Tag: ಗ್ಯಾಜೆಟ್

  • ಸ್ಯಾಮ್ ಸಂಗ್ ಹಿಂದಿಕ್ಕಿ ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿಯಾದ ಕ್ಸಿಯೋಮಿ!

    ಸ್ಯಾಮ್ ಸಂಗ್ ಹಿಂದಿಕ್ಕಿ ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿಯಾದ ಕ್ಸಿಯೋಮಿ!

    ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಂಪೆನಿಯನ್ನು ಸೋಲಿಸಿ ಭಾರತದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

    ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕ್ಸಿಯೋಮಿ 26.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಸ್ಯಾಮ್ ಸಂಗ್ 24.2% ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ವಿವೋ 6.5%, ಲೆನೆವೊ 5.6%, ಒಪ್ಪೋ 4.9% ಅನುಕ್ರಮವಾಗಿ ನಂತರದ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.

    ಐಡಿಸಿ ನಾಲ್ಕನೇಯ ತ್ರೈಮಾಸಿಕ ಅಲ್ಲದೇ 2017ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಂದಿನಂತೆ ಸ್ಯಾಮ್ ಸಂಗ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಕ್ಸಿಯೋಮಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಯಾಮ್ ಸಂಗ್ 24.7%, ಕ್ಸಿಯೋಮಿ 20.9%, ವಿವೋ 9.4%, ಲೆನೆವೋ 7.8%, ಒಪ್ಪೋ 7.5% ಮಾರುಕಟ್ಟೆ ಪಾಲನ್ನು ಹೊಂದಿದೆ.

    ನಾಲ್ಕನೇಯ ತ್ರೈಮಾಸಿಕದ ಅತಿ ಹೆಚ್ಚು ಫೀಚರ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ಪೈಕಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 24.1%, ಸ್ಯಾಮ್ ಸಂಗ್ 14.5%, ಟ್ರಾನ್ಸಿಸ್ಸನ್ 8.7%, ಮೈಕ್ರೋಮ್ಯಾಕ್ಸ್ 8.7%, ಲಾವಾ 6.5% ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ.

    2017ರಲ್ಲಿ ಭಾರತದಲ್ಲಿ ಒಟ್ಟು 12.4 ಕೋಟಿ ಸ್ಮಾರ್ಟ್ ಫೋನ್ ಮಾರಾಟವಾಗಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳೆಯುತ್ತಿರುವ ಟಾಪ್ 20 ದೇಶಗಳ ಪೈಕಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2016ಕ್ಕೆ ಹೋಲಿಸಿದರೆ 2017ರಲ್ಲಿ 14% ಬೆಳವಣಿಗೆಯಾಗಿದೆ. 2017ರಲ್ಲಿ ದೇಶದಲ್ಲಿ 16.4 ಕೋಟಿ ಫೀಚರ್ ಫೋನ್ ಮಾರಾಟವಾಗಿದ್ದರೆ, 2016ರಲ್ಲಿ 14 ಕೋಟಿ ಮಾರಾಟ ಕಂಡಿತ್ತು.

    ವಿಶ್ವದಲ್ಲೇ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಗಳ ಪೈಕಿ ಕ್ಸಿಯೋಮಿ ನಾಲ್ಕನೇಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಆಪಲ್, ಎರಡನೇ ಸ್ಥಾನದಲ್ಲಿ ಸ್ಯಾಮ್ ಸಂಗ್, ಮೂರನೇ ಸ್ಥಾನದಲ್ಲಿ ಹುವಾವೇ ಕಂಪೆನಿಯಿದೆ.

  • ಈಗ ಫೇಸ್‍ಬುಕ್ ಖಾತೆ ತೆರೆಯಲು ಬಂತು ಆಧಾರ್!

    ಈಗ ಫೇಸ್‍ಬುಕ್ ಖಾತೆ ತೆರೆಯಲು ಬಂತು ಆಧಾರ್!

    ಬೆಂಗಳೂರು: ಸಿಮ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಆಗಿದ್ದು ಈಗ ಫೇಸ್ ಬುಕ್ ನಲ್ಲೂ ಆಧಾರ್ ಬಂದಿದೆ.

    ಹೌದು. ಭಾರತದಲ್ಲಿ ಹೊಸದಾಗಿ ಖಾತೆ ತೆರೆಯುವ ಬಳಕೆದಾರರಿಗೆ ಆಧಾರ್ ನಲ್ಲಿ ನೀವು ಯಾವ ಹೆಸರು ನೀಡಿದ್ದಿರೋ ಆ ಹೆಸರನ್ನೇ ಖಾತೆಗೆ ನೀಡಿ ಎಂದು ಫೇಸ್‍ಬುಕ್ ಹೇಳುತ್ತಿದೆ.

