವನ್ನು ಹೊಂದಿದೆ.

    4. ಆಪಲ್ 6ಎಸ್ ಪ್ಲಸ್:

    5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 2015ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಿತ್ತು. ಈ ಫೋನ್ ಈಗ 44 ಸಾವಿರ ರೂ.ನಲ್ಲಿ ಮಾರಾಟವಾಗುತ್ತಿದೆ. ಡ್ಯುಯಲ್ ಕೋರ್ ಎ9 ಪ್ರೊಸೆಸರ್, ಐಓಎಸ್ 9, ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

    5. ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್7 ಎಡ್ಜ್:


    ಮಾರ್ಚ್ 2016ರಲ್ಲಿ ಬಿಡುಗಡೆಯಾದ ಈ ಫೋನಿಗೆ ಅಂದಾಜು 44 ಸಾವಿರ ರೂ. ಬೆಲೆಯಿದೆ. 5.5 ಇಂಚಿನ ಸ್ಕ್ರೀನ್, 3,600 ಎಂಎಎಚ್ ಬ್ಯಾಟರಿ, ಅಕ್ಟಾಕೋರ್ ಪ್ರೊಸೆಸರ್, 4 ಜಿಬಿ ರಾಮ್, 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮರಾ ಹೊಂದಿದೆ. ಆಂಡ್ರಾಯ್ಡ್ ಮಾರ್ಶ್ ಮೆಲೋ ಒಎಸ್‍ನಲ್ಲಿ ಬಿಡುಗಡೆಯಾಗಿದ್ದ ಈ ಫೋನಿಗೆ ನೂಗಟ್ ಅಪ್‍ಡೇಟ್ ಸಿಕ್ಕಿದೆ.

    6. ಸ್ಯಾಮ್‍ಸಂಗ್  ಗೆಲಾಕ್ಸಿ ಜೆ3(2016)


    2016ರ ಮಾರ್ಚ್ ನಲ್ಲಿ ಬಿಡುಗಡೆಯಾದ ಈ ಫೋನಿಗೆ ಮಾರುಕಟ್ಟೆಯಲ್ಲಿ 8,990 ರೂ. ಇದೆ. ಎಸ್ ಬೈಕ್ ಮೋಡ್‍ನಲ್ಲಿ ಬಿಡುಗಡೆಯಾದ ಈ ಫೋನ್ 5 ಇಂಚಿನ ಸ್ಕ್ರೀನ್, ಕ್ವಾಡ್ ಕೋರ್ ಪ್ರೊಸೆಸರ್, 1.5 ಜಿಬಿ ರಾಮ್, ಆಂಡ್ರಾಯ್ಡ್ ಲಾಲಿ ಪಪ್ ಓಎಸ್, ಹಿಂದುಗಡೆ 8 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

    7.  ಒಪ್ಪೋ ಎ53:


    ಆಪಲ್, ಸ್ಯಾಮ್‍ಸಂಗ್ ಹೊರತು ಪಡಿಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೂರನೇ ಫೋನ್ ಕಂಪೆನಿ ಒಪ್ಪೋ. ಈ ಡ್ಯುಯಲ್ ಸಿಮ್ ಫೋನಿಗೆ ಪ್ರಸ್ತುತ 19 ಸಾವಿರ ರೂ. ಬೆಲೆಯಿದೆ. ಆಂಡ್ರಾಯ್ಡ್ 5.1 ಲಾಲಿಪಾಪ್ ಓಎಸ್, 5.5 ಇಂಚಿನ ಸ್ಕ್ರೀನ್, ಅಕ್ಟಾಕೋರ್ ಪ್ರೊಸೆಸರ್, 2ಜಿಬಿ ರಾಮ್, ಮುಂದುಗಡೆ 5 ಎಂಪಿ, ಹಿಂದುಗಡೆ 13 ಕ್ಯಾಮೆರಾವನ್ನು ಹೊಂದಿದೆ. ಇದಕ್ಕೆ 3075 ಎಂಎಎಚ್ ಬ್ಯಾಟರಿಯನ್ನು ಒಪ್ಪೋ ನೀಡಿದೆ.

