Tag: ಗ್ಯಾಂಗ್ರಿನ್

  • ಬರೀ ಒಂದು ಕಾಲಲ್ಲ, ಆತನ ಮೈಯೆಲ್ಲ ಕೊಳೆತು ಹೋಗಬೇಕು – ಆ್ಯಸಿಡ್ ಸಂತ್ರಸ್ತೆ

    ಬರೀ ಒಂದು ಕಾಲಲ್ಲ, ಆತನ ಮೈಯೆಲ್ಲ ಕೊಳೆತು ಹೋಗಬೇಕು – ಆ್ಯಸಿಡ್ ಸಂತ್ರಸ್ತೆ

    ಬೆಂಗಳೂರು: ನಾಗೇಶ್‌ಗೆ(Nagesh) ದೇವರೇ ಶಿಕ್ಷೆ ಕೊಟ್ಟಿದ್ದಾನೆ. ಆತನಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು. ಆತನ ಮೈಯೆಲ್ಲ ಕೊಳೆತು ಹೋಗಬೇಕು ಎಂದು ಆ್ಯಸಿಡ್ ದಾಳಿಯ ಸಂತ್ರಸ್ತೆ ಪ್ರತಿಕ್ರಿಯಿಸಿದ್ದಾರೆ.

    ಆ್ಯಸಿಡ್(Acid) ದಾಳಿಕೋರ ನಾಗೇಶ್‌ಗೆ ಗ್ಯಾಂಗ್ರಿನ್(Gangrene) ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ವಿಚಾರ ಕೇಳಿ ತುಂಬ ಖಷಿ ಆಗುತ್ತಿದೆ. ಯಾವ ಹುಡುಗಿಯರಿಗೂ ಹೀಗೆ ಆಗಬಾರದು. ಆಸ್ಪತ್ರೆಯಲ್ಲಿ ಮೂರು ತಿಂಗಳು ನೋವಿನಲ್ಲಿದ್ದೆ. ಇವತ್ತು ವಿಚಾರ ಗೊತ್ತಾಗಿ ಖಷಿಯಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್


    ಆತನ ಮೈಯೆಲ್ಲ ಕೊಳೆತು ಹೋಗಬೇಕು, ನೋವು ಗೊತ್ತಾಗಬೇಕು. ಬರೀ ಒಂದು ಕಾಲಲ್ಲ, ಇನ್ನು ಜಾಸ್ತಿ ಅವನು ನರಳಾಡಬೇಕು. ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ನನಗೆ ದೇವರ ಮೇಲೆ ನಂಬಿಕೆ ಇದೆ. ದೇವರೇ ಶಿಕ್ಷೆ ನೀಡಿದ್ದಾನೆ. ನನ್ನ ಮೈಯೆಲ್ಲ ಗಾಯವಾದರೂ ಎದ್ದು ಬಂದಿದ್ದೇನೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಕಾಲುನೋವು ತಾಳಲಾಗದೆ ಮರ್ಮಾಂಗವನ್ನೆ ಕತ್ತರಿಸಿಕೊಂಡ!

    ಕಾಲುನೋವು ತಾಳಲಾಗದೆ ಮರ್ಮಾಂಗವನ್ನೆ ಕತ್ತರಿಸಿಕೊಂಡ!

    ರಾಯಚೂರು: ವ್ಯಕ್ತಿಯೊಬ್ಬ ಕಾಲುನೋವು ತಾಳಲಾಗದೆ ಮರ್ಮಾಂಗವನ್ನೆ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಲಕ್ಷಣ ಸುದ್ದಿ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಮಸ್ಕಿ ತಾಲೂಕಿನ ಇರಕಲ್ ಗ್ರಾಮದಲ್ಲಿ ಗ್ವಾನಪ್ಪ ತನ್ನ ಕಾಲುನೋವನ್ನು ತಾಳಲಾಗದೆ ಮರ್ಮಾಂಗವನ್ನೆ ಕತ್ತರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಹಿಳೆಯರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು: ಜೊಲ್ಲೆ ಕರೆ