    ಹಾಗೆಂದ ಮಾತ್ರಕ್ಕೆ ಆಧಾರ್ ನಲ್ಲಿ ಏನು ಹೆಸರು ನಮೂದಿಸಿದ್ದೀರೋ ಅದೇ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಫೇಸ್‍ಬುಕ್ ಹೇಳಿಲ್ಲ. ಆಧಾರ್ ನಲ್ಲಿರುವ ಹೆಸರನ್ನು ನಮೂದಿಸಿದರೆ ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಹುಡುಕಲು ಸುಲಭವಾಗುತ್ತದೆ. ಈ ಕಾರಣಕ್ಕೆ ಆಧಾರ್ ಗೆ ನೀಡಿದ ಹೆಸರನ್ನು ನಮೂದಿಸಿದರೆ ಉತ್ತಮ ಎಂದು ಹೇಳಿದೆ.

    ಆಧಾರ್ ಗೆ ನೀಡಿರುವ ಹೆಸರನ್ನು ಮಾತ್ರ ಖಾತೆ ತೆರೆಯುವಾಗ ನಮೂದಿಸಿದರೆ ಸಾಕು. ಆಧಾರ್ ಕಾರ್ಡ್ ಪಡೆಯಲು ನೀಡಬೇಕಾದ ಇತ್ಯಾದಿ ಮಾಹಿತಿಗಳನ್ನು ನೀಡುವ ಅಗತ್ಯವಿಲ್ಲ.

    ಅಮೆರಿಕ ಬಿಟ್ಟರೆ ಫೇಸ್‍ಬುಕ್‍ಗೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರಿದ್ದು ಮತ್ತಷ್ಟು ಬಳಕೆದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಆಯಾ ದೇಶದ ಜನರಿಗೆ ಮಾತ್ರ ವಿಶೇಷ ಸೇವೆ ನೀಡಲು ಫೇಸ್‍ಬುಕ್ ಈಗ ಮುಂದಾಗುತ್ತಿದೆ.

    2016ರಲ್ಲಿ ಭಾರತದಲ್ಲಿ ಎಕ್ಸ್ ಪ್ರೆಸ್ ವೈಫೈ ಯನ್ನು ಫೇಸ್‍ಬುಕ್ ಆರಂಭಿಸಿತ್ತು. ಗ್ರಾಮೀಣ ಭಾಗದಲ್ಲಿ 125 ಹಾಟ್ ಸ್ಪಾಟ್ ಗಳನ್ನು ತೆರೆದು ವೇಗದ ಇಂಟರ್ ನೆಟ್ ನೀಡಲು ಈ ಸೇವೆಯನ್ನು ಆರಂಭಿಸಿತ್ತು. ಇದನ್ನೂ ಓದಿ: ‘ಲೈಕ್ಸ್’ ಗಾಗಿ ಫೇಸ್‍ಬುಕ್‍ನಲ್ಲಿ ಸೆಕ್ಸ್ ವಿಡಿಯೋ ಲೈವ್ ಮಾಡ್ದ- ಸ್ಟೋರಿಯಲ್ಲಿ ಮತ್ತೊಂದು ಟ್ವಿಸ್ಟ್

    ಇದೇ ನವೆಂಬರ್ ನಲ್ಲಿ 2020ರ ಒಳಗಡೆ ಭಾರತದ 5 ಲಕ್ಷ ಮಂದಿಗೆ ಡಿಜಿಟಲ್ ಕೌಶಲ್ಯದ ಬಗ್ಗೆ ತರಬೇತಿ ನೀಡಲು ಎರಡು ವಿಶೇಷ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದಾಗಿ ಹೇಳಿತ್ತು.

  • ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ವಾಟ್ಸಪ್ ಡಿಸೆಂಬರ್ 31 ರ ನಂತರ ಆಯ್ದ ಮೊಬೈಲ್ ಓಎಸ್ ಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ. ಬ್ಲಾಕ್ ಬೆರಿ ಓಎಸ್, ಬ್ಲಾಕ್‍ಬೆರಿ 10 ಓಎಸ್, ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯ ವಿಂಡೋಸ್ ಫೋನ್ ಗಳಿಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿದೆ.

    ಈ ಫೋನ್ ಗಳಲ್ಲದೇ ಡಿಸೆಂಬರ್ 2018ರ ನಂತರ ನೋಕಿಯಾ ಎಸ್ 40 ಫೋನ್‍ ಗಳಲ್ಲಿ  ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಆಂಡ್ರಾಯ್ಡ್ 2.3.7 ಆವೃತ್ತಿ ಫೋನ್ ಗಳಲ್ಲಿ 2020ರ ಫೆಬ್ರವರಿ 1ರ ನಂತರ ಸಪೋರ್ಟ್ ನೀಡುವುದಿಲ್ಲ ಎಂದು ವಾಟ್ಸಪ್ ಹೇಳಿದೆ.