    8. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ5:


    2016ರ ಮಾರ್ಚ್ ನಲ್ಲಿ ಬಿಡುಗಡೆಯಾದ ಈ ಡ್ಯುಯಲ್ ಸಿಮ್ ಫೋನಿಗೆ ಪ್ರಸ್ತುತ 10 ಸಾವಿರ ಬೆಲೆಯಿದೆ. 5.2 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ ಮಾರ್ಶ್ ಮೆಲೋ ಒಎಸ್‍ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ವಾಡ್‍ಕೋರ್ ಪ್ರೊಸೆಸರ್, 2ಜಿಬಿ ರಾಮ್ ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3100 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

    9.  ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್7:


    2016ರಲ್ಲಿ ಬಿಡುಗಡೆಯಾದ ಸಿಂಗಲ್ ಸಿಮ್ ಫೋನಿಗೆ ಈಗ ಅಂದಾಜು 40 ಸಾವಿರ ರೂ. ಬೆಲೆಯಿದೆ. 5.1 ಇಂಚಿನ ಸ್ಕ್ರೀನ್, ಮಾರ್ಶ್ ಮೆಲೋ ಒಎಸ್, ಅಕ್ಟಾಕೋರ್ ಪ್ರೊಸೆಸರ್, 4ಜಿಬಿ ರಾಮ್, ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3000 ಎಎಂಎಚ್ ಬ್ಯಾಟರಿಯನ್ನು ಒಳಗೊಂಡಿದೆ.

    10. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ7:


    ಮಾರ್ಚ್ 2016ರಲ್ಲಿ ಬಿಡುಗಡೆಯಾದ ಈ ಡ್ಯುಯಲ್ ಸಿಮ್ ಫೋನಿಗೆ ಸದ್ಯ ಮಾರುಕಟ್ಟೆಯಲ್ಲಿ 15,999 ರೂ. ಇದೆ. 5.5 ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಅಕ್ಟಾಕೋರ್ ಪ್ರೊಸೆಸರ್, 2 ಜಿಬಿ ರಾಮ್, ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3300 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

  • ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ನವದೆಹಲಿ: ಚೀನಾದ ಕ್ಸಿಯೋಮಿ ಕೇವಲ ನಾಲ್ಕು ನಿಮಿಷದಲ್ಲಿ 2.50 ಲಕ್ಷ ರೆಡ್‍ಮೀ 4ಎ ಫೋನ್‍ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

    ರೆಡ್‍ಮೀ 4ಎ ಫೋನಿನ ಫ್ಲಾಶ್ ಸೇಲ್ ಅಮೇಜಾನ್ ಇಂಡಿಯಾ ಮತ್ತು ಎಂಐ.ಕಾಂನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ನಡೆದಿತ್ತು. ಅಮೆಜಾನ್ ಇಂಡಿಯಾದ ಪೋರ್ಟಲ್‍ನಲ್ಲಿ ಪ್ರತಿ ಸೆಕೆಂಡ್‍ಗೆ 1500 ಫೋನ್‍ಗಳು ಬುಕ್ ಆಗುತ್ತಿದ್ದರೆ, ಒಂದು ನಿಮಿಷಕ್ಕೆ 50 ಲಕ್ಷ ಹಿಟ್ಸ್ ಸಂಪಾದಿಸಿತ್ತು. ಬಿಡುಗಡೆಯಾದ ದಿನವೇ ದಾಖಲೆ ಪ್ರಮಾಣದಲ್ಲಿ ಇಷ್ಟೊಂದು ಫೋನ್ ಭಾರತದಲ್ಲಿ ಮಾರಾಟವಾಗಿರುವುದು ಇದೆ ಮೊದಲು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