    ಏನಿದು ಘಟನೆ?
    ಗ್ವಾನಪ್ಪ ಅವರು ಹಲವು ದಿನಗಳಿಂದ ಗ್ಯಾಂಗ್ರಿನ್ ಸಮಸ್ಯೆ, ಕಾಲು ನೋವಿನಿಂದ ಬಳಲುತ್ತಿದ್ದರು. ಆದರೆ ಗ್ವಾನಪ್ಪ ಅವರಿಗೆ ಸೂಕ್ತ ಚಿಕಿತ್ಸೆ ಸಿಗದೇ ನರಳುತ್ತಿದ್ದರು. ಅವರಿಗೆ ಕಾಲುನೋವಿನ ಬಾಧೆ ವಿಪರೀತವಾದ ಹಿನ್ನೆಲೆ ನೋವು ತಾಳದೆ ತನ್ನ ಮರ್ಮಾಂಗವನ್ನೆ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸೂಕ್ತ ಚಿಕಿತ್ಸೆ ಸಿಗುವ ಭರವಸೆಯಿಲ್ಲದ ಹಿನ್ನೆಲೆ ನೋವನ್ನ ಸಹಿಸಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ಪ್ರಕರಣ ಕವಿತಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ: ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!

  • ಕೊರೊನಾ ನಂತ್ರ ಗ್ಯಾಂಗ್ರೀನ್ ಕಾಣಿಸಿಕೊಂಡ ವ್ಯಕ್ತಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಕೊರೊನಾ ನಂತ್ರ ಗ್ಯಾಂಗ್ರೀನ್ ಕಾಣಿಸಿಕೊಂಡ ವ್ಯಕ್ತಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಹುಬ್ಬಳ್ಳಿ: ಕೊರೊನಾ ಸೋಂಕು ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರೀನ್ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಕಿಮ್ಸ್ ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಕೊರೊನಾ ಕಾರಣದಿಂದ 69 ವರ್ಷದ ವ್ಯಕ್ತಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನದ ಹಿಂದೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಕಳೆದ ಗುರುವಾರ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಈ ವೇಳೆ ತಪಾಸಣೆ ಮಾಡಿದಾಗ ಗ್ಯಾಂಗ್ರೀನ್ ಆಗಿರುವುದು ಪತ್ತೆಯಾಗಿತ್ತು. ಹೀಗಾಗಿ ಇಲ್ಲಿನ ವೈದ್ಯರು ಅಗತ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ರೋಗಿ ಗುಣಮುಖರಾಗಿದ್ದಾರೆ. ಡಾ.ಎಸ್ ವೈ ಮುಲ್ಕಿಪಾಟೀಲ್, ಡಾ.ಸಂಜಯ್ ಜಿ. ಡಾ.ರಾಕೇಶ್ ಪಾಟೀಲ್ ಹಾಗೂ ಡಾ.ಅಭಿಚಂದ್ರನ್ ಶಸ್ತ್ರಚಿಕಿತ್ಸೆ ನಡೆಸಿದ್ದರು.

    ಗ್ಯಾಂಗ್ರೀನ್:
    ಗ್ಯಾಂಗ್ರೀನ್ ಎಂದರೆ ನಮ್ಮ ದೇಹದ ಒಂದು ಅಂಗಕ್ಕೆ ರಕ್ತ ಸಂಚಾರದ ಕೊರತೆಯಾಗುತ್ತಿದೆ. ಅಂಗಕ್ಕೆ ರಕ್ತ ಸಂಚಾರ ಆಗಿಲ್ಲ ಎಂದರೆ ಪೋಷಕಾಂಶ ಕೊರತೆ ಆಗುತ್ತದೆ. ಪೋಷಕಾಂಶ, ಆಕ್ಸಿಜನ್, ನ್ಯೂಟ್ರಿಶನ್ಸ್ ಕೊರತೆ ಆಗುತ್ತದೆಯೋ ಅಲ್ಲಿ ಅಂದರೆ ಆ ಭಾಗದಲ್ಲಿ ಆ ಅಂಗ ಕೊಳೆಯುತ್ತ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎಂದು ಕರೆಯುತ್ತಾರೆ.