Tag: ಗ್ಯಾಂಗ್ ವಾರ್

  • ಮಸೀದಿ ವಿಚಾರದಲ್ಲಿ 2 ತಂಡಗಳ ನಡುವೆ ಗ್ಯಾಂಗ್ ವಾರ್- ಮೂವರಿಗೆ ಗಂಭೀರ ಗಾಯ

    ಮಸೀದಿ ವಿಚಾರದಲ್ಲಿ 2 ತಂಡಗಳ ನಡುವೆ ಗ್ಯಾಂಗ್ ವಾರ್- ಮೂವರಿಗೆ ಗಂಭೀರ ಗಾಯ

    ಮಂಗಳೂರು: ಮಸೀದಿ ವಿಚಾರದಲ್ಲಿ ಎರಡು ತಂಡಗಳ ನಡುವಿನ ಮನಸ್ತಾಪ ತಾರಕಕ್ಕೇರಿ ಗ್ಯಾಂಗ್ ವಾರ್ ನಡೆದ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ.

    8 ಮಂದಿಯ ತಂಡ ಲಾಂಗು ಮಚ್ಚುಗಳನ್ನು ಹಿಡಿದು 3 ಜನರ ಮೇಲೆ ದಾಳಿ ನಡೆಸಿ ಮನಸೋ ಇಚ್ಛೆ ಹಲ್ಲೆ ನಡೆಸಿದೆ. ಘಟನೆಯಲ್ಲಿ ಎದುರಾಳಿ ತಂಡದ ಮೂವರಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ತಸ್ಲೀಂ, ಹ್ಯಾರಿಸ್, ಶಿಹಾಬ್ ಎಂದು ಗುರುತಿಸಲಾಗಿದೆ ಹಾಗೂ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗೇರುಕಟ್ಟೆ ಬಸ್ ಸ್ಟಾಂಡ್ ಬಳಿ ಸಾರ್ವಜನಿಕರ ಎದುರೇ ಗ್ಯಾಂಗ್ ವಾರ್ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳಾದ ಯಾಕೂಬ್, ಉಮರಬ್ಬ, ರವೂಫ್, ಇರ್ಫಾನ್, ರಿಝ್ವಾನ್, ಅಬೂಬಕರ್, ಆದಂ ಶಾಫಿ, ಹೈದರ್ ಮನಬಂದಂತೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದಾರೆ.

    ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ನಡುರಸ್ತೇಲಿ ಲಾಂಗು, ಮಚ್ಚುಗಳಿಂದ 2 ಗುಂಪುಗಳ ನಡುವೆ ಗ್ಯಾಂಗ್ ವಾರ್ – ವಿಡಿಯೋ ನೋಡಿ

    ನಡುರಸ್ತೇಲಿ ಲಾಂಗು, ಮಚ್ಚುಗಳಿಂದ 2 ಗುಂಪುಗಳ ನಡುವೆ ಗ್ಯಾಂಗ್ ವಾರ್ – ವಿಡಿಯೋ ನೋಡಿ

    ಕಲಬುರಗಿ: ನಗರದ ಗೋವಾ ಹೋಟೆಲ್ ಬಳಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪುಡಿ ರೌಡಿಗಳು ಯಾರ ಭಯವಿಲ್ಲದೇ ನಡು ರಸ್ತೆಯಲ್ಲಿ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಏನಿದು ಘಟನೆ?: ಮೇ 23ರಂದು ನಗರದ ಗೋವಾ ಹೋಟೆಲ್ ಬಳಿ ಸೆವನ್ ಸ್ಟಾರ್ ಪ್ರದೀಪ ಗ್ಯಾಂಗ್‍ನವರು ಎದುರಾಳಿ ಫಯೀಮ್ ಗ್ಯಾಂಗ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ರೌಡಿ ಫಯೀಮ್, ನಿತಿನ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ರೌಡಿಗಳು ಒಬ್ಬರ ಮೇಲೊಬ್ಬರು ಹಲ್ಲೆ ಮಾಡುವುದನ್ನ ಕಂಡ ಸ್ಥಳೀಯರು ಭಯಭೀತರಾಗಿ ಅಂಗಡಿಗಳನ್ನು ಮುಚ್ಚಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ಈ ಎರಡು ಗ್ಯಾಂಗ್‍ಗಳ ನಡುವೆ ಪದೇ ಪದೇ ಜನವಸತಿ ಪ್ರದೇಶದಲ್ಲಿ ಗಲಾಟೆ ನಡೆಯುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ವಿಡಿಯೋ: ಹಾಡಹಗಲೇ ವ್ಯಕ್ತಿಯನ್ನ ಅಟ್ಟಾಡಿಸಿ ಕುರಿ ಕಡಿಯುವಂತೆ ಕೊಚ್ಚಿ ಕೊಚ್ಚಿ ಕೊಂದ್ರು

    https://www.youtube.com/watch?v=o0057li_BTo