    ಅಮೇಜಾನ್ ಇಂಡಿಯಾದ ಕೆಟಗರಿ ವಿಭಾಗದ ನಿರ್ದೇಶಕ ನೂರ್ ಪಟೇಲ್ ಪ್ರತಿಕ್ರಿಯಿಸಿ, ಗ್ರಾಗಕರ ಪ್ರತಿಕ್ರಿಯೆಯನ್ನು ನೋಡಿ ನಾವು ಥ್ರಿಲ್ ಆಗಿದ್ದೇವೆ. 10 ಲಕ್ಷಕ್ಕೂ ಹೆಚ್ಚು ಜನ ಈ ಫೋನಿಗೆ ನೋಟಿಫೈ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಈ ಸೆಗ್ಮೆಂಟ್‍ನಲ್ಲಿ ಉತ್ತಮ ಗುಣ ವೈಶಿಷ್ಟ್ಯಗಳು ಇರುವ ಕಾರಣ ರೆಡ್‍ಮೀ 4ಎ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸೇಲ್ಸ್ ಮುಖ್ಯಸ್ಥ ರಘು ರೆಡ್ಡಿ ಹೇಳಿದ್ದಾರೆ.

    ಚೀನಾದಲ್ಲಿ ಕಳೆದ ವರ್ಷ 599 ಯುವಾನ್(ಅಂದಾಜು 5600 ರೂ.) ಬಿಡುಗಡೆಯಾಗಿದ್ದ ಈ ಫೋನ್ ಮಾರ್ಚ್ 20ರಂದು ಭಾರತದಲ್ಲಿ ಬಿಡುಗಡೆಯಾಗಿತ್ತು. ಈ ಫೋನಿಗೆ 5,999 ರೂ. ಬೆಲೆಯನ್ನು ಕ್ಸಿಯೋಮಿ ನಿಗದಿ ಮಾಡಿದೆ. ಮುಂದಿನ ಫ್ಲಾಶ್ ಸೇಲ್ ಮಾರ್ಚ್ 30ರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

    ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.

    ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ. ಪ್ರಸ್ತತ ದೇಶದ ಆನ್‍ಲೈನ್ ಸ್ಮಾರ್ಟ್ ಫೋನ್ ವ್ಯಾಪಾರದಲ್ಲಿ ಶೇ.30ರಷ್ಟು ಪಾಲನ್ನು ಕ್ಸಿಯೋಮಿ ಪಡೆದುಕೊಂಡಿದೆ.

    ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್,294 ಪಿಪಿಐ ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, 16 ಜಿಬಿ ಆಂತರಿಕ ಮೆಮೊರಿ, 2 ಜಿಬಿ ರಾಮ್,2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೆರಿ ಹಾಕಬಹುದು.

    ಇತರೇ:
    ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿ

     

  • ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಏರ್‍ಟೆಲ್ ಕಂಪೆನಿಗಳು ಡೇಟಾ ವಿಚಾರವಾಗಿ ಸ್ಪರ್ಧೆ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಈ ಸ್ಪರ್ಧೆ ಮತ್ತಷ್ಟು ಜೋರಾಗಿದ್ದು ತನ್ನ ವಿರುದ್ಧ ಏರ್‍ಟೆಲ್ ಜಾಹೀರಾತು ಪ್ರಕಟಿಸಿ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿ ಜಿಯೋ ಈಗ ಭಾರತೀಯ ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ(ಎಎಸ್‍ಸಿಐ) ದೂರು ನೀಡಿದೆ.