    ತನ್ನ ಬ್ಲಾಗ್ ನಲ್ಲಿ ವಾಟ್ಸಪ್, ಕೆಲವು ಓಎಸ್ ಗಳಲ್ಲಿ ರನ್ ಆಗುತ್ತಿರುವ ಫೋನ್ ಗಳಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಫೋನ್ ಗಳನ್ನು ಬಳಸುವ ಗ್ರಾಹಕರು ಹೊಸ ಓಎಸ್ ಗೆ ಅಪ್ ಗ್ರೇಡ್ ಆಗಬೇಕು ಎಂದು ತಿಳಿಸಿದೆ. ಆಂಡ್ರಾಯ್ಡ್ 4.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಓಎಸ್, ಐಓಎಸ್ 7 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿ ಐಓಎಸ್ ಹೊಂದಿರುವ ಫೋನ್, ವಿಂಡೋಸ್ ಫೋನ್ 8.1 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್ ಗಳಿಗೆ ನೀಡುತ್ತಿರುವ ಬೆಂಬಲ ಮುಂದುವರಿಯುತ್ತದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಹೊಸ ಫೋನ್ ಪಡೆದುಕೊಂಡರೆ ವಾಟ್ಸಪ್ ಆ್ಯಪ್ ಇನ್ ಸ್ಟಾಲ್ ಮಾಡಿ ಫೋನ್ ನಂಬರ್ ವೆರಿಫೈ ಮಾಡಿ. ಆದರೆ ವಾಟ್ಸಪ್ ಆ್ಯಪ್ ಒಂದು ಬಾರಿ ಒಂದೇ ಫೋನಿನಲ್ಲಿ ಮಾತ್ರ ಆ್ಯಕ್ಟಿವೇಟ್ ಆಗಿರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಿದೆ.

    ಈ ವೇಳೆ ಚಾಟ್ ಹಿಸ್ಟರಿಯನ್ನು ಎರಡು ಫೋನ್ ಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಆದರೆ ಈ ಮೇಲ್ ಕೊಟ್ಟರೆ ಚಾಟ್ ಹಿಸ್ಟರಿಯನ್ನು ಕಳುಹಿಸಿಕೊಡುವುದಾಗಿ ವಾಟ್ಸಪ್ ಹಳೆಯ ಫೋನ್ ಗಳನ್ನು ಬಳಸುತ್ತಿರುವ ಗ್ರಾಹಕರಿಗೆ ತಿಳಿಸಿದೆ.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ: ಜಾಹೀರಾತು ಸೆಂಡ್ ಮಾಡದೇ ಹಣ ಮಾಡಲು ಮುಂದಾದ ವಾಟ್ಸಪ್ 

  • ಕ್ಸಿಯೋಮಿಯ ಮೊದಲ ಆಂಡ್ರಾಯ್ಡ್ ಒನ್ ಫೋನಿನ ಬೆಲೆ ದಿಢೀರ್ ಇಳಿಕೆ

    ಕ್ಸಿಯೋಮಿಯ ಮೊದಲ ಆಂಡ್ರಾಯ್ಡ್ ಒನ್ ಫೋನಿನ ಬೆಲೆ ದಿಢೀರ್ ಇಳಿಕೆ

    ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಬೆಲೆ ಕಡಿಮೆಯಾಗಿದೆ. ಸೆಪ್ಟೆಂಬರ್ ನಲ್ಲಿ ಎಂಐ ಎ1 ಫೋನ್ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 13,999 ರೂ. ಬೆಲೆಯಲ್ಲಿ ಲಭ್ಯವಿದೆ.

    ಕ್ಸಿಯೋಮಿ ಇಂಡಿಯಾದ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿ 1 ಸಾವಿರ ರೂ. ಬೆಲೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಬೆಲೆ ಇಳಿಕೆ ಕೆಲ ದಿನಗಳಿಗೆ ಮಾತ್ರ ಇಳಿಕೆಯಾಗಿಲ್ಲ. ಶಾಶ್ವತವಾಗಿ ಎ1 ಫೋನಿನ ಬೆಲೆಯನ್ನು ಇಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ. ಈ ಫೋನ್ ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸ್ಟೋರ್ Mi.com ಮತ್ತು ಫ್ಲಿಪ್‍ಕಾರ್ಟ್ ನಲ್ಲಿ ಖರೀದಿಸಬಹುದಾಗಿದ್ದು, ಕಪ್ಪು, ಚಿನ್ನ, ಗುಲಾಬಿ ಚಿನ್ನ ಬಣ್ಣದಲ್ಲಿ ಲಭ್ಯವಿದೆ.