    ತನ್ನ ದೂರಿನಲ್ಲಿ ಜಿಯೋ, ಏರ್‍ಟೆಲ್ ಓಕ್ಲಾ ಡೇಟಾ ಸ್ಪೀಡ್ ಆಪ್ ಟೆಸ್ಟ್ ನಲ್ಲಿ ಬಂದಿರುವ ಫಲಿತಾಂಶವನ್ನು ಆಧಾರಿಸಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ನಾವು ನೀಡುತ್ತಿದ್ದೇವೆ ಎಂದು ಜಾಹೀರಾತು ಪ್ರಕಟಿಸಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ಮೈ ಸ್ಪೀಡ್ ಅಪ್ಲಿಕೇಶನ್ ನಲ್ಲಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ಜಿಯೋ ನೀಡುತ್ತಿದೆ ಎನ್ನುವ ಫಲಿತಾಂಶ ಬಂದಿದೆ. ಹೀಗಾಗಿ ಏರ್‍ಟೆಲ್ ನೀಡುತ್ತಿರುವ ಜಾಹೀರಾತು ಸುಳ್ಳಾಗಿದ್ದು, ಏರ್‍ಟೆಲ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಎಸ್‍ಸಿಐಯಲ್ಲಿ ಮನವಿ ಮಾಡಿದೆ.

    ತಾನು ವೇಗದ ಇಂಟರ್‍ನೆಟ್ ಸೇವೆಯನ್ನು ನೀಡುತ್ತಿದ್ದೇನೆ ಎಂದು ದೃಢಪಡಿಸಲು ಜಿಯೋ ಎಎಸ್‍ಸಿಐಗೆ 12 ಯುಆರ್‍ಎಲ್‍ಗಳನ್ನು ನೀಡಿದೆ. ಅಷ್ಟೇ ಅಲ್ಲದೇ ಸುಳ್ಳು ಫಲಿತಾಂಶ ನೀಡಿದ್ದಕ್ಕೆ ಓಕ್ಲಾ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದೆ.

    ಜಿಯೋ ನೋಟಿಸ್ ಸಂಬಂಧ ಓಕ್ಲಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಏರ್‍ಟೆಲ್ ಪರ ನಿಂತುಕೊಂಡಿದೆ. ಭಾರತದಲ್ಲಿ ನಾವು ಡ್ಯುಯಲ್ ಸಿಮ್, ನೆಟ್‍ವರ್ಕ್ ಟೆಕ್ನಾಲಜಿ, ವಿವಿಧ ಮೊಬೈಲ್‍ಗಳನ್ನು ಪರಿಗಣಿಸಿ ಡೇಟಾ ಸ್ಪೀಡ್ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದೆ. ತನಗೆ ನೋಟಿಸ್ ನೀಡಿದ್ದಕ್ಕೆ ಓಕ್ಲಾ ಕಂಪೆನಿ ಈಗ ರಿಲಯನ್ಸ್ ಜಿಯೋಗೆ ನೋಟಿಸ್ ನೀಡಿದೆ.

    ಜಿಯೋ ಸ್ಪೀಡ್ ಕಡಿಮೆ ಆಗುತ್ತಾ?
    ಸಾಧಾರಣವಾಗಿ ಡ್ಯುಯಲ್ ಸಿಮ್ ಹೊಂದಿರುವ ಗ್ರಾಹಕರು ಜಿಯೋ ಸಿಮ್ ಅನ್ನು ಒಂದನೇ ಸ್ಲಾಟ್ ಮತ್ತು ಇನ್ನೊಂದು ಸಿಮ್ ಅನ್ನು ಎರಡನೇ ಸ್ಲಾಟ್‍ನಲ್ಲಿ ಹಾಕುತ್ತಾರೆ. ಒಂದು ವೇಳೆ ಎರಡನೇ ಸಿಮ್ ಸ್ಲಾಟ್‍ನಲ್ಲಿ ಜಿಯೋ ಸಿಮ್ ಹಾಕಿದ್ರೆ ಇಂಟರ್‍ನೆಟ್ ಸ್ಪೀಡ್ ಕಡಿಮೆ ಇರುತ್ತದೆ. ಹೀಗಾಗಿ ಯಾವುದೇ ಡೇಟಾ ಸ್ಪೀಡ್ ಟೆಸ್ಟ್ ಮಾಡುವ ಆಪ್‍ನಲ್ಲಿ ಚೆಕ್ ಮಾಡಿದ್ರೆ ಅದು ಮೊದಲ ಸ್ಲಾಟ್‍ನಲ್ಲಿರುವ ಕಂಪೆನಿ ನೀಡುವ ಇಂಟರ್‍ನೆಟ್ ಕಡಿಮೆ ಎಂದೇ ತೋರಿಸುತ್ತದೆ. ಈ ಕಾರಣಕ್ಕಾಗಿ ಜಿಯೋ ಸಿಮ್ ಖರೀದಿ ವೇಳೆ ವಿತರಕರು ಡ್ಯುಯಲ್ ಸಿಮ್ ಸೆಟ್ ಇದ್ದಲ್ಲಿ ಒಂದನೇ ಸ್ಲಾಟ್ ನಲ್ಲಿ ಜಿಯೋ ಸಿಮ್ ಹಾಕಿ ಎಂದು ಹೇಳುತ್ತಿದ್ದರು.

    ಜಿಯೋ ಸೇವೆಯ ಆರಂಭಗೊಂಡ ದಿನಗಳಲ್ಲಿ ಡೇಟಾ ಸ್ಪೀಡ್ ಕಡಿಮೆ ಇತ್ತು. ಈ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಒಪ್ಪಿಕೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳಷ್ಟು ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗದಲ್ಲಿ ಡೇಟಾ ನೀಡಲು ಸಾಧ್ಯವಾಗುತ್ತಿಲ್ಲ, ಶೀಘ್ರದಲ್ಲೇ ಟವರ್‍ಗಳನ್ನು ಮತ್ತು ವೈಫೈ ಹಾಟ್‍ಸ್ಪಾಟ್‍ಗಳನ್ನು ಸ್ಪಾಪಿಸುವ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದು 2016ರ ಡಿಸೆಂಬರ್ 2 ರಂದು ಹೇಳಿದ್ದರು.

    ಇದನ್ನೂ ಓದಿ:ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

    ಆದರೆ ಇತ್ತಿಚಿಗೆ ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ದೇಶದಲ್ಲಿ ವೇಗದ ಇಂಟರ್‍ನೆಟ್ ಸೇವೆ ನೀಡುವ ಕಂಪೆನಿಯಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜನರು http://www.myspeed.trai.gov.in/  ಪೋರ್ಟಲ್ ಹೋಗಿ ಯಾವ ಟೆಲಿಕಾಂ ಕಂಪೆನಿ ಎಷ್ಟು ಎಂಬಿಪಿಎಸ್ ವೇಗದಲ್ಲಿ ಡೇಟಾ ನೀಡುತ್ತದೆ ಎನ್ನುವುದನ್ನು ಚೆಕ್ ಮಾಡಬಹುದು.

    ಹೀಗಾಗಿ ಇಲ್ಲಿ ಟ್ರಾಯ್ ವೆಬ್‍ಸೈಟ್‍ನಲ್ಲಿ ಯಾವ ಕಂಪೆನಿಯ  ಎಷ್ಟು ವೇಗದಲ್ಲಿ ಡೇಟಾ ನೀಡುತ್ತಿದೆ ಎನ್ನುವ ಮಾಹಿತಿ, ಜಿಯೋ ಎಎಸ್‍ಸಿಐ ನೀಡಿ ದ ಯುಆರ್‍ಎಲ್ ವಿಡಿಯೋ, ಜೊತೆಗೆ ಏರ್‍ಟೆಲ್ ಜಾಹೀರಾತಿನ ಫೋಟೋವನ್ನು ನೀಡಲಾಗಿದೆ.

    ಜಿಯೋಗೆ ಸಂಬಂಧಿಸಿದ  ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ

    ಏರ್ ಟೆಲ್ ಜಾಹೀರಾತು

    ಜಿಯೋ ಎಎಸ್‍ಸಿಐಗೆ ನೀಡಿದ ದೂರಿನ ಪ್ರತಿ

    https://twitter.com/airtelindia/status/844099274363277312

    ಜಿಯೋದ ಡೌನ್ ಲೋಡ್ ಸ್ಪೀಡ್ ಎಷ್ಟಿದೆ?