    ಏನಿದು ಗೂಗಲ್ ಆಂಡ್ರಾಯ್ಡ್ ಒನ್?
    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ

    ಕ್ಸಿಯೋಮಿ ಎಂಐ ಎ1 ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    155.4*75.8*7.3 ಮಿ.ಮೀ, ಹೈ ಬ್ರಿಡ್ ಡ್ಯುಯಲ್ ಸಿಮ್, 5.5 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್( 1080*1920 ಪಿಕ್ಸೆಲ್, 16:9 ಅನುಪಾತ, 403 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.

    ಪ್ಲಾಟ್‍ಫಾರಂ ಮತ್ತು ಮಮೊರಿ:
    ಆಂಡ್ರಯ್ಡ್ 7.1.2 ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 625 ಅಕ್ಟಾಕೋರ್ 2.0 GHz  ಕಾರ್ಟೆಕ್ಸ್ ಎ53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸ್ಲಾಟ್ ನಲ್ಲಿ ಎಸ್‍ಡಿ ಕಾರ್ಡ್ ಹಾಕಿದ್ರೆ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 64 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ ಡ್ಯುಯಲ್ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ ಟೈಪ್ 2.0, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 3080 ಎಂಎಎಚ್ ಬ್ಯಾಟರಿ.

     

     

  • 4ಜಿಬಿ RAM, ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರೋ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಇಳಿಕೆ

    4ಜಿಬಿ RAM, ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರೋ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಇಳಿಕೆ

    ಬೆಂಗಳೂರು: ಒಪ್ಪೋ ಎಫ್3 ಪ್ಲಸ್ ಸ್ಮಾರ್ಟ್ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಕಡಿತಗೊಂಡಿದೆ. ಈ ವರ್ಷದ ಏಪ್ರಿಲ್ ನಲ್ಲಿ ಈ ಫೋನ್ ಬಿಡುಗಡೆಯಾದಾಗ 30,990 ರೂ. ದರ ನಿಗದಿ ಪಡಿಸಿತ್ತು. ಆದರೆ ಈಗ ಈ ಫೋನ್ 24,990 ರೂ. ದರದಲ್ಲಿ ಮಾರಾಟವಾಗುತ್ತಿದೆ.

    ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ದರ ಕಡಿತ ಮಾರಾಟವಿದ್ದು, ಈ ವೀಶೇಷ ಆಫರ್ ಇವತ್ತು(ಮಂಗಳವಾರ) ಒಂದು ದಿನ ಮಾತ್ರ ಇರಲಿದೆ. 6 ಇಂಚಿನ ಸ್ಕ್ರೀನ್ ಜೊತೆ ಮುಂದುಗಡೆ ಸೆಲ್ಫಿಗಾಗಿ ಎರಡು ಕ್ಯಾಮೆರಾ ಇರುವುದು ಈ ಫೋನಿನ ವಿಶೇಷತೆ.

    ಒಪ್ಪೋ ಎಫ್3 ಪ್ಲಸ್ ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಲ್ಪೇ:
    163.3*80.8*7.4 ಮೀ ಗಾತ್ರ, 185 ಗ್ರಾಂ ತೂಕ ಹೈಬ್ರಿಡ್ ಡ್ಯುಯಲ್ ಸಿಮ್, 6 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್,16:9 ಅನುಪಾತ, 367 ಪಿಕ್ಸೆಲ್) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

    ಪ್ಲಾಟ್ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 653 ಅಕ್ಟಾಕೋರ್ ಪ್ರೊಸೆಸರ್,  Adreno  510 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೊರಿ:
    64 ಜಿಬಿ ಆಂತರಿಕ ಮೆಮೊರಿ, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM

    ಕ್ಯಾಮೆರಾ ಮತ್ತು ಇತರೇ:
    ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 16 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 16 ಎಂಪಿ + 8 ಎಂಪಿ ಡ್ಯುಯಲ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 4000 ಎಂಎಚ್ ಬ್ಯಾಟರಿ

     

  • ಕ್ಸಿಯೋಮಿ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ಕ್ಸಿಯೋಮಿ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ:  ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ.

    ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ ಬಿಡುಗಡೆಯಾಗಿದ್ದ 64 ಜಿಬಿ ಆಂತರಿಕ ಫೋನ್ 15,999 ರೂ.ಗೆ ಲಭ್ಯವಿದೆ.

    ಭಾರತದ ಕ್ಸಿಯೋಮಿ ಕಂಪೆನಿಯ ಉಪಾಧ್ಯಕ್ಷ ಮನು ಕುಮಾರ್ ಜೈನ್, ಎರಡು ಫೋನಿನ ಬೆಲೆ 1 ಸಾವಿರ ರೂ. ಕಡಿತ ಮಾಡಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    174.1*88.7*7.6 ಮಿಲಿ ಮೀಟರ್, 211 ಗ್ರಾಂ ತೂಕ, ಹೈ ಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್, ಮೈಕ್ರೋ ಸಿಮ್), 6.4 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 342 ಪಿಪಿಐ, 74.0% ಬಾಡಿ ಅನುಪಾತ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3

    ಓಎಸ್, ಪ್ರೊಸೆಸರ್:
    ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 2.0 GHz  ಅಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್, Adreno 506 ಗ್ರಾಫಿಕ್ಸ್ ಪ್ರೊಸೆಸರ್.

    ಮೆಮೊರಿ:
    ಎರಡನೇ ಸ್ಲಾಟ್ ನಲ್ಲಿ ಸಿಮ್ ಹಾಕಿದ್ರೆ 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ,  32/64 ಜಿಬಿ ಆಂತರಿಕ ಮೆಮೊರಿ, 4ಜಿಬಿ ರಾಮ್

    ಕ್ಯಾಮೆರಾ, ಇತರೇ:
    ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ತೆಗೆಯಲು ಅಸಾಧ್ಯವಾದ 5300 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್ (ಕ್ವಿಕ್ ಚಾರ್ಜ್ 3.0)

     

     

     

  • ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಕರೆ ದರ ಸಮರ, ಡೇಟಾ ಸಮರ ನಡೆದಿರುವುದು ನಿಮಗೆ ಗೊತ್ತೆ ಇದೆ. ಈಗ 4ಜಿ ಫೀಚರ್ ಫೋನ್ ಸಮರ ಆರಂಭವಾಗಿದೆ. ಜಿಯೋ ಮತ್ತು ಏರ್‍ಟೆಲ್ ಗೆ ಸ್ಪರ್ಧೆ ಎನ್ನುವುಂತೆ ಈಗ ವೊಡಾಫೋನ್ 999 ರೂ.ಗೆ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

    ದೇಶೀಯ ಸ್ಮಾರ್ಟ್ ಫೋನ್ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಜೊತೆಗೂಡಿ ವೊಡಾಫೋನ್ ಒಪ್ಪಂದ ಮಾಡಿಕೊಂಡಿದ್ದು, ನವೆಂಬರ್ ವೇಳೆಗೆ ‘ಭಾರತ್ -2 ಆಲ್ಟ್ರಾ’ ಹೆಸರಿನ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

    999 ರೂ. ಹೇಗೆ ಸಿಗುತ್ತೆ?
    ಈ ಫೋನಿನ ಮೂಲ ಬೆಲೆ 2,899 ರೂ. ಆಗಿದ್ದು, ಆರಂಭಲ್ಲಿ ವೊಡಾಫೋನ್ ಹೊಸ ಗ್ರಾಹಕರು ಇಷ್ಟೇ ಮೊತ್ತವನ್ನು ನೀಡಿ ಫೋನ್ ಖರೀದಿಸಬೇಕು.

    ಖರೀದಿಸಿದ ಬಳಿಕ ಗ್ರಾಹಕರು ಪ್ರತಿ ತಿಂಗಳು 150 ರೂ. ರಿಚಾರ್ಜ್ ಮಾಡಬೇಕು. 36 ತಿಂಗಳು ಅಂದರೆ ಮೂರು ವರ್ಷಗಳ 150 ರೂ. ರಿಚಾರ್ಜ್ ಮಾಡಿದ ಬಳಿಕ ಹಣ ಗ್ರಾಹಕರಿಗೆ ವೊಡಾಫೋನಿನ M-Pesa ವ್ಯಾಲೆಟ್ ಮೂಲಕ ಪಾವತಿಯಾಗುತ್ತದೆ. ಮೊದಲ 18 ತಿಂಗಳ ಬಳಿಕ 900 ರೂ. ಕ್ಯಾಶ್ ಬ್ಯಾಕ್ ಆದರೆ 38 ತಿಂಗಳು ಮುಕ್ತಾಯವಾದ ಬಳಿಕ 1 ಸಾವಿರ ರೂ. ಗ್ರಾಹಕರ ವ್ಯಾಲೆಟ್ ಗೆ  ಹಣವನ್ನು ಕಳುಹಿಸುತ್ತದೆ.