    ಜಿಯೋದ ಅಪ್ಲೋಡ್ ಸ್ಪೀಡ್ ಎಷ್ಟಿದೆ?

  • ಲೆನೆವೊದಿಂದ ಕಡಿಮೆ ಬೆಲೆಯ, ಕಡಿಮೆ ಗಾತ್ರದ 4ಜಿ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ

    ಲೆನೆವೊದಿಂದ ಕಡಿಮೆ ಬೆಲೆಯ, ಕಡಿಮೆ ಗಾತ್ರದ 4ಜಿ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ

    ನವದೆಹಲಿ: ಚೀನಾದ ಲೆನೆವೊ ಕಂಪೆನಿ ಕಡಿಮೆ ಗಾತ್ರದ ಕಡಿಮೆ ಬೆಲೆಯ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ 4ಜಿ ಫೋನನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಲೆನೆವೊ ವೈಬ್ ಬಿ ಬಿಡುಗಡೆ ಮಾಡಿದ್ದು, ಈ ಫೋನಿಗೆ 5,799 ರೂ. ಬೆಲೆಯನ್ನು ನಿಗದಿ ಮಾಡಿದೆ.

    ಗುಣ ವೈಶಿಷ್ಟ್ಯಗಳು:
    ಗಾತ್ರ ಮತ್ತು ಡಿಸ್ಪ್ಲೇ
    132.5*66*9.9 ಮಿ.ಮೀ ಗಾತ್ರ, 144 ಗ್ರಾಂ ತೂಕ, ಡ್ಯುಯಲ್ ಸಿಮ್ ಸಪೋರ್ಟ್(ಮೈಕ್ರೋ ಸಿಮ್), 4.5 ಇಂಚಿನ ಟಿಎಫ್‍ಟಿ ಸ್ಕ್ರೀನ್(480*800 ಪಿಕ್ಸೆಲ್, 207 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0 ಮಾರ್ಶ್‍ಮೆಲೋ ಓಎಸ್,  ಮೀಡಿಯಾ ಟೆಕ್ ಕ್ವಾಡ್‍ಕೋರ್ 1GHz ಪ್ರೊಸೆಸರ್, ಮಲಿ ಗ್ರಾಫಿಕ್ಸ್ ಪ್ರೊಸೆಸರ್, 8ಜಿಬಿ ಆಂತರಿಕ ಮೆಮೊರಿ, 1 ಜಿಬಿ ರಾಮ್, 32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.

    ಇತರೇ:
    ಎಲ್‍ಇಡಿ ಫ್ಲಾಶ್ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 2 ಎಂಪಿ ಕ್ಯಾಮೆರಾ, ತೆಗೆಯಲು ಸಾಧ್ಯವಿರುವ ಲಿಯಾನ್ 2000 ಎಂಎಎಚ್ ಬ್ಯಾಟರಿ.

  • 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

    17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

    ಬಾರ್ಸಿಲೋನಾ: 3310 ಫೀಚರ್ ಫೋನನ್ನು 17 ವರ್ಷಗಳ ಬಳಿಕ ನೋಕಿಯಾ ಮತ್ತೆ ಬಿಡುಗಡೆ ಮಾಡಿದೆ. ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಹಾಕಬಹುದಾದ ಫೋನನ್ನು ಪರಿಚಯಿಸಲಾಗಿದೆ.

    ನೋಕಿಯಾ ಕಂಪೆನಿಯ ಹೆಸರಿನಲ್ಲಿ ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಈ ಫೋನ್ ತಯಾರಿಸಿದ್ದು, ಈ ಫೋನಿಗೆ 40 ಡಾಲರ್( ಅಂದಾಜು 2600 ರೂ.) ದರವನ್ನು ನಿಗದಿ ಪಡಿಸಿದೆ. ಎರಡನೇ ತ್ರೈಮಾಸಿಕದಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಎರಡನೇ ತ್ರೈಮಾಸಿಕದಲ್ಲಿ ಯಾವಾಗ ಎನ್ನುವ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿಲ್ಲ.

    2.4 ಇಂಚಿನ ಟಿಎಫ್‍ಟಿ (320* 240) ಕಲರ್ ಸ್ಕ್ರೀನ್, 167 ಪಿಪಿಐ, ಹೊಂದಿರುವ ಫೋನ್ ಸೀರೀಸ್ 30+ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. ಹೊಸ ಫೋನ್ 12.8 ಮಿ ಮೀಟರ್ ದಪ್ಪ, 79.6 ಗ್ರಾಂ ತೂಕವನ್ನು ಹೊಂದಿದೆ. ಈ ಹಿಂದಿನ ಫೋನ್ 22 ಮಿ.ಮೀ ದಪ್ಪ, 133 ಗ್ರಾಂ ತೂಕವನ್ನು ಹೊಂದಿತ್ತು.

    ಹಿಂದುಗಡೆ ಎಲ್‍ಇಡಿ ಫ್ಲಾಶ್ ಹೊಂದಿರುವ 2 ಎಂಪಿ ಕ್ಯಾಮೆರಾವನ್ನು ನೋಕಿಯಾ ನೀಡಿದ್ದು, ಮಿನಿ ಸಿಮ್ ಹಾಕಬಹುದು. 2ಜಿ ನೆಟ್‍ವರ್ಕಿಗೆ ಬೆಂಬಲ ನೀಡಬಲ್ಲ ಈ ಫೋನಿಗೆ ನೋಕಿಯಾ ತೆಗೆಯಲು ಸಾಧ್ಯವಾಗುವ 1,200 ಎಂಎಎಚ್ ಬ್ಯಾಟರಿಯನ್ನು ನೀಡಿದೆ. 22 ಗಂಟೆಗಳ ಟಾಕ್ ಟೈಂ ನೀಡಿದ್ದು, 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ.

    ಎಫ್‍ಎಂ ರೇಡಿಯೋ, 16 ಎಂಬಿ ಆಂತರಿಕ ಮೆಮೊರಿ ಹೊಂದಿದ್ದು, ಗ್ರಾಹಕರು ಎಸ್‍ಡಿ ಕಾರ್ಡ್ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಬಹುದು. ಹಿಂದುಗಡೆ ಕವರ್ ತೆಗೆದು ಮೈಕ್ರೋ ಎಸ್‍ಡಿ ಕಾರ್ಡನ್ನು ಹಾಕಬಹುದಾಗಿದೆ. ಮೇಲುಗಡೆ ಹೆಡ್‍ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ.

    ಬಹಳ ಪ್ರಸಿದ್ಧವಾಗಿರುವ ಸ್ನೇಕ್ ಆಟವನ್ನು ಈ ಫೋನಿಗೆ ನೋಕಿಯಾ ನೀಡಿದ್ದು, ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆಯಾಗಿದೆ.

    ಹಳೆ ನೋಕಿಯಾ ಹೀಗಿತ್ತು:
    2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕಗೆ ಪಾತ್ರವಾಗಿತ್ತು. 1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.

     

    https://www.youtube.com/watch?v=r5hVdeTSm0Y

  • ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

    ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

    ನವದೆಹಲಿ: ಈಗ ಸ್ಮಾರ್ಟ್ ಫೋನ್‍ಗಳದ್ದೇ ಅಬ್ಬರ. ಆದರೆ ನೋಕಿಯಾ ಕಂಪೆನಿ ಈಗ ಸ್ಮಾರ್ಟ್ ಫೋನಿನ ಜೊತೆಗೆ ಫೀಚರ್ ಫೋನ್ ಸಮಯದಲ್ಲಿ ವಿಶ್ವದಲ್ಲೇ ಹವಾ ಸೃಷ್ಟಿಸಿದ್ದ 3310 ಫೋನನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗುತ್ತಿದೆ.

    ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ  ಫೆ.27 ರಿಂದ ಮಾರ್ಚ್ 2ರವರೆಗೆ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಈ 3310 ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

    59 ಯುರೋ (ಅಂದಾಜು 4 ಸಾವಿರ ರೂ.) ಬೆಲೆಯಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.

  • 4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

    4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

    ನವದೆಹಲಿ: ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 4ಜಿ ರಾಮ್ ಹೊಂದಿರುವ ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಫೋನನ್ನು  ಈಗ ನೀವು ಖರೀದಿಸಬಹುದು. ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಲಭ್ಯವಾಗಲಿದೆ.

    4ಜಿಬಿ ರಾಮ್ 5000 ಎಂಎಎಚ್ ಬ್ಯಾಟರಿ ಹೊಂದಿರುವ ಈ ಫೋನಿಗೆ ಕಂಪೆನಿ 11,999 ರೂ. ಬೆಲೆಯನ್ನು ನಿಗದಿ ಪಡಿಸಿದೆ. ಮೆಟಲ್ ಬಾಡಿ, ಫಾಸ್ಟ್ ಚಾರ್ಜಿಂಗ್, ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ ಹೊಂದಿದೆ.

    ಎಲ್‍ಟಿ ನೆಟ್‍ವರ್ಕಿಗೆ ಸಪೋರ್ಟ್ ಮಾಡುವ ಕಾರಣ ಈ ಫೋನಿನಲ್ಲಿ ಜಿಯೋ ಸಿಮ್ ಹಾಕಬಹುದು.

    ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಗುಣವೈಶಿಷ್ಟ್ಯಗಳು
    ಬಾಡಿ:
    155*76.2*9.8 ಮಿ.ಮೀ
    189 ಗ್ರಾಂ ತೂಕ
    ಡ್ಯುಯಲ್ ಸಿಮ್(2 ಸಿಮ್ ಅಥವಾ 1 ನ್ಯಾನೋ ಸಿಮ್+ ಮೈಕ್ರೋ ಎಸ್‍ಡಿ ಕಾರ್ಡ್)

    ಡಿಸ್ಪ್ಲೇ:
    ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
    5.5 ಇಂಚಿನ ಸ್ಕ್ರೀನ್(1080*1920 ಪಿಕ್ಸೆಲ್)
    401 ಪಿಪಿಐ ಪಿಕ್ಸೆಲ್ ಡೆನ್ಸಿಟಿ

    ಪ್ಲಾಟ್‍ಫಾರಂ:
    ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ
    ಮೀಡಿಯಟೆಕ್ ಅಕ್ಟಾಕೋರ್ 1.5 GHz  ಕಾರ್ಟೆಕ್ಸ್ ಎ53 ಪ್ರೊಸೆಸರ್
    Mali-T860MP2 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೊರಿ:
    2ನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿವರೆಗಿನ ಸಾಮರ್ಥ್ಯದ ಮೆಮೊರಿ ಕಾರ್ಡ್ ಹಾಕಬಹುದು
    32 ಜಿಬಿ ಆಂತರಿಕ ಮಮೊರಿ, 4ಜಿಬಿ ರಾಮ್

    ಕ್ಯಾಮೆರಾ
    ಹಿಂದುಗಡೆ ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ
    ಮುಂದುಗಡೆ 8 ಎಂಪಿ ಕ್ಯಾಮೆರಾ

    ಇತರೇ:
    ಫಿಂಗರ್ ಪ್ರಿಂಟ್, ಎಕ್ಸಲರೋಮೀಟರ್, ಪ್ರಾಕ್ಸಿಮಿಟಿ, ಕಂಪಾಸ್ ಸೆನ್ಸರ್
    ತೆಗೆಯಲು ಸಾಧ್ಯವಿಲ್ಲದ 5000 ಎಂಎಎಚ್ ಬ್ಯಾಟರಿ