    ಭಾರತ್ ಆಲ್ಟ್ರಾ ಗುಣವೈಶಿಷ್ಟ್ಯಗಳು:
    4 ಇಂಚಿನ WVGA  ಡಿಸ್ಲ್ಪೇ, 1.3GHz  ಕ್ವಾಡ್ ಕೋರ್ ಪ್ರೊಸೆಸರ್, 512 ಎಂಬಿ ರಾಮ್, 4ಜಿಬಿ ಆಂತರಿಕ ಮೆಮೊರಿ, ಹಿಂದುಗಡೆ 2ಎಂಪಿ ಕ್ಯಾಮೆರಾ, ಮುಂದುಗಡೆ 3 ಎಂಪಿ ಕ್ಯಾಮೆರಾ, ಮಾರ್ಶ್ ಮೆಲೋ ಓಎಸ್, 1300 ಎಂಎಎಚ್ ಬ್ಯಾಟರಿ ಹೊಂದಿದೆ.

    ಈ ಹಿಂದೆ ಜಿಯೋ 4ಜಿ ಫೋನ್ ಬಿಡುಗಡೆ ಮಾಡಿದ್ದರೆ, ಬಳಿಕ ಏರ್‍ಟೆಲ್ 1399 ರೂ.ಗೆ ಫೋನ್ ಬಿಡುಗಡೆ ಮಾಡಿತ್ತು. ಈ ಹಿಂದೆ ಬಿಎಸ್‍ಎನ್‍ಎಲ್ ಜೊತೆಗೂಡಿ ಮೈಕ್ರೋಮ್ಯಾಕ್ಸ್ ಭಾರತ್ 1 ಫೋನ್ ಬಿಡುಗಡೆ ಮಾಡಿತ್ತು.

     

  • ದೀಪಾವಳಿಗೆ ಜಿಯೋ ಗಿಫ್ಟ್: 399 ರೂ. ರಿಚಾರ್ಜ್ ಮಾಡಿ ಫುಲ್ ಕ್ಯಾಶ್‍ಬ್ಯಾಕ್ ಪಡೆಯಿರಿ

    ದೀಪಾವಳಿಗೆ ಜಿಯೋ ಗಿಫ್ಟ್: 399 ರೂ. ರಿಚಾರ್ಜ್ ಮಾಡಿ ಫುಲ್ ಕ್ಯಾಶ್‍ಬ್ಯಾಕ್ ಪಡೆಯಿರಿ

    ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ರಿಲಯನ್ಸ್ ಜಿಯೋ ದೀಪಾವಳಿ ಹಿನ್ನೆಲೆಯಲ್ಲಿ ಪ್ರೈಮ್ ಗ್ರಾಹಕರಿಗೆ 399 ರೂ. ಕ್ಯಾಶ್ ಬ್ಯಾಕ್ ಆಫರನ್ನು ಪ್ರಕಟಿಸಿದೆ.

    399 ರೂ. ರಿಚಾರ್ಜ್ ಮಾಡಿದರೆ 50 ರೂ. 8 ವೋಚರ್ ನೀಡಲಾಗುವುದು. ಈ ವೋಚರ್ ಮೂಲಕ ಮುಂದೆ 50 ರೂ. ನಿಂದ ಆರಂಭವಾಗಿ 399 ರೂ. ವರೆಗಿನ ಆಫರನ್ನು ರಿಚಾರ್ಜ್ ಮಾಡಬಹುದು ಎಂದು ಜಿಯೋ ತಿಳಿಸಿದೆ.

    84 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ ಗರಿಷ್ಠ 1 ಜಿಬಿ ಡೇಟಾ ಬಳಕೆ ಮಾಡಬಹುದು. ಅಲ್ಲದೇ ಹೊರ ಹೊಗುವ ಎಲ್ಲ ಕರೆಗಳು ಉಚಿತವಾಗಿರಲಿದೆ ಎಂದು ತಿಳಿಸಿದೆ.

    ಅಕ್ಟೋಬರ್ 12 ರಿಂದ 18ರವರೆಗೆ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ. ವೋಚರನ್ನು ಗ್ರಾಹಕರು ನವೆಂಬರ್ 15ರ ನಂತರ ಬಳಸಬಹುದಾಗಿದೆ.

     

  • ಜಿಯೋ ಫೋನ್ ಬುಕ್ ಮಾಡೋದು ಹೇಗೆ? ಗುಣವೈಶಿಷ್ಟ್ಯ ಏನು?

    ಜಿಯೋ ಫೋನ್ ಬುಕ್ ಮಾಡೋದು ಹೇಗೆ? ಗುಣವೈಶಿಷ್ಟ್ಯ ಏನು?

    ಮುಂಬೈ: ಜಿಯೋ ಫೀಚರ್ ಫೋನ್ ಬಿಡುಗಡೆಯಾದ ಬಳಿಕ ಆದರ ಗುಣವೈಶಿಷ್ಟ್ಯ ಸಂಪೂರ್ಣವಾಗಿ ಬಹಿರಂಗವಾಗಿರಲಿಲ್ಲ. ಆದರೆ ಗುರುವಾರದಿಂದ ಫೋನ್ ಬುಕ್ಕಿಂಗ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಫೋನಿನ ಸಂಪೂರ್ಣ ಗುಣವೈಶಿಷ್ಟ್ಯ ಬಹಿರಂಗವಾಗಿದೆ.

    ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿತ್ತು. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಈ ಫೋನನ್ನು ಮುಕೇಶ್ ಅಂಬಾನಿ `ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಿದ್ದಾರೆ. ಈ ಫೋನಿನಲ್ಲಿ ಜಿಯೋ ಸಿನಿಮಾ, ಸಿನಿಮಾ ಮ್ಯೂಸಿಕ್ ಸೇರಿದಂತೆ ಜಿಯೋ ಆಪ್ಲಿಕೇಶನ್ ಪ್ರಿ ಲೋಡೆಡ್ ಆಗಿ ಇರಲಿದೆ.

    ಗುಣವೈಶಿಷ್ಟ್ಯಗಳು:
    ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240*320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS )ಹೊಂದಿದೆ.

    1.2 GHz ಡ್ಯುಯಲ್ ಕೋರ್ ಎಸ್‍ಪಿಆರ್‍ಡಿ ಪ್ರೊಸೆಸರ್ ಹೊಂದಿರುವ ಈ ಫೋನ್ ಮಲಿ – 400 ಗ್ರಾಫಿಕ್ಸ್ ಪ್ರೊಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮಥ್ರ್ಯವನ್ನು ಹೊಂದಿದೆ.

    ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಎಂದು ಜಿಯೋ ಹೇಳಿದೆ.

    ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಯುಎಸ್‍ಬಿ 2.0, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್ ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್‍ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

    ಫೋನ್ ಬಾಕ್ಸ್ ನಲ್ಲಿ ಹ್ಯಾಂಡ್ ಸೆಟ್, ಬ್ಯಾಟರಿ, ಚಾರ್ಜರ್ ಅಡಾಪ್ಟರ್, ಕ್ವಿಕ್ ಸರ್ವಿಸ್ ಗೈಡ್, ವಾರಂಟಿ ಕಾರ್ಡ್, ಸಿಮ್ ಕಾರ್ಡ್ ಇರಲಿದೆ.

    ಫೋನ್ ಬುಕ್ ಮಾಡುವುದು ಹೇಗೆ?
    ಜಿಯೋ ಮನಿ ಅಥವಾ ಪೇಟಿಎಂ ಮೂಲಕ 500 ರೂ. ಪಾವತಿಸಿ ಫೋನ್ ಬುಕ್ ಮಾಡಬಹುದು. ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಹಣಕಾಸು ವ್ಯವಹಾರಗಳು ನಡೆಯುತ್ತದೆ. ಈ ಮೇಲಿನ ಆನ್‍ಲೈನ್ ವ್ಯವಹಾರಗಳು ಯಶಸ್ವಿಯಾದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಗೆ ಫೋನ್ ಬುಕ್ ಆಗಿರುವ ಬಗ್ಗೆ ಮೆಸೇಜ್ ಬರುತ್ತದೆ.

    ಫೋನ್ ಬುಕ್ ಮಾಡಲು ಭೇಟಿ ನೀಡಿ: www.jio.com


  • ಕ್ಸಿಯೋಮಿಯಿಂದ 6 ಜಿಬಿ ರಾಮ್, ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ಕ್ಸಿಯೋಮಿಯಿಂದ 6 ಜಿಬಿ ರಾಮ್, ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ಬೀಜಿಂಗ್: ಕ್ಸಿಯೋಮಿ ಕಂಪೆನಿ ಡ್ಯುಯಲ್ ಸಿಮ್ 6ಜಿಬಿ ರಾಮ್ ಹೊಂದಿರುವ ಎಂಐ 6 ಫೋನನ್ನು ಬಿಡುಗಡೆ ಮಾಡಿದೆ.

    ಸದ್ಯಕ್ಕೆ ಈ ಫೋನ್ ಎರಡು ಆಂತರಿಕ ಮೆಮೊರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದೆ. 6ಜಿ ರಾಮ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 2499 ಯುವಾನ್(ಅಂದಾಜು 24,000 ರೂ.) 6ಜಿಬಿ ರಾಮ್ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 2899 ಯುವಾನ್(27,000 ರೂ.) ರೂ. ನಿಗದಿ ಮಾಡಿದೆ.

    ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್8ರ ಬಳಿಕ ಸ್ನಾಪ್ ಡ್ರಾಗನ್ 835 ಅಕ್ಟಾ ಕೋರ್ ಪ್ರೊಸೆಸರ್‍ನಲ್ಲಿ ರನ್ ಆಗುತ್ತಿರುವ ಎರಡನೇ ಫೋನ್ ಇದಾಗಿದೆ. ಹಿಂದುಗಡೆ 2 ಕ್ಯಾಮೆರಾ ಹೊಂದಿದ್ದು, 12 ಎಂಪಿ ವೈಡ್ ಆಂಗಲ್ ಲೆನ್ಸ್, 12 ಎಂಪಿ ಟೆಲಿಫೋಟೋ ಲೆನ್ಸನ್ನು ಕ್ಸಿಯೋಮಿ ನೀಡಿದೆ.

    ಫೋನ್ ಮೇಲೆ ನೀರು ಎಷ್ಟೇ ಬಿದ್ದರೂ ಅದು ಫೋನಿನ ಒಳಗಡೆ ಹೋಗದೇ ಇರಲು ಸ್ಪ್ಲಾಶ್ ರೆಸಿಸ್ಟೆಂಟ್ ವಿಶೇಷತೆಯನ್ನೂ ನೀಡಿದೆ. ಮುಂದುಗಡೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ.

    ಕ್ಸಿಯೋಮಿ ವಿಶೇಷವಾಗಿ ಸೆರಾಮಿಕ್ ವರ್ಶನ್ ಬಿಡುಗಡೆ ಮಾಡಿದೆ. ಈ ಫೋನಿನ ನಾಲ್ಕು ಬದಿಗಳಲ್ಲೂ ಕರ್ವ್ ಸೆರಾಮಿಕ್ ಬಾಡಿ ಹೊಂದಿರುವುದು ಇದರ ವಿಶೇಷತೆ. ಈ ಫೋನಿಗೆ 2999 ಯುವಾನ್(ಅಂದಾಜು 28,000 ರೂ.) ನಿಗದಿ ಮಾಡಿದೆ.

    ಇಷ್ಟೇ ಅಲ್ಲದೇ 3ಡಿ ಸಿಲ್ವರ್ ಎಡಿಶನ್ ಫೋನ್ ಬಗ್ಗೆ ತಿಳಿಸಿದ್ದು, ಈ ಫೋನ್ 4 ಬದಿಗಳಲ್ಲೂ ಕರ್ವ್ ಗ್ಲಾಸ್ ದೇಹವನ್ನು ಹೊಂದಿರಲಿದೆ ಎಂದು ತಿಳಿಸಿದೆ.

    ಕ್ಸಿಯೋಮಿಯ ಡ್ಯುಯಲ್ ಸಿಮ್ ಸೆಟ್‍ಗಳು ಹೆಚ್ಚಾಗಿ ಹೈ ಬ್ರಿಡ್ ಸಿಮ್ ಸ್ಲಾಟ್‍ಗಳನ್ನು ಒಳಗೊಂಡಿರುತ್ತದೆ. ಆದರೆ ಈ ಫೋನ್ ಕಾರ್ಡ್ ಹಾಕಲು ಅವಕಾಶವಿಲ್ಲ. ಈ ಕಾರಣಕ್ಕಾಗಿ ಐಫೋನ್ ನಲ್ಲಿ ಇರುವಂತೆ 64 ಜಿಬಿ, 128 ಜಿಬಿ ಆಂತರಿಕ ಮೆಮೊರಿಯನ್ನು ಕ್ಸಿಯೋಮೀ ನೀಡಿದೆ. ಹೀಗಾಗಿ ಸಿಮ್ ಸ್ಲಾಟ್‍ನಲ್ಲಿ 1 ಮೈಕ್ರೋ ಸಿಮ್ ಮತ್ತು ಒಂದು ನ್ಯಾನೋ ಸಿಮ್ ಹಾಕಬಹುದು.

    ಎಂಐ6 ಗುಣವೈಶಿಷ್ಟ್ಯಗಳು
    ದೇಹ ಮತ್ತು ಡಿಸ್ಲ್ಪೇ:
    145.2*70.5*7.5 ಮಿ.ಮೀ ಗಾತ್ರ, 168 ಗ್ರಾಂ ತೂಕ, ಡ್ಯುಯಲ್ ಸಿಮ್, ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 428 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್, ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 6ಜಿಬಿ ರಾಮ್ 64 ಜಿಬಿ ಅಥವಾ 128 ಜಿಬಿ ಆಂತರಿಕ ಮೆಮೊರಿ

    ಇತರೇ:
    12 ಎಂಪಿ ಹಿಂದುಗಡೆ ಕ್ಯಾಮೆರಾ, 8 ಎಂಪಿ ಮುಂದುಗಡೆ ಕ್ಯಾಮೆರಾ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್( ಕ್ವಿಕ್ ಚಾರ್ಜ್ 3.0) ತೆಗೆಯಲು ಅಸಾಧ್ಯವಾದ ಲಿಪೋ 3350 ಎಂಎಎಚ್ ಬ್ಯಾಟರಿ

    ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?